ಮನುಶ್ರೀ ದತ್ತಿ ಪ್ರಶಸ್ತಿಗೆ ಹಿರಿಯ ಲೇಖಕ ಪ.ರಾಮಕೃಷ್ಣ ಶಾಸ್ತ್ರಿ ಆಯ್ಕೆ

ಬೆಳ್ತಂಗಡಿ: 2024ರ ಮನುಶ್ರೀ ಕನ್ನಡ ಸಾಹಿತ್ಯ ಪರಿಷತ್ತಿನ  ಮನೋಹರಿ ಪಾರ್ಥಸಾರಥಿ ‘ಮನುಶ್ರೀ ’ ದತ್ತಿ ಪ್ರಶಸ್ತಿಗೆ  ಹಿರಿಯ ಲೇಖಕ ಪ.ರಾಮಕೃಷ್ಣ ಶಾಸ್ತ್ರಿಯವರನ್ನು ಆಯ್ಕೆ ಮಾಡಲಾಗಿದೆ. ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ಮನೋಹರಿ ಪಾರ್ಥಸಾರಥಿಯವರು ಈ ದತ್ತಿಯನ್ನು ಸ್ಥಾಪಿಸಿದ್ದು ಕನ್ನಡ ಸಾಹಿತ್ಯದಲ್ಲಿ  ಮಹತ್ವದ ಸೇವೆ ಸಲ್ಲಿಸಿದ ಬರಹಗಾರರಿಗೆ ಈ ಪುರಸ್ಕಾರವನ್ನು ನೀಡಲಾಗುತ್ತದೆ. ಬೆಳ್ತಂಗಡಿಯ ತೆಂಕಕಾರಂದೂರಿನವರಾದ ಪ.ರಾಮಕೃಷ್ಣ ಶಾಸ್ತ್ರಿಗಳು ಕನ್ನಡ ಸಾಹಿತ್ಯ ಕಂಡ ವಿಶಿಷ್ಟ ಲೇಖಕರು. ವೃತ್ತಿಯಲ್ಲಿ ಕೃಷಿಕರಾದ ಇವರು ಪ್ರವೃತ್ತಿಯಲ್ಲಿ ಸಾಹಿತ್ಯ ಕೃಷಿಕರು. 1964ರಿಂದ ಹಿಡಿದು ಇಂದಿನವರೆಗೂ ದಣಿವರಿಯದೆ  ನಿರಂತರವಾಗಿ […]

ಮನುಶ್ರೀ ದತ್ತಿ ಪ್ರಶಸ್ತಿಗೆ ಹಿರಿಯ ಲೇಖಕ ಪ.ರಾಮಕೃಷ್ಣ ಶಾಸ್ತ್ರಿ ಆಯ್ಕೆ Read More »

ಪ್ರಜ್ವಲ್ ರೇವಣ್ಣರಂತಹ ವ್ಯಕ್ತಿಗಳ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ತೆಗೆದುಕೊಳ್ಳುತ್ತೇವೆ | ವೀಡಿಯೋ ಜೆಡಿಎಸ್ ಪಕ್ಷ ಕಾಂಗ್ರೆಸ್‌ನೊಂದಿಗೆ ಮೈತ್ರಿ ಮಾಡಿಕೊಂಡಿದ್ದ ಅವಧಿಯದ್ದಾಗಿವೆ : ಪ್ರಧಾನಿ ಮೋದಿ

ಹೊಸದಿಲ್ಲಿ: ಪ್ರಜ್ವಲ್ ರೇವಣ್ಣ ಅವರದ್ದು ಎನ್ನಲಾಗಿರುವ ಅಶ್ಲೀಲ ವೀಡಿಯೊ  ಪ್ರಕರಣದ ಕುರಿತು ಪ್ರಧಾನಿ ನರೇಂದ್ರ ಮೋದಿ ಮೊದಲ ಬಾರಿಗೆ ಪ್ರತಿಕ್ರಿಯೆ ನೀಡಿದ್ದು, ಪ್ರಜ್ವಲ್ ರೇವಣ್ಣ ಅವರಂತಹ ವ್ಯಕ್ತಿಗಳ ವಿರುದ್ಧ ನಾವು ಶೂನ್ಯ ಸಹಿಷ್ಣುರಾಗಿದ್ದೇವೆ. ಅಂತಹ ವ್ಯಕ್ತಿಗಳಿಗೆ ಸಹನೆ ತೋರಬೇಕಾದ ಅಗತ್ಯ ಇಲ್ಲ. ನಿರ್ದಾಕ್ಷಿಣ್ಯವಾಗಿ ಕ್ರಮ ತೆಗೆದುಕೊಳ್ಳುತ್ತೇವೆ. ಆದರೆ ಕರ್ನಾಟಕದ ಕಾಂಗ್ರೆಸ್ ಸರ್ಕಾರವೇ  ಜೆಡಿಎಸ್ ಸಂಸದ ಪ್ರಜ್ವಲ್ ರೇವಣ್ಣ ಅವರನ್ನು ದೇಶದಿಂದ ಹೊರಗೆ ಹೋಗಲು ಅವಕಾಶ ಮಾಡಿಕೊಟ್ಟಿದೆ  ಎಂದು ಹೇಳಿದ್ದಾರೆ. ಪ್ರಜ್ವಲ್ ರೇವಣ್ಣ ಪ್ರಕರಣದ ಬಗ್ಗೆ ಮಾತನಾಡಿರುವ ಮೋದಿ,

ಪ್ರಜ್ವಲ್ ರೇವಣ್ಣರಂತಹ ವ್ಯಕ್ತಿಗಳ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ತೆಗೆದುಕೊಳ್ಳುತ್ತೇವೆ | ವೀಡಿಯೋ ಜೆಡಿಎಸ್ ಪಕ್ಷ ಕಾಂಗ್ರೆಸ್‌ನೊಂದಿಗೆ ಮೈತ್ರಿ ಮಾಡಿಕೊಂಡಿದ್ದ ಅವಧಿಯದ್ದಾಗಿವೆ : ಪ್ರಧಾನಿ ಮೋದಿ Read More »

ಮೊಬೈಲ್ ರಿಚಾರ್ಚ್‍ ಗೆ ಬಂದ ಯುವತಿಯ ಫೋಟೋ ಕ್ಲಿಕ್ಕಿಸಿದ ಅನ್ಯಕೋಮಿನ ಯುವಕ | ಪೊಲೀಸರಿಂದ ವಿಚಾರಣೆ | ಜಮಾಯಿಸಿದ ಹಿಂದೂ ಸಂಘಟನೆಯ ಕಾರ್ಯಕರ್ತರು

ಸುಳ್ಯ: ಏರ್ ಟೆಲ್ ಶೋ ರೋಂ ಗೆ ಕರೆನ್ಸಿ ರಿಚಾರ್ಚ್ ಗೆಂದು ಬಂದ ಯುವತಿಯೊಬ್ಬಳ ಫೋಟೋ ಕ್ಲಿಕ್ಕಿಸಿದ ಅನ್ಯಕೋಮಿನ ಯುವಕನ ಮೇಲೆ ವಿರುದ್ಧ ಯುವತಿಯ ಮನೆಯವರು ಪೋಲಿಸರಿಗೆ ದೂರು ನೀಡಿದ ಘಟನೆ ಇಂದು ನಡೆದಿದೆ. ಗಾಂಧಿನಗರದಲ್ಲಿರುವ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದ ಹಿಂದೂ ಯುವತಿಯೊಬ್ಬಳು ಮೊಬೈಲ್ ರಿಚಾರ್ಜ್ ಗೆ ಬಂದಾಗ ಯುವತಿಯನ್ನು ಕುಳಿತುಕೊಳ್ಳುವಂತೆ ಹೇಳಿದ್ದಾನೆ. ಈ ಸಂದರ್ಭ ಯುವಕ ಯುವತಿಗೆ ಅರಿವಿಗೆ ಬಾರದಂತೆ ಫೋಟೋ ಕ್ಲಿಕ್ಕಿಸಿರುತ್ತಾನೆ. ಗಮನಿಸಿದ ಯುವತಿ ಆಕ್ಷೇಪಿಸಿ ಆತನ ಕೈಯಿಂದ ಮೊಬೈಲ್ ಕಸಿದುಕೊಂಡು ಫೋಟೋ ಕ್ಲಿಕ್ಕಿಸಿದ್ದನ್ನು

ಮೊಬೈಲ್ ರಿಚಾರ್ಚ್‍ ಗೆ ಬಂದ ಯುವತಿಯ ಫೋಟೋ ಕ್ಲಿಕ್ಕಿಸಿದ ಅನ್ಯಕೋಮಿನ ಯುವಕ | ಪೊಲೀಸರಿಂದ ವಿಚಾರಣೆ | ಜಮಾಯಿಸಿದ ಹಿಂದೂ ಸಂಘಟನೆಯ ಕಾರ್ಯಕರ್ತರು Read More »

ಕಂಬಳತ್ತಡ್ಡದ 80 ಮನೆಗಳಿಗೆ ಕುಡಿಯುವ ನೀರಿನ ಕೊರತೆ l ಕೊಳವೆ ಬಾವಿ ತೆರೆಯಲು ಸ್ಥಳೀಯರಿಂದ ಆಕ್ಷೇಪl ಕಂದಾಯ ಅಧಿಕಾರಿಗಳು, ಪೊಲೀಸರ ನೇತೃತ್ವದಲ್ಲಿ ಸಮಸ್ಯೆ ಇತ್ಯರ್ಥ

ಪುತ್ತೂರು : ಸ್ಥಳೀಯರ ವಿರೋಧದ ನಡುವೆಯೂ ಕಂದಾಯ ಅಧಿಕಾರಿಗಳು ಹಾಗೂ ಪೊಲೀಸ್ ಸುಪರ್ದಿಯಲ್ಲಿ ಕೊಳವೆ ಬಾವಿ ತೋಡಿದ ಘಟನೆ ಸೋಮವಾರ ಆರ್ಯಾಪು ಗ್ರಾಮದ ಕಂಬಳತಡ್ಡದಲ್ಲಿ ನಡೆದಿದೆ.ಮಾಣಿ-ಮೈಸೂರು ಹೆದ್ದಾರಿಯಿಂದ ಒಂದು ಕಿ.ಮೀ. ಒಳರಸ್ತೆಯ ಆರ್ಯಾಪು ಗ್ರಾಮದ ಕಂಬಳತ್ತಡ್ಡ ಎಂಬಲ್ಲಿ ಒಂದು ಭಾಗದ ಸುಮಾರು 80 ಮನೆಗಳಿಗೆ ಕಳೆದ ಹಲವಾರು ಸಮಯಗಳಿಂದ ಕುಡಿಯಲು ನೀರಿಲ್ಲದೆ ತಮ್ಮ ಅಳಲನ್ನು ತೋಡಿಕೊಂಡಿದ್ದರು. ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸಿಕೊಂಡುವಂತೆ ಅಲ್ಲಿನ ನಿವಾಸಿಗಳು ಆರ್ಯಾಪು ಗ್ರಾಮ ಪಂಚಾಯಿತಿಗೆ ಮನವಿ ಮಾಡಿದ್ದರು. ಈ ಕುರಿತು ಗ್ರಾಪಂ ಪಿಡಿಒ

ಕಂಬಳತ್ತಡ್ಡದ 80 ಮನೆಗಳಿಗೆ ಕುಡಿಯುವ ನೀರಿನ ಕೊರತೆ l ಕೊಳವೆ ಬಾವಿ ತೆರೆಯಲು ಸ್ಥಳೀಯರಿಂದ ಆಕ್ಷೇಪl ಕಂದಾಯ ಅಧಿಕಾರಿಗಳು, ಪೊಲೀಸರ ನೇತೃತ್ವದಲ್ಲಿ ಸಮಸ್ಯೆ ಇತ್ಯರ್ಥ Read More »

ಮೇ 9 ಅಥವಾ 10ರಂದು ಎಸ್‌ಎಸ್‌ಎಲ್‌ಸಿ ಫಲಿತಾಂಶ ಪ್ರಕಟ ಸಾಧ್ಯತೆ

ಬೆಂಗಳೂರು : ಎಸ್‌ಎಸ್‌ಎಲ್‌ಸಿ ಪರೀಕ್ಷೆಯ ಫಲಿತಾಂಶ ಮೇ 9 ಅಥವಾ 10ರಂದು ಪ್ರಕಟವಾಗುವ ಸಾಧ್ಯತೆಯಿದೆ. ಎರಡನೇ ಹಂತದ ಚುನಾವಣೆ ಮೇ 7 ರಂದು ನಡೆಯಲಿರುವುದರಿಂದ ಪರೀಕ್ಷಾ ಫಲಿತಾಂಶ ಪ್ರಕಟ ವಿಳಂಬವಾಗುತ್ತಿದೆ.   ಇದೇ ವಾರ ಪ್ರಕಟವಾಗುವ ನಿರೀಕ್ಷೆ ಇದೆ ಎಂದು ಮೂಲಗಳು ತಿಳಿಸಿವೆ. ಆದರೆ, ಫಲಿತಾಂಶದ ದಿನಾಂಕವನ್ನು ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯಮಾಪನ ಮಂಡಳಿ ಇನ್ನೂ ಅಧಿಕೃತವಾಗಿ ಘೋಷಣೆ ಮಾಡಿಲ್ಲ. ಎಸ್‌ಎಸ್‌ಎಲ್‌ಸಿ ಪರೀಕ್ಷೆಯ ಫಲಿತಾಂಶ ಶಿಕ್ಷಣ ಇಲಾಖೆಯ ವೆಬ್‌ಸೈಟ್‌ನಲ್ಲಿ ಕೂಡ ಪ್ರಕಟವಾಗಲಿದೆ. ಜತೆಗೆ ಆಯಾ ಶಾಲೆಗಳಲ್ಲಿಯೂ

ಮೇ 9 ಅಥವಾ 10ರಂದು ಎಸ್‌ಎಸ್‌ಎಲ್‌ಸಿ ಫಲಿತಾಂಶ ಪ್ರಕಟ ಸಾಧ್ಯತೆ Read More »

ರಾಜಕಾರಣವನ್ನು ಪರಶುರಾಮನ ಮೇಲೆ ತೋರಿಸಬೇಡಿ l ಹಿಂದೂ ಹಿತರಕ್ಷಣೆ ಸಮಿತಿ ಸಂಚಾಲಕ ರತ್ನಾಕರ‌ ಅಮೀನ್ ಎಚ್ಚರಿಕೆ

ಕಾರ್ಕಳ : ಕರಾವಳಿಯು ಪರಶುರಾಮನ ಸೃಷ್ಟಿ, ಆದರೂ ಇಲ್ಲಿಯವರೆಗೆ ಕರಾವಳಿಯ ಯಾವುದೇ ಭಾಗದಲ್ಲೂ ಪರಶುರಾಮನ ಬಗೆಗಿನ ಇತಿಹಾಸವನ್ನು ಸಾರ್ವಜನಿಕರಿಗೆ ತೋರಿಸುವ ಯಾವುದೇ ಕಾರ್ಯಗಳು ಆಗಿರುವುದಿಲ್ಲ. ಈ ನಿಟ್ಟಿನಲ್ಲಿ ಕಾರ್ಕಳ ಶಾಸಕ ವಿ. ಸುನಿಲ್ ಕುಮಾ‌ರ್ ಅವರ ವಿಶಿಷ್ಟ ಕಲ್ಪನೆಯೇ ಬೈಲೂರಿನಲ್ಲಿ ನಿರ್ಮಾಣಗೊಂಡಿರುವ ಪರಶುರಾಮ ಥೀಮ್ ಪಾರ್ಕ್. ಪ್ರವಾಸೋದ್ಯಮ ದೃಷ್ಟಿಕೋನದಲ್ಲಿ ಅಭಿವೃದ್ಧಿಪಡಿಸಿದ ಥೀಮ್ ಪಾರ್ಕ್‌ಗೆ ಕಾಂಗ್ರೆಸ್ ನಾಯಕ ಮುನಿಯಾಲು ಉದಯ್ ಕುಮಾರ್ ಶೆಟ್ಟಿ ಅಡ್ಡಿಪಡಿಸುತ್ತಿರುವುದನ್ನು ಹಿಂದೂ ಹಿತರಕ್ಷಣಾ ಸಮಿತಿ ಖಡಾಖಂಡಿತವಾಗಿ ಖಂಡಿಸುತ್ತದೆ ಎಂದು ಸಮಿತಿಯ ಸಂಚಾಲಕ ರತ್ನಾಕ‌ರ್ ಅಮೀನ್

ರಾಜಕಾರಣವನ್ನು ಪರಶುರಾಮನ ಮೇಲೆ ತೋರಿಸಬೇಡಿ l ಹಿಂದೂ ಹಿತರಕ್ಷಣೆ ಸಮಿತಿ ಸಂಚಾಲಕ ರತ್ನಾಕರ‌ ಅಮೀನ್ ಎಚ್ಚರಿಕೆ Read More »

ಕರಾವಳಿಯಲ್ಲಿ ಬಿಸಿಗಾಳಿಯ ಎಚ್ಚರ | ಆರೆಂಜ್ ಅಲರ್ಟ್ ಘೋಷಣೆ

ಪುತ್ತೂರು : ಕರ್ನಾಟಕ ಕರಾವಳಿ ಯಲ್ಲಿ ಬಿಸಿಗಾಳಿಯ  ಎಚ್ಚರಿಕೆ ನೀಡಿದ್ದು ಭಾರತೀಯ ಹವಮಾನ ಇಲಾಖೆ ಆರೆಂಜ್ ಅಲರ್ಟ್ ಘೋಷಿಸಿದೆ. ಮೇ.6 ಮತ್ತು 7 ರಂದು ಹೀಟ್ ವೇವ್ ಅಪ್ಪಳಿಸಲಿದೆ ಎಂದು ಭಾರತೀಯ ಹವಮಾನ ಇಲಾಖೆ ಮಾಹಿತಿ ನೀಡಿದ್ದು 40ಡಿಗ್ರಿ ತಾಪಮಾನ ದಾಖಲಿಸಿದೆ. ಮೇ.6ರ ಮಧ್ಯಾಹ್ನ 1 ಗಂಟೆಯಿಂದ ಮೇ.7 ರ ವರೆಗೆ ಹೀಟ್ ವೇವ್ ಇರಲಿದೆ. ಕರ್ನಾಟಕದ ಕರಾವಳಿ, ಗುಜರಾತ್, ತೆಲಂಗಾಣ ಸಹಿತ ಹಲವು ಕಡೆ ಬಿಸಿ ಗಾಳಿಯ ಎಫೆಕ್ಟ್ ಇರಲಿದೆ. ಜನತೆ ಆದಷ್ಟು ಬಿಸಿ ಗಾಳಿಯ

ಕರಾವಳಿಯಲ್ಲಿ ಬಿಸಿಗಾಳಿಯ ಎಚ್ಚರ | ಆರೆಂಜ್ ಅಲರ್ಟ್ ಘೋಷಣೆ Read More »

ಮೇ 7 ರಿಂದ 12 ರ ತನಕ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಮಳೆ ! ಹವಾಮಾನ ಇಲಾಖೆ ಮುನ್ಸೂಚನೆ

ಬೆಂಗಳೂರು : ಬೆಂಗಳೂರು ಸೇರಿದಂತೆ ಮೇ7 ರಿಂದ 12 ತನಕ ಕರ್ನಾಟಕದ ಬಹುತೇಕ ಜಿಲ್ಲೆಗಳಲ್ಲಿ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ, ಬೀದ‌ರ್, ಗದಗ, ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಚಾಮರಾಜನಗರ, ಚಿಕ್ಕಬಳ್ಳಾಪುರ, ಹಾಸನ, ಕೋಲಾರ, ಮಂಡ್ಯ, ಮೈಸೂರು, ರಾಮನಗರ, ತುಮಕೂರು, ವಿಜಯನಗರದಲ್ಲಿ ಮಳೆಯಾಗಲಿದೆ. ಬೀದ‌ರ್, ಕೊಪ್ಪಳ, ರಾಯಚೂರು, ಯಾದಗಿರಿ, ವಿಜಯಪುರ, ಚಿಕ್ಕಮಗಳೂರು ಚಿತ್ರದುರ್ಗದಲ್ಲಿ ಮೇ 8ರ ಬಳಿಕ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

ಮೇ 7 ರಿಂದ 12 ರ ತನಕ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಮಳೆ ! ಹವಾಮಾನ ಇಲಾಖೆ ಮುನ್ಸೂಚನೆ Read More »

ವಿದ್ಯುತ್ ತಂತಿಗೆ ತಗುಲಿ ನವಿಲು ಸಾವು

ವಿಟ್ಲ: ವಿದ್ಯುತ್‌ ತಂತಿಗೆ ಸಿಲುಕಿ ನವಿಲೊಂದು ಮೃತಪಟ್ಟ ಘಟನೆ ಮಾಣಿ ಸಮೀಪದ ಬುಡೋಳಿ ಎಂಬಲ್ಲಿ ನಡೆದಿದೆ. ನವಿಲು ಮೃತಪಟ್ಟ ಬಗ್ಗೆ ಅಲ್ಲಿನ ಆಟೋ ರಿಕ್ಷಾ ಚಾಲಕರು ಅರಣ್ಯ ಇಲಾಖೆ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಆಗಮಿಸಿದ ಅರಣ್ಯ ಇಲಾಖೆಯ ಅಧಿಕಾರಿಗಳು ಮೃತ ನವಿಲನ್ನು ಸ್ಥಳದಿಂದ ಅನಂತಾಡಿ ಆರಣ್ಯ ಇಲಾಖೆಯ ಸಿಬ್ಬಂದಿಯವರಿಗೆ ಹಸ್ತಾಂತರ ಮಾಡಿದ್ದಾರೆ.

ವಿದ್ಯುತ್ ತಂತಿಗೆ ತಗುಲಿ ನವಿಲು ಸಾವು Read More »

ಛತ್ತೀಸ್‌ಗಢ ಕಾಂಗ್ರೆಸ್ ನಾಯಕಿ ರಾಧಿಕಾ ಖೇರ ‘ಕೈ’ ಗೆ ರಾಜೀನಾಮೆ

ಆಯೋಧ್ಯೆ: ಲೋಕಸಭೆ ಚುನಾವಣೆ ಹೊತ್ತಿನಲ್ಲೇ ಛತ್ತೀಸ್‌ಗಢ ಕಾಂಗ್ರೆಸ್ ನಾಯಕಿ ರಾಧಿಕಾ ಖೇರ ಕಾಂಗ್ರೆಸ್‌ಗೆ ರಾಜೀನಾಮೆ ನೀಡಿದ್ದಾರೆ. ನಾನು ರಾಮಮಂದಿರಕ್ಕೆ ಭೇಟಿ ನೀಡಿದ ಬಳಿಕ ಪಕ್ಷದಲ್ಲೇ ಟೀಕೆ ಮಾಡಲಾಗುತ್ತಿದೆ. ಜತೆಗೆ ಪಕ್ಷದಲ್ಲಿ ಪುರುಷರಿಗೆ ಹೆಚ್ಚಿನ ಆದ್ಯತೆ ನೀಡಲಾಗುತ್ತದೆ. ಹೆಣ್ಣುಮಕ್ಕಳಿಗೆ ಗೌರವ ನೀಡುತ್ತಿಲ್ಲ ಎಂದು ಆರೋಪಿಸಿ ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ್ದೇನೆ’ ಎಂಬುದಾಗಿ ರಾಧಿಕಾ ಖೇರ ತಿಳಿಸಿದ್ದಾರೆ. ಪ್ರತಿಯೊಬ್ಬ ಹಿಂದೂವಿಗೂ ರಾಮಮಂದಿರವು ಪವಿತ್ರ ಹಾಗೂ ಶ್ರದ್ಧಾ ಕೇಂದ್ರವಾಗಿದೆ. ಹಾಗಾಗಿ ನಾನು ರಾಮಮಂದಿರಕ್ಕೆ ಭೇಟಿ ನೀಡಿದೆ. ನಾನು ಕಾಂಗ್ರೆಸ್‌ಗೆ 22

ಛತ್ತೀಸ್‌ಗಢ ಕಾಂಗ್ರೆಸ್ ನಾಯಕಿ ರಾಧಿಕಾ ಖೇರ ‘ಕೈ’ ಗೆ ರಾಜೀನಾಮೆ Read More »

error: Content is protected !!
Scroll to Top