ಚಂದ್ರಯಾನ-3 ಗಗನನೌಕೆ ಯಶಸ್ವಿ ಉಡಾವಣೆ

ಆಂಧ್ರಪ್ರದೇಶ : ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯ ಮಹತ್ವಾಕಾಂಕ್ಷೆಯ ಚಂದ್ರಯಾನ-3 ಗಗನನೌಕೆ ಯಶಸ್ವಿಯಾಗಿ ಉಡಾವಣೆಗೊಂಡಿದೆ. ಉಡಾವಣೆಯ ನಿಗದಿತ ಸಮಯ ಮಧ್ಯಾಹ್ನ 2.35 ಕ್ಕೆ ಯಶಸ್ವಿಯಾಗಿ ಉಡಾವಣೆಗೊಂಡಿತು. ಆಂಧ್ರಪ್ರದೇಶದ ಸುಳ್ಳೂರುಪೇಟೆಯಲ್ಲಿರುವ ಇಸ್ರೋದ ಶ್ರೀಹರಿಕೋಟಾ ಬಾಹ್ಯಾಕಾಶ ಕೇಂದ್ರದಿಂದ ಚಂದ್ರಯಾನ-3 ನೌಕೆಯನ್ನು ಹೊತ್ತ GSLV-MK3 ರಾಕೆಟ್ ನಭಕ್ಕೆ ಚಿಮ್ಮಿದೆ. ಈ ಮೂಲಕ ಯಶಸ್ವಿಯಾಗಿ ಕಾರ್ಯನಿರ್ವಹಿಸುತ್ತಿದೆ ಎಂದು ಇಸ್ರೋ ತಿಳಿಸಿದೆ.

ಚಂದ್ರಯಾನ-3 ಗಗನನೌಕೆ ಯಶಸ್ವಿ ಉಡಾವಣೆ Read More »

ಬಜತ್ತೂರು ಶಾಲೆಯಲ್ಲಿ ಶೌರ್ಯ ವಿಪತ್ತು ತಂಡದಿಂದ ಸ್ವಚ್ಛತಾ ಕಾರ್ಯ

ಬಜತ್ತೂರು : ಉಪ್ಪಿನಂಗಡಿ ಬಜತ್ತೂರು ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸ್ವಚ್ಛತಾ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು. ಈ ಸಂದರ್ಭದಲ್ಲಿ ಶಾಲಾ ವಠಾರದಲ್ಲಿ ತೆಂಗಿನ ಗಿಡ ನೆಡುವುದು, ಶಾಲಾ ಕೊಠಡಿಯ ಮುರಿದ ಹಂಚುಗಳನ್ನು ತೆರವುಗೊಳಿಸಿ ಹೊಸ ಹಂಚುಗಳನ್ನು ಹಾಕಲಾಯಿತು, ಪಂಚಾಯತ್ ಆವರಣಕ್ಕೆ ಅಡ್ಡಲಾಗಿದ್ದ ಗಿಡ ಮರಗಳನ್ನು ಕಡಿದು ಸ್ವಚ್ಚ ಮಾಡಲಾಯಿತು . ಈ ಸಂದರ್ಭದಲ್ಲಿ  ಸ್ವಯಂಸೇವಕರಾದ ಮಮತಾ, ಸದಾನಂದ, ಮನೋಜ್ ಕುಮಾರ್, ಸಾವಿತ್ರಿ, ಸುರೇಶ್, ಅನಿತಾ, ದಯಾನಂದ, ವಾಸುದೇವ, ವಾಸಪ್ಪ, ಭವ್ಯ, ಮಿಥುನ್ ಕುಮಾರ್, ಇಂದಿರಾ, ಪಾಲ್ಗೊಂಡಿದ್ದರು.

ಬಜತ್ತೂರು ಶಾಲೆಯಲ್ಲಿ ಶೌರ್ಯ ವಿಪತ್ತು ತಂಡದಿಂದ ಸ್ವಚ್ಛತಾ ಕಾರ್ಯ Read More »

ಪುತ್ತೂರು ಸಹಾಯಕ ಆಯುಕ್ತ ಗಿರೀಶ್ ನಂದನ್ ವರ್ಗಾವಣೆ ಆದೇಶಕ್ಕೆ ತಡೆಯಾಜ್ಞೆ

ಪುತ್ತೂರು: ಪುತ್ತೂರು:ಪುತ್ತೂರು ಉಪವಿಭಾಗಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದ ಗಿರೀಶ್ ನಂದನ್ ಅವರ ವರ್ಗಾವಣೆ ಆದೇಶಕ್ಕೆ ಕರ್ನಾಟಕ ಅಡ್ಮಿನಿಸ್ಟ್ರೇಟಿವ್ ಟ್ರಿಬ್ಯೂನಲ್ ತಡೆಯಾಜ್ಞೆ ನೀಡಿದೆ. ಅವಧಿಪೂರ್ವ ಮತ್ತು ಈ ಹಿಂದೆ ಕರ್ತವ್ಯ ನಿರ್ವಹಿಸಿದ್ದ ಎತ್ತಿನಹೊಳೆ ಯೋಜನೆಯ ವಿಶೇಷ ಭೂ ಸ್ವಾಧೀನ ಅಧಿಕಾರಿ ಹುದ್ದೆಗೆ ಮತ್ತೆ ವರ್ಗಾವಣೆ ಮಾಡಿರುವುದನ್ನು ಪ್ರಶ್ನಿಸಿ ಗಿರೀಶ್ ನಂದನ್ ಕೆಎಟಿ ಗೆ ದೂರು ದಾಖಲಿಸಿದ್ದರು. ದೂರು ಸ್ವೀಕರಿಸಿದ ಕೆಎಟಿ ವರ್ಗಾವಣೆ ಆದೇಶಕ್ಕೆ ತಡೆ ನೀಡಿದೆ. ಈ ಹಿಂದೆ ಗಿರೀಶ್ ನಂದನ್ ಎತ್ತಿನಹೊಳೆ ಯೋಜನೆಯ ಭೂಸ್ವಾಧೀನ ಅಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದು, ಸರಕಾರ ಅವರ

ಪುತ್ತೂರು ಸಹಾಯಕ ಆಯುಕ್ತ ಗಿರೀಶ್ ನಂದನ್ ವರ್ಗಾವಣೆ ಆದೇಶಕ್ಕೆ ತಡೆಯಾಜ್ಞೆ Read More »

ಆಸ್ತಿ ವಿಚಾರಕ್ಕೆ ಸಹೋದರರ ನಡುವೆ ಜಗಳ | ಅಣ್ಣನನ್ನು ಚೂರಿಯಿಂದ ಇರಿದು ಕೊಂದ ತಮ್ಮ

ಸುಳ್ಯ : ಆಸ್ತಿ ವಿಚಾರಕ್ಕೆ ಸಂಬಂಧಿಸಿ ಸಹೋದರರ ನಡುವೆ ಜಗಳ ನಡೆದು ತಮ್ಮ ಅಣ್ಣನನ್ನು ಹತ್ಯೆಗೈದ ಭೀಕರ ಘಟನೆ ಕೊಡಗು ಜಿಲ್ಲೆಯ ಮಡಿಕೇರಿ ತಾಲೂಕಿನ ಚೆಂಬು ಗ್ರಾಮದಲ್ಲಿ ನಡೆದಿದೆ. ಉಸ್ಮಾನ್ ಎಂಬವರೇ ಕೊಲೆಯಾದ ವ್ಯಕ್ತಿ ಎಂದು ಗುರುತಿಸಲಾಗಿದೆ. ಶುಕ್ರವಾರ ಚೆಂಬು ಗ್ರಾಮದ ಕುದ್ರೆಪಾಯದ ಸಮೀಪ ಇರುವ ಸ್ಥಳವೊಂದಕ್ಕೆ  ಹೋಗಿದ್ದ ಸಂದರ್ಭ ಆಸ್ತಿ ವಿಚಾರದಲ್ಲಿ ಸಹೋದರರ ನಡುವೆ ಮಾತಿಗೆ ಮಾತು ಬೆಳೆದು ಜಗಳ ಉಂಟಾಗಿದೆ. ಈ ಸಂದರ್ಭದಲ್ಲಿ ತಮ್ಮ ಅಣ್ಣ ಉಸ್ಮಾನ್ ಅವರಿಗೆ ಚೂರಿಯಿಂದ ಚುಚ್ಚಿದ್ದು, ಈ ವೇಳೆ

ಆಸ್ತಿ ವಿಚಾರಕ್ಕೆ ಸಹೋದರರ ನಡುವೆ ಜಗಳ | ಅಣ್ಣನನ್ನು ಚೂರಿಯಿಂದ ಇರಿದು ಕೊಂದ ತಮ್ಮ Read More »

ಕಾಂಗ್ರೆಸ್ ಸರಕಾರದಿಂದ ದ್ವೇಷ ರಾಜಕಾರಣ : ಸಂಸದ ನಳಿನ್ ಕುಮಾರ್ ಕಟೀಲ್

ಪುತ್ತೂರು: ರಾಜ್ಯದಲ್ಲಿ ಸಿದ್ಧರಾಮಯ್ಯ ನೇತೃತ್ವದ ಕಾಂಗ್ರೆಸ್ ಆಡಳಿತಕ್ಕೆ ಬಂದ ಬಳಿಕ ರಾಜ್ಯದಲ್ಲಿ ಶಾಂತಿ ಸುವ್ಯವಸ್ಥೆ ಸಂಪೂರ್ಣ ಹದಗೆಟ್ಟಿದ್ದು, ಈ ರೀತಿಯ ದ್ವೇಷ ರಾಜಕಾರಣ ಮಾಡುವುದು ಸರಿಯಲ್ಲ ಎಂದು ಬಿಜೆಪಿ ರಾಜ್ಯಾಧ್ಯಕ್ಷ, ಸಂಸದ ನಳಿನ್ ಕುಮಾರ್ ಕಟೀಲ್ ಹೇಳಿದ್ದಾರೆ. ಅವರು ಪುತ್ತೂರು ನಗರದ ನಿರೀಕ್ಷಣಾ ಮಂದಿರದಲ್ಲಿ ಪತ್ರಿಕಾ ಮಾಧ್ಯಮದವರೊಂದಿಗೆ ಮಾತನಾಡಿ, ಕಾಂಗ್ರೆಸ್ ಸರಕಾರ ಅಧಿಕಾರಕ್ಕೆ ಬಂದ ಮೇಲೆ ಮುನಿಗಳು, ಉದ್ಯಮಿಗಳು ಜತೆಗೆ ಎಲ್ಲಿಂದಲೋ ಉದ್ಯೋಗ ಅರಸಿ ಬಂದ ಕಾರ್ಮಿಕರ ಹತ್ಯೆಗಳು, ಎರಡು ಕೆಲ ದಿನಗಳ ಹಿಂದೆ ಬೆಂಗಳೂರಿನಲ್ಲಿ ನಡೆದ

ಕಾಂಗ್ರೆಸ್ ಸರಕಾರದಿಂದ ದ್ವೇಷ ರಾಜಕಾರಣ : ಸಂಸದ ನಳಿನ್ ಕುಮಾರ್ ಕಟೀಲ್ Read More »

ಚಂದ್ರಯಾನ-3 ಉಡಾವಣೆಗೆ ಕ್ಷಣಗಣನೆ | ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಯಶಸ್ವಿ ಉಡಾವಣೆಗೆ ಪ್ರಾರ್ಥನೆ

ಪುತ್ತೂರು : ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯ ಮಹತ್ವಾಕಾಂಕ್ಷೆಯ ಚಂದ್ರಯಾನ-3 ಗಗನನೌಕೆ ಉಡಾವಣೆಗೆ ಕ್ಷಣಗಣನೆ ಶುರುವಾಗಿದ್ದು, ಯಶಸ್ವಿ ಉಡಾವಣೆಗೆ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಪ್ರಾರ್ಥನೆ ಸಲ್ಲಿಸಲಾಯಿತು. ಪುತ್ತೂರು ನಗರ ಬಿಜೆಪಿ ಯುವ ಮೋರ್ಚಾ ನೇತೃತ್ವದಲ್ಲಿ ದೇವಸ್ಥಾನದ ಪ್ರಧಾನ ಅರ್ಚಕ ವಿ.ಎಸ್.ಭಟ್ ಪ್ರಾರ್ಥನೆ ನೆರವೇರಿಸಿದರು. ಈ ಸಂದರ್ಭದಲ್ಲಿ ಮಾಜಿ ಶಾಸಕ ಸಂಜೀವ ಮಠಂದೂರು, ಬಜರಂಗದಳ ದಕ್ಷಿಣ ಪ್ರಾಂತ ಸಹಸಂಯೋಜಕ ಮುರಳೀಕೃಷ್ಣ ಹಸಂತಡ್ಕ, ಅಜಿತ್ ರೈ ಹೊಸಮನೆ, ಯುವರಾಜ ಪೆರಿಯತ್ತೋಡಿ, ದಿನೇಶ್ ಪಂಜಿಗ, ಸಂತೋಷ್ ರಾವ್, ರಾಮಪ್ರಸಾದ್ ಮಯ್ಯ,

ಚಂದ್ರಯಾನ-3 ಉಡಾವಣೆಗೆ ಕ್ಷಣಗಣನೆ | ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಯಶಸ್ವಿ ಉಡಾವಣೆಗೆ ಪ್ರಾರ್ಥನೆ Read More »

ಗ್ಯಾರಂಟಿ ಯೋಜನೆಗಳಲ್ಲಿ ಒಂದಾದ ಶಕ್ತಿ ಯೋಜನೆಗೆ ಡಾ.ಡಿ.ವೀರೇಂದ್ರ ಹೆಗ್ಗಡೆಯವರಿಂದ ಮೆಚ್ಚುಗೆ | ಮುಖ್ಯಮಂತ್ರಿ ಸಿದ್ಧರಾಮಯ್ಯರಿಗೆ ಪತ್ರ

ಧರ್ಮಸ್ಥಳ : ಮಹಿಳೆಯರಿಗೆ ಉಚಿತ ಪ್ರಯಾಣದ ಅವಕಾಶ ಕಲ್ಪಿಸಿರುವ ಗ್ಯಾರಂಟಿ ಯೋಜನೆಗಳಲ್ಲೊಂದಾದ “ಶಕ್ತಿ “ ಯೋಜನೆ ಕುರಿತು ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ, ರಾಜ್ಯಸಭಾ ಸದಸ್ಯ ಡಾ.ಡಿ.ವೀರೇಂದ್ರ ಹೆಗ್ಗಡೆಯವರು ಮೆಚ್ಚುಗೆ ವ್ಯಕ್ತಪಡಿಸಿ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರಿಗೆ ಪತ್ರ ಬರೆದಿದ್ದಾರೆ. ತನ್ನ ಟ್ವಿಟ್ಟರ್ ಖಾತೆಯಲ್ಲಿ ಸಿದ್ಧರಾಮಯ್ಯ ಅವರು ಹಂಚಿಕೊಂಡಿದ್ದು, 14ನೇ ಬಜೆಟ್ ನ ಫಲಶ್ರುತಿಗೆ ಮೆಚ್ಚುಗೆ ವ್ಯಕ್ತಪಡಿಸಿ, ರಾಜ್ಯ ಸರಕಾರದ ಮಹತ್ವಕಾಂಕ್ಷೆಯ ಶಕ್ತಿ ಯೋಜನೆಗೆ ಸಿಕ್ಕಿರುವ ಮನ್ನಣೆಯಾಗಿದೆ ಎಂದು ಅವರು ಬರೆದಿರುವ ಪತ್ರದಲ್ಲಿ ಉಲ್ಲೇಖಿಸಿದ್ದಾರೆ. ಶಕ್ತಿ ಯೋಜನೆಯಿಂದಾಗಿ ಧರ್ಮಸ್ಥಳಕ್ಕೆ

ಗ್ಯಾರಂಟಿ ಯೋಜನೆಗಳಲ್ಲಿ ಒಂದಾದ ಶಕ್ತಿ ಯೋಜನೆಗೆ ಡಾ.ಡಿ.ವೀರೇಂದ್ರ ಹೆಗ್ಗಡೆಯವರಿಂದ ಮೆಚ್ಚುಗೆ | ಮುಖ್ಯಮಂತ್ರಿ ಸಿದ್ಧರಾಮಯ್ಯರಿಗೆ ಪತ್ರ Read More »

ಭೂಮಿಯನ್ನು ಶ್ರೀಮಂತಗೊಳಿಸಿ ಕೃಷಿ ಕೈಗೊಳ್ಳಬೇಕು | ಶ್ರೀ ಅದೃಶ್ಯ ಕಾಡಸಿದ್ದೇಶ್ವರ ಸ್ವಾಮೀಜಿ

ಮಂಗಳೂರು : ಜೈವಿಕ ಘಟಕಗಳನ್ನು ಪುನಶ್ಚೇತನಗೊಳಿಸಬೇಕಿದ್ದು, ಮಣ್ಣು ಕೊಚ್ಚಿಹೋಗದಂತೆ ತಡೆಯಲು ಗಿಡಗಳನ್ನು ನೆಡಬೇಕು. ಹಸಿರೆಲೆ ಗೊಬ್ಬರ, ಒಂದೇ ತೆರನಾದ ಬೆಳೆಯ ಬದಲು ಬಹು ಬೆಳೆ ಸೇರಿದಂತೆ ವಿವಿಧ ಉಪಕ್ರಮಗಳ ಮೂಲಕ ಈ ಜೀವಾಣುಗಳ ಸಂಖ್ಯೆ ಯನ್ನು ಹೆಚ್ಚಿಸಬಹುದು. ಭೂಮಿಯನ್ನು ಮೊದಲು ಶ್ರೀಮಂತಗೊಳಿಸಿ ಬಳಿಕ ಕೃಷಿ ಕೈಗೊಳ್ಳಬೇಕು ಎಂದು ಸಾವಯವ ಕೃಷಿ ಸಾಧಕ, ಕೊಲ್ಲಾಪುರದ ಶ್ರೀ ಕನೇರಿ ಮಠದ, ಶ್ರೀ ಅದೃಶ್ಯ ಕಾಡಸಿದ್ದೇಶ್ವರ ಸ್ವಾಮೀಜಿ ನುಡಿದರು. ಅವರು ಸಾವಯವ ಕೃಷಿಕ ಗ್ರಾಹಕ ಬಳಗದ ನೇತೃತ್ವದಲ್ಲಿ ಬ್ಯಾಂಕ್ ಆಫ್ ಬರೋಡಾದ,

ಭೂಮಿಯನ್ನು ಶ್ರೀಮಂತಗೊಳಿಸಿ ಕೃಷಿ ಕೈಗೊಳ್ಳಬೇಕು | ಶ್ರೀ ಅದೃಶ್ಯ ಕಾಡಸಿದ್ದೇಶ್ವರ ಸ್ವಾಮೀಜಿ Read More »

ಮನೆ ಮೇಲೆ ಬಿದ್ದ ಪಿಕಪ್ ವಾಹನ | ಇಲಾಖೆ ಜತೆ ಪುತ್ತಿಲ ಪರಿವಾರ ಕೈಜೋಡಿಸುವಿಕೆ

ಬಂಟ್ವಾಳ : ಪುಣಚ ಸಮೀಪ ಮನೆಯ ಮೇಲೆ ಬೆಳಗ್ಗಿನ ಜಾವ ಪಿಕಪ್ ವಾಹನ ಬಿದ್ದ ಸ್ಥಳಕ್ಕೆ ಪುತ್ತಿಲ ಪರಿವಾರದವರು ತೆರಳಿ ಸಹಕರಿಸಿದರು. ಪುತ್ತಿಲ ಪರಿವಾರದ ಅರುಣ್ ಕುಮಾರ್ ಪುತ್ತಿಲ, ಪರಿವಾರದ ಪ್ರಮುಖರು ಕಾರ್ಯಾಚರಣೆ ಸಂದರ್ಭ ಇಲಾಖೆಯೊಂದಿಗೆ ಕೈಜೋಡಿಸಿದರು. ಮಳೆ ಬರುತಿದ್ದಾಗ ಘಟನೆ ನಡೆದಿದ್ದು, ಮಹಿಳೆಯೋರ್ವರು ಗಂಭೀರ ಗಾಯಗೊಂಡಿದ್ದಾರೆ. ಈ ಸಂದರ್ಭದಲ್ಲಿ ಸೂಕ್ತ ಪರಿಹಾರ ಒದಗಿಸುವ ವ್ಯವಸ್ಥೆ ಮಾಡುವಂತೆ ಅರುಣ್ ಪುತ್ತಿಲ ಅಧಿಕಾರಿಗಳ ಜೊತೆ ಮಾತುಕತೆ ನಡೆಸಿದರು.

ಮನೆ ಮೇಲೆ ಬಿದ್ದ ಪಿಕಪ್ ವಾಹನ | ಇಲಾಖೆ ಜತೆ ಪುತ್ತಿಲ ಪರಿವಾರ ಕೈಜೋಡಿಸುವಿಕೆ Read More »

ನೆಲ್ಯಾಡಿ ಸೂರ್ಯನಗರದ ಶ್ರೀರಾಮ ವಿದ್ಯಾಲಯದಲ್ಲಿ ವಿವೇಕ ಸಂಜೀವಿನಿ ಕಾರ್ಯಕ್ರಮ

ನೆಲ್ಯಾಡಿ: ನೆಲ್ಯಾಡಿ ಶ್ರೀ ರಾಮ ವಿದ್ಯಾಲಯ ಹಾಗೂ ನೆಲ್ಯಾಡಿ ಶ್ರೀರಾಮ ಗ್ರಾಮ ವಿಕಾಸ ಸಮಿತಿ ವತಿಯಿಂದ ಪ್ರಾಥಮಿಕ ಆರೋಗ್ಯ ಕೇಂದ್ರ ನೆಲ್ಯಾಡಿ ಹಾಗೂ ಶಿರಾಡಿ ಅರಕ್ಷಕ ಹೊರ ಠಾಣೆ ಸಹಯೋಗದಲ್ಲಿ ಪುತ್ತೂರು ವಿವೇಕಾನಂದ ವಿದ್ಯಾವರ್ಧಕ ಸಂಘದ ಆಶಯದಂತೆ ವಿವೇಕ ಸಂಜೀವಿನಿ ಕಾರ್ಯಕ್ರಮ ನೆಲ್ಯಾಡಿ ಪ್ರಾಥಮಿಕ ಆರೋಗ್ಯ ಕೇಂದ್ರ ಮತ್ತು ಶಿರಾಡಿ ಹೊರ ಠಾಣೆಯಲ್ಲಿ ನಡೆಯಿತು. ಆರೋಗ್ಯ ಕೇಂದ್ರದ ಡಾ.ಶಿಶಿರ, ಆರಕ್ಷಕ ಠಾಣಾಧಿಕಾರಿ ಕುಶಾಲಪ್ಪ ಮತ್ತು  ಅರಣ್ಯ ಇಲಾಖೆಯ ಅಧಿಕಾರಿ ದೇವಿಪ್ರಸಾದ್ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡಿದ್ದರು. ಸುಮಾರು 40

ನೆಲ್ಯಾಡಿ ಸೂರ್ಯನಗರದ ಶ್ರೀರಾಮ ವಿದ್ಯಾಲಯದಲ್ಲಿ ವಿವೇಕ ಸಂಜೀವಿನಿ ಕಾರ್ಯಕ್ರಮ Read More »

error: Content is protected !!
Scroll to Top