ಪಂಜ ಸೀಮೆಯ ದೇವಳದಲ್ಲಿ ಪ್ರತಿಷ್ಠಾ ವಾರ್ಷಿಕೋತ್ಸವ  | ಶೀಘ್ರ ಮಳೆಗಾಗಿ ವಿಶೇಷ ಪೂಜೆ

ಪಂಜ : ಪಂಜ ಸೀಮೆಯ ಶ್ರೀ ಪರಿವಾರ ಪಂಚಲಿಂಗೇಶ್ವರ ದೇವಸ್ಥಾನದಲ್ಲಿ ಪ್ರತಿಷ್ಠಾ ವಾರ್ಷಿಕೋತ್ಸವ  ಹಾಗೂ ಶೀಘ್ರ ಮಳೆಗಾಗಿ ವಿಶೇಷ ಪೂಜೆ ಬ್ರಹ್ಮಶ್ರೀ ಕೆಮ್ಮಿಂಜೆ ಶ್ರೀ ನಾಗೇಶ ತಂತ್ರಿಗಳ ನೇತೃತ್ವದಲ್ಲಿ ಮೇ.1 ರಂದು ಜರುಗಿತು. ಆ ಪ್ರಯುಕ್ತ 12 ಕಾಯಿ ಗಣಹವನ,ಆಶ್ಲೇಷ ಬಲಿ, ರುದ್ರ ಪಾರಾಯಣ, ಶತ ರುದ್ರಾಭಿಷೇಕ, ಸೀಯಾಳ ಅಭಿಷೇಕ, ಕಲಶಾಭಿಷೇಕ ಸೇವೆ ಗಳೊಂದಿಗೆ ಶೀಘ್ರ ಮಳೆಗಾಗಿ ಸಾಮೂಹಿಕ ಪ್ರಾರ್ಥನೆ ನಡೆಯಿತು.ಮಧ್ಯಾಹ್ನ ಮಹಾಪೂಜೆ ಪ್ರಸಾದ ವಿತರಣೆ, ಅನ್ನಸಂತರ್ಪಣೆ ನಡೆಯಿತು. ದೇವಳದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಡಾ.ದೇವಿಪ್ರಸಾದ್ ಕಾನತ್ತೂ‌ರ್, […]

ಪಂಜ ಸೀಮೆಯ ದೇವಳದಲ್ಲಿ ಪ್ರತಿಷ್ಠಾ ವಾರ್ಷಿಕೋತ್ಸವ  | ಶೀಘ್ರ ಮಳೆಗಾಗಿ ವಿಶೇಷ ಪೂಜೆ Read More »

ಬಾ‌ರ್ ಅಸೋಸಿಯೇಶನ್ ವಾರ್ಷಿಕ ದಿನಾಚರಣೆ | ವಕೀಲರ ಸಂಘದ ನೂತನ ಪದಗ್ರಹಣ ಕಾರ್ಯಕ್ರಮ

 ಪುತ್ತೂರು : ಪುತ್ತೂರು ಬಾ‌ರ್ ಅಸೋಸಿಯೇಶನ್ ವಾರ್ಷಿಕ ದಿನಾಚರಣೆ, ಅಭಿನಂದನಾ ಕಾರ್ಯಕ್ರಮ ಹಾಗೂ ಪುತ್ತೂರು ವಕೀಲರ ಸಂಘದ ನೂತನ ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮ ಮೇ.2 ರಂದು ಪುತ್ತೂರು ಬಾರ್ ಅಸೋಸಿಯೇಶನ್ ನ ಪರಾಶರ ಹಾಲ್ ನಲ್ಲಿ ನಡೆಯಲಿದೆ. ಹೈಕೋರ್ಟ್ ನ್ಯಾಯಾಧೀಶರಾದ ಎಸ್. ವಿಶ್ವಜಿತ್‌ ಶೆಟ್ಟಿ, ಹಿರಿಯ ವಕೀಲರಾದ ಎಂ. ರಾಮ್ ಮೋಹನ್ ರಾವ್, ಪಿಬಿಎ ಮಾಜಿ ಅಧ್ಯಕ್ಷರಾದ ಬಿ. ನಿರ್ಮಲ್ ಕುಮಾರ್ ಜೈನ್, ಪಿಬಿಎ ಅಧ್ಯಕ್ಷರಾದ ಜಗನ್ನಾಥ ಜಿ ಮುಖ್ಯ ಅತಿಥಿಗಳಾಗಿ ಆಗಮಿಸಲಿದ್ದಾರೆ. ಪದಾಧಿಕಾರಿಗಳ ಸಹಿತ ಹಲವು

ಬಾ‌ರ್ ಅಸೋಸಿಯೇಶನ್ ವಾರ್ಷಿಕ ದಿನಾಚರಣೆ | ವಕೀಲರ ಸಂಘದ ನೂತನ ಪದಗ್ರಹಣ ಕಾರ್ಯಕ್ರಮ Read More »

ಅಡ್ಯಾರ್ ಎಳನೀರಿನಲ್ಲಿ  ವಿಷಕಾರಿ ಅಂಶವಿಲ್ಲ ಆರೋಗ್ಯ ಇಲಾಖೆ ದೃಢ

ಮಂಗಳೂರು : ನಗರದ ಹೊರವಲಯದ ಅಡ್ಯಾರ್ ಬೊಂಡಾ ಫ್ಯಾಕ್ಟರಿಯಿಂದ ಖರೀದಿಸಿದ ಎಳನೀರು ಸೇವಿಸಿ ನೂರಾರು ಮಂದಿ ಅಸ್ವಸ್ಥಗೊಂಡ ಪ್ರಕರಣಕ್ಕೆ ಸಂಬಂಧಿಸಿ ಆರೋಗ್ಯ ಇಲಾಖೆಯು ಪರೀಕ್ಷೆಗಾಗಿ ಪ್ರಯೋಗಾಲಯಕ್ಕೆ ಕಳುಹಿಸಿರುವ ಎಳನೀರು ಸ್ಯಾಂಪಲ್‌ನ ಪರೀಕ್ಷಾ ವರದಿ ಹೊರ ಬಂದಿದ್ದು, ವಿಷಕಾರಿ ಅಂಶವಿಲ್ಲ ಎನ್ನುವುದು ವರದಿಯಿಂದ ತಿಳಿದು ಬಂದಿದೆ. ಎ.8ರಂದು ಬೊಂಡ ಫ್ಯಾಕ್ಟರಿಯಿಂದ ಖರೀದಿಸಲಾದ ಎಳನೀರು ಸೇವಿಸಿದ 138 ಮಂದಿ ಮರುದಿನ ಅನಾರೋಗ್ಯಕ್ಕೆ ಒಳಗಾಗಿ ಜಿಲ್ಲೆಯ ಹಲವು ಆಸ್ಪತ್ರೆಗಳಿಗೆ ದಾಖಲಾಗಿ ಚಿಕಿತ್ಸೆ ಪಡೆದಿದ್ದರು. ಈ ಪ್ರಕರಣ ಗಮನಕ್ಕೆ ಬಂದ ಹಿನ್ನಲ್ಲೆ ದ.ಕ.

ಅಡ್ಯಾರ್ ಎಳನೀರಿನಲ್ಲಿ  ವಿಷಕಾರಿ ಅಂಶವಿಲ್ಲ ಆರೋಗ್ಯ ಇಲಾಖೆ ದೃಢ Read More »

ಚೆನ್ನಾವರ ಉಳ್ಳಾಕುಲು ದೈವಸ್ಥಾನದಲ್ಲಿ ಇಂದು ಗಣಪತಿ ಹೋಮ, ಸಾರ್ವಜನಿಕ ಸತ್ಯನಾರಾಯಣ ಪೂಜೆ, ವರ್ಷಾವಧಿ ನೇಮೋತ್ಸವ

ಸವಣೂರು: ಕಡಬ ತಾಲೂಕಿನ ಪಾಲ್ತಾಡಿ ಗ್ರಾಮದ ಚೆನ್ನಾವರಗಡಿಗುತ್ತು ಶ್ರೀ ಉಳ್ಳಾಕುಲು ಮಾಡ, ಗ್ರಾಮ ದೈವ ಅಬ್ಬೆಜಲಾಯ ಹಾಗೂ ಸಪರಿವಾರ ದೈವಗಳ ದೈವಸ್ಥಾನದಲ್ಲಿ ಮೇ.1ರಂದು ವರ್ಷಾವಧಿ ನೇಮೋತ್ಸವ ನಡೆಯಲಿದೆ. ದೈವಸ್ಥಾನದಲ್ಲಿ ಇಂದು ಬೆಳಿಗ್ಗೆ 7.30ರಿಂದ ಗಣಹೋಮ, ನವಕ ಕಲಶ, ಬೆಳಿಗ್ಗೆ11ರಿಂದ ಸಾರ್ವಜನಿಕ ಶ್ರೀ ಸತ್ಯನಾರಾಯಣ ಪೂಜೆ ವಿಜೃಂಭಣೆಯಿಂದ ನಡೆದಿದೆ. ಮಧ್ಯಾಹ್ನ ಮಹಾಪೂಜೆ , ಪ್ರಸಾದ ವಿತರಣೆ, ಅನ್ನಸಂತರ್ಪಣೆ ನಡೆಯಲಿದೆ. ಸಂಜೆ 6.30ಕ್ಕೆ ಶ್ರೀ ದೈವಗಳ ಭಂಡಾರ ತೆಗೆಯುವುದು, ಅನ್ನಸಂತರ್ಪಣೆ. ರಾತ್ರಿ 11 ರಿಂದ ಉಳ್ಳಾಕುಲು ಹಾಗೂ ಸಪರಿವಾರ ದೈವಗಳ

ಚೆನ್ನಾವರ ಉಳ್ಳಾಕುಲು ದೈವಸ್ಥಾನದಲ್ಲಿ ಇಂದು ಗಣಪತಿ ಹೋಮ, ಸಾರ್ವಜನಿಕ ಸತ್ಯನಾರಾಯಣ ಪೂಜೆ, ವರ್ಷಾವಧಿ ನೇಮೋತ್ಸವ Read More »

ಕ್ಯಾಂಪ್ಕೋ ನೂತನ ವ್ಯವಸ್ಥಾಪಕ ನಿರ್ದೇಶಕರಾಗಿ ಡಾ| ಬಿ.ವಿ. ಸತ್ಯನಾರಾಯಣ ಆಯ್ಕೆ

ಮಂಗಳೂರು: ಪ್ರತಿಷ್ಠಿತ ಬಹುರಾಜ್ಯ ಸಹಕಾರಿ ಸಂಸ್ಥೆಯಾದ ಕ್ಯಾಂಪ್ಕೋದ ವ್ಯವಸ್ಥಾಪಕ ನಿರ್ದೇಶಕರಾದ ಹೆಚ್.ಎಮ್.ಕೃಷ್ಣಕುಮಾರ್ ಅವರ ಅಧಿಕಾರ ಅವಧಿ ಏ. 30ಕ್ಕೆ ಕೊನೆಗೊಂಡಿದ್ದು ಮೇ 1 ರಿಂದ ಅನ್ವಯವಾಗುವಂತೆ ಡಾ| ಬಿ.ವಿ. ಸತ್ಯನಾರಾಯಣ ಅವರನ್ನು ನೂತನ ವ್ಯವಸ್ಥಾಪಕ ನಿರ್ದೇಶಕರನ್ನಾಗಿ ನೇಮಕ ಮಾಡಲಾಗಿದೆ. ಕಳೆದ 50 ವರ್ಷಗಳಿಂದ ರೈತರ ಹಿತರಕ್ಷಕನಾಗಿ ಕಾರ್ಯನಿರ್ವಹಿಸುತ್ತಿರುವ ಕ್ಯಾಂಪ್ಕೋದ ಆಡಳಿತ ಮಂಡಳಿಯು, ಏ.23 ರಂದು ನಡೆದ ತನ್ನ ಮಂಡಳಿ ಸಭೆಯಲ್ಲಿ ಸಂಸ್ಥೆಯನ್ನು ಮುನ್ನಡೆಸುವ ಮಹತ್ತರ ಜವಾಬ್ದಾರಿಯನ್ನು ಡಾ| ಬಿ.ವಿ.ಸತ್ಯನಾರಾಯಣ ಅವರಿಗೆ ವಹಿಸುವ ನಿರ್ಣಯವನ್ನು ಅವಿರೋಧವಾಗಿ ತೆಗೆದುಕೊಂಡಿದೆ. ಡಾ| ಸತ್ಯನಾರಾಯಣ ಅವರು

ಕ್ಯಾಂಪ್ಕೋ ನೂತನ ವ್ಯವಸ್ಥಾಪಕ ನಿರ್ದೇಶಕರಾಗಿ ಡಾ| ಬಿ.ವಿ. ಸತ್ಯನಾರಾಯಣ ಆಯ್ಕೆ Read More »

ಮಂಡೆಕೋಲು ಮಹಾವಿಷ್ಣುಮೂರ್ತಿ ದೇವಸ್ಥಾನಕ್ಕೆ ಸಂಸದ, ಮಾಜಿ ಮುಖ್ಯಮಂತ್ರಿ ಡಿವಿಎಸ್ ಭೇಟಿ

ಸುಳ್ಯ: ಅಷ್ಟಬಂಧ ಪುನರ್ ಪ್ರತಿಷ್ಠಾ ಬ್ರಹ್ಮಕಲಶೋತ್ಸವದ ಶುಭವಸರದಲ್ಲಿರುವ ಮಂಡೆಕೋಲು ಶ್ರೀ ಮಹಾವಿಷ್ಣುಮೂರ್ತಿ ದೇವಸ್ಥಾನಕ್ಕೆ ಸಂಸದ, ಮಾಜಿ ಮುಖ್ಯಮಂತ್ರಿ ಡಿ.ವಿ ಸದಾನಂದ ಗೌಡ ಅವರು ಮಂಗಳವಾರ ಭೇಟಿ ನೀಡಿದರು. ದೇವಸ್ಥಾನಕ್ಕೆ ಭೇಟಿ ನೀಡಿ ಪ್ರಸಾದ ಸ್ವೀಕರಿಸಿ ವ್ಯವಸ್ಥೆಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರಲ್ಲದೆ ಸ್ವಯಂಸೇವಕರಾಗಿ ದುಡಿದ ಎಲ್ಲರೊಂದಿಗೂ ಮಾತನಾಡಿ ಖುಷಿಪಡಿಸಿದರು. ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ಕೇಶವಮೂರ್ತಿ ಹೆಬ್ಬಾರ್, ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷ ಸದಾನಂದ ಮಾವಜಿ, ಪ್ರಧಾನ ಕಾರ್ಯದರ್ಶಿ ರಾಮಚಂದ್ರ ಮಾಸ್ತರ್,  ಬ್ರಹ್ಮಕಲಶೋತ್ಸವ ಸಮಿತಿಯ ಆಧ್ಯಕ್ಷ ಶಿವಪ್ರಸಾದ್ ಉಗ್ರಾಣಿಮನೆ, ಪ್ರಧಾನ

ಮಂಡೆಕೋಲು ಮಹಾವಿಷ್ಣುಮೂರ್ತಿ ದೇವಸ್ಥಾನಕ್ಕೆ ಸಂಸದ, ಮಾಜಿ ಮುಖ್ಯಮಂತ್ರಿ ಡಿವಿಎಸ್ ಭೇಟಿ Read More »

ಇಂದು :  ಚೆನ್ನಾವರ ಉಳ್ಳಾಕುಲು ದೈವಸ್ಥಾನದಲ್ಲಿ ಸಾರ್ವಜನಿಕ ಸತ್ಯನಾರಾಯಣ ಪೂಜೆ,ವರ್ಷಾವಧಿ ನೇಮೋತ್ಸವ |ಕಾಪು ರಂಗ ತರಂಗ ಕಲಾವಿದರ ಅಭಿನಯದ ಒರಿಯೆ ನಾಟಕ ಪ್ರದರ್ಶನ

ಸವಣೂರು : ಕಡಬ ತಾಲೂಕಿನ ಪಾಲ್ತಾಡಿ ಗ್ರಾಮದ ಚೆನ್ನಾವರಗಡಿಗುತ್ತು ಶ್ರೀ ಉಳ್ಳಾಕುಲು ಮಾಡ ,ಗ್ರಾಮ ದೈವ ಅಬ್ಬೆಜಲಾಯ ಹಾಗೂ ಸಪರಿವಾರ ದೈವಗಳ ದೈವಸ್ಥಾನದಲ್ಲಿ ಮೇ.1ರಂದು ವರ್ಷಾವಧಿ ನೇಮೋತ್ಸವ ನಡೆಯಲಿದೆ. ದೈವಸ್ಥಾನದಲ್ಲಿ ಮೇ.1ರಂದು ಬೆಳಿಗ್ಗೆ 7.30ರಿಂದ ಗಣಹೋಮ, ನವಕ ಕಲಶ ,ಬೆಳಿಗ್ಗೆ11ರಿಂದ ಸಾರ್ವಜನಿಕ ಶ್ರೀ ಸತ್ಯನಾರಾಯಣ ಪೂಜೆ ,ಮಧ್ಯಾಹ್ನ ಮಹಾಪೂಜೆ ,ಪ್ರಸಾದ ವಿತರಣೆ ,ಅನ್ನಸಂತರ್ಪಣೆ ನಡೆಯಲಿದೆ.ಸಂಜೆ 6.30ಕ್ಕೆ ಶ್ರೀ ದೈವಗಳ ಭಂಡಾರ ತೆಗೆಯುವುದು, ಅನ್ನಸಂತರ್ಪಣೆ. ರಾತ್ರಿ 11 ರಿಂದ ಉಳ್ಳಾಕುಲು ಹಾಗೂ ಸಪರಿವಾರ ದೈವಗಳ ನೇಮೋತ್ಸವ ನಡೆಯಲಿದೆ. ಮೇ.2ರಂದು

ಇಂದು :  ಚೆನ್ನಾವರ ಉಳ್ಳಾಕುಲು ದೈವಸ್ಥಾನದಲ್ಲಿ ಸಾರ್ವಜನಿಕ ಸತ್ಯನಾರಾಯಣ ಪೂಜೆ,ವರ್ಷಾವಧಿ ನೇಮೋತ್ಸವ |ಕಾಪು ರಂಗ ತರಂಗ ಕಲಾವಿದರ ಅಭಿನಯದ ಒರಿಯೆ ನಾಟಕ ಪ್ರದರ್ಶನ Read More »

ಆರೋಗ್ಯ ರಕ್ಷಕರಿಗೆ ವೇತನ ಸಮಸ್ಯೆ |ಇನ್ನೂ ಬಾರದ ವೇತನ

ಆರೋಗ್ಯ ಕವಚ ಸಿಬ್ಭಂದಿಗಳಿಗೆ ಕಳೆದ ಹಲವು ತಿಂಗಳುಗಳಿಂದ ವೇತನವಾಗಿಲ್ಲ. 108 ಆ್ಯಂಬುಲೆನ್ಸ್ ಚಾಲಕ, ಶುಶ್ರೂಷಕರಿಗೆ ಕೂಡಾ ಸಂಬಳವಾಗಿಲ್ಲ. ಗ್ರಾಮೀಣ ಭಾಗದ ಜೀವ ರಕ್ಷಕರ ಸ್ಥಿತಿ ಪರದಾಡುವಂತಾಗಿದೆ. 108 ಸೇವೆಯು ಗ್ರಾಮೀಣ ಭಾಗದಲ್ಲಿ ಆರೋಗ್ಯ ರಕ್ಷಣೆಗಾಗಿ ಪರದಾಡುವ ವೇಳೆ ಜೀವ ಉಳಿಸುವ ಸೇವೆಯಾಗಿದೆ. ನಗರ ಪ್ರದೇಶಕ್ಕೂ  ಹಲವು ಅನುಕೂಲವಿದೆ. ಆದರೆ ಸಿಬ್ಭಂದಿಗಳು ಮಾತ್ರಾ ವೇತನವಿಲ್ಲದೆ ಪರದಾಡುತ್ತಿದ್ದಾರೆ. ಏಪ್ರಿಲ್ 8 ರಿಂದ 108 ಅಂಬುಲೆನ್ಸ್‌ ವಾಹನಗಳು ರಸ್ತೆಗೆ ಇಳಿಯುವುದಿಲ್ಲ ಎಂದು ಈ ಹಿಂದೆ ಎಚ್ಚರಿಕೆ ನೀಡಿದ್ದರು. ಸಾಮೂಹಿಕವಾಗಿ ರಜೆ ಹಾಕಲು 

ಆರೋಗ್ಯ ರಕ್ಷಕರಿಗೆ ವೇತನ ಸಮಸ್ಯೆ |ಇನ್ನೂ ಬಾರದ ವೇತನ Read More »

ಬೌದ್ಧಿಕತೆಯಷ್ಟೇ ದೈಹಿಕ ಕ್ಷಮತೆಯೂ ಮುಖ್ಯ : ಬಾಲಕೃಷ್ಣ ಬೋರ್ಕರ್| ಅಂಬಿಕಾ ಮಹಾವಿದ್ಯಾಲಯದ ವಾರ್ಷಿಕ ಕ್ರೀಡಾಕೂಟ ಉದ್ಘಾಟನೆ

ಪುತ್ತೂರು: ಬೌದ್ಧಿಕತೆಯಷ್ಟೇ ದೈಹಿಕ ಕ್ಷಮತೆಯೂ ಮುಖ್ಯ. ಆಧುನಿಕ ಶಿಕ್ಷಣ ಬೌದ್ಧಿಕತೆಗಷ್ಟೇ ಆದ್ಯತೆ ನೀಡುತ್ತಿದೆ. ಆದರೆ ದೈಹಿಕ ದೃಢತೆ ಸಾಧಿಸುವುದು ಅತ್ಯಂತ ಅಗತ್ಯ. ಕ್ರೀಡೆಗಳಲ್ಲಿ ತೊಡಗುವುದರಿಂದ ನಾವು ದೈಹಿಕವಾಗಿಯೂ ಸಮರ್ಥರೆನಿಸಿಕೊಳ್ಳಬಹುದು. ಶಾಲಾ ಕಾಲೇಜುಗಳಲ್ಲಿ ಅಧ್ಯಯನ ನಡೆಸುವ ವಿದ್ಯಾರ್ಥಿಗಳು ಅವಕಾಶಗಳನ್ನು ಸೃಜಿಸಿಕೊಂಡು ದೇಹಸಾಮರ್ಥ್ಯವನ್ನು ವೃದ್ಧಿಸಿಕೊಳ್ಳಬೇಕು ಎಂದು ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳ ಆಡಳಿತ ಮಂಡಳಿ ಸದಸ್ಯ ಬಾಲಕೃಷ್ಣ ಬೋರ್ಕರ್ ಹೇಳಿದರು. ಅವರು ಬಪ್ಪಳಿಗೆಯಲ್ಲಿನ ಅಂಬಿಕಾ ಮಹಾವಿದ್ಯಾಲಯದ ವಾರ್ಷಿಕ ಕ್ರೀಡಾಕೂಟ 2024 ಕೊಂಬೆಟ್ಟಿನ ತಾಲೂಕು ಕ್ರೀಡಾಂಗಣದಲ್ಲಿ ಉದ್ಘಾಟಿಸಿ ಮಾತನಾಡಿದರು. ಅಂಬಿಕಾ ಸಮೂಹ

ಬೌದ್ಧಿಕತೆಯಷ್ಟೇ ದೈಹಿಕ ಕ್ಷಮತೆಯೂ ಮುಖ್ಯ : ಬಾಲಕೃಷ್ಣ ಬೋರ್ಕರ್| ಅಂಬಿಕಾ ಮಹಾವಿದ್ಯಾಲಯದ ವಾರ್ಷಿಕ ಕ್ರೀಡಾಕೂಟ ಉದ್ಘಾಟನೆ Read More »

ಲೋಕಸಭೆ ಚುನಾವಣೆ ಪ್ರಕ್ರಿಯೆ ಸಂಪೂರ್ಣ : ನೀತಿ ಸಂಹಿತೆ ಸಡಿಲ

ಪುತ್ತೂರು: ಲೋಕಸಭೆ ಚುನಾವಣೆ ಹಿನ್ನಲೆಯಲ್ಲಿ ಜಾರಿಗೊಳಿಸಿದ ನೀತಿ ಸಂಹಿತೆ ಎಂದಿನಂತೆ ಇದ್ದರೂ ಕೆಲವೊಂದು ವಿಷಯಗಳಿಗೆ ನೀತಿ ಸಂಹಿತೆ ಸಡಿಲಿಕೆ ಮಾಡಲಾಗಿದೆ ಎಂದು ಪುತ್ತೂರು ಸಹಾಯಕ ಆಯುಕ್ತ ಜುಬಿನ್ ಮೊಹಪಾತ್ರ ಹೇಳಿದ್ದಾರೆ. ಮಂಗಳವಾರ ಸಹಾಯಕ ಆಯುಕ್ತರ ಕಚೇರಿಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, ಚುನಾವಣೆ ಶಾಂತಿಯುತವಾಗಿ ಮುಗಿದಿದೆ. ಮುಂದೆ ಜೂ.೪ರಂದು ಮತ ಎಣಿಕೆ ನಡೆಯಲಿದೆ. ಅಲ್ಲಿವರೆಗೂ ಅಥವಾ ಚುನಾವಣಾ ಆಯೋಗದ ನೊಟೀಸ್ ಬರುವವರೆಗೂ ನೀತಿ ಸಂಹಿತೆ ಜಾರಿಯಲ್ಲಿರಲಿದೆ. ಆದ್ದರಿಂದ ಸಾರ್ವಜನಿಕರು ಸಹಕರಿಸುವಂತೆ ಮನವಿ ಮಾಡಿದರು. ಖಾಸಗಿ ಕಾರ್ಯಕ್ರಮಗಳಾದ ಮದುವೆ

ಲೋಕಸಭೆ ಚುನಾವಣೆ ಪ್ರಕ್ರಿಯೆ ಸಂಪೂರ್ಣ : ನೀತಿ ಸಂಹಿತೆ ಸಡಿಲ Read More »

error: Content is protected !!
Scroll to Top