ದೇಶದ ಅತೀ ದೊಡ್ಡ ಸಂಸ್ಥೆ ದಕ್ಷಿಣ ಕನ್ನಡ ರೈತ ಉತ್ಪಾದಕರ‌ ಕಂಪೆನಿಯ‌ ಷೇರು ಮಾರುಕಟ್ಟೆಗೆ ಬಿಡುಗಡೆ

ಮಂಗಳೂರು: ತೆಂಗು ಬೆಳೆಗಾರರೇ ಸ್ಥಾಪಿಸಿ, ಮುನ್ನಡೆಸುತ್ತಿರುವ ದೇಶದ ಅತೀ ದೊಡ್ಡ ಸಂಸ್ಥೆ ದಕ್ಷಿಣ ಕನ್ನಡ ತೆಂಗು ರೈತ ಉತ್ಪಾದಕರ ಕಂಪನಿಯು ತನ್ನ ಕಾರ್ಯ ವ್ಯಾಪ್ತಿ ಹಾಗೂ ಮಾರುಕಟ್ಟೆ ವಿಸ್ತರಣೆ ಉದ್ದೇಶದಿಂದ ಸಾರ್ವಜನಿಕರಿಂದ ಷೇರು ಸಂಗ್ರಹಕ್ಕೆ ಮುಂದಾಗಿದೆ. 15 ಸಾವಿರಕ್ಕೂ ಅಧಿಕ ಸದಸ್ಯರನ್ನು ಹೊಂದಿರುವ ತೆಂಗು ಬೆಳೆಗಾರರ ಕಂಪನಿ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ಈ ಸಂಸ್ಥೆ 300 ಕೋಟಿ ರೂ. ಮೌಲ್ಯದ ವಿಸ್ತ್ರತ ಯೋಜನೆ ಕೈಗೆತ್ತಿಕೊಂಡಿದ್ದು, ಮೊದಲ ಹಂತದಲ್ಲಿ 50 ಕೋಟಿ ರೂ. ಮೌಲ್ಯದ ಷೇರು ಸಂಗ್ರಹಿಸುವ ಗುರಿ ಇಟ್ಟುಕೊಂಡಿದೆ. […]

ದೇಶದ ಅತೀ ದೊಡ್ಡ ಸಂಸ್ಥೆ ದಕ್ಷಿಣ ಕನ್ನಡ ರೈತ ಉತ್ಪಾದಕರ‌ ಕಂಪೆನಿಯ‌ ಷೇರು ಮಾರುಕಟ್ಟೆಗೆ ಬಿಡುಗಡೆ Read More »

ಮುಂದೂಡಲ್ಪಟ್ಟ ಡಿವಿಎಸ್ ಪತ್ರಿಕಾಗೋಷ್ಠಿ

ಬೆಂಗಳೂರು: ಇಂದು ನಿಗದಿಯಾಗಿದ್ದ ಮಾಜಿ ಮುಖ್ಯಮಂತ್ರಿ ಡಿ.ವಿ. ಸದಾನಂದ ಗೌಡರ ಸುದ್ದಿಗೋಷ್ಠಿ ಮುಂದೂಡಲ್ಪಟ್ಟಿದೆ. ಬೆಂಗಳೂರಿನಲ್ಲಿ ಇಂದು ಸದಾನಂದ ಗೌಡ ರಾಜ್ಯ ಒಕ್ಕಲಿಗರ ಸಂಘದ ನಿರ್ದೇಶಕರ ಜೊತೆ ಚರ್ಚೆ ನಡೆಸಲಿದ್ದಾರೆ.  ಈ ಹಿನ್ನೆಲೆಯಲ್ಲಿ ಸುದ್ದಿಗೋಷ್ಠಿ ಮುಂದೂಡಲಾಗಿದೆ ಎಂದು ಹೇಳಲಾಗಿದೆ.

ಮುಂದೂಡಲ್ಪಟ್ಟ ಡಿವಿಎಸ್ ಪತ್ರಿಕಾಗೋಷ್ಠಿ Read More »

ಇಂದು ಡಿವಿ ಸದಾನಂದ ಗೌಡರ ನಿರ್ಧಾರ ಪ್ರಕಟ  | ತಟಸ್ಥವಾಗಿ  ಉಳಿಯುತ್ತಾರೋ? ‘ಕೈ’ ಹಿಡಿಯುತ್ತಾರೋ?

ಬೆಂಗಳೂರು : ಲೋಕಸಭಾ ಚುನಾವಣೆ ಟಿಕೆಟ್‌ಗೆ ಸಂಬಂಧಿಸಿದಂತೆ ಕೆ. ಎಸ್.ಈಶ್ವರಪ್ಪ ಬಳಿಕ ಮಾಜಿ ಸಿಎಂ ಡಿ.ವಿ.ಸದಾನಂದ ಗೌಡರೂ ಅಸಮಾಧಾನಗೊಂಡಿದ್ದು, ಇಂದು ತಮ್ಮ ಮುಂದಿನ ನಿರ್ಧಾರ ಪ್ರಕಟಿಸುವ ಸಾಧ್ಯತೆಯಿದೆ. ಈ ಹಿನ್ನೆಲೆಯಲ್ಲಿ ಇಂದು ಸುದ್ದಿಗೋಷ್ಟಿ ಕರೆದಿದ್ದು ತಮ್ಮ ನಿರ್ಧಾರ ಪ್ರಕಟಿಸಲಿದೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ಡಿವಿಎಸ್ ‘ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾಗುವಂತೆ ಆ ಪಕ್ಷದ ನಾಯಕರು ನನ್ನನ್ನು ಸಂಪರ್ಕಿಸಿರುವುದು ನಿಜ. ಈ ಬಗ್ಗೆ ಕುಟುಂಬದವರೊಂದಿಗೆ ಚರ್ಚಿಸಿ ಇಂದು ನನ್ನ ಅಂತರಾಳದ ವಿಚಾರವನ್ನು ತಿಳಿಸುತ್ತೇನೆ’ ಎಂದಿದ್ದಾರೆ. ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದಲ್ಲಿ

ಇಂದು ಡಿವಿ ಸದಾನಂದ ಗೌಡರ ನಿರ್ಧಾರ ಪ್ರಕಟ  | ತಟಸ್ಥವಾಗಿ  ಉಳಿಯುತ್ತಾರೋ? ‘ಕೈ’ ಹಿಡಿಯುತ್ತಾರೋ? Read More »

ನೇತ್ರಾವತಿ ನದಿಗೆ ಬಿದ್ದು ಯುವಕ ಮೃತ್ಯು !

ಬಂಟ್ವಾಳ: ನೇತ್ರಾವತಿ ನದಿಗೆ ಬಿದ್ದು ಯುವಕ ಮೃತಪಟ್ಟ ಘಟನೆ ನಡೆದಿದೆ. ಬೆಳ್ತಂಗಡಿ ತಾಲೂಕಿನ ನಡ ಗ್ರಾಮದ ಮಂಜೊಟ್ಟಿ ನಿವಾಸಿ ಲೋಹಿತಾಶ್ವ (30) ಮೃತ ಯುವಕ. ಲೋಹಿತಾಶ್ವ ಅವರು ಕಾರಿನಲ್ಲಿ ಊರಿನ ನಾಲ್ವರು ಸ್ನೇಹಿತರ ಜೊತೆ ಶಂಭೂರಿಗೆ ಬಂದಿದ್ದು, ಸ್ನೇಹಿತರು ಸ್ನಾನ ಮಾಡುವುದಕ್ಕೆ ನೀರಿಗೆ ಇಳಿದಿದ್ದರು, ಆದರೆ ಲೋಹಿತಾಶ್ವ ನದಿ ಕಿನಾರೆಯಲ್ಲೇ ಕುಳಿತ್ತಿದ್ದರು ಎನ್ನಲಾಗಿದೆ. ಆದರೆ ಸ್ನೇಹಿತರು ಸ್ನಾನ ಮುಗಿಸಿ ಬರುವ ವೇಳೆ ಲೋಹಿತಾಶ್ವ ಅವರು ನೀರಿನಲ್ಲಿ ಬಿದ್ದಿದ್ದರು. ನದಿ ಕಿನಾರೆಯಲ್ಲಿ ಕುಳಿತಿದ್ದ ಅವರ ಆರೋಗ್ಯದಲ್ಲಿ ವ್ಯತ್ಯಾಸ ಕಂಡುಬಂದು

ನೇತ್ರಾವತಿ ನದಿಗೆ ಬಿದ್ದು ಯುವಕ ಮೃತ್ಯು ! Read More »

ನರಿಮೊಗರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ನವೀಕೃತ ಶಾಖೆ ಶುಭಾರಂಭ

ಪುತ್ತೂರು: ನರಿಮೊಗರು ಪ್ರಾಥಮಿಕ ಕೃಷಿಪತ್ತಿನ ಸಹಕಾರಿ ಸಂಘದ ನವೀಕೃತ ಶಾಖೆ ಇಂದು ಶುಭಾರಂಭಗೊಂಡಿತು. ಅರ್ಚಕ ಬಾಲಚಂದ್ರ ಸಗ್ರಿತ್ತಾಯ ಶ್ರೀ ಗಣಪತಿ ಹೋಮ ಮಾಡುವ ಮೂಲಕ  ಶಾಖೆಯನ್ನು ಉದ್ಘಾಟಿಸಿದರು. ಕಾರ್ಯಕ್ರಮದಲ್ಲಿ ನರಿಮೊಗರು ಪ್ರಾಥಮಿಕ  ಕೃಷಿಪತ್ತಿನ ಕಾರ್ಯನಿರ್ವಾಹಕ ಅಧಿಕಾರಿ ಮದುಕರ ಎಚ್, ಅಧ್ಯಕ್ಷ ನವೀನ್ ಎಮ್., ಉಪಾಧ್ಯಕ್ಷೆ ಪವಿತ್ರ, ನಿರ್ದೇಶಕರಾದ ದೇವಪ್ಪ ಓಲಾಡಿ, ಪ್ರವೀಣ್ ಶೆಟ್ಟಿ ಕುದುರೆಪ್ಪಾಡಿ, ಜಯರಾಮ್ ಪೂಜಾರಿ, ದೇವಪ್ಪ ಪಜಿರೋಡಿ, ಶಿವಪ್ರಸಾದ್ ಬಜಪ್ಪಳ, ನರಿಮೊಗರು ಗ್ರಾಮ ಪಂಚಾಯತ್ ಉಪಾಧ್ಯಕ್ಷ ಉಮೇಶ್ ಇಂದಿರಾನಗರ, ಗ್ರಾಮ ಪಂಚಾಯತ್ ಸದಸ್ಯೆ ನಾಗಮ್ಮ

ನರಿಮೊಗರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ನವೀಕೃತ ಶಾಖೆ ಶುಭಾರಂಭ Read More »

ಆಟೋ ರಿಕ್ಷಾ-ಬೈಕ್ ಡಿಕ್ಕಿ | ಬೈಕ್ ಸವಾರನಿಗೆ ಗಾಯ

ಪುತ್ತೂರು: ಆಟೋ ರಿಕ್ಷಾ ಬೈಕ್‍ ಗೆ ಡಿಕ್ಕಿಯಾಗಿ ಬೈಕ್ ಸವಾರ ಗಾಯಗೊಂಡ ಘಟನೆ ಇಂದು ಮುಂಜಾನೆ  ಜಿ ಎಲ್ ಆಚಾರ್ಯ ಬಳಿ ನಡೆದಿದೆ. ಅಪಘಾತದಿಂದ ಪತ್ರಿಕಾ ವಿತರಕ ಬೈಕ್ ಸವಾರ ರಮೇಶ್ ಅವರ ಕಾಲಿಗೆ ಗಾಯವಾಗಿದೆ. ಈ ಕುರಿತು ಹೆಚ್ಚಿನ ಮಾಹಿತಿ ತಿಳಿದು ಬಂದಿಲ್ಲ.

ಆಟೋ ರಿಕ್ಷಾ-ಬೈಕ್ ಡಿಕ್ಕಿ | ಬೈಕ್ ಸವಾರನಿಗೆ ಗಾಯ Read More »

ಅಂಗನವಾಡಿಗೆ, ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ನುಗ್ಗಿದ ಕಳ್ಳರು | ಅಂಗನವಾಡಿಯಲ್ಲಿ ದಾಸ್ತಾನಿರಿಸಿದ್ದ ಮೊಟ್ಟೆಗಳನ್ನು ಆಮ್ಲೆಟ್ ಮಾಡಿ ತಿಂದು ಕಾಲ್ಕಿತ್ತ ಕಳ್ಳರು

ಪುತ್ತೂರು: ನಗರದ ಕೆಎಸ್‍ ಆರ್‍ ಟಿಸಿ ಬಸ್ ನಿಲ್ದಾಣದ ಬಳಿ ಇರುವ ನೆಲ್ಲಿಕಟ್ಟೆ ಅಂಗನವಾಡಿ, ನಗರ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಕಳ್ಳರು ನುಗ್ಗಿದ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಅಂಗನವಾಡಿಯ ಬೀಗ ಒಡೆದು ನುಗ್ಗಿದ ಕಳ್ಳರು ಅಂಗನವಾಡಿಯಲ್ಲಿ ದಾಸ್ತಾನಿರಿಸಿದ್ದ ಸುಮಾರು 25 ಕ್ಕೂ ಅಧಿಕ ಮೊಟ್ಟೆಗಳನ್ನು ಆಮ್ಲೆಟ್ ಮಾಡಿ ತಿಂದು, ಪಾತ್ರೆಗಳನ್ನು ಬೆಂಕಿಯಲ್ಲಿ ಕರಟಿದ್ದಾರೆ. ಬಿಸಿಯೂಟದ ಪಾತ್ರೆಗಳನ್ನು ಕಳವು ಮಾಡಿದ್ದಾರೆ. ಅಲ್ಲದೆ ಟಾಯ್ಲೆಟ್ ಬೇಸಿನ್‍ ಗೆ ಮಣ್ಣು ತುಂಬಿಸಿ ಹೋಗಿದ್ದಾರೆ ಎನ್ನಲಾಗಿದೆ. ಅಷ್ಟಕ್ಕೂ ಬಿಡದ ಕಳ್ಳರು ಪ್ರಾಥಮಿಕ

ಅಂಗನವಾಡಿಗೆ, ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ನುಗ್ಗಿದ ಕಳ್ಳರು | ಅಂಗನವಾಡಿಯಲ್ಲಿ ದಾಸ್ತಾನಿರಿಸಿದ್ದ ಮೊಟ್ಟೆಗಳನ್ನು ಆಮ್ಲೆಟ್ ಮಾಡಿ ತಿಂದು ಕಾಲ್ಕಿತ್ತ ಕಳ್ಳರು Read More »

ಸಾಮಾಜಿಕ ಜಾಲತಾಣದಲ್ಲಿ ಅಪಪ್ರಚಾರ | ಒಂಭತ್ತು ಮಂದಿ ಪೊಲೀಸರ ವಶಕ್ಕೆ | ಜಾಮೀನಿನ  ಮೇಲೆ ಬಿಡುಗಡೆ

ಪುತ್ತೂರು: ಸಾಮಾಜಿಕ ಜಾಲತಾಣ ವಿಚಾರಕ್ಕೆ ಸಂಬಂಧಿಸಿ ಅಪಪ್ರಚಾರ ನಡೆಸಿದ್ದಾರೆ ಎಂದು ಆರೋಪಿಸಿ ವ್ಯಕ್ತಿಯೊಬ್ಬರ ಮನೆ ವಠಾರಕ್ಕೆ ಅಕ್ರಮ ಪ್ರವೇಶ ಮಾಡಿ ಜೀವ ಬೆದರಿಕೆ ಒಡ್ಡಿದ ಘಟನೆ ಸಂಬಂಧಿಸಿದಂತೆ ಒಂಭತ್ತು ಮಂದಿಯನ್ನು ಪುತ್ತೂರು ನಗರ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಬಂಧಿತರನ್ನು ಕಡಬ ತಾಲೂಕಿನ ಪಾತಾಜೆ ನಿವಾಸಿ ಪ್ರಜ್ವಲ್ ರೈ, ವಿಟ್ಲ ಕಂಬಳಬೆಟ್ಟು ನಿವಾಸಿ ಸುಶಾಂತ್ ಶೆಟ್ಟಿ, ಪುತ್ತೂರಿನ ಆರ್ಯಾಪು ನಿವಾಸಿ ಸನತ್ ರೈ, ಬಲ್ನಾಡು ನಿವಾಸಿ ರೋಹಿತ್ ನಾಯ್ಕ್, ಸಾಮೆತಡ್ಕ ನಿವಾಸಿ ಅಖಿಲ್, ಆರ್ಯಾಪು ನಿವಾಸಿ ಕೀರ್ತನ್ ರೈ,

ಸಾಮಾಜಿಕ ಜಾಲತಾಣದಲ್ಲಿ ಅಪಪ್ರಚಾರ | ಒಂಭತ್ತು ಮಂದಿ ಪೊಲೀಸರ ವಶಕ್ಕೆ | ಜಾಮೀನಿನ  ಮೇಲೆ ಬಿಡುಗಡೆ Read More »

ಸೂಕ್ತ ದಾಖಲೆ ಪತ್ರ ಇಲ್ಲದೆ ಸಾಗಿಸುತ್ತಿದ್ದ 1.32 ಲಕ್ಷ ರೂ. | ವಶಕ್ಕೆ ಪಡೆದ ಚುನಾವಣಾಧಿಕಾರಿಗಳು

ಪುತ್ತೂರು: ಸೂಕ್ತ ದಾಖಲೆ ಇಲ್ಲದೆ ಸಾಗಿಸುತ್ತಿದ್ದ 1.32 ಲಕ್ಷ ರೂ. ನಗದನ್ನು ಚುನಾವಣಾಧಿಕಾರಿಗಳು ವಶಕ್ಕೆ ಪಡೆದ ಘಟನೆ ಮಂಗಳೂರು ಹೊರವಲಯದ ಬಡಗ ಎಡಪದವು ಎಂಬಲ್ಲಿ ನಡೆದಿದೆ. ಲೋಕಸಭಾ ಚುನಾವಣೆ ನೀತಿ ಸಂಹಿತೆ ಜಾರಿಯಾದ ಕಾರಣ ಅಕ್ರಮ ಹಣ ವಹಿವಾಟಿನ ಮೇಲೆ ಚುನಾವಣಾ ಆಯೋಗ ಹದ್ದಿನ ಕಣ್ಣಿಟ್ಟಿದ್ದರೂ ಈ ನಡುವೆ ಮಂಗಳೂರು ಹೊರವಲಯದ ಬಡಗ ಎಡಪದವು ಚೆಕ್‍ ಪೋಸ್ಟ್‍  ನಲ್ಲಿ ಸೂಕ್ತ ದಾಖಲೆ ಇಲ್ಲದೆ ಸಾಗಿಸುತ್ತಿದ್ದಾಗ ನಗದನ್ನು ಚುನಾವಣಾಧಿಕಾರಿಗಳು ವಶಕ್ಕೆ ಪಡೆದಿದ್ದಾರೆ. ಭಾನುವಾರ ತಡರಾತ್ರಿ ಕೈಕಂಬ ನಿವಾಸಿಯೊಬ್ಬರು ಹುಂಡೈ

ಸೂಕ್ತ ದಾಖಲೆ ಪತ್ರ ಇಲ್ಲದೆ ಸಾಗಿಸುತ್ತಿದ್ದ 1.32 ಲಕ್ಷ ರೂ. | ವಶಕ್ಕೆ ಪಡೆದ ಚುನಾವಣಾಧಿಕಾರಿಗಳು Read More »

ಸಂತ ಫಿಲೋಮಿನಾ ಕಾಲೇಜಿಗೆ ಐಎಸ್‌ಒ 9001:2015 ಮಾನ್ಯತೆ

ಪುತ್ತೂರು: ದಕ್ಷಿಣ ಕನ್ನಡ ಜಿಲ್ಲೆಯ ಪ್ರತಿಷ್ಠಿತ ಶಿಕ್ಷಣಸಂಸ್ಥೆಗಳಲ್ಲೊಂದಾದ ಪುತ್ತೂರಿನ ಸಂತ ಫಿಲೋಮಿನಾ ಕಾಲೇಜಿಗೆ ಐಎಸ್‌ಒ 9001:2015 ಮಾನ್ಯತೆ ದೊರಕಿದೆ. ಗ್ರಾಮೀಣ ಪ್ರದೇಶದ ವಿದ್ಯಾಸಂಸ್ಥೆ ಸಂತ ಫಿಲೋಮಿನಾ ಕಾಲೇಜಿಗೆ 9001:2015 ಮಾನ್ಯತೆ ದೊರಕಿದ್ದು ಸಂತಸದ ವಿಚಾರವಾಗಿದೆ. ಅಂತರಾಷ್ರೀಯ ಮನ್ನಣೆಯು ವಿದ್ಯಾರ್ಥಿಗಳಿಗೆ ನಮ್ಮ ಸಂಸ್ಥೆ ನೀಡುತ್ತಿರುವ ಗುಣಮಟ್ಟದ ಶಿಕ್ಷಣ ಹಾಗೂ ಶೈಕ್ಷಣಿಕ ಉತ್ಕೃಷ್ಟತೆಗಾಗಿ ನಮ್ಮ ನಿರಂತರ ಅನ್ವೇಷಣೆಯನ್ನು ಪ್ರತಿಬಿಂಬಿಸುತ್ತದೆ. ಇದು ಕೇವಲ ಒಬ್ಬ ವ್ಯಕ್ತಿಯಿಂದ ನಡೆಯುವ ಕಾರ್ಯವಲ್ಲ. ಇದರ ಹಿಂದೆ ಶಿಕ್ಷಣ ಕ್ಷೇತ್ರದಲ್ಲಿ ಸಂಸ್ಥೆಯ ಗುಣಮಟ್ಟದ ಸೇವೆಗಾಗಿ ಅತ್ಯಂತ ಮುತುವರ್ಜಿಯಿಂದ

ಸಂತ ಫಿಲೋಮಿನಾ ಕಾಲೇಜಿಗೆ ಐಎಸ್‌ಒ 9001:2015 ಮಾನ್ಯತೆ Read More »

error: Content is protected !!
Scroll to Top