ಬಸ್‌ ಕಂದಕಕ್ಕೆ ಉರುಳಿ ಬಿದ್ದು 9 ಪ್ರಯಾಣಿಕರು ಸಾವು

ತಿರುವಿನಲ್ಲಿ ಚಾಲಕನ ನಿಯಂತ್ರಣ ತಪ್ಪಿ ಅಪಘಾತಕ್ಕೀಡಾದ ಬಸ್‌ ಹೈದರಾಬಾದ್‌ : ಆಂಧ್ರಪ್ರದೇಶ ಅಲ್ಲೂರು ಎಂಬಲ್ಲಿ ಬಸ್ ಚಾಲಕನ ನಿಯಂತ್ರಣ ತಪ್ಪಿ ಕಂದಕಕ್ಕೆ ಉರುಳಿದ ಪರಿಣಾಮ 9 ಪ್ರಯಾಣಿಕರು ಸಾವನ್ನಪ್ಪಿರುವ ಘಟನೆ ನಡೆದಿದೆ. 12ಕ್ಕೂ ಅಧಿಕ ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ. ಬಸ್ ಸಂಪೂರ್ಣ ನಜ್ಜುಗುಜ್ಜಾಗಿದೆ. ಮೃತದೇಹಗಳು ಚೆಲ್ಲಾಪಿಲ್ಲಿಯಾಗಿ ಬಟ್ಟೆಯ ರಾಶಿಯಂತೆ ಬಿದ್ದಿದ್ದವು. ಬೆಳಗಿನ ಜಾವ 5.30ರ ಸಮಯದಲ್ಲಿ ಅಲ್ಲೂರಿನ ತುಳಸಿಪಕಲು ಗ್ರಾಮದ ಬಳಿ ನಡೆದಿದೆ. ಜಿಲ್ಲಾಧಿಕಾರಿಗಳ ಪ್ರಕಾರ, ಬಸ್ಸಿನಲ್ಲಿ 35 ಪ್ರಯಾಣಿಕರು, ಇಬ್ಬರು ಚಾಲಕರು ಮತ್ತು ಒಬ್ಬ ಕ್ಲೀನರ್ […]

ಬಸ್‌ ಕಂದಕಕ್ಕೆ ಉರುಳಿ ಬಿದ್ದು 9 ಪ್ರಯಾಣಿಕರು ಸಾವು Read More »

ಉಪ್ಪಿನಂಗಡಿ : ಅಂಗಡಿ ಡ್ರಾಯರ್‌ನಿಂದ 5 ಲ.ರೂ. ಕದ್ದಿದ್ದ ಆರೋಪಿಗಳು ಸೆರೆ

ಉಪ್ಪಿನಂಗಡಿ : ಇಲ್ಲಿನ ಗಾಂಧಿಪಾರ್ಕ್ ಬಳಿಯ ವಾಣಿಜ್ಯ ಸಂಕೀರ್ಣದಲ್ಲಿರುವ ಅಡಿಕೆ ಮತ್ತು ಕಾಡುತ್ಪತ್ತಿ ಖರೀದಿ ಕೇಂದ್ರದೊಳಗೆ ಹಾಡಹಗಲೇ ನುಗ್ಗಿ ಡ್ರಾಯರ್‌ನಲ್ಲಿದ್ದ 5 ಲಕ್ಷ ರೂ ಹಾಗೂ ದಾಖಲೆ ಪತ್ರ, ಚೆಕ್‌ಗಳಿದ್ದ ಬ್ಯಾಗ್ ಅನ್ನು ದೋಚಿದ ಪ್ರಕರಣದ ಆರೋಪಿಗಳು ಸೆರೆಯಾಗಿದ್ದಾರೆ. ಮತ್ತೊಂದು ಪ್ರಕರಣಕ್ಕೆ ಸಂಬಂಧಿಸಿ ಚಿಕ್ಕಮಗಳೂರು ಜಿಲ್ಲೆಯ ಎನ್.ಆರ್.ಪುರ ಪೊಲೀಸರು ಇಬ್ಬರನ್ನು ಬಂಧಿಸಿದ್ದು, ಈ ಆರೋಪಿಗಳನ್ನು ಉಪ್ಪಿನಂಗಡಿ ಪೊಲೀಸರು ಕಸ್ಟಡಿಗೆ ತೆಗೆದುಕೊಂಡು ಪ್ರಕರಣ ದಾಖಲಿಸಿದ್ದಾರೆ. ಮೂಡಿಗೆರೆ ನಿವಾಸಿಗಳಾದ ಮುಹಮ್ಮದ್ ಶಹಬಾದ್ (26) ಮತ್ತು ಜಂಶೀದ್ (25) ಬಂಧಿತ ಆರೋಪಿಗಳು.

ಉಪ್ಪಿನಂಗಡಿ : ಅಂಗಡಿ ಡ್ರಾಯರ್‌ನಿಂದ 5 ಲ.ರೂ. ಕದ್ದಿದ್ದ ಆರೋಪಿಗಳು ಸೆರೆ Read More »

ಉಪ್ಪಿನಂಗಡಿ: ಕಾರು-ಬೈಕ್‌ ಡಿಕ್ಕಿಯಾಗಿ ಸವಾರನಿಗೆ ಗಂಭೀರ ಗಾಯ

ಉಪ್ಪಿನಂಗಡಿ : ಕಾರು ಮತ್ತು ಬೈಕ್ ನಡುವೆ ಮುಖಾಮುಖಿ ಢಿಕ್ಕಿಯಾದ ಪರಿಣಾಮ ಬೈಕ್ ಸವಾರ ಗಂಭೀರ ಗಾಯಗೊಂಡ ಘಟನೆ ಗುರುವಾರ ರಾತ್ರಿ ನೆಕ್ಕಿಲಾಡಿಯಲ್ಲಿ ನಡೆದಿದೆ. ಮಠ ನಿವಾಸಿ ಬದ್ರುದ್ದೀನ್ ಎಂಬವರು ಗಾಯಗೊಂಡವರು. ಬದ್ರುದ್ದೀನ್ ಕೂಟೇಲಿನಲ್ಲಿರುವ ಹೋಟೆಲೊಂದರಲ್ಲಿ ಕೆಲಸಕ್ಕಿದ್ದರೆನ್ನಲಾಗಿದೆ. ಚತುಷ್ಪಥ ರಾಷ್ಟ್ರೀಯ ಹೆದ್ದಾರಿಯಲ್ಲಿ ಉಪ್ಪಿನಂಗಡಿಯಿಂದ ನೆಕ್ಕಿಲಾಡಿಗೆ ರಾಂಗ್ ಸೈಡ್‌ನಲ್ಲಿ ಸಾಗುತ್ತಿದ್ದಾಗ ಉಪ್ಪಿನಂಗಡಿ ಕಡೆಗೆ ಬರುತ್ತಿದ್ದ ಕಾರು ಢಿಕ್ಕಿಯಾಗಿದೆ. ಗಂಭೀರ ಗಾಯಗೊಂಡ ಬದ್ರುದ್ದೀನ್‌ಗೆ ಪುತ್ತೂರು ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿ, ಹೆಚ್ಚಿನ ಚಿಕಿತ್ಸೆಗೆ ಮಂಗಳೂರಿಗೆ ಕರೆದೊಯ್ಯಲಾಗಿದೆ.

ಉಪ್ಪಿನಂಗಡಿ: ಕಾರು-ಬೈಕ್‌ ಡಿಕ್ಕಿಯಾಗಿ ಸವಾರನಿಗೆ ಗಂಭೀರ ಗಾಯ Read More »

ಬೆಳಗಾವಿಯಲ್ಲೂ ಮುಂದುವರಿದ ಕುರ್ಚಿ ಕಿತ್ತಾಟ : ಆಪ್ತರಿಗೆ ಡಿನ್ನರ್‌ ಮೀಟಿಂಗ್‌

ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್‌ ಅವರಿಂದ ಆಪ್ತರಿಗೆ ಪ್ರತ್ಯೇಕವಾಗಿ ಭೋಜನ ಕೂಟ ಬೆಳಗಾವಿ : ಬ್ರೇಕ್‌ಫಾಸ್ಟ್‌ ಪಾಲಿಟಿಕ್ಸ್‌ ಆಯಿತು, ಈಗ ಡಿನ್ನರ್‌ ಪಾಲಿಟಿಕ್ಸ್‌ ಸರದಿ. ಎಷ್ಟೇ ತೇಪೆ ಹಾಕಿದರೂ ಕಾಂಗ್ರೆಸ್‌ನ ಕುರ್ಚಿ ಕಿತ್ತಾಟ ಶಮನವಾಗುತ್ತಿಲ್ಲ. ಬೆಳಗಾವಿಯಲ್ಲಿ ನಡೆಯುತ್ತಿರುವ ವಿಧಾನಸಭೆ ಚಳಿಗಾಲದ ಅಧಿವೇಶನದ ಮಧ್ಯೆಯೂ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ನಡುವಿನ ಶೀತಲ ಸಮರವೂ ಜೋರಾಗಿದೆ. ಸಿದ್ದರಾಮಯ್ಯ ಆಪ್ತರು ನಡೆಸಿದ ಡಿನ್ನರ್ ಸಭೆಯ ಬೆನ್ನಲ್ಲೇ ಡಿ.ಕೆ ಶಿವಕುಮಾರ್ ಗುರುವಾರ ರಾತ್ರಿ ಆಪ್ತರಿಗಾಗಿ ವಿಶೇಷ ಡಿನ್ನರ್ ಮೀಟಿಂಗ್ ಆಯೋಜಿಸಿದ್ದಾರೆ. ಬೆಳಗಾವಿ ಹೊರವಲಯದಲ್ಲಿರುವ

ಬೆಳಗಾವಿಯಲ್ಲೂ ಮುಂದುವರಿದ ಕುರ್ಚಿ ಕಿತ್ತಾಟ : ಆಪ್ತರಿಗೆ ಡಿನ್ನರ್‌ ಮೀಟಿಂಗ್‌ Read More »

ನಾಯಕರಿಬ್ಬರ ಸತತ ವೈಫಲ್ಯ, ದುಬಾರಿಯಾದ ಬೌಲಿಂಗ್‌

ಎರಡನೇ ಟಿ20 ಪಂದ್ಯದಲ್ಲಿ 51 ರನ್‌ಗಳಿಂದ ಹೀನಾಯವಾಗಿ ಸೋತ ಟೀಂ ಇಂಡಿಯಾ ಚಂಡೀಗಢ: ಚಂಡೀಗಢದಲ್ಲಿ ನಡೆದ ಎರಡನೇ ಟಿ20 ಪಂದ್ಯದಲ್ಲಿ ಭಾರತ ದಕ್ಷಿಣ ಆಫ್ರಿಕಾ ವಿರುದ್ಧ 51 ರನ್‌ಗಳಿಂದ ಸೋತಿದೆ. ಟೀಂ ಇಂಡಿಯಾದ ಅಗ್ರ ಕ್ರಮಾಂಕ, ವಿಶೇಷವಾಗಿ ನಾಯಕ ಸೂರ್ಯಕುಮಾರ್ ಮತ್ತು ಉಪನಾಯಕ ಶುಭ್​ಮನ್ ಗಿಲ್ ಅವರ ಕಳಪೆ ಪ್ರದರ್ಶನ ಮತ್ತು ಆರ್ಷದೀಪ್‌ ಸಿಂಗ್‌ ದುಬಾರಿ ಬೌಲಿಂಗ್‌ ಸೋಲಿಗೆ ಪ್ರಮುಖ ಕಾರಣ. ಕಟಕ್‌ನಲ್ಲಿ ನಡೆದ ಮೊದಲ ಟಿ20 ಪಂದ್ಯದಲ್ಲಿ ದಕ್ಷಿಣ ಆಫ್ರಿಕಾವನ್ನು 101 ರನ್​ಗಳಿಂದ ಸೋಲಿಸಿದ್ದ ಟೀಂ

ನಾಯಕರಿಬ್ಬರ ಸತತ ವೈಫಲ್ಯ, ದುಬಾರಿಯಾದ ಬೌಲಿಂಗ್‌ Read More »

ರಾಜ್ಯದಲ್ಲಿ ಹದಗೆಟ್ಟಿರುವ ಕಾನೂನು ಸುವ್ಯವಸ್ಥೆ ಬಗ್ಗೆ ಗೃಹಸಚಿವರನ್ನು ಪ್ರಶ್ನಿಸಿದ MLC ಕಿಶೋರ್ ಕುಮಾರ್

ಪುತ್ತೂರು: ಬೆಳಗಾವಿಯಲ್ಲಿ ನಡೆಯುತ್ತಿರುವ ಚಳಿಗಾಲದ ಅಧಿವೇಶನದಲ್ಲಿ ವಿಧಾನ ಪರಿಷತ್ ಸದಸ್ಯ ಕಿಶೋರ್ ಕುಮಾರ್ ಪುತ್ತೂರು ಅವರು ಇಂದು ರಾಜ್ಯದಲ್ಲಿ ಹೆಚ್ಚುತ್ತಿರುವ ದರೋಡೆ, ಸುಲಿಗೆ, ಮನೆಕಳ್ಳತನ ಹಾಗೂ ದ್ವಿಚಕ್ರ ವಾಹನ ಕಳ್ಳತನ ಪ್ರಕರಣಗಳ ಕುರಿತಾಗಿ ಗೃಹಸಚಿವರನ್ನು ಕಠಿಣವಾಗಿ ಪ್ರಶ್ನಿಸಿದರು. ಅವರ ಪ್ರಶ್ನೆಗೆ ಗೃಹಸಚಿವರು ಉತ್ತರಿಸಿದ್ದು, ಅವರು ನೀಡಿದ ಅಧಿಕೃತ ಅಂಕಿಅಂಶಗಳು ರಾಜ್ಯದ ಜನತೆಯನ್ನು ಬೆಚ್ಚಿಬೀಳಿಸುವಂತಿವೆ. MLC ಕಿಶೋರ್ ಪತ್ರಿಕೆಗೆ ಪ್ರತಿಕ್ರಿಯೆ ನೀಡುತ್ತಾ ಅಂಕಿ ಅಂಶಗಳ ಮೇಲೆಯೂ ಬೆಳಕು ಚೆಲ್ಲಿದ್ದು, ಕಳೆದ ಮೂರು ವರ್ಷಗಳ ಅಂಕಿಅಂಶವೇ ಕಾನೂನು-ಸುವ್ಯವಸ್ಥೆ ಸಂಪೂರ್ಣ ಕುಸಿದಿದೆ

ರಾಜ್ಯದಲ್ಲಿ ಹದಗೆಟ್ಟಿರುವ ಕಾನೂನು ಸುವ್ಯವಸ್ಥೆ ಬಗ್ಗೆ ಗೃಹಸಚಿವರನ್ನು ಪ್ರಶ್ನಿಸಿದ MLC ಕಿಶೋರ್ ಕುಮಾರ್ Read More »

ಮೈಸೂರು ಅರಮನೆಯ ಮುಖ್ಯದ್ವಾರವೊಂದರ ‌ಮೇಲ್ಛಾವಣಿಯ ಸ್ವಲ್ಪ ಭಾಗ ಕುಸಿತ

ಮೈಸೂರು: ಐತಿಹಾಸಿಕ ಮೈಸೂರು ಅರಮನೆಯ ವರಾಹ ಗೇಟ್ ಬಳಿ ಮುಖ್ಯದ್ವಾರದ ಮೇಲ್ಛಾವಣೆಯ ಸಣ್ಣ ಭಾಗವೊಂದು ಮುರಿದಿದ್ದು, ಅದೃಷ್ಟವಶಾತ್ ಭಾರೀ ಅನಾಹುತವೊಂದು ‌ತಪ್ಪಿದೆ. ಗೇಟಿನ ಮೇಲ್ಭಾಗದ ಸಣ್ಣ ಪ್ರಮಾಣದ ಚಾವಣಿ ಕುಸಿದು ಬಿದ್ದಿದ್ದು, ಆ ಸಂದರ್ಭದಲ್ಲಿ ಗೇಟಿನ ಸಮೀಪ ಸಾರ್ವಜನಿಕರ್ಯಾರೂ ಇರದ ಕಾರಣ ಯಾವುದೇ ರೀತಿಯ ಪ್ರಾಣಾಪಾಯ ಸಂಭವಿಸಿಲ್ಲ. ಆದರೆ ಕುಸಿತಕ್ಕೆ ಒಳಗಾದ ಭಾಗವು ಸಿಬ್ಬಂದಿಯೊಬ್ಬರು ನಿಲ್ಲಿಸಿದ್ದ ದ್ವಿಚಕ್ರ ವಾಹನದ ಮೇಲೆ ಬಿದ್ದಿದೆ. ಕೂಡಲೇ ಅರಮನೆಯ ಸಿಬ್ಬಂದಿ ಎಚ್ಚೆತ್ತು ಸ್ಥಳದಲ್ಲಿ ಬ್ಯಾರಿಕೇಡ್‌ಗಳನ್ನು ಅಳವಡಿಸಿದ್ದಾರೆ. ಅಗತ್ಯ ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡಿದ್ದಾರೆ

ಮೈಸೂರು ಅರಮನೆಯ ಮುಖ್ಯದ್ವಾರವೊಂದರ ‌ಮೇಲ್ಛಾವಣಿಯ ಸ್ವಲ್ಪ ಭಾಗ ಕುಸಿತ Read More »

ಸರ್ಕಾರಿ ಆಸ್ಪತ್ರೆಯಲ್ಲಿ ಜನೌಷಧಿ ಕೇಂದ್ರ ಮುಚ್ಚಲು ರಾಜ್ಯ ಸರ್ಕಾರ ಹೊರಡಿಸಿದ್ದ ಆದೇಶಕ್ಕೆ ಹೈಕೋರ್ಟ್ ತಡೆ

ಧಾರವಾಡ: ಸರ್ಕಾರಿ ಆಸ್ಪತ್ರೆಯಲ್ಲಿನ ಜನೌಷಧ ಕೇಂದ್ರ ಮುಚ್ಚುವುದಕ್ಕೆ ರಾಜ್ಯ ಸರ್ಕಾರ ಹೊರಡಿಸಿದ್ದ ಆದೇಶಕ್ಕೆ ಹೈಕೋರ್ಟ್ ತಡೃಯಾಜ್ಞೆ ನೀಡಿದೆ. ಆ ಮೂಲಕ ರಾಜ್ಯ ಸರ್ಕಾರಕ್ಕೆ ದೊಡ್ಡ ಮಟ್ಟದ ಹಿನ್ನಡೆಯಾಗಿದೆ. ರಾಜ್ಯ ಸರ್ಕಾರದ ಆದೇಶವನ್ನು ಪ್ರಶ್ನೆ ಮಾಡಿ ರಾಕೇಶ್, ಮಹಾಲಿಂಗಪ್ಪ ‌ಮೊದಲಾದವರು ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು. ಆ ಅರ್ಜಿಯನ್ನು ವಿಚಾರಣೆಗೆ ಒಳಪಡಿಸಿದ ನ್ಯಾಯಾಲಯ ರಾಜ್ಯ ಕಾಂಗ್ರೆಸ್ ಸರ್ಕಾರದ ಆದೇಶವನ್ನು ರದ್ದು ಮಾಡಿರುವುದಾಗಿದೆ. 120 ಚದರ ಅಡಿ ಜಾಗದಲ್ಲಿ ಜನೌಷಧಿ ಮೂಲಕ ಜನಸಾಮಾನ್ಯರಿಗೆ ಕಡಿಮೆ ದರದಲ್ಲಿ ಔಷಧ ಒದಗಿಸಿದಲ್ಲಿ ನಿಮಗೇನು ನಷ್ಟ?

ಸರ್ಕಾರಿ ಆಸ್ಪತ್ರೆಯಲ್ಲಿ ಜನೌಷಧಿ ಕೇಂದ್ರ ಮುಚ್ಚಲು ರಾಜ್ಯ ಸರ್ಕಾರ ಹೊರಡಿಸಿದ್ದ ಆದೇಶಕ್ಕೆ ಹೈಕೋರ್ಟ್ ತಡೆ Read More »

ರಾಜ್ಯದಲ್ಲಿ ಮುಖ್ಯಮಂತ್ರಿ ಬದಲಾವಣೆಯಿಲ್ಲ : ಯತೀಂದ್ರ ಸ್ಪಷ್ಟನೆ

ಐದು ವರ್ಷ ಸಿದ್ದರಾಮಯ್ಯನವರೇ ಸಿಎಂ ಆಗಿರುತ್ತಾರೆ ಎಂದು ಹೇಳಿಕೆ ಬೆಳಗಾವಿ: ರಾಜ್ಯದಲ್ಲಿ ನಾಯಕತ್ವ ಬದಲಾವಣೆ ಇಲ್ಲ ಎಂದು ಹೈಕಮಾಂಡ್‌ ಸ್ಪಷ್ಟವಾಗಿ ಹೇಳಿದೆ ಎನ್ನುವ ಮೂಲಕ ಸಿದ್ದರಾಮಯ್ಯನವರ ಪುತ್ರ, ವಿಧಾನ ಪರಿಷತ್‌ ಸದಸ್ಯ ಯತೀಂದ್ರ ಸಿದ್ದರಾಮಯ್ಯ ಮತ್ತೆ ಬಾಂಬ್‌ ಸಿಡಿಸಿದ್ದಾರೆ. ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಅವರು, ನನ್ನ ತಂದೆಯೇ 5 ವರ್ಷ ಮುಖ್ಯಮಂತ್ರಿ ಆಗಿರುತ್ತಾರೆ. ರಾಜ್ಯದಲ್ಲಿ ನಾಯಕತ್ವ ಬದಲಾವಣೆ ಇಲ್ಲ ಎಂದು ಹೈಕಮಾಂಡ್‌ ಸ್ಪಷ್ಟವಾಗಿ ಹೇಳಿದೆ ಎಂದಿದ್ದಾರೆ. ಕುರ್ಚಿ ಕಿತ್ತಾಟದ ಬಗ್ಗೆ ಯಾರೂ ಬಹಿರಂಗ ಹೇಳಿಕೆ ನೀಡದಂತೆ ಸ್ವತಹ ಸಿದ್ದರಾಮಯ್ಯನವರೇ

ರಾಜ್ಯದಲ್ಲಿ ಮುಖ್ಯಮಂತ್ರಿ ಬದಲಾವಣೆಯಿಲ್ಲ : ಯತೀಂದ್ರ ಸ್ಪಷ್ಟನೆ Read More »

ಋತುಚಕ್ರ ರಜೆ ಆದೇಶ : ಹೈಕೋರ್ಟಿನಲ್ಲಿ ಸರ್ಕಾರ ಸಮರ್ಥನೆ

ಮಹಿಳಾ ನೌಕರರ ಆರೋಗ್ಯ ದೃಷ್ಟಿಯಿಂದ ಆದೇಶ ಎಂದು ವಾದ ಬೆಂಗಳೂರು: ಮಹಿಳಾ ನೌಕರರಿಗೆ ತಿಂಗಳಲ್ಲಿ ಒಂದು ದಿನ ಋತುಚಕ್ರದ ರಜೆ ನೀಡುವ ನೀತಿಯನ್ನು ಸರ್ಕಾಸರ ಹೈಕೋರ್ಟ್‌ನಲ್ಲಿ ಬಲಕವಾಗಿ ಸಮರ್ಥಿಸಿಕೊಂಡಿದ್ದು, ಸಂವಿಧಾನದ 162ನೇ ವಿಧಿಯ ಅಡಿಯಲ್ಲಿ ಕಾರ್ಯನಿರ್ವಾಹಕ ಆದೇಶಗಳನ್ನು ಹೊರಡಿಸಲು ರಾಜ್ಯಕ್ಕೆ ಅಧಿಕಾರ ನೀಡುವ ಸುಪ್ರೀಂ ಕೋರ್ಟ್‌ನ ತೀರ್ಪನ್ನು ಬುಧವಾರ ಉಲ್ಲೇಖಿಸಿದೆ. 18ರಿಂದ 52 ವರ್ಷದೊಳಗಿನ ಮಹಿಳೆಯರಿಗೆ ತಿಂಗಳಲ್ಲಿ ಒಂದು ದಿನ ಮುಟ್ಟಿನ ರಜೆ ನೀಡುವ ಅಧಿಸೂಚನೆಯನ್ನು ಸರ್ಕಾರ ನವೆಂಬರ್ 20 ರಂದು ಹೊರಡಿಸಿತ್ತು. ಈ ಅಧಿಸೂಚನೆಯನ್ನು ಪ್ರಶ್ನಿಸಿ

ಋತುಚಕ್ರ ರಜೆ ಆದೇಶ : ಹೈಕೋರ್ಟಿನಲ್ಲಿ ಸರ್ಕಾರ ಸಮರ್ಥನೆ Read More »

error: Content is protected !!
Scroll to Top