ತುಂಡಾಗಿ ಬಿದ್ದಿದ್ದ ವಿದ್ಯುತ್ ತಂತಿ: ವ್ಯಕ್ತಿ ಮೃತ್ಯು!

ಪುತ್ತೂರು: ತುಂಡಾಗಿ ಬಿದ್ದಿದ್ದ ವಿದ್ಯುತ್ ತಂತಿ ತಗುಲಿ ವ್ಯಕ್ತಿಯೋರ್ವರು ಮೃತಪಟ್ಟ ಘಟನೆ ಕರಾಯ ಗ್ರಾಮದ ಪೆದಮಲೆಯಲ್ಲಿ ನಡೆದಿದೆ. ಮೃತರನ್ನು ಕರಾಯ ಗ್ರಾಮದ ಸಗುಣ ಎಂದು ಗುರುತಿಸಲಾಗಿದೆ. ಮೃತರ ಪತ್ನಿ ಅಂಗಾರು ನೀಡಿದ ದೂರಿನಂತೆ ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಜಯಂತ ಕುಮಾರ್ ಎಂಬವರ ಮನೆಯಲ್ಲಿ ಕೆಲಸಕ್ಕೆ ಹೋಗಿದ್ದ ಸಗುಣ ಅವರು, ಗುಡ್ಡದಲ್ಲಿ ಕೆಲಸ ಮಾಡುತ್ತಿದ್ದ ಸಂದರ್ಭ ತುಂಡಾಗಿ ಬಿದ್ದಿದ್ದ ವಿದ್ಯುತ್ ತಂತಿಯನ್ನು ಸ್ಪರ್ಶಿಸಿದ್ದಾರೆ. ಸ್ಥಳೀಯರು ಆರೈಕೆ ಮಾಡಿ, ಪುತ್ತೂರು ಆಸ್ಪತ್ರೆಗೆ ಕರೆತರುವಷ್ಟರಲ್ಲಿ ಕೊನೆಯುಸಿರೆಳೆದಿದ್ದರು ಎಂದು ವೈದ್ಯರು […]

ತುಂಡಾಗಿ ಬಿದ್ದಿದ್ದ ವಿದ್ಯುತ್ ತಂತಿ: ವ್ಯಕ್ತಿ ಮೃತ್ಯು! Read More »

ಬಡವರ ಜೊತೆ ಸಹಭೋಜನ ಮಾಡುವ ಉದ್ದೇಶದಿಂದ ಸಾರಿ ವಿತರಣೆ: ಶಾಸಕ ಅಶೋಕ್ ರೈ

ಪುತ್ತೂರು: ಪುತ್ತೂರಿನಲ್ಲಿ ಈ ಬಾರಿ ಸುಮಾರು 50 ಸಾವಿರ ಮಂದಿಗೆ ವಸ್ತ್ರ ವಿತರಣೆ ಮಾಡುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದ್ದು, ಕಾರ್ಯಕ್ರಮದಲ್ಲಿ ಭಾಗವಹಿಸುವ ಬಡವರ ಜೊತೆ ಸಹಭೋಜನವನ್ನು ಮಾಡಲಿದ್ದೇನೆ. ಈ ಉದ್ದೇಶದಿಂದಲೇ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಶಾಸಕ ಅಶೋಕ್ ಕುಮಾರ್ ರೈ ಹೇಳಿದರು. ಅವರು ಪಡ್ಡಾಯೂರು ಶ್ರೀ ಅನ್ನಪೂರ್ಣೇಶ್ವರಿ ಭಜನಾ ಮಂದಿರದಲ್ಲಿ ನಡೆದ 19ನೇ ವರ್ಷದ ನವರಾತ್ರಿ ಉತ್ಸವವನ್ನು ಉದ್ಘಾಟಿಸಿ ಮಾತನಾಡಿದರು. ಇನ್ನೊಬ್ಬರ ಕಷ್ಟಕ್ಕೆ ನೆರವಾಗುವುದೇ ಧರ್ಮ. ಜಾತಿಮತಗಳ ಭೇದವಿಲ್ಲದೆ ಎಲ್ಲರೊಂದಿಗೆ ಸಹೋದರ ಭಾವನೆಯಿಂದ ಬದುಕುವುದು ಮತ್ತು ಧರ್ಮಗಳ ನಡುವೆ

ಬಡವರ ಜೊತೆ ಸಹಭೋಜನ ಮಾಡುವ ಉದ್ದೇಶದಿಂದ ಸಾರಿ ವಿತರಣೆ: ಶಾಸಕ ಅಶೋಕ್ ರೈ Read More »

ಬಾವಿಯಲ್ಲಿ ಪತ್ತೆಯಾದ ಹೆಡ್’ಕಾನ್’ಸ್ಟೇಬಲ್ ಮೃತದೇಹ!

ಕಾರ್ಕಳ: ನಾಪತ್ತೆಯಾಗಿದ್ದ ಹೆಡ್ ಕಾನ್‍ ಸ್ಟೇಬಲ್ ರೊಬ್ಬರ ಮೃತದೇಹ ಬಾವಿಯಲ್ಲಿ ಪತ್ತೆಯಾಗಿದೆ. ಕಾರ್ಕಳ ನಗರ ಠಾಣೆಯ ಹೆಡ್ ಕಾನ್‍ಸ್ಟೇಬಲ್ ಶೃತಿನ್ ಶೆಟ್ಟಿ (35) ಎಂಬವರ ಮೃತದೇಹ ಬಾವಿಯಲ್ಲಿ ಪತ್ತೆಯಾಗಿದೆ.ಶೃತಿನ್ ಶೆಟ್ಟಿ ಅ.19 ರಂದು ನಾಪತ್ತೆಯಾಗಿದ್ದರು. ಸೋಮವಾರ ಕಾರ್ಕಳ ಪುಚ್ಚೇರಿ ಸಮೀಪದ ಬಾವಿಯಲ್ಲಿ ಮೃತದೇಹ ಪತ್ತೆಯಾಗಿದೆ. ಪೊಲೀಸರು ಅಸಹಜ ಸಾವು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಬಾವಿಯಲ್ಲಿ ಪತ್ತೆಯಾದ ಹೆಡ್’ಕಾನ್’ಸ್ಟೇಬಲ್ ಮೃತದೇಹ! Read More »

ಬೆಂಗಳೂರು ಕಂಬಳಕ್ಕೆ ಆಹ್ವಾನ

ಪುತ್ತೂರು: ಬೆಂಗಳೂರು ಕಂಬಳ ಸಮಿತಿ ವತಿಯಿಂದ ರಾಜ್ಯ ಸರ್ಕಾರದ ಯುವ ಸಬಲೀಕರಣ ಮತ್ತು ಕ್ರೀಡಾ ಸಚಿವ ಬಿ.ನಾಗೇಂದ್ರ ಹಾಗೂ ಮುಖ್ಯಮಂತ್ರಿಗಳ ಆಪ್ತ ಕಾರ್ಯದರ್ಶಿ ಗೋವಿಂದರಾಜ್ ಅವರನ್ನು ಭೇಟಿ ಮಾಡಿ ಕಂಬಳಕ್ಕೆ ಆಹ್ವಾನಿಸಲಾಯಿತು. ಬೆಂಗಳೂರು ಕಂಬಳ ಕುರಿತು ರೂಪರೇಷೆಗಳ ಬಗ್ಗೆ ಚರ್ಚಿಸಲಾಯಿತು. ಈ ಸಂದರ್ಭದಲ್ಲಿ ಪುತ್ತೂರು ಶಾಸಕ, ಬೆಂಗಳೂರು ಕಂಬಳ ಸಮಿತಿ ಅಧ್ಯಕ್ಷ ಅಶೋಕ್ ಕುಮಾರ್ ರೈ, ಕಾರ್ಯಾಧ್ಯಕ್ಷ ಗುರುಕಿರಣ್, ಉಪಾಧ್ಯಕ್ಷ ಬಿ.ಗುಣರಂಜನ್ ಶೆಟ್ಟಿ, ಪದಾಧಿಕಾರಿ ಉದಯ್ ಶೆಟ್ಟಿ ಉಪಸ್ಥಿತರಿದ್ದರು.

ಬೆಂಗಳೂರು ಕಂಬಳಕ್ಕೆ ಆಹ್ವಾನ Read More »

ದರ್ಬೆ: ಬೈಕುಗಳೆರಡು ಮುಖಾಮುಖಿ ಢಿಕ್ಕಿ

ಪುತ್ತೂರು: ಇಲ್ಲಿನ ದರ್ಬೆ ಬೈಪಾಸ್ ಜಂಕ್ಷನ್ ಬಳಿ ಬೈಕ್’ಗಳೆರಡು ಮುಖಾಮುಖಿ ಢಿಕ್ಕಿಯಾದ ಘಟನೆ ಸೋಮವಾರ ಮಧ್ಯಾಹ್ನ ನಡೆದಿದೆ. ಬೈಕ್ ಸವಾರರಿಬ್ಬರೂ ಗಾಯಗೊಂಡಿದ್ದು, ಪ್ರಥಮ ಚಿಕಿತ್ಸೆ ನೀಡಲಾಗಿದೆ. ಸ್ಥಳದಲ್ಲಿ ಸಾರ್ವಜನಿಕರು ಗಾಯಾಳುಗಳನ್ನು ಉಪಚರಿಸಿದರು.

ದರ್ಬೆ: ಬೈಕುಗಳೆರಡು ಮುಖಾಮುಖಿ ಢಿಕ್ಕಿ Read More »

‘ವಾಲ್ ಆಪ್ ಹ್ಯುಮೆನಿಟಿ’ ಸ್ವಚ್ಚತೆಯೊಂದಿಗೆ ಮಾನವೀಯತೆ

ಪುತ್ತೂರು: ಪ್ರತಿಯೊಬ್ಬರ ಮನೆಯಲ್ಲೂ ಉಪಯೋಗವಾಗದ ವಸ್ತುಗಳು ಇದ್ದೇ ಇರುತ್ತವೆ, ಅದರ ವಿಲೇವಾರಿಯೇ ಕಷ್ಟ. ಹೊಸ ವಸ್ತು ತಂದರೆ ಹಳೆವಸ್ತುಗಳು ಕೆಟ್ಟಿದ್ದರೂ ಅದನ್ನು ಎಸೆಯಲು ಮನಸ್ಸು ಬರುವುದಿಲ್ಲ ಅನಗತ್ಯ ಶೇಖರಣೆಯೂ ಅಸಾಧ್ಯ. ಇವೆಲ್ಲ ಚಿಂತೆಗಳನ್ನು ದೂರ ಮಾಡಲು, ಪರಿಹಾರ ಕಂಡುಕೊಳ್ಳಲು, ಇತ್ಯಾದಿಗಳಿಗೆ ಪರಿಹಾರವಾಗಿ ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನಲ್ಲಿ  ಕಳೆದ 5 ವರ್ಷಗಳಿಂದ ಸದ್ದಿಲ್ಲದೆ ಸೇವೆ ನೀಡುತ್ತಿರುವ ವ್ಯವಸ್ಥೆಯೇ ‘ವಾಲ್ ಆಪ್ ಹ್ಯುಮೆನಿಟಿ’ ರೋಟರಿ ಕ್ಲಬ್ ಪುತ್ತೂರು ಸೆಂಟ್ರಲ್ ಸ್ಥಾಪಕಾಧ್ಯಕ್ಷ ಸಂತೋಷ್ ಕುಮಾರ್ ಶೆಟ್ಟಿಯವರ ಕನಸಿಸ ಯೋಜನೆ ಇದಾಗಿದೆ.

‘ವಾಲ್ ಆಪ್ ಹ್ಯುಮೆನಿಟಿ’ ಸ್ವಚ್ಚತೆಯೊಂದಿಗೆ ಮಾನವೀಯತೆ Read More »

ಪಾಲ್ತಾಡಿ ಬಳಿ ಮದುವೆ ಟೆಂಪೋ ಪಲ್ಟಿ!!

ಪುತ್ತೂರು: ಬೆಳ್ಳಾರೆಯಿಂದ ಪುತ್ತೂರು ಮಾರ್ಗವಾಗಿ ಈಶ್ವರಮಂಗಲ ಕಡೆಗೆ ತೆರಳುತ್ತಿದ್ದ ಮದುವೆಯ ಟೆಂಪೋ ಪಾಲ್ತಾಡಿ ಬಳಿ ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾದ ಘಟನೆ ಆದಿತ್ಯವಾರ ನಡೆದಿದೆ. ಘಟನೆಯಲ್ಲಿ ಈಶ್ವರಮಂಗಲ ಮೂಲದ ವರನ ಕಡೆಯ ಸಂಬಂಧಿಕರಿಗೆ ಸಣ್ಣ ಪುಟ್ಟ ಗಾಯಗಳಾಗಿದ್ದು, ಟೆಂಪೋದಲ್ಲಿ ಹೆಚ್ಚಿನವರು ಮಹಿಳೆಯರಿದ್ದರು. ಪುತ್ತೂರು ಸರಕಾರಿ ಆಸ್ಪತ್ರೆಗೆ ಆಂಬುಲೆನ್ಸ್ ಮೂಲಕ ಕರೆ ತರಲಾಗಿದೆ ಎಂದು ತಿಳಿದುಬಂದಿದೆ. ಸ್ಥಳಕ್ಕೆ ಬೆಳ್ಳಾರೆ ಪೊಲೀಸರು ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ.

ಪಾಲ್ತಾಡಿ ಬಳಿ ಮದುವೆ ಟೆಂಪೋ ಪಲ್ಟಿ!! Read More »

ಪುತ್ತೂರರ್ದ ಪಿಲಿರಂಗ್ ಸೀಸನ್ 2ನಲ್ಲಿ ಸ್ಥಳೀಯ ವೇಷಧಾರಿಗಳಿಗೂ ಗೌರವ!

ಪುತ್ತೂರು: ಶಕುಂತಳಾ ಟಿ. ಶೆಟ್ಟಿ ಸಾರಥ್ಯದಲ್ಲಿ ಕಿಲ್ಲೆ ಮೈದಾನದಲ್ಲಿ ಪುತ್ತೂರ್ದ ಪಿಲಿರಂಗ್ ಸೀಸನ್ 2 ನಡೆಯುತ್ತಿದೆ. ಬೆಳಿಗ್ಗೆ ಗಣಹೋಮ ನಡೆದು, ಬಳಿಕ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಕೇಶವ ಪ್ರಸಾದ್ ಮುಳಿಯ ಅವರು ತುಳು ಧ್ವಜ ಅನಾವರಣಗೊಳಿಸಿದರು. ಶಾಸಕ ಅಶೋಕ್ ಕುಮಾರ್ ರೈ ಕಾರ್ಯಕ್ರಮ ಉದ್ಘಾಟನೆಗೊಳಿಸಿದರು. ಪಿಲಿರಂಗ್ ಕ್ರೀಡಾ ಸಮಿತಿ ನೇತೃತ್ವದಲ್ಲಿ ಜಿಲ್ಲೆಯ ವಿವಿಧ ತಂಡಗಳು ಕಿಲ್ಲೆ ಮೈದಾನದ ನಡುವಿನಲ್ಲಿ ಹಾಕಿರುವ ವಿಶಾಲ ವೇದಿಕೆಯಲ್ಲಿ ತಮ್ಮ ನೈಪುಣ್ಯವನ್ನು ಪ್ರದರ್ಶಿಸುತ್ತಿವೆ. ಇದರ ನಡುವೆ ಪುತ್ತೂರು

ಪುತ್ತೂರರ್ದ ಪಿಲಿರಂಗ್ ಸೀಸನ್ 2ನಲ್ಲಿ ಸ್ಥಳೀಯ ವೇಷಧಾರಿಗಳಿಗೂ ಗೌರವ! Read More »

ಕದ್ರಿ: ವೀಸಾ ಅವಧಿ ಮೀರಿದ ಆರೋಪದಡಿ ವಿದೇಶಿಯರು ವಶಕ್ಕೆ!

ಮಂಗಳೂರು: ವೀಸಾ ಅವಧಿ ಮೀರಿದ ಬಳಿಕವೂ ನಗರದಲ್ಲಿ ವಾಸವಾಗಿದ್ದ ಇಬ್ಬರು ವಿದೇಶಿಯರನ್ನು ಕದ್ರಿ ಪೊಲೀಸರು ವಶಕ್ಕೆ ಪಡೆದಿರುವುದಾಗಿ ಪೊಲೀಸ್ ಆಯುಕ್ತ ಅನುಪಮ್ ಅಗರ್ವಾಲ್ ತಿಳಿಸಿದ್ದಾರೆ. ಘಾನಾ ದೇಶದ ಸಲಾಂ ಕ್ರಿಸ್ಟೆನ್ ಮತ್ತು ನೈಜೀರಿಯಾದ ಅಂಕಿತೋಲ ವೀಸಾ ಅವಧಿ ಮೀರಿದ ಬಳಿಕವೂ ನಗರದಲ್ಲಿ ಉಳಕೊಂಡಿದ್ದರು ಎನ್ನಲಾಗಿದೆ. ‌ ಈ ಬಗ್ಗೆ ಮಾಹಿತಿ ಪಡೆದ ಪೊಲೀಸರು ಇಬ್ಬರನ್ನು ವಶಕ್ಕೆ ಪಡೆದು ವಿದೇಶಿಯರ ಪ್ರಾದೇಶಿಕ ನೋಂದಣಿ ಕಚೇರಿಗೆ ಹಸ್ತಾಂತರಿಸಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ.

ಕದ್ರಿ: ವೀಸಾ ಅವಧಿ ಮೀರಿದ ಆರೋಪದಡಿ ವಿದೇಶಿಯರು ವಶಕ್ಕೆ! Read More »

ಮತ್ತೊಂದು ಚುನಾವಣಾ ಟಿಕೆಟ್ ವಂಚನೆ ಪ್ರಕರಣ ಬೆಳಕಿಗೆ! | 2.55 ಕೋಟಿ ರೂ. ಪಂಗನಾಮ!

ಬೆಂಗಳೂರು: ರಾಜ್ಯದಲ್ಲಿ ಮತ್ತೊಂದು ಚುನಾವಣಾ ಟಿಕೆಟ್ ವಂಚನೆ ಪ್ರಕರಣ ಬೆಳಕಿಗೆ ಬಂದಿದ್ದು, ನಾಲ್ವರ ವಿರುದ್ಧ ಪೊಲೀಸ್ ಎಫ್ ಐಆರ್ ದಾಖಲಾಗಿದೆ. ಬಿಜೆಪಿ ಟಿಕೆಟ್ ಕೊಡಿಸುವುದಾಗಿ ಕೋಟಿ ಕೋಟಿ ವಂಚನೆ ಮಾಡಿರುವ ಪ್ರಕರಣ ಇದಾಗಿದ್ದು, ಕೊಟ್ಟೂರು ನಿವಾಸಿ, ನಿವೃತ್ತ ಎಂಜಿನಿಯರ್‌ ನೀಡಿರುವ ದೂರಿನ ಆಧಾರದ ಮೇಲೆ ಪೊಲೀಸರು ಪ್ರಕರಣ ದಾಖಲು ಮಾಡಿಕೊಂಡಿದ್ದಾರೆ. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಹಗರಿಬೊಮ್ಮನಹಳ್ಳಿ ಎಸ್‌ಸಿ ಮೀಸಲು ವಿಧಾನಸಭಾ ಕ್ಷೇತ್ರದ ಟಿಕೆಟ್ ಕೊಡಿಸುವುದಾಗಿ ಶಿವಮೂರ್ತಿ ಎಂಬುವವರಿಗೆ ನಾಲ್ವರ ತಂಡವು ವಂಚನೆ ಮಾಡಿರುವುದು ಬೆಳಕಿಗೆ ಬಂದಿದೆ. ಈ ಬಗ್ಗೆ

ಮತ್ತೊಂದು ಚುನಾವಣಾ ಟಿಕೆಟ್ ವಂಚನೆ ಪ್ರಕರಣ ಬೆಳಕಿಗೆ! | 2.55 ಕೋಟಿ ರೂ. ಪಂಗನಾಮ! Read More »

error: Content is protected !!
Scroll to Top