ಪುತ್ತೂರು : ಕ್ಲಿನಿಕ್‌ನಲ್ಲಿ ದಾಂಧಲೆ ಎಸಗಿದ ಆರೋಪಿ ಬಂಧನ

ಟೋಕನ್‌ ವಿಚಾರದಲ್ಲಿ ಜಗಳವಾಡಿ ಸಿಬ್ಬಂದಿ ಮೇಲೆ ಹಲ್ಲೆ ಮಾಡಿದ್ದ ಆರೋಪಿ ಪುತ್ತೂರು : ನಗರದ ದರ್ಬೆಯ ಇಎನ್‌ಟಿ ಕ್ಲಿನಿಕ್‌ನಲ್ಲಿ ಶನಿವಾರ ದಾಂಧಲೆ ಎಸಗಿ ಸಿಬ್ಬಂದಿ ಮೇಲೆ ಹಲ್ಲೆ ಮಾಡಿದ ಅಋೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ನಿನ್ನೆ ಬೆಳ್ಳಂಬೆಳಗ್ಗೆ ದರ್ಬೆಯಲ್ಲಿರುವ ಕ್ಲಿನಿಕ್‌ನಲ್ಲಿ ಈ ಘಟನೆ ನಡೆದಿತ್ತು. ಘಟನೆಗೆ ಸಂಬಂಧಿಸಿ ಪುತ್ತೂರು ತಾಲೂಕಿನ ಬಪ್ಪಳಿಗೆ ನಿವಾಸಿ ಇಬ್ರಾಹಿಂ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ. ಕ್ಲಿನಿಕ್ ಸಿಬ್ಬಂದಿ ಶ್ರೀಕಾಂತ್ ಹಲ್ಲೆಗೊಳಗಾದವರು ಶನಿವಾರ ಬೆಳಗ್ಗೆ 6.30ರ ವೇಳೆ ಬಂದ ಇಬ್ರಾಹೀಂ ತಮ್ಮ ಪರಿಚಯಸ್ಥರಿಗೆ ಆದ್ಯತೆ ನೀಡುವಂತೆ […]

ಪುತ್ತೂರು : ಕ್ಲಿನಿಕ್‌ನಲ್ಲಿ ದಾಂಧಲೆ ಎಸಗಿದ ಆರೋಪಿ ಬಂಧನ Read More »

KSRTC ಯಲ್ಲಿನ ವೃತ್ತಿಯಿಂದ ನಿವೃತ್ತರಾಗಲಿರುವ ಸುರೇಶ್ ATI

ಪುತ್ತೂರು: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯಲ್ಲಿ 36 ವರ್ಷಗಳ ಕಾಲ ಸೇವೆ ಸಲ್ಲಿಸಿರುವ ಸುರೇಶ್ ATI ಅವರು ನವೆಂಬರ್ 30 ರಂದು ಸೇವಾ ನಿವೃತ್ತಿಯನ್ನು ಹೊಂದುತ್ತಿದ್ದಾರೆ. 1989 ರಲ್ಲಿ ಮಂಗಳೂರು ವಿಭಾಗದಲ್ಲಿ ನಿರ್ವಾಹಕರಾಗಿ ಕಾರ್ಯ ಆರಂಭಿಸಿದ ಅವರು ಆ ಬಳಿಕ ತಮ್ಮ ಉತ್ತಮ ಸೇವೆಯ ಫಲವಾಗಿ ಸಹಾಯಕ ಸಂಚಾರ ನಿಯಂತ್ರಕರಾಗಿ ಮುಂಭಡ್ತಿ ಹೊಂದಿದ್ದರು. ಅವರ ಸೇವಾ ನಿವೃತ್ತಿಗೆ ‌ಶುಭ ಕೋರಿ ಪುತ್ತೂರು ಘಟಕದ ಎಲ್ಲಾ ಚಾಲಕರ ಪರವಾಗಿ ಪುತ್ತೂರು ಘಟಕದ ಚಾಲಕ ಬೋಧಕ ಪಿ. ವಿ.

KSRTC ಯಲ್ಲಿನ ವೃತ್ತಿಯಿಂದ ನಿವೃತ್ತರಾಗಲಿರುವ ಸುರೇಶ್ ATI Read More »

ನೇಣಿಗೆ ‌ಶರಣಾದ ರಿಕ್ಷಾ ಚಾಲಕ

ಪುತ್ತೂರು: ಬನ್ನೂರು ನಿವಾಸಿ ರಿಕ್ಷಾ ಚಾಲಕರೊಬ್ಬರು ‌ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ. ಮೃತರನ್ನು ‌ಮೋಹನ್ (57) ಎಂದು ಗುರುತಿಸಲಾಗಿದೆ. ಮನೆಯ ಮುಂದೆ ಅಳವಡಿಸಲಾಗಿದ್ದ ಶೀಟ್‌ನ ಅಡ್ಡಪಟ್ಟಿಗೆ ‌ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿರುವುದಾಗಿದೆ.

ನೇಣಿಗೆ ‌ಶರಣಾದ ರಿಕ್ಷಾ ಚಾಲಕ Read More »

ಲಕ್ಷ್ಯ ಡೇ ಕೇರ್ ಸೆಂಟರ್’, ‘ಲಕ್ಷ್ಯ ಕೌನ್ಸಲಿಂಗ್ ಸೆಂಟರ್’ಗೆ ರಮೇಶ್ ಅರವಿಂದ್, ಯೋಗರಾಜ ಭಟ್ ಶುಭಹಾರೈಕೆ

ಪುತ್ತೂರು: ಮಕ್ಕಳ ಹಿತಕ್ಕಾಗಿ ದಕ್ಷಿಣ ಕನ್ನಡ ಜಿಲ್ಲೆಯಲ್ಲೇ ಪ್ರಪ್ರಥಮ ಬಾರಿಗೆ ಪುತ್ತೂರಿನಲ್ಲಿ ಅನಾವರಣಗೊಳ್ಳಲಿರುವ ‘ಲಕ್ಷ್ಯ ಡೇ ಕೇರ್ ಸೆಂಟರ್’ ಹಾಗೂ ‘ಲಕ್ಷ್ಯ ಕೌನ್ಸಲಿಂಗ್ ಸೆಂಟರ್’ಗೆ ಖ್ಯಾತ ಚಲನಚಿತ್ರ ನಟ ರಮೇಶ್ ಅರವಿಂದ್ ಹಾಗೂ ಸಾಹಿತಿ ಯೋಗರಾಜ್ ಭಟ್ ಅವರು ಶುಭ ಹಾರೈಸಿದ್ದಾರೆ. ಬೊಳ್ವಾರು ಬೈಪಾಸ್ ರಸ್ತೆಯ ಪ್ರಾರಂಭದಲ್ಲಿ ಪ್ರಾರ್ಥನಾ ಗಾರ್ಡನ್ಸ್ ಹೋಟೆಲ್ ಮುಂಭಾಗದಲ್ಲಿರುವ ರವಿಂದ ಕಾಂಪ್ಲೆಕ್ಸ್ ನಲ್ಲಿರುವ ಲಕ್ಷ್ಯ ಡೇ ಕೇರ್ ಸಂಸ್ಥೆಯು ಇದೇ ಜನವರಿಯಲ್ಲಿ ಅನಾವರಣಗೊಳ್ಳುತ್ತಿದ್ದು, ಒಂದು ವರ್ಷದಿಂದ ನಾಲ್ಕು ವರ್ಷದ ಮಕ್ಕಳಿಗಾಗಿ ಶಿಶು ಶಿಕ್ಷಣ

ಲಕ್ಷ್ಯ ಡೇ ಕೇರ್ ಸೆಂಟರ್’, ‘ಲಕ್ಷ್ಯ ಕೌನ್ಸಲಿಂಗ್ ಸೆಂಟರ್’ಗೆ ರಮೇಶ್ ಅರವಿಂದ್, ಯೋಗರಾಜ ಭಟ್ ಶುಭಹಾರೈಕೆ Read More »

ಗಡಪಿಲದಲ್ಲಿ ಅಕ್ರಮ ಗೋಸಾಗಾಟ: ರಸ್ತೆ ಬದಿಯಲ್ಲೇ ಗೋವುಗಳನ್ನು ಬಿಟ್ಟು ಪರಾರಿ

ಪುತ್ತೂರು: ಸರ್ವೆಯ ಗಡಪಿಲ ಎಂಬಲ್ಲಿ ಇಂದು ಮುಂಜಾನೆ ಅಕ್ರಮ ಗೋ ಸಾಗಾಟದ ವಾಸನೆ ಮೂಗಿಗೆ ಬಡಿದಿದ್ದು, ರಸ್ತೆ ಬದಿಯಲ್ಲಿ ಗೋಕಳ್ಳರು ಗೋವುಗಳನ್ನು ಬಿಟ್ಟು ಪರಾರಿಯಾಗಿದ್ದಾರೆ‌ ಎನ್ನಲಾಗಿದೆ. ರಸ್ತೆ ಬದಿ 5 ಗೋವುಗಳು ಕಂಡು ಬಂದಿವೆ. ತಕ್ಷಣವೇ ಹಿಂದೂ ಸಂಘಟನೆಗಳು ಎಚ್ಚೆತ್ತುಕೊಂಡು, ರಸ್ತೆ ಬದಿಯಲ್ಲಿ ಬಿಡಲಾಗಿದ್ದ ಗೋವುಗಳನ್ನು ಪುತ್ತೂರು ನಗರ ಪೊಲೀಸು ಠಾಣೆಗೆ ಸಾಗಿಸಿ ರಕ್ಷಿಸಿದ್ದಾರೆ. ಈ ಗೋವುಗಳಿಗೆ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಗೋಶಾಲೆಯಿಂದ ಬೈಹುಲ್ಲಿನ ‌ವ್ಯವಸ್ಥೆ ಮಾಡಲಾಗಿದೆ. ಗೋವುಗಳನ್ನು ಅಕ್ರಮವಾಗಿ ಸಾಗಿಸುತ್ತಿದ್ದ ವಾಹನ ಕೆಟ್ಟು ನಿಂತ ಪರಿಣಾಮ

ಗಡಪಿಲದಲ್ಲಿ ಅಕ್ರಮ ಗೋಸಾಗಾಟ: ರಸ್ತೆ ಬದಿಯಲ್ಲೇ ಗೋವುಗಳನ್ನು ಬಿಟ್ಟು ಪರಾರಿ Read More »

ಅಪ್ರಾಪ್ತ ಹುಡುಗನಿಗೆ ಕೋಲಿನಿಂದ ಹೊಡೆದ ವ್ಯಕ್ತಿಯ ವಿರುದ್ಧ ದೂರು

ಸುಬ್ರಹ್ಮಣ್ಯ: ವ್ಯಕ್ತಿಯೋರ್ವ ಅಪ್ರಾಪ್ತ ಹುಡುಗನಿಗೆ ಗದರಿಸಿ, ಕೋಲಿನಿಂದ ಹೊಡೆದಿದ್ದು, ಈ ಘಟನೆ ಬಾಲಕನ ತಾಯಿಯ ಗಮನಕ್ಕೆ ಬಂದ ಕೂಡಲೇ ಸುಬ್ರಹ್ಮಣ್ಯ ಪೊಲೀಸ್ ಠಾಣೆಯಲ್ಲಿ ‌ದೂರು ದಾಖಲಿಸಿದ್ದಾರೆ. ಸಂತ್ರಸ್ತ ಬಾಲಕ ಸ್ಥಳೀಯ ಶಾಲೆಯಲ್ಲಿ ಓದುತ್ತಿದ್ದು, ಆರೋಪಿ ಚೇತನ್ ಎಂಬಾತ ಹುಡುಗನಿಗೆ ಕೋಲು ಹಿಡಿದು ಹೊಡೆಯುತ್ತಿರುವ ವಿಡಿಯೋ ಮೊಬೈಲಿನಲ್ಲಿ ವೈರಲ್ ಆಗಿದೆ. ಈ ಹಿನ್ನೆಲೆ ಬಾಲಕನ ತಾಯಿ ಪೊಲೀಸರಿಗೆ ದೂರು ನೀಡಿರುವುದಾಗಿದೆ.

ಅಪ್ರಾಪ್ತ ಹುಡುಗನಿಗೆ ಕೋಲಿನಿಂದ ಹೊಡೆದ ವ್ಯಕ್ತಿಯ ವಿರುದ್ಧ ದೂರು Read More »

ತಾಯಿಯನ್ನು ತಳ್ಳಿ ಚಪ್ಪಲಿಯಿಂದ ಹಲ್ಲೆ ಮಾಡಿದ ಮಗಳು : ವಿಡಿಯೋ ವೈರಲ್‌

ದೂರು ನೀಡಲು ಬಂದ ತಾಯಿಯ ಮೇಲೆ ಪಂಚಾಯತ್‌ ಕಚೇರಿಯಲ್ಲೇ ದೌರ್ಜನ್ಯ ಮಂಗಳೂರು : ಮಂಗಳೂರು ನಗರದ ಕಾವೂರು ಪೊಲೀಸ್ ಠಾಣಾ ವ್ಯಾಪ್ತಿಯ ಮೂಡುಶೆಡ್ಡೆ ಗ್ರಾಮ ಪಂಚಾಯತ್ ಆವರಣದಲ್ಲಿ ಮಗಳೇ ತನ್ನ ತಾಯಿಗೆ ಮನಬಂದಂತೆ ಥಳಿಸಿ, ಚಪ್ಪಲಿಯಿಂದ ಹೊಡೆದ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಸಾರ್ವಜನಿಕ ವಲಯದಲ್ಲಿ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ.ಮೂಡುಶೆಡ್ಡೆಯ ಶಿವನಗರದಲ್ಲಿ ವಾಸಿಸುವ ತಾಯಿ ಮತ್ತು ಮಗಳ ನಡುವೆ ಆಗಾಗ್ಗೆ ಜಗಳ ನಡೆಯುತ್ತಿತ್ತು ಎನ್ನಲಾಗಿದೆ. ಈ ಹಿಂದೆ, ತಾಯಿ ಈ ವಿವಾದಗಳ ಕುರಿತು ಕಾವೂರು ಪೊಲೀಸ್

ತಾಯಿಯನ್ನು ತಳ್ಳಿ ಚಪ್ಪಲಿಯಿಂದ ಹಲ್ಲೆ ಮಾಡಿದ ಮಗಳು : ವಿಡಿಯೋ ವೈರಲ್‌ Read More »

ಬ್ರೇಕ್‌ಫಾಸ್ಟ್‌ ಮೀಟಿಂಗ್‌ ಬಳಿಕ ಒಗ್ಗಟ್ಟಿನ ರಾಗ : ಭಿನ್ನಮತ ಇಲ್ಲ ಎಂದು ಸಾರಿದ ಸಿದ್ದರಾಮಯ್ಯ-ಡಿಕೆಶಿ

ಎರಡೂವರೆ ವರ್ಷದ ಅಧಿಕಾರ ಕಚ್ಚಾಟಕ್ಕೆ ಸದ್ಯ ತೆರೆ ಬೆಂಗಳೂರು: ರಾಜ್ಯದಲ್ಲಿ ಕಳೆದ ಎರಡೂವರೆ ವರ್ಷದಿಂದ ನಡೆಯುತ್ತಿದ್ದ ಸಿದ್ದರಾಮಯ್ಯ ಮತ್ತು ಡಿ.ಕೆ.ಶಿವಕುಮಾರ್‌ ನಡುವಿನ ಅಧಿಕಾರ ಕಚ್ಚಾಟಕ್ಕೆ ಸದ್ಯ ತೆರೆ ಬಿದ್ದಂತೆ ಕಾಣುತ್ತದೆ. ಇಂದು ಸಿದ್ದರಾಮಯ್ಯ ನಿವಾಸದಲ್ಲಿ ನಡೆದ ಬ್ರೇಕ್‌ಫಾಸ್ಟ್‌ ಮೀಟಿಂಗ್‌ ಬಳಿಕ ಇಬ್ಬರೂ ಒಗ್ಗಟ್ಟಿನ ರಾಗ ಹಾಡಿದ್ದಾರೆ. ನಾವಿಬ್ಬರು ಒಂದಾಗಿದ್ದೇವೆ, ಹೈಕಮಾಂಡ್‌ ಹೇಳಿದಂತೆ ಕೇಳುತ್ತೇವೆ. ಪಕ್ಷವನ್ನ ಇನ್ನಷ್ಟು ಶಕ್ತಿಶಾಲಿಗೊಳಿಸಿ 2028ಕ್ಕೆ ಮತ್ತೆ ರಾಜ್ಯದಲ್ಲಿ ಕಾಂಗ್ರೆಸ್‌ ಪಕ್ಷವನ್ನ ಅಧಿಕಾರಕ್ಕೆ ತರುವ ನಿಟ್ಟಿನಲ್ಲಿ ಕೆಲಸ ಮಾಡುತ್ತೇವೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ

ಬ್ರೇಕ್‌ಫಾಸ್ಟ್‌ ಮೀಟಿಂಗ್‌ ಬಳಿಕ ಒಗ್ಗಟ್ಟಿನ ರಾಗ : ಭಿನ್ನಮತ ಇಲ್ಲ ಎಂದು ಸಾರಿದ ಸಿದ್ದರಾಮಯ್ಯ-ಡಿಕೆಶಿ Read More »

ಧರ್ಮಸ್ಥಳ ಪ್ರಕರಣ : ತನಿಖೆ ಮುಂದುವರಿಸಲು ಎಸ್‌ಐಟಿಗೆ ಹೈಕೋರ್ಟ್‌ ಸೂಚನೆ

ಬೆಳ್ತಂಗಡಿ: ಧರ್ಮಸ್ಥಳ ಪ್ರಕರಣದಲ್ಲಿ ಈಗ ನಡೆಯುತ್ತಿರುವ ಎಸ್.ಐ.ಟಿ ತನಿಖೆ ಮುಂದುವರಿಯಲಿ, ಅರ್ಜಿದಾರರಾದ ಮಹೇಶ್ ಶೆಟ್ಟಿ ತಿಮರೋಡಿ ಹಾಗೂ ಇತರರಿಗೆ ಕಿರುಕುಳ ನೀಡಬಾರದು ಎಂದು ರಾಜ್ಯ ಉಚ್ಚ ನ್ಯಾಯಾಲಯ ಸೂಚನೆ ನೀಡಿ ಪ್ರಕರಣದ ವಿಚಾರಣೆಯನ್ನು ಮುಂದೂಡಿದೆ. ಶುಕ್ರವಾರ ಎಸ್‌.ಐ.ಟಿ ತನಿಖೆಗೆ ಸಂಬಂಧಿಸಿದಂತೆ ಮಹೇಶ್ ಶೆಟ್ಟಿ ತಿಮರೋಡಿ, ಗರೀಶ್ ಮಟ್ಟಣ್ಣನವರ್, ಜಯಂತ್ ಟಿ, ವಿಠಲ ಗೌಡ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ಹೈಕೋರ್ಟ್ ದೂರುದಾರರ ಪರವಾದ ವಾದಗಳನ್ನು ಆಲಿಸಿದ ಬಳಿಕ ಎಸ್.ಐ.ಟಿ ತನಿಖೆ ಮುಂದುವರಿಯಲಿ ಎಂದು ಸೂಚಿಸಿದೆ. ಈ ಹಿಂದೆ

ಧರ್ಮಸ್ಥಳ ಪ್ರಕರಣ : ತನಿಖೆ ಮುಂದುವರಿಸಲು ಎಸ್‌ಐಟಿಗೆ ಹೈಕೋರ್ಟ್‌ ಸೂಚನೆ Read More »

ಪುತ್ತೂರು : ಕ್ಲಿನಿಕ್‌ನಲ್ಲಿ ದಾಂಧಲೆ ಎಸಗಿ ಸಿಬ್ಬಂದಿ ಮೇಲೆ ಹಲ್ಲೆ

ಪುತ್ತೂರು : ಕ್ಲಿನಿಕ್‌ನ ಸಿಬ್ಬಂದಿ ಮೇಲೆ ಹಲ್ಲೆ ಮಾಡಿ ಕ್ಲಿನಿಕ್‌ ಒಳಗೆ ದಾಂಧಲೆ ಎಸಗಿದ ಘಟನೆ ಶನಿವಾರ ಬೆಳಗ್ಗೆ ಪುತ್ತೂರಿನಲ್ಲಿ ಸಂಭವಿಸಿದೆ. ನಗರದ ದರ್ಬೆಯ ಗಣೇಶ್‌ ಕಾಂಪ್ಲೆಕ್ಸ್‌ನಲ್ಲಿರುವ ಡಾ.ರಾಮ್‌ಮೋಹನ್‌ ಎಂಬವರ ಕ್ಲಿನಿಕ್‌ನಲ್ಲಿ ಈ ಘಟನೆ ನಡೆದಿದೆ. ದಿನವಡೀ ರೋಗಿಗಳಿಂದ ತುಂಬಿರುವ ಈ ಕ್ಲಿನಿಕ್‌ನಲ್ಲಿ ಬೆಳಗ್ಗೆ 6 ಗಂಟೆಯಿಂದಲೇ ಟೋಕನ್‌ ನೀಡುವ ವ್ಯವಸ್ಥೆಯಿದೆ. ಇಂದು ಬೆಳಗ್ಗೆ 6.30ರ ವೇಳೆಗೆ ಕ್ಲಿನಿಕ್‌ ಮುಂಭಾಗದ ರಸ್ತೆಯ ಪಾರ್ಕಿಂಗ್‌ ಶುಲ್ಕ ಸಂಗ್ರಹಿಸುವ ವ್ಯಕ್ತಿ ಬಂದು ತನ್ನ ಪರಿಚಯದವರಿಗೆ ಬೇಗ ಹೋಗುವ ಟೋಕನ್‌ ನೀಡದಿರುವ

ಪುತ್ತೂರು : ಕ್ಲಿನಿಕ್‌ನಲ್ಲಿ ದಾಂಧಲೆ ಎಸಗಿ ಸಿಬ್ಬಂದಿ ಮೇಲೆ ಹಲ್ಲೆ Read More »

error: Content is protected !!
Scroll to Top