ಎನ್ ಎಸ್ ಎಸ್ ಸೇವಾ ಸಂಗಮದ ದಶಮಾನೋತ್ಸವದ ಲೋಗೊ ಬಿಡುಗಡೆ

ಸುಳ್ಯ: ಎನ್ ಎಸ್ ಎಸ್ ಸೇವಾ ಸಂಗಮ ಟ್ರಸ್ಟ್ (ರಿ), ಸುಳ್ಯ ಇದರ ದಶಮಾನೋತ್ಸವ ಕಾರ್ಯಕ್ರಮವು ಜನವರಿ 2 ಮತ್ತು 3 ರಂದು ಮುಳ್ಯ ಅಟ್ಲೂರು ಶಾಲೆಯಲ್ಲಿ ನಡೆಯಲಿದ್ದು, ಆ ಪ್ರಯುಕ್ತ ಕಾರ್ಯಕ್ರಮದ ಲೋಗೊ ಬಿಡುಗಡೆ ಕಾರ್ಯಕ್ರಮವು ಇತ್ತೀಚೆಗೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಕಾಂತಮಂಗಲದಲ್ಲಿ ನಡೆಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಂಘದ ಗೌರವಾಧ್ಯಕ್ಷ ಬಾಲಕೃಷ್ಣ ಬೊಳ್ಳೂರು ವಹಿಸಿದ್ದರು. ಅತಿಥಿಗಳಾಗಿ ಗೌರವ ಸಲಹೆಗಾರ ಜಯಪ್ರಕಾಶ್ ಕಲ್ಲುಗದ್ದೆ, ಚಂದ್ರಶೇಖರ ಬಿಳಿನಲೆ, ಡಾ. ಅನುರಾಧ ಕುರುಂಜಿ, ಫಾಲಚಂದ್ರ ವೈ.ವಿ., ಶಾಲೆಯ ಮುಖ್ಯಗುರು […]

ಎನ್ ಎಸ್ ಎಸ್ ಸೇವಾ ಸಂಗಮದ ದಶಮಾನೋತ್ಸವದ ಲೋಗೊ ಬಿಡುಗಡೆ Read More »

ಕಲಾವಿದ ಶಶಿಧರ ಕನ್ಯಾಡಿ ಷಷ್ಟ್ಯಬ್ಧ: ಯಕ್ಷಭಾರತಿಯಿಂದ ಅಭಿನಂದನೆ, ತಾಳಮದ್ದಳೆ

ಕನ್ಯಾಡಿ: ಕನ್ಯಾಡಿಯ ಮಾತೃಶ್ರೀ ನಿವಾಸದಲ್ಲಿ ಯಕ್ಷಭಾರತಿ ಟ್ರಸ್ಟಿ , ಕಲಾವಿದ ಶಶಿಧರ ಕನ್ಯಾಡಿ ಅವರ ಷಷ್ಟ್ಯಬ್ಧ ನಿಮಿತ್ತ ಯಕ್ಷಭಾರತಿ ರಿ. ಕನ್ಯಾಡಿ ತಂಡದಿಂದ ಪ್ರೊ. ಪವನ್ ಕಿರಣಕೆರೆ ವಿರಚಿತ ಶ್ರೀಕೃಷ್ಣ ತುಲಾಭಾರ ಎಂಬ ತಾಳಮದ್ದಳೆ ಜರಗಿತು ಭಾಗವತರಾಗಿ ಮಹೇಶ ಕನ್ಯಾಡಿ, ಹಿಮ್ಮೇಳದಲ್ಲಿ ಜಗನ್ನಿವಾಸ ರಾವ್ ಪುತ್ತೂರು, ಚಂದ್ರಶೇಖರ ಆಚಾರ್ಯ ಗುರುವಾಯನಕೆರೆ ಚಕ್ರತಾಳದಲ್ಲಿ ಕೌಸ್ತುಭ ಕನ್ಯಾಡಿ ಶ್ರೀ ಕೃಷ್ಣನಾಗಿ ಹರಿದಾಸ ಗಾಂಭೀರ ಧರ್ಮಸ್ಥಳ, ಸತ್ಯಭಾಮೆಯಾಗಿ ದಿವಾಕರ ಆಚಾರ್ಯ ಗೇರುಕಟ್ಟೆ, ನಾರದನಾಗಿ ಸುರೇಶ ಕುದ್ರೆಂತ್ತಾಯ ಉಜಿರೆ, ಬಲರಾಮನಾಗಿ ರವೀಂದ್ರ ಶೆಟ್ಟಿ

ಕಲಾವಿದ ಶಶಿಧರ ಕನ್ಯಾಡಿ ಷಷ್ಟ್ಯಬ್ಧ: ಯಕ್ಷಭಾರತಿಯಿಂದ ಅಭಿನಂದನೆ, ತಾಳಮದ್ದಳೆ Read More »

ಊರಿನವರ ಪಾಲ್ಗೊಳ್ಳುವಿಕೆಯಿಂದ ವಿದ್ಯಾರ್ಥಿಗಳ ಯಶಸ್ಸಿನ ಜೊತೆಗೆ ಶಾಲಾಭಿವೃದ್ಧಿ ‌ಸಾಧ್ಯ: ಚಕ್ರಪಾಣಿ ಎ.ವಿ.

ಕಾಣಿಯೂರು: ಸರ್ಕಾರಿ ಶಾಲೆ ಪ್ರತಿಭಾನ್ವಿತ ಶಿಕ್ಷಕರುಗಳನ್ನು ಒಳಗೊಂಡಿದ್ದು, ಉತ್ತಮ ಬೋಧನೆ ಮಾಡುತ್ತಿರುವುದರಿಂದಲೇ ವ್ಯಾಸಂಗ ಮಾಡಿದ ವಿದ್ಯಾರ್ಥಿಗಳು ಉತ್ತಮ ಸಾಧನೆ ಮಾಡಲು ಸಾಧ್ಯವಾಗಿದೆ. ಶಾಲೆಗಳ ಜೊತೆಗೆ ಊರಿನ ಸಮುದಾಯದವರ ಪಾಲ್ಗೊಳ್ಳುವಿಕೆಯಿಂದ ವಿದ್ಯಾರ್ಥಿಗಳ ಯಶಸ್ವಿನೊಂದಿಗೆ ಶಾಲೆಯ ಅಭಿವೃದ್ಧಿಯೂ ಸಾಧ್ಯ. ಎಸ್‌ಡಿಎಂಸಿ, ಹಿರಿಯ ವಿದ್ಯಾರ್ಥಿ ಸಂಘ ಮತ್ತು ಶಿಕ್ಷಕರು ತಂಡವಾಗಿ ಒಗ್ಗಟ್ಟಾಗಿ ಕಾರ್ಯನಿರ್ವಹಿಸಿದಾಗ ಶಿಕ್ಷಣ ಸಂಸ್ಥೆ ಉನ್ನತ ಎಂಬುದಕ್ಕೆ ಕುದ್ಮಾರು ಶಾಲೆಯೇ ಸಾಕ್ಷಿ ಎಂದು ಪುತ್ತೂರು ದೈಹಿಕ ಶಿಕ್ಷಣ ಪರಿವೀಕ್ಷಣಾಧಿಕಾರಿ ಚಕ್ರಪಾಣಿ ಎ.ವಿ. ಹೇಳಿದರು. ಕುದ್ಮಾರು ಸರ್ಕಾರಿ ಉನ್ನತ್ತೀಕರಿಸಿದ ಹಿರಿಯ ಪ್ರಾಥಮಿಕ

ಊರಿನವರ ಪಾಲ್ಗೊಳ್ಳುವಿಕೆಯಿಂದ ವಿದ್ಯಾರ್ಥಿಗಳ ಯಶಸ್ಸಿನ ಜೊತೆಗೆ ಶಾಲಾಭಿವೃದ್ಧಿ ‌ಸಾಧ್ಯ: ಚಕ್ರಪಾಣಿ ಎ.ವಿ. Read More »

ಪುತ್ತೂರು ದೇವಸ್ಥಾನದಲ್ಲಿ ವಿಶೇಷ ಮೂಡಪ್ಪ ಸೇವೆ: ಸೇವಾ ರಶೀದಿ ಪುಸ್ತಕ ಬಿಡುಗಡೆ

ಪುತ್ತೂರು: ಇತಿಹಾಸ ಪ್ರಸಿದ್ಧ ಪುತ್ತೂರು ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಜ. 6 ರಂದು ಅಂಗಾರಕ ಸಂಕಷ್ಟ ಚತುರ್ಥಿಯ ಪ್ರಯುಕ್ತ 108 ಕಾಯಿ ಗಣಪತಿ ಹೋಮ, ಸಂಜೆ 6 ಗಂಟೆಗೆ ಬಾಲಗಣಪತಿಗೆ ಮೂಡಪ್ಪ ಸೇವೆ ಸೇರಿ ಹಲವು ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿವೆ. ಆ ಪ್ರಯುಕ್ತ ಸಿದ್ಧಪಡಿಸಲಾದ ಸೇವಾ ರಶೀದಿ ಪುಸ್ತಕವನ್ನು ಡಿ. 15 ರಂದು ಶ್ರೀ ಮಹಾಲಿಂಗೇಶ್ವರ ಮತ್ತು ಗಣಪತಿ ದೇವರುಗಳಿಗೆ ಪ್ರಾರ್ಥನೆ ಸಲ್ಲಿಸಿ ಬಳಿಕ ಬಿಡುಗಡೆ ಮಾಡಲಾಯಿತು. ಈ ಸಂದರ್ಭದಲ್ಲಿ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಪಂಜಿಗುಡ್ಡೆ ಈಶ್ವರ ಭಟ್

ಪುತ್ತೂರು ದೇವಸ್ಥಾನದಲ್ಲಿ ವಿಶೇಷ ಮೂಡಪ್ಪ ಸೇವೆ: ಸೇವಾ ರಶೀದಿ ಪುಸ್ತಕ ಬಿಡುಗಡೆ Read More »

ಈ ವರ್ಷವೂ ಭಾರಿ ಸಂಖ್ಯೆಯಲ್ಲಿ ಭಕ್ತರಿಂದ ಶಬರಿಮಲೆ ಯಾತ್ರೆ

ಅರವಣ ಪಾಯಸಂ, ಅಪ್ಪಂ ಪ್ರಸಾದಕ್ಕೆ ವಿಪರೀತ ಬೇಡಿಕೆ ಶಬರಿಮಲೆ: ಈ ವರ್ಷದ ಶಬರಿಮಲೆ ತೀರ್ಥಯಾತ್ರೆ ಋತು ಪ್ರಾರಂಭವಾದ ಕಳೆದ 28 ದಿನಗಳಲ್ಲಿ 25 ಲಕ್ಷಕ್ಕೂ ಹೆಚ್ಚು ಭಕ್ತರು ಶಬರಿಮಲೆಗೆ ಭೇಟಿ ನೀಡಿದ್ದಾರೆ. ಈ ವರ್ಷವೂ ಭಕ್ತರ ದಟ್ಟಣೆ ಅಧಿಕವಾಗಿದ್ದು, ಆನ್‌ಲೈನ್‌ ಬುಕ್ಕಿಂಗ್‌ ಮೂಲಕ ವರ್ಚುವಲ್‌ ಕ್ಯೂ ಪದ್ಧತಿ ಪಾಲಿಸುತ್ತಿರುವುದರಿಂದ ಅಯ್ಯಪ್ಪನ ದರ್ಶನ ಗೊಂದಲವಿಲ್ಲದೆ ನಡೆಯುತ್ತಿದೆ. ಕಳೆದ ವಾರಕ್ಕೆ ಹೋಲಿಸಿದರೆ ಭಾನುವಾರ ದಟ್ಟಣೆ ಸ್ವಲ್ಪ ಕಡಿಮೆಯಾಗಿತ್ತು. ಪಂಪಾದಿಂದ ಸನ್ನಿಧಾನ ತನಕ ಎಲ್ಲೂ ಕಾಯದೆ ಭಕ್ತರು ನೇರವಾಗಿ ದರ್ಶನ ಪಡೆದಿದ್ದಾರೆ.

ಈ ವರ್ಷವೂ ಭಾರಿ ಸಂಖ್ಯೆಯಲ್ಲಿ ಭಕ್ತರಿಂದ ಶಬರಿಮಲೆ ಯಾತ್ರೆ Read More »

ನಡುರಸ್ತೆಯಲ್ಲಿ ಹೊತ್ತಿ ಉರಿದ ಬಸ್‌ : ತಪ್ಪಿದ ಅನಾಹುತ

ಮಡಿಕೇರಿ: ಪ್ರವಾಸಿ ಬಸ್ಸೊಂದು ನಡು ರಸ್ತೆಯಲ್ಲೇ ಹೊತ್ತಿ ಉರಿದ ಘಟನೆ ವಿರಾಜಪೇಟೆಯ ಮಾಕುಟ್ಟ ಬಳಿಯ ಮಗಡಿಪಾರೆ ಆಂಜನೇಯ ದೇವಾಲಯದ ಬಳಿ ಇಂದು ಬೆಳಗ್ಗೆ ನಡೆದಿದೆ. ಕೇರಳ ನೋಂದಣಿಯ ಖಾಸಗಿ ಬಸ್ ಇದಾಗಿದ್ದು, ಪ್ರವಾಸಿಗರನ್ನು ಮೈಸೂರಿನಲ್ಲಿ ಇಳಿಸಿ ವಾಪಸ್ ತೆರಳುವಾಗ ಈ ಅವಘಡ ಸಂಭವಿಸಿದೆ. ಬಸ್‍ನಲ್ಲಿ ಚಾಲಕ ಮತ್ತು ನಿರ್ವಾಹಕ ಇಬ್ಬರೇ ಇದ್ದರು. ಯಾವುದೇ ಪ್ರಾಣಪಾಯ ಸಂಭವಿಸಿಲ್ಲ ಎನ್ನಲಾಗುತ್ತಿದೆ. ಅಕಸ್ಮಾತ್ ಪ್ರವಾಸಿಗರಿದ್ದಿದ್ದರೆ ಭಾರಿ ಅನಾಹುತ ಸಂಭವಿಸುವ ಸಾಧ್ಯತೆ ಇತ್ತು. ಘಟನಾ ಸ್ಥಳಕ್ಕೆ ಅಗ್ನಿಶಾಮಕ ಸಿಬ್ಬಂದಿ ತೆರಳಿ ಬೆಂಕಿ ನಂದಿಸಿದ್ದಾರೆ.

ನಡುರಸ್ತೆಯಲ್ಲಿ ಹೊತ್ತಿ ಉರಿದ ಬಸ್‌ : ತಪ್ಪಿದ ಅನಾಹುತ Read More »

ಸಿಡ್ನಿಯ ಭಯೋತ್ಪಾದಕ ದಾಳಿ ಪಾಕ್‌ ಮೂಲದ ತಂದೆ-ಮಗನ ಕೃತ್ಯ

ಯೆಹೂದಿಗಳನ್ನು ಗುರಿ ಮಾಡಿಕೊಂಡು ನಡೆದ ದಾಳಿಯಲ್ಲಿ ಸಾವಿನ ಸಂಖ್ಯೆ 16ಕ್ಕೇರಿಕೆ ಸಿಡ್ನಿ: ಆಸ್ಟ್ರೇಲಿಯಾದ ಬೊಂಡಿ ಬೀಚ್‌ನಲ್ಲಿ ಭಾನುವಾರ ಸಂಜೆ ಯಹೂದಿಗಳ ಮೇಲೆ ಮನಬಂದಂತೆ ಗುಂಡಿನ ದಾಳಿ ನಡೆಸಿ 16 ಜನರನ್ನು ಕೊಂದ ಇಬ್ಬರು ಬಂದೂಕುಧಾರಿಗಳು ತಂದೆ ಮತ್ತು ಮಗ ಎಂದು ಪೊಲೀಸರು ತಿಳಿಸಿದ್ದಾರೆ. ಯೆಹೂದಿಗಳ ಹನುಕ್ಕಾ ಹಬ್ಬದ ಆಚರಣೆ ವೇಳೆ ನಡೆದ ಗುಂಡಿನ ದಾಳಿಯಲ್ಲಿ ಮೃತಪಟ್ಟವರ ಸಂಖ್ಯೆ 16ಕ್ಕೇರಿದ್ದು, ಹಲವು ಮಂದಿ ಗಾಯಗೊಂಡಿದ್ದಾರೆ. ಆಸ್ಟ್ರೇಲಿಯಾ ಸರ್ಕಾರ ಈ ಹತ್ಯಾಕಾಂಡವನ್ನು ಭಯೋತ್ಪದನಾ ಕೃತ್ಯ ಎಂದು ಪರಿಗಣಿಸಿದ್ದು ಪಾಕಿಸ್ತಾನ ಮೂಲದ

ಸಿಡ್ನಿಯ ಭಯೋತ್ಪಾದಕ ದಾಳಿ ಪಾಕ್‌ ಮೂಲದ ತಂದೆ-ಮಗನ ಕೃತ್ಯ Read More »

ಹತ್ಯೆ ಮಾಡಲು ಜಾನುವಾರು ನೀಡಿದ ವ್ಯಕ್ತಿಯ ಮನೆ, ಕೊಟ್ಟಿಗೆ ಜಪ್ತಿ

ಬಂಟ್ವಾಳ : ಬಂಟ್ವಾಳ ಉಳಿ ಗ್ರಾಮದ ಮಣಿನಾಲ್ಕೂರು-ತೆಕ್ಕಾರು ರಸ್ತೆಯಲ್ಲಿ ಗೂಡ್ಸ್‌ ಅಟೋದಲ್ಲಿ ಅಕ್ರಮವಾಗಿ ಜಾನುವಾರು ಸಾಗಾಟ ಮಾಡುತ್ತಿರುವ ಪ್ರಕರಣವನ್ನು ಪತ್ತೆ ಹಚ್ಚಿ ಪ್ರಕರಣ ದಾಖಲಿಸಿದ ಪೊಲೀಸರು ತನಿಖೆ ಮುಂದುವರಿಸಿ ಆರೋಪಿ ಭೋಜ ಮೂಲ್ಯ ಎಂಬವರ ಮನೆ ಹಾಗೂ ಕೊಟ್ಟಿಗೆಯನ್ನು ಜಪ್ತಿ ಮಾಡಿದ್ದಾರೆ. ಅಕ್ರಮ ದನ ಸಾಗಾಟದ ಬಗ್ಗೆ ಖಚಿತ ಮಾಹಿತಿ ಬಂದ ಮೇರೆಗೆ ಡಿ.13ರಂದು ಪುಂಜಾಲಕಟ್ಟೆ ಪೊಲೀಸ್ ಠಾಣೆಯ ಪೊಲೀಸ್ ಉಪ ನಿರೀಕ್ಷಕ ರಾಜೇಶ್ ಮತ್ತು ಸಿಬ್ಬಂದಿಗಳು KA-70-8686 ನೇ ನೊಂದಣಿಯ ಗೂಡ್ಸ್ ಅಟೋವನ್ನು ತಡೆದು ಪರಿಶೀಲಿಸಿದಾಗ

ಹತ್ಯೆ ಮಾಡಲು ಜಾನುವಾರು ನೀಡಿದ ವ್ಯಕ್ತಿಯ ಮನೆ, ಕೊಟ್ಟಿಗೆ ಜಪ್ತಿ Read More »

ಸುಳ್ಯ: ಅಕ್ರಮವಾಗಿ ಸಾಗಿಸುತ್ತಿದ್ದ 10 ಲ.ರೂ. ಮೌಲ್ಯದ ಮರದ ದಿಮ್ಮಿ ವಶ

ಸುಳ್ಯ: ಅಕ್ರಮವಾಗಿ ಕಡಿದು ಸಾಗಿಸುತ್ತಿದ್ದ ಅಂದಾಜು 10 ಲಕ್ಷ ರೂ. ಮೌಲ್ಯದ ಮರದ ದಿಮ್ಮಿಗಳನ್ನು ಮತ್ತು ಸಾಗಾಟಕ್ಕೆ ಬಳಸಿದ ವಾಹನಗಳನ್ನು ಡಿಸೆಂಬರ್ 13 ರಂದು ಅರಣ್ಯ ಇಲಾಖೆ ಅಧಿಕಾರಿಗಳು ಸುಳ್ಯದ ದೇವಚಳ್ಳ ಗ್ರಾಮದ ಮುಂಡೋಡಿಯಲ್ಲಿ ನಡೆಸಿದ ವಿಶೇಷ ಕಾರ್ಯಾಚರಣೆಯಲ್ಲಿ ವಶಪಡಿಸಿಕೊಂಡಿದ್ದಾರೆ. ಮುಂಡೋಡಿಯ ನಾಗೇಶ್ ಎಂಬವರಿಗೆ ಸೇರಿದ ಜಾಗದಿಂದ ಒಂದು ಹೆಬ್ಬಲಸಿನ ಮರ ಮತ್ತು ಒಂದು ಮಾವಿನ ಮರವನ್ನು ಅಕ್ರಮವಾಗಿ ಕಡಿದು ಸಾಗಿಸಲಾಗುತ್ತಿದೆ ಎಂಬ ಖಚಿತ ಮಾಹಿತಿಯ ಮೇರೆಗೆ ಉಪವಲಯ ಅರಣ್ಯಾಧಿಕಾರಿ ಸೌಮ್ಯಾ ಪಿ.ಎನ್. ಅವರ ನೇತೃತ್ವದಲ್ಲಿ ನೆಲ್ಲೂರು-ಕೆಮ್ರಾಜೆ

ಸುಳ್ಯ: ಅಕ್ರಮವಾಗಿ ಸಾಗಿಸುತ್ತಿದ್ದ 10 ಲ.ರೂ. ಮೌಲ್ಯದ ಮರದ ದಿಮ್ಮಿ ವಶ Read More »

ಡ್ರಗ್ಸ್‌ ಸಾಗಿಸುತ್ತಿದ್ದ ಮಹಿಳೆ ಸಹಿತ ಮೂವರ ಸೆರೆ

ಪೊಲೀಸರ ಕಣ್ಣಿಗೆ ಮಣ್ಣೆರಚಲು ಮಹಿಳೆಯನ್ನು ಕರೆದೊಯ್ಯುತ್ತಿದ್ದ ತಂಡ ಮಂಗಳೂರು : ಬೆಂಗಳೂರಿನಿಂದ ಮಾದಕವಸ್ತು ಎಂಡಿಎಂಎ ತಂದು ಮಂಗಳೂರಿನ ಡ್ರಗ್ ಪೆಡ್ಲರ್‌ಗಳಿಗೆ ಸಪ್ಲಾಯ್‌ ಮಾಡುತ್ತಿದ್ದ ಮಹಿಳೆ ಸಹಿತ ಮೂವರ ತಂಡವನ್ನು ಮಂಗಳೂರು ನಗರದ ಸಿಸಿಬಿ ಘಟಕದವರು ಡಿ. 13ರಂದು ಬಂಧಿಸಿದ್ದಾರೆ. ಮಂಗಳೂರಿನ ಮಲ್ಲೂರು ಗ್ರಾಮ ಬದ್ರಿಯಾ ನಗರ ಹೌಸ್ ನಿವಾಸಿ ಅಹಮ್ಮದ್ ಶಾಬೀತ್(35), ಬಂಟ್ವಾಳ ತಾಲೂಕಿನ ಜೋಡುಮಾರ್ಗ ಬಿ ಮೂಡ ಗ್ರಾಮದ ಮದ್ದ ಪರ್ಲಿಯಾ ಹೌಸ್ ನಿವಾಸಿ ಮಹಮ್ಮದ್ ಶಂಶೀರ್ (36) ಮತ್ತು ಬಂಟ್ವಾಳ ತಾಲೂಕು ಸರಪಾಡಿ ಗ್ರಾಮದ

ಡ್ರಗ್ಸ್‌ ಸಾಗಿಸುತ್ತಿದ್ದ ಮಹಿಳೆ ಸಹಿತ ಮೂವರ ಸೆರೆ Read More »

error: Content is protected !!
Scroll to Top