ಕಿಡಿಗೇಡಿಗಳಿಂದ ರಸ್ತೆ ಬದಿ ತ್ಯಾಜ್ಯ ಎಸೆತ | ಸ್ಥಳೀಯರಿಂದ ಆಕ್ರೋಶ

ಪುತ್ತೂರು: ಶಾಂತಿಗೋಡು ಗ್ರಾಮದ ಕೋಡಿ ಎಂಬಲ್ಲಿ ಮಂಗಳವಾರ ತಡರಾತ್ರಿ ಯಾರೋ ಕಿಡಿಗೇಡಿಗಳು ರಸ್ತೆ ಬದಿಯಲ್ಲಿ ತ್ಯಾಜ್ಯಗಳನ್ನು ತಂದು ಸುರಿದ ಪರಿಣಾಮ ಸ್ಥಳೀಯರು ಆಕ್ರೋಶಗೊಂಡಿದ್ದಾರೆ. ಪಾರ್ಟಿ ನಡೆಸಿ ಬಳಿಕ ತಡರಾತ್ರಿ ತ್ಯಾಜ್ಯವನ್ನು ರಸ್ತೆ ಬದಿ ತಂದು ಸುರಿದಿರಬಹುದು ಎಂದು ಶಂಕೆ ವ್ಯಕ್ತವಾಗಿದೆ. ತ್ಯಾಜ್ಯ ಬಹುತೇಕ ಪ್ಲಾಸ್ಟಿಕ್ ಬಾಟಲಿಗಳಿಂದ ಕೂಡಿದ್ದು, ಪೇಪರ್ ಪ್ಲೇಟ್, ಪ್ಲಾಸ್ಟಿಕ್ ಗ್ಲಾಸ್ ಇನ್ನಿತರ ಪದಾರ್ಥಗಳನ್ನು ಪ್ಲಾಸ್ಟಿಕ್ ಚೀಲಗಳಲ್ಲಿ ತಂದು ಸುರಿದಿದ್ದಾರೆ. ಗ್ರಾಪಂ ಕಾರ್ಯದರ್ಶಿ, ಸಿಬ್ಬಂದಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ.

ಕಿಡಿಗೇಡಿಗಳಿಂದ ರಸ್ತೆ ಬದಿ ತ್ಯಾಜ್ಯ ಎಸೆತ | ಸ್ಥಳೀಯರಿಂದ ಆಕ್ರೋಶ Read More »

ವ್ಯಕ್ತಿ ನೇಣು ಬಿಗಿದು ಆತ್ಮಹತ್ಯೆ !

ಪುತ್ತೂರು: ಬಲ್ನಾಡು ಗ್ರಾಮದ ಬುಳೇರಿಕಟ್ಟೆ ಸಾಜ ಬಶೀರ್ತಡಿ ಎಂಬಲ್ಲಿ ವ್ಯಕ್ತಿಯೊಬ್ಬರು ಮಂಗಳವಾರ ತಡರಾತ್ರಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ. ಬುಳೇರಿಕಟ್ಟೆ ಬಶೀರ್ತಡಿ ನಿವಾಸಿ ಕುಂಞ ನಾಯ್ಕ (70) ಆತ್ಮಹತ್ಯೆ ಮಾಡಿಕೊಂಡವರು. ಮೃತರು ಬಲ್ನಾಡು ಗ್ರಾಪಂ ಉಪಾಧ್ಯಕ್ಷ ರವಿಚಂದ್ರ ಸಹಿತ ಇಬ್ಬರು ಪುತ್ರರನ್ನು ಅಗಲಿದ್ದಾರೆ. ಸ್ಥಳಕ್ಕೆ ಗ್ರಾಮಾಂತರ ಪೊಲೀಸರು ಆಗಮಿಸಿ ಪರಿಶೀಲನೆ ನಡೆಸಿದ್ದಾರೆ.

ವ್ಯಕ್ತಿ ನೇಣು ಬಿಗಿದು ಆತ್ಮಹತ್ಯೆ ! Read More »

ಬಲ್ನಾಡು ವಲಯ ಒಕ್ಕೂಟ ಪದಾಧಿಕಾರಿಗಳಿಗೆ ತರಬೇತಿ

ಪುತ್ತೂರು: ಬಲ್ನಾಡು ವಲಯ ಒಕ್ಕೂಟ ಪದಾಧಿಕಾರಿಗಳ ತರಬೇತಿ ಶ್ರೀ ಮಂಜುನಾಥ ಸಭಾಭವನ ದಲ್ಲಿ ನಡೆಯಿತು. ವಲಯ ಅಧ್ಯಕ್ಷ ಸತೀಶ್ ಒಳಗುಡ್ಡೆ ದೀಪ ಬೆಳಗಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ತಾಲೂಕು ಯೋಜನಾಧಿಕಾರಿ ಶಶಿಧರ್ ಯೋಜನೆಯ ವಿವಿಧ ವಿಭಾಗದ ಅಧಿಕಾರಿಯವರ ಪರಿಚಯ, ಬಡ್ಡಿ ದರಗಳ ಬಗ್ಗೆ ಮಾಸಿಕ ವರದಿ ಮತ್ತು ಮರುಪಾವತಿ ಚೀಟಿಯ ಉಪಯೋಗ ಪಿ.ಆರ್.ಕೆ. ಮತ್ತು ಪಿ.ಆರ್.ಕೆ.. ನಿಭಂದನೆಗಳು, ಪ್ರಿಮಿಯಂ ಮೊತ್ತ ಸಾಲದ ಡಿಪಿ ಮೊತ್ತ, ಮೆಂಬರ್ ಲೀಡ್ ಆಪ್, ಸಮುದಾಯ ಅಭಿವೃದ್ಧಿ ಕಾರ್ಯಕ್ರಮಗಳ ಕುರಿತು ಮಾಹಿತಿ ನೀಡಿದರು.

ಬಲ್ನಾಡು ವಲಯ ಒಕ್ಕೂಟ ಪದಾಧಿಕಾರಿಗಳಿಗೆ ತರಬೇತಿ Read More »

ನಿವೃತ್ತ ರೈಲ್ವೇ ಉದ್ಯೋಗಿ ಆತ್ಮಹತ್ಯೆ !

ಕಡಬ: ನಿವೃತ್ತ ರೈಲ್ವೇ ಉದ್ಯೋಗಿಯೊಬ್ಬರು ಆತ್ಮಹತ್ಯೆ ಮಾಡಿಕೊಂಡ ಘಟನೆ ಕಡಬ ಸಮೀಪದ ಕೋಡಿಂಬಾಳದಲ್ಲಿ ನಡೆದಿದೆ. ಕೋಡಿಂಬಾಳ ಗ್ರಾಮದ ಗುಂಡಿಮಜಲು‌ ನಿವಾಸಿ ಮಾಧವ ರೈ ( 62) ಆತ್ಮಹತ್ಯೆ ಮಾಡಿಕೊಂಡವರು. ಕೋಡಿಂಬಾಳದ ರೈಲು ಮಾರ್ಗದ ಸಮೀಪ ಗೇರು ಮರಕ್ಕೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಸ್ಥಿತಿಯಲ್ಲಿ ಮೃತದೇಹ ಪತ್ತೆಯಾಗಿದೆ. ಮೃತದೇಹವನ್ನು ಕಡಬ ಸರಕಾರಿ ಆಸ್ಪತ್ರೆಗೆ ಮರಣೊತ್ತರ ಪರೀಕ್ಷೆಗೆ ತರಲಾಗಿದೆ. ಮೃತರು ಕೋಡಿಂಬಾಳದ ಅಯಪ್ಪ ಭಜನಾ ಮಂದಿರದ ಸೇವಾ ಕಾರ್ಯದಲ್ಲಿಯೂ ಸಕ್ರಿಯವಾಗಿ ತೊಡಗಿಕೊಂಡಿದರು. ಆತ್ಮಹತ್ಯೆಗೆ ನಿಖರ ಕಾರಣ ತಿಳಿದು ಬಂದಿಲ್ಲ.

ನಿವೃತ್ತ ರೈಲ್ವೇ ಉದ್ಯೋಗಿ ಆತ್ಮಹತ್ಯೆ ! Read More »

ಬಿಜೆಪಿ ಯುವ ಮೋರ್ಚಾ ಪ್ರಧಾನ ಕಾರ್ಯದರ್ಶಿಯಾಗಿ ಹರೀಶ್ ಪೂಂಜಾ

ಬೆಳ್ತಂಗಡಿ: ಬಿಜೆಪಿ ಯುವ ಮೋರ್ಚಾ ಪ್ರಧಾನ ಕಾರ್ಯದರ್ಶಿಯಾಗಿ ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾ ಅವರನ್ನು ನೇಮಕ ಮಾಡಲಾಗಿದೆ. ಈ ಕುರಿತು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಅವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ ಭಾರತೀಯ ಜನತಾ ಪಾರ್ಟಿ ರಾಜ್ಯ ವಿವಿಧ ಮೋರ್ಚಾಗಳಿಗೆ ಪ್ರಧಾನ ಕಾರ್ಯದರ್ಶಿಗಳನ್ನು ಆಯ್ಕೆ ಮಾಡಿದೆ.

ಬಿಜೆಪಿ ಯುವ ಮೋರ್ಚಾ ಪ್ರಧಾನ ಕಾರ್ಯದರ್ಶಿಯಾಗಿ ಹರೀಶ್ ಪೂಂಜಾ Read More »

ಪುತ್ತೂರು ಬಿಜೆಪಿಯ ಗೊಂದಲಕ್ಕೆ ತೆರೆ?? | ಅಂತಿಮ ಹಂತದ ಮಾತುಕತೆಯಲ್ಲಿ ಪುತ್ತಿಲ ಪರಿವಾರ!! | ಕುತೂಹಲ ಮೂಡಿಸಿರುವ ಪ್ರಮುಖರ ನಡೆ!!

ಪುತ್ತೂರು: ಬಿಜೆಪಿಯೊಳಗೆ ಎದ್ದಿದ್ದ ದೊಡ್ಡ ಗೊಂದಲಕ್ಕೆ ತೆರೆ ಬೀಳುವ ಲಕ್ಷಣಗಳು ಗೋಚರವಾಗುತ್ತಿವೆ. ಅರುಣ್ ಕುಮಾರ್ ಪುತ್ತಿಲ ನೇತೃತ್ವದ ಪುತ್ತಿಲ ಪರಿವಾರ ಹಾಗೂ ಬಿಜೆಪಿ ಮುಖಂಡರ ನಡುವೆ ಮಾತುಕತೆಗಳು ನಡೆಯುತ್ತಿವೆ ಎನ್ನುವ ಮಾತು ರಾಜಕೀಯ ಪಡಸಾಲೆಯಲ್ಲಿ ಕೇಳಿಬರುತ್ತಿದೆ. ವಿಧಾನಸಭಾ ಚುನಾವಣೆ ವೇಳೆಗೆ ರಾಜ್ಯದ ಗಮನ ಸೆಳೆದಿದ್ದ ಪುತ್ತಿಲ ಪರಿವಾರ, ಇದೀಗ ಮತ್ತೊಮ್ಮೆ ಸುದ್ದಿಯಲ್ಲಿದೆ. ಬಿಜೆಪಿಯಲ್ಲಿ ಸೂಕ್ತ ಸ್ಥಾನಮಾನ ಸಿಗಲಿಲ್ಲ ಎಂಬ ಕಾರಣಕ್ಕೆ ಸ್ವತಂತ್ರ ಅಭ್ಯರ್ಥಿಯಾಗಿ ಆಖಾಡಕ್ಕೆ ಧುಮುಕ್ಕಿದ್ದ ಅರುಣ್ ಕುಮಾರ್ ಪುತ್ತಿಲ ಅವರು ಎಲ್ಲರೂ ಒಮ್ಮೆ ಹಿಂದಿರುಗಿ ನೋಡುವಂತೆ

ಪುತ್ತೂರು ಬಿಜೆಪಿಯ ಗೊಂದಲಕ್ಕೆ ತೆರೆ?? | ಅಂತಿಮ ಹಂತದ ಮಾತುಕತೆಯಲ್ಲಿ ಪುತ್ತಿಲ ಪರಿವಾರ!! | ಕುತೂಹಲ ಮೂಡಿಸಿರುವ ಪ್ರಮುಖರ ನಡೆ!! Read More »

ಮಂತ್ರಾಕ್ಷತೆ ಹೆಸರಿನಲ್ಲಿ ಪುತ್ತಿಲ ಪರಿವಾರಕ್ಕೆ ಸುಳ್ಳು ಅಪವಾದ ಮಾಡಿರುವುದು ಖಂಡನೀಯ !

ಪುತ್ತೂರು: 500 ವರ್ಷಗಳಿಂದ ಹಿಂದೂ ಸಮಾಜ ಕಾತರದಿಂದ ಕಾಯುತ್ತಿರುವ ಅಮೋಘ ಕ್ಷಣ ಜ.22ರ ಅಯೋಧ್ಯೆಯ ಶ್ರೀ ರಾಮಮಂದಿರ ಪ್ರತಿಷ್ಠಾಪನೆ. ಈ ಸಂದರ್ಭದಲ್ಲಿ ಮುಂಡೂರು ಗ್ರಾಮದಲ್ಲಿ ನಡೆದ ಜಾಗದ ತಕರಾರಿಗೆ ಪುತ್ತಿಲ ಪರಿವಾರವನ್ನು ಅದರಲ್ಲೂ ಹಿಂದೂಗಳ ಪರಮಶ್ರೇಷ್ಠ ರಾಮಮಂದಿರದ ಮಂತ್ರಾಕ್ಷತೆಯನ್ನು ಬಳಸಿಕೊಂಡು ಸುಳ್ಳು ಅಪವಾದ ಮಾಡಿರುವುದು ತೀರ  ನೀಚ ಕೆಲಸ. ಇದನ್ನು ನಾವು ಖಂಡಿಸುತ್ತೇವೆ ಎಂದು ಪುತ್ತಿಲ ಪರಿವಾರ ಹೇಳಿದೆ. ಮಂತ್ರಾಕ್ಷತೆ ವಿತರಿಸುವುದು ಸಹಿತ ರಾಮಮಂದಿರಕ್ಕೆ ಶುಭಕೋರಿ ಪುತ್ತೂರಿನಲ್ಲಿ ಪ್ರಪ್ರಥಮ 3ಡಿ ಬ್ಯಾನರ್ ಅಳವಡಿಸಿ ರಾಷ್ಟ್ರೀಯ ಹಬ್ಬದಂತೆ ಮನೆ

ಮಂತ್ರಾಕ್ಷತೆ ಹೆಸರಿನಲ್ಲಿ ಪುತ್ತಿಲ ಪರಿವಾರಕ್ಕೆ ಸುಳ್ಳು ಅಪವಾದ ಮಾಡಿರುವುದು ಖಂಡನೀಯ ! Read More »

ಅಮರ ಕಾಸ್ಪಾಡಿ ಶ್ರೀ ಇರ್ವೆರ್ ಉಳ್ಳಾಕುಲು ದೈವಗಳಿಗೆ ಬಂಡಿ ಸಮರ್ಪಣೆ

ಪುತ್ತೂರು: ಚಾರ್ವಾಕ ಅಮರ ಕಾಸ್ಪಾಡಿ ಶ್ರೀ ಇರ್ವೆರ್ ಉಳ್ಳಾಕುಲು ದೈವಗಳಿಗೆ 125 ವರ್ಷದ ನಂತರ ಬಂಡಿ ಸಮರ್ಪಣೆಯಾಗಿದೆ. ಮಂಗಳವಾರ ಪುತ್ತೂರು ಶ್ರೀಮಹಾಲಿಂಗೇಶ್ವರ ದೇವಸ್ಥಾನದ ಎದುರಿನಲ್ಲಿ ಪ್ರಾರ್ಥನೆ ನೆರವೇರಿಸಿ ಬಂಡಿ ಮೆರವಣಿಗೆಗೆ ಚಾಲನೆ ನೀಡಲಾಯಿತು. ಈ ಸಂದರ್ಭದಲ್ಲಿ ಹಿಂದೂ ಮುಖಂಡ ಅರುಣ್ ಕುಮಾರ್ ಪುತ್ತಿಲ ಮತ್ತಿತರರು ಉಪಸ್ಥಿತರಿದ್ದರು.

ಅಮರ ಕಾಸ್ಪಾಡಿ ಶ್ರೀ ಇರ್ವೆರ್ ಉಳ್ಳಾಕುಲು ದೈವಗಳಿಗೆ ಬಂಡಿ ಸಮರ್ಪಣೆ Read More »

ದಾರಿ ವಿವಾದಕ್ಕೆ ಹಲ್ಲೆ ನಡೆದಿದೆಯೇ ಹೊರತು ಅಕ್ಷತೆ ವಿಚಾರಕ್ಕೆ ಅಲ್ಲ | ದ.ಕ. ಜಿಲ್ಲಾ ಎಸ್ಪಿ ಸ್ಪಷ್ಟನೆ

ಪುತ್ತೂರು: ಪುತ್ತೂರಿನ ಹೊರವಲಯದ ಮುಂಡೂರು ಎಂಬಲ್ಲಿ ಹಿಂದೂ ಸಂಘಟನೆ ಕಾರ್ಯಕರ್ತನ ಮೇಲೆ ನಡೆದ ಹಲ್ಲೆ ಪ್ರಕರಣ ಘಟನೆ ದಾರಿ ವಿವಾದಕ್ಕೆಯೇ ಹೊರತು ಅಕ್ಷತೆ ವಿಚಾರಕ್ಕೆ ಅಲ್ಲ ಎಂದು ದ.ಕ. ಜಿಲ್ಲಾ ಎಸ್ಪಿ ಸಿ.ಬಿ. ರಿಷ್ಯಂತ್ ಸ್ಪಷ್ಟನೆ ನೀಡಿದ್ದಾರೆ. ಮಾಧ್ಯಮಗಳಿಗೆ ಮಾಹಿತಿ ನೀಡಿದ ಅವರು, ಹಲ್ಲೆಗೂ ರಾಮ ಅಕ್ಷತೆ ವಿತರಣೆಗೂ ಯಾವುದೇ ಸಂಬಂಧವಿಲ್ಲ. ಮುಂಡೂರಿನಲ್ಲಿ ನಡೆದ ಹಲ್ಲೆ ಪ್ರಕರಣದಲ್ಲಿ ಅಕ್ಷತೆ ಹಂಚುವ ವಿಚಾರಕ್ಕೆ ನಡೆದ ಹಲ್ಲೆ ಅಲ್ಲ. ಅದು ಜಾಗದ ವಿಚಾರಕ್ಕೆ ನಡೆದ ಗಲಾಟೆ ಆಗಿದೆ. ಹಲ್ಲೆ ನಡೆಸಿದವರಿಗೂ,

ದಾರಿ ವಿವಾದಕ್ಕೆ ಹಲ್ಲೆ ನಡೆದಿದೆಯೇ ಹೊರತು ಅಕ್ಷತೆ ವಿಚಾರಕ್ಕೆ ಅಲ್ಲ | ದ.ಕ. ಜಿಲ್ಲಾ ಎಸ್ಪಿ ಸ್ಪಷ್ಟನೆ Read More »

ಧರ್ಮಸ್ಥಳದಲ್ಲಿ ತಿರುಗಾಡುತ್ತಿದ್ದ ಅನ್ಯಕೋಮಿನ ಜೋಡಿ | ಪೊಲೀಸರಿಂದ ವಿಚಾರಣೆ

ಧರ್ಮಸ್ಥಳ: ಅನ್ಯ ಕೋಮಿನ ಜೋಡಿಯೊಂದು ಧರ್ಮಸ್ಥಳದಲ್ಲಿ ತಿರುಗಾಡುತ್ತಿದ್ದಾಗ ಸಾರ್ವಜನಿಕರು ಹಿಡಿದು ಪೊಲೀಸರಿಗೆ ಮಾಹಿತಿ ನೀಡಿದ ಘಟನೆ ಮಂಗಳವಾರ ನಡೆದಿದೆ. ಬೆಂಗಳೂರು ಮೂಲದ ಅನ್ಯಕೋಮಿನ ಯುವಕ ಹಾಗೂ ಹಿಂದೂ ಯುವತಿ ಎಂದು ಗೊತ್ತಾಗಿದ್ದು, ಸಾರ್ವಜನಿಕರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಬಂದ ಪೊಲೀಸರು ಯುವಕ-ಯುವತಿಯನ್ನು ಠಾಣೆಗೆ ಕರೆದೊಯ್ದಿದ್ದು, ವಿಚಾರಣೆ ನಡೆಸುತ್ತಿದ್ದಾರೆ ಎಂದು ತಿಳಿದು ಬಂದಿದೆ.

ಧರ್ಮಸ್ಥಳದಲ್ಲಿ ತಿರುಗಾಡುತ್ತಿದ್ದ ಅನ್ಯಕೋಮಿನ ಜೋಡಿ | ಪೊಲೀಸರಿಂದ ವಿಚಾರಣೆ Read More »

error: Content is protected !!
Scroll to Top