ತುಳು ಐಸಿರೊ: ಮೋನೆಗ್ ಅರದಲ ವಿಭಾಗದಲ್ಲಿ ಬೆಳಂದೂರು ಕಾಲೇಜು ಪ್ರಥಮ

ಬೆಳಂದೂರು: ಅಂತರ್ ಕಾಲೇಜು ತುಳು ಐಸಿರೊ 2023 ತುಳು ವೈವಿಧ್ಯ ಸ್ಪರ್ಧೆಯ ಮೋನೆಗ್ ಅರದಲ ವಿಭಾಗದಲ್ಲಿ ಬೆಳಂದೂರು ಸರಕಾರಿ ಪ್ರಥಮ ದರ್ಜೆ ಕಾಲೇಜಿನ ದೇವಿ ಪ್ರಸಾದ್ ಹಾಗೂ ಸಚಿನ್ ಪಿ. ಪ್ರಥಮ ಸ್ಥಾನ ಪಡೆದುಕೊಂಡಿದ್ದಾರೆ. ಮೋನೆಗ್ ಅರದಲ ವಿಭಾಗದಲ್ಲಿ ಯಕ್ಷಗಾನದ ಹಾಸ್ಯ ಮುಖವರ್ಣಿಕೆ ಎನ್ನುವ ವಿಷಯ ನೀಡಲಾಗಿತ್ತು. ದೇವಿ ಪ್ರಸಾದ್ ಹಾಗೂ ಸಚಿನ್ ಪಿ. ಅವರಿಗೆ ಕಾಲೇಜಿನ ಸಾಂಸ್ಕೃತಿಕ ಸಂಚಾಲಕಿ ದೀಪ್ತಿ ಎ.ಸಿ. ಮಾರ್ಗದರ್ಶನ ನೀಡಿದ್ದರು. ಮಂಗಳೂರಿನ ರಥಬೀದಿಯಲ್ಲಿರುವ ಡಾ| ಪಿ. ದಯಾನಂದ ಪೈ – ಪಿ […]

ತುಳು ಐಸಿರೊ: ಮೋನೆಗ್ ಅರದಲ ವಿಭಾಗದಲ್ಲಿ ಬೆಳಂದೂರು ಕಾಲೇಜು ಪ್ರಥಮ Read More »

ಚೈತ್ರಾ ಕುಂದಾಪುರ ಮೇಲೆ ಹಲ್ಲೆ!!

ಬೆಂಗಳೂರು: ವಂಚನೆ ಪ್ರಕರಣದಲ್ಲಿ ಜೈಲು ಸೇರಿರುವ ಚೈತ್ರಾ ಕುಂದಾಪುರ ಅವರಿಗೆ ಜೈಲಿನಲ್ಲಿದ್ದರೂ ಸಂಕಷ್ಟ ಮಾತ್ರ ತಪ್ಪಿಲ್ಲ. ಪರಪ್ಪನ ಅಗ್ರಹಾರದಲ್ಲಿ ಚೈತ್ರಾ ಕುಂದಾಪುರ ಮೇಲೆ ಹಲ್ಲೆ ಮಾಡಲಾಗಿದೆ. ಮಹಿಳಾ‌ ವಿಚಾರಣಾಧೀನ ಕೈದಿಗಳ ಬ್ಯಾರಕ್‌ನಲ್ಲಿ ಆಫ್ರಿಕನ್ ಮಹಿಳಾ ಕೈದಿಗಳು ಚೈತ್ರಾ ಮೇಲೆ ಅಟ್ಯಾಕ್ ಮಾಡಿದ್ದಾರೆ ಎಂದು ತಿಳಿದುಬಂದಿದೆ. ಭಾನುವಾರ ಮಧ್ಯಾಹ್ನ ರಾಷ್ಟ್ರಗೀತೆ ವಿಚಾರಕ್ಕೆ ಆಫ್ರಿಕನ್ ಮಹಿಳಾ ಕೈದಿಗಳು ಹಾಗೂ ಚೈತ್ರಾ ನಡುವೆ ಮಾತಿನ ಚಕಮಕಿ ನಡೆದಿದೆ. ಈ ವೇಳೆ ಚೈತ್ರಾ ಮೇಲೆ ಅಟ್ಯಾಕ್ ಮಾಡಿದ್ದಾರೆ ಆಫ್ರಿಕನ್ ಮಹಿಳಾ ಕೈದಿಗಳು. ಚೈತ್ರಾ

ಚೈತ್ರಾ ಕುಂದಾಪುರ ಮೇಲೆ ಹಲ್ಲೆ!! Read More »

ಚೆನ್ನಾಗಿ ಕಾಣುತ್ತಿಲ್ಲವೆಂದು 6ನೇ ಮಹಡಿಯಿಂದ ಹಾರಿ ಆತ್ಮಹತ್ಯೆಗೈದರೇ ವೈದ್ಯಕೀಯ ವಿದ್ಯಾರ್ಥಿನಿ?

ಮಂಗಳೂರು: ನಗರದ ಖಾಸಗಿ ಶಿಕ್ಷಣ ಸಂಸ್ಥೆಯೊಂದರ ಎಂಬಿಬಿಎಸ್ ಕಲಿಯುವ ವಿದ್ಯಾರ್ಥಿನಿಯೊಬ್ಬರು ಹಾಸ್ಟೆಲ್ ಕಟ್ಟಡದಿಂದ ಹಾರಿ ಆತ್ಮಹತ್ಯೆಗೈದ ಘಟನೆ ಸೋಮವಾರ ಮುಂಜಾನೆ ನಡೆದಿದೆ. ಆತ್ಮಹತ್ಯೆಗೈದ ವಿದ್ಯಾರ್ಥಿನಿಯನ್ನು ಪ್ರಕೃತಿ ಶೆಟ್ಟಿ (20) ಎಂದು ಗುರುತಿಸಲಾಗಿದೆ. ಈ ವಿದ್ಯಾರ್ಥಿನಿಯು ಮೆಡಿಕಲ್ ಕಾಲೇಜಿಗೆ ಸಂಬಂಧಿಸಿದ ಹಾಸ್ಟೆಲ್‌ನಲ್ಲಿದ್ದರು‌‌‌. “ತಾನು ತುಂಬಾ ತೋರ ಇದ್ದು, ಚೆನ್ನಾಗಿ ಕಾಣುತ್ತಿಲ್ಲ. ಇದರಿಂದ ಜೀವನದಲ್ಲಿ ಜಿಗುಪ್ಸೆ ಹೊಂದಿ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದೇನೆ” ಎಂದು ಡೆತ್ ನೋಟಿನಲ್ಲಿ ಬರೆದಿದ್ದಾರೆ. ಸೋಮವಾರ ಮುಂಜಾನೆ ಸುಮಾರು 3 ಗಂಟೆಗೆ ಹಾಸ್ಟೆಲ್ ಕಟ್ಟಡದ 6ನೆ ಮಹಡಿಯಿಂದ ಹಾರಿ

ಚೆನ್ನಾಗಿ ಕಾಣುತ್ತಿಲ್ಲವೆಂದು 6ನೇ ಮಹಡಿಯಿಂದ ಹಾರಿ ಆತ್ಮಹತ್ಯೆಗೈದರೇ ವೈದ್ಯಕೀಯ ವಿದ್ಯಾರ್ಥಿನಿ? Read More »

ಪ್ರತಿಭಾ ಕಾರಂಜಿ: ಸಜಂಕಾಡಿ ಶಾಲೆಯ ನಾಲ್ವರು ತಾಲೂಕು ಮಟ್ಟಕ್ಕೆ

ಪುತ್ತೂರು: ಕ್ಷೇತ್ರ ಶಿಕ್ಷಣಾಧಿಕಾರಿಯವರ ಕಚೇರಿ ಮತ್ತು ಕ್ಷೇತ್ರ ಸಂಪನ್ಮೂಲ ಕೇಂದ್ರ, ಕುಂಬ್ರ ಸಮೂಹ ಸಂಪನ್ಮೂಲ ಕೇಂದ್ರದ ಆಶ್ರಯದಲ್ಲಿ ಪಟ್ಟೆ ಶ್ರೀಕೃಷ್ಣ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆದ 2023-24ನೇ ಸಾಲಿನ  ಕುಂಬ್ರ ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ ಸ್ಪರ್ಧೆಯಲ್ಲಿ ಸಜಂಕಾಡಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳು ಪ್ರಶಸ್ತಿಗಳನ್ನು ಪಡೆದುಕೊಂಡಿದ್ದಾರೆ. 6ನೇ ತರಗತಿಯ ಮಹಮ್ಮದ್ ಹಿಶಾಮ್ ಆಶುಭಾಷಣದಲ್ಲಿ ಪ್ರಥಮ, 3ನೇ ತರಗತಿಯ ಫಾತಿಮತ್ ಅಫೀಪ ಧಾರ್ಮಿಕ ಫಠಣ ಅರೇಬಿಕಿನಲ್ಲಿ ಪ್ರಥಮ, 4ನೇ ತರಗತಿಯ ಫಾತಿಮತ್ ಪಾಝಿಲ ಇಂಗ್ಲೀಷ್ ಕಂಠಪಾಠ

ಪ್ರತಿಭಾ ಕಾರಂಜಿ: ಸಜಂಕಾಡಿ ಶಾಲೆಯ ನಾಲ್ವರು ತಾಲೂಕು ಮಟ್ಟಕ್ಕೆ Read More »

ಬೆಟ್ಟಂಪಾಡಿಯಲ್ಲಿ ಯಕ್ಷಗಾನ ಉಚಿತ ತರಬೇತಿ ತರಗತಿ ಉದ್ಘಾಟನೆ

ಬೆಟ್ಟಂಪಾಡಿ: ಇಲ್ಲಿನ ಶ್ರೀ ಮಂಜುನಾಥೇಶ್ವರ ಭಜನಾ ಮಂದಿರದಲ್ಲಿ ಉಚಿತ ಯಕ್ಷಗಾನ ತರಬೇತಿ ತರಗತಿ ನ. 12ರಂದು ಆರಂಭಗೊಂಡಿತು. ಯಕ್ಷಗಾನ ಗುರು ಶಶಿಕಿರಣ್ ಕಾವು ದೀಪ ಪ್ರಜ್ವಲಿಸಿ ಉದ್ಘಾಟಿಸಿ ಶುಭ ಹಾರೈಸಿದರು. ವೇದಿಕೆಯಲ್ಲಿ ಶಿವಾಜಿ ಗೆಳೆಯರ ಬಳಗದ ಅಧ್ಯಕ್ಷ ರಾಧಕೃಷ್ಣ ನಾಯಕ್, ಕಾರ್ಯದರ್ಶಿ ಭಾಸ್ಕರ್ ಎಂ.ಎಸ್, ಮಂಜುನಾಥೇಶ್ವರ ಭಜನಾ ಮಂಡಳಿ ಗೌರವಾಧ್ಯಕ್ಷ ನಾರಾಯಣ ಬೆಟ್ಟಂಪಾಡಿ, ಭಜನಾ ಮಂಡಳಿಯ ಅಧ್ಯಕ್ಷ ಅವಿನ್ ಬೆಟ್ಟಂಪಾಡಿ, ಸನತ್ ಬರಮೇಲು ಉಪಸ್ಥಿತರಿದ್ದರು. ಬಳಿಕ ಯಕ್ಷಗಾನ ಗುರು ಶಶಿಕುಮಾರ್ ಕಾವು ಅವರು ತರಬೇತಿ ಕಾರ್ಯಾಗಾರ ನಡೆಸಿದರು.

ಬೆಟ್ಟಂಪಾಡಿಯಲ್ಲಿ ಯಕ್ಷಗಾನ ಉಚಿತ ತರಬೇತಿ ತರಗತಿ ಉದ್ಘಾಟನೆ Read More »

ಥಿಯೇಟರ್ ಒಳಗಡೆ ಸಿಡಿದ ಪಟಾಕಿ: ಪ್ರೇಕ್ಷಕರು ಕಂಗಾಲು!!

ಅಮರಾವತಿ: ಸಿನಿಮಾ ಅಭಿಮಾನಿಗಳ ಅತಿರೇಕದ ವರ್ತನೆಗೆ ಪ್ರೇಕ್ಷಕರು ಕಂಗಾಲಾದ ಘಟನೆ ಟೈಗರ್ 3 ಸಿನಿಮಾ ಪ್ರದರ್ಶನದ ವೇಳೆ ನಡೆದಿದೆ. ಆಂಧ್ರ ಪ್ರದೇಶದ ಥಿಯೇಟರ್ ಒಂದರಲ್ಲಿ ಘಟನೆ ನಡೆದಿದ್ದು, ಥಿಯೇಟರ್ ಒಳಗಡೆಯೇ ಅಭಿಮಾಣಿಗಳು ಪಟಾಕಿ ಸಿಡಿಸಿದ್ದಾರೆ. ಇದ್ದಕ್ಕಿದ್ದಂತೆ ಪಟಾಕಿ ಸಿಡಿದ ಕಾರಣ ಪ್ರೇಕ್ಷಕರು ಏನಾಗುತ್ತಿದೆ ಎನ್ನುವುದು ತಿಳಿಯದಂತಾಗಿ, ಧಿಕ್ಕೆಟ್ಟು ಓಡಿದರು. ಘಟನೆಯಿಂದ ಥಿಯೇಟರಿಗೆ ಹಾನಿಯಾಗಿದ್ದು, ಅಭಿಮಾನಿಗಳ ಅತಿರೇಕದ ವರ್ತನೆಗೆ ಆಕ್ರೋಶ ವ್ಯಕ್ತವಾಗಿದೆ.

ಥಿಯೇಟರ್ ಒಳಗಡೆ ಸಿಡಿದ ಪಟಾಕಿ: ಪ್ರೇಕ್ಷಕರು ಕಂಗಾಲು!! Read More »

ದೀಪಾವಳಿ ಪಟಾಕಿಗೆ 8 ಬೋಟುಗಳು ಭಸ್ಮ! | ಮಂಕಾದ ಕಡಲ ಮಕ್ಕಳ ಹಬ್ಬದ ಸಡಗರ!

ಉಡುಪಿ: ದೀಪಾವಳಿ ಸಡಗರದಲ್ಲಿದ್ದ ಕಡಲ ಮಕ್ಕಳ ಪೂಜೆ ಸಂದರ್ಭ 8 ಬೋಟುಗಳಿಗೆ ಬೆಂಕಿ ತಗುಲಿದ ಘಟನೆ ಗಂಗೊಳ್ಳಿಯಲ್ಲಿ ನಡೆದಿರುವ ಬಗ್ಗೆ ವರದಿಯಾಗಿದೆ. ದೀಪಾವಳಿ ಸಂದರ್ಭ ಪೂಜೆ ನಡೆಯುತ್ತಿತ್ತು. ಈ ಸಂದರ್ಭ ಪಟಾಕಿ ಸಿಡಿಸಿದ್ದು, ಪಟಾಕಿಯಿಂದ ಸಿಡಿದ ಕಿಡಿ ಬೋಟುಗಳಿಗೆ ತಗುಲಿದೆ. ಬೋಟಿನಿಂದ ಬೋಟಿಗೆ ಬೆಂಕಿ ಪಸರಿಸಿ ಒಟ್ಟು 8 ಬೋಟುಗಳು ಸುಟ್ಟು ಹೋಗಿವೆ. ಕೋಟ್ಯಾಂತರ ರೂ. ನಷ್ಟ ಸಂಭವಿಸಿದೆ ಎಂದು ಅಂದಾಜಿಸಲಾಗಿದೆ. ಸ್ಥಳೀಯ ಅಗ್ನಿಶಾಮಕ ದಳ ಕಾರ್ಯಾಚರಣೆ ನಡೆಸಿದ್ದು, ಹೆಚ್ಚಿನ ಅವಘಡವನ್ನು ತಪ್ಪಿಸಿದ್ದಾರೆ.

ದೀಪಾವಳಿ ಪಟಾಕಿಗೆ 8 ಬೋಟುಗಳು ಭಸ್ಮ! | ಮಂಕಾದ ಕಡಲ ಮಕ್ಕಳ ಹಬ್ಬದ ಸಡಗರ! Read More »

ಫೋಟೊ ಶೂಟ್ ವೇಳೆ ಯುವಕನಿಗೆ ಅಪರಿಚಿತರಿಂದ ಚೂರಿ ಇರಿತ | ಯುವಕ ಮೃತ್ಯು

ಬೆಂಗಳೂರು: ಅಪರಿಚಿತರ ಗುಂಪೊಂದು ಯುವಕನೊಬ್ಬನಿಗೆ ಚೂರಿಯಿಂದ ಇರಿದು ಹತ್ಯೆ ಮಾಡಿದ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ತಾಲೂಕಿನ ರಾಮೇಶ್ವರ ಸಮೀಪ ರೆಸ್ಟೋರೆಂಟ್ ಒಂದರಲ್ಲಿ ನಡೆದಿದೆ. ಸೂರ್ಯ (22) ಹತ್ಯೆಯಾದ ಯುವಕ. ಭಾನುವಾರ ರಾಮೇಶ್ವರ ಸಮೀಪದ ರೆಸ್ಟೋರೆಂಟ್ ಒಂದಲ್ಲಿ ಸೂರ್ಯ ನಾಲ್ವರು ಸ್ನೇಹಿತರೊಂದಿಗೆ ಫೋಟೊ ಶೂಟ್ ಮಾಡುತ್ತಿದ್ದ ವೇಳೆ ಅಪರಿಚಿತರ ಗುಂಪೊಂದು ಅವರ ಜತೆ ಕಿರಿಕ್ ತೆಗೆದಿದೆ. ಅಪರಿಚಿತರ ತಂಡ ಫೋಟೋ ತೆಗೆದಿದ್ದ ಕ್ಯಾಮೆರಾ ಕಿತ್ತುಕೊಂಡು ನಾಲ್ವರು ಯುವಕರ ಮೇಲೆ ಹಲ್ಲೆ ಮಾಡಿ, ಸೂರ್ಯನಿಗೆ ಚಾಕುವಿನಿಂದ ಇರಿದಿದ್ದಾರೆ.

ಫೋಟೊ ಶೂಟ್ ವೇಳೆ ಯುವಕನಿಗೆ ಅಪರಿಚಿತರಿಂದ ಚೂರಿ ಇರಿತ | ಯುವಕ ಮೃತ್ಯು Read More »

ವಿಷ ಸೇವಿಸಿ ಆತ್ಮಹತ್ಯೆ | ಸಾವಿಗೆ ಶರಣಾದ ಲೋಕಯ್ಯ

ಕಾಣಿಯೂರು: ವ್ಯಕ್ತಿಯೊಬ್ಬರು ವಿಪರೀತ ಮದ್ಯ ಸೇವನೆಯಿಂದ ಮೃತಪಟ್ಟ ಘಟನೆ ಕಾಣಿಯೂರಿನಲ್ಲಿ ನಡೆದಿದೆ. ಕಡಬ ತಾಲೂಕಿನ ಕಾಣಿಯೂರು ಗ್ರಾಮದ ಅಬ್ಬಡದ ಲೋಕಯ್ಯ (43 ವರ್ಷ) ಮೃತಪಟ್ಟವರು. ಕಳೆದ 20 ವರ್ಷಗಳ ಹಿಂದೆ ಅವರು ಶೋಭಾ ಎಂಬವರ ಜೊತೆ ವಿವಾಹವಾಗಿದ್ದರು. ಆದರೆ ಸಂತಾನ ಭಾಗ್ಯ ಒಲಿದು ಬಂದಿರಲಿಲ್ಲ. ಇದರಿಂದ ನೊಂದು ಮದ್ಯ ಸೇವನೆ ಮಾಡಲು ಶುರು ಮಾಡಿಕೊಂಡಿದ್ದರು. ಇತ್ತೀಚೆಗೆ ಸುಮಾರು 4 ವರ್ಷಗಳಿಂದ ಲೋಕಯ್ಯ ಗೌಡರು ಕೂಲಿ ಕೆಲಸಕ್ಕೆ ಹೋಗದೇ ಮನೆಯಲ್ಲಿಯೇ ಇದ್ದು, ಮದ್ಯ ಸೇವನೆ ಅಧಿಕವಾಗಿ ಸಮಯಕ್ಕೆ ಸರಿಯಾಗಿ

ವಿಷ ಸೇವಿಸಿ ಆತ್ಮಹತ್ಯೆ | ಸಾವಿಗೆ ಶರಣಾದ ಲೋಕಯ್ಯ Read More »

ಬೆಟ್ಟಂಪಾಡಿ ಮಂಜುನಾಥೇಶ್ವರ ಭಜನಾ ಮಂದಿರದಲ್ಲಿ ಯಕ್ಷಗಾನ ತರಬೇತಿ ತರಗತಿ ಆರಂಭ

ಪುತ್ತೂರು: ಬೆಟ್ಟಂಪಾಡಿ ಶ್ರೀ ಮಂಜುನಾಥೇಶ್ವರ ಭಜನಾ ಮಂದಿರ, ಹಳೆಗೇಟು ಶಿವಾಜಿ ಯುವ ವೃಂದ ಹಾಗೂ ಶಿವಾಜಿ ಗೆಳೆಯರ ಬಳಗದ ಸಂಯುಕ್ತ ಆಶ್ರಯದಲ್ಲಿ ಉಚಿತ ಯಕ್ಷಗಾನ ತರಬೇತಿ ಶಿಬಿರ ಬೆಟ್ಟಂಪಾಡಿ ಶ್ರೀ ಮಂಜುನಾಥೇಶ್ವರ ಭಜನಾ ಮಂದಿರದಲ್ಲಿ ಆರಂಭಗೊಂಡಿತು. ಮುಖೇಶ್ ಬೆಟ್ಟಂಪಾಡಿ ಅವರ ಸಂಯೋಜನೆಯಲ್ಲಿ ಉಚಿತ ಯಕ್ಷಗಾನ ತರಬೇತಿ ಶಿಬಿರವನ್ನು ಯಕ್ಷಗಾನ ಗುರು ಶಶಿಕಿರಣ್ ಕಾವು ದೀಪ ಪ್ರಜ್ವಲಿಸಿ ಉದ್ಘಾಟಿಸಿ ಶುಭ ಹಾರೈಸಿದರು. ವೇದಿಕೆಯಲ್ಲಿ ಶಿವಾಜಿ ಗೆಳೆಯರ ಬಳಗದ ಅಧ್ಯಕ್ಷ ರಾಧಕೃಷ್ಣ ನಾಯಕ್, ಕಾರ್ಯದರ್ಶಿ ಭಾಸ್ಕರ್ ಎಂ.ಎಸ್,ಮಂಜುನಾಥೇಶ್ವರ ಭಜನಾ ಮಂಡಳಿಯ

ಬೆಟ್ಟಂಪಾಡಿ ಮಂಜುನಾಥೇಶ್ವರ ಭಜನಾ ಮಂದಿರದಲ್ಲಿ ಯಕ್ಷಗಾನ ತರಬೇತಿ ತರಗತಿ ಆರಂಭ Read More »

error: Content is protected !!
Scroll to Top