ಶಂಕಿತ ನಕ್ಸಲರ ತಂಡ ಭೇಟಿ | ಎನ್‍ ಐ ಎ ತಂಡದಿಂದ ಕೂಂಬಿಂಗ್

ಮಡಿಕೇರಿ ಠಾಣಾ ವ್ಯಾಪ್ತಿಯ ಕೂಜಿಮಲೆಯಲ್ಲಿ ಶಂಕಿತ ನಕ್ಸಲರ ತಂಡ ಭೇಟಿ ನೀಡಿದ ಬೆನ್ನಲ್ಲೇ ಕಾರ್ಕಳದಿಂದ ನಕ್ಸಲ್ ನಿಗ್ರಹ ದಳ (ಎಎನ್ಎಫ್) ತಂಡ ಆಗಮಿಸಿ, ಕೂಂಬಿಂಗ್ ಆರಂಭಿಸಿದ್ದಾರೆ‌. ಎಎನ್ಎಫ್ ತಂಡ ಕೂಜಿಮಲೆ ಸಮೀಪದ ಬಾಳುಗೋಡಿನ ಉಪ್ಪುಕಳ, ಕೂಜಿಮಲೆ, ಕಡಮಕಲ್ಲು ಈ ಮೂರು ಪ್ರದೇಶಗಳಿಗೆ ತೆರಳಿ ಕೂಂಬಿಂಗ್ ನಡೆಸಲು ತಯಾರಿ ನಡೆಸಿದ್ದು, ಈಗಾಗಲೇ ಕೂಜಿಮಲೆಯಲ್ಲಿ ಎಎನ್ಎಫ್ ತಂಡ ಕೂಂಬಿಂಗ್ ಆರಂಭಿಸಿದ್ದಾರೆ ಎನ್ನಲಾಗಿದೆ. ಆರು ಮಂದಿ ಪುರುಷರು, ಇಬ್ಬರು ಮಹಿಳೆಯರನ್ನೊಳಗೊಂಡ ನಕ್ಸಲರು ಎನ್ನಲಾದ ಎಂಟು ಮಂದಿಯ ತಂಡ ಸಶಸ್ತ್ರಧಾರಿಗಳಾಗಿದ್ದು, ಶನಿವಾರ ಸಂಜೆ […]

ಶಂಕಿತ ನಕ್ಸಲರ ತಂಡ ಭೇಟಿ | ಎನ್‍ ಐ ಎ ತಂಡದಿಂದ ಕೂಂಬಿಂಗ್ Read More »

ಅಖಿಲ ಭಾರತ ಅಂತರ್ ವಿವಿ ಮಹಿಳೆಯರ ಬಾಲ್ ಬ್ಯಾಡ್ಮಿಂಟನ್ | ವಿವೇಕಾನಂದ ಇಂಜಿನಿಯರಿಂಗ್‍ ಕಾಲೇಜಿನ ವಿದ್ಯಾರ್ಥಿನಿ ಮೇದಿನಿ ಬಿ. ಮರಾಠೆ ಆಯ್ಕೆ

ಪುತ್ತೂರು: ವಿವೇಕಾನಂದ ಕಾಲೇಜ್ ಆಫ್ ಇಂಜಿನಿಯರಿಂಗ್ ಆ್ಯಂಡ್ ಟೆಕ್ನಾಲಜಿಯ ಅಂತಿಮ ವರ್ಷದ ಕಂಪ್ಯೂಟರ್ ಸೈನ್ಸ್ ವಿಭಾಗದ ವಿದ್ಯಾರ್ಥಿನಿ ಮೇದಿನಿ ಬಿ ಮರಾಠೆ ಅಖಿಲ ಭಾರತ ಅಂತರ್ ವಿಶ್ವವಿದ್ಯಾನಿಲಯ ಮಹಿಳೆಯರ ಬಾಲ್‌ ಬ್ಯಾಡ್ಮಿಂಟನ್ ಕ್ರೀಡಾಕೂಟಕ್ಕೆ ಆಯ್ಕೆಯಾಗಿದ್ದಾರೆ. ಮಾ.21 ರಿಂದ 24 ರ ತನಕ ಚೆನ್ನೈನ ಅಣ್ಣಾ ಯುನಿವರ್ಸಿಟಿಯಲ್ಲಿ ನಡೆಯುವ ರಾಷ್ಟ್ರಮಟ್ಟದ ಕ್ರೀಡಾಕೂಟದಲ್ಲಿ ಬೆಳಗಾವಿಯ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾನಿಲಯ ತಂಡವನ್ನು ಅವರು ಪ್ರತಿನಿಧಿಸಲಿದ್ದಾರೆ. ಬೆಂಗಳೂರಿನ ಸಿಎಂಆರ್‌ಐಟಿ ಯಲ್ಲಿ ನಡೆದ ಆಯ್ಕೆ ಪ್ರಕ್ರಿಯೆಯಲ್ಲಿ ಉನ್ನತ ಸಾಧನೆಯನ್ನು ಪ್ರದರ್ಶಿಸಿ ಇವರು ತಂಡಕ್ಕೆ ಆಯ್ಕೆಗೊಂಡಿದ್ದಾರೆ.

ಅಖಿಲ ಭಾರತ ಅಂತರ್ ವಿವಿ ಮಹಿಳೆಯರ ಬಾಲ್ ಬ್ಯಾಡ್ಮಿಂಟನ್ | ವಿವೇಕಾನಂದ ಇಂಜಿನಿಯರಿಂಗ್‍ ಕಾಲೇಜಿನ ವಿದ್ಯಾರ್ಥಿನಿ ಮೇದಿನಿ ಬಿ. ಮರಾಠೆ ಆಯ್ಕೆ Read More »

ದ.ಕ.ಜಿಲ್ಲಾ ಅಡಿಕೆ ಬೆಳೆಗಾರರ ಸಂಘದ ಅಧ್ಯಕ್ಷರಾಗಿ ಸಹಕಾರಿ ರತ್ನ ಸವಣೂರು ಸೀತಾರಾಮ ರೈ ಅವಿರೋಧವಾಗಿ ಆಯ್ಕೆ

ಪುತ್ತೂರು: ದ.ಕ.ಜಿಲ್ಲಾ ಅಡಿಕೆ ಬೆಳೆಗಾರರ ಸಂಘದ (ಮಾಸ್) ಅಧ್ಯಕ್ಷರಾಗಿ ಸಹಕಾರಿ ರತ್ನ ಸವಣೂರು ಸೀತಾರಾಮ ರೈ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಈ ಮೂಲಕ ಮುಂದಿನ ನಾಲ್ಕು ವರ್ಷಗಳ ಕಾಲ ಅವರು ಕಾರ್ಯನಿರ್ವಹಿಸಲಿದ್ದಾರೆ. ಈ ಹಿಂದೆ ಸಂಘದ ಅಧ್ಯಕ್ಷರಾಗಿದ್ದ ಭಾಸ್ಕರ ಕೋಟ್ಯಾನ್ ಅವರು ರಾಜೀನಾಮೆ ನೀಡಿದ್ದರಿಂದ ತೆರವಾದ ಸ್ಥಾನಕ್ಕೆ ಸಂಸ್ಥೆಯ ಎಲ್ಲಾ ನಿರ್ದೇಶಕರ ಉಪಸ್ಥಿತಿಯಲ್ಲಿ, ಚುನಾವಣಾಧಿಕಾರಿ ಮಂಗಳೂರು ಸಹಕಾರಿ ಇಲಾಖೆಯ ಸಹಾಯಕ ನಿಬಂಧಕ ವಿಲಾಸ್ ಉಪಸ್ಥಿತಿಯಲ್ಲಿ ಸವಣೂರು ಸೀತಾರಾಮ ರೈ ಅವರನ್ನು ಅವಿರೋಧವಾಗಿ ಆಯ್ಕೆ ಮಾಡಿದ್ದಾರೆ. ಹಾಲಿ ಸಮಿತಿಯಲ್ಲಿ ಉಪಾಧ್ಯಕ್ಷರಾಗಿದ್ದ

ದ.ಕ.ಜಿಲ್ಲಾ ಅಡಿಕೆ ಬೆಳೆಗಾರರ ಸಂಘದ ಅಧ್ಯಕ್ಷರಾಗಿ ಸಹಕಾರಿ ರತ್ನ ಸವಣೂರು ಸೀತಾರಾಮ ರೈ ಅವಿರೋಧವಾಗಿ ಆಯ್ಕೆ Read More »

ಡಿ.ವಿ.ಸದಾನಂದ ಗೌಡ ಕಾಂಗ್ರೆಸ್ ಸೇರುತ್ತಾರೋ ? ಇಲ್ಲವೋ ? | ನಾಳೆ ಪತ್ರಿಕಾಗೋಷ್ಠಿ ಆಯೋಜಿಸಿದ ಡಿ.ವಿ.

ಬೆಂಗಳೂರು: ಲೋಕಸಭೆ ಚುನಾವಣೆ ಟಿಕೇಟ್ ಕುರಿತು ಕಾಂಗ್ರೆಸ್ ನಾಯಕರು ನನ್ನನ್ನು ಸಂಪರ್ಕ ಮಾಡಿರುವುದು ನಿಜ. ಈ ಕುರಿತು ಕುಟುಂಬದವರ ಜತೆ ಮಾತುಕತೆ ನಡೆಸಬೇಕಾಗಿದೆ. ನಾಳೆ ಪತ್ರಿಕಾಗೋಷ್ಠಿ ನಡೆಸಿ ನನ್ನ ನಿಲುವು ತಿಳಿಸುತ್ತೇನೆ ಎಂದು ಡಿ.ವಿ.ಸದಾನಂದ ಗೌಡ ತಿಳಿಸಿದ್ದಾರೆ. ಈಗಾಗಲೇ ಕಾಂಗ್ರೆಸ್ ಪಕ್ಷದ ಪ್ರಮುಖರೊಬ್ಬರು ನನ್ನ ಜತೆ ಸಮಾಲೋಚನೆ ಮಾಡಿದ್ದಾರೆ. ಅವರು ಹೇಳಿರುವ ಮಾತನ್ನು ಈಗ ಬಹಿರಂಗಪಡಿಸಲು ಆಗುವುದಿಲ್ಲ. ನಾಳೆ ಎಲ್ಲವನ್ನೂ ತಿಳಿಸುತ್ತೇನೆ ಎಂದಿದ್ದಾರೆ. ಯಾರಿಗೆಲ್ಲ ಅನ್ಯಾಯ ಆಗಿದೆಯೋ ಅವರೆಲ್ಲಾ ಒಂದುಗೂಡಿ ಹೈಕಮಾಂಡ್ ಬಳಿ ಹೋಗೋಣ ಎಂದಿದ್ದೆ. ಆದರೆ

ಡಿ.ವಿ.ಸದಾನಂದ ಗೌಡ ಕಾಂಗ್ರೆಸ್ ಸೇರುತ್ತಾರೋ ? ಇಲ್ಲವೋ ? | ನಾಳೆ ಪತ್ರಿಕಾಗೋಷ್ಠಿ ಆಯೋಜಿಸಿದ ಡಿ.ವಿ. Read More »

ಸರ್ವೆ ರಕ್ತೇಶ್ವರಿ ಹಿಂದೂ ಜಾಗರಣ ವೇದಿಕೆಯಿಂದ ಆಶ್ಲೇಷ ಪೂಜೆಯ ಆಮಂತ್ರಣ ಪತ್ರಿಕೆ ಬಿಡುಗಡೆ

ಪುತ್ತೂರು: ಸರ್ವೆ ರಕ್ತೇಶ್ವರಿ ಹಿಂದೂ ಜಾಗರಣ ವೇದಿಕೆ ವತಿಯಿಂದ ಮಾ.30 ರಂದು ಸರ್ವೆ ರಕ್ತೇಶ್ವರಿ ಕಟ್ಟೆಯಲ್ಲಿ ನಡೆಯುವ 11ನೇ ವರ್ಷದ ಆಶ್ಲೇಷ ಪೂಜೆಯ ಆಮಂತ್ರಣ ಪತ್ರಿಕೆ ಬಿಡುಗಡೆ ಸರ್ವೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ನಡೆಯಿತು. ಈ ಸಂದರ್ಭದಲ್ಲಿ ಸರ್ವೆ ರಕ್ತೇಶ್ವರಿ ಹಿಂದೂ ಜಾಗರಣ ವೇದಿಕೆ ಅಧ್ಯಕ್ಷ ಜಯಂತ್ ಭಕ್ತಕೋಡಿ, ಕಾರ್ಯದರ್ಶಿ ಲಕ್ಷ್ಮೀಶ್  ರೈ, ಬೆಳಿಯಪ್ಪ ಗೌಡ ಸರ್ವೆ, ಪದ್ಮನಾಭ ಗೌಡ, ಪ್ರವೀಣ್ ನಾಯ್ಕ್ ನೇಕಿತಡ್ಕ, ನವೀನ್ ರೈ, ಯೋಗೀಶ್ ಟಿ., ಗೌತಮ್ ರೈ, ಭರತ್ ಸರ್ವೆ, ಜನಾರ್ಧನ

ಸರ್ವೆ ರಕ್ತೇಶ್ವರಿ ಹಿಂದೂ ಜಾಗರಣ ವೇದಿಕೆಯಿಂದ ಆಶ್ಲೇಷ ಪೂಜೆಯ ಆಮಂತ್ರಣ ಪತ್ರಿಕೆ ಬಿಡುಗಡೆ Read More »

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಜನಮಂಗಲ ಕಾರ್ಯಕ್ರಮದಡಿ ವೀಲ್ ಚೆಯರ್ ಹಸ್ತಾಂತರ

ಕೆದಿಲ : ಕೆದಿಲ ಗ್ರಾಮದ ನೇರಳೆಗುರಿ ಲಕ್ಷ್ಮೀರವರು ಅಸೌಖ್ಯದಿಂದಿದ್ದು ಅವರಿಗೆ    ಶ್ರೀ ಕ್ಷೇತ್ರ ಧರ್ಮಸ್ಥಳ  ಗ್ರಾಮಾಭಿವೃದ್ಧಿ ಯೋಜನೆಯ  ಜನಮಂಗಲ ಕಾರ್ಯಕ್ರಮದ  ಯೋಜನೆಯಡಿ ವೀಲ್ ಚೆಯರ್ ಹಸ್ತಾಂತರಿಸಲಾಯಿತು. ಶೌಚಾಲಯಕ್ಕೆ ತೆರಳುವ ಸಂದರ್ಭ ಅನುಕೂಲಕ್ಕಾಗಿ ವೀಲ್ ಚೆಯರ್ ಅನ್ನು ಪೆರ್ನೆ ವಲಯ ಮೇಲ್ವಿಚಾರಕಿ  ಶಾರದಾ ವಿತರಿಸಿದರು ಈ ಸಂದರ್ಭದಲ್ಲಿ ಸೇವಾಪ್ರತಿನಿಧಿ ಜಯಂತಿ, ಪೆರ್ನೆ ಶೌರ್ಯ ವಿಪತ್ತು ನಿರ್ವಹಣಾ ಘಟಕದ ಸದಸ್ಯರಾದ ಜಗದೀಶ, ಶೀನಪ್ಪ, ಗಿರೀಶ, ಮತ್ತು ಪ್ರಗತಿ ಸ್ವಸಹಾಯ ಸಂಘದ ಸದಸ್ಯರು ಉಪಸ್ಥಿತರಿದ್ದರು.

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಜನಮಂಗಲ ಕಾರ್ಯಕ್ರಮದಡಿ ವೀಲ್ ಚೆಯರ್ ಹಸ್ತಾಂತರ Read More »

ದರ್ಶನ್ ಗರ್ತಿಕೆರೆ ದ ಕ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ ಪ್ರಶಸ್ತಿಗೆ ಆಯ್ಕೆ

ಪುತ್ತೂರು: ಮಾ.23 ಹಾಗೂ 24ರಂದು ಮಂಗಳೂರಿನ ಕುದ್ಮಲ್ ರಂಗರಾವ್ ಪುರಭವನದಲ್ಲಿ ನಡೆಯುವ ದ. ಕ ಜಿಲ್ಲಾ 26ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಪ್ರಶಸ್ತಿಗೆ ಪುತ್ತೂರಿನ ವಿವೇಕಾನಂದ ಐ.ಎ.ಎಸ್ ಅಧ್ಯಯನ ಕೇಂದ್ರದ ತಜ್ಞ ತರಬೇತುದಾರ ದರ್ಶನ್ ಗರ್ತಿಕೆರೆ ಆಯ್ಕೆಗೊಂಡಿದ್ದಾರೆ. ಪುತ್ತೂರು ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಹಾಗೂ ವಿವೇಕಾನಂದ ಐ.ಎ.ಎಸ್ ಅಧ್ಯಯನ ಕೇಂದ್ರ ದ ವತಿಯಿಂದ ನಡೆಸಲಾದ ಕನ್ನಡದಲ್ಲೂ ಐ.ಎ.ಎಸ್ ಪರೀಕ್ಷೆ ಬರೆಯಿರಿ ಅಭಿಯಾನದ ಅಡಿಯಲ್ಲಿ ಕಳೆದ ಒಂದು ವರ್ಷದಲ್ಲಿ ಸುಮಾರು 50ಕ್ಕೂ ಅಧಿಕ ಉಚಿತ ಕಾರ್ಯಾಗಾರಗಳನ್ನು

ದರ್ಶನ್ ಗರ್ತಿಕೆರೆ ದ ಕ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ ಪ್ರಶಸ್ತಿಗೆ ಆಯ್ಕೆ Read More »

ಪುತ್ತೂರು ಬಿಜೆಪಿ ಕಾರ್ಯಕರ್ತ ಜಯಾನಂದ ಬಂಗೇರ ಮೇಲಿನ ಕಾಂಗ್ರೆಸ್ ಗೂಂಡಾಗಿರಿ ಖಂಡನೀಯ : ಕ್ಯಾ.ಬ್ರಿಜೇಶ್ ಚೌಟ

ಪುತ್ತೂರು: ಪುತ್ತೂರಿನ ಶಾಸಕರ 1400 ಕೋಟಿಯ ಅನುದಾನದ ಬಗ್ಗೆ ಮಾಹಿತಿ ಕೇಳಿದ ಬಿಜೆಪಿ ಕಾರ್ಯಕರ್ತ ಜಯಾನಂದ ಬಂಗೇರರ ಮನೆಗೆ ನುಗ್ಗಿ ದಾಂದಲೆ ನಡೆಸಿರುವ ಘಟನೆಯನ್ನು ತೀವ್ರವಾಗಿ ಖಂಡನೀಯ ಎಂದು ದ.ಕ.ಜಿಲ್ಲಾ ಲೋಕಸಭಾ ಅಭ್ಯರ್ಥಿ ಕ್ಯಾ.ಬ್ರಿಜೇಶ್ ಚೌಟ ಹೇಳಿದ್ದಾರೆ. ಪತ್ರಿಕಾ ಹೇಳಿಕೆ ನೀಡಿರುವ ಅವರು, ತಾನು 1400 ಕೋಟಿಯ ಅನುದಾನ ತಂದಿದ್ದೇನೆ ಎಂದು ಹೇಳುವ ಶಾಸಕರಿಗೆ ಆ ಬಗ್ಗೆ ಮಾಹಿತಿ ನೀಡಲು ಹಿಂಜರಿಕೆ ಏಕೆ.  ಅನುದಾನದ ಬಗ್ಗೆ ಮಾಹಿತಿ ನೀಡಲು ಪುತ್ತೂರು ಶಾಸಕರು ವಿಫಲರಾಗಿದ್ದು, ಹತಾಶರಾಗಿರುವ ಶಾಸಕರು ತನ್ನ

ಪುತ್ತೂರು ಬಿಜೆಪಿ ಕಾರ್ಯಕರ್ತ ಜಯಾನಂದ ಬಂಗೇರ ಮೇಲಿನ ಕಾಂಗ್ರೆಸ್ ಗೂಂಡಾಗಿರಿ ಖಂಡನೀಯ : ಕ್ಯಾ.ಬ್ರಿಜೇಶ್ ಚೌಟ Read More »

ಸಾಮಾಜಿಕ ಜಾಲತಾಣದ ವಿಚಾರ | ಮನೆ ವಠಾರಕ್ಕೆ ಅಕ್ರಮವಾಗಿ ಪ್ರವೇಶಿಸಿ ಜೀವ ಬೆದರಿಕೆ | ಪ್ರಕರಣ ದಾಖಲು

ಪುತ್ತೂರು: ಸಾಮಾಜಿಕ ಜಾಲತಾಣದ ಬರವಣಿಗೆ ವಿಚಾರದಲ್ಲಿ 15 ಅಧಿಕ ಜನರು ಮನೆಯೊಳಗೆ ಅಕ್ರಮ ಪ್ರವೇಶ ಮಾಡಿ ಅವಾಚ್ಯವಾಗಿ ನಿಂಧಿಸಿ ಜೀವ ಬೆದರಿಕೆ ಹಾಕಿದ ಬಗ್ಗೆ ಪುತ್ತೂರು ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪ್ರಜ್ವಲ್ ರೈ, ಸನತ್ ರೈ ಸಹಿತ 15 ಮಂದಿಯ ಮೇಲೆ ಪ್ರಕರಣದಾಖಲಾಗಿದೆ. ಬಿಜೆಪಿ ಸಾಮಾಜಿ ಜಾಲತಾಣ ಪ್ರಕೋಷ್ಠದ ಜಿಲ್ಲಾ ಸದಸ್ಯ ತಾರಿಗುಣ್ಣ ನಿವಾಸಿ ಜಯಾನಂದ ಕೆ. (41) ದೂರು ನೀಡಿದ್ದಾರೆ. ಕಾಂಗ್ರೆಸ್ ಸರ್ಕಾರದ ಯೋಜನೆಗಳನ್ನು ಬರೆದಿರುವ ಬ್ಯಾನರ್ ಪ್ರದರ್ಶಿಸಿಕೊಂಡು ಚೆಂಡೆಗಳನ್ನು ಜೋರಾಗಿ ಬಡಿಯುತ್ತಾ ಅಕ್ರಮವಾಗಿ

ಸಾಮಾಜಿಕ ಜಾಲತಾಣದ ವಿಚಾರ | ಮನೆ ವಠಾರಕ್ಕೆ ಅಕ್ರಮವಾಗಿ ಪ್ರವೇಶಿಸಿ ಜೀವ ಬೆದರಿಕೆ | ಪ್ರಕರಣ ದಾಖಲು Read More »

ಕರ್ನಾಟಕ ಯಕ್ಷಗಾನ ಅಕಾಡೆಮಿ ಸದಸ್ಯರಾಗಿ ರಾಘವ ಎಚ್.ಗೇರುಕಟ್ಟೆ

ಬೆಳ್ತಂಗಡಿ: ಕರ್ನಾಟಕ ಯಕ್ಷಗಾನ ಅಕಾಡೆಮಿಯ ಸದಸ್ಯರಾಗಿ ರಾಘವ ಎಚ್. ಗೇರುಕಟ್ಟೆ ನೇಮಕಗೊಂಡಿದ್ದಾರೆ. ರಾಘವ ಅವರು ನಾಳ ಶ್ರೀ ದುರ್ಗಾಪರಮೇಶ್ವರಿ ಚಿಕ್ಕಮೇಳದ ಸಂಚಾಲಕರಾಗಿ ಮತ್ತು ನಾಳ ಶ್ರೀ ದುರ್ಗಾಪರಮೇಶ್ವರಿ ದಶಾವತಾರ ಯಕ್ಷಗಾನ ಮಂಡಳಿಯ ವ್ಯವಸ್ಥಾಪಕರಾಗಿ ಯಕ್ಷಗಾನ ಮತ್ತು ತಾಳಮದ್ದಳೆಯ ಸಂಯೋಜಕರಾಗಿ, ಕಲಾವಿದರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ನಾಳ ಶ್ರೀ ದುರ್ಗಾಪರಮೇಶ್ವರಿ ಯಕ್ಷಗಾನ ಸಂಘ ಮತ್ತು ಉಪ್ಪಿನಂಗಡಿಯ ಶ್ರೀ ಕಾಳಿಕಾಂಬ ಯಕ್ಷಗಾನ ಕಲಾ ಸೇವಾ ಸಂಘದ ಅಧ್ಯಕ್ಷ ದಿವಾಕರ್ ಆಚಾರ್ಯ ಗೇರುಕಟ್ಟೆ ಅಭಿನಂದನೆ ಸಲ್ಲಿಸಿದ್ದಾರೆ.

ಕರ್ನಾಟಕ ಯಕ್ಷಗಾನ ಅಕಾಡೆಮಿ ಸದಸ್ಯರಾಗಿ ರಾಘವ ಎಚ್.ಗೇರುಕಟ್ಟೆ Read More »

error: Content is protected !!
Scroll to Top