ಮನೆಯ ಬೀಗ ಮುರಿದು ನಗ, ನಗದು ದೋಚಿದ ಕಳ್ಳರು

ಕಡಬ: ಧಾರ್ಮಿಕ ಕಾರ್ಯಕ್ರಮಕ್ಕೆ ತೆರಳಿದ ಸಂದರ್ಭ ಕಳ್ಳರು ಮನೆಯ ಬೀಗ ಮುರಿದು ಲಕ್ಷಾಂತರ ರೂ. ಮೌಲ್ಯದ ನಗ, ನಗದನ್ನು ಕಳವುಗೈದ ಘಟನೆ ಕಡಬ ಠಾಣಾ ವ್ಯಾಪ್ತಿಯ ಆತೂರು ಕೊಯಿಲದಲ್ಲಿ ಗುರುವಾರ ತಡರಾತ್ರಿ ನಡೆದಿದೆ. ಆತೂರು ಕೊಯಿಲ ಸಮೀಪದ ಕಲಾಯಿ ನಿವಾಸಿ ಯಾಕುಬ್ ಎಂಬವರ ಮನೆಯ ಬೀಗ ಮುರಿದ ಕಳ್ಳರು, ನಗದನ್ನು ದೋಚಿದ್ದಾರೆ. ಪಕ್ಕದಲ್ಲಿರುವ ಮನೆಯೊಂದರ ಬೀಗ ಮುರಿಯುವ ವೇಳೆ ಆಟೋ ರಿಕ್ಷಾ ಆಗಮಿಸುವುದನ್ನು ನೋಡಿದ ಕಳ್ಳರು ಪರಾರಿಯಾಗಿರುವುದಾಗಿ ತಿಳಿದುಬಂದಿದೆ. ಸ್ಥಳಕ್ಕೆ ಕಡಬ ಠಾಣಾ ಪೊಲೀಸರು, ಶ್ವಾನ ದಳ […]

ಮನೆಯ ಬೀಗ ಮುರಿದು ನಗ, ನಗದು ದೋಚಿದ ಕಳ್ಳರು Read More »

ಶ್ರೀ ಕೃಷ್ಣನಿಗೆ ಗೀತೆ ಅರ್ಪಣೆ ಮಾಡಿದರೆ ಪರಿಪೂರ್ಣ ಅನುಗ್ರಹ ಪಡೆಯಲು ಸಾಧ್ಯ | ಪೌರ ಸನ್ಮಾನ ಕಾರ್ಯಕ್ರಮದಲ್ಲಿ ಶ್ರೀ ಡಾ.ಸುಗುಣೇಂದ್ರ ತೀರ್ಥ ಶ್ರೀಪಾದರು

ಪುತ್ತೂರು: ಶ್ರೀಕೃಷ್ಣನಿಗೆ ಪ್ರಿಯವಾದ ಗೀತೆಯನ್ನು ಅರ್ಪಣೆ ಮಾಡಿದರೆ ಪರಿಪೂರ್ಣ ಅನುಗ್ರಹ ಪಡೆಯಲು ಸಾಧ್ಯ ಎಂದು ಉಡುಪಿ ಪುತ್ತಿಗೆ ಮಠಾಧೀಶರಾದ ಶ್ರೀ ಡಾ.ಸುಗುಣೇಂದ್ರ ತೀರ್ಥ ಶ್ರೀಪಾದರು ನುಡಿದರು. ಅವರು ಪರ್ಯಾಯ ಪುತ್ತಿಗೆ ಶ್ರೀ ಡಾ.ಸುಗುಣೇಂದ್ರ ತೀರ್ಥ ಶ್ರೀಪಾದರ ಪೌರ ಸನ್ಮಾನ ಸಮಿತಿ ವತಿಯಿಂದ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ನಟರಾಜ ವೇದಿಕೆಯಲ್ಲಿ ಗುರುವಾರ ಸಂಜೆ ನಡೆದ ಪೌರ ಸನ್ಮಾನ ಹಾಗೂ ಶ್ರೀಗಳಿಂದ ಕೋಟಿ ಗೀತಾ ಲೇಖನ ಯಜ್ಷ ದೀಕ್ಷೆ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿದರು. ಜಗತ್ತಿಗೆ ಕೃಷ್ಣನ ಅನುಗ್ರಹವಾಗುವ ನಿಟ್ಟಿನಲ್ಲಿ ಗೀತಾ

ಶ್ರೀ ಕೃಷ್ಣನಿಗೆ ಗೀತೆ ಅರ್ಪಣೆ ಮಾಡಿದರೆ ಪರಿಪೂರ್ಣ ಅನುಗ್ರಹ ಪಡೆಯಲು ಸಾಧ್ಯ | ಪೌರ ಸನ್ಮಾನ ಕಾರ್ಯಕ್ರಮದಲ್ಲಿ ಶ್ರೀ ಡಾ.ಸುಗುಣೇಂದ್ರ ತೀರ್ಥ ಶ್ರೀಪಾದರು Read More »

ಮೋರಿ ಸಮಸ್ಯೆ | ಸ್ಪಂದಿಸಿದ ಸಂಸದರು

ಪುತ್ತೂರು: ಸಾರ್ವಜನಿಕರ ಅನುಕೂಲಕ್ಕಾಗಿ ಕೊಡಿಪ್ಪಾಡಿ ಶ್ರೀ ಜನಾರ್ಧನ ದೇವಸ್ಥಾನ ಸಹಿತ ಶ್ರೀ ಕಲ್ಕುಡ ಕಲ್ಲುರ್ಟಿ ದೈವಸ್ಥಾನಕ್ಕೆ ಹೋಗುವ ರಸ್ತೆಯಲ್ಲಿ ಮೋರಿಯೊಂದನ್ನು ಅಳವಡಿಸಲಾಯಿತು. ಈ ರಸ್ತೆಯಲ್ಲಿ ಮೋರಿ ವ್ಯವಸ್ಥೆ ಇಲ್ಲದೆ ಸಾರ್ವಜನಿಕರಿಗೆ ಸಮಸ್ಯೆ ಉಂಟಾಗಿತ್ತು. ಇದನ್ನು ಮನಗಂಡ ಸ್ಥಳೀಯರು ಸಂಸದ ನಳಿನ್ ಕುಮಾರ್ ಕಟೀಲ್ ಅವರಿಗೆ ಮನವಿ ಮಾಡಿದ್ದರು. ಮನವಿಯಂತೆ ಮೋರಿ ಅಳವಡಿಸಲು ಅನುದಾನ ನೀಡಿದ್ದಾರೆ. ಈ ಸಂದರ್ಭದಲ್ಲಿ ಸ್ಥಳೀಯರು ಸಹಕರಿಸಿದರು.

ಮೋರಿ ಸಮಸ್ಯೆ | ಸ್ಪಂದಿಸಿದ ಸಂಸದರು Read More »

ವೈವಾಹಿಕ ಜೀವನಕ್ಕೆ ಕಾಲಿಟ್ಟ ತೃಪ್ತಿ ಜೆ.ಕೆ.-ಲಿಖಿತ್ ಪಿ.ಎನ್.

ಪುತ್ತೂರು: ಕಡಬ ತಾಲೂಕು ಎಣ್ಮೂರು ಗ್ರಾಮದ ಹೇಮಳ ಕೊರಂಬೈಲು ವಿಜಯಲಕ್ಷ್ಮೀ ಹಾಗೂ ಜಯಾನಂದ ಗೌಡರ ಪುತ್ರಿ ತೃಪ್ತಿ ಜೆ.ಕೆ. ಅವರ ವಿವಾಹ ಸುಳ್ಯ ತಾಲೂಕಿನ ಐವತ್ತೊಕ್ಲು ಗ್ರಾಮದ ಪಲ್ಲೋಡಿ ಶೈಲಿಕಾ ಮತ್ತು ನಾರಾಯಣ ಗೌಡರ ಪುತ್ರ ಲಿಖಿತ್ ಪಿ.ಎನ್. ಅವರೊಂದಿಗೆ ಗುರುವಾರ ನಡೆಯಿತು. ಪಂಜ ಶ್ರೀ ಸದಾಶಿವ ಪರಿವಾರ ಪಂಚಲಿಂಗೇಶ್ವರ ಸಭಾಭವನದಲ್ಲಿ ಬೆಳಿಗ್ಗೆ 8.36 ರ ಶುಭಮುಹೂರ್ತದಲ್ಲಿ ನಡೆಯಿತು. ವಿವಾಹ ಸಮಾರಂಭದಲ್ಲಿ ಹಲವಾರು ಗಣ್ಯರು ಪಾಲ್ಗೊಂಡು ಶುಭ ಹಾರೈಸಿದರು.

ವೈವಾಹಿಕ ಜೀವನಕ್ಕೆ ಕಾಲಿಟ್ಟ ತೃಪ್ತಿ ಜೆ.ಕೆ.-ಲಿಖಿತ್ ಪಿ.ಎನ್. Read More »

ಮಗು ಮಾರಾಟ ಪ್ರಕರಣ | ಐವರ ಬಂಧನ

ಹುಟ್ಟಿದ ಮಾರನೇ ದಿನವೇ ನವಜಾತ ಶಿಶುವನ್ನು ಮಾರಾಟ ಮಾಡಿರುವ ಘಟನೆ ಹಾಸನದಲ್ಲಿ ನಡೆದಿದೆ. ಸಕಲೇಶಪುರದ ಬ್ಯಾಕರ ಹಳ್ಳಿಯಲ್ಲಿ ಮಗುವನ್ನು ಮಾರಾಟ ಮಾಡಿದ ಆರೋಪದಡಿ ತಾಯಿ ಗಿರಿಜಾ, ಆಶಾಕಾರ್ಯಕರ್ತೆ ಸುಮಿತ್ರ, ಮಗು ಖರೀದಿಸಿದ ಮಹಿಳೆ ಉಷಾ, ಶ್ರೀಕಾಂತ್ ಸುಬ್ರಹ್ಮಣ್ಯ ಎಂಬುವವರನ್ನು ಬಂಧಿಸಲಾಗಿದೆ. ಕಳೆದ ವರ್ಷ ನ.15ರಂದು ಗಿರಿಜಾ ಗಂಡು ಮಗುವಿಗೆ ಜನ್ಮ ನೀಡಿದ್ದರು. ಆದರೆ ತಮಗೆ ಇಬ್ಬರು ಮಕ್ಕಳಿರುವುದರಿಂದ ನ.16ರಂದು ಆಶಾ ಕಾರ್ಯಕರ್ತೆ ಸುಮಿತ್ರ ಅವರ ಮೂಲಕ ಚಿಕ್ಕಮಗಳೂರು ಮೂಲದ ಉಷಾ ಎಂಬುವವರಿಗೆ ಮಗು ಮಾರಾಟ ಮಾಡಿದ್ದರು. ಈ

ಮಗು ಮಾರಾಟ ಪ್ರಕರಣ | ಐವರ ಬಂಧನ Read More »

ರಾಜ್ಯ ಸರಕಾರ ಹತಾಶೆ ಭಾವದಿಂದ ಹಿಂದೂ ವಿರೋಧಿ ಹೇಳಿಕೆಗಳನ್ನು ನೀಡುತ್ತಿದೆ | ಪತ್ರಿಕಾಗೋಷ್ಠಿಯಲ್ಲಿ ಡಾ.ಕೃಷ್ಣಪ್ರಸನ್ನ

ಪುತ್ತೂರು: ಅಯೋಧ್ಯೆಯಲ್ಲಿ ಶ್ರೀರಾಮನ ಭವ್ಯ ಮಂದಿರ ನಿರ್ಮಾಣವಾಗಿ, ಶ್ರೀರಾಮನ ಪ್ರತಿಷ್ಠಾಪನೆ ನಡೆಯಲಿರುವ ಸಂದರ್ಭದಲ್ಲಿ ಹಿಂದುಗಳು ಒಗ್ಗಟ್ಟಾಗಿ ಭಕ್ತಿಭಾವದಿಂದ ನಡೆದುಕೊಳ್ಳುವ ಕಾರ್ಯವಾಗುತ್ತಿದೆ. ಇದನ್ನು ನೋಡಿ ಹತಾಶೆಯ ಭಾವನೆಯಿಂದ ರಾಜ್ಯ ಸರ್ಕಾರದ ಪ್ರಮುಖರು ಹಿಂದು ವಿರೋಧಿ ಹೇಳಿಕೆಗಳನ್ನು ನೀಡುತ್ತಿದ್ದು, ಇದನ್ನು ವಿಶ್ವ ಹಿಂದು ಪರಿಷತ್ ಹಾಗೂ ಇತರ ಸಂಘ ಪರಿವಾರದ ಎಲ್ಲಾ ಸಂಘಟನೆಗಳು ಖಂಡಿಸುತ್ತದೆ. ಇಂತಹ ಹುನ್ನಾರವನ್ನು ರಾಜ್ಯ ಸರ್ಕಾರ ಗಮನದಲ್ಲಿಟ್ಟುಕೊಂಡು ತಡೆಯುವ ಕಾರ್ಯ ಮಾಡಬೇಕು ಎಂದು ವಿಶ್ವ ಹಿಂದೂ ಪರಿಷತ್ ಪುತ್ತೂರು ಜಿಲ್ಲಾಧ್ಯಕ್ಷ ಡಾ.ಕೃಷ್ಣ ಪ್ರಸನ್ನ ಹೇಳಿದರು. ಗುರುವಾರ

ರಾಜ್ಯ ಸರಕಾರ ಹತಾಶೆ ಭಾವದಿಂದ ಹಿಂದೂ ವಿರೋಧಿ ಹೇಳಿಕೆಗಳನ್ನು ನೀಡುತ್ತಿದೆ | ಪತ್ರಿಕಾಗೋಷ್ಠಿಯಲ್ಲಿ ಡಾ.ಕೃಷ್ಣಪ್ರಸನ್ನ Read More »

 ಜ.7: 2ನೇ ವರ್ಷದ ‘ಜಲಾಲಿಯ್ಯಾ ರಾತೀಬ್ ಮಸ್ಲಿಸ್’

ಪುತ್ತೂರು: ಕೆಮ್ಮಾಯಿ ಬಸ್ತಾನುಲ್ ಬಾದುಷ ಮಸ್ಲಿಸ್ ಮತ್ತು ಜಲಾಲಿಯ್ಯಾ ರಾತೀಬ್ ಸಮಿತಿ ಜಂಟಿ ಆಶ್ರಯದಲ್ಲಿ 2ನೇ ವರ್ಷದ ‘ಜಲಾಲಿಯ್ಯಾ ರಾತೀಬ್ ಮಸ್ಲಿಸ್’ ಜ.7ರಂದು ಕೆಮ್ಮಾಯಿಯ ತಂಙಳ್ ನಿವಾಸದಲ್ಲಿ ನಡೆಯಲಿದೆ ಎಂದು ಜಲಾಲಿಯ್ಯಾ ರಾತೀಬ್ ಸಮಿತಿ ಸಂಚಾಲಕ ಇಸಾಕ್ ಸಾಲ್ಮರ ತಿಳಿಸಿದ್ದಾರೆ. ಗುರುವಾರ ಅವರು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಕಾರ್ಯಕ್ರಮವನ್ನು ಕೆಮ್ಮಾಯಿ ಮದ್ರಸಾದ ಮಹಮ್ಮದ್ ಇರ್ಶಾದ್ ಸಖಾಫಿ ಉದ್ಘಾಟಿಸಲಿದ್ದಾರೆ.  ಹಾಜಿ ಸಯ್ಯದ್ ಅಬೂಬಕ್ಕರ್ ಅಧ್ಯಕ್ಷತೆ ವಹಿಸುವರು. ಬಿ.ಕೆ.ಅಬ್ದುಲ್ ಮಜೀದ್ ಸ್ವಾಗತಿಸಲಿದ್ದಾರೆ. ಸಾಲ್ಮರದ ಅಲ್ ಹಾಜಿ ಅಸ್ಸಯಿದ್ ಮಹಮ್ಮದ್, ಅಸ್ಸಯಿದ್ ಹಾಮಿದ್

 ಜ.7: 2ನೇ ವರ್ಷದ ‘ಜಲಾಲಿಯ್ಯಾ ರಾತೀಬ್ ಮಸ್ಲಿಸ್’ Read More »

ಜ.6: ಜಿಲ್ಲಾ ವಾಲಿಬಾಲ್ ಪಂದ್ಯಾಟ | ಜಿಲ್ಲಾ ಚಾಂಪಿಯನ್ ಶಿಪ್-2023

ಪುತ್ತೂರು: ದಕ್ಷಿಣ ಕನ್ನಡ ಜಿಲ್ಲಾ ವಾಲಿಬಾಲ್ ಸಂಸ್ಥೆ ಆಶ್ರಯದಲ್ಲಿ ತಾಲೂಕು ವಾಲಿಬಾಲ್ ಸಂಸ್ಥೆ ಮತ್ತು ಸುದಾನ ವಸತಿಯುತ ವಿದ್ಯಾಸಂಸ್ಥೆಯ ಸಹಯೋಗದೊಂದಿಗೆ ಜಿಲ್ಲಾ ಮಟ್ಟದ ಶಾಲಾ ಬಾಲಕ ಬಾಲಕಿಯರ ವಾಲಿಬಾಲ್ ಪಂದ್ಯಾಟ ‘ಜಿಲ್ಲಾ ಚಾಂಪಿಯಶಿಪ್-2023’ ಜ.6 ಶನಿವಾರ ಸುದಾನ ಶಾಲಾ ಮೈದಾನದಲ್ಲಿ ನಡೆಯಲಿದೆ ಎಂದು ದ.ಕ.ಜಿಲ್ಲಾ ವಾಲಿಬಾಲ್ ಸಂಸ್ಥೆಯ ಬಿ.ಎಸ್.ಸತೀಶ್ ಕುಮಾರ್ ತಿಳಿಸಿದ್ದಾರೆ. ಅವರು ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ ದ.ಕ. ಜಿಲ್ಲೆಯ ವಾಲಿಬಾಲ್‍ಆಟಗಾರರು ರಾಜ್ಯದಲ್ಲಿ ಮುಂದಿದ್ದು, ರಾಷ್ಟ್ರಮಟ್ದದಲ್ಲೂ ಮುಂಚೂಣಿಯಲ್ಲಿದ್ದಾರೆ, ಈಗಾಗಲೇ ಜಿಲ್ಲೆ 24ತಂಡಗಳು ನೋಂದಾಯಿಸಿಕೊಂಡಿದ್ದು, ಇನ್ನೂ ನೊಂದಾವಣೆಗೆ ಅವಕಾಶವಿದೆ.

ಜ.6: ಜಿಲ್ಲಾ ವಾಲಿಬಾಲ್ ಪಂದ್ಯಾಟ | ಜಿಲ್ಲಾ ಚಾಂಪಿಯನ್ ಶಿಪ್-2023 Read More »

ರಾಜಕೀಯ ಪ್ರವೇಶ ಮಾಡಿದ ಅಶ್ವಿನ್ ಎಲ್‍. ಶೆಟ್ಟಿ | ಜಿಲ್ಲಾ ಬಿಜೆಪಿ ಮುಖಂಡರ ಸಮ್ಮುಖದಲ್ಲಿ ಸೇರ್ಪಡೆ

ಮಂಗಳೂರು: ಸಹಕಾರಿ, ಧುರೀಣ ಸವಣೂರು ಸೀತಾರಾಮ ರೈ ಅವರ ಅಳಿಯ ಅಶ್ವಿನ್ ಎಲ್. ಶೆಟ್ಟಿ ರಾಜಕೀಯ ಪ್ರವೇಶ ಮಾಡಿದ್ದಾರೆ. ಇಂದು ಮಂಗಳೂರಿನ ಬಿಜೆಪಿ ಜಿಲ್ಲಾ ಕಚೇರಿಯಲ್ಲಿ ಜಿಲ್ಲಾಧ್ಯಕ್ಷ ಸುದರ್ಶನ್ ಮೂಡಬಿದ್ರಿ ಮತ್ತು ದ.ಕ. ಸಂಸದ ನಳಿನ್ ಕುಮಾರ್ ಕಟೀಲ್ ಹಾಗೂ ಶಾಸಕಿ ಭಾಗೀರಥಿ ಮುರುಳ್ಯ ಸಮ್ಮುಖದಲ್ಲಿ ಅವರು ಬಿಜೆಪಿ ಸೇರಿದರು. ಈ ಸಂದರ್ಭದಲ್ಲಿ ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಬೂಡಿಯಾರ್ ರಾಧಾಕೃಷ್ಣ ರೈ, ಪ್ರಧಾನ ಕಾರ್ಯದರ್ಶಿ ರಾಮದಾಸ್‌ ಬಂಟ್ವಾಳ, ಸಂತೋಷ ಕುಮಾರ್ ಬೊಳಿಯಾರು, ಬಿಜೆಪಿ ಮಂಡಲ ಸಮಿತಿ ಅಧ್ಯಕ್ಷ

ರಾಜಕೀಯ ಪ್ರವೇಶ ಮಾಡಿದ ಅಶ್ವಿನ್ ಎಲ್‍. ಶೆಟ್ಟಿ | ಜಿಲ್ಲಾ ಬಿಜೆಪಿ ಮುಖಂಡರ ಸಮ್ಮುಖದಲ್ಲಿ ಸೇರ್ಪಡೆ Read More »

ಬ್ಯಾನರ್ ಅಳವಡಿಸುವ ಮೂಲಕ ಜನರ ದಾರಿ ತಪ್ಪಿಸುತ್ತಿರುವ ಹಾಲಿ ಶಾಸಕರು | ಪತ್ರಿಕಾಗೋಷ್ಠಿಯಲ್ಲಿ ಮುಕುಂದ ಬಜತ್ತೂರು ಆರೋಪ

ಪುತ್ತೂರು: ಪುತ್ತೂರು-ಉಪ್ಪಿನಂಗಡಿ ಚತುಷ್ಪಥ ರಸ್ತೆ ಹಿಂದೊಮ್ಮೆ ಮಾಜಿ ಶಾಸಕರಿಂದ ಗುದ್ದಲಿ ಪೂಜೆ ನಡೆದು ಕಾಮಗಾರಿ ಆರಂಭಗೊಂಡಿದ್ದು, ಬಹುತೇಕ ಕಾಮಗಾರಿ ಪೂರ್ಣಗೊಂಡಿದೆ. ಇದೀಗ ಹಾಲಿ ಶಾಸಕರು ಬೇರಿಕೆ-34ನೇ ನೆಕ್ಕಿಲಾಡಿ 10 ಕೋಟಿ ಬಿಡುಗಡೆ ಮಾಡಿದ್ದೇನೆ ಎಂದು ಬ್ಯಾನರ್ ಅಳವಡಿಸುವುದರೊಂದಿಗೆ ಮತ್ತೊಮ್ಮೆ ಗುದ್ದಲಿ ಪೂಜೆ ನಡೆಸುವ ಮೂಲಕ ಜನರನ್ನು ದಾರಿ ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ ಎಂದು ಉಪ್ಪಿನಂಗಡಿ ಬಿಜೆಪಿ ಮಹಾಶಕ್ತಿ ಕೇಂದ್ರದ ಅಧ್ಯಕ್ಷ ಮುಕುಂದ ಬಜತ್ತೂರು ಆರೋಪಿಸಿದ್ದಾರೆ. ಅವರು ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಪುತ್ತೂರು-ಉಪ್ಪಿನಂಗಡಿ-ಗುರುವಾಯನಕೆರೆ ಚತುಷ್ಪಥ ರಸ್ತೆಗೆ 2022 ರಲ್ಲಿ

ಬ್ಯಾನರ್ ಅಳವಡಿಸುವ ಮೂಲಕ ಜನರ ದಾರಿ ತಪ್ಪಿಸುತ್ತಿರುವ ಹಾಲಿ ಶಾಸಕರು | ಪತ್ರಿಕಾಗೋಷ್ಠಿಯಲ್ಲಿ ಮುಕುಂದ ಬಜತ್ತೂರು ಆರೋಪ Read More »

error: Content is protected !!
Scroll to Top