ಆಪತ್ಬಾಂಧವ ಈಶ್ವರ್ ಮಲ್ಪೆ ತಂಡ ಹಾಗೂ ಸಹಾಯಹಸ್ತ ಲೋಕಸೇವಾ ಚಾರಿಟೇಬಲ್ ಟ್ರಸ್ಟ್ ಮನವಿಗೆ ಸ್ಪಂದಿಸಿದ ಕರ್ನಾಟಕದ ಜನತೆ

ಕುಮಟಾ ತಾಲ್ಲೂಕಿನ ಧಾರೇಶ್ವರದ *ವಿಶಾಲ ಹರಿಕಾಂತ ಎಂಬ ಯುವತಿಯ ಕಿಡ್ನಿ ಟ್ರಾನ್ಸ್ ಪ್ಲಾಂಟ್ ಗಾಗಿ ಸುಮಾರು 15 ಲಕ್ಷ ರೂಪಾಯಿ ಅವಶ್ಯಕತೆಯನ್ನು ಮನಗಂಡು ಬಡ ಕುಟುಂಬದ ಈ ಯುವತಿಯ ಚಿಕಿತ್ಸೆಗೆ ಸಹಾಯಹಸ್ತ ಲೋಕಸೇವಾ ಟ್ರಸ್ಟಿನ ಮುಖಾಂತರ ಈಶ್ವರ್ ಮಲ್ಪೆಯವರು ಸಾಮಾಜಿಕ ಜಾಲತಾಣಗಳಲ್ಲಿ ಹಾಗೂ ದೃಶ್ಯಮಾಧ್ಯಮಗಳಲ್ಲಿ ಮನವಿ ಮಾಡಿದ್ದು ಸುಮಾರು **14,61,179ರೂಪಾಯಿ ಸಂಗ್ರಹವಾಗಿದೆ. ಸಂಗ್ರಹವಾದ ಹಣವನ್ನು ಫಲಾನುಭವಿಗಳಿಗೆ ಹಸ್ತಾಂತರ ಮಾಡಲಾಯಿತು. ಈ ಸಂದರ್ಭದಲ್ಲಿ ಕುಮಟಾ ಠಾಣಾಧಿಕಾರಿ ಸಂಪತ್ ಕುಮಾರ್, ಆಪತ್ಬಾಂಧವ ಈಶ್ವರ್ ಮಲ್ಪೆ. ಸಹಾಯಹಸ್ತ ಟ್ರಸ್ಟಿನ ಮನೋಹರ್ ಪಲಯಮಜಲು, […]

ಆಪತ್ಬಾಂಧವ ಈಶ್ವರ್ ಮಲ್ಪೆ ತಂಡ ಹಾಗೂ ಸಹಾಯಹಸ್ತ ಲೋಕಸೇವಾ ಚಾರಿಟೇಬಲ್ ಟ್ರಸ್ಟ್ ಮನವಿಗೆ ಸ್ಪಂದಿಸಿದ ಕರ್ನಾಟಕದ ಜನತೆ Read More »

ಕೆಎಸ್‌ಆರ್‌ಟಿಸಿ ಯ ನಿವೃತ್ತ ಟಿಸಿ ಶಾಂತರಾಮ ವಿಟ್ಲ ಆತ್ಮಹತ್ಯೆ

ಪುತ್ತೂರು: ಕೆಎಸ್‌ಆರ್‌ಟಿಸಿ ನಿವೃತ್ತ ಟಿಸಿ, ಭಾರತೀಯ ಮಜ್ದೂರು ಸಂಘದ ಮುಖಂಡ ಶಾಂತರಾಮ ವಿಟ್ಲ ಪತ್ತೂರಿನ ಬಪ್ಪಳಿಗೆಯಲ್ಲಿರುವ ತಮ್ಮ ಸ್ವಗೃಹದಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಶಾಂತರಾಮ ವಿಟ್ಲ ಅವರು ಜನಪರ ಕಾರ್ಯಗಳಲ್ಲಿ ತಮ್ಮನ್ನು ಗುರುತಿಸಿಕೊಂಡವರು. ಹಲವಾರು ಸಮಾಜ ಮುಖಿ ಕಾರ್ಯಗಳ ಮೂಲಕ ಅಶಕ್ತರ ಬಾಳಿಗೆ ಬೆಳಕಾಗಿದ್ದರು. ಆತ್ಮಹತ್ಯೆಗೆ ಕಾರಣ ತಿಳಿದು ಬಂದಿಲ್ಲ. ಮೃತರು ಪತ್ನಿ ಪ್ರಮೀಶಾ ಎಸ್‌ ಶೆಟ್ಟಿ, ಮಕ್ಕಳಾದ ಶ್ರೇಯಾ ಹಾಗೂ ಸ್ನೇಹಾ ಶೆಟ್ಟಿ, ಕುಟುಂಬಸ್ಥರನ್ನು ಹಾಗೂ ಅಪಾರ ಬಂಧು ಮಿತ್ರರನ್ನು ಅಗಲಿದ್ದಾರೆ.

ಕೆಎಸ್‌ಆರ್‌ಟಿಸಿ ಯ ನಿವೃತ್ತ ಟಿಸಿ ಶಾಂತರಾಮ ವಿಟ್ಲ ಆತ್ಮಹತ್ಯೆ Read More »

ನಗರಸಭೆ ಉಪ ಚುನಾವಣೆ : ಕಾಂಗ್ರೇಸ್ ಅಭ್ಯರ್ಥಿಗಳಿಂದ ನಾಮಪತ್ರ ಸಲ್ಲಿಕೆ

ಪುತ್ತೂರು : ಪುತ್ತೂರು ನಗರಸಭೆಯಲ್ಲಿ ತೆರವಾದ ಎರಡು ಸ್ಥಾನಗಳಿಗೆ ಡಿ.27 ರಂದು ನಡೆಯುವ ಉಪಚುನಾವಣೆಗೆ ನಾಮಪತ್ರ ಸಲ್ಲಿಸಲು ಅಂತಿಮ ದಿನವಾದ ಶುಕ್ರವಾರ ಕಾಂಗ್ರೇಸ್ ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದರು.ನಗರಸಭೆಯ ವಾರ್ಡ್ ನಂ.1ರ ಸ್ಥಾನಕ್ಕೆ ದಿನೇಶ್ ಶೇವಿರೆ ಹಾಗೂ ವಾರ್ಡ್ 11ರ ಸ್ಥಾನಕ್ಕೆ ದಾಮೋದರ ಭಂಡಾರ್ಕರ್ ನಾಮಪತ್ರ ಸಲ್ಲಿಸಿದರು. ಅಭ್ಯರ್ಥಿಗಳು ಹಾಗೂ ಕಾಂಗ್ರೇನ ಮುಖಂಡರು ಬೆಳಿಗ್ಗೆ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಪ್ರಾರ್ಥನೆ ಸಲ್ಲಿಸಿ ಬಳಿಕ ವೆಂಕಟರಮಣ ದೇವಸ್ಥಾನ, ಪುತ್ತೂರಿನ ಕೇಂದ್ರ ಮಸೀದಿ ಹಾಗೂ ಚರ್ಚ್‍ ನಲ್ಲಿ ಪ್ರಾರ್ಥಿಸಿದ ನಂತರ ನಗರಸಭೆಗೆ

ನಗರಸಭೆ ಉಪ ಚುನಾವಣೆ : ಕಾಂಗ್ರೇಸ್ ಅಭ್ಯರ್ಥಿಗಳಿಂದ ನಾಮಪತ್ರ ಸಲ್ಲಿಕೆ Read More »

ತಾಲೂಕು ಭಜನಾ ಪರಿಷತ್‌ ಗೆ ಪದಾಧಿಕಾರಿಗಳ ಆಯ್ಕೆ | ಅಧ್ಯಕ್ಷರಾಗಿ ಲೋಕೇಶ್‍ ಬೆತ್ತೋಡಿ, ಕಾಯ೯ದಶಿ೯ಯಾಗಿ ಗೋಪಾಲಕೃಷ್ಣ ಪಾಟಾಳಿ

ಪುತ್ತೂರು: ಶ್ರೀ ಧಮ೯ಸ್ಥಳ ಮಂಜುನಾಥೇಶ್ವರ ಪುತ್ತೂರು ತಾಲೂಕು ಭಜನಾ ಪರಿಷತ್‌ನ ನೂತನ ಅಧ್ಯಕ್ಷರಾಗಿ ಲೋಕೇಶ್‌ ಬೆತ್ತೋಡಿ, ಉಪಾಧ್ಯಕ್ಷರಾಗಿ ದಿನೇಶ್‌ ಸಾಲಿಯಾನ್, ಗಂಗಾಧರ್‌ ರೈ, ಕಾಯ೯ದಶಿ೯ಯಾಗಿ ಗೋಪಾಲಕೃಷ್ಣ ಪಾಟಾಳಿ, ಜೊತೆಕಾಯ೯ದಶಿ೯ಯಾಗಿ ಸುಜಯ ಹಾಗೂ ಕೋಶಾಧಿಕಾರಿಯಾಗಿ ಸುದಾಕರ್‌ ಕುಲಾಲ್ ಅವರನ್ನು ಆಯ್ಕೆ ಮಾಡಲಾಯಿತು ಪುತ್ತೂರು ಯೋಜನಾ ಕಚೇರಿಯಲ್ಲಿ ಭಜನಾ ಪರಿಷತ್‌ ಅಧ್ಯಕ್ಷ ಸುಬ್ಬಯ್ಯ ಅವರ ನೇತೃತ್ವದಲ್ಲಿ ಶ್ರೀ ಧಮ೯ಸ್ಥಳ ಮಂಜುನಾಥೇಶ್ವರ ಪುತ್ತೂರು ತಾಲೂಕು ಭಜನಾ ಪರಿಷತ್‌ ಸಭೆಯಲ್ಲಿ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು. ಪುತ್ತೂರು ತಾಲೂಕಿನಲ್ಲಿ 6 ವಷ೯ಗಳಿಂದ ಭಜನಾಪರಿಷತ್‌ನ ಪದಾಧಿಕಾರಿಗಳ

ತಾಲೂಕು ಭಜನಾ ಪರಿಷತ್‌ ಗೆ ಪದಾಧಿಕಾರಿಗಳ ಆಯ್ಕೆ | ಅಧ್ಯಕ್ಷರಾಗಿ ಲೋಕೇಶ್‍ ಬೆತ್ತೋಡಿ, ಕಾಯ೯ದಶಿ೯ಯಾಗಿ ಗೋಪಾಲಕೃಷ್ಣ ಪಾಟಾಳಿ Read More »

ಬಳ್ಪ ಕಾಡಿನಲ್ಲಿ ಮಂಗಗಳ ಮೃತದೇಹ ಪತ್ತೆ!

ಸುಳ್ಯ: ತಾಲೂಕಿನ ಬಳ್ಪ ರಕ್ಷಿತಾರಣ್ಯದ  ಗುತ್ತಿಗಾರು-ಬಳ್ಪ ರಸ್ತೆ ನಡುವೆ ರಸ್ತೆ ಬದಿಯಲ್ಲಿ ಮಂಗಗಳ ಮೃತದೇಹ ಪತ್ತೆಯಾಗಿದೆ. ಸುಮಾರು 30 ಕ್ಕೂ ಅಧಿಕ ಮಂಗಗಳು ಸತ್ತು ಬಿದ್ದಿರುವ ಸ್ಥಿತಿಯಲ್ಲಿದೆ. ಮಧ್ಯಾಹ್ನದ ವೇಳೆ ಸಾಮಾಜಿಕ ಜಾಲತಾಣದ ಮೂಲಕ ಮಂಗಗಳ ಮೃತದೇಹ ಇರುವುದು ಬೆಳಕಿಗೆ ಬಂದಿದೆ. ಸ್ಥಳಕ್ಕೆ ಅರಣ್ಯ ಇಲಾಖೆಯ ಸಿಬಂದಿಗಳು ಆಗಮಿಸಿ ಪರಿಶೀಲನೆ ನಡೆಸಿದ್ದಾರೆ.

ಬಳ್ಪ ಕಾಡಿನಲ್ಲಿ ಮಂಗಗಳ ಮೃತದೇಹ ಪತ್ತೆ! Read More »

ಕಾನೂನುಬಾಹಿರ ಮರಳು ದಂಧೆಗೆ ಹಾಕಬೇಕಾಗಿದೆ ಕಡಿವಾಣ | ನಾನ್ ಸಿಆರ್ ಝೆಡ್ ಮರಳು ಗುತ್ತಿಗೆದಾರರ ಸಂಘದ ಪತ್ರಿಕಾಗೋಷ್ಠಿಯಲ್ಲಿ ದಿನೇಶ್ ಮೆದು

ಪುತ್ತೂರು: ದ.ಕ.ಜಿಲ್ಲೆಯಲ್ಲಿ ಮರಳು ಕೊರತೆಯಿರುವ ಕುರಿತು ವರದಿಯಾಗುತ್ತಿದ್ದು, ಸಿಆರ್ ಝೆಡ್ ನ ಕಾನೂನು ತೊಡಕಿನಿಂದ ಮರಳುಗಾರಿಕೆ ನಿಂತಿದೆ. ಆದರೆ ನಾನ್ ಸಿಆರ್‍ಝೆಡ್ ನಿಂದ ದ.ಕ.ಜಿಲ್ಲೆಯಲ್ಲಿ ಮರಳಿನ ಕೊರತೆಯಿಲ್ಲ. ಸಾರ್ವಜನಿಕರಿಗೆ ಬೇಡಿಕೆಗೆ ತಕ್ಕಂತೆ ಪೂರೈಕೆ ಮಾಡಲು ನಾವು ಬದ್ಧರಾಗಿದ್ದೇವೆ ಎಂದು ನಾನ್‍ ಸಿಆರ್‍ ಝೆಡ್ ಮರಳು ಗುತ್ತಿಗೆದಾರರ ಸಂಘದ ದ.ಕ.ಜಿಲ್ಲಾ ಅಧ್ಯಕ್ಷ ದಿನೇಶ್‍ ಮೆದು ತಿಳಿಸಿದ್ದಾರೆ. ಅವರು ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ದ.ಕ.ಜಿಲ್ಲೆಯಲ್ಲಿ ನಾನ್‍ ಸಿಆರ್ ಝೆಡ್ ಮರಳು ಗುತ್ತಿಗೆದಾರರ ಸಂಘ ಕಾನೂನಾತ್ಮಕವಾಗಿ ಮರಳು ಮಾರಾಟ ಮಾಡುತ್ತಿದ್ದು, ಸರಕಾರಕ್ಕೆ

ಕಾನೂನುಬಾಹಿರ ಮರಳು ದಂಧೆಗೆ ಹಾಕಬೇಕಾಗಿದೆ ಕಡಿವಾಣ | ನಾನ್ ಸಿಆರ್ ಝೆಡ್ ಮರಳು ಗುತ್ತಿಗೆದಾರರ ಸಂಘದ ಪತ್ರಿಕಾಗೋಷ್ಠಿಯಲ್ಲಿ ದಿನೇಶ್ ಮೆದು Read More »

ವ್ಯಕ್ತಿಯೊಬ್ಬರು ನೇಣು ಬಿಗಿದುಕೊಂಡು ಆತ್ಮಹತ್ಯೆ

ಸುಬ್ರಹ್ಮಣ್ಯ: ವ್ಯಕ್ತಿಯೊಬ್ಬರು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಸುಬ್ರಹ್ಮಣ್ಯ ಠಾಣಾ ವ್ಯಾಪ್ತಿಯ ಏನೆಕಲ್ಲು ಗ್ರಾಮದಲ್ಲಿ ನಡೆದಿದೆ. ಕಡಬ ತಾಲೂಕಿನ ಏನೆಕಲ್ಲು ಗ್ರಾಮದ ಕುಕ್ಕಪ್ಪನ ಮನೆ ಮೋಹನ ಕುಮಾರ(51) ಆತ್ಮಹತ್ಯೆ ಮಾಡಿಕೊಂಡವರು. ಇತ್ತೀಚೆಗೆ ಮನೆ ನಿರ್ಮಾಣಕ್ಕಾಗಿ ಕೈ ಸಾಲ ಹಾಗೂ ಕೃಷಿ ಚಟುವಟಿಕೆಗಳಿಗೆ ಬ್ಯಾಂಕು ಸಾಲಗಳನ್ನು ಮಾಡಿಕೊಂಡಿದ್ದರು ಎನ್ನಲಾಗಿದೆ. ಮಾಡಿದ ಸಾಲವನ್ನು ತೀರಿಸಲಾಗದೇ ಬೇಸರದಿಂದ ಈ ಕೃತ್ಯ ಎಸಗಿದ್ದಾರೆ ಎನ್ನಲಾಗಿದೆ. ಮುಂಜಾನೆ ಎಂದಿನಂತೆ ತೋಟಕ್ಕೆ ಹೋದವರು ಎಷ್ಟು ಹೊತ್ತಾದರೂ ಮನೆಗೆ ಬಾರದೇ ಇದ್ದಾಗ ಮನೆಯವರು ತೋಟದಲ್ಲಿ ಹುಡುಕಾಡಿದಾಗ

ವ್ಯಕ್ತಿಯೊಬ್ಬರು ನೇಣು ಬಿಗಿದುಕೊಂಡು ಆತ್ಮಹತ್ಯೆ Read More »

ಎಲಿಮಲೆ ಶಾಲಾ ವಿದ್ಯಾರ್ಥಿ ನೇಣು ಬಿಗಿದು ಆತ್ಮಹತ್ಯೆ

ಸುಳ್ಯ : ಹತ್ತನೇ ತರಗತಿ ವಿದ್ಯಾರ್ಥಿಯೋರ್ವ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಸುಳ್ಯ ತಾಲೂಕಿನಲ್ಲಿ ಶುಕ್ರವಾರ ನಡೆದಿದೆ. ಸುಳ್ಯ ತಾಲೂಕಿನ ಎಲಿಮಲೆ ಸರಕಾರಿ ಪ್ರೌಢಶಾಲೆಯ 10ನೇ ತರಗತಿ ವಿದ್ಯಾರ್ಥಿ ಶಮಂತ್ ಆತ್ಮಹತ್ಯೆ ಮಾಡಿಕೊಂಡಾತ. ಮೂಲತಃ ಚೊಕ್ಕಾಡಿಯವರಾಗಿರುವ, ಪ್ರಸ್ತುತ ನೆಲ್ಲೂರು ಕೆಮ್ರಾಜೆ ಗ್ರಾಮದ ಹೊಟ್ಟುಚೋಡಿಯಲ್ಲಿ ನೆಲೆಸಿರುವ ದಿ| ವಾಸುದೇವ ಎಂಬವರ ಪುತ್ರ ಶಮಂತ್ ಶುಕ್ರವಾರ ಬೆಳಿಗ್ಗೆ 6 ಗಂಟೆಯ ಸುಮಾರಿಗೆ ಮನೆಯಿಂದ ಹೊರಟು ಬಂದು ಶಾಲಾ ಆವರಣದ ಶೌಚಾಲಯದ ಹಿಂಬದಿ ಗಿಡವೊಂದಕ್ಕೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

ಎಲಿಮಲೆ ಶಾಲಾ ವಿದ್ಯಾರ್ಥಿ ನೇಣು ಬಿಗಿದು ಆತ್ಮಹತ್ಯೆ Read More »

ನಗರಸಭೆ ಉಪಚುನಾವಣೆ | ಬಿಜೆಪಿ ಅಭ್ಯರ್ಥಿಗಳಿಂದ ನಾಮಪತ್ರ ಸಲ್ಲಿಕೆ | ಮಗ್ಗುಲ ಬದಲಾಯಿಸಿದ ಪುತ್ತಿಲ ಪರಿವಾರದ ಪ್ರಮುಖ ಡಾ.ಸುರೇಶ್‍ ಪುತ್ತೂರಾಯ

ಪುತ್ತೂರು: ಪುತ್ತಿಲ ಪರಿವಾರದಲ್ಲಿ ಕಾಣಿಸಿಕೊಂಡಿದ್ದ ಡಾ.ಸುರೇಶ್‍ ಪುತ್ತೂರಾಯ ಅವರು ನಗರಸಭೆ ಉಪಚುನಾವಣೆಯ ಬಿಜೆಪಿ ಅಭ್ಯರ್ಥಿಗಳ ನಾಮಪತ್ರ ಸಂದರ್ಭ ಬಿಜೆಪಿ ಪಾಳಯದಲ್ಲಿ ಕಾಣಿಸಿಕೊಂಡಿದ್ದು ಇದೀಗ ಅಚ್ಚರಿಗೆ ಕಾರಣವಾಗಿದೆ. ಕಳೆದ ವಿಧಾನಸಭೆ ಚುನಾವಣೆ ಸಂದರ್ಭ ಪುತ್ತಿಲ ಪರಿವಾರದಲ್ಲಿ ಪ್ರಮುಖ ನಾಯಕರಾಗಿ ಕಾಣಿಸಿಕೊಂಡಿದ್ದ ಡಾ.ಸುರೇಶ್‍ ಪುತ್ತೂರಾಯ ಇದೀಗ ದಿಢೀರ್ ಪಾಳಯ ಬದಲಾಯಿಸಿ ಬಿಜೆಪಿ ನಾಮಪತ್ರ ಸಂದರ್ಭ ಹಾಜರಾಗಿ ಅಭ್ಯರ್ಥಿಗಳಿಗೆ ಮಾಲಾರ್ಪಣೆ ಮಾಡಿರುವುದು ಕುತೂಹಲ ಮೂಡಿಸಿದೆ. ನಗರಸಭೆಯ ವಾರ್ಡ್‍ 1 ಹಾಗೂ 11 ರ ಸದಸ್ಯರ ಮರಣದಿಂದಾಗಿ ಉಪಚುನಾವಣೆ ಡಿ.27 ರಂದು ನಿಗದಿಯಾಗಿದ್ದು,

ನಗರಸಭೆ ಉಪಚುನಾವಣೆ | ಬಿಜೆಪಿ ಅಭ್ಯರ್ಥಿಗಳಿಂದ ನಾಮಪತ್ರ ಸಲ್ಲಿಕೆ | ಮಗ್ಗುಲ ಬದಲಾಯಿಸಿದ ಪುತ್ತಿಲ ಪರಿವಾರದ ಪ್ರಮುಖ ಡಾ.ಸುರೇಶ್‍ ಪುತ್ತೂರಾಯ Read More »

ತಾಯಿ-ಮಗು ನಾಪತ್ತೆ : ಪೊಲೀಸರಿಗೆ ದೂರು

ಮಂಗಳೂರು: ಪತ್ನಿ ಹಾಗೂ ಮೂರು ವರ್ಷದ ಪುತ್ರ ನಾಪತ್ತೆಯಾಗಿರುವ ಬಗ್ಗೆ ಬಜಪೆ ಪೊಲೀಸ್‌ ಠಾಣೆಗೆ ದೂರು ನೀಡಲಾಗಿದೆ. ಬಜ್ಜೆಯ ಕೆ.ಪಿ. ನಗರದ ಶಾಹಿಸ್ತಾ ಮಂಜೀಲ್‌ನ ಅಹ್ಮದ್ ಮನ್ಸೂದ್ ಅವರ ಪತ್ನಿ ಶರೀನಾ ವೈ. (24) ಹಾಗೂ ಮಗ ಮಹ್ಮದ್ ತೋಹಾರ್ (3) ಎಂದು ಗುರುತಿಸಲಾಗಿದೆ. ಅಹ್ಮದ್ ಮನ್ಸೂದ್ ಅವರು ತಾಯಿ ಮತ್ತು ಪತ್ನಿಯೊಂದಿಗೆ ವಾಸವಾಗಿದ್ದು ಸುಮಾರು 6 ವರ್ಷಗಳ ಹಿಂದೆ ಸುಳ್ಯದ ಶರಿನಾ (24) ಅವರನ್ನು ವಿವಾಹವಾಗಿದ್ದರು. ದಂಪತಿಗಳಿಗೆ 3 ವರ್ಷದ ಗಂಡು ಮಗುವಿದೆ. ಶರೀನಾ  ಗರ್ಭಿಣಿಯಾಗಿದ್ದು

ತಾಯಿ-ಮಗು ನಾಪತ್ತೆ : ಪೊಲೀಸರಿಗೆ ದೂರು Read More »

error: Content is protected !!
Scroll to Top