3.27 ಲಕ್ಷ ಕೋಟಿ ರೂ. ಬಜೆಟ್ ಮಂಡನೆ | ಸರ್ವರಿಗೆ ಸಮಪಾಲು ಸರ್ವರಿಗೆ ಸಮಬಾಳು ಬಜೆಟ್

ಬೆಂಗಳೂರು : ಮುಖ್ಯಮಂತ್ರಿ ಸಿದ್ದರಾಮಯ್ಯ ವಿಧಾನಸಭೆಯಲ್ಲಿಂದು ತನ್ನ ದಾಖಲೆಯ 14ನೇ ಬಜೆಟ್ ಮಂಡಿಸುತ್ತಿದ್ದಾರೆ. ಹೀಗಾಗಿ ಈ ಹಿಂದೆ ರಾಮಕೃಷ್ಣ ಹೆಗಡೆ 13 ಸಲ ಮಂಡಿಸಿದ್ದ ಬಜೆಟ್‌ ದಾಖಲೆ ಪತನಗೊಂಡಿತು. ಬಜೆಟ್ ಮಂಡನೆಗೂ ಮೊದಲು ಸರ್ವರಿಗೆ ಸಮಪಾಲು ಸರ್ವರಿಗೆ ಸಮಬಾಳು ಬಜೆಟ್, ನೀವೇ ನನ್ನ ಪಾಲಿನ ಜನತಾ ಜನಾರ್ದರು. ನುಡಿದಂತೆ ನಡೆದಿದ್ದೇವೆ, ವಿಶ್ವಾಸ ಹುಸಿಗೊಳಿಸುವುದಿಲ್ಲ ಎಂದು ಸಿದ್ದರಾಮಯ್ಯ ಟ್ವಿಟ್ ಮಾಡಿದ್ದರು. 2023 – 24 ನೇ ಸಾಲಿನ ರಾಜ್ಯ ಬಜೆಟ್ ಲೈವ್ ಅಪ್‌ಡೇಟ್ಸ್‌. • 3.27 ಲಕ್ಷ ಕೋಟಿ […]

3.27 ಲಕ್ಷ ಕೋಟಿ ರೂ. ಬಜೆಟ್ ಮಂಡನೆ | ಸರ್ವರಿಗೆ ಸಮಪಾಲು ಸರ್ವರಿಗೆ ಸಮಬಾಳು ಬಜೆಟ್ Read More »

ಪುತ್ತೂರು: ಪುತ್ತೂರು ಸರಕಾರಿ ಆಸ್ಪತ್ರೆಗೆ ರೇಡಿಯಾಲಜಿಸ್ಟ್ ಮತ್ತು ಪ್ರಸೂತಿ ತಜ್ಞರ ನೇಮಕ | ವಿಧಾನಸಭಾ ಅಧಿವೇಶನದಲ್ಲಿ ವಿಷಯ ಪ್ರಸ್ತಾಪಿಸಿದ ಶಾಸಕ ಅಶೋಕ್ ರೈ

ಪುತ್ತೂರು; ಪುತ್ತೂರು ಸರಕಾರಿ ಆಸ್ಪತ್ರೆಯಲ್ಲಿ ರೇಡಿಯಾಲಜಿಸ್ಟ್ ಮತ್ತು ಪ್ರಸೂತಿ ವೈಧ್ಯರನ್ನು ನೇಮಕ ಮಾಡುವಂತೆ ಆಗ್ರಹಿಸಿ ವಿಧಾನಸಭಾ ಅಧಿವೇಶನದಲ್ಲಿ ಪುತ್ತೂರು ಶಾಸಕರಾದ ಅಶೋಕ್ ರಐಯವರು ವಿಷಯ ಪ್ರಸ್ತಾಪಿಸಿದ್ದು ಸರಕಾರಿ ಆಸ್ಪತ್ರೆಯ ಸಮಸ್ಯೆಯಗಳ ಬಗ್ಗೆ ಸರಕಾರದ ಗಮನ ಸೆಳೆದಿದ್ದಾರೆ. ಆಸ್ಪತ್ರೆಗೆ ರೇಡಿಯಾಲಜಿಸ್ಟ್ ಅಗತ್ಯವಾಗಿ ಬೇಕಾಗಿದ್ದು, ಆಸ್ಪತ್ರೆಯಲ್ಲಿ ಒಬ್ಬರು ಪ್ರಸೂತಿ ತಜ್ಞರಿದ್ದು ಅವರು ಹೆಸರಿಗೆ ರಜೆ ಮೆಲೆ ತೆರಳಿದ ಕಾರಣ ಹೆರಿಗೆ ಮಾಡಿಸಲು ವೈಧ್ಯರಿಲ್ಲದೆ ಸಾರ್ವಜನಿಕರಿಗೆ ತೊಂದರೆಯಾಗಿರುತ್ತದೆ. ಪುತ್ತೂರು ತಾಲೂಕು ವ್ಯಾಪ್ತಿಯಲ್ಲಿರುವ ಏಕೈಕ ದೊಡ್ಡ ಸರಕಾರಿ ಆಸ್ಪತ್ರೆಯಗಿರುವ ಕಾರಣ ಸರಕಾರಿ ಆಸ್ಪತ್ರೆಗೆ

ಪುತ್ತೂರು: ಪುತ್ತೂರು ಸರಕಾರಿ ಆಸ್ಪತ್ರೆಗೆ ರೇಡಿಯಾಲಜಿಸ್ಟ್ ಮತ್ತು ಪ್ರಸೂತಿ ತಜ್ಞರ ನೇಮಕ | ವಿಧಾನಸಭಾ ಅಧಿವೇಶನದಲ್ಲಿ ವಿಷಯ ಪ್ರಸ್ತಾಪಿಸಿದ ಶಾಸಕ ಅಶೋಕ್ ರೈ Read More »

ದಿನೇಶ್ ಗುಂಡೂರಾವ್ ಉಸ್ತುವಾರಿ ಸಚಿವರ ಜು 7 ರಿಂದ ಜಿಲ್ಲಾ ಪ್ರವಾಸ

ಮಂಗಳೂರು: ದ.ಕ.ಜಿಲ್ಲಾ ಉಸ್ತುವಾರಿ ಸಚಿವರಾಗಿರುವ ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಖಾತೆ ಸಚಿವ ದಿನೇಶ್ ಗುಂಡೂರಾವ್ ಜು.7ರಿಂದ ದ.ಕ.ಜಿಲ್ಲಾ ಪ್ರವಾಸ ಕೈಗೊಂಡಿದ್ದಾರೆ. ಜು.7ರ ರಾತ್ರಿ 9.15ಕ್ಕೆ ಮಂಗಳೂರು ವಿಮಾನ ನಿಲ್ದಾಣಕ್ಕೆ ಆಗಮಿಸಲಿದ್ದು, ಬಳಿಕ ಧರ್ಮಸ್ಥಳಕ್ಕೆ ತೆರಳಿ ಸನ್ನಿಧಿ ಅತಿಥಿಗೃಹದಲ್ಲಿ ವಾಸ್ತವ್ಯ ಹೂಡುವರು. ಜು.8ರ ಬೆಳಗ್ಗೆ 9.30ಕ್ಕೆ ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ಬೆಳಿಗ್ಗೆ 10 ಗಂಟೆಗೆ ಕನ್ಯಾಡಿ ರಾಮಮಂದಿರಕ್ಕೆ ಭೇಟಿ ನೀಡುವರು. ಪೂರ್ವಾಹ್ನ 11ಕ್ಕೆ ಉಜಿರೆಯ ಮಾತೃಶ್ರೀ ಡಿ.ರತ್ನಮ್ಮ ಹೆಗ್ಗಡೆ ಸಭಾಂಗಣದಲ್ಲಿ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಪ್ರಕೃತಿ

ದಿನೇಶ್ ಗುಂಡೂರಾವ್ ಉಸ್ತುವಾರಿ ಸಚಿವರ ಜು 7 ರಿಂದ ಜಿಲ್ಲಾ ಪ್ರವಾಸ Read More »

ಪ್ರತಿಭಾ ಕಾರಂಜಿಯಲ್ಲಿ ದೈವ ಕೋಲ ಸೇರ್ಪಡೆಯನ್ನು ಕೈಬಿಡುವಂತೆ ಶಾಸಕ ಸುನಿಲ್ ಕುಮಾರ್ ಸದನದಲ್ಲಿ ಒತ್ತಾಯ

ಕಾರ್ಕಳ : ಶಿಕ್ಷಣ ಇಲಾಖೆಯಲ್ಲಿ ಪ್ರತಿಭಾ ಕಾರಂಜಿ ಮಹತ್ವದ್ದಾಗಿದ್ದು, ಈ ಬಾರಿ ಪ್ರತಿಭಾ ಕಾರಂಜಿಯಲ್ಲಿ ದೈವದ ಕೋಲವನ್ನು ಶಿಕ್ಷಣ ಇಲಾಖೆ ಸೇರಿಸಿ ಸುತ್ತೋಲೆ ಹೊರಡಿಸಿದ್ದು, ದೈವದ ಕೋಲ ಪ್ರದರ್ಶನದ ವಸ್ತುವಲ್ಲ. ಅದನ್ನು ತಕ್ಷಣ ಕೈಬಿಡಬೇಕು ಎಂದು ಕಾರ್ಕಳ ಶಾಸಕ ಸುನಿಲ್ ಕುಮಾರ್ ಸದನದಲ್ಲಿ ಒತ್ತಾಯಿಸಿದ್ದಾರೆ. ಸದನದಲ್ಲಿ ನಡೆಯುತ್ತಿರುವ ಅಧಿವೇಶನದಲ್ಲಿ ಶಿಕ್ಷಣ ಸಚಿವರನ್ನು ಒತ್ತಾಯಿಸಿದರು. ಪ್ರತಿಕ್ರಿಯಿಸಿದ ಶಿಕ್ಷಣ ಸಚಿವ ಮಧು ಬಂಗಾರಪ್ಪ, ಈ ಕುರಿತು ಪರಿಶೀಲನೆ ನಡೆಸಿ ತೀರ್ಮಾನ ಕೈಗೊಳ್ಳಲಾಗುವುದು ಎಂದು ತಿಳಿಸಿದರು.

ಪ್ರತಿಭಾ ಕಾರಂಜಿಯಲ್ಲಿ ದೈವ ಕೋಲ ಸೇರ್ಪಡೆಯನ್ನು ಕೈಬಿಡುವಂತೆ ಶಾಸಕ ಸುನಿಲ್ ಕುಮಾರ್ ಸದನದಲ್ಲಿ ಒತ್ತಾಯ Read More »

ಭಾರೀ ಮಳೆ : ಆಲದ ಮರ ಬೈಕ್ ಮೇಲೆ ಬಿದ್ದು ಸವಾರ ಮೃತ್ಯು

ಉಡುಪಿ: ಧಾರಾಕಾರ ಮಳೆಗೆ ಮತ್ತೊಂದು ಬಲಿಯಾಗಿರುವ ದುರ್ಘಟನೆ ಉಡುಪಿ ಜಿಲ್ಲೆಯ ಕಾರ್ಕಳ ತಾಲೂಕಿನ ಬೆಳ್ಮಣ್ ಪರಿಸರದಲ್ಲಿ ನಡೆದಿದೆ. ಬೃಹತ್ ಆಲದ ಮರ ಬಿದ್ದು ಬೈಕ್ ಸವಾರ ಮೃತಪಟ್ಟಿದ್ದಾನೆ. ಗಾಳಿ ಮಳೆ‌ ಹಿನ್ನಲೆ ಬೃಹತ್ ಆಲದ ಮರ ಧರೆಗುರುಳಿದೆ. ಈ ವೇಳೆ ಅದೇ ಪರಿಸರದಲ್ಲಿ ಸಂಚರಿಸುತ್ತಿದ್ದ ಬೈಕ್ ಸವಾರನ ಮೇಲೆ‌ ಆಲದ ಮರ ಬಿದ್ದಿದೆ. ಪರಿಣಾಮ ಬೈಕ್ ಸವಾರ ಪ್ರವೀಣ್ ಆಚಾರ್ಯ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಬೈಕ್ ನಲ್ಲಿ ತೆರಳುತ್ತಿದ್ದ ಪ್ರವೀಣ್ ಮೇಲೆ‌ ಏಕಾಏಕಿ ಮರ ಬಿದ್ದಿದೆ. ಮರ ಬಿದ್ದ ದೃಶ್ಯ

ಭಾರೀ ಮಳೆ : ಆಲದ ಮರ ಬೈಕ್ ಮೇಲೆ ಬಿದ್ದು ಸವಾರ ಮೃತ್ಯು Read More »

ಮನೆ ಮೇಲೆ ಜರಿದು ಬಿದ್ದ ಗುಡ್ಡ : ಮಹಿಳೆ ಮೃತ್ಯು , ಓರ್ವ ಮಹಿಳೆಯ ರಕ್ಷಣೆ

ಬಂಟ್ವಾಳ: ಇಂದು ಮಂಜಾನೆ ನಡೆದ ಘಟನೆಯೊಂದರಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ನಂದಾವರ ಎಂಬಲ್ಲಿ ಗುಡ್ಡ ಕುಸಿದು ಮನೆಯೊಂದರ ಮೇಲೆ ಬಿದ್ದ ಪರಿಣಾಮ ಇಬ್ಬರು ಸಿಲುಕಿಕೊಂಡಿ, ಓರ್ವ ಮಹಿಳೆಯ ರಕ್ಷಣೆ ಮಾಡಿದರೂ ಗಂಭೀರ ಸ್ಥಿತಿಯಲ್ಲಿದ್ದ ಮಹಿಳೆ ಮೃತಪಟ್ಟಿದ್ದಾರೆ. ಝರೀನಾ (49) ಮೃತಪಟ್ಟವರು.  ಸಫಾ ಅವರನ್ನು ರಕ್ಷಿಸಲಾಗಿದೆ. ಸ್ಥಳಕ್ಕೆ ಎನ್.ಡಿ.ಆರ್.ಎಫ್, ಅಗ್ನಿಶಾಮಕ ಸಿಬಂದಿ ಸ್ಥಳೀಯರೊಂದಿಗೆ ಸುರಿಯುವ ಮಳೆಯಲ್ಲೂ ರಕ್ಷಣಾ ಕಾರ್ಯ ನಡೆಸುತ್ತಿದ್ದಾರೆ. ಬೆಳಗ್ಗೆ 6 ಗಂಟೆಗೆ ಈ ಘಟನೆ ನಡೆದಿದೆ. ಸ್ಥಳದಲ್ಲಿ ಅಗ್ನಶಾಮಕ ಸಿಬ್ಬಂದಿ, ಪೊಲೀಸ್ ಸಿಬ್ಬಂದಿಗಳು

ಮನೆ ಮೇಲೆ ಜರಿದು ಬಿದ್ದ ಗುಡ್ಡ : ಮಹಿಳೆ ಮೃತ್ಯು , ಓರ್ವ ಮಹಿಳೆಯ ರಕ್ಷಣೆ Read More »

ನಾಳೆಯೂ (ಜು.7) ದ.ಕ.ಜಿಲ್ಲೆಯ ಎಲ್ಲಾ ಶಾಲಾ-ಕಾಲೇಜುಗಳಿಗೆ ರಜೆ ಘೊಷಣೆ

ಮಂಗಳೂರು : ಹವಾಮಾನ ಇಲಾಖೆ ಮುನ್ಸೂಚನೆಯಂತೆ, ಜು.7 ಶುಕ್ರವಾರವೂ ದ.ಕ.ಜಿಲ್ಲೆಯ ಎಲ್ಲಾ ಅಂಗನವಾಡಿ, ಪ್ರಾಥಮಿಕ, ಪ್ರೌಢಶಾಲೆ, ಪದವಿಪೂರ್ವ ಕಾಲೇಜುಗಳಿಗೆ, ಖಾಸಗಿ ಶಿಕ್ಷಣ ಸಂಸ್ಥೆಗಳಿಗೆ ರಜೆ ಘೋಷಿಸಲಾಗಿದೆ. ಭಾರತೀಯ ಹವಾಮಾನ ಇಲಾಖೆ ಮತ್ತು ರಾಜ್ಯ ನೈಸರ್ಗಿಕ ಉಸ್ತುವಾರಿ ಕೇಂದ್ರದ ಮುನ್ಸೂಚನೆಯಂತೆ ರಜೆ ಘೊಷಣೆ ಮಾಡಲಾಗಿದೆ. ಮುಂಜಾಗ್ರತಾ ಕ್ರಮವಾಗಿ ದ.ಕ.ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರ ಕೆಲವೊಂದು ತುರ್ತು ಕ್ರಮಗಳನ್ನು ಕೈಗೊಂಡಿದೆ.

ನಾಳೆಯೂ (ಜು.7) ದ.ಕ.ಜಿಲ್ಲೆಯ ಎಲ್ಲಾ ಶಾಲಾ-ಕಾಲೇಜುಗಳಿಗೆ ರಜೆ ಘೊಷಣೆ Read More »

ಅವೈಜ್ಞಾನಿಕ ಕಾಮಗಾರಿಯಿಂದ ಸರಕಾರಿ ಬಾವಿ ಕುಸಿತ | ವಲಯ ಕಾಂಗ್ರೆಸ್ ಅಧ್ಯಕ್ಷರಿಂದ ಶಾಸಕರಿಗೆ ದೂರು

ಪುತ್ತೂರು: ಒಳಮೊಗ್ರು ಗ್ರಾಪಂಗೆ ನೂತನ ಕಟ್ಟಡ ಕಾಮಗಾರಿ ಕೆಲದಿನಗಳ ಹಿಂದೆ ನಡೆದಿದ್ದು ಇದರ ಕಾಮಗಾರಿ ಮಾಡುವ ವೇಳೆ ಅಲ್ಲಿರುವ ಸರಕಾರಿ ಬಾವಿ ಬಳಿ ಅವೈಜ್ಞಾನಿಕ ಕಾಮಗಾರಿ ನಡೆಸಿರುವ ಕಾರಣ ಮಳೆಗೆ ಬಾವಿ ಕುಸಿತಕ್ಕೊಳಗಾಗಿದೆ ಎಂದು ಆರೋಪಿಸಿ ಒಳಮೊಗ್ರು ವಲಯ ಕಾಂಗ್ರೆಸ್ ಅಧ್ಯಕ್ಷರಾದ ಅಶೋಕ್ ಪೂಜಾರಿ ಬೊಳ್ಳಾಡಿಯವು ಶಾಸಕರಿಗೆ ದೂರು ನೀಡಿದ್ದಾರೆ. ಕಳೆದ 52 ವರ್ಷಗಳಿಂದ ಇಲ್ಲಿ ಸರಕಾರಿ ಬಾವಿ ಇದೆ. ಇದರ ನೀರನ್ನು ಸ್ಥಳೀಯ ಸಾರ್ವಜನಿಕರು, ಕಾಲನಿ ನಿವಾಸಿಗಳು ಬಳಕೆ ಮಾಡುತ್ತಿದ್ದಾರೆ. ಗ್ರಾಮದಲ್ಲಿ ನೀರಿನ ಅಭಾವ ಉಂಟಾದಾಗ

ಅವೈಜ್ಞಾನಿಕ ಕಾಮಗಾರಿಯಿಂದ ಸರಕಾರಿ ಬಾವಿ ಕುಸಿತ | ವಲಯ ಕಾಂಗ್ರೆಸ್ ಅಧ್ಯಕ್ಷರಿಂದ ಶಾಸಕರಿಗೆ ದೂರು Read More »

ಕೊಲೆ ಪ್ರಕರಣ ಆರೋಪಿ ಬಂಧನ

ಪುತ್ತೂರು : ಕೊಲೆ ಪ್ರಕರಣ ಸಂಬಂಧಿಸಿದ ಆರೋಪಿಯೋರ್ವನನ್ನು ಪುತ್ತೂರು ಗ್ರಾಮಾಂತರ ಠಾಣಾ ಪೊಲೀಸರು ಬಂಧಿಸಿದ್ದಾರೆ. ಕೊಳ್ತಿಗೆ ಪಾಂಬಾರು ಸಿಆರ್ ಸಿ ಕಾಲನಿ ನಿವಾಸಿ ವಿಜಯ ಬಂಧಿತ ಆರೋಪಿ. ಕೊಳ್ತಿಗೆ ಗ್ರಾಮದ ಪೆರ್ಲಂಪಾಡಿಯಲ್ಲಿ ಈತನನ್ನು ಬಂಧಿಸಿದ್ದು, ಐದನೇ ಹೆಚ್ಚುವರಿ ಜಿಲ್ಲಾ ಸೆಷನ್ಸ್ ಸತ್ರ ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗಿದೆ. ನ್ಯಾಯಾಲಯ ಆರೋಪಿಗೆ ನ್ಯಾಯಾಂಗ ಬಂಧನ ವಿಧಿಸಿದೆ.

ಕೊಲೆ ಪ್ರಕರಣ ಆರೋಪಿ ಬಂಧನ Read More »

ಜು.9 : ಸುಳ್ಯ ಶ್ರೀ ವೆಂಕಟರಮಣ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿ ನಿ. ಇದರ 22ನೇ ನೂತನ ಸೋಮಂತಡ್ಕ ಶಾಖೆಯ ಉದ್ಘಾಟನಾ ಸಮಾರಂಭ

ಸುಳ್ಯ: ಸುಳ್ಯ ಶ್ರೀ ವೆಂಕಟರಮಣ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿ ನಿ. ಇದರ 22ನೇ ನೂತನ ಸೋಮಂತಡ್ಕ ಶಾಖೆಯ ಉದ್ಘಾಟನಾ ಸಮಾರಂಭ ಜು.9 ಭಾನುವಾರ ಬೆಳ್ತಂಗಡಿ ತಾಲೂಕಿನ ಮುಂಡಾಜೆ ಸೋಮಂತಡ್ಕದಲ್ಲಿರುವ ಡಿಸೋಜಾ ಕಾಂಪ್ಲೆಕ್ಸ್ ನ ಒಂದನೇ ಮಹಡಿಯಲ್ಲಿ ಶುಭಾರಂಭಗೊಳ್ಳಲಿದೆ. ಸುಳ್ಯದ ಮುಖ್ಯ ರಸ್ತೆಯಲ್ಲಿರುವ ಶ್ರೀ ವೆಂಕಟರಮಣ ಟವರ್ಸ್ ನಲ್ಲಿ ಪ್ರಧಾನ ಕಚೇರಿಯನ್ನು ಹೊಂದಿರುವ ಸೊಸೈಟಿ ಸತತ ಮೂರು ಬಾರಿ ಕರ್ನಾಟಕ ರಾಜ್ಯದ ಅತ್ಯುತ್ತಮ ಸಹಕಾರಿ ಸಂಘ ಪ್ರಶಸ್ತಿ ಪುರಸ್ಕೃತ ಸಂಸ್ಥೆಯಾಗಿದೆ. ಸಂಘದ ಅಧ್ಯಕ್ಷರಾಗಿ ಪಿ.ಸಿ.ಜಯರಾಮ, ಉಪಾಧ್ಯಕ್ಷರಾಗಿ ಮೋಹನ್ ರಾಂ

ಜು.9 : ಸುಳ್ಯ ಶ್ರೀ ವೆಂಕಟರಮಣ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿ ನಿ. ಇದರ 22ನೇ ನೂತನ ಸೋಮಂತಡ್ಕ ಶಾಖೆಯ ಉದ್ಘಾಟನಾ ಸಮಾರಂಭ Read More »

error: Content is protected !!
Scroll to Top