ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ  1001ನೇ ವಾರದ ಸಭೆ ಉದ್ಘಾಟನೆ ಹಾಗೂ ವಾರ್ಷಿಕೋತ್ಸವ ಕಾರ್ಯಕ್ರಮ

ಅಡ್ಕ ಸ್ಥಳ ಶ್ರೀ ರಾಮ್ ಭಟ್ ರವರ ಮನೆಯ ಆವರಣದಲ್ಲಿ ಭಾಗ್ಯಶ್ರೀ ಸಂಘದ 1001ನೇ ವಾರದ ಸಭೆ ಹಾಗೂ ಸಂಘದ ವಾರ್ಷಿಕೋತ್ಸವ ಕಾರ್ಯಕ್ರಮ ಉದ್ಘಾಟನೆಯನ್ನು ಒಕ್ಕೂಟದ ಅಧ್ಯಕ್ಷರಾದ ಪುಷ್ಪಾಕರ ರೈ ಹಾಗೂ ಯೋಜನಾಧಿಕಾರಿ ರಮೇಶ್ ರವರು ವಿಧಿವತ್ತಾಗಿ ಏ.11 ರಂದು ಉದ್ಘಾಟಿಸಿ ಯೋಜನೆಯ ಕಾರ್ಯಕ್ರಮದ ಬಗ್ಗೆ ಸೂಕ್ತ ಮಾಹಿತಿ ನೀಡಿದರು. ಸಂಘದ ಸದಸ್ಯರಾದ ರೇವತಿಯವರು ತಮ್ಮ ಸಂಘದ ಸಾಧನೆಯನ್ನು ವಿವರಿಸುತ್ತಾ ಸದ್ರಿ ಸಂಘ 18.05 2006 ರಂದು ಆರಂಭಗೊಂಡು ಈ ತನಕ ಸಂಘದ ಉಳಿತಾಯ 179660 ಮಾಡಿ […]

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ  1001ನೇ ವಾರದ ಸಭೆ ಉದ್ಘಾಟನೆ ಹಾಗೂ ವಾರ್ಷಿಕೋತ್ಸವ ಕಾರ್ಯಕ್ರಮ Read More »

ಯುವತಿಗೆ ಕಿರುಕುಳ ನೀಡಿದ ಆರೋಪಿ ಕೇರಳದಲ್ಲಿ ಸೆರೆ

ರಾಜ್ಯಾದ್ಯಂತ ಅಕ್ರೋಶಕ್ಕೆ ಕಾರಣವಾಗಿದ್ದ ಕೃತ್ಯದ ಆರೋಪಿ ಬೆಂಗಳೂರು : ಬೆಂಗಳೂರಿನ ಸುದ್ದಗುಂಟೆಪಾಳ್ಯದಲ್ಲಿ ನಡೆದುಕೊಂಡು ಹೋಗುತ್ತಿದ್ದ ಯುವತಿಗೆ ಹಿಂದಿನಿಂದ ಬಂದು ಕಿರುಕುಳ ನೀಡಿ ಪಲಾಯನ ಮಾಡಿದ್ದ ಆರೋಪಿಯನ್ನು ಕೊನೆಗೂ ಪೊಲೀಸರು ಬಂಧಿಸಿದ್ದಾರೆ. ಘಟನೆ ನಡೆದು ಸುಮಾರು 10 ದಿನಗಳ ಬಳಿಕ ಆರೋಪಿ ಸಂತೋಷ್ ಡೆನಿಯಲ್​​​ನನ್ನು ಕೇರಳ ಕೋಝಿಕ್ಕೋಡ್‌ ಸಮೀಪದ ಹಳ್ಳಿಯೊಂದರಿಂದ ಬಂಧಿಸಲಾಗಿದೆ. ತಲೆಮರೆಸಿಕೊಂಡಿದ್ದ ಆರೋಪಿಯನ್ನು ಬಂಧಿಸುವುದು ಪೊಲೀಸರಿಗೆ ಸವಾಲಾಗಿ ಪರಿಣಮಿಸಿತ್ತು. ಆರೋಪಿಯ ಚಲನವಲನ ಪತ್ತೆಗೆ 1,800ಕ್ಕೂ ಹೆಚ್ಚು ಸಿಸಿಟಿವಿ ದೃಶ್ಯಗಳನ್ನು ಪೊಲೀಸರು ಪರಿಶೀಲಿಸಿದ್ದರು. ಆರೋಪಿ ಪತ್ತೆಗಾಗಿ ಡಿಸಿಪಿ ಸಾರಾ

ಯುವತಿಗೆ ಕಿರುಕುಳ ನೀಡಿದ ಆರೋಪಿ ಕೇರಳದಲ್ಲಿ ಸೆರೆ Read More »

ಛಲದಂಕ ಚಕ್ರೇಶ್ವರ ತಾಳ ಮದ್ದಳೆ ಮತ್ತು ಸನ್ಮಾನ

ಶ್ರೀ ಉಮಾ ಮಹೇಶ್ವರ ಯಕ್ಷಕಲಾ ಇಷುದಿ ನಿಡ್ಲೆ ಸಂಯೋಜನೆಯಲ್ಲಿ ಉಪ್ಪಿನಂಗಡಿ ಶ್ರೀ ಸಹಸ್ರಲಿಂಗೇಶ್ವರ ದೇವಸ್ಥಾನದ ಆಶ್ರಯದಲ್ಲಿ ಶ್ರೀ ಕಾಳಿಕಾಂಬ ಯಕ್ಷಗಾನ ಕಲಾ ಸೇವಾ ಸಂಘದ ಸಹಯೋಗದೊಂದಿಗೆ ಛಲದಂಕ ಚಕ್ರೇಶ್ವರ ತಾಳ ಮದ್ದಳೆ ಜರಗಿತು. ಭಾಗವತರಾಗಿ ಮಹೇಶ ಕನ್ಯಾಡಿ, ಶಾಲಿನಿ ಹೆಬ್ಬಾರ್ ಹಿಮ್ಮೇಳದಲ್ಲಿ ಮುರಾರಿ ಕಡoಬಳಿತ್ತಾಯ, ಶ್ರೀಪತಿಭಟ್ ಉಪ್ಪಿನಂಗಡಿ, ಅರ್ಥದಾರಿಗಳಾಗಿ ನಿಡ್ಲೆ ಈಶ್ವರ ಪ್ರಸಾದ್ ಪಿ.ವಿ. (ಕೌರವ), ರವಿ ಭಟ್ ನೆಲ್ಯಾಡಿ (ಭೀಮ-1),  ದಿವಾಕರ ಆಚಾರ್ಯ ಗೇರುಕಟ್ಟೆ (ಸಂಜಯ), ಹರೀಶ ಆಚಾರ್ಯ ಬಾರ್ಯ (ಅಶ್ವತ್ಥಾಮ), ಸುಬ್ರಹ್ಮಣ್ಯ ಭಟ್ಪೆರ್ವೋಡಿ (ಬೇಹಿನಚರ),

ಛಲದಂಕ ಚಕ್ರೇಶ್ವರ ತಾಳ ಮದ್ದಳೆ ಮತ್ತು ಸನ್ಮಾನ Read More »

ಆಶೀರ್ವಾದ್‍ ಫರ್ನಿಚರ್ ಮಳಿಗೆಗೆ ಬೆಂಕಿ

ಪುತ್ತೂರು: ದರ್ಬೆ ಬಳಿ ಕಾರ್ಯನಿರ್ವಹಿಸುತ್ತಿದ್ದ ಆಶೀರ್ವಾದ್ ಫರ್ನಿಚರ್ ಮಳಿಗೆಯಲ್ಲಿ ಇಂದು ಬೆಂಕಿ ಕಾಣಿಸಿಕೊಂಡಿದೆ. ಅಗ್ನಿ ಶಾಮಕ ದಳದ ಸಿಬ್ಬಂದಿಗಳು ಬೆಂಕಿ ನಂದಿಸುವ ಕಾರ್ಯ ನಡೆಸುತ್ತಿದ್ದಾರೆ.

ಆಶೀರ್ವಾದ್‍ ಫರ್ನಿಚರ್ ಮಳಿಗೆಗೆ ಬೆಂಕಿ Read More »

ಬ್ಯಾಂಕಿಗೆ 13,850 ಕೋ. ರೂ. ವಂಚಿಸಿದ ಉದ್ಯಮಿ ಮೆಹುಲ್‌ ಚೋಕ್ಸಿ ಬೆಲ್ಜಿಯಂನಲ್ಲಿ ಬಂಧನ

2019ರಲ್ಲಿ ದೇಶ ಬಿಟ್ಟು ಪಲಾಯನ ಮಾಡಿದ್ದ ಪ್ರತಿಷ್ಠಿತ ವಜ್ರೋದ್ಯಮಿ ನವದೆಹಲಿ: ಪಂಜಾಬ್ ನ್ಯಾಷನಲ್ ಬ್ಯಾಂಕಿಗೆ 13,000 ಕೋ.ರೂ.ಗೂ ಹೆಚ್ಚು ಮೊತ್ತ ವಂಚಿಸಿ ಪಲಾಯನ ಮಾಡಿದ್ದ ಪ್ರತಿಷ್ಠಿತ ವಜ್ರೋದ್ಯಮಿ ಮೆಹುಲ್ ಚೋಕ್ಸಿಯನ್ನು ಬೆಲ್ಜಿಯಂ ದೇಶದಲ್ಲಿ ಅಲ್ಲಿನ ಪೊಲೀಸರು ಬಂಧಿಸಿದ್ದಾರೆ. ಭಾರತೀಯ ತನಿಖಾ ಸಂಸ್ಥೆಗಳ ಕೋರಿಗೆ ಮೇರೆಗೆ ಏಪ್ರಿಲ್‌ 12ರಂದು ಮೆಹುಲ್‌ ಚೋಕ್ಸಿಯನ್ನು ಬೆಲ್ಜಿಯಂನ ಆಸ್ಪತ್ರೆಯಲ್ಲಿ ಬಂಧಿಸಲಾಯಿತು ಎಂದು ತಿಳಿದುಬಂದಿದೆ. ಅವನನ್ನು ಭಾರತಕ್ಕೆ ಕರೆತರಲು ತನಿಖಾ ಸಂಸ್ಥೆಗಳು ಸಿದ್ಧತೆ ಮಾಡಿಕೊಳ್ಳುತ್ತಿವೆ. ಕಾನೂನು ಹೋರಾಟ ಸ್ವಲ್ಪ ಸಮಯ ತೆಗೆದುಕೊಳ್ಳಬಹುದು ಎಂದು ಮೂಲಗಳು

ಬ್ಯಾಂಕಿಗೆ 13,850 ಕೋ. ರೂ. ವಂಚಿಸಿದ ಉದ್ಯಮಿ ಮೆಹುಲ್‌ ಚೋಕ್ಸಿ ಬೆಲ್ಜಿಯಂನಲ್ಲಿ ಬಂಧನ Read More »

ಇಂದು ಮಧ್ಯರಾತ್ರಿಯಿಂದ ಲಾರಿ ಮುಷ್ಕರ : ನಾಳೆಯಿಂದ ರಸ್ತೆಗಿಳಿಯುವುದಿಲ್ಲ 6 ಲಕ್ಷ ಲಾರಿಗಳು

ತರಕಾರಿ, ಗ್ಯಾಸ್‌ ಸೇರಿ ಅಗತ್ಯ ವಸ್ತುಗಳ ಪೂರೈಕೆ ವ್ಯತ್ಯಯವಾಗುವ ಸಾಧ್ಯತೆ ಬೆಂಗಳೂರು: ಡೀಸೆಲ್ ದರ ಏರಿಕೆ ಪ್ರತಿಭಟಿಸಿ ಏಪ್ರಿಲ್‌ 14ರ ಮಧ್ಯರಾತ್ರಿಯಿಂದಲೇ ಲಾರಿ ಮಾಲೀಕರ ಸಂಘ ಅನಿರ್ದಿಷ್ಟಾವಧಿ ಮುಷ್ಕರಕ್ಕೆ ಕರೆ ನೀಡಿದೆ. ಇದರಿಂದ ರಾಜ್ಯಾದ್ಯಂತ ಸುಮಾರು 6 ಲಕ್ಷ ಲಾರಿಗಳ ಸಂಚಾರ ಬಂದ್‌ ಆಗಲಿದ್ದು, ರಾಜ್ಯಕ್ಕೆ ಬರುವ ಮತ್ತು ಹೊರರಾಜ್ಯಗಳಿಗೆ ಹೋಗುವ ಸರಕು ಸಾಗಾಟದಲ್ಲಿ ವ್ಯತ್ಯಯವಾಗಿ ಜನರಿಗೆ ಇನ್ನಷ್ಟು ಸಂಕಷ್ಟ ಎದುರಾಗಲಿದೆ. ಆಲ್ ಇಂಡಿಯಾ ಮೋಟರ್ ಟ್ರಾನ್ಸ್‌ಪೋರ್ಟ್ ಕಾಂಗ್ರೆಸ್‌ ದೆಹಲಿ, ಸೌಥ್ ಇಂಡಿಯಾ ಮೋಟರ್ ಟ್ರಾನ್ಸ್‌ಪೋರ್ಟ್ ಅಸೋಸಿಯೇಷನ್,

ಇಂದು ಮಧ್ಯರಾತ್ರಿಯಿಂದ ಲಾರಿ ಮುಷ್ಕರ : ನಾಳೆಯಿಂದ ರಸ್ತೆಗಿಳಿಯುವುದಿಲ್ಲ 6 ಲಕ್ಷ ಲಾರಿಗಳು Read More »

ಮಗುವನ್ನು ಹತ್ಯೆ ಮಾಡಿದ ಆರೋಪಿ ಪೊಲೀಸರ ಗುಂಡಿಗೆ ಬಲಿ : ಕಮಿಷನರ್‌ಗೆ ಜೈಕಾರ ಹಾಕಿದ ಜನ

ಹುಬ್ಬಳ್ಳಿ : ಹುಬ್ಬಳ್ಳಿಯಲ್ಲಿ 5 ವರ್ಷದ ಬಾಲಕಿಯ ಮೇಲೆ ಅತ್ಯಾಚಾರ ಎಸಗಲು ಯತ್ನಿಸಿ ಕೊಲೆಗೈದು ಪರಾರಿಯಾಗಿದ್ದ ಆರೋಪಿಯನ್ನು ಪೊಲೀಸರು ಗುಂಡಿಟ್ಟು ಕೊಂದಿರುವುದು ರಾಜ್ಯಾದ್ಯಂತ ಸಂಚಲನವುಂಟುಮಾಡಿದೆ. ರಾಜ್ಯದಲ್ಲಿ ಆರೋಪಿಯನ್ನು ಈ ರೀತಿ ಎನ್‌ಕೌಂಟರ್‌ನಲ್ಲಿ ಸಾಯಿಸಿರುವುದು ಬಹಳ ಅಪರೂಪದ ಪ್ರಕರಣವಾಗಿದೆ. ಶಿಶುಕಾಮಿ ಆರೋಪಿಯನ್ನು ಪೊಲೀಸರು ಗುಂಟಿಕ್ಕಿ ಸಾಯಿಸಿದ್ದಾರೆ ಎಂಬ ಸುದ್ದಿ ತಿಳಿಯುತ್ತಿದ್ದಂತೆ ಹುಬ್ಬಳ್ಳಿ-ಧಾರವಾಡ ಪೊಲೀಸ್​ ಆಯುಕ್ತ ಶಶಿಕುಮಾರ್​ ಅವರಿಗೆ ಜನರು ಜೈಕಾರ ಹಾಕಿದ್ದಾರೆ. ಈ ವೀಡಿಯೊ ಈಗ ಸೋಷಿಯಲ್‌ ಮೀಡಿಯಾಗಳಲ್ಲಿ ವೈರಲ್‌ ಆಗಿದೆ. ಆರೋಪಿಯ ಸಾವಿನ ಸುದ್ದಿ ತಿಳಿಯುತ್ತಿದ್ದಂತೆ ಕಿಮ್ಸ್

ಮಗುವನ್ನು ಹತ್ಯೆ ಮಾಡಿದ ಆರೋಪಿ ಪೊಲೀಸರ ಗುಂಡಿಗೆ ಬಲಿ : ಕಮಿಷನರ್‌ಗೆ ಜೈಕಾರ ಹಾಕಿದ ಜನ Read More »

ಹಿರಿಯ ನಟ ಬ್ಯಾಂಕ್‌ ಜನಾರ್ದನ್‌ ನಿಧನ

800ಕ್ಕೂ ಅಧಿಕ ಚಿತ್ರಗಳಲ್ಲಿ ನಟಿಸಿದ್ದ ಕನ್ನಡದ ಪೋಷಕ ನಟ ಬೆಂಗಳೂರು : 800ಕ್ಕೂ ಅಧಿಕ ಚಿತ್ರಗಳಲ್ಲಿ ಪೋಷಕ ಪಾತ್ರಗಳಲ್ಲಿ ನಟಿಸಿದ್ದ ಕನ್ನಡದ ಹಿರಿಯ ನಟ ಬ್ಯಾಂಕ್ ಜನಾರ್ದನ್ ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿಂದು ನಿಧನ ಹೊಂದಿದ್ದಾರೆ. ಅವರಿಗೆ 76 ವರ್ಷ ವಯಸ್ಸಾಗಿತ್ತು. ಹಲವು ದಿನಗಳ ಕಾಲ ಅನಾರೋಗ್ಯದಿಂದ ಅವರು ಬಳಲುತ್ತಿದ್ದರು. ರಾತ್ರಿ 2.30ರ ಸುಮಾರಿಗೆ ಬ್ಯಾಂಕ್ ಜನಾರ್ದನ್ ನಿಧನ ಹೊಂದಿದ್ದಾರೆ ಎಂದು ತಿಳಿದು ಬಂದಿದೆ. ಸುಲ್ತಾನ್ ಪಾಳ್ಯದ ನಿವಾಸದಲ್ಲಿ ಅವರ ಪಾರ್ಥೀವ ಶರೀರ ಇಡಲಾಗಿದೆ.1949ರಲ್ಲಿ ಬ್ಯಾಂಕ್ ಜನಾರ್ದನ್ ಚಿತ್ರದುರ್ಗದ

ಹಿರಿಯ ನಟ ಬ್ಯಾಂಕ್‌ ಜನಾರ್ದನ್‌ ನಿಧನ Read More »

53ನೇ ದಿನಕ್ಕೆ ಕಾಲಿಟ್ಟ ಭಾವ ತೀರ ಯಾನ ಸಿನಿಮಾ | ನಾಳೆ ಬೆಳಗ್ಗೆ 11 ಗಂಟೆಗೆ ಶೋ

ಪುತ್ತೂರು : ಸುಳ್ಯದ ಯುವ ಸಂಗೀತ ನಿರ್ದೇಶಕ ಮಯೂರ ಅಂಬೆಕಲ್ಲು ಹಾಗು ತೇಜಸ್‍ ಕಿರಣ್‍ ರವರ ನಿರ್ದೇಶನದಿಂದ ಮೂಡಿಬಂದ “ಭಾವ ತೀರ ಯಾನ” ಸಿನಿಮಾ ರಾಜ್ಯಾದ್ಯಂತ ಅದ್ಭುತವಾಗಿ ಚಿತ್ರ ಪ್ರದರ್ಶನಗೊಳ್ಳುತ್ತಿದೆ ಪುತ್ತೂರಿನ ಭಾರತ್ ಸಿನಿಮಾಸ್‍ನಲ್ಲಿ ಭಾವ ತೀರ ಯಾನ ಏ.14 ರಂದು ಬೆಳಗ್ಗೆ 11 ರ ಸಮಯಕ್ಕೆ  ಶೋ ನೀಡಲು ನಿರ್ಧರಿಸಲಾಗಿದೆ.

53ನೇ ದಿನಕ್ಕೆ ಕಾಲಿಟ್ಟ ಭಾವ ತೀರ ಯಾನ ಸಿನಿಮಾ | ನಾಳೆ ಬೆಳಗ್ಗೆ 11 ಗಂಟೆಗೆ ಶೋ Read More »

ಏ.20 : ಮುಳಿಯ ಗೋಲ್ಡ್ ಅಂಡ್ ಡೈಮಂಡ್  ನವೀಕೃತ  ವಿಸ್ತೃತ ಶೋರೂಮ್ | ಆಮಂತ್ರಣ ಪತ್ರ ಬಿಡುಗಡೆ

ಪುತ್ತೂರು: ಎಂಟು ದಶಕಗಳ ಇತಿಹಾಸ ಮತ್ತು ಪರಂಪರೆಯ ಮುಳಿಯ ಗೋಲ್ಡ್ ಆಂಡ್ ಡೈಮಂಡ್ಸ್ ಪುತ್ತೂರಿನಲ್ಲಿ  ತನ್ನ ನವೀಕೃತ  ವಿಶಾಲವಾದ ಶೋರೂಮ್ ಅನಾವರಣಗೊಳಿಸಲು ಸಿದ್ಧತೆ ನಡೆಸಿದೆ. ಈ ಶೋರೂಮ್ ನಾಲ್ಕು  ಅಂತಸ್ತಿನ ಮಹಡಿಯಾಗಿದ್ದು  ಮತ್ತಷ್ಟು ವಿವಿಧ ವಿನ್ಯಾಸಗಳ ಆಭರಣಗಳ ಸಂಗ್ರಹದೊಂದಿಗೆ ಗ್ರಾಹಕರ ಸೇವೆಗಾಗಿ  ಸಿದ್ಧವಾಗಿದೆ. ಏ. 20 ರಂದು  ಉದ್ಘಾಟನೆ ಗೊಳ್ಳಲಿರುವ  ನಿಟ್ಟಿನಲ್ಲಿ ಆಮಂತ್ರಣ ಪತ್ರ ವನ್ನು ಭಾನುವಾರ ಮುಳಿಯ ಸಂಸ್ಥೆಯ ಹಿರಿಯ ದಿಗ್ದರ್ಶಕರಾದ ಸರಾಫ್ ಮುಳಿಯ ಶ್ಯಾಮ್ ಭಟ್ ಬಿಡುಗಡೆಗೊಳಿಸಿದರು. ಸಂಸ್ಥೆಯ ನಿರ್ದೇಶಕಿಯರಾದ ಕೃಷ್ಣವೇಣಿ ಪ್ರಸಾದ್ ಮುಳಿಯ,

ಏ.20 : ಮುಳಿಯ ಗೋಲ್ಡ್ ಅಂಡ್ ಡೈಮಂಡ್  ನವೀಕೃತ  ವಿಸ್ತೃತ ಶೋರೂಮ್ | ಆಮಂತ್ರಣ ಪತ್ರ ಬಿಡುಗಡೆ Read More »

error: Content is protected !!
Scroll to Top