ಹೆತ್ತ ತಾಯಿ ಇಬ್ಬರು ಮಕ್ಕಳನ್ನು ಉಸಿರುಗಟ್ಟಿಸಿ ಬರ್ಬರವಾಗಿ ಕೊಲೆ

ಬೆಂಗಳೂರು: ಹೆತ್ತ ತಾಯಿಯೇ ಇಬ್ಬರು ಮಕ್ಕಳನ್ನು ಉಸಿರುಗಟ್ಟಿಸಿ ಕೊಲೆ ಮಾಡಿದ ಘಟನೆ ಬೆಂಗಳೂರಿನ ಜಾಲಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.ಗಂಗಾದೇವಿ ಕೊಲೆ ಮಾಡಿದ ಆರೋಪಿ. 9 ವರ್ಷದ ಮಗಳು ಲಕ್ಷ್ಮೀ, 7 ವರ್ಷದ ಮಗ ಗೌತಮ್​​ನನ್ನು ಬರ್ಬರವಾಗಿ ಕೊಲೆ ಮಾಡಿದ್ದಾಳೆ. ಮಕ್ಕಳನ್ನು ತಲೆ ದಿಂಬಿನಿಂದ ಉಸಿರುಗಟ್ಟಿಸಿ ಕೊಲೆ ಮಾಡಿರುವ ಗಂಗಾದೇವಿಯೇ ಪೊಲೀಸರಿಗೆ ಖುದ್ದು ಮಾಹಿತಿ ನೀಡಿದ್ದಾಳೆ. ಇಬ್ಬರು ಮಕ್ಕಳನ್ನ ಕೊಲೆ ಮಾಡಿ ಕಂಟ್ರೋಲ್ ರೂಂಗೆ ಕರೆ ಮಾಡಿದ್ದ ಗಂಗಾದೇವಿ, ಮಕ್ಕಳನ್ನು ಉಸಿರುಗಟ್ಟಿಸಿ ಕೊಲೆ ಮಾಡಿದ್ದೇನೆ. ಈಗ ನಾನು […]

ಹೆತ್ತ ತಾಯಿ ಇಬ್ಬರು ಮಕ್ಕಳನ್ನು ಉಸಿರುಗಟ್ಟಿಸಿ ಬರ್ಬರವಾಗಿ ಕೊಲೆ Read More »

ಡಾಕ್ಟರೇಟ್ ಪದವಿ ಪಡೆದ ಕೆ.ವಿ.ಜಿ ಇಂಜನಿಯರಿಂಗ್ ಕಾಲೇಜಿನ ಉಪನ್ಯಾಸಕ: ಫ್ರೋ ಸಲೀಮ್ ಮಲಿಕ್ ಎಸ್

ಸುಳ್ಯ:ಕೆ.ವಿ.ಜಿ. ತಾಂತ್ರಿಕ ಮಹಾವಿದ್ಯಾಲಯದ ಕಂಪ್ಯೂಟರ್ ಸೈನ್ಸ್ ವಿಭಾಗದ ರೀಸರ್ಚ್ ಸೆಂಟರ್‌ನ ವಿದ್ಯಾರ್ಥಿ ಪ್ರೊಫೆಸರ್ ಸಲೀಮ್ ಮಲಿಕ್ ಎಸ್. ಇವರ ಸಂಶೋಧನಾ ಪ್ರಬಂಧಕ್ಕೆ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ, ಬೆಳಗಾವಿ ಡಾಕ್ಟರೇಟ್ ಪದವಿ ನೀಡಿ ಗೌರವಿಸಿದೆ. ಇವರು ವಿಟಿಯುನ ಎಕ್ಸೆಕ್ಯುಟಿವ್ ಕೌನ್ಸಿಲ್ ಸದಸ್ಯರು, ಕಾಲೇಜಿನ ಮುಖ್ಯ ಕಾರ್ಯನಿರ್ವಹಣಾಧಿಕಾರಿ, ಹಾಗೂ ಕಂಪ್ಯೂಟರ್ ಸೈನ್ಸ್ & ಇಂಜಿನಿಯರಿಂಗ್ ವಿಭಾಗದ ಮುಖ್ಯಸ್ಥರಾದ ಡಾ. ಉಜ್ವಲ್ ಯು.ಜೆ. ಇವರ ಮಾರ್ಗದರ್ಶನದಲ್ಲಿ “Build out of an efficacious Arbitrator Miniature in Scolastic Systamatics for

ಡಾಕ್ಟರೇಟ್ ಪದವಿ ಪಡೆದ ಕೆ.ವಿ.ಜಿ ಇಂಜನಿಯರಿಂಗ್ ಕಾಲೇಜಿನ ಉಪನ್ಯಾಸಕ: ಫ್ರೋ ಸಲೀಮ್ ಮಲಿಕ್ ಎಸ್ Read More »

ದ್ವಿತೀಯ ಪಿಯುಸಿ ಫಲಿತಾಂಶ : ವಿದ್ಯಾರಶ್ಮಿಗೆ ಶೇಕಡಾ 100 ಫಲಿತಾಂಶ

ಸವಣೂರು: ಮಾರ್ಚ್ 2024 ರ ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟವಾಗಿದ್ದು ಸವಣೂರು ವಿದ್ಯಾರಶ್ಮಿ ಪದವಿ ಪೂರ್ವ ಕಾಲೇಜಿಗೆ ಶೇ.100 ಫಲಿತಾಂಶ ಲಭಿಸಿದೆ. ಕಾಲೇಜಿನಿಂದ ಪರೀಕ್ಷೆಗೆ 51 ವಿದ್ಯಾರ್ಥಿಗಳು ಹಾಜರಾಗಿದ್ದು, ಈ ಪೈಕಿ 6 ಮಂದಿ ವಿಶಿಷ್ಟ ಶ್ರೇಣಿ, 33 ಮಂದಿ ಪ್ರಥಮ ದರ್ಜೆ ಮತ್ತು 6 ಮಂದಿ ದ್ವಿತೀಯ ದರ್ಜೆಯಲ್ಲಿ  ತೇರ್ಗಡೆಯಾಗಿದ್ದಾರೆ. ಫಾತಿಮಾ ಶೈಮಾ ಆಯ್‌ಷತ್ ವಫಾ 573 (ಶೇ.95.5)  (ಕೆ.ಪಿ.ಮಹಮ್ಮದ್ ಷರೀಫ್ ಮತ್ತು ಸಾಜಿದಾ ಪೆರಾಬೆ, ಕಡಬ ದಂಪತಿ ಪುತ್ರಿ), ಇಂಚರ ಕೆ.ಎಚ್. 558 (ಶೇ.93),

ದ್ವಿತೀಯ ಪಿಯುಸಿ ಫಲಿತಾಂಶ : ವಿದ್ಯಾರಶ್ಮಿಗೆ ಶೇಕಡಾ 100 ಫಲಿತಾಂಶ Read More »

ಏ.14 ರ ಬಿಜೆಪಿ ಸಮಾವೇಶ ರದ್ದು | ಪ್ರಧಾನಿ ಮೋದಿಯಿಂದ ರೋಡ್ ಶೋ ಮಾತ್ರ

ಮಂಗಳೂರು: ಏ.14 ರಂದು ಮಂಗಳೂರಿನ ಗೋಲ್ಡ್ ಫಿಂಚ್ ಮೈದಾನದಲ್ಲಿ ಏ. 14ರಂದು ಸಂಜೆ 4 ಗಂಟೆಗೆ ಏರ್ಪಡಿಸಲಾದ ಸಮಾವೇಶ ದಿಢೀರ್ ರದ್ದಾಗಿದೆ. ಕೇವಲ ರೋಡ್ ಶೋ ಮಾತ್ರ ನಡೆಯಲಿದೆ. ಈ ಮೊದಲು ಏ.14 ರಂದು ಸಮಾವೇಶ ಏರ್ಪಡಿಸಲಾಗಿತ್ತು. ಸಮಾವೇಶವನ್ನು ಉದ್ದೇಶಿಸಿ ಪ್ರಧಾನಿ ನರೇಂದ್ರ ಮೋದಿ ಮಾತನಾಡಲಿದ್ದಾರೆ ಎಂದು ತಿಳಿಸಲಾಗಿತ್ತು. ಕೊನೆ ಕ್ಷಣದಲ್ಲಿ ಸಮಾವೇಶ ರದ್ದಾಗಿದೆ ಎಂಬ ಮಾಹಿತಿ ಜಿಲ್ಲಾ ಬಿಜೆಪಿಗೆ ಲಭ್ಯವಾಗಿದೆ. ಮಂಗಳೂರು ವಿಮಾನ ನಿಲ್ದಾಣದಿಂದ ಸಿಟಿಯಲ್ಲಿ ರೋಡ್ ಶೋ ಮಾತ್ರ ನಡೆಯಲಿದೆ ಎನ್ನಲಾಗಿದೆ.

ಏ.14 ರ ಬಿಜೆಪಿ ಸಮಾವೇಶ ರದ್ದು | ಪ್ರಧಾನಿ ಮೋದಿಯಿಂದ ರೋಡ್ ಶೋ ಮಾತ್ರ Read More »

ಭಾರತೀಯ ಕ್ರೀಡಾ ಪ್ರಾಧಿಕಾರಕ್ಕೆ ಕೋಟೆಬಾಗಿಲಿನ ಆಶಿಕ್ ಕೆ.ವೈ. ಆಯ್ಕೆ

ಸುಳ್ಯ: ಧಾರವಾಡದ ಭಾರತೀಯ ಕ್ರೀಡಾ ಪ್ರಾಧಿಕಾರಕ್ಕೆ ಸುಳ್ಯ ತಾಲೂಕಿನ ಕೋಟೆಬಾಗಿಲು ನಿವಾಸಿ ಆಶಿಶ್ ಕೆ.ವೈ ಆಯ್ಕೆಯಾಗಿದ್ದಾರೆ. ಕಬಡ್ಡಿಯಲ್ಲಿ ಅವರ ಪ್ರದರ್ಶನ ಹಾಗೂ ಸಾಧನೆ ಗುರುತಿಸಿ ಅವರ ಆಯ್ಕೆ ನಡೆದಿರುತ್ತದೆ. ಆಶಿಕ್ ಕೆ.ವೈ.ಯವರು ಮಂಗಳೂರಿನ ಶಕ್ತಿ ಕಾಲೇಜಿನ ವಿದ್ಯಾರ್ಥಿಯಾಗಿದ್ದು, ತಾಲೂಕು ಜಿಲ್ಲೆ, ರಾಜ್ಯ ಹಾಗೂ ರಾಷ್ಟ್ರಮಟ್ಟದ ವಿದ್ಯಾಭಾರತಿ ತಂಡವನ್ನು ಪ್ರತಿನಿಧಿಸಿದ್ದಾರೆ. ಅವರಿಗೆ ಕಿರಣ್ ಆರಂಪಾಡಿ ಹಾಗೂ ಮನೋಹ‌ರ್ ಸವಣೂರು ತರಬೇತು ನೀಡಿದ್ದಾರೆ. ಬಿಳಿನೆಲೆ ಗ್ರಾಮದ ಕೋಟೆ ಬಾಗಿಲು ನಿವಾಸಿ, ಸುಬ್ರಹ್ಮಣ್ಯ ಠಾಣೆಯ ಹಡೆ ಕಾನ್ಸ್ ಟೇಬಲ್ ಸಂಧ್ಯಾ ಮಣಿ-ಯೋಗೀಶ್

ಭಾರತೀಯ ಕ್ರೀಡಾ ಪ್ರಾಧಿಕಾರಕ್ಕೆ ಕೋಟೆಬಾಗಿಲಿನ ಆಶಿಕ್ ಕೆ.ವೈ. ಆಯ್ಕೆ Read More »

ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟ l ದಕ್ಷಿಣ ಕನ್ನಡಕ್ಕೆ ಪ್ರಥಮ ಸ್ಥಾನ

ಬೆಂಗಳೂರು : ಮಾರ್ಚ್ 1ರಿಂದ ಮಾರ್ಚ್ 22ರವರೆಗೆ ನಡೆದಿದ್ದ ದ್ವಿತೀಯ ಪಿಯುಸಿ ಪರೀಕ್ಷೆ ಫಲಿತಾಂಶ ಬುಧವಾರ ಪ್ರಕಟಗೊಂಡಿದೆ. ಬೆಂಗಳೂರಿನಲ್ಲಿ ಶಿಕ್ಷಣ ಇಲಾಖೆ ಸುದ್ದಿಗೋಷ್ಠಿ ನಡೆಸಿ ಫಲಿತಾಂಶ ಪ್ರಕಟಿಸಿದೆ. ಈ ಬಾರಿ ಶೇ 81.15 ಮಂದಿ ಉತ್ತೀರ್ಣರಾಗಿದ್ದಾರೆ. ಪರೀಕ್ಷೆಗೆ ಹಾಜರಾದ ಒಟ್ಟು ವಿದ್ಯಾರ್ಥಿಗಳ ಪೈಕಿ 552690 ಮಂದಿ ತೇರ್ಗಡೆಯಾಗಿದ್ದಾರೆ. 11 ಗಂಟೆಗೆ ಅಧಿಕೃತ ವೆಬ್‌ಸೈಟ್‌ನಲ್ಲಿ ಫಲಿತಾಂಶ ಪ್ರಕಟವಾಗುತ್ತಿದ್ದು, ವಿದ್ಯಾರ್ಥಿಗಳು ಲಾಗಿನ್ ಕ್ರೆಡೆನ್ಶಿಯಲ್ಸ್ ನಮೂದಿಸುವ ಮೂಲಕ ಪಿಯು ಮಂಡಳಿಯ ಅಧಿಕೃತ  ವೆಬ್ ಸೈಟ್ karresults.nic.in ಮತ್ತು pue.kar.ni c ಮೂಲಕ ದ್ವಿತೀಯ

ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟ l ದಕ್ಷಿಣ ಕನ್ನಡಕ್ಕೆ ಪ್ರಥಮ ಸ್ಥಾನ Read More »

ಪುತ್ತೂರು ಒಡೆಯ ಶ್ರೀ ಮಹಾಲಿಂಗೇಶ್ವರನ ಜಾತ್ರೋತ್ಸವಕ್ಕೆ ಧ್ವಜಾರೋಹಣ

ಪುತ್ತೂರು: ಇತಿಹಾಸ ಪ್ರಸಿದ್ಧ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವರ ವರ್ಷಾವಧಿ ಜಾತ್ರೋತ್ಸವಕ್ಕೆ ಬುಧವಾರ ಬೆಳಿಗ್ಗೆ ಧ್ವಜಾರೋಹಣದ ಮೂಲಕ ವೈಭವದ ಚಾಲನೆ ನೀಡಲಾಯಿತು. ಬೆಳಿಗ್ಗೆ 9.25 ನಂತರದ ವೃಷಭ ಲಗ್ನದಲ್ಲಿ ಭಕ್ತಾದಿಗಳ ಜಯಘೋಷದೊಂದಿಗೆ ದೇವಸ್ಥಾನದ ಪ್ರಧಾನ ಅರ್ಚಕರಾದ ವಿ.ಎಸ್‍.ಭಟ್ ಹಾಗೂ ವಸಂತ ಕೆದಿಲಾಯವರು ಧ್ವಜಾರೋಹಣ ನೆರವೇರಿಸಿದರು. ಈ ಸಂದರ್ಭದಲ್ಲಿ ದೇವಸ್ಥಾನದ ಕಾರ್ಯನಿರ್ವಹಣಾಧಿಕಾರಿ, ವ್ಯವಸ್ಥಾಪನಾ ಸಮಿತಿ ನಿಕಟಪೂರ್ವ ಅಧ್ಯಕ್ಷರು, ಸದಸ್ಯರು, ಅರ್ಚಕರು, ಸಿಬ್ಬಂದಿಗಳು, ಭಕ್ತಾದಿಗಳು ಸಹಸ್ರಾರು ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು. ಜಾತ್ರೋತ್ಸವಕ್ಕೆ ಪೂರ್ವಭಾವಿಯಾಗಿ ಏ.1 ರಂದು ಗೊನೆ ಮುಹೂರ್ತ ನಡೆದಿತ್ತು. ಗೊನೆ ಮುಹೂರ್ತ

ಪುತ್ತೂರು ಒಡೆಯ ಶ್ರೀ ಮಹಾಲಿಂಗೇಶ್ವರನ ಜಾತ್ರೋತ್ಸವಕ್ಕೆ ಧ್ವಜಾರೋಹಣ Read More »

1300 ವರ್ಷ ಹಳೆಯ ಶಾಸನ ಪತ್ತೆ| ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಶಾಸನ- ಶೋಧನ- ಅಧ್ಯಯನ -ಸಂರಕ್ಷಣ ತಂಡದಿಂದ ಕುರುಹುಗಳ ಪರಿಶೀಲನೆ

ಬೆಳ್ಳಾರೆ: ಬೆಳ್ಳಾರೆಯ ಗೌರಿಪುರಂ ಎಂಬಲ್ಲಿ ಶ್ರೀ ರಾಜರಾಜೇಶ್ವರಿ ಸಾನಿಧ್ಯವಿರುವ ಕ್ಷೇತ್ರದ ಪರಿಸರದಲ್ಲಿ ಪತ್ತೆಯಾದ ಕೆಲವು ಶಾಸನ ಇತ್ಯಾದಿ ಪರಿಕರ ಕುರುಹು ಗಳ ಪರಿಶೀಲನೆಗೆ ಶಾಸನ ತಜ್ಞರಾದ ಡಾ.ಉಮಾನಾಥ್ ಶೆಣೈ ಹಾಗೂ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷರಾದ  ಪುತ್ತೂರು ಉಮೇಶ್ ನಾಯಕ್ ಭೇಟಿ ನೀಡಿ  ಪರಿಶೀಲಿಸಿದರು. ಪರಿಶೀಲನೆಯ ಸಮಯದಲ್ಲಿ ಪುರಾತನ ಕಾಲದಲ್ಲಿ ವೈಭವದಲ್ಲಿ ಮೆರೆದ ದೇವಸ್ಥಾನದ ಕುರುಹುಗಳು, ಪಾಣಿಪೀಠ, ಸೋಮಸೂತ್ರ, ಬಲಿಕಲ್ಲು, ಇತ್ಯಾದಿಗಳು ಪತ್ತೆಯಾಗಿವೆ. ಮಾತ್ರವಲ್ಲದೆ ವಿಶೇಷವಾಗಿ   ದೇವಸ್ಥಾನವಿರುವ ಸ್ಥಳದಿಂದ ಸುಮಾರು 300 ಮೀಟರ್ ದೂರದ ದೇವರ

1300 ವರ್ಷ ಹಳೆಯ ಶಾಸನ ಪತ್ತೆ| ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಶಾಸನ- ಶೋಧನ- ಅಧ್ಯಯನ -ಸಂರಕ್ಷಣ ತಂಡದಿಂದ ಕುರುಹುಗಳ ಪರಿಶೀಲನೆ Read More »

ಪವಿತ್ರ ರಂಝಾನ್ ಹಬ್ಬ | ಇಂದು ಸಾರ್ವತ್ರಿಕ ರಜೆ ಘೋಷಣೆ

ಮಂಗಳೂರು: ಮುಸ್ಲಿಮರ ಪವಿತ್ರ ರಂಝಾನ್ ಹಬ್ಬದ ಪ್ರಯುಕ್ತ ಬುಧವಾರ ದಕ್ಷಿಣ ಕನ್ನಡ ಜಿಲ್ಲೆಗೆ ಸಾರ್ವತ್ರಿಕ ರಜೆ ಘೋಷಿಸಿ ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಆದೇಶಿಸಿದ್ದಾರೆ. ಬ್ಯಾಂಕ್‍ ಹಾಗೂ ಇತರ ಹಣಕಾಸು ಸಂಸ್ಥೆಗಳು ಎಂದಿನಂತೆ ಕಾರ್ಯನಿರ್ವಹಿಸಲಿವೆ. ಬ್ಯಾಂಕ್‍ಗಳಿಗೆ ನೆಗೋಷಿಯೇಬಲ್ ಇನ್ಸ್ ಟ್ರುಮೆಂಟ್ಸ್ ಆ್ಯಕ್ಟ್ ಅನ್ವಯವಾಗುವುದರಿಂದ ಜಿಲ್ಲಾಧಿಕಾರಿ ಆದೇಶದ ಹೊರತಾಗಿದೆ. ಈಗಾಗಲೇ ನಿಗದಿಯಾಗಿರುವ ಪರೀಕ್ಷಾ ವೇಳಾಪಟ್ಟಿಯಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ. ಉಳಿದಂತೆ ಎಲ್ಲಾ ಸರಕಾರಿ ಕಚೇರಿಗಳಿಗೆ ರಜೆ ಘೊಷಣೆ ಮಾಡಲಾಗಿದೆ ಎಂದು ಜಿಲ್ಲಾಧಿಕಾರಿ ಆದೇಶದಲ್ಲಿ ತಿಳಿಸಿದ್ದಾರೆ.

ಪವಿತ್ರ ರಂಝಾನ್ ಹಬ್ಬ | ಇಂದು ಸಾರ್ವತ್ರಿಕ ರಜೆ ಘೋಷಣೆ Read More »

ಚಾಲಕನ ನಿಯಂತ್ರಣ ತಪ್ಪಿ ಓಮ್ನಿ ಪಲ್ಟಿ

ಸುಳ್ಯ: ಓಮ್ನಿಯೊಂದು ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾದ ಘಟನೆ ಹಾಲೆಮಜಲು ಬಸ್ ತಂಗುದಾಣದ ಬಳಿ ಹೆದ್ದಾರಿ ತಿರುವಿನಲ್ಲಿ ಮಂಗಳವಾರ ತಡರಾತ್ರಿ ನಡೆದಿದೆ. ಹರಿಹರದಿಂದ ಹಾಲೆಮಜಲು ಓಮ್ಮಿ ಬರುತ್ತಿದ್ದು, ಚಾಲಕ ಸೇರಿದಂತೆ ಓಮ್ಮಿಯಲ್ಲಿದ್ದವರು ಸಣ್ಣ ಪುಟ್ಟ ಗಾಯಗಳಿಂದ ಪಾರಾಗಿದ್ದಾರೆ ಗಾಯಾಳುಗಳನ್ನು ಸುಳ್ಯ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ತಿಳಿದುಬಂದಿದೆ.

ಚಾಲಕನ ನಿಯಂತ್ರಣ ತಪ್ಪಿ ಓಮ್ನಿ ಪಲ್ಟಿ Read More »

error: Content is protected !!
Scroll to Top