ಕೇರಳದಲ್ಲಿ ಹೊಸ ಹೆಸರಿನಲ್ಲಿ ತಲೆ ಎತ್ತಲು ಪಿಎಫ್‌ಐ ಯತ್ನ

ನಸುಕಿನ ಹೊತ್ತು 56 ಕಡೆಗಳಲ್ಲಿ ಎನ್‌ಐಎ ದಾಳಿ ತಿರುವನಂತಪುರ : ನಿಷೇಧಿತ ಪಾಪ್ಯುಲರ್‌ ಫ್ರಂಟ್‌ ಆಫ್‌ ಇಂಡಿಯಾ ಹೊಸ ಹೆಸರಿನಲ್ಲಿ ತಲೆ ಎತ್ತುವ ಪ್ರಯತ್ನದಲ್ಲಿರುವ ಮಾಹಿತಿ ಸಿಕ್ಕಿದ ಹಿನ್ನೆಲೆಯಲ್ಲಿ ರಾಷ್ಟ್ರೀಯ ತನಿಖಾ ಸಂಸ್ಥೆ ಇಂದು ಬೆಳ್ಳಂಬೆಳಗ್ಗೆ ಕೇರಳದ 56 ಕಡೆಗಳಲ್ಲಿ ಏಕಕಾಲಕ್ಕೆ ದಾಳಿ ನಡೆಸಿ ಶೋಧ ಕಾರ್ಯಾಚರಣೆ ಪ್ರಾರಂಭಿಸಿದೆ. ಪಿಎಫ್‌ಐನ ನಾಯಕರಿಗೆ ಸೇರಿದ ಮನೆ, ಆಫೀಸ್‌ಗಳು ಇನ್ನಿತರ ಸಂಸ್ಥಾಪನೆಗಳು ಸೇರಿದಂತೆ ಒಟ್ಟು 56 ಕಡೆಗಳಲ್ಲಿ ದಾಳಿ ನಡೆಸಲಾಗಿದೆ. ಪಿಎಫ್‌ಐ ಸಂಘಟನೆಯನ್ನು ಬೇರೊಂದು ಹೆಸರಿನಲ್ಲಿ ಮರುರೂಪಿಸಲು ಯೋಜನೆ ರೂಪಿಸುತ್ತಿರುವ […]

ಕೇರಳದಲ್ಲಿ ಹೊಸ ಹೆಸರಿನಲ್ಲಿ ತಲೆ ಎತ್ತಲು ಪಿಎಫ್‌ಐ ಯತ್ನ Read More »

ಬಿಜೆಪಿ ಸಂಸದೆ ಪ್ರಜ್ಞಾ ಸಿಂಗ್‌ ಠಾಕೂರ್‌ ವಿರುದ್ಧ ಶಿವಮೊಗ್ಗದಲ್ಲಿ ಕೇಸ್‌

ದ್ವೇಷ ಭಾಷಣ ಮಾಡಿದ ಆರೋಪ ಶಿವಮೊಗ್ಗ: ನಗರದಲ್ಲಿ ಭಾನುವಾರ ನಡೆದ ಹಿಂದೂ ಜಾಗರಣ ವೇದಿಕೆಯ ಸಮಾವೇಶದಲ್ಲಿ ದ್ವೇಷಪೂರಿತ ಭಾಷಣ ಮಾಡಿದ ಬಿಜೆಪಿ ಸಂಸದೆ ಪ್ರಜ್ಞಾ ಸಿಂಗ್ ಠಾಕೂರ್ ವಿರುದ್ಧ ಎಫ್‌ಐಆರ್ ದಾಖಲಾಗಿದೆ. ಸಂಸದೆಯ ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಎಚ್.ಎಸ್.ಸುಂದರೇಶ್ ದೂರು ಸಲ್ಲಿಸಿದ್ದಾರೆ.ಸಾಧ್ವಿ ಪ್ರಜ್ಞಾ ಅವರ ಭಾಷಣ ಶಸ್ತ್ರಾಸ್ತ್ರಗಳ ಬಳಕೆಗೆ ಮುಕ್ತ ಕರೆಯಾಗಿತ್ತು, ಇದು ಅಲ್ಪಸಂಖ್ಯಾತ ಸಮುದಾಯದ ವಿರುದ್ಧ ಗುಂಪು ಹಿಂಸಾಚಾರ ಮತ್ತು ಹಲ್ಲೆಗೆ ಕಾರಣವಾಗಬಹುದು. ಭಾಷಣವು ಅಸಹಿಷ್ಣುತೆ, ದ್ವೇಷ ಮತ್ತು ನಿರ್ದಿಷ್ಟ ಸಮುದಾಯದ ವಿರುದ್ಧ ಹಿಂಸಾಚಾರದ

ಬಿಜೆಪಿ ಸಂಸದೆ ಪ್ರಜ್ಞಾ ಸಿಂಗ್‌ ಠಾಕೂರ್‌ ವಿರುದ್ಧ ಶಿವಮೊಗ್ಗದಲ್ಲಿ ಕೇಸ್‌ Read More »

ಮುಂದಿನ ತಿಂಗಳು ಕೊರೊನಾ ನಾಲ್ಕನೇ ಅಲೆ ಸಾಧ್ಯತೆ

ಕೇಂದ್ರ ಆರೋಗ್ಯ ಸಚಿವಾಲಯ ಎಚ್ಚರಿಕೆ ಹೊಸದಿಲ್ಲಿ: ಮುಂದಿನ ತಿಂಗಳು ಭಾರತದಲ್ಲೂ ಕೊರೊನಾ ಹೆಚ್ಚಾಗುವ ಸಾಧ್ಯತೆಯಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಎಚ್ಚರಿಸಿದೆ. ಚೀನಾ, ಜಪಾನ್‌ ಸೇರಿದಂತೆ 10ಕ್ಕೂ ಹೆಚ್ಚು ದೇಶಗಳಲ್ಲಿ ಕೊರೊನಾ ಉಲ್ಬಣಿಸಿದೆ. ಭಾರತದಲ್ಲೂ ಹೊಸ ಅಲೆ ಭೀತಿ ಸೃಷ್ಟಿಸಿದ್ದು, ಮುಂದಿನ 40 ದಿನಗಳು ಅತ್ಯಂತ ನಿರ್ಣಾಯಕವಾಗಲಿವೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಹೇಳಿದೆ.ಕೇಂದ್ರ ಆರೋಗ್ಯ ಸಚಿವಾಲಯದ ಕೋವಿಡ್‌ ಸಲಹಾ ಸಮಿತಿ ಸಭೆಯಲ್ಲಿ ಕೊರೊನಾ ನಾಲ್ಕನೇ ಅಲೆಯ ಬಗ್ಗೆ ಚರ್ಚಿಸಲಾಗಿದೆ. ಜನವರಿ ಮಧ್ಯದಲ್ಲಿ ಸೋಂಕಿನ ಸಂಖ್ಯೆ ತೀವ್ರ

ಮುಂದಿನ ತಿಂಗಳು ಕೊರೊನಾ ನಾಲ್ಕನೇ ಅಲೆ ಸಾಧ್ಯತೆ Read More »

ಚಂದ್ರಬಾಬು ನಾಯ್ಡು ರೋಡ್‌ ಶೋದಲ್ಲಿ ಕಾಲ್ತುಳಿತ : 7 ಸಾವು, ಹಲವರಿಗೆ ಗಾಯ

ಹೈದರಾಬಾದ್‌ : ತೆಲುಗು ದೇಶಂ ಪಾರ್ಟಿಯ ಅಧ್ಯಕ್ಷ, ಮಾಜಿ ಮುಖ್ಯಮಂತ್ರಿ ಎಂ.ಚಂದ್ರಬಾಬು ನಾಯ್ಡು ಅವರ ಸಾರ್ವಜನಿಕ ಸಭೆಯಲ್ಲಿ ಕಾಲ್ತುಳಿತ ಸಂಭವಿಸಿ ಏಳು ಮಂದಿ ದುರ್ಮರಣ ಹೊಂದಿರುವ ಘಟನೆ ಬುಧವಾರ ರಾತ್ರಿ ಸಂಭವಿಸಿದೆ. ಆಂಧ್ರ ಪ್ರದೇಶದ ನೆಲ್ಲೂರು ಜಿಲ್ಲೆಯ ಕಂದುಕೊರ್‌ನಲ್ಲಿ ಸಾರ್ವಜನಿಕ ಸಭೆಗೆ ಚಂದ್ರಬಾಬು ನಾಯ್ಡು ಆಗಮಿಸಿದಾಗ ಆ ದುರ್ಘಟನೆ ನಡೆದಿದೆ. ಬೃಹತ್ ಸಮಾವೇಶದಲ್ಲಿ ನೆರೆದಿದ್ದ ಸಾವಿರಾರು ಟಿಡಿಪಿ ಕಾರ್ಯಕರ್ತರು ಮತ್ತು ಬೆಂಬಲಿಗರ ನಡುವೆ ತಳ್ಳಾಟ ಮತ್ತು ನೂಕಾಟ ನಡೆದಿದ್ದು, ಕೆಲವರು ಹತ್ತಿರದ ಒಳಚರಂಡಿ ಕಾಲುವೆಗೆ ಜಿಗಿದು ಕಾಲ್ತುಳಿತದಿಂದ

ಚಂದ್ರಬಾಬು ನಾಯ್ಡು ರೋಡ್‌ ಶೋದಲ್ಲಿ ಕಾಲ್ತುಳಿತ : 7 ಸಾವು, ಹಲವರಿಗೆ ಗಾಯ Read More »

ಕಾರ್ಪಾಡಿ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಕಿರುಷಷ್ಠಿ, ಬಲಿ ಉತ್ಸವ, ನೃತ್ಯ ಬಲಿ ಸೇವೆ

ಪುತ್ತೂರು: ತಾಲೂಕಿನ ಕಾರಣಿಕ ದೇವಸ್ಥಾನವಾದ ಆರ್ಯಾಪು ಗ್ರಾಮದ ಕಾರ್ಪಾಡಿ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಬುಧವಾರ ಮಧ್ಯಾಹ್ನ ಕಿರುಷಷ್ಠಿ, ರಾತ್ರಿ ದೇವರ ಬಲಿ ಉತ್ಸವ ನಡೆದು, ನೃತ್ಯ ಬಲಿ ಸೇವೆ ಜರಗಿತು. ಕೆಮ್ಮಿಂಜೆ ನಾಗೇಶ ತಂತ್ರಿಗಳ ನೇತೃತ್ವದಲ್ಲಿ ಪೂರ್ವಶಿಷ್ಟ ಸಂಪ್ರದಾಯದ ಪ್ರಕಾರ ಕಿರುಷಷ್ಠಿ ಉತ್ಸವ ನಡೆಯಿತು. ಬುಧವಾರ ಬೆಳಿಗ್ಗೆ ಗಣಪತಿ ಹೋಮ, ಶ್ರೀ ಸುಬ್ರಹ್ಮಣ್ಯ ದೇವರಿಗೆ ಪವಮಾನಭಿಷೇಕ, ನಾಗದೇವರಿಗೆ ಆಶ್ಲೇಷ ಹೋಮ, ಆಶ್ಲೇಷ ಬಲಿ, ಮಧ್ಯಾಹ್ನ ತುಲಾಭಾರ, ಮಹಾಪೂಜೆ, ಅನ್ನಸಂತರ್ಪಣೆ ಜರಗಿತು. ಸಂಜೆ 6.30ಕ್ಕೆ ದುರ್ಗಾಪೂಜೆ ನಡೆದು, ಬಳಿಕ

ಕಾರ್ಪಾಡಿ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಕಿರುಷಷ್ಠಿ, ಬಲಿ ಉತ್ಸವ, ನೃತ್ಯ ಬಲಿ ಸೇವೆ Read More »

ಪುತ್ತೂರಿನ ಬಿಂದು ಸಮೂಹ ಸಂಸ್ಥೆಗೆ ಅಟಲ್ ಸಾಧನಾ ಪುರಸ್ಕಾರ

ಪುತ್ತೂರು: 2022ನೇ ಸಾಲಿನ ಕೇಂದ್ರ ಸರ್ಕಾರದ ‘ಅಟಲ್ ಸಾಧನಾ ಪುರಸ್ಕಾರ’ಕ್ಕೆ ಪುತ್ತೂರಿನ ನರಿಮೊಗರು ಎಸ್.ಜಿ. ಕಾರ್ಪೊರೇಟ್ಸ್ ಸಮೂಹದ ಮೆಗಾ ಪ್ರೊಸೆಸಿಂಗ್ ನ ಬಿಂದು ಸಮೂಹ ಸಂಸ್ಥೆ ಆಯ್ಕೆಯಾಗಿದೆ. ಬಿಂದು ಸಮೂಹ ಸಂಸ್ಥೆ ಆಡಳಿತ ನಿರ್ದೇಶಕರಾದ ಸತ್ಯಶಂಕರ್ ಭಟ್ ಹಾಗೂ ರಂಜಿತಾ ಶಂಕರ್ ಅವರು ನವದೆಹಲಿ ವಿಜ್ಞಾನ ಭವನದಲ್ಲಿ ನಡೆದ ಸಮಾರಂಭದಲ್ಲಿ ಪ್ರಶಸ್ತಿ ಸ್ವೀಕರಿಸಿದರು. ಕೇಂದ್ರ ಉಕ್ಕು ಮತ್ತು ಗ್ರಾಮೀಣಾಭಿವೃದ್ಧಿ ರಾಜ್ಯ ಸಚಿವ ಫಗ್ಗನ್ ಕುಲಸ್ತೆ, ಬಿಜೆಪಿ ವಕ್ತಾರ ಶಾನವಾಜ್ ಹುಸೇನ್ ಪ್ರಶಸ್ತಿ ಪ್ರದಾನ ಮಾಡಿದರು.ಆಹಾರ ಉತ್ಪನ್ನ ತಯಾರಿಕ

ಪುತ್ತೂರಿನ ಬಿಂದು ಸಮೂಹ ಸಂಸ್ಥೆಗೆ ಅಟಲ್ ಸಾಧನಾ ಪುರಸ್ಕಾರ Read More »

ಕುದ್ಮಾರು ಶ್ರೀ ಸುಬ್ರಹ್ಮಣ್ಯೇಶ್ವರರ ದೇವಸ್ಥಾನದಲ್ಲಿ ಕಿರುಷಷ್ಠಿ ಪೂಜೆ

ಪುತ್ತೂರು: ಶಾಂತಿಮೊಗರು ಕುದ್ಮಾರು ಶ್ರೀ ಸುಬ್ರಹ್ಮಣ್ಯೇಶ್ವರ ದೇವಸ್ಥಾನದಲ್ಲಿ ಡಿ. 28ರಂದು ಕಿರು ಷಷ್ಠಿ ಪೂಜೆ ಮತ್ತು ಸಾರ್ವಜನಿಕ ಶ್ರೀ ಸತ್ಯನಾರಾಯಣ ಪೂಜೆ ಜರಗಿತು. ಬೆಳಿಗ್ಗೆ 9ರಿಂದ ವಿವಿಧ ಧಾರ್ಮಿಕ ಕಾರ್ಯಕ್ರಮ ಆರಂಭಗೊಂಡು, ಮಧ್ಯಾಹ್ನ ಮಹಾಪೂಜೆ, ಪ್ರಸಾದ ವಿತರಣೆ, ಅನ್ನಸಂತರ್ಪಣೆ ನಡೆಯಿತು. ಕಿರು ಷಷ್ಠಿ ಹಿನ್ನೆಲೆಯಲ್ಲಿ ನೂರಾರು ಭಕ್ತರು ಅನ್ನ ಪ್ರಸಾದ ಸ್ವೀಕರಿಸಿದರು.

ಕುದ್ಮಾರು ಶ್ರೀ ಸುಬ್ರಹ್ಮಣ್ಯೇಶ್ವರರ ದೇವಸ್ಥಾನದಲ್ಲಿ ಕಿರುಷಷ್ಠಿ ಪೂಜೆ Read More »

ಕಾರ್ಪಾಡಿ ದೇವಸ್ಥಾನದಲ್ಲಿ ಕರಸೇವೆ

ಪುತ್ತೂರು: ಜಾತ್ರೋತ್ಸವ ಸಂಭ್ರಮದಲ್ಲಿರುವ ಕಾರ್ಪಾಡಿ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಕರಸೇವೆ ಮಾಡಿದ ಬಲ್ನಾಡು ಶೌರ್ಯ ವಿಪತ್ತು ನಿರ್ವಹಣಾ ತಂಡ ಹಾಗೂ ಶ್ರೀ ಕ್ಷೇತ್ರ ಧ.ಗ್ರಾ.ಯೋಜನೆಯ ಕುಂಜೂರುಪಂಜ ಒಕ್ಕೂಟದ ಸದಸ್ಯರಿಗೆ ದೇವಸ್ಥಾನದಲ್ಲಿ ಪ್ರಸಾದ ನೀಡಲಾಯಿತು. ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಸುಧಾಕರ್ ರಾವ್ ಆರ್ಯಾಪು, ಶ್ರೀ ಕ್ಷೇ.ಧ.ಗ್ರಾ. ಯೋಜನೆಯ ಬಲ್ನಾಡು ವಲಯದ ಮೇಲ್ವಿಚಾರಕ ಹರೀಶ್ ಕೆ., ಸೇವಾ ಪ್ರತಿನಿಧಿ ಆಶಾಲತಾ, ಶೌರ್ಯ ತಂಡದ ಪ್ರತಿನಿಧಿಗಳಾದ ವಿನಯ್ ಕೋಟ್ಲಾರ್, ಸದಸ್ಯರಾದ ಜಗದೀಶ್, ನವೀನ, ವಿನೋದ್, ಅರುಣ, ಸಂಧ್ಯಾ, ದಿವ್ಯಾ, ಧನ್ಯಾ, ಸ್ವಾತಿ,

ಕಾರ್ಪಾಡಿ ದೇವಸ್ಥಾನದಲ್ಲಿ ಕರಸೇವೆ Read More »

ಡಿ. ೨೯: ಅರಣ್ಯ ಇಲಾಖೆ ಅಧಿಕಾರಿ ವಜಾಕ್ಕೆ ಆಗ್ರಹಿಸಿ ಬೃಹತ್ ಪ್ರತಿಭಟನೆ

೫ ಪೊಲೀಸ್ ಠಾಣೆ ಮುಂಭಾಗ ಏಕಕಾಲದಲ್ಲಿ ಪ್ರತಿಭಟನೆ ಪುತ್ತೂರು: ಭಜನೆ ಹಾಗೂ ಭಜಕರ ಹಾಗೂ ಹಿಂದೂ ದೇವರ ಬಗ್ಗೆ ನಿಂದನೆಯ ಪೋಸ್ಟ್ ಹಾಕುತ್ತಿರುವ ಅರಣ್ಯ ಇಲಾಖೆಯ ಅಧಿಕಾರಿಯನ್ನು ಅಮಾನತುಗೊಳಿಸದಿದ್ದರೆ ಡಿ. ೨೯ರಂದು ಬೆಳಿಗ್ಗೆ ೧೦ಕ್ಕೆ ಪುತ್ತೂರು ಜಿಲ್ಲಾ ವ್ಯಾಪ್ತಿಯ ಪುತ್ತೂರು ನಗರ, ಉಪ್ಪಿನಂಗಡಿ, ಬೆಳ್ಳಾರೆ, ಸುಳ್ಯ, ಕಡಬ, ಬೆಳ್ತಂಗಡಿ ಠಾಣಾ ಮುಂಭಾಗ ಏಕಕಾಲದಲ್ಲಿ ಪ್ರತಿಭಟನೆ ನಡೆಯಲಿದೆ ಎಂದು ವಿಶ್ವ ಹಿಂದು ಪರಿಷದ್, ಭಜರಂಗದಳ ಪುತ್ತೂರು ಜಿಲ್ಲೆ ಪ್ರಕಟಣೆ ನೀಡಿದೆ. ಅರಣ್ಯ ಇಲಾಖೆಯ ಅಧಿಕಾರಿ ಸಂಜೀವ ಅವರನ್ನು ಡಿ.

ಡಿ. ೨೯: ಅರಣ್ಯ ಇಲಾಖೆ ಅಧಿಕಾರಿ ವಜಾಕ್ಕೆ ಆಗ್ರಹಿಸಿ ಬೃಹತ್ ಪ್ರತಿಭಟನೆ Read More »

ಸಾಂಸ್ಕೃತಿಕ ಚಟುವಟಿಕೆಗಳಿಂದ ಸಂಸ್ಕಾರ ಬೆಳೆಯುತ್ತದೆ: ಸತೀಶ್ ರಾವ್

ವಿವೇಕಾನಂದ ವಿದ್ಯಾಸಂಸ್ಥೆಯಲ್ಲಿ ಮೇಧಾನ್ವೇಷ- 2022′ ಉದ್ಘಾಟನೆ ಪುತ್ತೂರು: ,ಡಿ 28.ಸಾಂಸ್ಕೃತಿಕ ಚಟುವಟಿಕೆಗಳಿಂದ ಸಂಸ್ಕಾರ ಬೆಳೆಯುತ್ತದೆ. ಮೆದುಳಿಗೆ ಶಿಕ್ಷಣ, ಶರೀರಕ್ಕೆ ಪೋಷಣೆ, ಹೃದಯಕ್ಕೆ ಸಂಸ್ಕಾರ ಎನ್ನುವ ಮಾತಿಗೆ ಪೂರಕವಾಗಿ ಶಿಕ್ಷಣ ಸಂಸ್ಥೆಗಳು ವಿದ್ಯಾರ್ಥಿಗಳನ್ನು ಈ ಎಲ್ಲಾ ಆಯಾಮಗಳಲ್ಲೂ ಸಮರ್ಥರನ್ನಾಗಿಸಲು ಹಲವು ವೇದಿಕೆಗಳ ಮುಖೇನ ಪ್ರಯತ್ನಿಸುತ್ತದೆ. ಅದೇ ರೀತಿ ವಿದ್ಯಾರ್ಥಿಗಳು ಸಾಂಸ್ಕೃತಿಕ ಕ್ಷೇತ್ರಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಆಸಕ್ತಿ ವಹಿಸುತ್ತಿ ರುವುದು ಶ್ಲಾಘನೀಯ ಎಂದು ವಿವೇಕಾನಂದ ವಿದ್ಯಾವರ್ಧಕ ಸಂಘದ ಉಪಾಧ್ಯಕ್ಷ ಸತೀಶ್ ರಾವ್ ಹೇಳಿದರು. ಅವರು ಇಲ್ಲಿನ ವಿವೇಕಾನಂದ ಕಲಾ, ವಿಜ್ಞಾನ

ಸಾಂಸ್ಕೃತಿಕ ಚಟುವಟಿಕೆಗಳಿಂದ ಸಂಸ್ಕಾರ ಬೆಳೆಯುತ್ತದೆ: ಸತೀಶ್ ರಾವ್ Read More »

error: Content is protected !!
Scroll to Top