ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾನಿಲಯ ರಾಜ್ಯಮಟ್ಟದ 10ಕಿಮೀ ಕ್ರಾಸ್-ಕಂಟ್ರಿ ಸ್ಪರ್ಧೆ : ಪುತ್ತೂರು ವಿವೇಕಾನಂದ ಇಂಜಿನಿಯರಿಂಗ್ ಕಾಲೇಜಿಗೆ ಸಮಗ್ರ ತಂಡ ಪ್ರಶಸ್ತಿ

ಪುತ್ತೂರು: ಪುತ್ತೂರಿನ ವಿವೇಕಾನಂದ ಕಾಲೇಜ್ ಆಫ್ ಎಂಜಿನಿಯರಿಂಗ್ ಎಂಡ್ ಟೆಕ್ನಾಲಜಿಯ ವಿದ್ಯಾರ್ಥಿಗಳ ತಂಡವು 2023-24ನೇ ಸಾಲಿನ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾನಿಲಯ ರಾಜ್ಯಮಟ್ಟದ 10 ಕಿಮೀ ಕ್ರಾಸ್-ಕಂಟ್ರಿ ಸ್ಪರ್ಧೆಯಲ್ಲಿ ಮಹಿಳೆಯರ ವಿಭಾಗದಲ್ಲಿ ಚಾಂಪಿಯನ್‌ಶಿಪ್ ಹಾಗೂ ಪುರುಷರ ವಿಭಾಗದಲ್ಲಿ ತೃತೀಯ ಸ್ಥಾನದೊಂದಿಗೆ ಸಮಗ್ರ ತಂಡ ಪ್ರಶಸ್ತಿ ಪಡೆದುಕೊಂಡಿದೆ. ಕೋಲಾರದ ಡಾ.ತಿಮ್ಮಯ್ಯ ಇನ್ಶ್ತಿಟ್ಯೂಟ್ ಆಫ್ ಟೆಕ್ನಾಲಜಿಯ ಆಶ್ರಯದಲ್ಲಿ ನಡೆದ ಈ ಸ್ಪರ್ಧೆಯಲ್ಲಿ ವಿದ್ಯಾರ್ಥಿಗಳು ವಿಶಿಷ್ಟ ಸಾಧನೆಯನ್ನು ಮಾಡಿದ್ದಾರೆ. ಮಹಿಳೆಯರ ವಿಭಾಗದಲ್ಲಿ ದ್ವಿತೀಯ ವರ್ಷದ ಎಂಬಿಎ ವಿಭಾಗದ ರಕ್ಷಿತಾ.ಐ ಪ್ರಥಮ ಸ್ಥಾನ, ದ್ವಿತೀಯ […]

ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾನಿಲಯ ರಾಜ್ಯಮಟ್ಟದ 10ಕಿಮೀ ಕ್ರಾಸ್-ಕಂಟ್ರಿ ಸ್ಪರ್ಧೆ : ಪುತ್ತೂರು ವಿವೇಕಾನಂದ ಇಂಜಿನಿಯರಿಂಗ್ ಕಾಲೇಜಿಗೆ ಸಮಗ್ರ ತಂಡ ಪ್ರಶಸ್ತಿ Read More »

ಹಸಿ ಮೀನಿನ ದರ ಗಗನಕ್ಕೆ | ಹೈರಾಣಾದ ಜನತೆ

ಬೆಂಗಳೂರು: ದಿನದಿಂದ ದಿನಕ್ಕೆ ದಿನಬಳಕೆ ಸಾಮಾಗ್ರಿಗಳ ಜತೆ ತರಕಾರಿ ಬೆಲೆ ಗಗನಕ್ಕೇರಿದ್ದು, ಇನ್ನೊಂದೆಡೆ ಇದೀಗ ಮಾರುಕಟ್ಟೆಯಲ್ಲಿ ಹಸಿಮೀನಿನ ಬೆಲೆ ಗಗನಕ್ಕೇರಿದೆ. ಪರಿಣಾಮ ಜನ ಹೈರಾಣಾಗಿದ್ದಾರೆ. ಸಾಂಬಾರು ಪದಾರ್ಥಗಳು ಸೇರಿದಂತೆ ಹಣ್ಣು ತರಕಾರಿಗಳ ದುಬಾರಿ ಬೆಲೆಯಿಂದ ಜನರು ಹೈರಾಣಾಗಿದ್ದಾರೆ. ಕೆಲವೆಡೆ ಮಳೆಯ ಅಭಾವದಿಂದ ಇಳುವರಿ ಕಡಿಮೆಯಾದ ಹಿನ್ನೆಲೆ ತರಕಾರಿ, ಹಣ್ಣಿನ ಬೆಲೆ ಹೆಚ್ಚಾಗಿದೆ. ಜೂನ್‌-ಜುಲೈ ತಿಂಗಳಿನಲ್ಲಿ ಸಮುದ್ರದ ಅಬ್ಬರ ಹೆಚ್ಚಾಗಿದ್ದು, ಜೂ.1ರಿಂದ ಜು.30 ರವರೆಗೆ ರಾಜ್ಯ ಸರಕಾರ ಯಾಂತ್ರೀಕೃತ ಮೀನುಗಾರಿಕೆಗೆ ತಡೆಯೊಡ್ಡಿದೆ. ಈ ಎರಡು ತಿಂಗಳುಗಳಲ್ಲಿ ಮೀನುಗಳು ಸಂತಾನೋತ್ಪತ್ತಿಯಲ್ಲಿ

ಹಸಿ ಮೀನಿನ ದರ ಗಗನಕ್ಕೆ | ಹೈರಾಣಾದ ಜನತೆ Read More »

ಬಲ್ನಾಡು ಯುವಕ ಹೃದಯಾಘಾತದಿಂದ ನಿಧನ

ಪುತ್ತೂರು: ಯುವನೋರ್ವ ಹೃದಯಾಘಾತದಿಂದ ಮೃತಪಟ್ಟ ಘಟನೆ ಬಲ್ನಾಡಿನಲ್ಲಿ ನಡೆದಿದೆ. ಬಲ್ನಾಡು ನಿವಾಸಿ ಕಿಶನ್ (27) ಮೃತಪಟ್ಟ ಯುವಕ. ಕಿಶನ್ ಮೇಸ್ತ್ರಿ ಕೆಲಸ ಮಾಡಿಕೊಂಡಿದ್ದರು. ಮೃತರು ತಂದೆ, ತಾಯಿ, ಇಬ್ಬರು ಸಹೋದರರನ್ನು ಅಗಲಿದ್ದಾರೆ.

ಬಲ್ನಾಡು ಯುವಕ ಹೃದಯಾಘಾತದಿಂದ ನಿಧನ Read More »

ಹಾಡುಹಗಲೇ ಜೋಡಿ ಕೊಲೆ : ಮಾಜಿ ಉದ್ಯೋಗಿಯಿಂದ ಕೃತ್ಯ

ಬೆಂಗಳೂರು: ಏರೋನಿಕ್ಸ್ ಇಂಟರ್ನೆಟ್ ಎಂಬ ಕಂಪನಿಯ ಸಿಇಒ ಹಾಗೂ ಎಂಡಿಯನ್ನು ಚಾಕುವಿನಿಂದ ಇರಿದು ಬರ್ಬರವಾಗಿ ಹತ್ಯೆ ಮಾಡಿದ ಆಘಾತಕಾರಿ ಘಟನೆ ಬೆಂಗಳೂರು ನಗರದ ಅಮೃತಹಳ್ಳಿಯಲ್ಲಿ ಹಾಡುಹಗಲೇ ನಡೆದಿದೆ. ಏರೋನಿಕ್ಸ್ ಇಂಟರ್ನೆಟ್ ಕಂಪನಿಯ ಸಿಇಒ ವಿನುಕುಮಾರ್ ಮತ್ತು ವ್ಯವಸ್ಥಾಪಕ ನಿರ್ದೇಶಕ ಫಣೀಂದ್ರ ಸುಬ್ರಹ್ಮಣ್ಯ ಹತ್ಯೆಯಾದರು. ಸಂಜೆ 4 ಗಂಟೆಯ ಸುಮಾರಿಗೆ ಕಂಪನಿಯ ಮಾಜಿ ಉದ್ಯೋಗಿ ಫೆಲಿಕ್ಸ್ ಎಂಬಾತ ಈ ಕೃತ್ಯ ಎಸಗಿದ್ದು, ಸ್ಥಳಕ್ಕೆ ಅಮೃತಹಳ್ಳಿ ಪೊಲೀಸರು ಭೇಟಿ ನೀಡಿ, ಪರಿಶೀಲನೆ ನಡೆಸುತ್ತಿದ್ದಾರೆ. ಏರೋನಿಕ್ಸ್ ಸಂಸ್ಥೆಯಲ್ಲಿ ಉದ್ಯೋಗಿಯಾಗಿದ್ದ ಫೆಲಿಕ್ಸ್ ಕಂಪನಿಯಿಂದ

ಹಾಡುಹಗಲೇ ಜೋಡಿ ಕೊಲೆ : ಮಾಜಿ ಉದ್ಯೋಗಿಯಿಂದ ಕೃತ್ಯ Read More »

42ನೇ ಮಾನ್ಸೂನ್ ಚೆಸ್ ಟೂರ್ನಮೆಂಟ್ | ಸಂತ ಅಲೋಶಿಯಸ್ ಕಾಲೇಜಿನ ಲಾರೆನ್ಸ್ ಪಿಂಟೋ ಪ್ರಥಮ

ಪುತ್ತೂರು: ಚದುರಂಗ ಆಟವು ಒಂದು ಚತುರತೆಯ ಆಟ. ಇದು ಬುದ್ದಿಗೆ ಕೆಲಸ ನೀಡುವ ಆಟವಾಗಿದ್ದು ನಿರಂತರವಾಗಿ ಅಭ್ಯಾಸಿಸಿದರೆ ಮಾತ್ರ ಉತ್ತಮ ಪರಿಣಾಮ ಕಾಣಬಹುದು. ಹಾಗಾಗಿ ವಿದ್ಯಾರ್ಥಿಗಳು ಚುರುಕುತನ ಪಡೆಯಲು ಚೆಸ್ ಉತ್ತಮ ಕ್ರೀಡೆ ಎಂದು ದ.ಕ-ಜಿಲ್ಲೆ ಚೆಸ್ ಅಸೋಸಿಯೇಶನ್ ಅಧ್ಯಕ್ಷ ರಮೇಶ್ ಕೋಟೆ ಹೇಳಿದರು. ಅವರು ಪುತ್ತೂರಿನ ವಿವೇಕಾನಂದ ಕಾಲೇಜು ಕಲಾ ವಿಜ್ಞಾನ ಮತ್ತು ವಾಣಿಜ್ಯ (ಸ್ವಾಯತ್ತ) ಕಾಲೇಜು ಹಾಗೂ ದೈಹಿಕ ಶಿಕ್ಷಣ ವಿಭಾಗ ಮತ್ತು  ಐಕ್ಯೂಎಸಿ ಸಹಯೋಗದಲ್ಲಿ ಅಂತರ್ ಕಾಲೇಜು ಹಾಗೂ ಅಂತರ್ ಜಿಲ್ಲಾ ಮಟ್ಟದ

42ನೇ ಮಾನ್ಸೂನ್ ಚೆಸ್ ಟೂರ್ನಮೆಂಟ್ | ಸಂತ ಅಲೋಶಿಯಸ್ ಕಾಲೇಜಿನ ಲಾರೆನ್ಸ್ ಪಿಂಟೋ ಪ್ರಥಮ Read More »

ನಿಧನರಾದ ಗಂಗಾಧರ ಪೂಜಾರಿ ಮನೆಗೆ ಅರುಣ್ ಕುಮಾರ್ ಪುತ್ತಿಲ ಭೇಟಿ | ಕುಟುಂಬಕ್ಕೆ ಧನಸಹಾಯ ಹಸ್ತಾಂತರ

ಪುತ್ತೂರು: ಪರ್ಪುಂಜ ಬಂಡಿವಾಳ ಗಂಗಾಧರ ಪೂಜಾರಿಯವರು ಅನಾರೋಗ್ಯದಿಂದ ಇತ್ತೀಚೆಗೆ ನಿಧನರಾಗಿದ್ದು, ಹಿಂದೂ ಮುಖಂಡ ಅರುಣ್ ಕುಮಾರ್ ಪುತ್ತಿಲ ಮಂಗಳವಾರ ಮೃತರ ಮನೆಗೆ ಭೇಟಿ ನೀಡಿ ಕುಟುಂಬಸ್ಥರಿಗೆ ಸಾಂತ್ವನ ತಿಳಿಸಿದರು. ಈ ಸಂದರ್ಭದಲ್ಲಿ ಮೃತರ ಪತ್ನಿ ಕುಸುಮರಿಗೆ ಪುತ್ತಿಲ ಪರಿವಾರದ ವತಿಯಿಂದ ಧನಸಹಾಯ ಹಸ್ತಾಂತರಿಸಲಾಯಿತು. ಪುತ್ತಿಲ ಪರಿವಾರದ ಅಧ್ಯಕ್ಷ ಪ್ರಸನ್ನ ಮಾರ್ತಾ, ಪ್ರಧಾನ ಕಾರ್ಯದರ್ಶಿ ಉಮೇಶ್ ಗೌಡ ವೀರಮಂಗಲ, ಕಾರ್ಯದರ್ಶಿ ಸುದೀರ್ ರೈ ಕಂಪ, ಒಳಮೊಗ್ರು ಅಧ್ಯಕ್ಷ ರಿತೇಶ್, ಕಾರ್ಯಾಧ್ಯಕ್ಷ ಶರತ್, ಶನ್ಮಿತ್, ಜಯಂತ್ ಬರಮೇಲು, ಮೋಹನ್ ರೈ,

ನಿಧನರಾದ ಗಂಗಾಧರ ಪೂಜಾರಿ ಮನೆಗೆ ಅರುಣ್ ಕುಮಾರ್ ಪುತ್ತಿಲ ಭೇಟಿ | ಕುಟುಂಬಕ್ಕೆ ಧನಸಹಾಯ ಹಸ್ತಾಂತರ Read More »

ಜೈನ ಮುನಿಗಳ ಹತ್ಯೆ | ಆರೋಪಿಗಳಿಗೆ ಉಗ್ರ ಶಿಕ್ಷೆಯಾಗಬೇಕು : ಜೀವಂಧರ್ ಜೈನ್

ಪುತ್ತೂರು: ಬೆಳಗಾವಿ ಚಿಕ್ಕೋಡಿಯ ಜೈನಮುನಿ ಶ್ರೀ ಕಾಮಕುಮಾರ ನಂದಿ ಮಹಾರಾಜರ ಬರ್ಬರ ಹತ್ಯೆ ಯನ್ನು ಪುತ್ತೂರು ನಗರ ಸಭೆ ನಿಕಟ ಪೂರ್ವ ಅಧ್ಯಕ್ಷ ಜೀವಂಧರ್ ಜೈನ್ ಖಂಡಿಸಿದ್ದಾರೆ. ಭಾರತದ ಸಂತ ಪರಂಪರೆಗೆ ಬಹು ದೊಡ್ಡ ಕೊಡುಗೆ ನೀಡಿದ ಜೈನ ಮುನಿಗಳ ಮೇಲೆ ಇಂತಹ ಅಮಾನುಷವಾಗಿ ಹತ್ಯೆಗೈದಿರುವುದು ಒಂದು ಜೀವಿಗೂ ನೋವಾಗದಂತೆ ಸಮಾಜದಲ್ಲಿ ಬದುಕುವ ಜೈನ ಸಮುದಾಯಕ್ಕೆ ತುಂಬಾ ನೋವಾಗಿದೆ. ತಪ್ಪಿತಸ್ಥರಿಗೆ ಮರಣ ದಂಡನೆಯಂತ ಉಗ್ರ ಶಿಕ್ಷೆ ನೀಡಬೇಕು ಹಾಗೂ ಜೈನ ಮುನಿಗಳಿಗೆ ಸೂಕ್ತ ರಕ್ಷಣೆ ಕೊಡಬೇಕೆಂದು ಅವರು

ಜೈನ ಮುನಿಗಳ ಹತ್ಯೆ | ಆರೋಪಿಗಳಿಗೆ ಉಗ್ರ ಶಿಕ್ಷೆಯಾಗಬೇಕು : ಜೀವಂಧರ್ ಜೈನ್ Read More »

ಜು.23 : ಯುವ ಬಂಟರ ಸಂಘದ ವತಿಯಿಂದ “ತುಳುನಾಡ ಬಂಟರ ಪರ್ಬ-2023” : ಆಮಂತ್ರಣ ಪತ್ರಿಕೆ ಬಿಡುಗಡೆ

ಪುತ್ತೂರು: ಪುತ್ತೂರು ತಾಲೂಕು ಯುವ ಬಂಟರ ಸಂಘದ ಆಶ್ರಯದಲ್ಲಿ ಜು.23 ಭಾನುವಾರ ಯುವ ಬಂಟರ ದಿನಾಚರಣೆ ಅಂಗವಾಗಿ ನಡೆಯುವ “ತುಳುನಾಡ ಬಂಟರ ಪರ್ಬ-2023” ರ ಆಮಂತ್ರಣ ಪತ್ರಿಕೆ ಬಿಡುಗಡೆ ಸಮಾರಂಭ ಮಂಗಳವಾರ ಸಂಜೆ ಬಂಟರ ಭವನದಲ್ಲಿ ನಡೆಯಿತು. ಬಂಟರ ಬಂಟರ ಯಾನೆ ನಾಡವರ ಮಾತೃ ಸಂಘ ಮಂಗಳೂರು, ಪುತ್ತೂರು ತಾಲೂಕು ಸಮಿತಿ, ಪುತ್ತೂರು ಬಂಟರ ಸಂಘ, ಮಹಿಳಾ ಬಂಟರ ಸಂಘ ಹಾಗೂ ವಿದ್ಯಾರ್ಥಿ ಬಂಟರ ಸಂಘದ ಸಹಕಾರದೊಂದಿಗೆ ಕಾರ್ಯಕ್ರಮ ನಡೆಯಲಿದ್ದು, ಬಂಟರ ಸಂಘದ ಕರುಣಾಕರ ರೈ ದೇರ್ಲಗುತ್ತು

ಜು.23 : ಯುವ ಬಂಟರ ಸಂಘದ ವತಿಯಿಂದ “ತುಳುನಾಡ ಬಂಟರ ಪರ್ಬ-2023” : ಆಮಂತ್ರಣ ಪತ್ರಿಕೆ ಬಿಡುಗಡೆ Read More »

ನಕಲಿ ದಾಖಲೆ ಸೃಷ್ಟಿಸಿ ಕಾರ್ಯಾಚರಿಸುತ್ತಿದ್ದ ಕಚೇರಿಯೊಂದಕ್ಕೆ ಅಧಿಕಾರಿಗಳಿಂದ ದಾಳಿ | ಗ್ರಾಪಂ, ನಗರಸಭೆ ಇಲಾಖೆ ಮೊಹರು ಒಳಗೊಂಡ ಸೀಲ್ ವಶಕ್ಕೆ

ಪುತ್ತೂರು: ಭೂದಾಖಲೆ ಸಹಿತ ಹಲವು ವಿಷಯಗಳಿಗೆ ಸಂಬಂಧಿಸಿ ನಿರಾಪೇಕ್ಷಣಾ ಪತ್ರದ ನಕಲಿ ದಾಖಲೆ ಸೃಷ್ಟಿಸಿ ಮಾಡಿರುವ ಆರೋಪಕ್ಕೆ ಸಂಬಂಧಿಸಿ ಪುತ್ತೂರಿನ ಪಡೀಲ್‍ನಲ್ಲಿರುವ ಕಚೇರಿಯೊಂದಕ್ಕೆ ಅಧಿಕಾರಿಗಳು ಮಂಗಳವಾರ ದಾಳಿ ನಡೆಸಿದ್ದಾರೆ. ವಿಶ್ವನಾಥ್ ಎಂಬವರಿಗೆ ಸೇರಿದ ಇಲೆಕ್ಟ್ರಿಕಲ್ಸ್ ಮತ್ತು ಪ್ಲಂಬಿಗ್ ವರ್ಕ್‍ ಕಚೇರಿಗೆ ದಾಳಿ ನಡೆಸಿದ್ದು, ಪುತ್ತೂರು ಹಾಗೂ ಕಡಬದ ಎಲ್ಲಾ ಗ್ರಾಪಂ ಮೊಹರು, ಬಂಟ್ವಾಳ ತಾಲೂಕಿನ ಮೂರು ಗ್ರಾಪಂಗಳ ಪಿಡಿಒ ಸೀಲ್, ನಗರಸಭೆ ಅಧಿಕಾರಿಗಳ ಮೊಹರು ಎಲ್ಲವನ್ನೂ ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ. ತಾಪಂ ಕಾರ್ಯನಿರ್ವಹಣಾಧಿಕಾರಿ ನವೀನ್ ಭಂಡಾರಿ ನೇತೃತ್ವದ ತಂಡ

ನಕಲಿ ದಾಖಲೆ ಸೃಷ್ಟಿಸಿ ಕಾರ್ಯಾಚರಿಸುತ್ತಿದ್ದ ಕಚೇರಿಯೊಂದಕ್ಕೆ ಅಧಿಕಾರಿಗಳಿಂದ ದಾಳಿ | ಗ್ರಾಪಂ, ನಗರಸಭೆ ಇಲಾಖೆ ಮೊಹರು ಒಳಗೊಂಡ ಸೀಲ್ ವಶಕ್ಕೆ Read More »

ಪಡ್ನೂರು ದೇವಿನಗರದಲ್ಲಿ ಧರೆ ಕುಸಿದು ಮನೆ ಅಪಾಯದಲ್ಲಿ | ಕಾಂಗ್ರೆಸ್ ಬೂತ್ ಸಮಿತಿಯಿಂದ ಬನ್ನೂರು ಪಿಡಿಒಗೆ ಮನವಿ

ಪುತ್ತೂರು: ಬನ್ನೂರು ಗ್ರಾಮಪಂಚಾಯತ್ ವ್ಯಾಪ್ತಿಯ ಪಡ್ನೂರು ದೇವಿನಗರ ಎಂಬಲ್ಲಿರುವ ರತ್ನಾವ ತಿ ಎಂಬವರ ಮನೆ ಬರೆ ಕುಸಿದ ಕಾರಣ ಜರಿದು ಬೀಳುವ ಹಂತದ್ದಲ್ಲಿದ್ದು ಕೂಡಲೇ ಕ್ರಮಕೈಗೊಳ್ಳುವಂತೆ ಆಗ್ರಹಿಸಿ ಬನ್ನೂರು ಗ್ರಾಮ ಕಾಂಗ್ರೆಸ್ ಬೂತ್ ಸಮಿತಿ ವತಿಯಿಂದ ಗ್ರಾಪಂ ಪಿಡಿಒರವರಿಗೆ ಮನವಿ ಸಲ್ಲಿಸಲಾಯಿತು. ದೇವಿನಗರ ಸರ್ವೆ ನಂ 1ರಲ್ಲಿ ಎರಡು ಸೆಂಟ್ಸ್ ಸ್ಥಳದಲ್ಲಿ ರತ್ನಾವತಿಯವರ ಮನೆ ಇದ್ದು ಅದರ ಪಕ್ಕದಲ್ಲಿರುವ ಧರೆ ಮಳೆಗೆ ಕುಸಿಯುವ ಹಂತದಲ್ಲಿದ್ದು ಧರೆ ಜರಿದರೆ ಮನೆ ಬೀಳುವ ಅಪಾಯದಲ್ಲಿದೆ ಎಂದು ಮನವಿಯಲ್ಲಿ ತಿಳಿಸಲಾಗಿದೆ. ಸೇಡಿಯಾಪು-

ಪಡ್ನೂರು ದೇವಿನಗರದಲ್ಲಿ ಧರೆ ಕುಸಿದು ಮನೆ ಅಪಾಯದಲ್ಲಿ | ಕಾಂಗ್ರೆಸ್ ಬೂತ್ ಸಮಿತಿಯಿಂದ ಬನ್ನೂರು ಪಿಡಿಒಗೆ ಮನವಿ Read More »

error: Content is protected !!
Scroll to Top