ಅಗಲಿದ ಸುಧಾಕರ ಶೆಟ್ಟಿಯವರಿಗೆ ಅಂಬಿಕಾದಲ್ಲಿ ನುಡಿನಮನ

ಪುತ್ತೂರು: ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ವ್ಯವಸ್ಥಾಪನ ಸಮಿತಿ ಮಾಜಿ ಅಧ್ಯಕ್ಷ, ಸಾಮಾಜಿಕ ಹಾಗೂ ಧಾರ್ಮಿಕ ಕೆಲಸಗಳಲ್ಲಿ ತನ್ನನ್ನು ತೊಡಗಿಸಿಕೊಂಡಿದ್ದ ಎನ್. ಸುಧಾಕರ ಶೆಟ್ಟಿಯವರ ನಿಧನದಿಂದ ಅಪಾರ ನೋವುಂಟಾಗಿದೆ. ಅಂಬಿಕಾ ವಿದ್ಯಾಲಯ ಪ್ರಾರಂಭವಾಗುವಂದಿನಿಂದ ಅವರ ಸಹಕಾರ ಅವಿಸ್ಮರಣೀಯ. ಅವರ ಆತ್ಮಕ್ಕೆ ಶಾಂತಿ ಸಿಗಲಿ, ಅವರ ಕುಟುಂಬಕ್ಕೆ ದುಃಖವನ್ನು ಸಹಿಸುವ ಶಕ್ತಿ ಸಿಗಲಿ ಎಂದು ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳ ಸಂಚಾಲಕ ಸುಬ್ರಹ್ಮಣ್ಯ ನಟ್ಟೋಜ ತಿಳಿಸಿದ್ದಾರೆ. ಅವರು ಅಗಲಿದ ಎನ್. ಸುಧಾಕರ ಶೆಟ್ಟಿಯವರಿಗೆ ಅಂಬಿಕಾ ವಿದ್ಯಾಲಯ ನೆಲ್ಲಿಕಟ್ಟೆಯಲ್ಲಿ ನುಡಿನಮನ ಸಲ್ಲಿಸಿ […]

ಅಗಲಿದ ಸುಧಾಕರ ಶೆಟ್ಟಿಯವರಿಗೆ ಅಂಬಿಕಾದಲ್ಲಿ ನುಡಿನಮನ Read More »

ಎನ್.‌ಸುಧಾಕರ ಶೆಟ್ಟಿಯವರಿಗೆ ಶ್ರದ್ಧಾಂಜಲಿ ಸಲ್ಲಿಸಿದ ಸಿಪಿಐ(ಎಂ)

ಪುತ್ತೂರು : ಪುತ್ತೂರು ಬ್ಲಾಕ್ ಕಾಂಗ್ರೆಸ್ ಮಾಜಿ ಅದ್ಯಕ್ಷ, ಹಿರಿಯ ಜಾತ್ಯಾತೀತ ಪ್ರಗತಿಪರ ಚಿಂತಕರೂ ಆಗಿದ್ದ ಎನ್. ಸುಧಾಕರ ಶೆಟ್ಟಿ ಅವರ ನಿಧನಕ್ಕೆ ಸಿಪಿಐ(ಎಂ) ಪುತ್ತೂರು ತಾಲೂಕು ಸಮಿತಿ ಸಂತಾಪ ಸೂಚಿಸಿ ಶ್ರದ್ದಾಂಜಲಿ ಅರ್ಪಿಸಿದೆ. ಸಿಪಿಐ(ಎಂ) ಪುತ್ತೂರು ತಾಲೂಕು ಕಾರ್ಯದರ್ಶಿ ಪಿ.ಕೆ. ಸತೀಶನ್ ಮಾತನಾಡಿ, ಸುಧಾಕರ ಶೆಟ್ಟಿ ಅವರು ಕಾಂಗ್ರೆಸ್ ಪಕ್ಷದ ಮುಖಂಡ ಎನ್ನುವುದಕ್ಕಿಂತ ಹೆಚ್ಚು, ಪ್ರಗತಿಪರ ಪ್ರಜಾಪ್ರಭುತ್ವ, ಜಾತ್ಯಾತೀತ ನಾಯಕರಾಗಿದ್ದರು. ಅವರ ಅಗಲಿಕೆ ಜಾತ್ಯಾತೀತ ಶಕ್ತಿಗೆ ಅಪಾರ ನಷ್ಟ ಉಂಟು ಮಾಡಿದೆ ಎಂದು ಹೇಳಿದರು.

ಎನ್.‌ಸುಧಾಕರ ಶೆಟ್ಟಿಯವರಿಗೆ ಶ್ರದ್ಧಾಂಜಲಿ ಸಲ್ಲಿಸಿದ ಸಿಪಿಐ(ಎಂ) Read More »

ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ನವರಾತ್ರಿ ಉತ್ಸವ | ಶ್ರೀ ಶಾರದಾ ಭಜನಾ ಮಂದಿರದಲ್ಲಿ ಪೂರ್ವಭಾವಿ ಸಭೆ

ಪುತ್ತೂರು: ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಬಳಿಯ ಶ್ರೀ ಶಾರದಾ ಭಜನಾ ಮಂದಿರದಲ್ಲಿ ನವರಾತ್ರಿ ಉತ್ಸವದ ಪೂರ್ವಾಭಾವಿ ಸಭೆಯು ಭಜನಾ ಮಂದಿರದ ಅಧ್ಯಕ್ಷ ಸಾಯಿರಾಮ ರಾವ್ ಅಧ್ಯಕ್ಷತೆಯಲ್ಲಿ ನಡೆಯಿತು. ಮಂದಿರದ ಪ್ರಧಾನ ಕಾರ್ಯದರ್ಶಿ ಜಯಂತ್ ಉರ್ಲಾಂಡಿ ಮಾತನಾಡಿ, ಕಳೆದ 88 ವರ್ಷದಿಂದ ಮಂದಿರದಲ್ಲಿ ನವರಾತ್ರಿ ಉತ್ಸವ, ಶಾರದೆ ವಿಗ್ರಹ ಪ್ರತಿಷ್ಠೆ, ಶೋಭಾಯಾತ್ರೆ ನಡೆಯುತ್ತಿದೆ. ಈ ವರ್ಷದಿಂದ ಉತ್ಸವಕ್ಕೆ ಹೊಸ ಸಮಿತಿ ರಚನೆ ಮಾಡುವ ಜತೆಗೆ 10 ದಿನದ ನವರಾತ್ರಿ ಉತ್ಸವದಲ್ಲಿ ಪ್ರತಿದಿನ ಸಾಂಸ್ಕೃತಿಕ ಕಾರ್ಯಕ್ರಮ, ಶೋಭಾಯಾತ್ರೆಯನ್ನು ವಿಜೃಂಭಣೆಯಿಂದ ನಡೆಸಿ

ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ನವರಾತ್ರಿ ಉತ್ಸವ | ಶ್ರೀ ಶಾರದಾ ಭಜನಾ ಮಂದಿರದಲ್ಲಿ ಪೂರ್ವಭಾವಿ ಸಭೆ Read More »

ಮತ್ತೆ ಕಾಣಿಸಿಕೊಂಡ ಬಾವಲಿಗಳಿಂದ ಹರಡುವ ನಿಫಾ ವೈರಸ್!! | ಇಬ್ಬರ ಸಾವಿನ ಬಳಿಕ ಎಚ್ಚರಿಕೆ ಸಂದೇಶ ರವಾನಿಸಿದ ಕೇರಳ ಸರಕಾರ!

ತಿರುವನಂತಪುರಂ: ಹಲವು ಸಾವು ನೋವಿಗೆ ಕಾರಣವಾಗಿದ್ದ ನಿಫಾ ವೈರಸ್ ಕೇರಳದಲ್ಲಿ ಮತ್ತೆ ಕಾಣಿಸಿಕೊಂಡಿದೆ. ಈ ಹಿನ್ನೆಲೆಯಲ್ಲಿ ಸರಕಾರ ಮುನ್ನೆಚ್ಚರಿಕೆ ಕ್ರಮ ಕೈಗೊಂಡಿದೆ. ಕೇರಳದಲ್ಲಿ ಇಬ್ಬರ ಅಸಹಜ ಸಾವು ಸಂಭವಿಸಿದ್ದು, ಮೃತರ ಸಂಬಂಧಿಕರಿಗೆ ಐಸಿಯುನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಜ್ವರದಿಂದ ಬಳಲುತ್ತಿದ್ದ ಕಾರಣ ಕೋಝಿಕ್ಕೋಡ್ ನ ಖಾಸಗಿ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದ ಇಬ್ಬರು ಸಾವನ್ನಪ್ಪಿದ್ದು, ಸಾವಿಗೆ ನಿಫಾ ವೈರಸ್‌ ಕಾರಣವಿರಬಹುದು ಎಂದು ಶಂಕಿಸಲಾಗಿದೆ. ಚಿಕಿತ್ಸೆ ಪಡೆಯುತ್ತಿರುವ ರೋಗಿಯ ವೈದ್ಯಕೀಯ ಪರೀಕ್ಷೆಯ ಫಲಿತಾಂಶ ಇನ್ನಷ್ಟೇ ಬರಬೇಕಿದೆ. ಇಬ್ಬರ ಅಸಹಜ ಸಾವು

ಮತ್ತೆ ಕಾಣಿಸಿಕೊಂಡ ಬಾವಲಿಗಳಿಂದ ಹರಡುವ ನಿಫಾ ವೈರಸ್!! | ಇಬ್ಬರ ಸಾವಿನ ಬಳಿಕ ಎಚ್ಚರಿಕೆ ಸಂದೇಶ ರವಾನಿಸಿದ ಕೇರಳ ಸರಕಾರ! Read More »

ಎಂಡೋ ಸಂತ್ರೆಸ್ತೆಯ ಅತ್ಯಾಚಾರ ಪ್ರಕರಣ | ರಾಜೇಶ್ ರೈ ಅಪರಾಧ ಸಾಬೀತು ಪಡಿಸಿದ ನ್ಯಾಯಾಲಯ | ಅಪರಾಧಿಗೆ ಕಠಿಣ ಶಿಕ್ಷೆ, ಸಂತ್ರಸ್ತೆಗೆ ಪರಿಹಾರ

ವಿಟ್ಲ: ಇಲ್ಲಿನ ಎಂಡೋ ಪೀಡಿತೆ ಸಂತ್ರೆಸ್ತೆಯೋರ್ವರ ಮೇಲೆ ಅತ್ಯಾಚಾರ ಎಸಗಿದ ಪ್ರಕರಣವನ್ನು ವಿಚಾರಣೆ ನಡೆಸಿದ ನ್ಯಾಯಾಲಯ, ಅಪರಾಧ ಸಾಬೀತು ಪಡಿಸಿ 10 ವರ್ಷಗಳ ಕಠಿಣ ಶಿಕ್ಷೆ ವಿಧಿಸಿ ತೀರ್ಪು ನೀಡಿದೆ. ಮಂಗಳೂರಿನ 2ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ಹಾಗೂ ವಿಶೇಷ ನ್ಯಾಯಾಲಯದ ನ್ಯಾಯಾಧೀಶೆ ಪ್ರೀತಿ ಕೆ.ಪಿ. ತೀರ್ಪು ಪ್ರಕಟಿಸಿದ್ದಾರೆ. ಬಂಟ್ವಾಳ ತಾಲೂಕಿನ ಪೆರುವಾಯಿ ಗ್ರಾಮದ ರಾಜೇಶ್ ರೈ (33 ವ.)ನನ್ನು ನ್ಯಾಯಾಲಯ ಅಪರಾಧಿ ಎಂದು ಘೋಷಿಸಿದೆ. 2015ರ ಅ. 1ರಂದು ಘಟನೆ ನಡೆದಿದ್ದು, ಎಂಡೋ ಸಲ್ಫಾನ್

ಎಂಡೋ ಸಂತ್ರೆಸ್ತೆಯ ಅತ್ಯಾಚಾರ ಪ್ರಕರಣ | ರಾಜೇಶ್ ರೈ ಅಪರಾಧ ಸಾಬೀತು ಪಡಿಸಿದ ನ್ಯಾಯಾಲಯ | ಅಪರಾಧಿಗೆ ಕಠಿಣ ಶಿಕ್ಷೆ, ಸಂತ್ರಸ್ತೆಗೆ ಪರಿಹಾರ Read More »

ಡಿಸಿ, ಸಿಇಒಗಳ ಜೊತೆ ಮಹತ್ವದ ಸಭೆ ಕರೆದ ಸಿಎಂ | ಮಳೆ ಕೊರತೆ, ಬರ, ಗ್ಯಾರೆಂಟಿ ಯೋಜನೆಗಳ ಬಗ್ಗೆ ಚರ್ಚೆ ಸಾಧ್ಯತೆ | ಪೊಲೀಸ್ ಅಧಿಕಾರಿಗಳಿಗೂ ಸಭೆಯಲ್ಲಿ ಭಾಗವಹಿಸಲು ಸೂಚನೆ

ಬೆಂಗಳೂರು: ಮಳೆ ಕೊರತೆಯಿಂದ ಎದುರಾಗಿರುವ ಬರ ಹಾಗೂ ಇನ್ನೂ ಕೆಲವು ಮಹತ್ವದ ವಿಚಾರಗಳನ್ನು ಚರ್ಚಿಸಲು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಎಲ್ಲಾ ಜಿಲ್ಲಾಧಿಕಾರಿಗಳು, ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು, ಜಿಲ್ಲಾ ಸಚಿವರು, ಮುಖ್ಯ ಕಾರ್ಯದರ್ಶಿಗಳು, ಹೆಚ್ಚುವರಿ ಮುಖ್ಯ ಕಾರ್ಯದರ್ಶಿಗಳು ಮತ್ತು ಪ್ರಧಾನ ಕಾರ್ಯದರ್ಶಿಗಳ ಸಭೆ ಕರೆದಿದ್ದಾರೆ. ‘ನಾವು ಬರ ಮತ್ತು ಇತರ ಪ್ರಮುಖ ಅಭಿವೃದ್ಧಿ ವಿಷಯಗಳ ಬಗ್ಗೆ ಚರ್ಚಿಸುತ್ತೇವೆ’ ಎಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಹೇಳಿದ್ದಾರೆ. ಐಟಿ/ಬಿಟಿ ಸಚಿವ ಪ್ರಿಯಾಂಕ್ ಖರ್ಗೆ ಕೂಡ ಇದು ಮಹತ್ವದ ಸಭೆ ಎಂದು ಸ್ಪಷ್ಟಪಡಿಸಿದ್ದಾರೆ.

ಡಿಸಿ, ಸಿಇಒಗಳ ಜೊತೆ ಮಹತ್ವದ ಸಭೆ ಕರೆದ ಸಿಎಂ | ಮಳೆ ಕೊರತೆ, ಬರ, ಗ್ಯಾರೆಂಟಿ ಯೋಜನೆಗಳ ಬಗ್ಗೆ ಚರ್ಚೆ ಸಾಧ್ಯತೆ | ಪೊಲೀಸ್ ಅಧಿಕಾರಿಗಳಿಗೂ ಸಭೆಯಲ್ಲಿ ಭಾಗವಹಿಸಲು ಸೂಚನೆ Read More »

ಪುತ್ತೂರು ಶ್ರೀ ಶಾರದಾ ಭಜನಾ ಮಂದಿರದಲ್ಲಿ ನವರಾತ್ರಿ ಉತ್ಸವ | ಅಧ್ಯಕ್ಷರಾಗಿ ರಾಜೇಶ್ ಬನ್ನೂರು ಆಯ್ಕೆ

ಪುತ್ತೂರು: ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಬಳಿಯ ಶ್ರೀ ಶಾರದಾ ಭಜನಾ ಮಂದಿರದಲ್ಲಿ ನಡೆಯುವ ನವರಾತ್ರಿ ಉತ್ಸವದ ಹಿನ್ನೆಲೆಯಲ್ಲಿ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಗಿದ್ದು, ಉತ್ಸವ ಸಮಿತಿ ಅಧ್ಯಕ್ಷರಾಗಿ ರಾಜೇಶ್ ಬನ್ನೂರು ಅವರನ್ನು ಆಯ್ಕೆ ಮಾಡಲಾಯಿತು. ಭಜನಾ ಮಂದಿರದ ಅಧ್ಯಕ್ಷ ಸಾಯಿರಾಮ ರಾವ್ ಅವರ ಅಧ್ಯಕ್ಷತೆಯಲ್ಲಿ ನಡೆದ ಪೂರ್ವಭಾವಿ ಸಭೆಯಲ್ಲಿ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆ ನಡೆಯಿತು. ಉಪಾಧ್ಯಕ್ಷರಾಗಿ ದಯಾನಂದ ಆದರ್ಶ, ನಯನಾ ರೈ ನೆಲ್ಲಿಕಟ್ಟೆ, ಕಾರ್ಯದರ್ಶಿಯಾಗಿ ಅಜಿತ್ ರೈ ಹೊಸಮನೆ, ಜತೆ ಕಾರ್ಯದರ್ಶಿಯಾಗಿ ಎಂ. ಗೋಪಾಲಕೃಷ್ಣ ಈಶ, ಹರಿಪ್ರಸಾದ್ ಶೆಟ್ಟಿ

ಪುತ್ತೂರು ಶ್ರೀ ಶಾರದಾ ಭಜನಾ ಮಂದಿರದಲ್ಲಿ ನವರಾತ್ರಿ ಉತ್ಸವ | ಅಧ್ಯಕ್ಷರಾಗಿ ರಾಜೇಶ್ ಬನ್ನೂರು ಆಯ್ಕೆ Read More »

ವಿದ್ಯಾರ್ಥಿಗಳ ಮೂಲಕ ಯಕ್ಷಗಾನ ಕಲೆ ಬೆಳೆಸುವುದು ಇಂದಿನ ಅಗತ್ಯ | ಮಾಣಿಲದಲ್ಲಿ ಯಕ್ಷ ಶಿಕ್ಷಣ, ನಾಟ್ಯ ತರಬೇತಿ ಶಿಕ್ಷಣ ಉದ್ಘಾಟಿಸಿ ರಮೇಶ್ ಮಂಜೇಶ್ವರ

ಮಾಣಿಲ: ಯಕ್ಷಗಾನ ಕಲೆಯ ಅಭಿಮಾನವನ್ನು ವಿದ್ಯಾರ್ಥಿಗಳಲ್ಲಿ  ಬೆಳೆಸುವುದು ಇಂದಿನ ಅಗತ್ಯ ಎಂದು ಯಕ್ಷಧ್ರುವ ಪಟ್ಲ ಫೌಂಡೇಶನ್ ನ ಮಹಾ ಪೋಷಕ, ಯಕ್ಷಾಭಿಮಾನಿ ರಮೇಶ್ ಮಂಜೇಶ್ವರ ಹೇಳಿದರು. ಮಾಣಿಲ ಸರಕಾರಿ ಪ್ರೌಢಶಾಲೆಯಲ್ಲಿ ನಡೆದ ಯಕ್ಷಧ್ರುವ ಪಟ್ಲ ಫೌಂಡೇಶನ್ ಪ್ರಾಯೋಜಿತ ಉಚಿತ ಯಕ್ಷಧ್ರುವ – ಯಕ್ಷ ಶಿಕ್ಷಣ, ನಾಟ್ಯ ತರಬೇತಿ ಶಿಕ್ಷಣ ಕಾರ್ಯಕ್ರಮದ ಉದ್ಘಾಟನಾ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಅವರು ಮಾತನಾಡಿದರು. ಯಕ್ಷನಾಟ್ಯ ತರಗತಿಯನ್ನು ಫೌಂಡೇಶನ್ ವಿಟ್ಲ ಘಟಕದ ಗೌರವಾಧ್ಯಕ್ಷ, ವಿಟ್ಲ ಅರಮನೆಯ ಕೃಷ್ಣಯ್ಯ ತರಗತಿ ಉದ್ಘಾಟಿಸಿ ಶುಭ ಹಾರೈಸಿದರು.

ವಿದ್ಯಾರ್ಥಿಗಳ ಮೂಲಕ ಯಕ್ಷಗಾನ ಕಲೆ ಬೆಳೆಸುವುದು ಇಂದಿನ ಅಗತ್ಯ | ಮಾಣಿಲದಲ್ಲಿ ಯಕ್ಷ ಶಿಕ್ಷಣ, ನಾಟ್ಯ ತರಬೇತಿ ಶಿಕ್ಷಣ ಉದ್ಘಾಟಿಸಿ ರಮೇಶ್ ಮಂಜೇಶ್ವರ Read More »

ಹಿಂದೂಗಳು ಒಗ್ಗಟ್ಟಾಗಿ ಧರ್ಮವನ್ನು ಉಳಿಸುವ ಕೆಲಸ ಮಾಡಬೇಕು | ಬಪ್ಪಳಿಗೆ ಸಿಂಗಾಣಿಯಲ್ಲಿ ಶ್ರೀಕೃಷ್ಣ ವೇಷಧಾರಿ ಮಕ್ಕಳ ಶೋಭಾಯಾತ್ರೆಯಲ್ಲಿ ಕಿಶೋರ್ ಕುಮಾರ್ ಬೊಟ್ಯಾಡಿ

ಪುತ್ತೂರು: ಸಿಂಗಾಣಿ ಸಾರ್ವಜನಿಕ ಶ್ರೀಕೃಷ್ಣ ಜನ್ಮಾಷ್ಠಮಿ ಹಾಗೂ ಬಪ್ಪಳಿಗೆ ಎಂಸಿಬಿ ಸ್ಪೋರ್ಟ್ಸ್ ಆ್ಯಂಡ್ ಆರ್ಟ್ಸ್ ಕ್ಲಬ್ ಆಶ್ರಯದಲ್ಲಿ ಶ್ರೀಕೃಷ್ಣ ಜನ್ಮಾಷ್ಠಮಿ ಆಚರಣೆ ಮತ್ತು ಕೃಷ್ಣ ವೇಷಧಾರಿಗಳ ಶೋಭಾಯಾತ್ರೆ ಬಪ್ಪಳಿಗೆ ಸಿಂಗಾಣಿಯಲ್ಲಿ ನಡೆಯಿತು. ಕೃಷ್ಣ ವೇಷಧಾರಿ ಮಕ್ಕಳ ಭವ್ಯ ಶೋಭಾಯತ್ರೆಗೆ ಬಲ್ನಾಡು ಶ್ರೀ ದಂಡನಾಯಕ ಉಳ್ಳಾಲ್ತಿ ದೈವಸ್ಥಾನದ ಪ್ರಧಾನ ಅರ್ಚಕ ರವಿಚಂದ್ರ ನೆಲ್ಲಿತ್ತಾಯ ಚಾಲನೆ ನೀಡಿದರು. ಬಳಿಕ ರಾಗಿಕುಮೇರಿ ಶಾಲಾ ಬಳಿಯಿಂದ ಸಿಂಗಾಣಿವರೆಗೂ ಚೆಂಡೆ, ವಾದ್ಯ, ಬ್ಯಾಂಡ್ ಸೆಟ್ ಗಳೊಂದಿಗೆ ಭವ್ಯ ಮೆರವಣಿಗೆ ನಡೆಯಿತು. ಬಳಿಕ ಸಿಂಗಾಣಿಯ ಹಿಲ್

ಹಿಂದೂಗಳು ಒಗ್ಗಟ್ಟಾಗಿ ಧರ್ಮವನ್ನು ಉಳಿಸುವ ಕೆಲಸ ಮಾಡಬೇಕು | ಬಪ್ಪಳಿಗೆ ಸಿಂಗಾಣಿಯಲ್ಲಿ ಶ್ರೀಕೃಷ್ಣ ವೇಷಧಾರಿ ಮಕ್ಕಳ ಶೋಭಾಯಾತ್ರೆಯಲ್ಲಿ ಕಿಶೋರ್ ಕುಮಾರ್ ಬೊಟ್ಯಾಡಿ Read More »

ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಜನಮಂಗಲ ಕಾರ್ಯಕ್ರಮದಡಿ ವ್ಹೀಲ್ ಚೇರ್, ವಾಟರ್ ಬೆಡ್ ವಿತರಣೆ

ಪುತ್ತೂರು: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃಧ್ಧಿ ಯೋಜನೆಯ ಜನಮಂಗಲ ಕಾರ್ಯಕ್ರಮದಡಿ ನಡೆಯಲು ಅಸಾಧ್ಯವಾಗಿರುವ ವಾಸು ಸಫಲ್ಯ, ಪೂವಕ್ಕ, ಇಬ್ರಾಹಿಂ ಅವರಿಗೆ ವೀಲ್ ಚೇರ್ ಹಾಗೂ ಮೋನಪ್ಪ ಗೌಡರಿಗೆ ವಾಟರ್ ಬೆಡ್ ವಿತರಣೆ ಮಾಡಲಾಯಿತು. ಈ ಸಂದರ್ಭದಲ್ಲಿ ವಲಯಾಧ್ಯಕ್ಷ ಮಾಧವ‌ ರೈ ಕುಂಬ್ರ, ವಲಯ ಮೇಲ್ವಿಚಾರಕಿ ಮೋಹಿನಿ ಎಸ್ ಗೌಡ, ಒಕ್ಕೂಟ ಅಧ್ಯಕ್ಷ ಸಂದೀಪ್ ಅರ್ಯಾಪು, ಸೇವಾಪ್ರತಿನಿಧಿ ನಳಿನಾಕ್ಷಿ, ಒಕ್ಕೂಟದ ಪದಾಧಿಕಾರಿಗಳಾದ  ರವಿಕಲ, ಚಂದ್ರ  ಯಸ್. ಮೋಹನ್. ಶೀನಪ್ಪ ಭಾಗವಹಿಸಿದ್ದರು.

ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಜನಮಂಗಲ ಕಾರ್ಯಕ್ರಮದಡಿ ವ್ಹೀಲ್ ಚೇರ್, ವಾಟರ್ ಬೆಡ್ ವಿತರಣೆ Read More »

error: Content is protected !!
Scroll to Top