ಪುತ್ತೂರು ಜೆಸಿಐಯಿಂದ ಉಚಿತ ಇಲಾಖಾ ತರಬೇತಿ ಉದ್ಘಾಟನೆ

ಪುತ್ತೂರು: ಪುತ್ತೂರು ಜೆಸಿಐ ವತಿಯಿಂದ 2024ನೇ ಸಾಲಿನ ಉಚಿತ ಇಲಾಖಾ ತರಬೇತಿ ಉದ್ಘಾಟನೆಗೊಂಡಿತು. ಜೆಸಿಐ ಭಾರತದ ರಾಷ್ಟ್ರೀಯ ಸಂಯೋಜಕಿ, ನ್ಯಾಯವಾದಿ ಸ್ವಾತಿ ಜೆ.ರೈ ತರಬೇತಿ ಉದ್ಘಾಟಿಸಿ ಮಾತನಾಡಿ, ಸಮಾಜ ಸೇವೆ ಮಾಡುವುದು ತಂದೆ ತಾಯಿಯ ಋಣವನ್ನು ಸಂದಾಯ ಮಾಡಿದಂತೆ. ಉಚಿತ ತರಬೇತಿ ಶಿಬಿರದಲ್ಲಿ ಪಾಲ್ಗೊಂಡು ಅದರ ಪ್ರಯೋಜನ ಪಡೆದುಕೊಳ್ಳುವ ಮೂಲಕ ಸರಕಾರದ ಕೆಲಸ ದೇವರ ಕೆಲಸವೆಂದು ತಿಳಿದು ಭ್ರಷ್ಟಾಚಾರ ರಹಿತ ಸೇವೆ ಮಾಡಿ ಎಂದ ಅವರು, ಉಚಿತ ತರಬೇತಿ ವ್ಯವಸ್ಥೆ ಮಾಡಿದ ಜೆಸಿಐ ಸಂಸ್ಥೆಯ ಕಾರ್ಯ ಶ್ಲಾಘನೀಯ […]

ಪುತ್ತೂರು ಜೆಸಿಐಯಿಂದ ಉಚಿತ ಇಲಾಖಾ ತರಬೇತಿ ಉದ್ಘಾಟನೆ Read More »

ಮೇ 9-12 : ಎಸ್‍ ಪಿ ವೈ ಎಸ್ ಎಸ್‍ನಿಂದ ಜಿಲ್ಲಾ ಮಟ್ಟದ ‘ಯೋಗ ಪ್ರಶಿಕ್ಷಣ ಶಿಬಿರ’

ಪುತ್ತೂರು:  ಎಸ್ ಪಿ ವೈ ಎಸ್ ಎಸ್ ವತಿಯಿಂದ ಯೋಗಜೀವನ ದರ್ಶನ – 2024 ಜಿಲ್ಲಾ ಮಟ್ಟದ ಯೋಗ ಪ್ರಶಿಕ್ಷಣ ಶಿಬಿರ ಮೇ. 9 ರಿಂದ 12 ರವರೆಗೆ ನಡೆಯಲಿದ್ದು, ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯಲ್ಲಿ ಮೇ.9 ರಂದು ಉದ್ಘಾಟನೆಗೊಳ್ಳಲಿದೆ. ನಾಲ್ಕು ದಿನಗಳ ಕಾಲ ನಡೆಯುವ ಯೊಗ ಪ್ರಶಿಕ್ಷಣ ಶಿಬಿರ 10 ರಿಂದ 16 ವರ್ಷದ ಮಕ್ಕಳ ವಿಭಾಗ ಹಾಗೂ 17 ರಿಂದ 55 ವರ್ಷದ ಸಾಮಾನ್ಯ ವಿಭಾಗ ಎಂಬ ಎರಡು ವಿಭಾಗಗಳಲ್ಲಿ ನಡೆಯಲಿದೆ. ಮಕ್ಕಳ ವಿಭಾಗ

ಮೇ 9-12 : ಎಸ್‍ ಪಿ ವೈ ಎಸ್ ಎಸ್‍ನಿಂದ ಜಿಲ್ಲಾ ಮಟ್ಟದ ‘ಯೋಗ ಪ್ರಶಿಕ್ಷಣ ಶಿಬಿರ’ Read More »

ಪುತ್ತೂರು- ವಿಟ್ಲ ಸರಕಾರಿ ಬಸ್ ಸಂಚಾರ ರದ್ದು : ಪುನರಾರಂಭಿಸುವಂತೆ ಶಾಸಕರಿಗೆ ಮನವಿ

ಪುತ್ತೂರು: ಪುತ್ತೂರಿನಿಂದ ವಿಟ್ಲಕ್ಕೆ ಸಂಚರಿಸುತ್ತಿದ್ದ ಕೆಎಸ್ಆರ್ ಟಿಸಿ ಬಸ್ ಸಂಚಾರವನ್ನು ಕಳೆದ ನಾಲ್ಕು ತಿಂಗಳುಗಳಿಂದ ರದ್ದು ಮಾಡಲಾಗಿದ್ದು, ಬಸ್ ವ್ಯವಸ್ಥೆ ಪುನರಾರಂಭ ಮಾಡಬೇಕೆಂದು ವಿಟ್ಲ‌ ಭಾಗದ ವಕೀಲರು ಪುತ್ತೂರು ಶಾಸಕ ಅಶೋಕ್ ಕುಮಾರ್ ರೈಯವರಿಗೆ ಮನವಿ ‌ಮಾಡಿದರು. ಸಂಜೆ 7 ಮತ್ತು ಬೆಳಿಗ್ಗೆ ಬಿಸಿರೋಡಿಂದ ವಿಟ್ಲ ಮಾರ್ಗವಾಗಿ ಪುತ್ತೂರಿಗೆ ಬರುತ್ತಿದ್ದ ಬಸ್ಸು ಕಳೆದ ನಾಲ್ಕು ತಿಂಗಳಿನಿಂದ ಸಂಚಾರ ನಿಲ್ಲಿಸಲಾಗಿದೆ. ಈ ಬಗ್ಗೆ ಕೆಎಸ್ ಆರ್ ಟಿಸಿ ಅಧಿಕಾರಿಗಳ ಬಳಿ ಮಾಹಿತಿ ಪಡೆದ ಶಾಸಕರು ಎರಡು ದಿನದೊಳಗೆ ವ್ಯವಸ್ಥೆ

ಪುತ್ತೂರು- ವಿಟ್ಲ ಸರಕಾರಿ ಬಸ್ ಸಂಚಾರ ರದ್ದು : ಪುನರಾರಂಭಿಸುವಂತೆ ಶಾಸಕರಿಗೆ ಮನವಿ Read More »

ವ್ಯಕ್ತಿ ಆಸ್ಪತ್ರೆಗೆ ದಾಖಲು : ಗುರುತು ಪತ್ತೆಗೆ ಮನವಿ

ಸುಳ್ಯ : ಸುಳ್ಯ ಬಸ್ಸು ನಿಲ್ದಾಣದಲ್ಲಿ ವ್ಯಕ್ತಿಯೋರ್ವರು ಕುಸಿದು ಬಿದ್ದು ಪ್ರಜ್ಞಾಹೀನ ಸ್ಥಿತಿಯಲ್ಲಿ ಇದ್ದ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ವ್ಯಕ್ತಿಯ ಪರಿಚಯಕ್ಕಾಗಿ ಆಸ್ಪತ್ರೆಯಿಂದ  ಪೋಲಿಸ್ ಇಲಾಖೆಗೆ ದೂರು ಸಲ್ಲಿಸಲಾಗಿದೆ. ಪರಿಚಯ ಇದ್ದವರು ಇವರ ಗುರುತನ್ನು ತಿಳಿಸುವಂತೆ  ಮನವಿ ಮಾಡಿದ್ದಾರೆ.

ವ್ಯಕ್ತಿ ಆಸ್ಪತ್ರೆಗೆ ದಾಖಲು : ಗುರುತು ಪತ್ತೆಗೆ ಮನವಿ Read More »

ತವರು ರಾಜ್ಯ ಗುಜರಾತ್ ನಲ್ಲಿ ಮತ ಚಲಾಯಿಸಿದ ಪ್ರಧಾನಿ ಮೋದಿ

ಗಾಂಧೀನಗರ : ದೇಶದ ಸಾರ್ವತ್ರಿಕ ಚುನಾವಣೆಗೆ ಇಂದು ಮೂರನೇ ಹಂತದ ಮತದಾನ ನಡೆಯುತ್ತಿದ್ದು, ತವರು ರಾಜ್ಯವಾದ ಗುಜರಾತ್‌ನಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ ಹಕ್ಕು ಚಲಾಯಿಸಿದ್ದಾರೆ. ಗುಜರಾತ್‌ನ ಅಹಮದಾಬಾದ್‌ನಲ್ಲಿ ನಿಶಾನ್‌ ಹಿರಿಯ ಪ್ರಾಥಮಿಕ ಶಾಲೆಯಲ್ಲಿದ್ದ ಮತಗಟ್ಟೆಗೆ ತೆರಳಿ ಪ್ರಧಾನಿ ಮೋದಿ ಅವರು ಮತ ಚಲಾಯಿಸಿದ್ದಾರೆ. ಮಂಗಳವಾರ ಬೆಳಗ್ಗೆ ರಾಜಭವನದಿಂದ ಹೊರಟು ಪ್ರಧಾನಿ ಮತ ಚಲಾಯಿಸಿದರು. ಮತದಾನ ಮಾಡಿ ಬೆರಳು ತೋರಿಸಿ ಮತದಾನ ಮಾಡುವಂತೆ ಪ್ರೇರೇಪಿಸಿದರು. ಇಂದು ಲೋಕಸಭೆ ಚುನಾವಣೆಯ ಮೂರನೇ ಹಂತದ ಮತದಾನ ನಡೆಯಲಿದೆ. ಕರ್ನಾಟಕದಲ್ಲಿ

ತವರು ರಾಜ್ಯ ಗುಜರಾತ್ ನಲ್ಲಿ ಮತ ಚಲಾಯಿಸಿದ ಪ್ರಧಾನಿ ಮೋದಿ Read More »

ಬಾವಿಗೆ ಬಿದ್ದ ನಾಯಿಯನ್ನು ರಕ್ಷಿಸಿದ ಅಗ್ನಿಶಾಮಕ ತಂಡ

ಬಂಟ್ವಾಳ:  ಬಂಟ್ವಾಳ ಪಾಳು ಬಾವಿಗೆ ಬಿದ್ದ ನಾಯಿಯನ್ನು ಅಗ್ನಿಶಾಮಕ ದಳದವರು ರಕ್ಷಿಸಿದ ಘಟನೆ ಇಂದು ಬೆಳಗ್ಗೆ ಮೊಡಂಕಾಪಿನ ಗಾಂದೋಡಿ ಬಳಿ ನಡೆದಿದೆ. ಸ್ಥಳೀಯರ ಮಾಹಿತಿ ಪ್ರಕಾರ ನಾಯಿಯು ಕಳೆದ ಮೂರು ದಿನಗಳ ಹಿಂದೆ ಬಾವಿಗೆ ಬಿದ್ದಿದ್ದು, ಬಾವಿಯನ್ನು ಯಾರೂ ಉಪಯೋಗಿಸದ ಹಿನ್ನೆಲೆಯಲ್ಲಿ ನಾಯಿ ಬಿದ್ದಿರುವುದು ಗಮನಕ್ಕೆ ಬಂದಿರಲಿಲ್ಲ. ಆದರೆ ಇಂದು ನಾಯಿ ಬಾವಿಯಲ್ಲಿರುವುದು ಗೊತ್ತಾಗಿದ್ದು, ಗಾಂದೋಡಿ ನಿವಾಸಿ ವಿಶ್ವನಾಥ ಶೆಟ್ಟಿ ಅವರು ಪೊಲೀಸ್ 100 ಸಂಖ್ಯೆಗೆ ಕರೆ ಮಾಡಿ  ಬಳಿಕ ಅವರು  ಅಗ್ನಿಶಾಮಕ ದಳದವರಿಗೆ ಮಾಹಿತಿ ನೀಡಿದ್ದಾರೆ.

ಬಾವಿಗೆ ಬಿದ್ದ ನಾಯಿಯನ್ನು ರಕ್ಷಿಸಿದ ಅಗ್ನಿಶಾಮಕ ತಂಡ Read More »

ಮಂಗಳೂರು ವೆನ್ಲಾಕ್ ಆಸ್ಪತ್ರೆಯಲ್ಲಿ ವಿಚಾರಣಾಧೀನ ಖೈದಿ ಆತ್ಮಹತ್ಯೆ

ಮಂಗಳೂರು: ವೆನ್ಲಾಕ್ ಆಸ್ಪತ್ರೆಗೆ ದಾಖಲಾಗಿದ್ದ ವಿಚಾರಣಾಧೀನ ಕೈದಿಯೊಬ್ಬ ಆಸ್ಪತ್ರೆ ಕೊಠಡಿಯಲ್ಲಿ ನೇಣು ಬಿಗಿದುಕೊಂಡು ಸಾವಿಗೆ ಶರಣಾಗಿದ್ದಾನೆ. ಮಂಜೇಶ್ವರ ಬಂದ್ಯೋಡು ನಿವಾಸಿ ಮಹಮ್ಮದ್ ನೌಫಾಲ್ (24) ಮೃತ ಕೈದಿ. 2022ರ ಡಿಸೆಂಬರ್ ನಲ್ಲಿ ನೌಫಾಲ್ ಎನ್ ಡಿಪಿಎಸ್ ಕಾಯ್ದೆಯಡಿ ಕೋಣಾಜೆ ಪೊಲೀಸರಿಂದ ಬಂಧನಕ್ಕೀಡಾಗಿದ್ದ. ಆನಂತರ ಮಂಗಳೂರು ಜೈಲಿನಲ್ಲೇ ಇದ್ದು ಯುವಕನ ಪರವಾಗಿ ಜಾಮೀನು ಕೊಡಿಸುವುದಕ್ಕೂ ಯಾರೂ ಬಂದಿರಲಿಲ್ಲ. ಈತ ಜೈಲಿನಲ್ಲಿ ಮಾನಸಿಕ ಅಸ್ವಸ್ಥನಂತೆ  ವರ್ತಿಸುತ್ತಿದ್ದ ಕಾರಣಕ್ಕೆ ನೌಫಾಲ್ ನನ್ನು ಚಿಕಿತ್ಸೆಗೆಂದು ಮಂಗಳೂರಿನ ವೆನ್ಹಾಕ್ ಆಸ್ಪತ್ರೆಯಲ್ಲಿ ದಾಖಲು ಮಾಡಲಾಗಿತ್ತು. ಮೇ

ಮಂಗಳೂರು ವೆನ್ಲಾಕ್ ಆಸ್ಪತ್ರೆಯಲ್ಲಿ ವಿಚಾರಣಾಧೀನ ಖೈದಿ ಆತ್ಮಹತ್ಯೆ Read More »

ಉಪ್ಪಿನಂಗಡಿ ಮೂಲದ ವ್ಯಕ್ತಿಯ ರಕ್ತಸಿಕ್ತ ಶವ ಪತ್ತೆ

ಬಂಟ್ವಾಳ : ಬಂಟವಾಳದ ಪ್ರತಿಷ್ಠಿತ ಮದುವೆ ಸಭಾಂಗಣದ ಅವರಣದಲ್ಲಿ ವ್ಯಕ್ತಿಯೋರ್ವನ ಮೃತದೇಹ ಪತ್ತೆಯಾಗಿದೆ. ಉಪ್ಪಿನಂಗಡಿ ವಳಾಲು ಮೂಲದ ಸಂತೋಷ್ ಎಂಬವರ ಶವ ಇದಾಗಿದ್ದು,  ತಲಪಾಡಿಯಲ್ಲಿರುವ ಬಂಟವಾಳದ ಬಂಟರ ಭವನದ ಕಂಪೌಂಡ್ ಒಳಗಡೆಯಲ್ಲಿ ರಕ್ತಸಿಕ್ತವಾಗಿ ಬಿದ್ದುಕೊಂಡಿರುವ ರೀತಿಯಲ್ಲಿ ಪತ್ತೆಯಾಗಿದೆ. ಬಂಟರ ಭವನದ ಹೊರಗಡೆಯಲ್ಲಿ ಈತನ ಸೇರಿದ ಬೈಕ್ ನಿಲ್ಲಿಸಿದ ಸ್ಥಿತಿಯಲ್ಲಿ ಪತ್ತೆಯಾಗಿದೆ. ಸಾವಿಗೆ ನಿಖರವಾದ ಕಾರಣ ಗೊತ್ತಾಗಿಲ್ಲವಾದರೂ ಪೋಲೀಸ್ ಮೂಲಗಳ ಪ್ರಕಾರ ಈತ ಬೈಕ್ ನಿಲ್ಲಿಸಿ ಕಂಪೌಂಡ್ ಮೇಲೆ ಕುಳಿತು ಕೊಂಡಿರಬೇಕು. ಅ ಸಂದರ್ಭದಲ್ಲಿ ನಿಯಂತ್ರಣ ಕಳೆದು ಕೆಳಗೆ

ಉಪ್ಪಿನಂಗಡಿ ಮೂಲದ ವ್ಯಕ್ತಿಯ ರಕ್ತಸಿಕ್ತ ಶವ ಪತ್ತೆ Read More »

ವಿವೇಕಾನಂದ ಎಂಜಿನಿಯರಿಂಗ್ ಕಾಲೇಜಿನ ಡಾಟಾ ಸೈನ್ಸ್ ವಿಭಾಗ ಮುಖ್ಯಸ್ಥರಾಗಿ ಪ್ರೊ.ರೂಪಾ ಜಿ.ಕೆ. ಪದ ಸ್ವೀಕಾರ

ಪುತ್ತೂರು: ವಿವೇಕಾನಂದ ಕಾಲೇಜ್ ಆಫ್ ಎಂಜಿನಿಯರಿಂಗ್ ಎಂಡ್ ಟೆಕ್ನಾಲಜಿಯ ಕಂಪ್ಯೂಟರ್ ಸೈನ್ಸ್ ಎಂಡ್ ಎಂಜಿನಿಯರಿಂಗ್ (ಡಾಟಾ ಸೈನ್ಸ್) ವಿಭಾಗದ ಮುಖ್ಯಸ್ಥರಾಗಿ ಪ್ರೊ.ರೂಪಾ.ಜಿ.ಕೆ ಪದ ಸ್ವೀಕಾರ ಮಾಡಿದ್ದಾರೆ. 19 ವರ್ಷಗಳ ಅಧ್ಯಾಪನದ ಅನುಭವವನ್ನು ಹೊಂದಿರುವ ಅವರು ಆರ್ಟಿಫೀಶಿಯಲ್ ಇಂಟೆಲಿಜೆನ್ಸ್ ಎಂಡ್ ಮೆಷಿನ್ ಲರ್ನಿಂಗ್, ನಾಚುರಲ್ ಲೇಂಗ್ವೇಜ್ ಪ್ರಾಸೆಸಿಂಗ್, ಬಿಗ್ ಡೇಟಾ ಎನಲಿಟಿಕ್ಸ್ ಮುಂತಾದ ವಿಷಯಗಳ ಬಗ್ಗೆ ಅಪಾರ ತಿಳುವಳಿಕೆಯನ್ನು ಹೊಂದಿದ್ದಾರೆ. ಪ್ರಸ್ತುತ ಸುರತ್ಕಲ್ಲಿನ ಎನ್‌ಐಟಿಕೆಯಲ್ಲಿ ನಾಚುರಲ್ ಲೇಂಗ್ವೇಜ್ ಪ್ರಾಸೆಸಿಂಗ್ ವಿಷಯದಲ್ಲಿ ಪಿಎಚ್‌ಡಿ ಮಾಡುತ್ತಿದ್ದಾರೆ. ಅವರು ಬರೆದಿರುವ 10 ಕ್ಕೂ

ವಿವೇಕಾನಂದ ಎಂಜಿನಿಯರಿಂಗ್ ಕಾಲೇಜಿನ ಡಾಟಾ ಸೈನ್ಸ್ ವಿಭಾಗ ಮುಖ್ಯಸ್ಥರಾಗಿ ಪ್ರೊ.ರೂಪಾ ಜಿ.ಕೆ. ಪದ ಸ್ವೀಕಾರ Read More »

ಭೀಕ್ಷಂದೇಹಿ ಮೂಲಕ ಸಂಗ್ರಹಿಸಿದ ಧನ ಸಹಾಯ ಹಸ್ತಾಂತರ

ಪುತ್ತೂರು : ಬಾರ್ದಿಲ ಸಾಂಭಸದಾಶಿವ ದೇವಸ್ಥಾನದಲ್ಲಿ ಭವತಿ ಭೀಕ್ಷಂದೇಹಿ ಮೂಲಕ ಸಂಗ್ರಹಿಸಿದ ಧನ ಸಹಾಯವನ್ನು ಫಲಾನುಭವಿಗೆ ಹಸ್ತಾಂತರಿಸಲಾಯಿತು. ಭೀಕ್ಷಂದೇಹಿ ಮೂಲಕ ಸಂಗ್ರಹಿಸಲಾದ ಒಟ್ಟು 25,557 ಮೊತ್ತವನ್ನು ಇಂದು ಮಗುವಿನ ಹೆತ್ತವರಿಗೆ ಹಸ್ತಾಂತರ ಮಾಡಲಾಯಿತು. ಈ ಸಂದರ್ಭದಲ್ಲಿ ದೇವಸ್ಥಾನ ಆಡಳಿತ ಮಂಡಳಿಯ ಸದಸ್ಯರು, ಕುಪ್ಪೆಪದವು ರಾಮ್ ಸೇನಾ ವಾಯುಪುತ್ರ ಘಟಕ ಕಾರ್ಯಕರ್ತರು ಉಪಸ್ಥಿತರಿದ್ದರು. ಭವತಿ ಭೀಕ್ಷಂದೇಹಿಗೆ ಅವಕಾಶ ಮಾಡಿಕೊಟ್ಟ ಆಡಳಿತ ಮಂಡಳಿಗೆ ಹಾಗೂ ಧನ ಸಹಾಯ ನೀಡಿ ಸಹಕರಿಸಿದವರಿಗೆ ಘಟಕದ ಕಾರ್ಯಕರ್ತರು ಧನ್ಯವಾದ ಸಲ್ಲಿಸಿದ್ದಾರೆ.

ಭೀಕ್ಷಂದೇಹಿ ಮೂಲಕ ಸಂಗ್ರಹಿಸಿದ ಧನ ಸಹಾಯ ಹಸ್ತಾಂತರ Read More »

error: Content is protected !!
Scroll to Top