ಎಡಕ್ಕಾನ ಗಣಪತಿ ಭಟ್ ನಿಧನ

ಪುತ್ತೂರು: ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವಠಾರದಲ್ಲಿರುವ ಅಯ್ಯಪ್ಪ ಗುಡಿಯ ಮಾಜಿ ಅರ್ಚಕ ಸುಳ್ಯ ತಾಲೂಕಿನ ಕಲ್ಮಡ್ಕ ನಿವಾಸಿ ಎಡಕ್ಕಾನ ಗಣಪತಿ  ಭಟ್ (79) ಶನಿವಾರ ನಿಧನರಾದರು. ಕಲ್ಮಡ್ಕದ ಎಡಕ್ಕಾನ ನಿವಾಸಿಯಾಗಿರುವ ಮೃತರು ಹಲವು ವರ್ಷಗಳ ಕಾಲ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಅಯ್ಯಪ್ಪ ಗುಡಿಯಲ್ಲಿ ಪ್ರಧಾನ ಅರ್ಚಕರಾಗಿ ಸೇವೆ ಸಲ್ಲಿಸಿದ್ದರು. ಇತ್ತೀಚೆಗೆ ಅಸೌಖ್ಯದಿಂದ ಪುತ್ತೂರು ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದರು. ಮಧ್ಯಾಹ್ನ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ. ಮೃತರು ಪತ್ನಿ, ಪುತ್ರ ಹಾಗೂ ಇಬ್ಬರು ಪುತ್ರಿಯನ್ನು ಅಗಲಿದ್ದಾರೆ.

ಎಡಕ್ಕಾನ ಗಣಪತಿ ಭಟ್ ನಿಧನ Read More »

ಸವಣೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಚುನಾವಣಾ ಫಲಿತಾಂಶ ಪ್ರಕಟ | 12 ರಲ್ಲಿ 12 ಸ್ಥಾನ ಗೆದ್ದೂ ಬೀಗಿದ ಬಿಜೆಪಿ ಬೆಂಬಲಿತ ಸಹಕಾರ ಭಾರತಿ

ಸವಣೂರು: ಪ್ರತಿಷ್ಠಿತ ಸವಣೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ಸಹಕಾರ ಭಾರತಿ ಪಾಲಾಗಿದೆ. ಆಡಳಿತ ಮಂಡಳಿಯ ನಿರ್ದೇಶಕರ ಆಯ್ಕೆ ಪ್ರಕ್ರಿಯೆಯಲ್ಲಿ ಸಹಕಾರ ಭಾರತಿ ಬಹುಮತದಿಂದ ಆಯ್ಕೆಯಾಗಿದೆ.  ಆಡಳಿತ ಮಂಡಳಿಗೆ ನಿರ್ದೇಶಕರ ಆಯ್ಕೆ ಪ್ರಕ್ರಿಯೆ ಶನಿವಾರ ನಡೆಯಿತು. ಒಟ್ಟು 12 ಸ್ಥಾನಗಳ ಪೈಕಿ ಈಗಾಗಲೇ ಒಂದು ಸ್ಥಾನಕ್ಕೆ ಅವಿರೋಧ ಆಯ್ಕೆ ನಡೆದಿದ್ದು, ಸಾಲಗಾರರಲ್ಲದ ಕ್ಷೇತ್ರದಿಂದ ಬಿಜೆಪಿ ಬೆಂಬಲಿತ ಸಹಕಾರ ಭಾರತಿಯಿಂದ ಪ್ರಕಾಶ್ ರೈ ಸಾರಕರೆ ಓರ್ವರೇ ನಾಮಪತ್ರ ಸಲ್ಲಿಸಿದ್ದರಿಂದ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.  ಉಳಿದ 11 ಸ್ಥಾನಗಳಿಗೆ ಚುನಾವಣೆ ನಡೆದು

ಸವಣೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಚುನಾವಣಾ ಫಲಿತಾಂಶ ಪ್ರಕಟ | 12 ರಲ್ಲಿ 12 ಸ್ಥಾನ ಗೆದ್ದೂ ಬೀಗಿದ ಬಿಜೆಪಿ ಬೆಂಬಲಿತ ಸಹಕಾರ ಭಾರತಿ Read More »

ಚಾಲಕನ ನಿಯಂತ್ರಣ ತಪ್ಪಿ ಟಿಪ್ಪರ್ ಲಾರಿ ಪ್ರಪಾತಕ್ಕೆ !

ಚಾರ್ಮಾಡಿ: ಚಾಲಕನ ನಿಯಂತ್ರಣ ತಪ್ಪಿ ಟಿಪ್ಪರ್ ಲಾರಿಯೊಂದು ಪ್ರಪಾತಕ್ಕೆ ಬಿದ್ದಿದ್ದು, ಚಾಲಕ ಗಾಯಗೊಂಡು ಮಂಗಳೂರಿನ ಆಸ್ಪತ್ರೆಗೆ ದಾಖಲಾಗಿದ್ದಾರೆ. ಮೂಡಿಗೆರೆಯಿಂದ ಮಂಗಳೂರಿಗೆ ಹೋಗುತ್ತಿದ್ದ ಟಿಪ್ಪರ್ ಲಾರಿ ಚಾಲಕನ ನಿಯಂತ್ರಣ ತಪ್ಪಿ ಆಳವಾದ ಕಂದಕಕ್ಕೆ ಉರುಳಿದೆ. ಟಿಪ್ಪರ್ ಉರುಳಿ ಬಿಳುತ್ತಿದ್ದಂತೆ ಚಾಲಕ ಲಾರಿಯಿಂದ ಜಿಗಿದಿದ್ದಾನೆ ಎನ್ನಲಾಗಿದೆ. ಬಣಕಲ್ ಪೊಲೀಸರು ಹಾಗೂ ಸ್ಥಳೀಯರು ಪ್ರಪಾತಕ್ಕೆ ಇಳಿದು ಲಾರಿಗಾಗಿ ಶೋಧ ನಡೆಸಿದ್ದಾರೆ ಎಂದು ತಿಳಿದು ಬಂದಿದೆ.

ಚಾಲಕನ ನಿಯಂತ್ರಣ ತಪ್ಪಿ ಟಿಪ್ಪರ್ ಲಾರಿ ಪ್ರಪಾತಕ್ಕೆ ! Read More »

ಕಾರು ಚಾಲಕನ ನಿಯಂತ್ರಣ ತಪ್ಪಿ ಮಹಿಳೆಗೆ ಡಿಕ್ಕಿ : ಗಂಭೀರ ಗಾಯ

ಬೆಳ್ತಂಗಡಿ: ಕಾರು ಚಾಲಕನ ನಿಯಂತ್ರಣ ತಪ್ಪಿದ ಪರಿಣಾಮ ರಸ್ತೆ ಬದಿ ನಿಂತಿದ್ದ ಮಹಿಳೆಗೆ ಡಿಕ್ಕಿ ಹೊಡೆದು ಗಂಭೀರ ಗಾಯಗೊಂಡ ಘಟನೆ ಬೆಳ್ತಂಗಡಿ ತಾಲೂಕಿನ ಗುರುವಾಯನಕೆರೆ ಅಯ್ಯಪ್ಪನ ನಗರದ ಬಳಿ ನಡೆದಿದೆ. ಅಂಜಲಿ ಶೆಣೈ ಅಪಘಾತದಿಂದ ಗಂಭೀರ ಗಾಯಗೊಂಡವರು. ಮಹಿಳೆಯನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಅಪಘಾತದ ಬಳಿಕ ಕಾರು ಚಾಲಕ ಪರಾರಿಯಾಗಿದ್ದು, ಬಳಿಕ ಠಾಣೆಗೆ ಬಂದು ಶರಣಾಗಿದ್ದಾನೆ ಎನ್ನಲಾಗಿದೆ. ಈ ಕುರಿತು ಬೆಳ್ತಂಗಡಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕಾರು ಚಾಲಕನ ನಿಯಂತ್ರಣ ತಪ್ಪಿ ಮಹಿಳೆಗೆ ಡಿಕ್ಕಿ : ಗಂಭೀರ ಗಾಯ Read More »

ಎಸ್‍.ಆರ್.ಕೆ. ಲ್ಯಾಡರ್ಸ್ ಸಂಸ್ಥೆಯ ಬೆಳ್ಳಿಹಬ್ಬದ ಸಂಭ್ರಮದ ಸರಣಿ ಕಾರ್ಯಕ್ರಮ | ವಿಶೇಷ ಚೇತನ ಮಕ್ಕಳೊಂದಿಗೆ ಸ್ನೇಹಕೂಟ ಸಮಾರಂಭ

ಪುತ್ತೂರು: ಎಸ್‍.ಆರ್.ಕೆ ಲ್ಯಾಡರ್ಸ್ ಸಂಸ್ಥೆಯನ್ನು ಆತ್ಮವಿಶ್ವಾಸದೊಂದಿಗೆ ಇಚ್ಛಾ ಶಕ್ತಿಯಿಂದ ಕಟ್ಟಿ ಬೆಳೆಸಿ ನೂರಾರು ಮಂದಿಗೆ ಉದ್ಯೋಗ ಕಲ್ಪಿಸಿರುವ ಸಂಸ್ಥೆಯ ಮಾಲಕರಾದ ಕೇಶವ ಅವರ ಕೆಲಸ ಕಾರ್ಯ ಶ್ಲಾಘನೀಯ ಎಂದು ಎಂ.ಬಿ.ಫೌಂಡೇಶನ್ ನ ಎಂ.ಬಿ.ಸದಾಶಿವ ಹೇಳಿದರು. ಅವರು ಶನಿವಾರ ಎಸ್‍.ಆರ್.ಕೆ. ಲ್ಯಾಡರ್ಸ್ ನ ಬೆಳ್ಳಿ ಹಬ್ಬದ ಸರಣಿ ಕಾರ್ಯಕ್ರಮದ ಮೂರನೇ ಕಾರ್ಯಕ್ರಮ ಅಂಗವಾಗಿ ಸುಳ್ಯ ಎಂ.ಬಿ.ಫೌಂಡೇಶನ್ ಪ್ರಾಯೋಜಕತ್ವದಲ್ಲಿ ನಡೆದ ಸುಳ್ಯ ಸಾಂದೀಪ ವಿಶೇಷ ಚೇತನ ಮಕ್ಕಳೊಂದಿಗೆ ಸ್ನೇಹಕೂಟ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದರು. ಕೇಶವರು ಆತ್ಮವಿಶ್ವಾಸದಿಂದ ತಾನು ಕೂಡಾ

ಎಸ್‍.ಆರ್.ಕೆ. ಲ್ಯಾಡರ್ಸ್ ಸಂಸ್ಥೆಯ ಬೆಳ್ಳಿಹಬ್ಬದ ಸಂಭ್ರಮದ ಸರಣಿ ಕಾರ್ಯಕ್ರಮ | ವಿಶೇಷ ಚೇತನ ಮಕ್ಕಳೊಂದಿಗೆ ಸ್ನೇಹಕೂಟ ಸಮಾರಂಭ Read More »

ಪುತ್ತೂರು ಮಿನಿವಿಧಾನಸೌಧಕ್ಕೆ ಎರಡೆರಡು ಬಾರಿ ಶಂಕುಸ್ಥಾಪನೆ ನೆರವೇರಿಸಿರುವವರಿಂದ ಈಗ ಮೊಸರಿನಲ್ಲಿ ಕಲ್ಲು ಹುಡುಕುವ ಪ್ರಯತ್ನ!! | ಎರಡೆರಡು ಬಾರಿ ಶಿಲಾನ್ಯಾಸ ಎಂದು ಆರೋಪಿಸಿದ್ದ ಬಿಜೆಪಿಗೆ ಕಾಂಗ್ರೆಸ್ ತಿರುಗೇಟು!!

ಪುತ್ತೂರು: ಇಲ್ಲಿನ ಮಿನಿವಿಧಾನಸೌಧಕ್ಕೆ ಬಿಜೆಪಿ ಆಡಳಿತದ ಸಂದರ್ಭ ಎರಡೆರಡು ಬಾರಿ ಶಂಕುಸ್ಥಾಪನೆ ನೆರವೇರಿಸಿರುವವರಿಂದ ಈಗ ಮೊಸರಿನಲ್ಲಿ ಕಲ್ಲು ಹುಡುಕುವ ಪ್ರಯತ್ನ ನಡೆಯುತ್ತಿದೆ. ಕಾಮಗಾರಿ ಆರಂಭವಾಗದ ಯೋಜನೆಗಳಿಗೆ ಮರುಜೀವ ನೀಡುವ ಪ್ರಯತ್ನದಲ್ಲಿರುವ ಹಾಲಿ ಶಾಸಕರು ಶಿಲಾನ್ಯಾಸ ನೆರವೇರಿಸಿರುವುದರಲ್ಲಿ ಏನು ತಪ್ಪಿದೆ ಎಂದು ಕೆಪಿಸಿಸಿ ವಕ್ತಾರ ಅಮಳ ರಾಮಚಂದ್ರ ಪ್ರಶ್ನಿಸಿದರು. ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಶಾಸಕರು ಶಿಲಾನ್ಯಾಸ ನೆರವೇರಿಸುವುದು ಸಹಜವಾದ ಪ್ರಕ್ರಿಯೆ. ಕಣಿಯೂರಿನಲ್ಲಿ, ಬನ್ನೂರಿನ ಎಸ್.ಸಿ. ಕಾಲನಿಗೆ 10 ಲಕ್ಷ ರೂ.ನಂತೆ ಕಾಮಗಾರಿ ನಡೆಸುವುದಾಗಿ ಹೇಳಿ ಶಿಲಾನ್ಯಾಸ ನೆರವೇರಿಸಿದ್ದರು.

ಪುತ್ತೂರು ಮಿನಿವಿಧಾನಸೌಧಕ್ಕೆ ಎರಡೆರಡು ಬಾರಿ ಶಂಕುಸ್ಥಾಪನೆ ನೆರವೇರಿಸಿರುವವರಿಂದ ಈಗ ಮೊಸರಿನಲ್ಲಿ ಕಲ್ಲು ಹುಡುಕುವ ಪ್ರಯತ್ನ!! | ಎರಡೆರಡು ಬಾರಿ ಶಿಲಾನ್ಯಾಸ ಎಂದು ಆರೋಪಿಸಿದ್ದ ಬಿಜೆಪಿಗೆ ಕಾಂಗ್ರೆಸ್ ತಿರುಗೇಟು!! Read More »

ಪಥನಗೊಂಡಿದ್ದ ಭಾರತೀಯ ವಾಯುಸೇನೆ ವಿಮಾನದ ಅವಶೇಷ ಪತ್ತೆ | ಬರೋಬ್ಬರಿ 8 ವರ್ಷಗಳ ಬಳಿಕ ಪತ್ತೆ

ನವದೆಹಲಿ: 29 ಸಿಬ್ಬಂದಿಗಳನ್ನು ಹೊತ್ತುಕೊಂಡು ಹೋಗಿದ್ದ ಎಎನ್‍-32 ವಿಮಾನ ನಾಪತ್ತೆಯಾಗಿದ್ದ ಭಾರತೀಯ ವಾಯುಸೇನೆಯ ಟ್ರಾನ್ಸ್‍ ಪೋರ್ಟ್‍ ವಿಮಾನದ ಅವಶೇಷಗಳು ಚೆನ್ನೈ ಕಡಲ ತೀರದಿಂದ 310 ಕಿ.ಮೀ. ಆಳದಲ್ಲಿ ಪತ್ತೆಯಾಗಿದ್ದು, ಈ ಕುರಿತು ಇಂಡಿಯನ್ ಏರ್‍ ಪೋರ್ಸ್ ನಿಂದ ಅಧಿಕೃತ ಮಾಹಿತಿ ಹೊರ ಬಿದ್ದಿದೆ. ಎಂಟು ವರ್ಷಗಳ ಹಿಂದೆ ಅಂದರೆ 2016 ಜುಲೈ 22 ರಂದು ಬೆಳಿಗ್ಗೆ ಈ ವಿಮಾನ ಚೆನ್ನೈನಿಂದ ಪೋರ್ಟ್‍ ಬ್ಲೇರ್ ಗೆ ಹೊರಟಿತ್ತು. 29 ಪ್ರಯಾಣಿಕರನ್ನು ಹೊತ್ತ ಈ ವಿಮಾನ ಹಾರಾಟ ಆರಂಭವಾದ ಕೆಲವೇ

ಪಥನಗೊಂಡಿದ್ದ ಭಾರತೀಯ ವಾಯುಸೇನೆ ವಿಮಾನದ ಅವಶೇಷ ಪತ್ತೆ | ಬರೋಬ್ಬರಿ 8 ವರ್ಷಗಳ ಬಳಿಕ ಪತ್ತೆ Read More »

ಅಂಬಿಕಾದಲ್ಲಿ ರಾಷ್ಟ್ರೀಯ ಯುವ ದಿನಾಚರಣೆ

ಪುತ್ತೂರು: ಸನ್ಯಾಸಿಯಾದವನು ಸಮಾಜದಿಂದ ಬೇರೆ ಇರಬಾರದು. ಜನರ ಜೊತೆಗಿರಬೇಕು. ಜನರಿಗಾಗಿ ಸನ್ಯಾಸಿಯ ಜ್ಞಾನ, ಹಸಿದವರಿಗೆ ಅನ್ನ ಕೊಡುವುದೇ ನಿಜವಾದ ಧರ್ಮ ಎಂದು ಖ್ಯಾತವಾಗ್ಮಿ, ಅಂಕಣಕಾರ ಪ್ರಕಾಶ ಮಲ್ಪೆ ಹೇಳಿದರು. ಅವರು ನೆಲ್ಲಿಕಟ್ಟೆ ಅಂಬಿಕಾ ಪದವಿ ಪೂರ್ವ ವಿದ್ಯಾಲಯದಲ್ಲಿ ನಡೆದ ವಿವೇಕಾನಂದ ಜಯಂತಿ ಆಚರಣೆಯಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದರು. ನಟ್ಟೋಜ ಫೌಂಡೇಶನ್ ಟ್ರಸ್ಟಿನ ಕಾರ್ಯದರ್ಶಿ ಸುಬ್ರಹ್ಮಣ್ಯ ನಟ್ಟೋಜರು ಮಾತನಾಡಿ,  ವಿವೇಕಾನಂದರು ಸ್ತ್ರೀಯರಿಗೆ ತುಂಬಾ ಗೌರವ ಕೊಟ್ಟಿದ್ದಾರೆ. ಈ ನಿಟ್ಟಿನಲ್ಲಿ ನಾವೂ ಭಾರತೀಯತೆಯನ್ನು ಸಾಧಿಸಬೇಕಾಗಿದೆ. ಈ ಮೂಲಕ ಭಾರತೀಯತೆಯನ್ನು ಪ್ರಪಂಚದಲ್ಲೆಲ್ಲಾ

ಅಂಬಿಕಾದಲ್ಲಿ ರಾಷ್ಟ್ರೀಯ ಯುವ ದಿನಾಚರಣೆ Read More »

ಬಿಜೆಪಿ ಗ್ರಾಮಾಂತರ ಮಂಡಲ ಪದಾಧಿಕಾರಿಗಳ ಸಭೆ

ಪುತ್ತೂರು: ಭಾರತೀಯ ಜನತಾ ಪಾರ್ಟಿ ಪುತ್ತೂರು ಗ್ರಾಮಾಂತರ ಮಂಡಲದ ಪದಾಧಿಕಾರಿಗಳ ಸಭೆ ಇಂದು ನಡೆಯಿತು. ಮಂಡಲ ಅಧ್ಯಕ್ಷ ಸಾಜ ರಾಧಾಕೃಷ್ಣ ಆಳ್ವಾ ಮುಂದಿನ ಅಯೋಧ್ಯ ರಾಮ ಮಂದಿರ ಪ್ರತಿಷ್ಠಾಪನೆ ಕಾರ್ಯಕ್ರಮ, ದೇವಸ್ಥಾನ ದೈವಸ್ಥಾನ ಮಂದಿರಗಳಲ್ಲಿ ಸ್ವಚ್ಛತಾ ಕಾರ್ಯಕ್ರಮ, ವಿಕಸಿತಾ ಭಾರತ ಸಂಕಲ್ಪ ಯಾತ್ರೆ ಹಾಗೂ ವಿಶ್ವ ಕರ್ಮ ಯೋಜನೆಯನ್ನು ಯಶಸ್ವಿಗೊಳಿಸುವಂತೆ ಪದಾಧಿಕಾರಿಗಳಿಗೆ ಜವಾಬ್ದಾರಿ ನೀಡಿದರು. ಪ್ರಧಾನ ಕಾರ್ಯದರ್ಶಿ ನಿತೀಶ್ ಕುಮಾರ್ ಶಾಂತಿವನ ವಿಕಸಿತಾ ಭಾರತ ಸಂಕಲ್ಪ ಯಾತ್ರೆ ಬಗ್ಗೆ ಮಾಹಿತಿ ನೀಡಿದರು. ಪುರುಷೋತ್ತಮ ಮುಂಗ್ಲಿಮನೆ ಪದವಿಧರ ಕ್ಷೇತ್ರ

ಬಿಜೆಪಿ ಗ್ರಾಮಾಂತರ ಮಂಡಲ ಪದಾಧಿಕಾರಿಗಳ ಸಭೆ Read More »

ಕೋಳಿ ಫಾರಂ ಕುಸಿತ : ಸಾವನ್ನಪ್ಪಿದ ಸಾವಿರಾರು ಕೋಳಿಗಳು!

ವಿಟ್ಲ: ಕೋಳಿ ಫಾರಂ ಕುಸಿದು ಬಿದ್ದು ಸುಮಾರು ಐದು ಸಾವಿರಕ್ಕೂ ಮಿಕ್ಕಿ ಕೋಳಿಗಳು ಸಾವನ್ನಪ್ಪಿದ್ ಘಟನೆ ವಿಟ್ಲ ಕೊಳ್ಳಾಡು ಗ್ರಾಮದ ದೇವಸ್ಯ ಎಂಬಲ್ಲಿ ಶುಕ್ರವಾರ ನಡೆದಿದೆ. ಯಜ್ಞನಾಥ ಶೆಟ್ಟಿ ಮಾಲಿಕತ್ವದ ಕೋಳಿ ಫಾರಂ ಕಟ್ಟಡ ಶುಕ್ರವಾರ ಸಂಜೆ ದಿಢೀರನೆ ಕುಸಿದು ಬಿದ್ದಿದೆ. ಶಬ್ದ ಕೇಳಿ ಮಾಲಕರು ಮತ್ತು ಸ್ಥಳೀಯರು ಸ್ಥಳಕ್ಕೆ ಬರುವಷ್ಟರಲ್ಲಿ ಕಟ್ಟಡ ಕುಸಿದು ಐದು ಸಾವಿರಕ್ಕೂ ಅಧಿಕ ಕೋಳಿಗಳು ಸಾವನ್ನಪ್ಪಿದೆ. ಫಾರಂ ಕಟ್ಟಡ ದಿಢೀರನೆ ಕುಸಿದು ಬಿದ್ದ ಘಟನೆಯಿಂದ ಮಾಲಿಕರು ಆಘಾತಗೊಂಡಿದ್ದು, ಸ್ಥಳಕ್ಕೆ ಮಾಜಿ ತಾ.ಪಂ.ಸದಸ್ಯ

ಕೋಳಿ ಫಾರಂ ಕುಸಿತ : ಸಾವನ್ನಪ್ಪಿದ ಸಾವಿರಾರು ಕೋಳಿಗಳು! Read More »

error: Content is protected !!
Scroll to Top