ಉಪ್ಪಿನಂಗಡಿ ಹೆಡ್ ಕಾನ್‍ಸ್ಟೇಬಲ್  ಕೃಷ್ಣಪ್ಪ ನಾಯ್ಕ್ ನಿಧನ

ಉಪ್ಪಿನಂಗಡಿ: ಉಪ್ಪಿನಂಗಡಿ ಠಾಣಾ ಹೆಡ್ ಕಾನ್‍ಸ್ಟೇಬಲ್ ಕೃಷ್ಣಪ್ಪ ನಾಯ್ಕ್‍ ಜಿ. ಬುಧವಾರ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು. ಮಾಣಿ ಸಮೀಪದ ನೇರಳಕಟ್ಟೆ ನಿವಾಸಿಯಾಗಿರುವ ಮೃತರು ಕಳೆದ 6 ವರ್ಷಗಳಿಂದ ಉಪ್ಪಿನಂಗಡಿ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದರು. ಕಳೆದ ಒಂದು ವರ್ಷದಿಮದ ಅನಾರೋಗ್ಯದಿಂದ ರಜೆಯಲ್ಲಿದ್ದರು. ಮೃತರು ಪತ್ನಿ, ಪುತ್ರ ಹಾಗೂ ಪುತ್ರಿಯನ್ನು ಅಗಲಿದ್ದಾರೆ.

ಉಪ್ಪಿನಂಗಡಿ ಹೆಡ್ ಕಾನ್‍ಸ್ಟೇಬಲ್  ಕೃಷ್ಣಪ್ಪ ನಾಯ್ಕ್ ನಿಧನ Read More »

ರೋಟರಿ ಕ್ಲಬ್ ಪುತ್ತೂರು ಯುವ  ಹಾಗೂ ಶಿಶು ಅಭಿವೃದ್ಧಿ ಇಲಾಖೆಯಿಂದ ನಿರ್ಗತಿಕ ವ್ಯಕ್ತಿಗೆ ಪುನರ್ವಸತಿ.

ಪುತ್ತೂರು : ಅನೇಕ ವರ್ಷಗಳಿಂದ ಪುತ್ತೂರಿನ  ಆಸುಪಾಸಿನಲ್ಲಿ  ಸುತ್ತಾಡುತ್ತಿದ್ದು ಅನಾರೋಗ್ಯ ಪೀಡಿತರಾಗಿ ಸರ್ಕಾರಿ ಆಸ್ಪತ್ರೆಗೆ ದಾಖಲಾದ ರಾಧಾಕೃಷ್ಣ ಎಂಬ  ಸುಮಾರು 65 ವರ್ಷ ಪ್ರಾಯದ  ವ್ಯಕ್ತಿಯನ್ನು ಸರಕಾರಿ ವೈದ್ಯಾಧಿಕಾರಿ ಆಶಾ ಪುತ್ತೂರಾಯ ಅವರ ವಿನಂತಿಯ ಮೇರೆಗೆ ರೋಟರಿ ಕ್ಲಬ್ ಇದರ ಹ್ಯಾಪಿ ಸ್ಕೂಲ್ಸ್  ಇದರ ವೈಸ್ ಚೇರ್ಮನ್ ಆಗಿರುವ ಪುತ್ತೂರು ಉಮೇಶ್ ನಾಯಕ್ ಅವರ ನೇತೃತ್ವದಲ್ಲಿ , ಶಿಶು ಅಭಿವೃದ್ಧಿ ಇಲಾಖೆಯ ಯೋಜನೆ ನಿರ್ದೇಶಕಿ ಶ್ರೀಲತಾ ಅವರ ಮಾರ್ಗದರ್ಶನ ಹಾಗೂ ಸಹಕಾರದೊಂದಿಗೆ  ರೋಟರಿ ಯುವ ಸಮಾಜ ಸೇವಾ

ರೋಟರಿ ಕ್ಲಬ್ ಪುತ್ತೂರು ಯುವ  ಹಾಗೂ ಶಿಶು ಅಭಿವೃದ್ಧಿ ಇಲಾಖೆಯಿಂದ ನಿರ್ಗತಿಕ ವ್ಯಕ್ತಿಗೆ ಪುನರ್ವಸತಿ. Read More »

ಜು.28 : ಅಣ್ಣಾಮಲೈ ನಡೆಸಲಿರುವ 120 ದಿನಗಳ ಪಾದಯಾತ್ರೆಗೆ ಚಾಲನೆ

ಬೆಂಗಳೂರು : ತಮಿಳುನಾಡು ಬಿಜೆಪಿ ಮುಖ್ಯಸ್ಥ ಕೆ. ಅಣ್ಣಾಮಲೈ ಅವರು ನಡೆಸಲಿರುವ 120 ದಿನಗಳ ಕಾಲ ಪಾದಯಾತ್ರೆಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಜು. 8 ರಂದು ರಾಮೇಶ್ವರಂನಿಂದ ಚಾಲನೆ ನೀಡಲಿದ್ದಾರೆ. ಎನ್ ಮಣ್ ಎನ್ ಮಕ್ಕಳ್ – ಪ್ರಥಮರ್ ಮೋದಿಯಿನ್ ತಮಿಳ್ ಮುಝಕ್ಕಂ (ನನ್ನ ಭೂಮಿ, ನನ್ನ ಜನರು – ತಮಿಳರಿಗೆ ಪ್ರಧಾನಿ ಮೋದಿಯವರ ಕರೆ) ಎಂಬ ಹೆಸರಿನ ಈ ಯಾತ್ರೆಯು ಎಲ್ಲಾ 234 ವಿಧಾನಸಭಾ ಕ್ಷೇತ್ರಗಳನ್ನು ಹಾದುಹೋಗಲಿದ್ದು, 2024 ರ ಜನವರಿ ಮಧ್ಯದಲ್ಲಿ

ಜು.28 : ಅಣ್ಣಾಮಲೈ ನಡೆಸಲಿರುವ 120 ದಿನಗಳ ಪಾದಯಾತ್ರೆಗೆ ಚಾಲನೆ Read More »

ಆಟೋ ರಿಕ್ಷಾದ ಮೇಲೆ ಮರ ಬಿದ್ದು ಹಾನಿ

ಪುತ್ತೂರು: ನಿಲ್ಲಿಸಿದ್ದ ಆಟೋ ರಿಕ್ಷಾದ ಮೇಲೆ ಮರವೊಂದು ಬಿದ್ದ ಘಟನೆ ಮುರದಲ್ಲಿ ನಡೆದಿದೆ. ಮುರ ಒಕ್ಕಲಿಗ ಗೌಡ ಸಮುದಾಯದ ಭವನದ ಬಳಿ ಘಟನೆ ನಡೆದಿದೆ. ಮುರ ನಿವಾಸಿ ಕುಶಲ ಎಂಬವರ ಎಲೆಕ್ಟ್ರಿಕ್ ಆಟೋ ರಿಕ್ಷಾದ ಮೇಲೆ ಮರ ಬಿದ್ದು ರಿಕ್ಷಾಕ್ಕೆ ಹಾನಿಯಾಗಿದೆ.

ಆಟೋ ರಿಕ್ಷಾದ ಮೇಲೆ ಮರ ಬಿದ್ದು ಹಾನಿ Read More »

ರಾಜ್ಯದಲ್ಲಿ ಹದಗೆಟ್ಟ ಕಾನೂನು ಸುವ್ಯವಸ್ಥೆ | ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೇತೃತ್ವದಲ್ಲಿ ಪ್ರತಿಭಟನೆ

ಬೆಂಗಳೂರು : ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿರುವುದನ್ನು ಖಂಡಿಸಿ ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೇತೃತ್ವದಲ್ಲಿ ಬಿಜೆಪಿ ಶಾಸಕರು ವಿಧಾನಸೌಧದ ಗಾಂಧಿ ಪ್ರತಿಮೆ ಬಳಿ ಪ್ರತಿಭಟನೆ ನಡೆಸಿ, ರಾಜ್ಯ ಸರ್ಕಾರಕ್ಕೆ ಸೂಚನೆ ನೀಡುವಂತೆ ರಾಜ್ಯಪಾಲರಿಗೆ ಮನವಿ ಮಾಡಿದರು. ವಿಧಾನಸೌಧದಿಂದ ರಾಜಭವನದವರೆಗೂ ಪ್ರತಿಭಟನಾ ಮೆರವಣಿಗೆ ನಡೆಸಿ ರಾಜ್ಯಪಾಲರಿಗೆ ಮನವಿ ಸಲ್ಲಿಸಿದರು. ಈ ಸಂದರ್ಭದಲ್ಲಿ ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮಾತನಾಡಿ, ಕರ್ನಾಟಕದಲ್ಲಿ ಜಂಗಲ್ ರಾಜ್ಯ ಶುರುವಾಗಿದೆ. ಸಾಮಾನ್ಯರು ಭಯ ಭೀತಿ ಇಲ್ಲದೆ ಓಡಾಡುವಂತಿಲ್ಲ. ಜೈನ ಮುನಿ ಕೊಲೆ ಆಗಿದೆ‌

ರಾಜ್ಯದಲ್ಲಿ ಹದಗೆಟ್ಟ ಕಾನೂನು ಸುವ್ಯವಸ್ಥೆ | ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೇತೃತ್ವದಲ್ಲಿ ಪ್ರತಿಭಟನೆ Read More »

ರಾಜ್ಯ ಸರಕಾರದ ಉಚಿತ ಗ್ಯಾರಂಟಿ ಯೋಜನೆ “ಶಕ್ತಿ” ಯೋಜನೆಯಿಂದ ಸರಕಾರದ ಬೊಕ್ಕಸಕ್ಕೆ ಎಷ್ಟು ನಷ್ಟ | ಇಲ್ಲಿದೆ ಡಿಟೈಲ್ಸ್

ಪುತ್ತೂರು : ಕಾಂಗ್ರೆಸ್ ಸರಕಾರದ ಗ್ಯಾರಂಟಿ ಯೋಜನೆಗಳಲ್ಲಿ ಒಂದಾದ ಮಹಿಳೆಯರಿಗೆ ಉಚಿತ ಪ್ರಯಾಣ “ಶಕ್ತಿ” ಯೋಜನೆ ಆರಂಭಗೊಂಡು ತಿಂಗಳು ಕಳೆದಿದೆ. ಆದರೆ ಸರಕಾರದ ಬೊಕ್ಕಸಕ್ಕೆ ಎಷ್ಟು ಲಾಭ, ನಷ್ಟ ಎಂಬುದು ಈಗಿರುವ ಲೆಕ್ಕಾಚಾರ. ಮಹಿಳೆಯರ ಉಚಿತ ಬಸ್ ಪ್ರಯಾಣದಿಂದಾಗಿ ಕೆಎಸ್‍ ಆರ್ ಟಿಸಿ 151.25 ಕೋಟಿ, ಬಿಎಂಟಿಸಿಗೆ 69.56 ಕೋಟಿ, ವಾಯುವ್ಯ ಕರ್ನಾಟಕ ಸಾರಿಗೆಗೆ 103.51 ಕೋಟಿ ಹಾಗೂ ಕಲ್ಯಾಣ ಸಾರಿಗೆ 77.62 ಕೋಟಿ ರೂಪಾಯಿ ಭರಿಸಬೇಕಿದ್ದು ತಿಂಗಳಲ್ಲಿ 16.73 ಕೋಟಿ ಮಹಿಳೆಯರು ಈ ಯೋಜನೆಯನ್ನು ಪಡೆದುಕೊಂಡಿದ್ದಾರೆ.

ರಾಜ್ಯ ಸರಕಾರದ ಉಚಿತ ಗ್ಯಾರಂಟಿ ಯೋಜನೆ “ಶಕ್ತಿ” ಯೋಜನೆಯಿಂದ ಸರಕಾರದ ಬೊಕ್ಕಸಕ್ಕೆ ಎಷ್ಟು ನಷ್ಟ | ಇಲ್ಲಿದೆ ಡಿಟೈಲ್ಸ್ Read More »

ಪ್ರತಿಷ್ಠಿತ ಸಂಸ್ಥೆಯಲ್ಲಿ ಉದ್ಯೋಗವಕಾಶಗಳು | ಪದವೀಧರರಿಗೆ ಉತ್ತಮ ಅವಕಾಶ

ಪುತ್ತೂರು: ಪ್ರತಿಷ್ಠಿತ ಸಂಸ್ಥೆಯೊಂದಕ್ಕೆ ಕನ್ನಡ ಮತ್ತು ಇಂಗ್ಲೀಷ್ ನಲ್ಲಿ ಭಾಷಾ ಪ್ರಾವೀಣ್ಯತೆ ಹೊಂದಿರುವ, ಕನ್ನಡ ಲಿಪಿ ಟೈಪಿಂಗ್ ತಿಳಿದಿರುವ ಆಸಕ್ತ ಅಭ್ಯರ್ಥಿಗಳಿಗೆ ಅರ್ಜಿ ಆಹ್ವಾನಿಸಲಾಗಿದೆ. ಕನಿಷ್ಠ ಪದವಿ ವಿದ್ಯಾರ್ಹತೆಯುಳ್ಳ ಆಸಕ್ತ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು. ಇಂದೇ ಸಂಪರ್ಕಿಸಿ : “ಪ್ರೇರಣಾ” , ಪ್ರಥಮ ಮಹಡಿ, ಪ್ರಭು ಬಿಲ್ಡಿಂಗ್, ಅರುಣಾ ಥಿಯೇಟರ್ ಎದುರು, ಕೆನರಾ ಬ್ಯಾಂಕ್ ಹತ್ತಿರ ಮೊ: 8904877721, 7204977721, 08251-200721 ನಂಬರನ್ನು ಸಂಪರ್ಕಿಸಿ.

ಪ್ರತಿಷ್ಠಿತ ಸಂಸ್ಥೆಯಲ್ಲಿ ಉದ್ಯೋಗವಕಾಶಗಳು | ಪದವೀಧರರಿಗೆ ಉತ್ತಮ ಅವಕಾಶ Read More »

ರಾಷ್ಟ್ರೀಯ ನಾಯಕ ರಾಹುಲ್ ಗಾಂಧಿ ಅವರ ಸಂಸತ್ ಸದಸ್ಯತ್ವವನ್ನು ಅನೂರ್ಜಿತ ಗೊಳಿಸಲು ಹುನ್ನಾರ | ಕಾಂಗ್ರೆಸ್ ವತಿಯಿಂದ ಮೌನ ಪ್ರತಿಭಟನೆ

ಪುತ್ತೂರು: ಕಾಂಗ್ರೆಸ್ ಪಕ್ಷದ ರಾಷ್ಟ್ರೀಯ ನಾಯಕ ರಾಹುಲ್ ಗಾಂಧಿ ಅವರ ಸಂಸತ್ ಸದಸ್ಯತ್ವವನ್ನು ಅನೂರ್ಜಿತ ಗೊಳಿಸಲು ಹುನ್ನಾರ ನಡೆಸುತ್ತಿರುವ ಕೇಂದ್ರ ಬಿಜೆಪಿ ಸರಕಾರದ ವಿರುದ್ಧ ಪುತ್ತೂರು, ವಿಟ್ಲ, ಉಪ್ಪಿನಂಗಡಿ ಬ್ಲಾಕ್ ಕಾಂಗ್ರೆಸ್ ನೇತೃತ್ವದಲ್ಲಿ ಪುತ್ತೂರು ಗಾಂಧಿಕಟ್ಟೆ ಎದುರು ಒಂದು ದಿನ ಮೌನ ಪ್ರತಿಭಟನೆ ಬುಧವಾರ ನಡೆಯಿತು. ಪುತ್ತೂರು ಬ್ಲಾಕ್ ಅಧ್ಯಕ್ಷ ಎಂ.ಬಿ.ವಿಶ್ವನಾಥ ರೈ ಹಾಗೂ ವಿಟ್ಲ-ಉಪ್ಪಿನಂಗಡಿ ಬ್ಲಾಕ್ ಅಧ್ಯಕ್ಷ ಡಾ.ರಾಜಾರಾಮ್ ಗಾಂಧಿ ಪ್ರತಿಮೆಗೆ ಮಾಲಾರ್ಪಣೆ ಮಾಡುವ ಮೂಲಕ ಮೌನ ಪ್ರತಿಭಟನೆಗೆ ಚಾಲನೆ ನೀಡಿದರು. ಕಾಂಗ್ರೆಸ್ ನಾಯಕರು ಬಾಯಿಗೆ

ರಾಷ್ಟ್ರೀಯ ನಾಯಕ ರಾಹುಲ್ ಗಾಂಧಿ ಅವರ ಸಂಸತ್ ಸದಸ್ಯತ್ವವನ್ನು ಅನೂರ್ಜಿತ ಗೊಳಿಸಲು ಹುನ್ನಾರ | ಕಾಂಗ್ರೆಸ್ ವತಿಯಿಂದ ಮೌನ ಪ್ರತಿಭಟನೆ Read More »

ಆಯಾರ್ಪು ಗ್ರಾಪಂ ಉಪ ಚುನಾವಣೆಗೆ ಬಿಜೆಪಿಯಿಂದ ಜಗದೀಶ್ ಭಂಡಾರಿ, ವಸಂತ ನಾಮಪತ್ರ ಸಲ್ಲಿಕೆ

ಪುತ್ತೂರು : ಆರ್ಯಾಪು ಗ್ರಾಮ ಪಂಚಾಯತ್ ನ ಉಪಚುನಾವಣೆಗೆ ಬಿಜೆಪಿ ಬೆಂಬಲಿತ ಅಭ್ಯರ್ಥಿಯಾಗಿ ಜಗದೀಶ್ ಭಂಡಾರಿ ಹಾಗೂ ವಸಂತ ಆರ್ಯಾಪು ಗ್ರಾಮ ಪಂಚಾಯತ್ ನಲ್ಲಿ ಬುಧವಾರ ನಾಮಪತ್ರ ಸಲ್ಲಿಸಿದರು. ಆರ್ಯಾಪು ಗ್ರಾಮ ಪಂಚಾಯತಿಯ ಆರ್ಯಾಪು ಎರಡನೇ ವಾರ್ಡ್‌ನ (ಆರ್ಯಾಪು 11) ಸದಸ್ಯರಾಗಿದ್ದ ನಿವೃತ್ತ ಎಸ್‌ಐ ರುಕ್ಕಯ್ಯ ಮೂಲ್ಯ ಅವರು ಇತ್ತೀಚೆಗೆ ಹೃದಯಾಘಾತದಿಂದ ನಿಧನ ಹೊಂದಿದ್ದು, ಈ ಹಿನ್ನೆಲೆ ಉಪಚುನಾವಣೆ ನಡೆಯಲಿದೆ. ಈ ಸಂದರ್ಭದಲ್ಲಿ ಮಾಜಿ ಶಾಸಕ ಸಂಜೀವ ಮಠಂದೂರು, ಬಿಜೆಪಿ ಮುಖಂಡರಾದ ಬೂಡಿಯಾರ್ ರಾಧಾಕೃಷ್ಣ ರೈ, ಜೀವಂಧರ್

ಆಯಾರ್ಪು ಗ್ರಾಪಂ ಉಪ ಚುನಾವಣೆಗೆ ಬಿಜೆಪಿಯಿಂದ ಜಗದೀಶ್ ಭಂಡಾರಿ, ವಸಂತ ನಾಮಪತ್ರ ಸಲ್ಲಿಕೆ Read More »

ನಿವೃತ್ತಿ ಪಡೆದ ಕಂಪೌಂಡರ್ ನರಸಿಂಹ ಭಟ್ ರಿಗೆ ಬಿಜೆಪಿ ವತಿಯಿಂದ ಸನ್ಮಾನ

ಪುತ್ತೂರು: ವೈದ್ಯಕೀಯ ಸೇವೆಯಿಂದ ವಿಶ್ರಾಂತ ಪಡೆದ ಕಂಪೌಂಡ್ ಎಂದೇ ಹೆಸರು ಪಡೆದ ನರಸಿಂಹ ಭಟ್ ರನ್ನು ಪುತ್ತೂರು ಭಾರತೀಯ ಜನತಾ ಪಾರ್ಟಿ ವತಿಯಿಂದ ಸನ್ಮಾನಿಸಲಾಯಿತು. ಬಿಜೆಪಿ ಮುಖಂಡರು ನರಸಿಂಹ ಭಟ್ ಅವರ ಮನೆಗೆ ತೆರಳಿ ದಂಪತಿಯನ್ನು ಸನ್ಮಾನಿಸಿ ಅವರ ನಿವೃತ್ತಿ ಜೀವನಕ್ಕೆ ಶುಭ ಹಾರೈಸಿದರು. ಈ ಸಂದರ್ಭದಲ್ಲಿ ಮಾಜಿ ಶಾಸಕ ಸಂಜೀವ ಮಠಂದೂರು, ಹಿರಿಯ ಮುಖಂಡರಾದ ಅಪ್ಪಯ್ಯ ಮಣಿಯಾಣಿ, ಜೀವಂಧರ್ ಜೈನ್, ರಾಜೇಶ್ ಬನ್ನೂರು, ಜಗನ್ನಿವಾಸ ರಾವ್, ರಾಮದಾಸ್ ಹಾರಾಡಿ, ಯುವರಾಜ್ ಪೆರಿಯತ್ತೋಡಿ, ಜಯಶ್ರೀ ಶೆಟ್ಟಿ ಮತ್ತಿತರರು

ನಿವೃತ್ತಿ ಪಡೆದ ಕಂಪೌಂಡರ್ ನರಸಿಂಹ ಭಟ್ ರಿಗೆ ಬಿಜೆಪಿ ವತಿಯಿಂದ ಸನ್ಮಾನ Read More »

error: Content is protected !!
Scroll to Top