ಪುತ್ತೂರಿನಲ್ಲಿ ಮೇಳೈಸಿದ ಪಿಲಿಗೊಬ್ಬು-2023 | ಜಿಲ್ಲೆಯ ಖ್ಯಾತ 10 ತಂಡಗಳ ಭಾಗವಹಿಸುವಿಕೆ

ಪುತ್ತೂರು: ತುಳುನಾಡ ಹುಲಿಕುಣಿತ ಜನಪದೀಯ ನಂಬಿಕೆಯೊಂದಿಗೆ ಹರಕೆ ರೂಪದಲ್ಲಿರುವ ಒಂದು ಗೊಬ್ಬು. ತುಳುನಾಡಿನ ದೈವಕಲೆ, ಸಂಸ್ಕೃತಿಯ ಭಾಗವಾದ ಹುಲಿ ಕುಣಿತಕ್ಕೆ ರೂಪು, ನಡವಳಿಕೆ, ಚೌಕಟ್ಟು ನೀಡಿ ಪ್ರತಿಭೆಗಳನ್ನು ಗುರುತಿಸುವ ಕೆಲಸ ವಿಜಯ್ ಸಾಮ್ರಾಟ್ ನಿಂದ ಆಗಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ, ಸಂಸದ ನಳಿನ್ ಕುಮಾರ್ ಕಟೀಲ್ ಹೇಳಿದರು. ಭಾನುವಾರ ಪುತ್ತೂರು ವಿಜಯ್ ಸಾಮ್ರಾಟ್ ಆಶ್ರಯದಲ್ಲಿ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಎದುರಿನ ದೇವರಮಾರು ಗದ್ದೆಯಲ್ಲಿ ನಡೆದ ಪಿಲಿಗೊಬ್ಬು-2023 ಸಭಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಸಭಾ ಕಾರ್ಯಕ್ರಮ ಉದ್ಘಾಟಿಸಿದ ಶಾಸಕ […]

ಪುತ್ತೂರಿನಲ್ಲಿ ಮೇಳೈಸಿದ ಪಿಲಿಗೊಬ್ಬು-2023 | ಜಿಲ್ಲೆಯ ಖ್ಯಾತ 10 ತಂಡಗಳ ಭಾಗವಹಿಸುವಿಕೆ Read More »

ವಿಶ್ವ ಬಂಟರ ಸಮ್ಮೇಳನದ ಆಮಂತ್ರಣ ಪತ್ರಿಕೆ ಬಿಡುಗಡೆ

ಪುತ್ತೂರು: ಅ.28 ಹಾಗೂ 29 ರಂದು ಉಡುಪಿ ಅಜ್ಜರಕಾಡು ಮೈದಾನದಲ್ಲಿ ನಡೆಯಲಿರುವ ವಿಶ್ವ ಬಂಟರ ಸಮ್ಮೇಳನದ ಆಮಂತ್ರಣ ಪತ್ರಿಕೆ ಬಿಡುಗಡೆ ಹಾಗೂ ಸಮಾಲೋಚನಾ ಸಭೆ ಶನಿವಾರ ಸಂಜೆ ಕೊಂಬೆಟ್ಟು ಬಂಟರ ಭವನದಲ್ಲಿ ನಡೆಯಿತು. ತಾಲೂಕು ಬಂಟರ ಸಂಘದ ಆಶ್ರಯದಲ್ಲಿ ನಡೆದ ಕಾರ್ಯಕ್ರಮದಲ್ಲಿ ಶಾಸಕ ಅಶೋಕ್ ಕುಮಾರ್ ರೈ ಆಮಂತ್ರಣ ಪತ್ರಿಕೆ ಬಿಡುಗಡೆ ಮಾಡಿ, ವಿಶ್ವ ಬಂಟರ ಸಮ್ಮೇಳನ ಅರ್ಥಪೂರ್ಣವಾಗಿ ನಡೆಯಲಿ ಎಂದು ಶುಭಹಾರೈಸಿದರು. ಜಾಗತಿಕ ಬಂಟರ ಸಂಘದ ಅಧ್ಯಕ್ಷ ಐಕಳ ಹರೀಶ್ ಶೆಟ್ಟಿ ಮಾತನಾಡಿ, ಪುತ್ತೂರಿನಿಂದ ವಿಶ್ವ

ವಿಶ್ವ ಬಂಟರ ಸಮ್ಮೇಳನದ ಆಮಂತ್ರಣ ಪತ್ರಿಕೆ ಬಿಡುಗಡೆ Read More »

ಅಡಕೆ ಎಲೆ ಚುಕ್ಕಿ ರೋಗ ಶೀಘ್ರವೇ ಕೃಷಿ ಸಚಿವರ ಜೊತೆ ಮಾತುಕತೆ: ಅಶೋಕ್ ರೈ

ಪುತ್ತೂರು: ಜಿಲ್ಲೆಯಲ್ಲಿ ಅಡಕೆಗೆ ಎಲೆಚುಕ್ಕಿ ರೋಗ ಸುಳ್ಯ ಮತ್ತು ಪಾಣಾಜೆ ವ್ಯಾಪ್ತಿಯಲ್ಲಿ ಕಾಣಿಸಿಕೊಂಡಿದ್ದು, ಈ ವಿಚಾರವನ್ನು ತಕ್ಷಣವೇ ಕೃಷಿ ಸಚಿವರ ಗಮನಕ್ಕೆ ತರಲಾಗುವುದು ಎಂದು ಪುತ್ತೂರು ಶಾಸಕ ಅಶೋಕ್ ರೈ ಹೇಳಿದರು. ಅವರು ಇಡ್ಕಿದು ಸೇವಾ ಸಹಕಾರಿ ಸಂಘದ ಕುಳ ಕುಂಡಡ್ಕ ಶಾಖೆಯ ನೂತನ ಕಟ್ಟಡ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದರು. ಎಲೆ ಚುಕ್ಕಿ ರೋಗ ಬಾಧಿತ ಪ್ರದೇಶಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಅಧಿಕಾರಿಗಳ ಜೊತೆ ಚರ್ಚಿಸಿ ಸರಕಾರಕ್ಕೆ ವರದಿ ಸಲ್ಲಿಸಲಾಗುವುದು. ರೋಗಕ್ಕೆ ಸೂಕ್ತ ಔಷಧಿಯ ವ್ಯವಸ್ಥೆ

ಅಡಕೆ ಎಲೆ ಚುಕ್ಕಿ ರೋಗ ಶೀಘ್ರವೇ ಕೃಷಿ ಸಚಿವರ ಜೊತೆ ಮಾತುಕತೆ: ಅಶೋಕ್ ರೈ Read More »

ನೈಋತ್ಯ ಪದವೀಧರ, ಶಿಕ್ಷಕರ ಕ್ಷೇತ್ರದ ಮತದಾರರ ಪಟ್ಟಿ ತಯಾರಿಕೆ: ಪೂರ್ವಭಾವಿ ಸಭೆ

ಪುತ್ತೂರು: ನೈಋತ್ಯ ಪದವೀಧರ, ಶಿಕ್ಷಕರ ಕ್ಷೇತ್ರದ ಮತದಾರರ ಪಟ್ಟಿಗೆ ಹೆಸರು ನೋಂದಾಯಿಸಲು ನ. 6 ಕೊನೆ ದಿನವಾಗಿರುತ್ತದೆ. ಪ್ರತಿ ಚುನಾವಣೆ ಸಂದರ್ಭದಲ್ಲಿಯೂ ಅರ್ಹರು ಹೊಸದಾಗಿ ನೋಂದಣಿ ಮಾಡಿಕೊಳ್ಳುವ ಅನಿವಾರ್ಯತೆ ಇದೆ. ಪದವೀಧರರು ನೋಂದಣಿಗೆ ಹೆಚ್ಚಿನ ಆಸಕ್ತಿಯನ್ನು ತೋರಿಸುವ ಕಾರ್ಯವಾಗಬೇಕಾಗಿದೆ ಎಂದು ಸಹಾಯಕ ಆಯುಕ್ತ ಗಿರೀಶ್ ನಂದನ್ ಹೇಳಿದರು. ಅವರು ಶನಿವಾರ ಸಂಜೆ ಮತದಾರರ ಪಟ್ಟಿ ತಯಾರಿಕೆಯ ಹಿನ್ನೆಲೆಯಲ್ಲಿ ನಡೆದ ಪೂರ್ವಭಾವಿ ಸಭೆಯಲ್ಲಿ ಮಾಹಿತಿ ನೀಡಿದರು. 2017ರ ಚುನಾವಣೆ ಸಂದರ್ಭ 506 ಶಿಕ್ಷಕರು ಹಾಗೂ 1138 ಮಂದಿ ಪದವೀದರರಿದ್ದರು.

ನೈಋತ್ಯ ಪದವೀಧರ, ಶಿಕ್ಷಕರ ಕ್ಷೇತ್ರದ ಮತದಾರರ ಪಟ್ಟಿ ತಯಾರಿಕೆ: ಪೂರ್ವಭಾವಿ ಸಭೆ Read More »

ಮುಖ್ಯಮಂತ್ರಿ ಪರಿಹಾರ ನಿಧಿ ವಿತರಣೆ

ಪುತ್ತೂರು: ತಾಲೂಕಿನ ನಾಲ್ಕು ಮಂದಿ ಫಲಾನುಭವಿಗಳಿಗೆ ಮುಖ್ಯಮಂತ್ರಿ ಪರಿಹಾರ ನಿಧಿಯಿಂದ ಮಂಜೂರಾದ ಮೊತ್ತವನ್ನು ಪುತ್ತೂರು ಶಾಸಕರ ಕಚೇರಿಯಲ್ಲಿ ಶನಿವಾರ ಸಂಜೆ ವಿತರಿಸಲಾಯಿತು. ತಾಲೂಕಿನ ಕೋಡಿಂಬಾಡಿ ಗ್ರಾಮದ ಮೋಹನ್ ಕಜೆ ಅವರಿಗೆ 20 ಸಾವಿರ ರೂ., ಬಜತ್ತೂರು ಗ್ರಾಮದ ಜಯರಾಮ ಎಂ. ಅವರಿಗೆ 30 ಸಾವಿರ ರೂ., ಕುಡಿಪ್ಪಾಡಿ ಗ್ರಾಮದ ಇಸ್ಮಾಯಿಲ್ ಅವರಿಗೆ 33,152 ಹಾಗೂ ಆರ್ಯಾಪು ಗ್ರಾಮದ ಹರೀಶ ಅವರಿಗೆ 24 ಸಾವಿರ ರೂ. ಪರಿಹಾರ ನಿಧಿಯನ್ನು ಶಾಸಕ ಅಶೋಕ್ ಕುಮಾರ್ ರೈ ವಿತರಿಸಿದರು. ಈ ಸಂದರ್ಭದಲ್ಲಿ

ಮುಖ್ಯಮಂತ್ರಿ ಪರಿಹಾರ ನಿಧಿ ವಿತರಣೆ Read More »

‘ಪಿಲಿಗೊಬ್ಬು’ಗೆ ಪೂರ್ವಭಾವಿಯಾಗಿ ‘ಫುಡ್ ಫೆಸ್ಟ್’ಗೆ ಚಾಲನೆ

ಪುತ್ತೂರು: ಹೊಸ ಯೋಚನೆ, ಗುಣಮಟ್ಟ, ರುಚಿಯ ಜತೆಗೆ ಪರಿವರ್ತನೆ… ಇವು ಆಹಾರ ಉದ್ಯಮದ ಯಶಸ್ಸಿನ ದಾರಿ ಎಂದು ಉದ್ಯಮಿ, ಬಿಂದು ಸಮೂಹ ಸಂಸ್ಥೆಯ ಸತ್ಯಶಂಕರ್ ಭಟ್ ಹೇಳಿದರು. ಪುತ್ತೂರು ವಿಜಯ ಸಾಮ್ರಾಟ್ ಆಶ್ರಯದಲ್ಲಿ ಪಿಲಿಗೊಬ್ಬು ಹಿನ್ನೆಲೆಯಲ್ಲಿ ಎರಡು ದಿನಗಳ ಕಾಲ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಗದ್ದೆಯಲ್ಲಿ ಆಯೋಜಿಸಿರುವ ‘ಫುಡ್ ಫೆಸ್ಟ್’ ಕಾರ್ಯಕ್ರಮವನ್ನು ದೀಪ ಬೆಳಗಿಸಿ ಉದ್ಘಾಟಿಸಿ ಮಾತನಾಡಿದರು. ಭಾರತದಲ್ಲಿ ಇದ್ದಷ್ಟು ಆಹಾರ ವೈವಿಧ್ಯತೆಗಳು ಜಗತ್ತಿನ ಬೇರೆ ಯಾವ ದೇಶದಲ್ಲೂ ಇಲ್ಲ. ಈ ನಿಟ್ಟಿನಲ್ಲಿ ಭಾರತದಲ್ಲಿ ಆಹಾರ ಉದ್ಯಮಕ್ಕೆ

‘ಪಿಲಿಗೊಬ್ಬು’ಗೆ ಪೂರ್ವಭಾವಿಯಾಗಿ ‘ಫುಡ್ ಫೆಸ್ಟ್’ಗೆ ಚಾಲನೆ Read More »

ಆಯ ತಪ್ಪಿ ಕೆರೆಗೆ ಬಿದ್ದು ಮೃತ್ಯು!

ಪುತ್ತೂರು: ಕಾಲು ಜಾರಿ ವ್ಯಕ್ತಿಯೋರ್ವರು ಕೆರೆಗೆ ಬಿದ್ದು ಮೃತಪಟ್ಟ ಘಟನೆ ಅಕ್ಟೋಬರ್ 21ರಂದು ಅರಿಯಡ್ಕ ಗ್ರಾಮದ ಬೈರಮೂಲೆ ಎಂಬಲ್ಲಿ ನಡೆದಿದೆ. ಮೃತರನ್ನು ಬೈರಮೂಲೆ ಕನ್ನ ಪಾಟಾಳಿ ಅವರ ಪುತ್ರ ಶಿವಪ್ರಸಾದ್ (40 ವ.) ಎಂದು ಗುರುತಿಸಲಾಗಿದೆ. ಕುರಿಂಜ ಹೊಸಮನೆಯಲ್ಲಿ ಚಂದ್ರಶೇಖರ ಮಣಿಯಾಣಿ ಎಂಬವರ ತೋಟದಲ್ಲಿ ಮಿಷನ್ ಮೂಲಕ ಹುಲ್ಲು ತೆಗೆಯುತ್ತಿದ್ದರು. ಕೈಕಾಲು ತೊಳೆಯಲು ಕೆರೆಗೆ ಇಳಿದಿದ್ದು, ಆಯ ತಪ್ಪಿ ಕೆರೆಗೆ ಬಿದ್ದು ಮೃತಪಟ್ಟಿರಬೇಕು ಎಂದು ಹೇಳಲಾಗಿದೆ. ಪುತ್ತೂರು ಅಗ್ನಿ ಶಾಮಕ ದಳದವರು ಮೃತದೇಹವನ್ನು ಕೆರೆಯಿಂದ ಮೇಲಕ್ಕೆತ್ತಿದ್ದಾರೆ. ಗ್ರಾಮ

ಆಯ ತಪ್ಪಿ ಕೆರೆಗೆ ಬಿದ್ದು ಮೃತ್ಯು! Read More »

ಕುಕ್ಕೆ ಸುಬ್ರಹ್ಮಣ್ಯ ದೇವರಿಗೆ ಚಿನ್ನದ ಪ್ರಭಾವಳಿ ಸಮರ್ಪಣೆ!

ಸುಬ್ರಹ್ಮಣ್ಯ: ರಾಜ್ಯದ ಪ್ರಸಿದ್ಧ ದೇವಸ್ಥಾನಗಳಲ್ಲಿ ಒಂದಾಗಿರುವ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವರಿಗೆ ಚಿನ್ನದ ಪ್ರಭಾವಳಿಯನ್ನು ಶನಿವಾರ ಸಮರ್ಪಣೆ ಮಾಡಲಾಗಿದೆ. ಬಿಹಾರ ಮೂಲದ ಡಾ. ರಾಹುಲ್ ಕುಮಾರ್ ಪಾಟ್ನಾ ಅವರು ಪ್ರಭಾವಳಿ ಸಮರ್ಪಿಸಿದ್ದು, ಶನಿವಾರ ವಿಶೇಷ ಪೂಜೆ ಸಲ್ಲಿಸಿ ಸಮರ್ಪಿಸಲಾಯಿತು. ಮದುವೆ ಬಳಿಕ ಸಂತಾನಕ್ಕಾಗಿ ಹೇಳಲಾದ ಹರಕೆ ಸೇವೆ ಇದಾಗಿದ್ದು, ಪುತ್ರ ಸಂತಾನ ಆದ ನಂತರ ದಂಪತಿ ಕ್ಷೇತ್ರಕ್ಕೆ ಆಗಮಿಸಿ ಹರಕೆ ತೀರಿಸಿರುವುದಾಗಿ ತಿಳಿದು ಬಂದಿದೆ. ಹರಕೆ ತೀರಿಸುವ ಅಂಗವಾಗಿ ಡಾ. ರಾಹುಲ್ ಕುಮಾರ್ ದಂಪತಿ ಪುತ್ರನ ಉಪಸ್ಥಿತಿಯಲ್ಲಿ

ಕುಕ್ಕೆ ಸುಬ್ರಹ್ಮಣ್ಯ ದೇವರಿಗೆ ಚಿನ್ನದ ಪ್ರಭಾವಳಿ ಸಮರ್ಪಣೆ! Read More »

ಜೆಸಿಬಿ ಹೊತ್ತ ಟಿಪ್ಪರ್ – ಟೆಂಪೋ ಟ್ರಾವೆಲರ್ ಡಿಕ್ಕಿ

ಜೆಸಿಬಿ ಹೊತ್ತು ಸಾಗುತ್ತಿದ್ದ ಟಿಪ್ಪರ್ ಲಾರಿ ಹಾಗೂ ಟೆಂಪೋ ಟ್ರಾವೆಲರ್ ಮುಖಾಮುಖಿ ಡಿಕ್ಕಿ ಹೊಡೆದಿದ್ದು, ಕೆಲವರಿಗೆ ಸಣ್ಣಪುಟ್ಟ ಗಾಯಗಳಾದ ಘಟನೆ ಅ. 21ರಂದು ಬೆಳ್ತಂಗಡಿಯ ಗುರುವಾಯನಕೆರೆ ಬಳಿಯಲ್ಲಿ ನಡೆದಿದೆ. ಗುರುವಾಯನಕೆರೆ ಸಮೀಪದ ಮೇಲಂತಬೆಟ್ಟು ಕ್ರಾಸ್ ಬಳಿಯ ರಾಷ್ಟ್ರೀಯ ಹೆದ್ದಾರಿಯಲ್ಲಿ ಜೆಸಿಬಿ ಹೊತ್ತು ಸಾಗುತ್ತಿದ್ದ ಟಿಪ್ಪರ್’ಗೆ ಎದುರುಗಡೆಯಿಂದ ಬರುತ್ತಿದ್ದ ಟೆಂಪೋ ಟ್ರಾವೆಲರ್ ವಾಹನವು ಡಿಕ್ಕಿ ಹೊಡೆದಿದೆ. ಘಟನೆಯ ವೇಳೆ ಕೆಲವರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಲಾರಿಯ ಒಂದು ಬದಿ ಸಂಪೂರ್ಣ ನಜ್ಜುಗುಜ್ಜಾಗಿದೆ ಎನ್ನಲಾಗಿದೆ. ಘಟನೆಯಿಂದಾಗಿ ರಸ್ತೆ ಸಂಚಾರ ಸಂಪೂರ್ಣ ಬಂದ್

ಜೆಸಿಬಿ ಹೊತ್ತ ಟಿಪ್ಪರ್ – ಟೆಂಪೋ ಟ್ರಾವೆಲರ್ ಡಿಕ್ಕಿ Read More »

ಚೆಸ್, ಕ್ಯಾರಂ ಆಟಕ್ಕೂ ಸೈ ನರಿಮೊಗರು ಗ್ರಾಪಂ ಡಿಜಿಟಲ್ ಗ್ರಂಥಾಲಯ | ಗ್ರಂಥಾಲಯ ಮೂಲಕ ಕೌಶಲ್ಯ ಹೆಚ್ಚಿಸಿಕೊಳ್ಳುತ್ತಿರುವ ಗ್ರಾಪಂ ವ್ಯಾಪ್ತಿಯ ಶಾಲಾ ಮಕ್ಕಳು

ಪುತ್ತೂರು: ಈ ಡಿಜಿಟಲ್ ಗ್ರಂಥಾಲಯ ಕೇವಲ ಪುಸ್ತಕಗಳನ್ನು ಓದುವುದಕ್ಕೆ ಮಾತ್ರ ಸೀಮಿತವಾಗಿಲ್ಲ. ಬದಲಾಗಿ ಇಲ್ಲಿ ಚೆಸ್, ಕ್ಯಾರಂ ಮುಂತಾದ ಆಟಗಳಲ್ಲಿ ಮಕ್ಕಳನ್ನು ತೊಡಗಿಸಿಕೊಳ್ಳುವಂತೆ ಪ್ರೋತ್ಸಾಹ ನೀಡಿ ಈ ಮೂಲಕ ಮಕ್ಕಳ ಕೌಶಲ್ಯ ಹೆಚ್ಚಿಸುವ ಕಾರ್ಯವನ್ನೂ ಮಾಡುತ್ತಿದೆ. ಇದು ನರಿಮೊಗರು ಗ್ರಾಮ ಪಂಚಾಯಿತಿಯ ಡಿಜಿಟಲ್ ಗ್ರಂಥಾಲಯದ ವಿಶೇಷತೆ. ಈ ಗ್ರಾಪಂ ಪುತ್ತೂರು ತಾಲೂಕಿನ 21 ಗ್ರಾಪಂಗಳ ಪೈಕಿ ಅತೀ ದೊಡ್ಡ ಗ್ರಾಪಂ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಪುತ್ತೂರು ತಾಲೂಕಿನಲ್ಲಿ ಪ್ರಪ್ರಥಮವಾಗಿ ಡಿಜಿಟಲ್ ಗ್ರಂಥಾಲಯ ಆರಂಭವಾದದ್ದು ಇದೇ ಗ್ರಾಪಂನಿಂದ. ಈ

ಚೆಸ್, ಕ್ಯಾರಂ ಆಟಕ್ಕೂ ಸೈ ನರಿಮೊಗರು ಗ್ರಾಪಂ ಡಿಜಿಟಲ್ ಗ್ರಂಥಾಲಯ | ಗ್ರಂಥಾಲಯ ಮೂಲಕ ಕೌಶಲ್ಯ ಹೆಚ್ಚಿಸಿಕೊಳ್ಳುತ್ತಿರುವ ಗ್ರಾಪಂ ವ್ಯಾಪ್ತಿಯ ಶಾಲಾ ಮಕ್ಕಳು Read More »

error: Content is protected !!
Scroll to Top