ಶ್ರೀಲತಾ ಉಡುಪಿ ಜಿಲ್ಲೆಗೆ ವರ್ಗಾವಣೆ

ಪುತ್ತೂರು: ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ವಿವಿಧ ಅಧಿಕಾರಿಗಳ ವರ್ಗಾವಣೆ ಪರ್ವ ಶುರುವಾಗಿದೆ. ಪುತ್ತೂರು ತಾಲೂಕು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖಾ ಅಧಿಕಾರಿ ಶ್ರೀಲತಾ ಅವರಿಗೆ ಉಡುಪಿ ಜಿಲ್ಲೆಯ ಕಾರ್ಕಳ ತಾಲೂಕಿನ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಕಚೇರಿಗೆ ವರ್ಗಾವಣೆಯಾಗಿದ್ದು, ಸರಕಾರದಿಂದ ಆದೇಶವೂ ಬಂದಿದೆ. ಆದರೆ ಪುತ್ತೂರು ಸಿಡಿಪಿಓ ಹುದ್ದೆಗೆ ಯಾರು ಬರಲಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿಲ್ಲ. ಮಹಿಳೆಯರ ಮತ್ತು ಮಕ್ಕಳ ಅಭಿವೃದ್ಧಿ ಹಾಗೂ ವಿಕಲಚೇತನರ ಮತ್ತು ಹಿರಿಯ ನಾಗರಿಕರ ಸಬಲೀಕರಣ ಇಲಾಖೆಯ ಸರಕಾರದ ಅಧೀನ […]

ಶ್ರೀಲತಾ ಉಡುಪಿ ಜಿಲ್ಲೆಗೆ ವರ್ಗಾವಣೆ Read More »

ಚೀನಾದ ಉಪಟಳವಿರುವ ಹಿಮ ಕಣಿವೆಯಲ್ಲಿ ನರೇಂದ್ರ ಮೋದಿ! | ಮೈ ಕೊರೆವ ಚಳಿಯಲ್ಲಿ ಧ್ಯಾನ, ಮೌನ!

ಡೆಹ್ರಾಡೂನ್‌: ಹಿಮದಿಂದ ಕೂಡಿದ ಶಿಖರಗಳಿಲ್ಲಿ ಮೈ ಕೊರೆಯುವ ಚಳಿ. ಇಂತಹ ಚಳಿಯಲ್ಲಿ ವಿಶೇಷ ದಿರಸಿನಿಂದ ಕಂಗೊಳಿಸುತ್ತಿದ್ದ ನರೇಂದ್ರ ಮೋದಿ ಮೌನಕ್ಕೆ ಶರಣಾಗಿದ್ದರು. ಇದು ಪಾರ್ವತಿ ಕುಂಡ್‌’ನಲ್ಲಿ ನರೇಂದ್ರ ಮೋದಿ ಕಂಡ ರೀತಿ. ಪ್ರಧಾನಿ ನರೇಂದ್ರ ಮೋದಿ ಅವರು ಹಲವು ಅಭಿವೃದ್ಧಿ ಯೋಜನೆಗಳಿಗೆ ಚಾಲನೆ, ಶಂಕುಸ್ಥಾಪನೆ ನೆರವೇರಿಸಲು ಉತ್ತರಾಖಂಡಕ್ಕೆ ತೆರಳಿದ್ದಾರೆ. ಇದೇ ವೇಳೆ ಅವರು ಪಿಥೋರ್‌ಗಢದಲ್ಲಿರುವ ಪಾರ್ವತಿ ಕುಂಡ್‌ ದೇವಾಲಯಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದರು. ಬಳಿಕ ಹಿಮಚ್ಛಾದಿತ ಬೆಟ್ಟಗಳ ಮಧ್ಯೆ ಕೆಲ ನಿಮಿಷಗಳ ಕಾಲ ಧ್ಯಾನದಲ್ಲಿ

ಚೀನಾದ ಉಪಟಳವಿರುವ ಹಿಮ ಕಣಿವೆಯಲ್ಲಿ ನರೇಂದ್ರ ಮೋದಿ! | ಮೈ ಕೊರೆವ ಚಳಿಯಲ್ಲಿ ಧ್ಯಾನ, ಮೌನ! Read More »

ಸರಸ್ವತಿ ಮುಂದೆ ಹಾರ ಬದಲಿಸಿಕೊಂಡ ನವದಂಪತಿಗಳು

ಪುತ್ತೂರು: ಗುರು ಹಿರಿಯರ ಆಶೀರ್ವಾದ ಪಡೆಯುವ ವಧೂ-ವರರಿಗೆ  ಸಂಸ್ಕಾರವನ್ನು ಕೊಡುವ ಒಂದು ವಿಧಿಯೇ ಮದುವೆ. ಪ್ರಕೃತಿಯ ಶಿಶುವಾದ ಮಾನವನು ಸಂಸ್ಕೃತಿಯಿಂದ ವಿಕಸಿತನಾಗಿ, ವಿಕೃತಿಯೆಡೆಗೆ ಜಾರದಂತೆ ಧರ್ಮಾಚರಣೆಯಲ್ಲಿ ತೊಡಗಿ ಸಮೃದ್ಧಿ, ಸಂಸ್ಕೃತಿ ಎರಡರಲ್ಲೂ ಸಮತೋಲನ ಕಾಪಾಡಿಕೊಳ್ಳಬೇಕು. ಮಾತೃಧರ್ಮ ಪಾಲನೆಯೊಂದಿಗೆ  ಮಕ್ಕಳನ್ನು ಸಂಸ್ಕಾರಯುತರನ್ನಾಗಿ ಮಾಡುತ್ತಾ, ಅವರನ್ನು ಕುಟುಂಬದ, ತನ್ಮೂಲಕ ದೇಶದ ಆಸ್ತಿಯನ್ನಾಗಿ ಮಾಡಬೇಕು ಎಂದು ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಜ್ಯೇಷ್ಠ ಪ್ರಚಾರಕ ಸು.ರಾಮಣ್ಣ ಹೇಳಿದರು. ಅವರು ಇಲ್ಲಿಯ ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯಲ್ಲಿ ನಡೆದ ನವದಂಪತಿ ಸಮಾವೇಶದಲ್ಲಿ ಮಾತನಾಡಿದರು.

ಸರಸ್ವತಿ ಮುಂದೆ ಹಾರ ಬದಲಿಸಿಕೊಂಡ ನವದಂಪತಿಗಳು Read More »

ಮೈಮೇಲೆ ಹರಿದ ಕಾರು: ಯುವಕ ಸ್ಥಳದಲ್ಲೇ ಮೃತ್ಯು!

ಮಂಗಳೂರು: ದ್ವಿಚಕ್ರ ವಾಹನ ಸವಾರರೊಬ್ಬರ ಮೇಲೆ ಕಾರು ಹರಿದು ಮೃತಪಟ್ಟ ಘಟನೆ ಕುಂಟಿಕಾನದಲ್ಲಿ ನಡೆದಿದೆ. ಕಾವೂರು ನಿವಾಸಿ ಕೌಶಿಕ್ (21) ಮೃತಪಟ್ಟ ದುರ್ದೈವಿ. ನಗರದ ಕುಂಟಿಕಾನದ ಎ.ಜೆ. ಆಸ್ಪತ್ರೆಯಿಂದ ಹೊರಬರುತ್ತಿದ್ದ ದ್ವಿಚಕ್ರ ವಾಹನ ರಿಕ್ಷಾವೊಂದಕ್ಕೆ ತಗುಲಿ ಅಡ್ಡಬಿದ್ದಿದೆ. ಈ ವೇಳೆ ಸವಾರ ನೆಲಕ್ಕೆ ಬಿದ್ದಾಗ ಅವರ ಮೇಲೆ ಏಕಾಏಕಿ ಕಾರು ಹರಿದಿದೆ. ಪರಿಣಾಮ ಯುವಕ ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ.ಪೊಲೀಸರು ಸ್ಥಳಕ್ಕೆ ಆಗಮಿಸಿದ್ದಾರೆ.

ಮೈಮೇಲೆ ಹರಿದ ಕಾರು: ಯುವಕ ಸ್ಥಳದಲ್ಲೇ ಮೃತ್ಯು! Read More »

ಬಲ್ನಾಡು ಶೌರ್ಯ ತಂಡದಿಂದ ಸ್ವಚ್ಛತಾ ಕಾರ್ಯ

ಪುತ್ತೂರು: ಬಲ್ನಾಡು ವಲಯದ ಶೌರ್ಯ ತಂಡದ ಸದಸ್ಯರಿಂದ ಕೊಡಿಪ್ಪಾಡಿ ಅರ್ಕಶ್ರೀ ಮಹಾದೇವಿ ಭಜನಾ ಮಂದಿರದಲ್ಲಿ ಸ್ವಚ್ಛತಾ ಕಾರ್ಯ ನಡೆಯಿತು. ಭಜನಾ ಮಂದಿರದ ಫಾಸಲೆಯಲ್ಲಿರುವ ಗಿಡಗಂಟಿಗಳನ್ನು ತೆರವುಗೊಳಿಸಿ, ಪ್ಲಾಸ್ಟಿಕ್, ಕಸಕಡ್ಡಿಗಳನ್ನು ಹೆಕ್ಕಿ ಸ್ವಚ್ಛಗೊಳಿಸಿದರು. ಈ ಸಂದರ್ಭದಲ್ಲಿ ತಂಡ ಸಂಯೋಜಕಿ ಆಶಾಲತಾ, ಕಬಕ ಸೇವಾಪ್ರತಿನಿಧಿ ನಳಿನಿ, ಕಬಕ ಕೊಡಿಪ್ಪಾಡಿ ಸೇವಾ ಪ್ರತಿನಿಧಿ ಚಿತ್ರಾ, ಕೊಡಿಪ್ಪಾಡಿ ಒಕ್ಕೂಟದ ಉಪಾಧ್ಯಕ್ಷ ಎನ್.ರಾಧಾಕೃಷ್ಣ ಗೌಡ, ಸಂಘದ ಸದಸ್ಯರಾದ ಜ್ಯೋತಿ, ಚಂದ್ರಾವತಿ, ತಂಡದ ಸದಸ್ಯರು ಭಾಗವಹಿಸಿದ್ದರು.

ಬಲ್ನಾಡು ಶೌರ್ಯ ತಂಡದಿಂದ ಸ್ವಚ್ಛತಾ ಕಾರ್ಯ Read More »

ಪುತ್ತೂರು ಶಾರದೋತ್ಸವದ ಆಮಂತ್ರಣ ವಿತರಣೆ

ಪುತ್ತೂರು: ಇಲ್ಲಿಯ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವಠಾರದಲ್ಲಿರುವ ಶ್ರೀ ಶಾರದಾ ಭಜನಾ ಮಂದಿರದಲ್ಲಿ ಅ. 15ರಿಂದ 24ರತನಕ ನಡೆಯಲಿರುವ 89ನೇ ವರ್ಷದ ಪುತ್ತೂರು ಶಾರದೋತ್ಸವದ ಆಮಂತ್ರಣ ವಿತರಣೆಗೆ ದರ್ಬೆ ವೃತ್ತದ ಬಳಿ ಗುರುವಾರ ಚಾಲನೆ ನೀಡಲಾಯಿತು. ಬಳಿಕ ಚೆಂಡೆ, ಕಲ್ಲಡ್ಕ ಬೊಂಬೆಯೊಂದಿಗೆ ಬೊಳುವಾರು ತನಕ ಸಾಗಿ ಆಮಂತ್ರಣ ಪತ್ರಿಕೆಯನ್ನು ಪೇಟೆಯ ವರ್ತಕರಿಗೆ ವಿತರಿಸಲಾಯಿತು. ದ.ಕ. ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ನಿರ್ದೇಶಕ ಶಶಿಕುಮಾರ್ ಬಾಲ್ಯೊಟ್ಟು ಆಮಂತ್ರಣ ಪತ್ರಿಕೆ ವಿತರಣೆಗೆ ಚಾಲನೆ ನೀಡಿ ಮಾತನಾಡಿ, ಪುತ್ತೂರು ಶಾರದೋತ್ಸವ ಈ

ಪುತ್ತೂರು ಶಾರದೋತ್ಸವದ ಆಮಂತ್ರಣ ವಿತರಣೆ Read More »

11-10-2023ರ ಕೃಷಿ ಮಾರುಕಟ್ಟೆ ಧಾರಣೆ

ಪುತ್ತೂರು: ಬುಧವಾರದ ಕೃಷಿ ಮಾರುಕಟ್ಟೆ ಧಾರಣೆಯಲ್ಲಿ ಅಡಿಕೆ ಕೆಳಮುಖವಾಗಿದ್ದರೆ, ರಬ್ಬರ್ ದರ ಸ್ವಲ್ಪ ಚಿಗಿತುಕೊಂಡಿದೆ. ಹಳೆಅಡಿಕೆ ಹಾಗೂ ಡಬ್ಬಲ್ ಚೋಲ್ 5 ರೂ. ಧಾರಣೆ ಇಳಿಕೆ ಕಂಡಿದ್ದು, ಹೊಸಅಡಿಕೆ 325- 365 ರೂ. ಹಳೆ ಅಡಿಕೆ 380 -430 ರೂ.ನಲ್ಲಿದೆ. 430-435 ರೂ. (ಗುಣಮಟ್ಟ), ಡಬ್ಬಲ್ ಚೋಲ್ 390 – 470 ರೂ. ಹಾಗೂ 470- 485 ರೂ. (ಗುಣಮಟ್ಟ)ನಲ್ಲಿದೆ. ಮಂಗಳವಾರ ಹಳೆ ಅಡಿಕೆ 380 – 435 ಹಾಗೂ 430-440 ರೂ.ನಲ್ಲಿ, ಡಬ್ಬಲ್ ಚೋಲ್ 390-

11-10-2023ರ ಕೃಷಿ ಮಾರುಕಟ್ಟೆ ಧಾರಣೆ Read More »

ಕೆಡೆನ್ಸ್ ಡಿಸೈನ್ ಸಿಸ್ಟಮ್ಸ್ ಸಂಸ್ಥೆಗೆ ವಿವೇಕಾನಂದ ಇಂಜಿನಿಯರಿಂಗ್ ಕಾಲೇಜು ವಿದ್ಯಾರ್ಥಿನಿ ಧನ್ಯ ಪಿ. ಆಯ್ಕೆ

ಪುತ್ತೂರು: ಇಲ್ಲಿಯ ವಿವೇಕಾನಂದ ಕಾಲೇಜ್ ಆಫ್ ಎಂಜಿನಿಯರಿಂಗ್ ಎಂಡ್ ಟೆಕ್ನಾಲಜಿಯ ಅಂತಿಮ ವರ್ಷದ ಎಲೆಕ್ಟ್ರಾನಿಕ್ಸ್ ಎಂಡ್ ಕಮ್ಯುನಿಕೇಶನ್ ವಿಭಾಗದ ವಿದ್ಯಾರ್ಥಿನಿ ಧನ್ಯ.ಪಿ ಕೆಡೆನ್ಸ್ ಡಿಸೈನ್ ಸಿಸ್ಟಮ್ಸ್ ಸಂಸ್ಥೆಗೆ ಆಯ್ಕೆಯಾಗಿದ್ದಾರೆ. 2024ನೇ ಸಾಲಿನ ಅಂತಿಮ ವರ್ಷದ ಇಂಜಿನಿಯರಿಂಗ್ ವಿದ್ಯಾರ್ಥಿಗಳ ಕ್ಯಾಂಪಸ್ ನೇಮಕಾತಿ ಪ್ರಕ್ರಿಯೆಯನ್ವಯ ನಡೆದ ನೇಮಕಾತಿ ಪ್ರಕ್ರಿಯೆಯನ್ನು ಯಶಸ್ವಿಯಾಗಿ ಪೂರೈಸಿ ಆಯ್ಕೆಯಾಗಿದ್ದಾರೆ. ಎಲೆಕ್ಟ್ರಾನಿಕ್ಸ್ ಎಂಡ್ ಕಮ್ಯುನಿಕೇಶನ್ ಕ್ಷೇತ್ರದ ದಿಗ್ಗಜ ಕೆಡೆನ್ಸ್ ಡಿಸೈನ್ ಸಿಸ್ಟಮ್ಸ್ ಸಂಸ್ಥೆಯು ಕಾಲೇಜಿಗೆ ಭೇಟಿ ನೀಡಿತ್ತು. ಈ ನೇಮಕಾತಿ ಪ್ರಕ್ರಿಯೆಯಲ್ಲಿ ದಕ್ಷಿಣ ಕನ್ನಡ ಹಾಗೂ ಉಡುಪಿ

ಕೆಡೆನ್ಸ್ ಡಿಸೈನ್ ಸಿಸ್ಟಮ್ಸ್ ಸಂಸ್ಥೆಗೆ ವಿವೇಕಾನಂದ ಇಂಜಿನಿಯರಿಂಗ್ ಕಾಲೇಜು ವಿದ್ಯಾರ್ಥಿನಿ ಧನ್ಯ ಪಿ. ಆಯ್ಕೆ Read More »

ಇನ್ನು ಮೊಬೈಲ್ ನೀಡಲಿದೆ ವಿಕೋಪಗಳ ಮುನ್ಸೂಚನೆ!!

ವಿಕೋಪಗಳ ಕುರಿತು ಮುನ್ಸೂಚನೆ ನೀಡುವ ನಿಟ್ಟಿನಲ್ಲಿ ಟೆಲಿಕಮ್ಯುನಿಕೇಶನ್ ಇಲಾಖೆ ಹಾಗೂ ರಾಷ್ಟ್ರೀಯ ವಿಪತ್ತು ನಿರ್ವಹಣಾ ಪ್ರಾಧಿಕಾರದ ಸಹಯೋಗದಲ್ಲಿ ಸಕಾಲಿಕ ಮುನ್ನೆಚ್ಚರಿಕೆ (ವಿಭಿನ್ನ ಧ್ವನಿ ಮತ್ತು ಕಂಪನ) ನೀಡಲು ಮುಂದಾಗಿದೆ. ಅದರ ಭಾಗವಾಗಿ ರಾಜ್ಯದಲ್ಲಿ ಅ. 12ರಂದು ತುರ್ತು ಎಚ್ಚರಿಕೆ ವ್ಯವಸ್ಥೆಯ ಪರೀಕ್ಷೆ ನಡೆಯಲಿದೆ. ರಾಜ್ಯದಲ್ಲಿ ದೂರಸಂಪರ್ಕ ಇಲಾಖೆ (ಸಿ-ಡಾಟ್) ಸೆಲ್ ಬ್ರಾಡ್ ಕಾಸ್ಟಿಂಗ್ ಮೂಲಕ ಸ್ಮಾರ್ಟ್ಫೋನ್ ಬಳಕೆದಾರರಿಗೆ ತುರ್ತು ಎಚ್ಚರಿಕೆ ವ್ಯವಸ್ಥೆಯ ಪರೀಕ್ಷೆ ನಡೆಯಲಿದೆ. ಈಗಾಗಲೇ ಮೊಬೈಲ್ ಬಳಕೆದಾರರಿಗೆ ಸಂದೇಶಗಳು ರವಾನೆಯಾಗಿದೆ. ಫೋನ್ ಜೋರಾಗಿ ಎಚ್ಚರಿಕೆಯ ರೀತಿಯ

ಇನ್ನು ಮೊಬೈಲ್ ನೀಡಲಿದೆ ವಿಕೋಪಗಳ ಮುನ್ಸೂಚನೆ!! Read More »

6 ಗಂಟೆ ಎನ್ಐಎ ತಂಡವನ್ನು ಸತಾಯಿಸಿದ ಆರೋಪಿ!!

ಮುಂಬಯಿ: ಪಿಎಫ್ಐ ಸಂಬಂಧಿತ ಪ್ರಕರಣದಲ್ಲಿ ದಾಳಿ ನಡೆಸುತ್ತಿರುವ ಎನ್ಐಎ ತಂಡ 7/11 ಮುಂಬೈ ರೈಲು ಸ್ಫೋಟ ಪ್ರಕರಣದಲ್ಲಿ ಆರೋಪಿಯೊಬ್ಬನನ್ನು ಖುಲಾಸೆಗೊಳಿಸುವ ಮೊದಲು ಬುಧವಾರ ಉಪನಗರ ವಿಕ್ರೋಲಿಯ ಆತನ ನಿವಾಸಕ್ಕೆ ತೆರಳಿದ್ದು, ಈ ವೇಳೆ ಮನೆಯ ಬಾಗಿಲು ತೆರೆಯದ ಕಾರಣ ಆರು ಗಂಟೆಗಳಿಗೂ ಹೆಚ್ಚು ಕಾಲ ಮನೆಯ ಹೊರಗೆ ಕಾಯಬೇಕಾಯಿತು ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವರ ಬಿಹಾರ ಪ್ರವಾಸದ ವೇಳೆ ಅಡ್ಡಿಪಡಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ನಿಷೇಧಿತ ಪಿಎಫ್ಐ ವಿರುದ್ಧ ದೇಶದ ಆರು ರಾಜ್ಯಗಳ ಹಲವು

6 ಗಂಟೆ ಎನ್ಐಎ ತಂಡವನ್ನು ಸತಾಯಿಸಿದ ಆರೋಪಿ!! Read More »

error: Content is protected !!
Scroll to Top