ಕಲ್ಲು ಕೋರೆಯಿಂದ ಜಲ್ಲಿ ಸಾಗಾಟ : ಸ್ಥಳೀಯರಿಂದ ತಡೆ

ಮರ್ಕಂಜ :  ಮರ್ಕಂಜದ ಅಳವುಪಾರೆ ಕಲ್ಲುಕೋರೆಯಿಂದ ಜಲ್ಲಿ ಸಾಗಾಟ ಮಾಡಿದ ಹಿನ್ನೆಲೆಯಲ್ಲಿ ಸ್ಥಳೀಯರು ಸೇರಿ ಜಲ್ಲಿ ಸಾಗಾಟ ಮಾಡುತ್ತಿದ್ದ ಲಾರಿಗೆ ತಡೆಯೊಡ್ಡಿದ ಘಟನೆ ವರದಿಯಾಗಿದೆ. ಅಳವುಪಾರೆ ಗಣಿಗಾರಿಕೆಯಿಂದ ಸ್ಥಳೀಯ ನಿವಾಸಿಗಳು ತೊಂದರೆಗೆ ಈಡಾಗುತ್ತಿದ್ದಾರೆಂದು ಕೆಲ ದಿನಗಳ ಹಿಂದೆ ಸುಳ್ಯ ತಹಶೀಲ್ದಾರ್ ರವರಿಗೆ ಮನವಿ ನೀಡಿದ್ದರು. ಇದಕ್ಕೆ ಸ್ಪಂದಿಸಿದ ಅವರು ಸ್ಥಳಕ್ಕೆ ಭೇಟಿ ನೀಡಿ ತಾತ್ಕಾಲಿಕ ತಡೆ ನೀಡಿದ್ದರು. ಇದೀಗ ಅಳವುಪಾರೆ ಗಣಿಗಾರಿಕೆಯಲ್ಲಿ ಸ್ಟಾಕ್ ಆಗಿದ್ದ ಜಲ್ಲಿಗಳನ್ನು ತೆಗೆದುಕೊಂಡು ಹೋಗುತ್ತಿದ್ದಾಗ ಸ್ಥಳೀಯರು ಆಕ್ಷೇಪಿಸಿ ಲಾರಿಗೆ ತಡೆ ಮಾಡಿದ್ದಾರೆ. ಸ್ಥಳಕ್ಕೆ […]

    ಕಲ್ಲು ಕೋರೆಯಿಂದ ಜಲ್ಲಿ ಸಾಗಾಟ : ಸ್ಥಳೀಯರಿಂದ ತಡೆ Read More »

ಜೀವನ ಕೌಶಲ್ಯ ಕರಗತ ಮಾಡಿಕೊಳ್ಳುವುದು ಅಗತ್ಯ | ಅಂಬಿಕಾ ಮಹಾವಿದ್ಯಾಲಯದಲ್ಲಿ ಸರ್ಟಿಫಿಕೇಟ್ ಕೋರ್ಸ್ ಉದ್ಘಾಟಿಸಿ ಐತ್ತಪ್ಪ ನಾಯ್ಕ್

ಪುತ್ತೂರು: ಪಠ್ಯದ ಸಂಗತಿಗಳಷ್ಟೇ ಜೀವನ ರೂಪಿಸುವುದಿಲ್ಲ. ಪಠ್ಯದ ಜತೆಗೆ ಯಾವ ಬಗೆಯ ಕೌಶಲ್ಯಗಳನ್ನು ನಮ್ಮದಾಗಿಸಿಕೊಳ್ಳುತ್ತೇವೆ ಎಂಬುದು ನಮ್ಮ ಭವಿಷ್ಯಕ್ಕೆ ಪೂರಕವೆನಿಸುತ್ತದೆ. ಅನೇಕ ವಿದ್ಯಾರ್ಥಿಗಳು ಅಂಕ ಗಳಿಸುವಲ್ಲಿ ಸೋತರೂ ತಮ್ಮಲ್ಲಿರುವ ಕೌಶಲ್ಯಗಳಿಂದಾಗಿ ಬದುಕಿನಲ್ಲಿ ಯಶಸ್ಸನ್ನು ಕಂಡ ನೂರಾರು ಉದಾಹರಣೆಗಳಿವೆ. ಹಾಗಾಗಿ ಜೀವನ ಕೌಶಲಗಳ ಬಗೆಗೆ ವಿದ್ಯಾರ್ಥಿಗಳು ಗಂಭೀರವಾಗಿ ಆಲೋಚಿಸಬೇಕು ಎಂದು ವಿಶ್ರಾಂತ ಮುಖ್ಯ ಶಿಕ್ಷಕ ಬಿ.ಐತ್ತಪ್ಪ ನಾಯ್ಕ್ ಹೇಳಿದರು. ಅವರು ಬಪ್ಪಳಿಗೆಯಲ್ಲಿನ ಅಂಬಿಕಾ ಮಹಾವಿದ್ಯಾಲಯದಲ್ಲಿ ಪರ್ಸನಲ್ ಡೆವಲಪ್‌ಮೆಂಟ್ ಅಂಡ್ ಲೈಫ್ ಸ್ಕಿಲ್ಸ್ ಎಂಬ ವಿಷಯದ ಮೇಲೆ ವಿದ್ಯಾರ್ಥಿಗಳಿಗಾಗಿ ಆರಂಭಿಸಲಾದ

ಜೀವನ ಕೌಶಲ್ಯ ಕರಗತ ಮಾಡಿಕೊಳ್ಳುವುದು ಅಗತ್ಯ | ಅಂಬಿಕಾ ಮಹಾವಿದ್ಯಾಲಯದಲ್ಲಿ ಸರ್ಟಿಫಿಕೇಟ್ ಕೋರ್ಸ್ ಉದ್ಘಾಟಿಸಿ ಐತ್ತಪ್ಪ ನಾಯ್ಕ್ Read More »

ಪ್ರಜ್ವಲ್ ರೇವಣ್ಣ ಅಶ್ಲೀಲ ವೀಡಿಯೋ | ತನಿಖಾ ತಂಡದಲ್ಲಿ ಪುತ್ತೂರಿನ ಧನ್ಯಾ ನಾಯಕ್

ಪುತ್ತೂರು: ಹಾಸನ ಸಂಸದ ಪ್ರಜ್ವಲ್ ರೇವಣ್ಣ ಅಶ್ಲೀಲ ವಿಡಿಯೋ ಕುರಿತು ತನಿಖೆಗೆ ರಚಿಸಲಾಗಿರುವ 18 ಮಂದಿ ಪೊಲೀಸ್ ಅಧಿಕಾರಿಗಳನ್ನು ಒಳಗೊಂಡಿರುವ ವಿಶೇಷ ತನಿಖಾ ತಂಡದಲ್ಲಿ ಪುತ್ತೂರಿನ ಧನ್ಯಾ ನಾಯಕ್ ಅವರನ್ನು ನೇಮಕ ಮಾಡಲಾಗಿದೆ. ಧನ್ಯಾ ನಾಯಕ್ ಅವರು ಈ ಹಿಂದೆ ಪುತ್ತೂರಿನಲ್ಲಿ ಪ್ರೊಬೆಷನರಿ ಡಿವೈಎಸ್‌ಪಿಯಾಗಿದ್ದು, ಉಪ್ಪಿನಂಗಡಿ ಪೊಲೀಸ್ ಠಾಣೆ, ಪುತ್ತೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಕಾರ್ಯ ನಿರ್ವಹಿಸಿದ್ದರು. ಪ್ರಸ್ತುತ ಮಂಗಳೂರು ನಗರ ದಕ್ಷಿಣ ಉಪ ವಿಭಾಗದ ಸಹಾಯಕ ಪೊಲೀಸ್ ಆಯುಕ್ತರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಐಪಿಎಸ್ ಅಧಿಕಾರಿ ಬಿ.ಕೆ.

ಪ್ರಜ್ವಲ್ ರೇವಣ್ಣ ಅಶ್ಲೀಲ ವೀಡಿಯೋ | ತನಿಖಾ ತಂಡದಲ್ಲಿ ಪುತ್ತೂರಿನ ಧನ್ಯಾ ನಾಯಕ್ Read More »

ಬೈಕ್-ಕಾರು ಡಿಕ್ಕಿ : ಎರಡು ತುಂಡುಗಳಾದ ಬೈಕ್ !

ಬೆಳ್ತಂಗಡಿ: ಬೈಕ್‍ ಹಾಗೂ ಕಾರು ಡಿಕ್ಕಿ ಹೊಡೆದುಕೊಂಡ ಘಟನೆ ಬೆಳಾಲು ಉಜಿರೆ ರಸ್ತೆಯಲ್ಲಿರುವ ಮಾಚಾರು ಸಮೀಪ ಇಂದು ನಡೆದಿದೆ. ಅಪಘಾತದಲ್ಲಿ ಬೈಕ್ ಎರಡು ತುಂಡಾಗಿ ಬಿದ್ದಿದ್ದು, ಬೈಕಿನಲ್ಲಿದ್ದವರು ಪವಾಡಸದೃಶ್ಯವಾಗಿ ಅಪಾಯದಿಂದ ಪಾರಾಗಿದ್ದಾರೆ ಎನ್ನಲಾಗಿದೆ. ಅಪಘಾತದ ವೇಳೆ ಬೈಕ್ ಸವಾರ ಬೈಕಿನಿಂದ ಎಸೆಯಲ್ಪಟ್ಟಿದ್ದು ರಸ್ತೆಬದಿಗೆ ಬಿದ್ದಿದ್ದಾರೆ. ಆದರೆ ಯಾವುದೇ ಹೆಚ್ಚಿನ ಗಾಯಗಳಾಗಿಲ್ಲ. ಕಾರಿಗೂ ಹಾನಿಯಾಗಿದ್ದು ಕಾರಿನಲ್ಲಿದ್ದವರೂ ಅಪಾಯದಿಂದ ಪಾರಾಗಿದ್ದಾರೆ ಎಂದು ತಿಳಿದು ಬಂದಿದೆ.

ಬೈಕ್-ಕಾರು ಡಿಕ್ಕಿ : ಎರಡು ತುಂಡುಗಳಾದ ಬೈಕ್ ! Read More »

ರಾಜ್ಯದಲ್ಲಿ ಬಿಸಿ ಗಾಳಿ ಹೆಚ್ಚಳ | ರೆಡ್, ಆರೆಂಜ್ ಅಲರ್ಟ್ ಘೋಷಣೆ | ಏಲ್ಲೆಲ್ಲಿ?

ಬೆಂಗಳೂರು: ರಾಜ್ಯದಲ್ಲಿ ಬಿಸಿ ಗಾಳಿ ತೀವ್ರ ಹೆಚ್ಚಳ ಆಗಿದ್ದು, 6 ಜಿಲ್ಲೆಗಳಿಗೆ ರೆಡ್ ಅಲರ್ಟ್ ಹಾಗೂ 12 ಜಿಲ್ಲೆಗಳಿಗೆ ಆರೆಂಜ್ ಅಲರ್ಟ್ ಘೋಷಿಸಿ ಹವಾಮಾನ ಇಲಾಖೆ ಮುನ್ನೆಚ್ಚರಿಕೆ ಕೊಟ್ಟಿದೆ. ಬೆಳಗಾವಿ, ಬಾಗಲಕೋಟೆ, ಧಾರವಾಡ, ಗದಗ, ಹಾವೇರಿ, ಕೊಪ್ಪಳ ಜಿಲ್ಲೆಗಳಿಗೆ ರೆಡ್ ಅಲರ್ಟ್ ಘೋಷಿಸಲಾಗಿದೆ. ಕಲಬುರಗಿ, ಚಿತ್ರದುರ್ಗ, ಕೋಲಾರ, ಚಿಕ್ಕಬಳ್ಳಾಪುರ, ಮಂಡ್ಯ, ಮೈಸೂರು, ತುಮಕೂರು, ಯಾದಗಿರಿ, ಜಿಲ್ಲೆಗಳಿಗೆ ಆರೆಂಜ್ ಅಲರ್ಟ್ ಘೋಷಿಸಲಾಗಿದೆ. ಈ ಜಿಲ್ಲೆಗಳಲ್ಲಿ ದೀರ್ಘಾವಧಿ ವರೆಗೆ ಸೂರ್ಯ ನಿಗೆ ಒಡ್ಡಿಕೊಳ್ಳುವ ಅಥವಾ ಕಷ್ಟಕರವಾದ ಕೆಲಸ ಮಾಡುವವರಲ್ಲಿ ಹೆಚ್ಚಿನ

ರಾಜ್ಯದಲ್ಲಿ ಬಿಸಿ ಗಾಳಿ ಹೆಚ್ಚಳ | ರೆಡ್, ಆರೆಂಜ್ ಅಲರ್ಟ್ ಘೋಷಣೆ | ಏಲ್ಲೆಲ್ಲಿ? Read More »

ಹಿರಿಯ ಯಕ್ಷಗಾನ ಕಲಾವಿದ ಗಂಗಾಧರ ಪುತ್ತೂರು ಹೃದಯಾಘಾತದಿಂದ ನಿಧನ

ಮಂಗಳೂರು: ಹಿರಿಯ ಕಲಾವಿದ, ಪುತ್ತೂರು ತಾಲೂಕಿನ ಕೋಡಿಂಬಾಡಿ ಗ್ರಾಮದ ಸೇಡಿಯಾಪು ನಿವಾಸಿ ಗಂಗಾಧರ ಪುತ್ತೂರು (59) ಉಡುಪಿ ಜಿಲ್ಲೆಯ ಕೋಟದಲ್ಲಿ ವೇಷ ಕಳಚುತ್ತಿರುವಾಗ ಹೃದಯಘಾತದಿಂದ ನಿಧನ ಹೊಂದಿದ್ದಾರೆ. ಸುಮಾರು 4 ದಶಕಗಳ ಕಾಲ ಯಕ್ಷ ರಂಗದಲ್ಲಿ ಸೇವೆ ಸಲ್ಲಿಸಿದ ಗಂಗಾಧರ ಪುತ್ತೂರು ಶ್ರೀ ಧರ್ಮಸ್ಥಳ ಯಕ್ಷಗಾನ ಮೇಳದಲ್ಲಿ 42 ವರ್ಷ ತಿರುಗಾಟ ನಡೆಸುತ್ತಿದ್ದರು. ಬುಧವಾರ ಕೋಟ ಗಾಂಧಿ ಮೈದಾನದಲ್ಲಿ ನಡೆದ ಯಕ್ಷಗಾನದಲ್ಲಿ ಧರ್ಮಸ್ಥಳ ಕ್ಷೇತ್ರ ಮಹಾತ್ಮೆಯ ಕುಕ್ಕಿತ್ತಾಯನ ವೇಷ ನಿರ್ವಹಿಸಿ, ಚೌಕಿಗೆ ಮರಳಿ ಕಿರೀಟ ಆಭರಣಗಳನ್ನು ತೆಗೆದಿಟ್ಟು

ಹಿರಿಯ ಯಕ್ಷಗಾನ ಕಲಾವಿದ ಗಂಗಾಧರ ಪುತ್ತೂರು ಹೃದಯಾಘಾತದಿಂದ ನಿಧನ Read More »

ವಿವೇಕಾನಂದ ಕಾಲೇಜು ಸಂಪರ್ಕ ರೈಲ್ವೇ ಮೇಲ್ಸೇತುವೆ ಕಾಮಗಾರಿ ಸಂಪೂರ್ಣ | ಸಂಸದ ನಳಿನ್ ಕುಮಾರ್ ಕಟೀಲ್ ರಿಂದ ವೀಕ್ಷಣೆ

ಪುತ್ತೂರು: ನೆಹರೂನಗರದಿಂದ ವಿವೇಕಾನಂದ ಕಾಲೇಜು ಕ್ಯಾಂಪಸ್ ಮೂಲಕ ಹಾರಾಡಿಗೆ ಸಂಪರ್ಕಿಸುವ ರಸ್ತೆಯ ರೈಲ್ವೇ ಮೇಲ್ಸೇತುವೆ ವಿಸ್ತರಣೆ ಹಾಗೂ ಅಭಿವೃದ್ಧಿ ಕಾಮಗಾರಿ ಸಂಪೂರ್ಣಗೊಂಡಿದ್ದು,  ಸಂಸದ ನಳಿನ್ ಕುಮಾರ್ ಕಟೀಲ್  ಬುಧವಾರ ಸಂಜೆ ಭೇಟಿ ನೀಡಿದರು. ಭಾರತ ಮಾತೆಗೆ ಪುಷ್ಪಾರ್ಚನೆ ಮಾಡಿದ ಬಳಿಕ ಸುಮಾರು 5.35 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣಗೊಂಡ ಮೇಲ್ಸೇತುವೆ ಕಾಮಗಾರಿ ವೀಕ್ಷಿಸಿದ ನಳಿನ್ ಕುಮಾರ್ ಮಾಧ್ಯಮಗಳ ಜತೆ ಮಾತನಾಡಿ, ಮೇಲ್ಸೇತುವೆ ಅಗಲಗೊಳಿಸಬೇಕೆಂಬುದು ಬಹು ಸಮಯಗಳ ಬೇಡಿಕೆಯಾಗಿತ್ತು. ದಿನಂಪ್ರತಿ ಸಾವಿರಾರು ವಿದ್ಯಾರ್ಥಿಗಳು ಸಂಚರಿಸುವ ಸೇತುವೆಯನ್ನು ಅಭಿವೃದ್ಧಿಪಡಿಸಬೇಕೆಂದು ವಿವೇಕಾನಂದ

ವಿವೇಕಾನಂದ ಕಾಲೇಜು ಸಂಪರ್ಕ ರೈಲ್ವೇ ಮೇಲ್ಸೇತುವೆ ಕಾಮಗಾರಿ ಸಂಪೂರ್ಣ | ಸಂಸದ ನಳಿನ್ ಕುಮಾರ್ ಕಟೀಲ್ ರಿಂದ ವೀಕ್ಷಣೆ Read More »

ನಿವೃತ್ತ ಲೋಕೋಪಯೋಗಿ ಇಲಾಖೆ ಉದ್ಯೋಗಿ ಜನಾರ್ದನ ನಿಧನ

ಪುತ್ತೂರು: ನಗರದ ಸಾಲ್ಮರ ನಿವಾಸಿ, ನಿವೃತ್ತ ಲೋಕೋಪಯೋಗಿ ಇಲಾಖೆ ಉದ್ಯೋಗಿ ಜನಾರ್ದನ (85) ಅಲ್ಪಕಾಲದ ಅಸೌಖ್ಯದಿಂದ ಮಂಗಳವಾರ ರಾತ್ರಿ ನಿಧನರಾದರು. ಲೋಕೋಪಯೋಗಿ ಇಲಾಖೆಯಲ್ಲಿ ಉದ್ಯೋಗಿಯಾಗಿ ಹಲವಾರು ವರ್ಷಗಳ ಕಾಲ ಕೆಲಸ ನಿರ್ವಹಿಸಿದ್ದು, ನಿವೃತ್ತಿ ಬಳಿಕ ಮನೆಯಲ್ಲಿದ್ದರು. ಮೃತರು ಪತ್ನಿ, ಅಪಾರ ಬಂಧು ಬಳಗದವರನ್ನು ಅಗಲಿದ್ದಾರೆ.

ನಿವೃತ್ತ ಲೋಕೋಪಯೋಗಿ ಇಲಾಖೆ ಉದ್ಯೋಗಿ ಜನಾರ್ದನ ನಿಧನ Read More »

ಪ್ಲಂಬರ್ ರಾಜೇಶ್ ಕುಮಾರ್ ನೇಣು ಬಿಗಿದು ಆತ್ಮಹತ್ಯೆ

ಕಡಬ : ಮೋಟಾರು ಸೈಕಲ್ ಗೆ ಮಾಡಿದ ಸಾಲವನ್ನು ಮರುಪಾವತಿ ಮಾಡಲಾಗದೇ ಜೀವನದಲ್ಲಿ ಜಿಗುಪ್ಪೆಹೊಂದಿ ಕಡಬ ಬೆಳಂದೂರಿನ ಪಟ್ಟೆ ಮನೆ ನಿವಾಸಿ ರಾಜೇಶ್ ಕುಮಾರ್ ಪಿ(37) ಆತ್ಮಹತ್ಯೆಗೆ ಶರಣಾಗಿದ್ದಾರೆ. ರಾಜೇಶ್, ಮನೆಯ ಕೊಟ್ಟಿಗೆಯ ಅಡ್ಡಕ್ಕೆ ನೈಲಾನ್ ಹಗ್ಗ ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ತಿಳಿದುಬಂದಿದೆ. ನಿನ್ನೆಯಷ್ಟೇ ಮೃತ ರಾಜೇಶ್ ಕುಮಾರ್ ಕುದ್ಮಾರಿನಲ್ಲಿರುವ ಸಹೋದರಿಯ ಮನೆಗೆ ತೆರಳಿದ್ದು ಸಂಜೆ ವೇಳೆಗೆ ಮನೆಗೆ ವಾಪಾಸಾಗಿದ್ದರು. ಪ್ಲಂಬಿಂಗ್ ಕೆಲಸ ಮಾಡಿಕೊಂಡಿದ್ದ ರಾಜೇಶ್ ಮನೆಯಲ್ಲಿ ಒಬ್ಬರೇ ವಾಸವಿದ್ದರು. ಇಂದು ಬೆಳಿಗ್ಗೆ ಚಿಕ್ಕಪ್ಪನ ಮಗ ಧನಂಜಯ್

ಪ್ಲಂಬರ್ ರಾಜೇಶ್ ಕುಮಾರ್ ನೇಣು ಬಿಗಿದು ಆತ್ಮಹತ್ಯೆ Read More »

ಉಪ್ಪಿನಂಗಡಿ :  ತಾಯಿ ಮಗು  ನಾಪತ್ತೆ

ಉಪ್ಪಿನಂಗಡಿ: ಪತಿ ಕೆಲಸಕ್ಕೆಂದು ಹೋದಾಗ ಪತ್ನಿ ಮಗು ನಾಪತ್ತೆಯಾಗಿರುವ ಘಟನೆ ಕೌಕ್ರಾಡಿ ಗ್ರಾಮದ ಕಟ್ಟೆ ಮಜಲಿನಲ್ಲಿ ನಡೆದಿದೆ. ನಾಪತ್ತೆಯಾದವರನ್ನು ಉತ್ತರ ಪ್ರದೇಶ ಮೂಲದ ಸೋನು ಸೋಂಕ‌ರ್ ಅವರ ಪತ್ನಿ ರೀಮಾ ಸೋಂಕರ್ (26) ಮತ್ತು ಮಗು ರಿಯಾ (1) ಎಂದು ಗುರುತಿಸಲಾಗಿದೆ. ಇಂಟಿರಿಯರ್ ಡೆಕೊರೇಟರ್ ಆಗಿ ಕಾರ್ಯನಿರ್ವಹಿಸುತ್ತಿದ್ದ ಸೋನು ಸೋಂಕರ್ ಉತ್ತರ ಪ್ರದೇಶದ ಅಜಾಮ್ ಘರ್ ಜಿಲ್ಲೆಯ ಅಮಹಾಮಾಫಿ ಗ್ರಾಮದ ನಿವಾಸಿಯಾಗಿದ್ದು, ಕೌಕ್ರಾಡಿಯಲ್ಲಿ ಕೃಷ್ಣಪ್ಪ ಎಂಬವರ ಬಾಡಿಗೆ ಮನೆಯಲ್ಲಿ ಕುಟುಂಬ ದೊಂದಿಗೆ ವಾಸವಿದ್ದರು. ಸೋನು ಸೋಂಕರ್ ಎ.22

ಉಪ್ಪಿನಂಗಡಿ :  ತಾಯಿ ಮಗು  ನಾಪತ್ತೆ Read More »

error: Content is protected !!
Scroll to Top