ಮುಡಾ ಹಗರಣ : ಇಂದು ನ್ಯಾಯಾಲಯದ ತೀರ್ಪು

ಸಿದ್ದರಾಮಯ್ಯನವರನ್ನು ನಿರ್ದೋಷಿ ಎಂದು ಹೇಳಿದ ಲೋಕಾಯುಕ್ತ ತನಿಖೆ ಮೇಲಿನ ತೀರ್ಪು ಬೆಂಗಳೂರು : ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧದ ಮುಡಾ ಹಗರಣ ಪ್ರಕರಣದಲ್ಲಿ ಲೋಕಾಯುಕ್ತ ಕೊಟ್ಟ ಕ್ಲೀನ್‌ಚಿಟ್‌ ಕುರಿತು ನ್ಯಾಯಾಲಯ ಇಂದು ತೀರ್ಪು ನೀಡಲಿದೆ. ಲೋಕಾಯುಕ್ತ ಸಲ್ಲಿಸಿದ್ದ ಬಿ ರಿಪೋರ್ಟ್‌ ಪ್ರಶ್ನಿಸಿ ದೂರುದಾರ ಸ್ನೇಹಮಯಿ ಕೃಷ್ಣ ಕೋರ್ಟ್‌ ಮೆಟ್ಟಿಲೇರಿದ್ದರು. ವಾದ ಆಲಿಸಿದ್ದ ನ್ಯಾಯಾಲಯ ಆದೇಶ ಕಾಯ್ದಿರಿಸಿತ್ತು. ಇಂದು ನ್ಯಾಯಾಲಯ ನೀಡುವ ತೀರ್ಪು ಈ ಪ್ರಕರಣಕ್ಕೆ ಸಂಬಂಧಿಸದಂತೆ ಮಹತ್ವದ್ದಾಗಿರಲಿದೆ. ಲೋಕಾಯುಕ್ತ ನೀಡಿದ ಕ್ಲೀನ್‌ಚಿಟ್‌ ಅನ್ನು ನ್ಯಾಯಾಲಯ ಎತ್ತಿ ಹಿಡಿದರೆ ಸಿದ್ದರಾಮಯ್ಯನವರಿಗೆ […]

ಮುಡಾ ಹಗರಣ : ಇಂದು ನ್ಯಾಯಾಲಯದ ತೀರ್ಪು Read More »

ಮಂಗಳೂರು: ಜೈಲಿನಲ್ಲಿ ಕೈದಿಗಳ ಹೊಡೆದಾಟ, ಮೊಬೈಲ್‌ ಪತ್ತೆ

ಅಧೀಕ್ಷಕರ ತಪಾಸಣೆಗೆ ಅಡ್ಡಿಪಡಿಸಿದ್ದ ಕೈದಿಗಳು ಮಂಗಳೂರು : ಮಂಗಳೂರಿನ ಜಿಲ್ಲಾ ಕಾರಾಗೃಹದೊಳಗೆ ಎರಡು ಗುಂಪುಗಳ ನಡುವೆ ಹೊಡೆದಾಟದ ಹಿನ್ನೆಲೆಯಲ್ಲಿ ಕಾರ್ಯಾಚರಣೆ ನಡೆಸಿದಾಗ ಜೈಲಿನ ಕೊಠಡಿಯೊಳಗೆ 4 ಮೊಬೈಲ್ ಪತ್ತೆಯಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಕಾರಾಗಹ ಅಧೀಕ್ಷಕ ಶರಣಬಸಪ್ಪ ಸೋಮವಾರ ಅನಿರೀಕ್ಷಿತ ತಪಾಸಣೆಗೆ ಹೋದಾಗ ವಿಚಾರಣಾಧೀನ ಕೈದಿಗಳು ಅವರ ಕರ್ತವ್ಯಕ್ಕೆ ಅಡ್ಡಿಪಡಿಸಿದ್ದರು. ಅದೇ ದಿನ ಮತ್ತೆ ಅನಿರೀಕ್ಷಿತ ತಪಾಸಣೆ ಮಾಡಲಾಗಿತ್ತು. ಸಂಜೆ ಕೈದಿಗಳು ಎರಡು ವಿಭಾಗಗಳ ಕಬ್ಬಿಣದ ಗೇಟ್‌ಗಳನ್ನು ಅಲ್ಲಾಡಿಸುತ್ತಾ ಮುರಿಯುವ ರೀತಿಯಲ್ಲಿ ಜೋರಾಗಿ ಕೂಗಾಡುತ್ತಾ ಗಲಾಟೆ ಮಾಡಿದ್ದಾರೆ

ಮಂಗಳೂರು: ಜೈಲಿನಲ್ಲಿ ಕೈದಿಗಳ ಹೊಡೆದಾಟ, ಮೊಬೈಲ್‌ ಪತ್ತೆ Read More »

ಗೃಹಲಕ್ಷ್ಮಿಯ 5,500 ಕೋ ರೂ. ಕಬಳಿಸಲು ಯತ್ನಿಸಿತೇ ಕಾಂಗ್ರೆಸ್‌?

ಎರಡು ತಿಂಗಳ ಹಣ ಜಮೆ ಮಾಡದೆ ಮೋಸ ಮಾಡಿದ್ದಾರೆ ಎಂದು ವಿಪಕ್ಷಗಳ ಆರೋಪ ಬೆಳಗಾವಿ: ಮಹಿಳೆಯರಿಗೆ ಪ್ರತಿ ತಿಂಗಳು 2,000 ರೂಪಾಯಿಯಂತೆ ಸಿಗುವ ಗೃಹಲಕ್ಷ್ಮಿ ಹಣದಲ್ಲಿ ಭಾರಿ ಗೋಲ್ಮಾಲ್‌‌ ನಡೆದಿರುವ ಆರೋಪ ಕೇಳಿಬಂದು ಸರ್ಕಾರ ಭಾರಿ ಮುಜುಗರ ಅನುಭವಿಸುತ್ತಿದೆ. ಎರಡು ತಿಂಗಳ ಗೃಹಲಕ್ಷ್ಮಿ ಹಣವನ್ನು ನುಂಗಿ ಹಾಕಲಾಗಿದೆ ಎಂಬ ಆರೋಪ ಕೇಳಿಬಂದಿದೆ. ಸುಮಾರು 5,500 ಕೋ. ರೂ.ಯುಷ್ಟು ಹಣ ಮಹಿಳೆಯರ ಖಾತೆಗೆ ಜಮೆಯಾಗಿಲ್ಲ ಎನ್ನುವ ವಿಚಾರವನ್ನು ಅಧಿವೇಶನದಲ್ಲೇ ವಿಪಕ್ಷಗಳು ಬಯಲೆಗೆಳೆದು ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸಿವೆ. ಇದಾದ ಬಳಿಕ

ಗೃಹಲಕ್ಷ್ಮಿಯ 5,500 ಕೋ ರೂ. ಕಬಳಿಸಲು ಯತ್ನಿಸಿತೇ ಕಾಂಗ್ರೆಸ್‌? Read More »

ನಾಲ್ಕನೇ ಪಂದ್ಯಕ್ಕೆ ಅಡ್ಡಿಯಾದ ದಟ್ಟ ಮಂಜು : ಕ್ರಿಕೆಟ್‌ ಅಭಿಮಾನಿಗಳಿಗೆ ಭಾರಿ ನಿರಾಶೆ

ರಾತ್ರಿ 9.45ರ ತನಕ ಕಾದರೂ ಕರಗದ ಮಂಜಿನೀಂದಾಗಿ ರದ್ದಾದ ಪಂದ್ಯ ಲಖನೌ: ಭಾರತ ಮತ್ತು ದಕ್ಷಿಣ ಆಫ್ರಿಕಾ ನಡುವಿನ ಟಿ20 ಸರಣಿಯ ನಾಲ್ಕನೇ ಪಂದ್ಯ ನಾಲ್ಕನೇ ಪಂದ್ಯ ಒಂದೇ ಒಂದು ಎಸೆತ ಕಾಣದೆ ರದ್ದಾಗಿದೆ. ಲಖನೌ ಭಾರತ ರತ್ನ ಅಟಲ್ ಬಿಹಾರಿ ವಾಜಪೇಯಿ ಏಕಾನಾ ಕ್ರೀಡಾಂಗಣದಲ್ಲಿ ಈ ಪಂದ್ಯ ನಡೆಯಬೇಕಿತ್ತು. ಆದರೆ ಹವಾಮಾನ ವೈಪರಿತ್ಯದಿಂದಾಗಿ ಉಭಯ ತಂಡಗಳ ನಡುವಿನ ಈ ಪಂದ್ಯವನ್ನು ರದ್ದುಗೊಳಿಸಲಾಗಿದೆ. ದಟ್ಟ ಮಂಜು ಮೈದಾನದ ತುಂಬಾ ಹರಡಿದ್ದರಿಂದ ಅಂಪೈರ್​ಗಳು ಪಂದ್ಯವನ್ನು ರದ್ದುಗೊಳಿಸಲು ನಿರ್ಧರಿಸಿದ್ದಾರೆ. ಹೀಗಾಗಿ

ನಾಲ್ಕನೇ ಪಂದ್ಯಕ್ಕೆ ಅಡ್ಡಿಯಾದ ದಟ್ಟ ಮಂಜು : ಕ್ರಿಕೆಟ್‌ ಅಭಿಮಾನಿಗಳಿಗೆ ಭಾರಿ ನಿರಾಶೆ Read More »

ಬೈಕ್ ಗುದ್ದಿ ‌ವ್ಯಕ್ತಿ ಸ್ಥಳದಲ್ಲೇ ಸಾವು

ಪಡುಬಿದ್ರೆ: ರಸ್ತೆ ದಾಟುತ್ತಿದ್ದ ವ್ಯಕ್ತಿಗೆ ಬೈಕೊಂದು ಢಿಕ್ಕಿ ಹೊಡೆದ ಪರಿಣಾಮ ಸ್ಥಳದಲ್ಲೇ ಮೃತಪಟ್ಚ ಘಟನೆ ತೆಂಕ ಎರ್ಮಾಳಿನ ಸತ್ಯಂ ಬಾರ್ ಎದುರಿನ ರಾಷ್ಟ್ರೀಯ ಹೆದ್ದಾರಿಯಲ್ಲಿ ನಡೆದಿದೆ. ತೆಂಕ ಎರ್ಮಾಳಿನ ಅಣ್ಣಯ್ಯ ಬಂಗೇರ (67) ಅವರೇ ಮೃತ ದುರ್ದೈವಿ. ಬೈಕ್ ಸವಾರ ಬಾದಾಮಿ ಮೂಲದ ಹಸನ್ ಅವರು ಕಾಪುವಿನಿಂದ ಸುರತ್ಕಲ್ ಕಡೆಗೆ ಹೋಗುತ್ತಿದ್ದರು. ಈ ಸಂದರ್ಭದಲ್ಲಿ ಬೈಕ್ ಅಣ್ಣಯ್ಯ ಅವರಿಗೆ ಗುದ್ದಿದ ಪರಿಣಾಮ ಅವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಹಸನ್ ಅವರಿಗೂ ತೀವ್ರ ತರದ ಗಾಯಗಳಾಗಿವೆ ಎಂದು ತಿಳಿದು ಬಂದಿದೆ.

ಬೈಕ್ ಗುದ್ದಿ ‌ವ್ಯಕ್ತಿ ಸ್ಥಳದಲ್ಲೇ ಸಾವು Read More »

ಕೆಜಿಎಫ್ ಚಾಪ್ಚರ್-2 ಸಹ ನಿರ್ದೇಶಕನ 4 ವರ್ಷದ ಪುತ್ರ ಸಾವು

ಬೆಂಗಳೂರು: ಕೆಜಿಎಫ್ ಚಾಪ್ಚರ್-2 ಸಹ ನಿರ್ದೇಶಕ ಕೀರ್ತನ್ ನಾಡಗೌಡ ಅವರ ನಾಲ್ಕು ವರ್ಷದ ಪುತ್ರ ಲಿಫ್ಟ್ ಅಪಘಾತದಲ್ಲಿ ಮೃತಪಟ್ಟ ಘಟನೆ ನಡೆದಿದೆ. ಚಿರಂಜೀವಿ ಸೋನಾರ್ಷ್ ಕೆ. ನಾಡಗೌಡ ಆಕಸ್ಮಿಕವಾಗಿ ಲಿಫ್ಟ್ ಒಳಗಡೆ‌‌ ಸಿಕ್ಕಿ ಮೃತಪಟ್ಟ ನತದೃಷ್ಟ ಬಾಲಕ. ಮಗನನ್ನು ಕಳೆದುಕೊಂಡ ಹೆತ್ತವರ ಆಕ್ರಂದನ ಮುಗಿಲು ಮುಟ್ಟಿದೆ.

ಕೆಜಿಎಫ್ ಚಾಪ್ಚರ್-2 ಸಹ ನಿರ್ದೇಶಕನ 4 ವರ್ಷದ ಪುತ್ರ ಸಾವು Read More »

ಪ್ರೀತಿಸುವಂತೆ ಪೊಲೀಸ್ ಇನ್ಸ್‌ಪೆಕ್ಟರ್‌ಗೆ ಒತ್ತಡ, ಆತ್ಮಹತ್ಯೆಯ ಬೆದರಿಕೆ: ಯುವತಿಯ ವಿರುದ್ಧ FIR ದಾಖಲು

ಬೆಂಗಳೂರು: ಪೊಲೀಸ್ ಇನ್ಸ್‌ಪೆಕ್ಟರ್ ಓರ್ವರಿಗೆ ಮಹಿಳೆಯೊಬ್ಬಳು ರಕ್ತದಲ್ಲಿ ಪತ್ರ ಬರೆದು, ಕಜ್ಜಾಯದ ಡಬ್ಬ, ಬೊಕ್ಕೆ ಹಾಗೂ ಎರಡು ಶೀಟ್ ಮಾತ್ರೆಗಳನ್ನು ಅವರ ಟೇಬಲ್ ಮೇಲಿರಿಸಿ ತನ್ನನ್ನು ಪ್ರೀತಿ ಮಾಡುವಂತೆ ಪೀಡಿಸಿರುವ ಘಟನೆ ರಾಮಮೂರ್ತಿ ನಗರ ಪೊಲೀಸ್ ಠಾಣೆಯಲ್ಲಿ ನಡೆದಿದೆ. ಅದೇ ಠಾಣೆಯ ಇನ್ಸ್‌ಪೆಕ್ಟರ್ ಸತೀಶ್ ಎಂಬವರಿಗೆ ಅದೇ ನಗರದ ನಿವಾಸಿ ವನಜಾ ಎಂಬಾಕೆ ಪ್ರೀತಿ ಮಾಡುವಂತೆ ಪೀಡಿಸಿ, ಬೆದರಿಕೆ ಹಾಕಿರುವುದಾಗಿದೆ. ಮೆಸೇಜ್ ಮೂಲಕ ನಿರಂತರವಾಗಿ ಈಕೆ ತನ್ನನ್ನು ಪ್ರೀತಿ ಮಾಡುವಂತೆ ಸತೀಶ್ ಅವರ ಬೆನ್ನು ಬಿದ್ದಿದ್ದಾಳೆ. ಸತೀಶ್

ಪ್ರೀತಿಸುವಂತೆ ಪೊಲೀಸ್ ಇನ್ಸ್‌ಪೆಕ್ಟರ್‌ಗೆ ಒತ್ತಡ, ಆತ್ಮಹತ್ಯೆಯ ಬೆದರಿಕೆ: ಯುವತಿಯ ವಿರುದ್ಧ FIR ದಾಖಲು Read More »

ತಪ್ಪಿಸಿಕೊಳ್ಳಲು ಯತ್ನಿಸಿದ ರೌಡಿಯನ್ನು ಸಿನಿಮೀಯ ರೀತಿಯಲ್ಲಿ ಹಿಡಿದ ಪೊಲೀಸರು

ಪೊಲೀಸರನ್ನು ಕಂಡು ಓಡಿಹೋಗಲು ಯತ್ನಿಸಿದಾಗ ಚರಂಡಿಗೆ ಬಿದ್ದ ಕಾರು ಮಂಗಳೂರು: ಪರಾರಿಯಾಗಲು ಯತ್ನಿಸಿದ್ದ ರೌಡಿಶೀಟರ್‌ ಒಬ್ಬನನ್ನು ಬೆನ್ನಟ್ಟಿ ಮೂಡುಬಿದಿರೆ ಪೊಲೀಸರು ಸಿನಿಮೀಯ ರೀತಿಯಲ್ಲಿ ಬೆನ್ನಟ್ಟಿ ಬಂಧಿಸಿದ್ದಾರೆ. ಕಲ್ಲಡ್ಕ ನಿವಾಸಿ ತೌಸೀಪ್ ಯಾನೆ ಪಪ್ಪಿ ಬಂಧಿತ ಆರೋಪಿ.‌ ನಟೋರಿಯಸ್ ರೌಡಿ ತೌಸೀಪ್ ಮೂಡುಬಿದಿರೆ ಪರಿಸರದಲ್ಲಿ ಕಾರಿನಲ್ಲಿ ಸಂಚರಿಸುತ್ತಿದ್ದ ಬಗ್ಗೆ ಖಚಿತ ಮಾಹಿತಿ ಮೇರೆಗೆ ಪೊಲೀಸರು ಬಂಧನಕ್ಕೆ ಮುಂದಾಗಿದ್ದರು. ಮೂಡುಬಿದಿರೆ ಹೊರವಲಯದ ಕೊಡಂಗಲ್ಲು ಸಮೀಪ ತೌಸೀಪ್ ಬಂದಿರುವ ಬಗ್ಗೆ ಪೊಲೀಸರಿಗೆ ಮಾಹಿತಿ ಸಿಕ್ಕಿತು. ಆರೋಪಿಯ ಕಾರನ್ನು ಪೊಲೀಸ್ ಇನ್‌ಸ್ಪೆಕ್ಟರ್ ಸಂದೇಶ್

ತಪ್ಪಿಸಿಕೊಳ್ಳಲು ಯತ್ನಿಸಿದ ರೌಡಿಯನ್ನು ಸಿನಿಮೀಯ ರೀತಿಯಲ್ಲಿ ಹಿಡಿದ ಪೊಲೀಸರು Read More »

ಸರ್ಕಾರಿ ಉದ್ಯೋಗ ನೇಮಕಾತಿ ನಡೆಯದ ಕಾರಣ ಯುವತಿ ಆತ್ಮಹತ್ಯೆ

4 ವರ್ಷಗಳಿಂದ ತಯಾರಿ ನಡೆಸಿದರೂ ನೇಮಕಾತಿ ಆಗದೆ ಆತ್ಮಹತ್ಯೆ ಬೆಂಗಳೂರು: ಕಳೆದ 4 ವರ್ಷಗಳಿಂದ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತರಬೇತಿ ನಡೆಸುತ್ತಿದ್ದ ಉದ್ಯೋಗಾಕಾಂಕ್ಷಿ ಯುವತಿ ರೈಲು ಹಳಿಗೆ ಬಿದ್ದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಧಾರವಾಡ ನಗರದ ಶಿವಗಿರಿಯಲ್ಲಿ ನಡೆದಿದೆ. ಬಳ್ಳಾರಿ ಮೂಲದ ವಿದ್ಯಾರ್ಥಿನಿ ಪಲ್ಲವಿ ಕಗ್ಗಲ್ (25) ಆತ್ಮಹತ್ಯೆ ಮಾಡಿಕೊಂಡ ಯುವತಿ. ನೇಮಕಾತಿಗಳು ನಡೆಯುತ್ತಿಲ್ಲ ಏಂದು ಮನನೊಂದು ಶಿವಗಿರಿಯ ರೈಲ್ವೆ ಟ್ರ್ಯಾಕ್‌ಗೆ ಬಿದ್ದು ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ತಿಳಿದುಬಂದಿದೆ. ಪಲ್ಲವಿ ಕಗ್ಗಲ್ ಕಳೆದ 4 ವರ್ಷಗಳಿಂದ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತರಬೇತಿ

ಸರ್ಕಾರಿ ಉದ್ಯೋಗ ನೇಮಕಾತಿ ನಡೆಯದ ಕಾರಣ ಯುವತಿ ಆತ್ಮಹತ್ಯೆ Read More »

ಬುರ್ಖಾ ಧರಿಸಲಿಲ್ಲ ಎಂದು ಪತ್ನಿ, ಇಬ್ಬರು ಹೆಣ್ಣು ಮಕ್ಕಳನ್ನು ಕೊಂದು ಹೂತು ಹಾಕಿದ ಪಾಪಿ ತಂದೆ

ಶೌಚಾಲಯದ ಗುಂಡಿಯಲ್ಲಿ ಶವ ಮುಚ್ಚಿ ಹಾಕಿದ ಪ್ರಕರಣ ಹತ್ತು ದಿನಗಳ ಬಳಿಕ ಬೆಳಕಿಗೆ ಲಖನೌ: ಬುರ್ಖಾ ಧರಿಸದೆ ಮನೆಯಿಂದ ಹೊರಬಂದಿದ್ದಾರೆ ಎಂಬ ಕಾರಣಕ್ಕೆ ವ್ಯಕ್ತಿಯೊಬ್ಬ ತನ್ನ ಪತ್ನಿ ಹಾಗೂ ಇಬ್ಬರು ಹೆಣ್ಣು ಮಕ್ಕಳನ್ನು ಕೊಂದು ಶೌಚಾಲಯದ ಗುಂಡಿಯೊಳಗೆ ಹೂತುಹಾಕಿರುವ ಆಘಾತಕಾರಿ ಘಟನೆ ಉತ್ತರ ಪ್ರದೇಶದ ಗಢಿ ದೌಲತ್‌ ಎಂಬ ಹಳ್ಳಿಯಲ್ಲಿ ನಡೆದಿದೆ. ಪತ್ನಿ ಬುರ್ಖಾ ಧರಿಸದೆ ಹೊರಗೆ ಹೋದದ್ದಕ್ಕೆ ಆರಂಭವಾದ ಜಗಳ ಕೊಲೆಯಲ್ಲಿ ಅಂತ್ಯವಾಗಿದೆ. ಫಾರೂಕ್ ಎಂಬಾತ ಮೂವರನ್ನು ಕೊಲೆ ಮಾಡಿ ಹೂತು ಹಾಕಿದ ಆರೋಪಿ. ಫಾರೂಕ್‌ನ

ಬುರ್ಖಾ ಧರಿಸಲಿಲ್ಲ ಎಂದು ಪತ್ನಿ, ಇಬ್ಬರು ಹೆಣ್ಣು ಮಕ್ಕಳನ್ನು ಕೊಂದು ಹೂತು ಹಾಕಿದ ಪಾಪಿ ತಂದೆ Read More »

error: Content is protected !!
Scroll to Top