ಉಷ್ಣಾಂಶ ತೀವ್ರತೆಯಿಂದ ಕೋಳಿಗಳ ಸಾವು

ಮಂಗಳೂರು: ಕರಾವಳಿಯಲ್ಲಿ ಕೋಳಿ ಮಾಂಸ ಸೇವಿಸುವವರಿಗೂ ಉಷ್ಣಾಂಶ ಹೆಚ್ಚಳದ ಬಿಸಿ ತಟ್ಟಿದೆ. ಉಷ್ಣಾಂಶ ಹೆಚ್ಚಳದಿಂದ ಫಾರಂಗಳಲ್ಲಿ ಕೋಳಿಗಳು ಅನಿರೀಕ್ಷಿತವಾಗಿ ಸಾವಿಗೀಡಾಗುತ್ತಿದ್ದು ಕೋಳಿ ಮಾಂಸದ ಧಾರಣೆ ಮೂರು ನಾಲ್ಕು ದಿನಗಳಲ್ಲಿ ಪ್ರತಿ ಕೆ.ಜಿ.ಗೆ ರೂ. 40ರಿಂದ ರೂ.50ರವರೆಗೆ ಜಾಸ್ತಿ ಆಗಿದೆ. ನಾಲ್ಕು ದಿನಗಳ ಹಿಂದೆ ಪ್ರತಿ ಕೆ.ಜಿ.ಗೆ ರೂ. 220 ಇದ್ದ ಕೋಳಿಮಾಂಸದ ದರ ಈಗ ರೂ. 270ಕ್ಕೆ ಹೆಚ್ಚಳವಾಗಿದೆ. ಚರ್ಮಸಹಿತ ಕೋಳಿ ಮಾಂಸದ ಧಾರಣೆ ಕೆ.ಜಿ.ಗೆ ರೂ. 190 ಇದ್ದುದು ಈಗ ರೂ.240ಕ್ಕೆ ಏರಿಕೆಯಾಗಿದೆ. ಜೀವಂತ ಬ್ರಾಯ್ಲರ್ […]

ಉಷ್ಣಾಂಶ ತೀವ್ರತೆಯಿಂದ ಕೋಳಿಗಳ ಸಾವು Read More »

ಭಾವನಿಂದ ಭಾಮೈದನ ಹತ್ಯೆ

ಬೆಂಗಳೂರು : ಕೌಟುಂಬಿಕ ಕಲಹ ಹಿನ್ನೆಲೆಯಲ್ಲಿ ಭಾವನಿಂದ ಭಾಮೈದನ ಹತ್ಯೆ ಮಾಡಿರುವ ಘಟನೆ ಬೆಂಗಳೂರಿನ ವೆಂಕಟೇಶಪುರದಲ್ಲಿ ನಡೆದಿದೆ. ಕಿರಣ್ ಕುಮಾರ್ (32) ಹತ್ಯೆಗೀಡಾದ ವ್ಯಕ್ತಿಯಾಗಿದ್ದಾನೆ. ಚಾಕುವಿನಿಂದ ಇರಿದು ಭಾಮೈದನನ್ನು ಭಾವ ಲಕ್ಷ್ಮಣ ಎನ್ನುವವರು ಭೀಕರವಾಗಿ ಹತ್ಯೆಗೈದಿದ್ದಾರೆ. ಆರೋಪಿ ಲಕ್ಷ್ಮಣ ಮತ್ತು ಪತ್ನಿ ನಡುವೆ ಆಗಾಗ ಜಗಳ ನಡೆಯುತ್ತಿತ್ತು ಎಂದು ಹೇಳಲಾಗುತ್ತಿದೆ. ಇದೇ ವಿಚಾರಕ್ಕೆ ಇಂದು ಭಾವ ಹಾಗೂ ಭಾಮೈದನ ನಡುವೆ ಗಲಾಟೆ ನಡೆದಿದೆ. ಗಲಾಟೆ ವಿಕೋಪಕ್ಕೆ ತಿರುಗಿ ಕಿರಣ್ ಕುಮಾರ್ ಬೆನ್ನಿಗೆ ಲಕ್ಷ್ಮಣ ಚಾಕು ಇರಿದಿದ್ದಾನೆ. ಗಂಭೀರವಾಗಿ

ಭಾವನಿಂದ ಭಾಮೈದನ ಹತ್ಯೆ Read More »

ನಾಳೆ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವರ ಜಾತ್ರೋತ್ಸವಕ್ಕೆ ಧ್ವಜಾರೋಹಣ | ಕುರಿಯ ಏಳ್ನಾಡುಗುತ್ತು ಪುತ್ತೂರು ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವರ ಆರಾಧನಾ ಸಮಿತಿಯಿಂದ ವಿಶೇಷ ಪೂಜೆ, ಸಮಾರಾಧನೆ, ಸಾರ್ವಜನಿಕ ಅನ್ನಸಂತರ್ಪಣೆ

ಪುತ್ತೂರು: ಕುಡಿಯ ಮಾಡಾವು ಏಳ್ನಾಡುಗುತ್ತು ಪುತ್ತೂರು ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವರ ಆರಾಧನಾ ಸಮಿತಿ ವತಿಯಿಂದ ಶ್ರೀ ಮಹಾಲಿಂಗೇಶ್ವರ ದೇವರ ಜಾತ್ರೋತ್ಸವಕ್ಕೆ ನಾಳೆ ನಡೆಯುವ ಧ್ವಜಾರೋಹಣದ ಅಂಗವಾಗಿ ಶ್ರೀ ದೇವಸ್ಥಾನದಲ್ಲಿ ಮಹಾಪೂಜೆ, ಸಮಾರಾಧನೆ, ಸಾರ್ವಜನಿಕ ಅನ್ನಸಂತರ್ಪಣೆ ಜರಗಲಿದೆ. ಧ್ವಜಾರೋಹಣ ದಿನದಂದು ಪೂರ್ವಶಿಷ್ಠ ಪದ್ಧತಿಯಂತೆ ಕುರಿಯ ಮಾಡಾವು ಏಳ್ನಾಡುಗುತ್ತು ಮನೆತನದ ಶ್ರೇಯಸ್ಸು ಹಾಗೂ ಗೌರವಾರ್ಥವಾಗಿ ನಡೆಯುವ ಕಾರ್ಯಕ್ರಮದ ಅಂಗವಾಗಿ ಈ ವಿಶೇಷ ಪೂಜೆ ನಡೆಯಲಿದೆ. ಕುಟುಂಬಸ್ಥರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಶ್ರೀ ದೇವರ ದರ್ಶನ ಪಡೆದು ಭಗವಂತನ ಅನುಗ್ರಹಕ್ಕೆ

ನಾಳೆ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವರ ಜಾತ್ರೋತ್ಸವಕ್ಕೆ ಧ್ವಜಾರೋಹಣ | ಕುರಿಯ ಏಳ್ನಾಡುಗುತ್ತು ಪುತ್ತೂರು ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವರ ಆರಾಧನಾ ಸಮಿತಿಯಿಂದ ವಿಶೇಷ ಪೂಜೆ, ಸಮಾರಾಧನೆ, ಸಾರ್ವಜನಿಕ ಅನ್ನಸಂತರ್ಪಣೆ Read More »

ಹಾಡಹಗಲೇ ಕಾಡು ಹಂದಿ ದಾಳಿ : ಗಾಯಾಳು ಆಸ್ಪತ್ರೆಗೆ ದಾಖಲು

ಸವಣೂರು:ಹಾಡಹಗಲೇ ಕಾಡು ಹಂದಿಯೊಂದು ದಾಳಿ ನಡೆಸಿದ ಪರಿಣಾಮ ವ್ಯಕ್ತಿಯೊಬ್ಬರು ಗಾಯಗೊಂಡು ಆಸ್ಪತ್ರೆಗೆ ದಾಖಲಾದ ಘಟನೆ ಇಂದು ಮಧ್ಯಾಹ್ನ ಸವಣೂರಿನ ಅಗರಿ ಎಂಬಲ್ಲಿ ನಡೆದಿದೆ. ಅಗರಿ ನಿವಾಸಿ ರತ್ನಾಕರ ಗಂಭೀರ ಗಾಯಗೊಂಡವರು. ಇಂದು ಮಧ್ಯಾಹ್ನ ಮನೆ ಸಮೀಪ ಹಠತ್ತನೇ ಕಾಡು ಹಂದಿಯೊಂದು ದಾಳಿ ನಡೆಸಿದ್ದು, ಗಂಭೀರ ಗಾಯಗೊಂಡ ಅವರನ್ನು ತಕ್ಷಣ ಪುತ್ತೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಯಿತು. ಲೋಕಸಭೆ ಚುನಾವಣೆ ನೀತಿ ಸಂಹಿತೆ ಜಾರಿಯಲ್ಲಿರುವುದರಿಂದ ಕೃಷಿಕರ ಕೋವಿ ಠೇವಣಾತಿಯಿಂದಾಗಿ ಕಾಡು ಪ್ರಾಣಿಗಳಿಂದ ರಕ್ಷಣೆ ಪಡೆಯಲು ಕೃಷಿಕರಿಗೆ ಅಸಾಧ್ಯವಾಗಿದೆ. ಈ ಕುರಿತು

ಹಾಡಹಗಲೇ ಕಾಡು ಹಂದಿ ದಾಳಿ : ಗಾಯಾಳು ಆಸ್ಪತ್ರೆಗೆ ದಾಖಲು Read More »

ನಾಳೆ ದ್ವಿತೀಯ ಪಿಯುಸಿ ಪರೀಕ್ಷೆ ಫಲಿತಾಂಶ ಪ್ರಕಟ

ಬೆಂಗಳೂರು: ಈ ಬಾರಿಯ ದ್ವಿತೀಯ ಪಿಯುಸಿ ಪರೀಕ್ಷೆ ಫಲಿತಾಂಶವನ್ನು ನಾಳೆ ಬೆಳಗ್ಗೆ 10 ಗಂಟೆಗೆ ಪ್ರಕಟಿಸುವುದಾಗಿ ಶಾಲಾ ಶಿಕ್ಷಣ ಇಲಾಖೆ ತಿಳಿಸಿದೆ. ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿಯ ಅಧ್ಯಕ್ಷರು ಮಾಹಿತಿ ನೀಡಿದ್ದು, ಮಾರ್ಚ್ 2024ರ ದ್ವಿತೀಯ ಪಿಯುಸಿ ಪರೀಕ್ಷೆಯನ್ನು ಮಾ.1 ರಿಂದ ಮಾ.22 ರ ತನಕ ನಡೆಸಲಾಗಿತ್ತು. ಎಲ್ಲಾ ವಿಷಯಗಳ ಉತ್ತರ ಪತ್ರಿಕೆಗಳ ಮೌಲ್ಯಮಾಪನ ಕಾರ್ಯವು ಮುಕ್ತಾಯವಾಗಿದ್ದು, ದ್ವಿತೀಯ ಪಿಯುಸಿ ಪರೀಕ್ಷೆ-1ರ ಫಲಿತಾಂಶ ಪ್ರಕಟಿಸುವ ಸಂಬಂಧ ನಾಳೆ ಬೆಳಿಗ್ಗೆ 10:00 ಗಂಟೆಗೆ ಕರ್ನಾಟಕ

ನಾಳೆ ದ್ವಿತೀಯ ಪಿಯುಸಿ ಪರೀಕ್ಷೆ ಫಲಿತಾಂಶ ಪ್ರಕಟ Read More »

ಪ್ರಧಾನಿ ನರೇಂದ್ರ ಮೋದಿಯವರದ್ದು ಮಹಿಳೆಯರಿಗೆ ಗೌರವ ನೀಡುವ ಮನಸ್ಥಿತಿ | ನಾರಿಶಕ್ತಿ ಸಮಾವೇಶದಲ್ಲಿ ಮಾಳವಿಕ ಅವಿನಾಶ್

ಪುತ್ತೂರು: ಮಹಿಳೆಯರಿಗೆ ಗೌರವ, ಸ್ವಾವಲಂಬಿ ಬದುಕು ನೀಡಿದ ಪ್ರಧಾನಿ ಇದ್ದರೆ ಅದು ನರೇಂದ್ರ ಮೋದಿ. ತನ್ನ ಸ್ವಂತ ಆಚರಣೆಗಿಂತ ದೇಶದ ಆಚರಣೆ ಮುಖ್ಯ ಎಂದು ತಿಳಿದಿದ್ದರೆ ಅದು ದಕ್ಷಿಣ ಕನ್ನಡ ಜಿಲ್ಲೆಯ ಮಹಿಳೆಯರು. ಹೀಗೆಂದು ಹೇಳಿದರು ರಾಜ್ಯ ಬಿಜೆಪಿ ಉಪಾಧ್ಯಕ್ಷೆ, ಚಿತ್ರನಟಿ ಮಾಳವಿಕ ಅವಿನಾಶ್. ಪುತ್ತೂರಿನ ಜೈನ ಭವನದಲ್ಲಿ ಮಂಗಳವಾರ ನಡೆದ ಪುತ್ತೂರು ವಿಧಾನಸಭಾ ಕ್ಷೇತ್ರದ ನಾರಿಶಕ್ತಿ ಸಮಾವೇಶವನ್ನು ಭಾರತದ ಮಾತೆ ಭಾವಚಿತ್ರದ ಬಳಿ ದೀಪ ಬೆಳಗಿಸಿ, ಬಳಿಕ ಹಿಂಗಾರ ಅರಳಿಸುವ ಮೂಲಕ ಉದ್ಘಾಟಿಸಿ ಮಾತನಾಡಿದರು. ಹಿರಿಯರಿಗೆ,

ಪ್ರಧಾನಿ ನರೇಂದ್ರ ಮೋದಿಯವರದ್ದು ಮಹಿಳೆಯರಿಗೆ ಗೌರವ ನೀಡುವ ಮನಸ್ಥಿತಿ | ನಾರಿಶಕ್ತಿ ಸಮಾವೇಶದಲ್ಲಿ ಮಾಳವಿಕ ಅವಿನಾಶ್ Read More »

ಚಿನ್ನದ ದರ ಆಕಾಶದತ್ತ ಏರಿಕೆ

ಮುಂಬೈ: ಚಿನ್ನದ ಬೆಲೆ ಗರಿಷ್ಠ ಮಟ್ಟದಲ್ಲಿ ಏರಿಕೆಯಾಗುತ್ತಿದ್ದು, ಸೋಮವಾರ ಒಂದೇ ದಿನ ಚಿನ್ನದ ಬೆಲೆ 10 ಗ್ರಾಂ ಗೆ 1500 ರೂಪಾಯಿ ಏರಿಕೆಯಾಗಿದೆ. ಮೊದಲ ಬಾರಿಗೆ 10 ಗ್ರಾಂ ಚಿನ್ನದ ಬೆಲೆ 70 ಸಾವಿರದ ಗಡಿ ದಾಟಿ 71100 ರೂಪಾಯಿ ತಲುಪಿದೆ. ಭೌಗೋಳಿಕ ಹಾಗೂ ರಾಜಕೀಯ ಅಪಾಯ ಸಾಧ್ಯತೆಗಳು ಮತ್ತು ಕೇಂದ್ರೀಯ ಬ್ಯಾಂಕ್ ಗಳಿಂದ ಖರೀದಿ ಭರಾಟೆಯ ಹಿನ್ನೆಲೆಯಲ್ಲಿ ಚಿನ್ನದ ಬೆಲೆ ಆಕಾಶದತ್ತರಕ್ಕೆ ಏರಿಕೆ ಆಗಿದೆ. ಬೆಳ್ಳಿ ಕೂಡಾ ಇದರಲ್ಲಿ ಪಾಲು ಪಡೆದಿದ್ದು, ಇದೇ ಮೊದಲ ಬಾರಿಗೆ

ಚಿನ್ನದ ದರ ಆಕಾಶದತ್ತ ಏರಿಕೆ Read More »

ಪುತ್ತೂರಿನಲ್ಲಿ ನಾರಿಶಕ್ತಿಗೆ ಚಾಲನೆ l ಬಿಜೆಪಿ ರಾಜ್ಯ ಉಪಾಧ್ಯಕ್ಷೆ ಮಾಳವಿಕ ಅವಿನಾಶ್ ರಿಂದ ಚಾಲನೆ

ಪುತ್ತೂರು: ಪುತ್ತೂರು ವಿಧಾನಸಭಾ ಕ್ಷೇತ್ರದ ನಾರಿಶಕ್ತಿ ಸಮಾವೇಶ ಪುತ್ತೂರು ಜೈನ ಭವನದಲ್ಲಿ ಮಂಗಳವಾರ ನಡೆಯಿತು. ರಾಜ್ಯ ಬಿಜೆಪಿ ಉಪಾಧ್ಯಕ್ಷೆ ಮಾಳವಿಕ ಅವಿನಾಶ್ ಹಿಂಗಾರ ಅರಳಿಸುವ ಮೂಲಕ‌ ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಸುಳ್ಯ ಶಾಸಕಿ ಭಾಗೀರಥಿ ಮುರುಳ್ಯ, ಮಾಜಿ‌ ಶಾಸಕ ಸಂಜೀವ ಮಠಂದೂರು, ದ.ಕ.ಜಿಲ್ಲಾ‌ ಲೋಕಸಭೆ ಅಭ್ಯರ್ಥಿ ಕ್ಯಾ.ಬ್ರಿಜೇಶ್ ಚೌಟ, ನಗರ ಮಂಡಲದ ಅಧ್ಯಕ್ಷ ಪಿ.ಜಿ.ಜಗನ್ನಿವಾಸ ರಾವ್, ಮಂಡಲ ಅಧ್ಯಕ್ಷ ಸಾಜ ರಾಧಾಕೃಷ್ಣ ಆಳ್ವ, ಚುನಾವಣಾ ಪ್ರಭಾರಿ ಸುಲೋಚನಾ ಜಿ.ಕೆ.ಭಟ್, ಮಾಜಿ ಶಾಸಕಿ ಮಲ್ಲಿಕಾ ಪ್ರಸಾದ್, ಜಿಲ್ಲಾ‌ ಕಾರ್ಯದರ್ಶಿ

ಪುತ್ತೂರಿನಲ್ಲಿ ನಾರಿಶಕ್ತಿಗೆ ಚಾಲನೆ l ಬಿಜೆಪಿ ರಾಜ್ಯ ಉಪಾಧ್ಯಕ್ಷೆ ಮಾಳವಿಕ ಅವಿನಾಶ್ ರಿಂದ ಚಾಲನೆ Read More »

ಲೋಕಸಭಾ ಚುನಾವಣೆ ; ಪೋಲಿಸರು ಹಾಗೂ ಸಿ ಆರ್ ಪಿ ಎಫ್ ಪಡೆ ವತಿಯಿಂದ ಕಲ್ಲುಗುಂಡಿ ಪೇಟೆಯ ಮುಖ್ಯ ರಸ್ತೆಯಲ್ಲಿ ಪಥ ಸಂಚಲನ

ಸುಳ್ಯ: ಲೋಕಸಭಾ ಚುನಾವಣೆಯ ಪ್ರಯುಕ್ತ ಕಲ್ಲುಗುಂಡಿ ಪೇಟೆಯ ಮುಖ್ಯ ರಸ್ತೆಯಲ್ಲಿ ಪೋಲಿಸರು ಹಾಗೂ ಸಿ ಆರ್ ಪಿ ಎಫ್ ಪಡೆ ವತಿಯಿಂದ ಇಂದು ಪಥ ಸಂಚಲನ ನಡೆಯಿತು. ಕಲ್ಲು ಗುಂಡಿ ಮುಖ್ಯ ಬೀದಿಗಳಲ್ಲಿ ಸಾಗಿ ಪೊಲೀಸ್‌ ಔಟ್ ಪೋಸ್ಟ್ ಬಳಿ ಸಮಾಪನಗೊಂಡಿತು .ಸಿ ಆರ್ ಪಿ ಎಫ್ ನ 30ಕ್ಕೂ ಹೆಚ್ಚು ಮಂದಿ ಸಿಬ್ಬಂದಿಗಳು,ಸುಳ್ಯ ಪೊಲೀಸ್ ಠಾಣೆಯ ಪೊಲೀಸ್ ಸಿಬ್ಬಂದಿಗಳು, ಗೃಹರಕ್ಷಕ ದಳದ ಸಿಬ್ಬಂದಿಗಳು,ಅಧಿಕಾರಿಗಳು ಪಥ ಸಂಚಲನದಲ್ಲಿ ಭಾಗವಹಿಸಿದ್ದರು. ಸುಳ್ಯ ಪೊಲೀಸ್‌ ಠಾಣಾ ಉಪನಿರೀಕ್ಷಕರುಗಳಾದ ಈರಯ್ಯ ದೂಂತೂರು, ಸರಸ್ವತಿ ಉಪಸ್ಥಿತರಿದ್ದರು.

ಲೋಕಸಭಾ ಚುನಾವಣೆ ; ಪೋಲಿಸರು ಹಾಗೂ ಸಿ ಆರ್ ಪಿ ಎಫ್ ಪಡೆ ವತಿಯಿಂದ ಕಲ್ಲುಗುಂಡಿ ಪೇಟೆಯ ಮುಖ್ಯ ರಸ್ತೆಯಲ್ಲಿ ಪಥ ಸಂಚಲನ Read More »

ಕರ್ನಾಟಕ ರಾಜ್ಯ ಉಚ್ಚ ನ್ಯಾಯಾಲಯದ ಹಿರಿಯ ನ್ಯಾಯವಾದಿಗಳ ಭೇಟಿ- ಬಾಲಕೃಷ್ಣ ಶಾಸ್ತ್ರಿ

ಪಂಜ: ಕರ್ನಾಟಕ ರಾಜ್ಯ ಉಚ್ಚ ನ್ಯಾಯಾಲಯ ದ ಹಿರಿಯ ನ್ಯಾಯವಾದಿಗಳಾದ ಬಾಲಕೃಷ್ಣ ಶಾಸ್ತ್ರಿ ಗಟ್ಟಿಗಾರ್ ಇಂದು ಶ್ರೀ ಪರಿವಾರ ಪಂಚಲಿಗೇಶ್ವರ ದೇಗುಲಕ್ಕೆ ಭೇಟಿ ನೀಡಿದರು. ಬಳಿಕ ಪ್ರಸಾದ ಸ್ವೀಕರಿಸಿದರು. ದೇಗುಲದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ರಾದ ದಾ. ದೇವಿ ಪ್ರಸಾದ್ ಕಾನತ್ತೂರು, ವ್ಯವಸ್ಥಾ ಪನ ಸಮಿತಿ ಸದಸ್ಯ ರಾದ ಕಾಯಂಬಾಡಿ ಸತ್ಯನಾರಾಯಣ ಭಟ್, ಸಂತೋಷ್ ಕುಮಾ‌ರ್ ರೈಬಳ್ಪ ವ್ಯವಸ್ಥಾಪನ ಸಮಿತಿ ಮಾಜಿ ಸದಸ್ಯರಾದ ರಜಿತ್‌ ಭಟ್ ಪಂಜ ಬೀಡು, ಅರ್ಚಕರಾದ ನರೇಶ್ ಕೃಷ್ಣ ಉಪಸ್ಥಿತರಿದ್ದರು.

ಕರ್ನಾಟಕ ರಾಜ್ಯ ಉಚ್ಚ ನ್ಯಾಯಾಲಯದ ಹಿರಿಯ ನ್ಯಾಯವಾದಿಗಳ ಭೇಟಿ- ಬಾಲಕೃಷ್ಣ ಶಾಸ್ತ್ರಿ Read More »

error: Content is protected !!
Scroll to Top