ಸೆ.10 : ವೀರಮಂಗಲ  ಶ್ರೀಕೃಷ್ಣ ಕಲಾಕೇಂದ್ರದಿಂದ “ಶ್ರೀಕೃಷ್ಣ ಲೀಲೋತ್ಸವ”

ಪುತ್ತೂರು : ಪುತ್ತೂರು ತಾಲೂಕಿನ ಶಾಂತಿಗೋಡು ಗ್ರಾಮದ ವೀರಮಂಗಲ ಶ್ರೀಕೃಷ್ಣ ಕಲಾ ಕೇಂದ್ರದ ವತಿಯಿಂದ 3ನೇ ವರ್ಷದ ಶ್ರೀಕೃಷ್ಣ ಲೀಲೋತ್ಸವ ಸೆ.10 ಭಾನುವಾರ ವೀರಮಂಗಲ ಶ್ರೀ ವಿಷ್ಣುಮೂರ್ತಿ ದೇವಸ್ಥಾನದಲ್ಲಿ ನಡೆಯಲಿದೆ. ಶ್ರೀಕೃಷ್ಣ ಲೀಲೋತ್ಸವದ ಅಂಗವಾಗಿ ಬೆಳಿಗ್ಗೆ ಶ್ರೀ ವಿಷ್ಣು ಸಹಸ್ರನಾಮಾರ್ಚನೆ, 9.30 ಕ್ಕೆ ಮುಕ್ವೆ ಮಜಲುಮಾರು ಶ್ರೀ ಉಮಾಮಹೇಶ್ವರ ಭಜನಾ ಮಂಡಳಿ ವತಿಯಿಂದ ಭಜನಾ ಕಾರ್ಯಕ್ರಮ, 10 ಕ್ಕೆ ನಡೆಯುವ ಮನರಂಜನಾ ಕಾರ್ಯಕ್ರಮವನ್ನು ವೀರಮಂಗಲ ಸ.ಹಿ.ಪ್ರಾ.ಶಾಲಾ ಸಹಶಿಕ್ಷಕಿ ಹರಿಣಾಕ್ಷಿ ಎಂ. ಉದ್ಘಾಟಿಸುವರು. 3.30 ಕ್ಕೆ ಗೋಪೂಜೆ, ಮುದ್ದುಕೃಷ್ಣ […]

ಸೆ.10 : ವೀರಮಂಗಲ  ಶ್ರೀಕೃಷ್ಣ ಕಲಾಕೇಂದ್ರದಿಂದ “ಶ್ರೀಕೃಷ್ಣ ಲೀಲೋತ್ಸವ” Read More »

ಕಬಡ್ಡಿ : ಫಿಲೋಮಿನಾ ಪ್ರೌಢಶಾಲೆಯ ದೀಕ್ಷಾ ಎಸ್‍., ವಿಜೇತಾ ಜಿಲ್ಲಾಮಟ್ಟಕ್ಕೆ ಆಯ್ಕೆ

ಪುತ್ತೂರು : ಕರ್ನಾಟಕ ಸರಕಾರ, ಶಾಲಾ ಶಿಕ್ಷಣ ಇಲಾಖೆ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿ ಪುತ್ತೂರು ಹಾಗೂ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ನೆಟ್ಟಣಿಗೆ ಮುಡ್ನೂರು ಆಶ್ರಯದಲ್ಲಿ ನಡೆದ ತಾಲೂಕು ಮಟ್ಟದ ಕಬಡ್ಡಿ ಪಂದ್ಯಾಟದಲ್ಲಿ ಸಂತ ಫಿಲೋಮಿನಾ ಪ್ರೌಢಶಾಲೆಯ ಕು. ದೀಕ್ಷಾ ಎಸ್ ಹಾಗೂ ಕು. ವಿಜೇತ ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ಇವರಿಗೆ ದೈಹಿಕ ಶಿಕ್ಷಣ ಶಿಕ್ಷಕ ನರೇಶ್ ಲೋಬೋ ತರಬೇತಿ ನೀಡಿರುತ್ತಾರೆ. ಅವರರನ್ನ ಕಾಲೇಜು ಆಡಳಿತ ಮಂಡಳಿ, ಪ್ರಾಂಶುಪಾಲರು, ಸಿಬ್ಬಂದಿ ವರ್ಗದವರು ಅಭಿನಂದಿಸಿದ್ದಾರೆ.

ಕಬಡ್ಡಿ : ಫಿಲೋಮಿನಾ ಪ್ರೌಢಶಾಲೆಯ ದೀಕ್ಷಾ ಎಸ್‍., ವಿಜೇತಾ ಜಿಲ್ಲಾಮಟ್ಟಕ್ಕೆ ಆಯ್ಕೆ Read More »

ಶ್ರೀಕೃಷ್ಣನ ಪ್ರತಿಯೊಂದು ನಡೆಗಳಲ್ಲೂ ಸಂದೇಶಗಳಿವೆ : ತೇಜಶಂಕರ ಸೋಮಯಾಜಿ | ಬಪ್ಪಳಿಗೆಯ ಅಂಬಿಕಾ ಮಹಾವಿದ್ಯಾಲಯದಲ್ಲಿ ಶ್ರೀಕೃಷ್ಣ ಜನ್ಮಾಷ್ಟಮಿ ಆಚರಣೆ

ಪುತ್ತೂರು : ಭಗವಾನ್ ಶ್ರೀಕೃಷ್ಣನನ್ನು ನಾನಾ ನೆಲೆಯಿಂದ ಗುರುತಿಸುತ್ತಾ ಸಾಗುವುದಕ್ಕೆ ಸಾಧ್ಯವಿದೆ. ದುಷ್ಟ ಶಿಕ್ಷಣ, ಶಿಷ್ಟ ರಕ್ಷಣದಿಂದ ತೊಡಗಿ ರಾಜತಾಂತ್ರಿಕ ವಿಚಾರಗಳವರೆಗೆ ಅಷ್ಟೂ ವಿಷಯಗಳಲ್ಲಿ ಶ್ರೀಕೃಷ್ಣ ನಮಗೆ ಮಾದರಿಯಾಗಿ ಕಾಣಿಸುತ್ತಾನೆ. ಆತನ ಒಂದೊಂದು ನಡೆಯ ಹಿಂದೆಯೂ ಒಂದೊಂದು ಸಂದೇಶಗಳನ್ನು ಅರ್ಥ ಮಾಡಿಕೊಳ್ಳಬಹುದು. ಆದರೆ ಆತ ಕೃತಿಯ ಮೂಲಕ ತೋರಿಸಿದ್ದನ್ನು ಅರ್ಥ ಮಾಡಿಕೊಳ್ಳುವುದಕ್ಕೆ ಅಸಾಧ್ಯರಾದವರು ಆತನನ್ನು ಹೀಗಳೆಯುವ ಮೂಲಕ ತಮ್ಮ ವ್ಯಕ್ತಿತ್ವವನ್ನು ಅನಾವರಣಗೊಳಿಸುತ್ತಿರುವುದನ್ನು ಕಾಣಬಹುದು ಎಂದು ಅಂಬಿಕಾ ಮಹಾವಿದ್ಯಾಲಯದ ತತ್ತ್ವಶಾಸ್ತ್ರ ವಿಭಾಗದ ಮುಖ್ಯಸ್ಥ ವಿದ್ವಾನ್ ತೇಜಶಂಕರ ಸೋಮಯಾಜಿ ಹೇಳಿದರು.

ಶ್ರೀಕೃಷ್ಣನ ಪ್ರತಿಯೊಂದು ನಡೆಗಳಲ್ಲೂ ಸಂದೇಶಗಳಿವೆ : ತೇಜಶಂಕರ ಸೋಮಯಾಜಿ | ಬಪ್ಪಳಿಗೆಯ ಅಂಬಿಕಾ ಮಹಾವಿದ್ಯಾಲಯದಲ್ಲಿ ಶ್ರೀಕೃಷ್ಣ ಜನ್ಮಾಷ್ಟಮಿ ಆಚರಣೆ Read More »

ಶ್ರೀ ಕೃಷ್ಣ ಜನ್ಮಾಷ್ಟಮಿ : ಇಂದಿನಿಂದ ಸೆ.9 ರ ತನಕ ದ.ಕ.ಜಿಲ್ಲೆಯಾದ್ಯಂತ ವೈನ್‍ಶಾಪ್ / ಬಾರ್ ಬಂದ್

ಮಂಗಳೂರು : ಶ್ರೀ ಕೃಷ್ಣ ಜನ್ಮಾಷ್ಟಮಿ, ಮೊಸರುಕುಡಿಕೆ ಅಂಗವಾಗಿ ದ.ಕ.ಜಿಲ್ಲೆಯಾದ್ಯಂತ ಇಂದಿನಿಂದ ಸೆ.9 ರ ತನಕ ಬಾರ್ ಬಂದ್ ಮಾಡುವಂತೆ ದ.ಕ. ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಆದೇಶ ನೀಡಿದ್ದಾರೆ. ಶ್ರೀ ಕೃಷ್ಣ ಜನ್ಮಾಷ್ಟಮಿ ಸಂದರ್ಭದಲ್ಲಿ  ವಿವಿಧ ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿದ್ದು, ಈ ವೇಳೆ ಸಾವಿರಾರು ಸಾರ್ವಜನಿಕರು, ಮಕ್ಕಳು, ಮಹಿಳೆಯರು, ಭಕ್ತಾದಿಗಳು ಪಾಲ್ಗೊಳ್ಳಲಿದ್ದಾರೆ. ಹಾಗಾಗಿ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಕಾನೂನು ಸುವ್ಯವಸ್ಥೆ ಕಾಪಾಡುವ ದೃಷ್ಟಿಯಿಂದ ಮುಂಜಾಗೃತಾ ಕ್ರಮವಾಗಿ ದ.ಕ. ಜಿಲ್ಲೆಯಾದ್ಯಂತ ಬೆಳಿಗ್ಗೆ 6 ರಿಂದ ಮಧ್ಯರಾತ್ರಿ

ಶ್ರೀ ಕೃಷ್ಣ ಜನ್ಮಾಷ್ಟಮಿ : ಇಂದಿನಿಂದ ಸೆ.9 ರ ತನಕ ದ.ಕ.ಜಿಲ್ಲೆಯಾದ್ಯಂತ ವೈನ್‍ಶಾಪ್ / ಬಾರ್ ಬಂದ್ Read More »

ದ್ವಿಚಕ್ರ ವಾಹನಕ್ಕೆ ಡಿಕ್ಕಿಯಾದ ಗೂಡ್ಸ್ ವಾಹನ | ದ್ವಿಚಕ್ರ ವಾಹನ ಸವಾರನಿಗೆ ಗಾಯ

ಸುಬ್ರಹ್ಮಣ್ಯ: ಸುಬ್ರಹ್ಮಣ್ಯ ಠಾಣಾ ವ್ಯಾಪ್ತಿ ಐವತ್ತೊಕ್ಲು ಬಳಿ ದ್ವಿಚಕ್ರ ವಾಹನಕ್ಕೆ ಗೂಡ್ಸ್ ವಾಹನ  ಡಿಕ್ಕಿಯಾಗಿ ದ್ವಿಚಕ್ರ ವಾಹನ ಸವಾರ ಗಾಯಗೊಂಡ ಘಟನೆ ನಡೆದಿದ. ದ್ವಿಚಕ್ರ ವಾಹನ ಸವಾರ ಆಸ್ತಿಕ್ ಗಾಯಗೊಂಡವರು. ಐವತ್ತೊಕ್ಲು ಗ್ರಾಮದ ನೆಲ್ಲಿಕಟ್ಟೆ ತಿರುವು ರಸ್ತೆ ಬಳಿ ಪಂಜ ಕಡೆಯಿಂದ ಬರುತ್ತಿದ್ದ ಗೂಡ್ಸ್ ವಾಹನ ಸುಬ್ರಹ್ಮಣ್ಯ ಕಡೆಯಿಂದ ಬರುತ್ತಿದ್ದ ದ್ವಿಚಕ್ರ ವಾಹನಕ್ಕೆ ಡಿಕ್ಕಿಯಾಗಿದೆ. ಪರಿಣಾಮ ದ್ವಿಚಕ್ರ ವಾಹನ ಸವಾರ ಆಸ್ತಿಕ್ ರಸ್ತೆಗೆ ಬಿದ್ದು ಗಾಯಗೊಂಡಿದ್ದಾರೆ. ಗಾಯಗೊಂಡ ಆಸ್ತಿಕ್ ರನ್ನು ಪುತ್ತೂರಿನ ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಕುರಿತು

ದ್ವಿಚಕ್ರ ವಾಹನಕ್ಕೆ ಡಿಕ್ಕಿಯಾದ ಗೂಡ್ಸ್ ವಾಹನ | ದ್ವಿಚಕ್ರ ವಾಹನ ಸವಾರನಿಗೆ ಗಾಯ Read More »

ಸುನಾದ ಸಂಗೀತ ಕಲಾ ಶಾಲೆ ಅರ್ಪಿಸುವ ಸುನಾದ ಯುವದನಿ- ವಿಂಶತಿ ಸಂಭ್ರಮ

ಪುತ್ತೂರು: ವಿದ್ವಾನ್‌ ಕಾಂಚನ ಎ ಈಶ್ವರ ಭಟ್‌ ಇವರ ನೇತೃತ್ವದಲ್ಲಿ ನಡೆದುಕೊಂಡು ಬರುತ್ತಿರುವ ಸುನಾದ ಯುವದನಿ ಸರಣಿ ಕಾರ್ಯಕ್ರಮ ತನ್ನ 20ನೇ ವರ್ಷದ “ಸುನಾದ ಯುವದನಿ- ವಿಂಶತಿ ಸಂಭ್ರಮ”ವನ್ನು ಪುತ್ತೂರಿನ ಸುನಾದ ಸಭಾಂಗಣದಲ್ಲಿ ಆಚರಿಸಿಕೊಂಡಿತು. ಸಂಭ್ರಮದ ಅಂಗವಾಗಿ ಕರ್ನಾಟಕ ಶಾಸ್ತ್ರೀಯ ಸಂಗೀತ ಕಛೇರಿಯನ್ನು ವಿದ್ವಾನ್‌ ಶ್ರೀಹರಿ ಭಟ್‌ ಎನ್‌ ಎಚ್‌ ಅವರು ನಡೆಸಿಕೊಟ್ಟರು. ವಯಲಿನ್‌ ನಲ್ಲಿ ವಿದ್ವಾನ್‌ ವೇಣುಗೋಪಾಲ್‌ ಶ್ಯಾನುಭೋಗ್‌, ಮೃದಂಗದಲ್ಲಿ ಡಾ.ಅಕ್ಷಯ ನಾರಾಯಣ ಕಾಂಚನ ಸಹಕರಿಸಿದರು. ಕಛೇರಿಯ ಬಳಿಕ ಸುನಾದದ ಶಿಷ್ಯವೃಂದ ದೃಶ್ಯಕಾವ್ಯ, ಗಾನಕಲಾಕುಂಚ ಹಾಗು

ಸುನಾದ ಸಂಗೀತ ಕಲಾ ಶಾಲೆ ಅರ್ಪಿಸುವ ಸುನಾದ ಯುವದನಿ- ವಿಂಶತಿ ಸಂಭ್ರಮ Read More »

ಈ ಬಾರಿಯೂ ಶಾಲೆಗಳಿಗೆ ದಸರಾ ರಜೆ ಕಡಿತ

ಬೆಂಗಳೂರು: ರಾಜ್ಯ ಸರಕಾರ ರಾಜ್ಯದ ಶಾಲೆಗಳಿಗೆ ಈ ಬಾರಿಯೂ ದಸರಾ ರಜೆಯನ್ನು ಕಡಿತಗೊಳಿಸಿದೆ. ಈ ಹಿನ್ನಲೆಯಲ್ಲಿ ಇದೀಗ ಶಿಕ್ಷಕರಿಂದ ತೀವ್ರ ಆಕ್ಷೇಪ ವ್ಯಕ್ತವಾಗುತ್ತಿದೆ. ಅ.2 ರಿಂದ 29 ರ ವರೆಗೆ ನೀಡಲಾಗುತ್ತಿದ್ದ ದಸರಾ ರಜೆಯನ್ನು  ಕೊರೊನಾ ಹಿನ್ನಲೆಯಲ್ಲಿ ಕಡಿತಗೊಳಿಸಲಾಗಿತ್ತು. ಲಾಕ್ ಡೌನ್ ಸಂದರ್ಭದಲ್ಲಿ ನಡೆಯದ ತರಗತಿಯನ್ನು ಸರಿದೂಗಿಸುವ ನಿಟ್ಟಿನಲ್ಲಿ ಈ ಕ್ರಮ ಕೈಗೊಳ್ಳಲಾಗಿತ್ತು. ಈಗ ಪರಿಸ್ಥಿತಿ ಸಹಜ ಸ್ಥಿತಿಗೆ ಮರಳಿದರೂ ಹಿಂದಿನ ಕಡಿತ ನೀತಿ ಅನುಸರಿಸುತ್ತಿದೆ. ಸಾಮಾನ್ಯ ಶಾಲೆಗಳಿಗೆ ಅ.8 ರಿಂದ 24 ಕ್ಕೆ ಸೀಮಿತಗೊಳಿಸಲಾಗಿದ್ದು, ವಿಶೇಷ

ಈ ಬಾರಿಯೂ ಶಾಲೆಗಳಿಗೆ ದಸರಾ ರಜೆ ಕಡಿತ Read More »

ನೇಣು ಬಿಗಿದ ಸ್ಥಿತಿಯಲ್ಲಿ ವ್ಯಕ್ತಿಯ ಶವ ಪತ್ತೆ

ಪುತ್ತೂರು : ವ್ಯಕ್ತಿಯೋರ್ವರ ಶವ ನೇಣು ಬಿಗಿದ ಸ್ಥಿತಿಯಲ್ಲಿ ಬೆಟ್ಟಂಪಾಡಿ ಗ್ರಾಮದ ಅಂಗರಾಜೆ ಎಂಬಲ್ಲಿ ಮಂಗಳವಾರ ಪತ್ತೆಯಾಗಿದೆ. ಬೆಟ್ಟಂಪಾಡಿ ಗ್ರಾಮದ ಅಂಗರಾಜೆ ಬಾಲ್ಯೊಟ್ಟು ಗುತ್ತು ಸಂಕಯ್ಯ ಆಳ್ವರವರ ಪುತ್ರ ರವೀಂದ್ರನಾಥ ಆಳ್ವ (55) ಈ ಕೃತ್ಯ ಎಸಗಿದವರು. ರವೀಂದ್ರನಾಥ ಅವರು ಮಾನಸಿಕ ಖಿನ್ನತೆಗೆ ಒಳಗಾಗಿದ್ದು, ಪತ್ನಿ ದೀಕ್ಷಾ ಹಾಗೂ ಮಕ್ಕಳಿಬ್ಬರು ಬೆದ್ರಾಳದಲ್ಲಿರುವ ತವರು ಮನೆಯಲ್ಲಿ ವಾಸಿಸುತ್ತಿದ್ದರು. ರವೀಂದ್ರನಾಥ ಆಳ್ವರು ಒಬ್ಬಂಟಿಯಾಗಿ ವಾಸಿಸುತ್ತಿದ್ದರು. ಪಕ್ಕದ ಸಹೋದರನ ಮನೆಯಲ್ಲಿ ಊಟ ಮಾಡುತ್ತಿದ್ದ ಅವರು, ಸೆ.3 ರಂದು ರಾತ್ರಿ ಎಂದಿನಂತೆ ಊಟಕ್ಕೆ

ನೇಣು ಬಿಗಿದ ಸ್ಥಿತಿಯಲ್ಲಿ ವ್ಯಕ್ತಿಯ ಶವ ಪತ್ತೆ Read More »

ಸೆ 6 : ಕಾವು ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿಯಿಂದ ಶ್ರೀ ಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ ಕ್ರೀಡಾಕೂಟ, ಮುದ್ದುಕೃಷ್ಣ ಸ್ಫರ್ಧೆ

ಕಾವು: ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿಯಿಂದ ಶ್ರೀ ಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ ಕ್ರೀಡಾಕೂಟ ಹಾಗೂ ಕಾವು ಗೆಳೆಯರ ಬಳಗದ  ಪ್ರಾಯೋಜಕತ್ವದಲ್ಲಿ ಮುದ್ದು ಕೃಷ್ಣ ಸ್ಫರ್ಧೆ ಕಾವು  ಶ್ರೀ ಪಂಚಲಿಂಗೇಶ್ವರ ದೇವಸ್ಥಾನದ ವಠಾರದಲ್ಲಿ ಸೆ 6  ರಂದು ನಡೆಯಲಿದೆ. ಕ್ರೀಡಾಕೂಟದ ಉದ್ಘಾಟನೆಯನ್ನು ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಗೌರವಾಧ್ಯಕ್ಷ ನನ್ಯ ಅಚ್ಚುತ ಮೂಡೆತ್ತಾಯ ಚಾಲನೆ ನೀಡಲಿದ್ದಾರೆ. ಉದ್ಘಾಟನಾ ಕಾರ್ಯಕ್ರಮದ ಬಳಿಕ ವಿವಿಧ ಅಟೋಟ ಕಾರ್ಯಕ್ರಮ ನಡೆಯಲಿದ್ದು ಪುರುಷರಿಗೆ ಕಬಡ್ಡಿ,ಹಗ್ಗ ಎಳೆಯುವುದು, ಚೆನ್ನಮಣೆ, ನಿಧಾನ ಬೈಕ್ ರೇಸ್, ಸೈಕಲ್ ರೇಸ್,

ಸೆ 6 : ಕಾವು ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿಯಿಂದ ಶ್ರೀ ಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ ಕ್ರೀಡಾಕೂಟ, ಮುದ್ದುಕೃಷ್ಣ ಸ್ಫರ್ಧೆ Read More »

ಮಿತ್ತೂರು ದಾರುಲ್ ಇರ್ಷಾದ್ ನೂತನ ಪ್ರೌಢ ಶಾಲಾ ಕಟ್ಟಡ ಉದ್ಘಾಟನೆ

ಪುತ್ತೂರು : ಅಲ್ಪಸಂಖ್ಯಾತ ಮಕ್ಕಳು ವಿದ್ಯೆ ಕಲಿಯಬಾರದು, ಅವರು ವಿದ್ಯೆಯಿಂದ ವಂಚಿತರಾಗಬೇಕು ಎಂಬ ಏಕೈಕ ಉದ್ದೇಶದಿಂದ ಕಳೆದ ಅವಧಿಯ ಬಿಜೆಪಿ ಸರಕಾರ ಅಲ್ಪಸಂಖ್ಯಾತ ವಿದ್ಯಾರ್ಥಿಗಳಿಗೆ ಇಲಾಖೆಯಿಂದ ನೀಡುತ್ತಿದ್ದ ಸ್ಕಾಲರ್ ಶಿಪ್ ರದ್ದು ಮಾಡಿದ್ದರು ಆ ಮೂಲಕ ವಿದ್ಯೆಯ ಹೆಸರಿನಲ್ಲೂ ಕೋಮುವಾದ ಮಾಡಿದ್ದರು ಎಂದು ರಾಜ್ಯ ವಸತಿ, ಅಲ್ಪಸಂಖ್ಯಾತರ ಕಲ್ಯಾಣ ಮತ್ತು ವಕ್ಫ್ ಸಚಿವ ಝಮೀರ್ ಅಹ್ಮದ್ ಹೇಳಿದರು. ಅವರು ಇಡ್ಕಿದು ಗ್ರಾಮದ ಮಿತ್ತೂರು ದಾರುಲ್ ಇರ್ಷಾದ್ ಸಂಸ್ಥೆಯಲ್ಲಿ ಪ್ರಧಾನಮಂತ್ರಿ ಜನವಿಕಾಶ ಯೋಜನೆಯಡಿ ನಿರ್ಮಿಸಲಾದ ಪ್ರೌಢ ಶಾಲಾ ಕಟ್ಟಡವನ್ನು

ಮಿತ್ತೂರು ದಾರುಲ್ ಇರ್ಷಾದ್ ನೂತನ ಪ್ರೌಢ ಶಾಲಾ ಕಟ್ಟಡ ಉದ್ಘಾಟನೆ Read More »

error: Content is protected !!
Scroll to Top