ಕನ್ನಡಪ್ರಭ ಪತ್ರಿಕೆಯ ಮಂಗಳೂರು ಆವೃತ್ತಿಯ ಬೆಳ್ಳಿಹಬ್ಬ ಸಂಭ್ರಮ: ಜಯಂತ್ ನಡುಬೈಲು ಅವರಿಗೆ ಸನ್ಮಾನ

ಮಂಗಳೂರು: ಕನ್ನಡಪ್ರಭ ಪತ್ರಿಕೆಯ ಮಂಗಳೂರು ಆವೃತ್ತಿಯ ಬೆಳ್ಳಿಹಬ್ಬ ಸಂಭ್ರಮವು ಮಂಗಳೂರು ಬಳಿಯ ಮರೋಳಿ ಸೂರ್ಯವುಡ್ಸ್‌ನಲ್ಲಿ ನಡೆಯಿತು. ಈ ಸಂದರ್ಭದಲ್ಲಿ ಪುತ್ತೂರಿನ ಅಕ್ಷಯ ಸಮೂಹ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಜಯಂತ್ ನಡುಬೈಲು ಅವರನ್ನು ಶಿಕ್ಷಣ ಕ್ಷೇತ್ರದಲ್ಲಿ ಸಲ್ಲಿಸಿರುವ ವಿಶಿಷ್ಟ ಸೇವೆಗಾಗಿ ಕನ್ನಡಪ್ರಭ ಹಾಗೂ ಏಷ್ಯಾನೆಟ್ ಸುವರ್ಣ ನ್ಯೂಸ್ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು. ಗ್ರಾಮೀಣ ವಿದ್ಯಾರ್ಥಿಗಳಿಗೆ ಉದ್ಯೋಗಪೂರಕ ಹಾಗೂ ಆಧುನಿಕ ಶಿಕ್ಷಣ ಒದಗಿಸುವ ಉದ್ದೇಶದಿಂದ 2019ರಲ್ಲಿ ಅಕ್ಷಯ ಎಜುಕೇಶನಲ್ & ಚಾರಿಟೇಬಲ್ ಟ್ರಸ್ಟ್ ಮೂಲಕ ಅಕ್ಷಯ ಕಾಲೇಜು ಸ್ಥಾಪಿಸಿದ ಅವರು, […]

ಕನ್ನಡಪ್ರಭ ಪತ್ರಿಕೆಯ ಮಂಗಳೂರು ಆವೃತ್ತಿಯ ಬೆಳ್ಳಿಹಬ್ಬ ಸಂಭ್ರಮ: ಜಯಂತ್ ನಡುಬೈಲು ಅವರಿಗೆ ಸನ್ಮಾನ Read More »

ಪರಿಶಿಷ್ಟ ಪಂಗಡಗಳ ಕಾಲನಿಗಳ ಅಭಿವೃದ್ಧಿಗೆ ಸರ್ಕಾರದಿಂದ ಅನುದಾನ: ಅಶೋಕ್ ಕುಮಾರ್ ರೈ ಹರ್ಷ

ಪುತ್ತೂರು: ಸರ್ಕಾರ ಪುತ್ತೂರು ವಿಧಾನಸಭಾ ಕ್ಷೇತ್ರಕ್ಕೆ ಸಂಬಂಧಿಸಿದ ಪರಿಶಿಷ್ಟ ಪಂಗಡ ಕಾಲನಿಗಳ ಅಭಿವೃದ್ಧಿಗೆ ಅನುದಾನಕ್ಕಾಗಿ ಶಾಸಕ ಅಶೋಕ್ ರೈ ಅವರು ಸಲ್ಲಿಸಿದ್ದ ಮನವಿಗೆ ‌ಸಕಾರಾತ್ಮಕ ಸ್ಪಂದನ ನೀಡಿದೆ. ಪುತ್ತೂರು ವಿಧಾನಸಭಾ ಕ್ಷೇತ್ರದ ಬಹುತೇಕ ಪ.ಪಂ. ಕಾಲೋನಿಗಳು ಅಭಿವೃದ್ಧಿಯಿಂದ ವಿಮುಖವಾಗಿವೆ. ಅಶೋಕ್ ರೈ ಅವರು ಚುನಾವಣಾ ಸಮಯದಲ್ಲಿ ಅವುಗಳ ಅಭಿವೃದ್ಧಿಯ ಭರವಸೆ ನೀಡಿದ್ದರು. ಈ ಹಿಂದೆಯೂ ಅವರು ಅಭಿವೃದ್ಧಿ ಮಾಡಲು ಅನುದಾನ ನೀಡಿದ್ದು, ಹೆಚ್ಚಿನ ಅನುದಾನಕ್ಕಾಗಿ ಸರ್ಕಾರಕ್ಕೆ ಮನವಿ ಮಾಡಿದ್ದರು. ಈ ಹಿನ್ನೆಲೆ ಸರ್ಕಾರ ಒಂದು ಕೋಟಿ ರೂ.

ಪರಿಶಿಷ್ಟ ಪಂಗಡಗಳ ಕಾಲನಿಗಳ ಅಭಿವೃದ್ಧಿಗೆ ಸರ್ಕಾರದಿಂದ ಅನುದಾನ: ಅಶೋಕ್ ಕುಮಾರ್ ರೈ ಹರ್ಷ Read More »

ಡಿಪ್ಲೊಮಾ ವಿದ್ಯಾರ್ಥಿ ಆತ್ಮಹತ್ಯೆ

ತುಮಕೂರು: ನಾನು ಈ ಜಗತ್ತನ್ನೇ ಬಿಟ್ಟು ಹೋಗುತ್ತೇನೆ, ನೀನು ಚೆನ್ನಾಗಿರು ಎಂದು ಸ್ಟೇಟಸ್ ಹಾಕಿ ವಿದ್ಯಾರ್ಥಿಯೊಬ್ಬ ಆತ್ಮಹತ್ಯೆಗೆ ಶರಣಾದ ಘಟನೆ ನಡೆದಿದೆ. ತುರುವೇಕೆರೆಯಲ್ಲಿ ಡಿಪ್ಲೋಮಾ ಓದುತ್ತಿದ್ದ ವಿದ್ಯಾರ್ಥಿ, ಗೋಪ್ಪೇನಹಳ್ಳಿ ಗ್ರಾಮದ ಧನುಷ್(19) ಮೃತ ಯುವಕ. ಈತ ದ್ವಿತೀಯ ವರ್ಷದ ಡಿಪ್ಲೊಮಾ ವಿದ್ಯಾರ್ಥಿ. ಕಾಲೇಜಿಗೆ ಹೋಗಿ ಬರುತ್ತೇನೆ ಎಂದು ಹೇಳಿ ಹೋಗಿದ್ದ ಧನುಷ್ ಎಷ್ಟು ಹೊತ್ತಾದರೂ ಮನೆಗೆ ಬಂದಿಲ್ಲ. ಮನೆಯಿಂದ ಫೋನ್ ಮಾಡಿದಾಗಲೂ ಅದಕ್ಕೆ ಉತ್ತರಿಸಿಲ್ಲ. ಇದರಿಂದ ಗಾಬರಿಯಾದ ಮನೆಯವರು ಹುಡುಕಾಟ ನಡೆಸಿದ್ದಾರೆ. ಈತ ತನ್ನ ಮೊಬೈಲ್‌ನಲ್ಲಿ ನಾನು

ಡಿಪ್ಲೊಮಾ ವಿದ್ಯಾರ್ಥಿ ಆತ್ಮಹತ್ಯೆ Read More »

ಸಿ ಎಂ ವಿಷಯದಲ್ಲಿ ತೀರ್ಮಾನ ಹೈಕಮಾಂಡ್‌ನದ್ದು: ಡಾ. ಜಿ. ಪರಮೇಶ್ವರ್

ಬೆಂಗಳೂರು: ಸಿ ಎಂ ಆಯ್ಕೆ ವಿಷಯ ಹೈಕಮಾಂಡ್‌ಗೆ ಬಿಟ್ಟಿದ್ದು. ಅದರಲ್ಲಿ ಯಾವುದೇ ರೀತಿಯಲ್ಲಿ ತಾವು ಲಾಬಿ ನಡೆಸಿಲ್ಲ ಎಂದು ಗೃಹ ಸಚಿವ ಡಾ. ಜಿ. ಪರಮೇಶ್ವರ್ ಹೇಳಿದ್ದಾರೆ. ಸಿ ಎಂ ಆಗಬೇಕು ಎನ್ನುವ ಅಭಿಮಾನಿಗಳು ಕೂಗುತ್ತಿರುವ ಘೋಷಣೆಯ ಬಗ್ಗೆ ಪ್ರತಿಕ್ರಿಯೆ ನೀಡಿದ ಅವರು, ಈ ವಿಷಯದಲ್ಲಿ ಯಾವ ಗೊಂದಲಕ್ಕೂ ಒಳಗಾಗಲು ಬಯಸುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಹಾಗೆಯೇ ನವದೆಹಲಿಗೆ ಹೋಗಿ ನಾನು ಯಾರನ್ನೂ ಭೇಟಿ ಮಾಡಿಲ್ಲ. ಕೆಲವರು ವ್ಯಕ್ತಪಡಿಸುವ ಅಭಿಪ್ರಾಯಗಳಿಗೆ ತಾವೇನೂ ಮಾಡಲು ಸಾಧ್ಯವಿಲ್ಲ. ಇಂತಹ ಚರ್ಚೆಗೆ ನಾನು

ಸಿ ಎಂ ವಿಷಯದಲ್ಲಿ ತೀರ್ಮಾನ ಹೈಕಮಾಂಡ್‌ನದ್ದು: ಡಾ. ಜಿ. ಪರಮೇಶ್ವರ್ Read More »

ಅಕ್ರಮ ಕೆಂಪು ಕಲ್ಲು ಸಾಗಾಟ: ಚಾಲಕರ ಸಮೇತ ಲಾರಿಗಳು ಪೊಲೀಸರ ವಶಕ್ಕೆ

ವಿಟ್ಲ: ಲೈಸನ್ಸ್ ಇಲ್ಲದೆ ಕೇರಳದಿಂದ ಕೆಂಪು ಕಲ್ಲುಗಳ ಸಾಗಾಟ ಮಾಡುತ್ತಿದ್ದ ಎರಡು ಲಾರಿಗಳನ್ನು ವಿಟ್ಲ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಪೆರುವಾಯಿ ಮಾರ್ಗವಾಗಿ ಕೇರಳದಿಂದ ‌ಲಾರಿಗಳ ಮೂಲಕ ಕೆಂಪು ಕಲ್ಲುಗಳನ್ನು ಸಾಗಾಟ ಮಾಡುತ್ತಿರುವ ಬಗ್ಗೆ ಪೊಲೀಸರಿಗೆ ಖಚಿತ ಮಾಹಿತಿ ಬಂದಿತ್ತು. ಬಂಟ್ವಾಳ ಬೆರಿಪದವು ಪ್ರದೇಶದಲ್ಲಿ ಕಲ್ಲಿನ ಲೋಡ್ ತುಂಬಿದ್ದ ಲಾರಿಗಳನ್ನು ಪರಿಶೀಲನೆ ನಡೆಸಿ, ಪೊಲೀಸರು ವಶಕ್ಕೆ ಪಡೆದಿದ್ದಾರೆ. ಲಾರಿ ಚಾಲಕರಾದ ವಿಟ್ಲದ ಸಾಧಿಕ್ ಮತ್ತು ಮೊಹಮ್ಮದ್ ಅವರನ್ನು ವಿಚಾರಣೆ ನಡೆಸಲಾಗಿದ್ದು, ಕೇರಳದ ಧರ್ಮತ್ತಡ್ಕದಿಂದ ಕಲ್ಲುಗಳನ್ನು ತುಂಬಿ ವೇಣು ಎಂಬವರು

ಅಕ್ರಮ ಕೆಂಪು ಕಲ್ಲು ಸಾಗಾಟ: ಚಾಲಕರ ಸಮೇತ ಲಾರಿಗಳು ಪೊಲೀಸರ ವಶಕ್ಕೆ Read More »

ಎರಡು ವರ್ಷಗಳಿಂದ ವಿದೇಶದಲ್ಲಿ ತಲೆಮರೆಸಿಕೊಂಡಿದ್ದ ಇಬ್ರಾಹಿಂ ಬಾತಿಸ್ ಪೊಲೀಸ್ ಬಲೆಗೆ

ವಿಟ್ಲ: ಪ್ರಕರಣವೊಂದಕ್ಕೆ ಸಂಬಂಧಿಸಿದ ಹಾಗೆ ನ್ಯಾಯಾಲಯಕ್ಕೆ ಹಾಜರಾಗದೆ ಕಳೆದ ಎರಡು ವರ್ಷಗಳಿಂದ ವಿದೇಶದಲ್ಲಿ ತಲೆಮರೆಸಿಕೊಂಡಿದ್ದ ಆರೋಪಿಯನ್ನು ಪೊಲೀಸರು ವಿಮಾನ ನಿಲ್ದಾಣದಲ್ಲೇ ಬಂಧಿಸಿದ್ದಾರೆ. ಆರೋಪಿಯನ್ನು ಕನ್ಯಾನ ನಿವಾಸಿ ಇಬ್ರಾಹಿಂ ಬಾತಿಸ್ ಎಂದು ಗುರುತಿಸಲಾಗಿದೆ. ಐಪಿಸಿ ಕಲಂ 427, 504, 394, 341 ಹಾಗೂ 2(A) Prevention of Destruction and Loss of Property Act ದಾಖಲಾಗಿರುವ ಪ್ರಕರಣದಲ್ಲಿ ಆರೋಪಿಯಾಗಿರುವ ಈತ ವಿದೇಶದಿಂದ ಮರಳಿ ಬರುವಾಗ, ಮಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ಇಮಿಗ್ರೇಶನ್ ವಿಭಾಗದ ಸಹಕಾರದೊಂದಿಗೆ ವಿಟ್ಲ ಪೊಲೀಸ್

ಎರಡು ವರ್ಷಗಳಿಂದ ವಿದೇಶದಲ್ಲಿ ತಲೆಮರೆಸಿಕೊಂಡಿದ್ದ ಇಬ್ರಾಹಿಂ ಬಾತಿಸ್ ಪೊಲೀಸ್ ಬಲೆಗೆ Read More »

ಸ್ವಯಂ ಘೋಷಿತ ದೇವಮಾನವನ ‌ವಿರುದ್ಧ ಪೋಕ್ಸೋ ಪ್ರಕರಣ ದಾಖಲು

ಯಾದಗಿರಿ: ಸ್ವಯಂ ಘೋಷಿತ ದೇವ ಮಾನವ ಶಹಾಪುರದ ಮಲ್ಲಿಕಾರ್ಜುನ ಮುತ್ಯಾನ ವಿರುದ್ಧ ಪೋಕ್ಸೋ ಪ್ರಕರಣ ದಾಖಲಾಗಿದೆ. ಮಲ್ಲಿಕಾರ್ಜುನ್ ಓರ್ವ ಬಾಲಕಿಯರ ಜೊತೆ ಅಸಂಬದ್ಧ ಎಂಬಂತೆ ನಡೆದುಕೊಳ್ಳುವ ವಿಡಿಯೋ ಒಂದು ಸಾಮಾಜಿಕ ಜಾಲತಾಣಗಳಲ್ಲಿ ‌ಸಾಕಷ್ಟು ವೈರಲ್ ಆಗಿದೆ. ಈ ವಿಡಿಯೋ ತುಣುಕನ್ನು ಆಧಾರವಾಗಿಟ್ಟುಕೊಂಡು ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ ಸ್ವಯಂ ದೂರು ದಾಖಲು ಮಾಡಿಕೊಂಡಿದೆ. ಈ ವಿಡಿಯೋದ ತುಣುಕುಗಳನ್ನು ಪರಿಶೀಲನೆ ಮಾಡಿ, ಸೂಕ್ತ ಕ್ರಮದ ಬಗ್ಗೆ ಮರು ಟಪಾಲಿನಲ್ಲಿ ಮಾಹಿತಿ ಸಲ್ಲಿಸುವಂತೆ ಆಯೋಗ ಜಿಲ್ಲಾ ಪೋಲೀಸ್

ಸ್ವಯಂ ಘೋಷಿತ ದೇವಮಾನವನ ‌ವಿರುದ್ಧ ಪೋಕ್ಸೋ ಪ್ರಕರಣ ದಾಖಲು Read More »

ಅಪ್ರಾಪ್ತ ಹುಡುಗನ ಮೇಲೆ ಹಲ್ಲೆ, ನಿಂದನೆ: ಪ್ರಕರಣ ದಾಖಲು

ಮಂಗಳೂರು: ನಗರದ ಬಾಬುಗುಡ್ಡೆಯ ಸಮೀಪದಲ್ಲಿ ಅಪ್ರಾಪ್ತ ಬಾಲಕನೊಬ್ಬನ ಮೇಲೆ ಜಾತಿ ನಿಂದನೆ ಮಾಡಿ, ಹಲ್ಲೆ ನಡೆಸಿದ ಇಬ್ಬರ ವಿರುದ್ಧ ಪ್ರಕರಣ ದಾಖಲಾಗಿದೆ. ಅಪ್ರಾಪ್ತ ಹುಡುಗ ಫೆ. 23 ರಂದು ತನ್ನ ಸ್ನೇಹಿತೆಯ ಜೊತೆಗೆ ರೈಲ್ವೆ ಟ್ರಾಕ್ ಸಮೀಪ ಕುಳಿತು ಮಾತನಾಡುತ್ತಿದ್ದ. ಈ‌ ವೇಳೆ ಅವರಿಬ್ಬರ ವಿಡಿಯೋ ಮಾಡುತ್ತಾ ಸ್ಟೀವನ್ ಮೊಂತೆರೋ ‌ಮತ್ತು ಅವರ ಪುತ್ರ ಅವಿಲ್ ಅಲ್ಲಿಗೆ ಬಂದಿದ್ದಾರೆ. ಅಪ್ರಾಪ್ತ ಹುಡುಗ ಮತ್ತು ಅವನ ಸ್ನೇಹಿತೆಗೆ ‘ನೀವಿಲ್ಲಿ ಕಿಸ್ಸಿಂಗ್ ಮಾಡುತ್ತಿದ್ದ ತೀರಾ, ನಾನು ವಿಡಿಯೋ ಮಾಡಿ ಸಾಮಾಜಿಕ

ಅಪ್ರಾಪ್ತ ಹುಡುಗನ ಮೇಲೆ ಹಲ್ಲೆ, ನಿಂದನೆ: ಪ್ರಕರಣ ದಾಖಲು Read More »

ಕೈಕಾರದಲ್ಲಿ ಭೀಕರ ಅಪಘಾತ: ಚಾಲಕ ಗಂಭೀರ

ಪುತ್ತೂರು: ಕೈಕಾರಗಲ್ಲಿ ಪಿಕಪ್ ಮತ್ತು ರಿಕ್ಷಾ ನಡುವೆ ಅಪಘಾತ ನಡೆದಿದ್ದು, ಚಾಲಕ ಗಂಭೀರ ಗಾಯಗೊಂಡ ಘಟನೆ ನಡೆದಿದೆ. ಪ್ರಕರಣದಲ್ಲಿ ರಿಕ್ಷಾ ಸಂಪೂರ್ಣ ಜಖಂಗೊಂಡಿದ್ದು,‌ ಗಂಭೀರ ಗಾಯಗೊಂಡ ಚಾಲಕನನ್ನು ಮಂಗಳೂರಿನ ಆಸ್ಪತ್ರೆಗೆ ಕರೆದುಕೊಂಡು ಹೋಗಲಾಗಿದೆ ಎಂದು ತಿಳಿದು ಬಂದಿದೆ.

ಕೈಕಾರದಲ್ಲಿ ಭೀಕರ ಅಪಘಾತ: ಚಾಲಕ ಗಂಭೀರ Read More »

ಇಸ್ರೇಲಿನಲ್ಲಿ ಉಗ್ರವಾದದ ‌ವಿರುದ್ಧ ಗುಡುಗಿದ ಪ್ರಧಾನಿ ಮೋದಿ

ನವದೆಹಲಿ: ಇಸ್ರೇಲ್ ಪ್ರವಾಸದಲ್ಲಿರುವ ಪ್ರಧಾನಿ ಮೋದಿ ಅವರು ಅಲ್ಲಿನ ಸಂಸತ್ತಿನಲ್ಲಿ ಮಾತನಾಡಿದ್ದು, ಭಾರತ ಭಯೋತ್ಪಾದನೆಯನ್ನು ಎಂದಿಗೂ ಸಹಿಸುವುದಿಲ್ಲ ಎಂದು ಹೇಳಿದ್ದಾರೆ. ನಾನು ಭಾರತದ ಪ್ರಧಾನಿಯಾಗಿ ಮತ್ತು ಒಂದು ಪ್ರಾಚೀನ ನಾಗರೀಕತೆಯ ಪ್ರತಿನಿಧಿಯಾಗಿ ಮತ್ತೊಂದು ನಾಗರೀಕತೆಯನ್ನು ಉದ್ದೇಶಿಸಿ ಮಾತನಾಡುತ್ತಿದ್ದೇನೆ. ಭಾರತ ಉಗ್ರವಾದವನ್ನು ಎಂದಿಗೂ ಸಹಿಸಲಾರದು. ಜಾಗತಿಕ ಶಾಂತಿ, ಭದ್ರತೆ ಮತ್ತು ಸ್ಥಿರತೆಗೆ ಉಗ್ರವಾದ ಬಹುದೊಡ್ಡ ಸವಾಲಾಗಿದೆ. ಇದು ಮಾನವೀಯತೆಯ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತದೆ. ಹಾಗಾಗಿ ಉಗ್ರಗಾಮಿತ್ವವನ್ನು ಒಪ್ಪಲು ಯಾರಿಂದಲೂ ‌ಸಾಧ್ಯವಿಲ್ಲ ಎಂದು ತಿಳಿಸಿದ್ದಾರೆ. ಆ. 7ರಂದು ಹಮಾಸ್

ಇಸ್ರೇಲಿನಲ್ಲಿ ಉಗ್ರವಾದದ ‌ವಿರುದ್ಧ ಗುಡುಗಿದ ಪ್ರಧಾನಿ ಮೋದಿ Read More »

error: Content is protected !!
Scroll to Top