ಮುಳಿಯ ಜ್ಯುವೆಲ್ಸ್ ನಲ್ಲಿ ಚಿನ್ನದ ಹಬ್ಬ “ಮುಳಿಯ ಚಿನ್ನೋತ್ಸವ”ಕ್ಕೆ ಚಾಲನೆ | ಮೇ 20 ರ ತನಕ ನಡೆಯಲಿದೆ ಚಿನ್ನೋತ್ಸವ

ಪುತ್ತೂರು : ಪ್ರಸಿದ್ಧ ಚಿನ್ನಾಭರಣ ಮಳಿಗೆ ಮುಳಿಯ ಜ್ಯುವೆಲ್ಸ್ ನಲ್ಲಿ ಚಿನ್ನದ ಹಬ್ಬ “ಮುಳಿಯ ಚಿನ್ನೋತ್ಸವ”ಕ್ಕೆ ಸೋಮವಾರ ಚಾಲನೆ ನೀಡಲಾಯಿತು. ಮೇ.20ರ ತನಕ ನಡೆಯುವ ಈ ಚಿನ್ನೋತ್ಸವಕ್ಕೆ ಪುತ್ತೂರು ವಿವೇಕಾನಂದ ಇಂಜಿನಿಯರಿಂಗ್ ಆಫ್ ಸೈನ್ಸ್ ನ ಪ್ರೊ. ಡಾ. ಸೌಮ್ಯ ಚಾಲನೆ ನೀಡಿ, ಚಿನ್ನಾಭರಣದ ಹೊಸ ವಿನ್ಯಾಸಗಳನ್ನು ಅನಾವರಣಗೊಳಿಸಿ ಮಾತನಾಡಿ, ನನ್ನ ಸುಮಾರು 30 ವರ್ಷದ ಅನುಭವದಲ್ಲಿ ಮುಳಿಯ ಜ್ಯುವೆಲ್ಸ್ ನೊಂದಿಗೆ ಉತ್ತಮ ಸಂಬಂಧವಿದೆ. ಯಾಕೆಂದರೆ ನಮ್ಮ ಕಟುಂಬ ಸಮೇತ ಇಲ್ಲಿನ ಗ್ರಾಹಕರಾಗಿದ್ದೇವೆ. ಇದಕ್ಕೆ ಕಾರಣ ಮುಳಿಯ […]

ಮುಳಿಯ ಜ್ಯುವೆಲ್ಸ್ ನಲ್ಲಿ ಚಿನ್ನದ ಹಬ್ಬ “ಮುಳಿಯ ಚಿನ್ನೋತ್ಸವ”ಕ್ಕೆ ಚಾಲನೆ | ಮೇ 20 ರ ತನಕ ನಡೆಯಲಿದೆ ಚಿನ್ನೋತ್ಸವ Read More »

ರೈಲು ಡಿಕ್ಕಿಯಾಗಿ ವ್ಯಕ್ತಿ ಮೃತ್ಯು

ಪುತ್ತೂರು: ರೈಲು ಡಿಕ್ಕಿ ಹೊಡೆದು ವ್ಯಕ್ತಿಯೊಬ್ಬರು ಮೃತಪಟ್ಟ ಘಟನೆ ಕಬಕ-ಪುತ್ತೂರು ರೈಲು ಹಳಿಯಲ್ಲಿ ಇಂದು ಮುಂಜಾನೆ ನಡೆದಿದೆ. ರೈಲು ಹಳಿಯಲ್ಲಿ ಮೃತದೇಹ ಕಂಡಿದ್ದು, ವ್ಯಕ್ತಿಯ ಪರಿಚಯ ತಿಳಿದು ಬಂದಿಲ್ಲ. ಹೆಚ್ಚಿನ ಮಾಹಿತಿಗಾಗಿ ನಿರೀಕ್ಷಿಸಲಾಗುತ್ತಿದೆ.

ರೈಲು ಡಿಕ್ಕಿಯಾಗಿ ವ್ಯಕ್ತಿ ಮೃತ್ಯು Read More »

ಅಕ್ಷಯ ಕಾಲೇಜಿನಲ್ಲಿ ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ಆ್ಯಂಡ್ ಸೈಬರ್ ಸೆಕ್ಯೂರಿಟಿ ಕುರಿತು ಮಾಹಿತಿ ಕಾರ್ಯಾಗಾರ

ಪುತ್ತೂರು: ಅಕ್ಷಯ ಎಜ್ಯುಕೇಶನಲ್ & ಚಾರಿಟೇಬಲ್ ಟ್ರಸ್ಟ್ ಅಧೀನದಲ್ಲಿ ಕಾರ್ಯಾಚರಿಸುತ್ತಿರುವ ಸಂಪ್ಯ ಅಕ್ಷಯ ಕಾಲೇಜಿನಲ್ಲಿ ಆರ್ಟಿ ಫಿಶಿಯಲ್ ಇಂಟೆಲಿಜೆನ್ಸ್ ಆ್ಯಂಡ್ ಸೈಬರ್ ಸೆಕ್ಯೂರಿಟಿ ಕುರಿತು ವಿದ್ಯಾರ್ಥಿಗಳಿಗೆ ಎರಡು ದಿನದ ಕಾರ್ಯಾಗಾರ ನಡೆಯಿತು. ಅಕ್ಷಯ ಕಾಲೇಜಿನ ವಿದ್ಯಾರ್ಥಿಗಳಿಗೆ ನಿಯೋ ಇನ್ನೊವೇಶನ್ಸ್ & ಸ್ಕಿಲ್ಸ್ ಸಂಸ್ಥೆಯ ಸಹಯೋಗದೊಂದಿಗೆ ಆರ್ಟಿಫಿಶಿಯಲ್ ಇಂಟೆಲಿಜೆನ್ಸಿ ಹಾಗೂ ಮಿಷಿನ್ ಲರ್ನಿಂಗ್ ಕುರಿತಾಗಿ 23 ವರ್ಷಗಳ ಆರ್ಟಿಫಿಶಿಯಲ್ ಇಂಟೆಲಿಜೆನ್ಸಿ ಹಾಗೂ ಮಿಷಿನ್ ಲರ್ನಿಂಗ್ ನಲ್ಲಿಅನುಭವ ಹೊಂದಿರುವ ಅಲೋಕ್ ಚಕ್ರವರ್ತಿ ವಿದ್ಯಾರ್ಥಿಗಳಿಗೆ ಮಾಹಿತಿ ನೀಡಿದರು. ಕಾರ್ಯಗಾರದಲ್ಲಿ ಆರ್ಟಿಫಿಶಿಯಲ್ ಇಂಟೆಲಿಜೆನ್ಸಿ

ಅಕ್ಷಯ ಕಾಲೇಜಿನಲ್ಲಿ ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ಆ್ಯಂಡ್ ಸೈಬರ್ ಸೆಕ್ಯೂರಿಟಿ ಕುರಿತು ಮಾಹಿತಿ ಕಾರ್ಯಾಗಾರ Read More »

ಸುಳ್ಯ ಅಜ್ಜಾವರದಲ್ಲಿ ಭಾರೀ ಗಾಳಿ ಮಳೆ | ಧರೆಗುರುಳಿದ ಅಡಕೆ ಮರ

ಸುಳ್ಯ: ಸುಳ್ಯದ ಅಜ್ಜಾವರ ಗ್ರಾಮದ ಮೇನಾಲ ಬೈಲಿನಲ್ಲಿ ಇಂದು ಸಂಜೆ ಬೀಸಿದ ಭಾರಿ ಗಾಳಿಗೆ ಅಡಕೆ ಮರಗಳು ಧರೆಗುರುಳಿ ಅಪಾರ ನಷ್ಟ ಉಂಟಾಗಿದೆ. ಇಂದು ಸಂಜೆ ಅಜ್ಜಾವರದ ಮೇನಾಲದ ವ್ಯಾಪ್ತಿಯಲ್ಲಿ ಮತ್ತು ಮೇದಿನಡ್ಕ, ಪಡ್ಡಂಬೈಲು ಭಾಗದಲ್ಲಿ ಮಾತ್ರ ಭಾರಿ ಗಾಳಿ ಬೀಸಿದ್ದು ವಿದ್ಯುತ್ ಕಂಬಗಳು ಕೂಡ ಹಾನಿಯಾಗಿದೆ. ಇಂದು ರಾತ್ರಿ ಅಜ್ಜಾವರ ವ್ಯಾಪ್ತಿಯಲ್ಲಿನ ಜನತೆ ಕತ್ತಲೆಯಲ್ಲಿ ಕಾಲ ಕಳೆಯಬೇಕಾದ ಪರಿಸ್ಥಿತಿ ಉಂಟಾಗಿದೆ. .

ಸುಳ್ಯ ಅಜ್ಜಾವರದಲ್ಲಿ ಭಾರೀ ಗಾಳಿ ಮಳೆ | ಧರೆಗುರುಳಿದ ಅಡಕೆ ಮರ Read More »

ಸಾಗಾಟ ಮಾಡಲು ಸರಕಾರಿ ಜಮೀನಿಂದ ಶ್ರೀಗಂಧ ಕಡಿದು ದಾಸ್ತಾನು | ಆರೋಪಿ ಬಂಧನ

ಪುತ್ತೂರು: ಸರಕಾರಿ ಜಮೀನಿನಿಂದ ಶ್ರೀಗಂಧ ಕಡಿದು ಸಾಗಾಟ ಮಾಡಲು ದಾಸ್ತಾನಿರಿಸಿದ ಪ್ರಕರಣವನ್ನು ಪತ್ತೆ ಹಚ್ಚಿರುವ ಅರಣ್ಯ ಸಂಚಾರಿ ದಳದವರು ಶ್ರೀಗಂಧ ವಶಪಡಿಸಿಕೊಂಡು ಆರೋಪಿಯನ್ನು ಬಂಧಿಸಿದ್ದಾರೆ. ಪುತ್ತೂರು ತಾಲೂಕಿನ ಕೊಳ್ಳಿಗೆ ಗ್ರಾಮದ ಕಣಿಯಾರು ಸಿ.ಆರ್. ಕಾಲೋನಿಯ ವೇಲು ಎಂಬವರ ಪುತ್ರ ಕಮಲ್ ಯಾನೆ ಕಮಲ್ ವಾಸನ್ (46 ವ) ಬಂಧಿತ ಆರೋಪಿ 1,43,000 ರೂಪಾಯಿ ಮೌಲ್ಯದ 22 ಕೆ.ಜಿ. ಶ್ರೀಗಂಧದ ಕೊರಡುಗಳನ್ನು ಅಕ್ರಮವಾಗಿ ಕೊಳ್ತಿಗೆ ಗ್ರಾಮದ ಕಣಿಯಾರು ಸರಕಾರಿ ಜಮೀನಿನಿಂದ ಕಡಿದು ಸಾಗಾಟಕ್ಕೆ ತನ್ನ ವಶದಲ್ಲಿಟ್ಟುಕೊಂಡಿದ್ದ. ಕೊಳ್ತಿಗೆ ಗ್ರಾಮದ

ಸಾಗಾಟ ಮಾಡಲು ಸರಕಾರಿ ಜಮೀನಿಂದ ಶ್ರೀಗಂಧ ಕಡಿದು ದಾಸ್ತಾನು | ಆರೋಪಿ ಬಂಧನ Read More »

ಲೋಕಸಭಾ ಚುನಾವಣೆ : ಸೂರತ್ ನಲ್ಲಿ ಅವಿರೋಧ ಆಯ್ಕೆ ಮೂಲಕ ಖಾತೆ ತೆರೆದ ಬಿಜೆಪಿ

ನವದೆಹಲಿ: ಸೂರತ್ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿ ಪಕ್ಷದ ಅಭ್ಯರ್ಥಿ ಮುಖೇಶ್ ದಲಾಲ್ ಅವಿರೋಧವಾಗಿ ಆಯ್ಕೆಯಾಗುವ ಮೂಲಕ 2024 ರ ಲೋಕಸಭೆಯಲ್ಲಿ ಬಿಜೆಪಿ ಮೊದಲ ಖಾತೆಯನ್ನು ತೆರೆದಿದೆ. ಈ ಹಿಂದೆ ಕಾಂಗ್ರೆಸ್ ಅಭ್ಯರ್ಥಿ ನಿಲೇಶ್ ಕುಂಬಾನಿ ಅವರ ನಾಮಪತ್ರಕ್ಕೆ ಸಹಿ ಹಾಕಿಲ್ಲ ಎಂದು ಅವರ ಪ್ರಸ್ತಾಪಕರು ಹೇಳಿದ ನಂತರ ಚುನಾವಣಾ ಆಯೋಗ ಅವರ ನಾಮಪತ್ರವನ್ನು ತಿರಸ್ಕರಿಸಿತ್ತು. ಸೂರತ್ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ನಿಲೇಶ್ ಕುಂಭಾನಿ ಅವರ ನಾಮಪತ್ರವೂ ತಿರಸ್ಕೃತಗೊಂಡಿದೆ. ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿ ಸುರೇಶ್ ಪಡ್ವಾಲ ಅವರಿಗೂ

ಲೋಕಸಭಾ ಚುನಾವಣೆ : ಸೂರತ್ ನಲ್ಲಿ ಅವಿರೋಧ ಆಯ್ಕೆ ಮೂಲಕ ಖಾತೆ ತೆರೆದ ಬಿಜೆಪಿ Read More »

ಅಖಿಲ ಭಾರತ ಅಡಿಕೆ ಬೆಳೆಗಾರರ ಸಂಘದ ಅಧ್ಯಕ್ಷರಾಗಿ ಮಹೇಶ್ ಪುಚ್ಚಪ್ಪಾಡಿ,  ಕಾರ್ಯದರ್ಶಿಯಾಗಿ ವೆಂಕಟಗಿರೀಶ್ ಸಿ.ಜಿ

ಅಖಿಲ ಭಾರತ ಅಡಿಕೆ ಬೆಳೆಗಾರರ ಸಂಘದ ನೂತನ ಅಧ್ಯಕ್ಷರಾಗಿ ಗುತ್ತಿಗಾರು ಕಮಿಲದ ಮಹೇಶ್ ಪುಚ್ಚಪ್ಪಾಡಿ ಹಾಗೂ ಕಾರ್ಯದರ್ಶಿಯಾಗಿ ಕೋಡಪದವು ಕೆಲಿಂಜದ ವೆಂಕಟಗಿರೀಶ್ ಸಿ.ಜಿ. ಆಯ್ಕೆಯಾಗಿದ್ದಾರೆ. ಇತ್ತೀಚೆಗೆ ನಡೆದ ಅಖಿಲ ಭಾರತ ಅಡಿಕೆ ಬೆಳೆಗಾರರ ಸಂಘದ ಕಾರ್ಯಕಾರಿ ಸಮಿತಿ ಸಭೆಯಲ್ಲಿ ಈ ಆಯ್ಕೆ ನಡೆಯಿತು. ಉಪಾಧ್ಯಕ್ಷರಾಗಿ ಶಂ. ನಾ. ಖಂಡಿಗೆ ಪೆರ್ಲ, ಎಂ.ಡಿ. ವಿಜಯಕುಮಾರ್ ಮಡಪ್ಪಾಡಿ ಹಾಗೂ ಜತೆ ಕಾರ್ಯದರ್ಶಿಯಾಗಿ ಸಾಯಿಶೇಖರ್ ಕರಿಕಳ ಪಂಜ ಆಯ್ಕೆಯಾದರು. ಸಂಘದ ನಿಕಟಪೂರ್ವ ಅಧ್ಯಕ್ಷ ಅಶೋಕ್ ಕಿನಿಲ ಅವರ ಅಧ್ಯಕ್ಷತೆಯಲ್ಲಿ ಸಭೆ ನಡೆಯಿತು.

ಅಖಿಲ ಭಾರತ ಅಡಿಕೆ ಬೆಳೆಗಾರರ ಸಂಘದ ಅಧ್ಯಕ್ಷರಾಗಿ ಮಹೇಶ್ ಪುಚ್ಚಪ್ಪಾಡಿ,  ಕಾರ್ಯದರ್ಶಿಯಾಗಿ ವೆಂಕಟಗಿರೀಶ್ ಸಿ.ಜಿ Read More »

ಹತ್ತು ವರ್ಷಕ್ಕಿಂತ ಹೆಚ್ಚು ಸೇವೆ ಸಲ್ಲಿಸಿದ ಸಿಬ್ಬಂದಿಗಳ ಸೇವೆಯನ್ನು ಖಾಯಂಗೊಳಿಸುವಂತೆ ಹೈಕೋರ್ಟ್ ಆದೇಶ

ಬೆಂಗಳೂರು: ಹತ್ತು ವರ್ಷಕ್ಕಿಂತ ಹೆಚ್ಚು ಸೇವೆ ಸಲ್ಲಿಸಿದ ಸಿಬ್ಬಂದಿ ಸೇವೆ ಖಾಯಂಗೊಳಿಸುವ ಬಗ್ಗೆ ಸಿಬ್ಬಂದಿ ಸಲ್ಲಿಸಿರುವ ಮನವಿ ಪರಿಗಣಿಸುವಂತೆ ಹೈಕೋರ್ಟ್ ವಿಭಾಗೀಯ ಪೀಠ ಕರ್ನಾಟಕ ಪಶು ವೈದ್ಯಕೀಯ ಮತ್ತು ಮೀನುಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯಕ್ಕೆ ಸೂಚನೆ ನೀಡಿದೆ. ಏಕ ಸದಸ್ಯ ಪೀಠದ ಆದೇಶ ಪ್ರಶ್ನಿಸಿ ಕರ್ನಾಟಕ ಪಶು ವೈದ್ಯಕೀಯ ಮತ್ತು ಮೀನುಗಾರಿಕೆ ವಿಜ್ಞಾನಗಳ ವಿವಿ ಸಲ್ಲಿಸಿದ್ದ ಮೇಲ್ಮನವಿ ವಜಾಗೊಳಿಸಿದ ಕರ್ನಾಟಕ ಹೈಕೋರ್ಟ್ ವಿಭಾಗೀಯ ಪೀಠ ಈ ಆದೇಶ ಮಾಡಿದೆ. ವಿವಿ ತನ್ನ ಕೆಲಸ ಕಾರ್ಯಗಳ ಸುಗಮ ನಿರ್ವಹಣೆಗಾಗಿ ಎಸ್.ಜಿ

ಹತ್ತು ವರ್ಷಕ್ಕಿಂತ ಹೆಚ್ಚು ಸೇವೆ ಸಲ್ಲಿಸಿದ ಸಿಬ್ಬಂದಿಗಳ ಸೇವೆಯನ್ನು ಖಾಯಂಗೊಳಿಸುವಂತೆ ಹೈಕೋರ್ಟ್ ಆದೇಶ Read More »

ಸಂತ ಫಿಲೋಮಿನಾ ಕಾಲೇಜಿನ ವಿದ್ಯಾರ್ಥಿಗಳು ಪೇ ಪಾಲ್‌ ಕಂಪನಿಯ ಸಂದರ್ಶನಕ್ಕೆ ಆಯ್ಕೆ

ಪುತ್ತೂರು: ಸಂತ ಫಿಲೋಮಿನಾ ಕಾಲೇಜಿನಲ್ಲಿ ತೃತೀಯ ಬಿಸಿಎ ವ್ಯಾಸಂಗ ಮಾಡುತ್ತಿರುವ 41 ವಿದ್ಯಾರ್ಥಿನಿಯರು ಪೇ ಪಾಲ್‌ ಬಹುರಾಷ್ಟ್ರೀಯ ಕಂಪನಿಯ ಅಂತಿಮ ಹಂತದ ಸಂದರ್ಶನಕ್ಕೆ ಆಯ್ಕೆಯಾಗಿದ್ದಾರೆ.  2023-24 ನೇ ಶೈಕ್ಷಣಿಕ ವರ್ಷದ ಪ್ರಾರಂಭದಲ್ಲಿ ಕಾಲೇಜಿನಲ್ಲಿ ಅಂತಿಮ ಬಿಸಿಎ ವಿದ್ಯಾರ್ಥಿಗಳಿಗಾಗಿ ಹನಿವೆಲ್‌ ಕಂಪನಿಯಿಂದ ಪ್ರಾಯೋಜಿಸಲ್ಪಟ್ಟ ಕಸ್ಟಮರ್‌ ರಿಲೇಶನ್‌ಶಿಪ್‌ ಮ್ಯಾನೇಜ್‌ಮೆಂಟ್‌ ಸರ್ಟಿಫಿಕೇಟ್‌ ಕೋರ್ಸನ್ನು ಆಯೋಜಿಸಲಾಗಿತ್ತು. ಸರ್ಟಿಫಿಕೇಟ್‌ ಕೋರ್ಸ್‌ನ ಕೊನೆಯಲ್ಲಿ ಕಂಪನಿಯ ವತಿಯಿಂದ ನಾಲ್ಕು ಹಂತಗಳ ಪರೀಕ್ಷೆಗಳನ್ನು ನಡೆಸಲಾಗಿತ್ತು. ಭಾಗವಹಿಸಿದ 118 ವಿದ್ಯಾರ್ಥಿಗಳೂ ಈ ನಾಲ್ಕು ಹಂತಗಳ ಪರೀಕ್ಷೆಗಳಲ್ಲಿ ಉತ್ತೀರ್ಣರಾಗಿದ್ದು, ಅವರಿಗೆ ಕಂಪನಿಯ

ಸಂತ ಫಿಲೋಮಿನಾ ಕಾಲೇಜಿನ ವಿದ್ಯಾರ್ಥಿಗಳು ಪೇ ಪಾಲ್‌ ಕಂಪನಿಯ ಸಂದರ್ಶನಕ್ಕೆ ಆಯ್ಕೆ Read More »

ನೇಹಾ ಹತ್ಯೆ ಮರಣೋತ್ತರ ಪರೀಕ್ಷೆ ಬಯಲು | 14 ಬಾರಿ ಚಾಕುವಿನಿಂದ ಇರಿದ ಸಂಗತಿ ವರದಿಯಿಂದ ಸಾಬೀತು

ಹುಬ್ಬಳ್ಳಿ: ಹುಬ್ಬಳ್ಳಿ ಬಿವಿಬಿ ಕಾಲೇಜು ವಿದ್ಯಾರ್ಥಿನಿ ನೇಹಾ ಹತ್ಯೆ ಪ್ರಕರಣ ರಾಷ್ಟ್ರಾದ್ಯಂತ ಭಾರೀ ಸಂಚಲನ ಸೃಷ್ಟಿಸಿದ್ದು, ಇದೀಗ ಮರಣೋತ್ತರ ವರದಿ ಬಿಡುಗಡೆಗೊಂಡಿದೆ. ಈ ಮೂಲಕ ಭಯಾನಕ ಸಂಗತಿ ಬಯಲಾಗಿದ್ದು, ನೇಹಾಳನ್ನು 14 ಬಾರಿ ಇರಿದು ಹತ್ಯೆಗೈಯಲಾಗಿದೆ ಎಂದು ವರದಿಯಿಂದ ತಿಳಿದು ಬಂದಿದೆ. ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯ ಕಾಂಗ್ರೆಸ್ ಸದಸ್ಯ ನಿರಂಜನ್ ಹಿರೇಮಠ ಅವರ ಪುತ್ರಿ, ಬಿವಿಬಿ ಕಾಲೇಜು ವಿದ್ಯಾರ್ಥಿನಿ ನೇಹಾಳನ್ನು ಆರೋಪಿ ಫಯಾಜ್ ಏ.18 ರಂದು ಸಂಜೆ ಕಾಲೇಜಿನಿಂದ ಹೊರ ಬರುತ್ತಿದ್ದ ವೇಳೆ ಚಾಕುವಿನಿಂದ ಇರಿದು ಹತ್ಯೆಗೈದಿದ್ದ.

ನೇಹಾ ಹತ್ಯೆ ಮರಣೋತ್ತರ ಪರೀಕ್ಷೆ ಬಯಲು | 14 ಬಾರಿ ಚಾಕುವಿನಿಂದ ಇರಿದ ಸಂಗತಿ ವರದಿಯಿಂದ ಸಾಬೀತು Read More »

error: Content is protected !!
Scroll to Top