ಬುರುಡೆ ಗ್ಯಾಂಗ್‌ ವಿರುದ್ಧವೇ ಚಿನ್ನಯ್ಯ ದೂರು

ತಿಮರೋಡಿ, ಮಟ್ಟಣ್ಣವರ್‌ನಿಂದ ಜೀವ ಬೆದರಿಕೆ ಇದೆ ಎಂದು ದೂರು ಮಂಗಳೂರು: ಧರ್ಮಸ್ಥಳ ಷ್ಯಡ್ಯಂತ್ರ ಪ್ರಕರಣದ ಪ್ರಮುಖ ಬುರುಡೆ ಮ್ಯಾನ್ ಚಿನ್ನಯ್ಯ ಬುರುಡೆ ಗ್ಯಾಂಗ್‌ ವಿರುದ್ಧವೇ ತಿರುಗಿಬಿದ್ದಿದ್ದಾನೆ. 2 ದಿನಗಳ ಹಿಂದೆಯಷ್ಟೇ ಶಿವಮೊಗ್ಗದ ಕಾರಾಗೃಹದಿಂದ ಬಿಡುಗಡೆಯಾಗಿರುವ ಚಿನ್ನಯ್ಯ, ಜೀವ ರಕ್ಷಣೆ ಕೋರಿ ಬುರುಡೆ ಗ್ಯಾಂಗ್‌ ವಿರುದ್ಧ ದೂರು ನೀಡಿದ್ದಾನೆ. ಬುರುಡೆ ಗ್ಯಾಂಗ್‌ನ ಮಹೇಶ್ ಶೆಟ್ಟಿ ತಿಮರೋಡಿ, ಗಿರೀಶ್ ಮಟ್ಟಣ್ಣವರ್, ವಿಠಲ್ ಗೌಡ, ಜಯಂತ್ ಟಿ, ಯೂಟ್ಯೂಬರ್‌ ಸಮೀರ್ ವಿರುದ್ಧ ಬೆಳ್ತಂಗಡಿ ಪೊಲೀಸ್ ಠಾಣೆಗೆ ದೂರು ನೀಡಿದ್ದಾನೆ. ತನಗೆ ಹಾಗೂ […]

ಬುರುಡೆ ಗ್ಯಾಂಗ್‌ ವಿರುದ್ಧವೇ ಚಿನ್ನಯ್ಯ ದೂರು Read More »

ಮಲಯಾಳಂ ಚಿತ್ರರಂಗದ ಖ್ಯಾತ ನಟ ಶ್ರೀನಿವಾಸನ್‌ ನಿಧನ

225ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದ ನಟ, ನಿರ್ಮಾಪಕ, ನಿರ್ದೇಶಕ ಕೊಚ್ಚಿ : ಖ್ಯಾತ ಮಲಯಾಳಂ ನಟ, ನಿರ್ದೇಶಕ ಶ್ರೀನಿವಾಸನ್ ಇಂದು ನಿಧನ ಹೊಂದಿದ್ದಾರೆ. ಅವರಿಗೆ 69 ವರ್ಷ ವಯಸ್ಸಾಗಿತ್ತು. ಹಲವು ವರ್ಷಗಳಿಂದ ಅವರು ವಿವಿಧ ಕಾಯಿಲೆಯಿಂದ ಬಳಲುತ್ತಿದ್ದರು. ಅವರು ಕೇರಳದ ಉದಯಂಪೆರೂರ್​​ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ನಿಧನ ಹೊಂದಿದ್ದಾರೆ. ಶ್ರೀನಿವಾಸನ್ ಅವರಿಗೆ ಕೆಲವು ಅನಾರೋಗ್ಯ ಸಮಸ್ಯೆಗಳು ಇದ್ದವು. ಕಳೆದ ಕೆಲ ವರ್ಷಗಳಿಂದ ಅವರ ಆರೋಗ್ಯ ಹದಗೆಟ್ಟಿತ್ತು. ಹೀಗಾಗಿ, ಸಿನಿಮಾ ರಂಗದಲ್ಲಿ ಅವರು ಅಷ್ಟಾಗಿ ಆ್ಯಕ್ಟೀವ್

ಮಲಯಾಳಂ ಚಿತ್ರರಂಗದ ಖ್ಯಾತ ನಟ ಶ್ರೀನಿವಾಸನ್‌ ನಿಧನ Read More »

ಎವಿಜಿ ಇಂಗ್ಲೀಷ್ ಮೀಡಿಯಂ ಸ್ಕೂಲ್’ನಲ್ಲಿ ವಾರ್ಷಿಕ ಕ್ರೀಡಾಕೂಟ

ಪುತ್ತೂರು: ಇಲ್ಲಿನ ಕೃಷ್ಣನಗರದ ಅಲುಂಬುಡದಲ್ಲಿರುವ ಎವಿಜಿ ಇಂಗ್ಲೀಷ್ ಮೀಡಿಯಂ ಸ್ಕೂಲ್’ನಲ್ಲಿ 2025ಗೆ 26ನೇ ಸಾಲಿನ ವಾರ್ಷಿಕ ಕ್ರೀಡಾಕೂಟ ವಿಜೃಂಭಣೆಯಿಂದ ಜರುಗಿತು. ನಿವೃತ್ತ ಜಿಲ್ಲಾ ದೈಹಿಕ ಶಿಕ್ಷಣ ಪರಿವೀಕ್ಷಕ ನಾಯ್ತೊಟ್ಟು ಸುಂದರ ಗೌಡರು ಕ್ರೀಡಾಕೂಟವನ್ನು ಉದ್ಘಾಟಿಸಿದರು. ಮಾತನಾಡುತ್ತಾ ಅವರು ನಿರಂತರ ಸಾಧನೆ ನಿಮ್ಮನ್ನು ಅಂತಾರಾಷ್ಟ್ರೀಯ ಮಟ್ಟದ ತನಕ ಕೊಂಡೊಯ್ಯಬಲ್ಲದು ಮತ್ತು ಅದಕ್ಕೆ ಬೇಕಾದ ಸಂಪೂರ್ಣ ಬೆಂಬಲ ನೀಡುವ ಸಾಮರ್ಥ್ಯ ಎವಿಜಿ ಇಂಗ್ಲೀಷ್ ಮೀಡಿಯಂ ಸ್ಕೂಲ್’ಗಿದೆ ಎಂದರು. ಇದೇ ಸಂದರ್ಭದಲ್ಲಿ ಅವರನ್ನು ಸನ್ಮಾನಿಸಲಾಯಿತು. ಮುಖ್ಯ ಅತಿಥಿಯಾಗಿದ್ದ ಆದರ್ಶ ಕೃಷಿಕ ಮತ್ತು

ಎವಿಜಿ ಇಂಗ್ಲೀಷ್ ಮೀಡಿಯಂ ಸ್ಕೂಲ್’ನಲ್ಲಿ ವಾರ್ಷಿಕ ಕ್ರೀಡಾಕೂಟ Read More »

3 ಕೋಟಿ ಇನ್ಶೂರೆನ್ಸ್‌ ಹಣಕ್ಕಾಗಿ ತಂದೆಯನ್ನೇ ಹಾವು ಕಚ್ಚಿಸಿ ಕೊಂದ ಪಾಪಿ ಮಕ್ಕಳು

ಎಸ್‌ಐಟಿ ತನಿಖೆಯಲ್ಲಿ ಬಯಲಾದ ಆಕಸ್ಮಿಕ ಸಾವಿನ ಪ್ರಕರಣದ ರಹಸ್ಯ ಚೆನ್ನೈ: ತಿರುವಲ್ಲೂರು ಜಿಲ್ಲೆಯಲ್ಲಿ ಮಕ್ಕಳೇ ಇನ್ಶೂರೆನ್ಸ್ ಹಣಕ್ಕಾಗಿ ಹುಟ್ಟಿಸಿದ ತಂದೆಯನ್ನು ಹಾವು ಕಚ್ಚಿಸಿ ಕೊಂದಿರುವ ಆಘಾತಕಾರಿ ಘಟನೆ ತಮಿಳುನಾಡಿನ ತಿರುವಲ್ಲೂರು ಜಿಲ್ಲೆಯಲ್ಲಿ ಸಂಭವಿಸಿದೆ. ಎಸ್‌ಐಟಿ ತನಿಖೆಯಲ್ಲಿ ಮಕ್ಕಳಿಬ್ಬರು ಮಾಡಿದ ಹತ್ಯೆ ಸಂಚು ಬಯಲಾಗಿದೆ. ಆರಂಭದಲ್ಲಿ ಇದು ಹಾವು ಕಡಿತದಿಂದ ಆಗಿರುವ ಸಹಜ ಪ್ರಕರಣ ಅಂತ ಭಾವಿಸಲಾಗಿತ್ತು. ಆದರೆ ಇನ್ಶೂರೆನ್ಸ್ ಕಂಪನಿ ಹಣ ನೀಡುವ ಪ್ರಕ್ರಿಯೆ ವೇಳೆ ಅನುಮಾನ ವ್ಯಕ್ತವಾಯಿತು. ಬಳಿಕ ವಿಶೇಷ ತನಿಖಾ ತಂಡ ಪ್ರಕರಣ ಕೈಗೆತ್ತಿಕೊಂಡಿತು.

3 ಕೋಟಿ ಇನ್ಶೂರೆನ್ಸ್‌ ಹಣಕ್ಕಾಗಿ ತಂದೆಯನ್ನೇ ಹಾವು ಕಚ್ಚಿಸಿ ಕೊಂದ ಪಾಪಿ ಮಕ್ಕಳು Read More »

ಸರ್ಕಾರಿ ನೌಕರರು ಕಚೇರಿಗೆ ಸಭ್ಯ ಉಡುಪು ಧರಿಸಿ ಬರಬೇಕು : ಸುತ್ತೋಲೆ

ಹರಿದ ಜೀನ್ಸ್‌, ಸ್ಲೀವ್‌ಲೆಟ್‌ ಡ್ರೆಸ್‌, ಬಿಗಿ ಬಟ್ಟೆ ಧರಿಸುವಂತಿಲ್ಲ ಬೆಂಗಳೂರು : ರಾಜ್ಯ ಸರ್ಕಾರಿ ನೌಕರರು ಸಭ್ಯ ಬಟ್ಟೆಗಳನ್ನು ಧರಿಸಿಕೊಂಡು ಕಚೇರಿಗೆ ಬರಬೇಕು. ಸರ್ಕಾರದ ಖ್ಯಾತಿಗೆ ಧಕ್ಕೆ ತರುವ ಬಟ್ಟೆಗಳನ್ನು ಧರಿಸಿ ಕಚೇರಿಗೆ ಬಂದರೆ ಶಿಸ್ತು ಕ್ರಮ ಎದುರಿಸಬೇಕಾಗುತ್ತದೆ ಎಂದು ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆ ಕಟ್ಟುನಿಟ್ಟಿನ ಸೂತ್ತೋಲೆ ಹೊರಡಿಸಿದೆ. ವಿವಿಧ ಇಲಾಖೆಗಳ ಮುಖ್ಯಸ್ಥರು, ಜಿಲ್ಲಾಧಿಕಾರಿಗಳು, ಮುಖ್ಯಮಂತ್ರಿ ಕಚೇರಿ, ಹೆಚ್ಚುವರಿ ಮುಖ್ಯ ಕಾರ್ಯದರ್ಶಿಗಳು, ಪ್ರಧಾನ ಕಾರ್ಯದರ್ಶಿಗಳು, ಕಾರ್ಯದರ್ಶಿಗಳು, ಜಿಲ್ಲಾ ಪಂಚಾಯತ್‌ನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು ಮತ್ತು

ಸರ್ಕಾರಿ ನೌಕರರು ಕಚೇರಿಗೆ ಸಭ್ಯ ಉಡುಪು ಧರಿಸಿ ಬರಬೇಕು : ಸುತ್ತೋಲೆ Read More »

ರಾಜ್ಯಸಭೆಯಲ್ಲಿ ಮಧ್ಯರಾತ್ರಿ ಜಿ ರಾಮ್‌ ಜಿ ಮಸೂದೆ ಅಂಗೀಕಾರ

ಬೆಳಗ್ಗಿನ ತನಕ ಪ್ರತಿಭಟನೆ ನಡೆಸಿದ ವಿಪಕ್ಷಗಳು ನವದೆಹಲಿ: ಲೋಕಸಭೆಯಲ್ಲಿ ಗುರುವಾರ ಅಂಗೀಕರಿಸಲಾಗಿದ್ದ ರೋಜ್‌ಗಾರ್ ಮತ್ತು ಅಜೀವಿಕಾ ಮಿಷನ್ (ಗ್ರಾಮೀಣ) ಮಸೂದೆ-2025 ಅನ್ನು ಶುಕ್ರವಾರ ಮಧ್ಯರಾತ್ರಿ ರಾಜ್ಯಸಭೆಯಲ್ಲಿ ಅಂಗೀಕರಿಸಲಾಯಿತು. ತಡರಾತ್ರಿ 12.15ರ ಸುಮಾರಿಗೆ ಧ್ವನಿ ಮತದ ಮೂಲಕ ಮಸೂದೆಯನ್ನ ಅಂಗೀಕರಿಸಲಾಯಿತು. ಮಧ್ಯರಾತ್ರಿವರೆಗೆ ನಡೆದ ಚರ್ಚೆಯಲ್ಲಿ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಕಾಯ್ದೆಯ (ಮನ್ರೇಗಾ) ಹೆಸರು ಬದಲಿಸಿ ಪರಿಚಯಿಸಲಾದ ಮಸೂದೆಗೆ ಕಾಂಗ್ರೆಸ್‌ ಸೇರಿದಂತೆ ವಿಪಕ್ಷಗಳಿಂದ ವ್ಯಾಪಕ ಆಕ್ರೋಶ ವ್ಯಕ್ತವಾಯಿತು. ಗದ್ದಲ ಕೋಲಾಹಲ ಏರ್ಪಟ್ಟಿತು. ಕೊನೆಗೆ ಮಸೂದೆಯನ್ನ ವಿರೋಧಿಸಿ

ರಾಜ್ಯಸಭೆಯಲ್ಲಿ ಮಧ್ಯರಾತ್ರಿ ಜಿ ರಾಮ್‌ ಜಿ ಮಸೂದೆ ಅಂಗೀಕಾರ Read More »

ನಿರಾಶ್ರಿತರ ಪರಿಹಾರ ಕೇಂದ್ರದಿಂದ ಏಳು ಮಂದಿ ಪರಾರಿ

ಕಿಟಿಕಿಯ ಕಂಬಿ ಮುರಿದು ಪಲಾಯನ ಮಂಗಳೂರು : ನಗರ ಹೊರವಲಯದ ಪಚ್ಚನಾಡಿ ಗ್ರಾಮದ ನಿರಾಶ್ರಿತರ ಪರಿಹಾರ ಕೇಂದ್ರದಿಂದ ಏಳು ಮಂದಿ ತಪ್ಪಿಸಿಕೊಂಡಿರುವ ಬಗ್ಗೆ ಮಂಗಳೂರು ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಗುರುವಾರ ತಡರಾತ್ರಿ ಸುಮಾರು 1.30ಕ್ಕೆ ಕೇಂದ್ರದ ವಾಸದ ಕೊಠಡಿ ಸಂಖ್ಯೆ 3 ರಲ್ಲಿದ್ದವರ ಪೈಕಿ 7 ಮಂದಿ ಕಿಟಕಿಯ ಕಂಬಿ ಮುರಿದು ಪರಾರಿಯಾಗಿದ್ದಾರೆ. 5.2 ಅಡಿ ಎತ್ತರದ, ಗುಂಡುಮುಖದ, ಕನ್ನಡ ಮಾತನಾಡಬಲ್ಲ ದೇವರಾಜು (37), 5 ಅಡಿ ಎತ್ತರದ, ದುಂಡು ಮುಖದ, ಹಿಂದಿ ಮಾತನಾಡಬಲ್ಲ ದುರ್ಗಾಬಾಯಿ

ನಿರಾಶ್ರಿತರ ಪರಿಹಾರ ಕೇಂದ್ರದಿಂದ ಏಳು ಮಂದಿ ಪರಾರಿ Read More »

ನಾಲ್ಕು ವರ್ಷದಿಂದ ತಲೆಮರೆಸಿಕೊಂಡಿದ್ದ ವಂಚನೆ ಆರೋಪಿ ಸೆರೆ

ಸುಳ್ಯ : ವಂಚನೆ ಪ್ರಕರಣದಲ್ಲಿ ಸುಮಾರು ನಾಲ್ಕು ವರ್ಷಗಳಿಂದ ತಲೆಮರೆಸಿಕೊಂಡಿದ್ದ ಆರೋಪಿಯನ್ನು ಸುಳ್ಯ ಪೊಲೀಸರು ಬೆಂಗಳೂರಿನಲ್ಲಿ ಬಂಧಿಸಿದ್ದಾರೆ. ಕಡೂರು ಗ್ರಾಮದ ನಿವಾಸಿ ನಾಗೇಶ್ ಬಂಧಿತ ಆರೋಪಿ ಎಂದು ಪೊಲೀಸರು ತಿಳಿಸಿದ್ದಾರೆ. ಸುಳ್ಯ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ಪ್ರಕರಣದಲ್ಲಿ ಸುಮಾರು 4 ವರ್ಷಗಳಿಂದ ನ್ಯಾಯಾಲಯದ ವಿಚಾರಣೆಗೆ ಹಾಜರಾಗದೆ ತಲೆಮರೆಸಿಕೊಂಡಿದ್ದ ಆರೋಪಿ ಕಡೂರು ಗ್ರಾಮದ ನಿವಾಸಿ ನಾಗೇಶ್ ಎಂಬಾತನನ್ನು, ಸುಳ್ಯ ಪೊಲೀಸ್ ಠಾಣಾ ಸಿಬ್ಬಂದಿಗಳಾದ ರಮೇಶ್ ಹಾಗೂ ಶ್ರೀಶೈಲ ಅವರು ಗುರುವಾರ ಬೆಂಗಳೂರಿನ ಚಿಕ್ಕಬಿದರಿಕಲ್ಲು ಎಂಬಲ್ಲಿ ದಸ್ತಗಿರಿ ಮಾಡಿ ನ್ಯಾಯಾಲಯಕ್ಕೆ

ನಾಲ್ಕು ವರ್ಷದಿಂದ ತಲೆಮರೆಸಿಕೊಂಡಿದ್ದ ವಂಚನೆ ಆರೋಪಿ ಸೆರೆ Read More »

ಸಿರಿಯಾದಲ್ಲಿ ಅಮೆರಿಕ ಉಗ್ರ ಬೇಟೆ : ಐಸಿಸ್‌ ವಿರುದ್ಧ ಆಪರೇಷನ್‌ ಹಾಕೈ ಸ್ಟ್ರೈಕ್‌ ಶುರು

ಸೈನಿಕರ ಮೇಲೆ ನಡೆಸಿದ ದಾಳಿಗೆ ಪ್ರತೀಕಾರ ಎಂದ ಅಮೆರಿಕ ವಾಷಿಂಗ್ಟನ್‌: ಇತ್ತೀಚೆಗೆ ನಡೆದ ಐಸಿಸ್‌ ಉುಗ್ರರ ದಾಳಿಯಲ್ಲಿ ಮೂವರು ಅಮೆರಿಕನ್ನರು ಸಾವನ್ನಪ್ಪಿದ ಹಿನ್ನೆಲೆಯಲ್ಲಿ ಅಮೆರಿಕ ಪ್ರತೀಕಾರಕ್ಕೆ ಮುಂದಾಗಿದೆ. ಸಿರಿಯಾದಲ್ಲಿರುವ ಇಸ್ಲಾಮಿಕ್ ಸ್ಟೇಟ್ ಗುಂಪಿನ (ಐಸಿಸ್‌) ವಿರುದ್ಧ ಅಮೆರಿಕದ ಪಡೆಗಳು ಮಿಲಿಟರಿ ಕಾರ್ಯಾಚರಣೆ ಪ್ರಾರಂಭಿಸಿವೆ. ಈ ಕುರಿತು ಮಾಹಿತಿ ನೀಡಿರುವ ಪೆಂಟಗನ್ ಮುಖ್ಯಸ್ಥ ಪೀಟ್ ಹೆಗ್ಸೆತ್, ʻಐಸಿಸ್‌ ವಿರುದ್ಧ ಆಪರೇಷನ್‌ ಹಾಕೈ ಸ್ಟ್ರೈಕ್‌ʼ ಶುರುವಾಗಿದೆ ಎಂದು ಘೋಷಿಸಿದ್ದಾರೆ. ಕಳೆದ ಡಿಸೆಂಬರ್ 13ರಂದು ಸಿರಿಯಾದ ಪಾಲ್ಮಿರಾದಲ್ಲಿ ಐಸಿಸ್‌ ನಡೆಸಿದ ದಾಳಿಗೆ

ಸಿರಿಯಾದಲ್ಲಿ ಅಮೆರಿಕ ಉಗ್ರ ಬೇಟೆ : ಐಸಿಸ್‌ ವಿರುದ್ಧ ಆಪರೇಷನ್‌ ಹಾಕೈ ಸ್ಟ್ರೈಕ್‌ ಶುರು Read More »

ಪಾಂಡ್ಯ, ತಿಲಕ್‌ ವರ್ಮ ಪರಾಕ್ರಮ : ಕೊನೆಯ ಟಿ20ಯಲ್ಲಿ ಭಾರತಕ್ಕೆ ಗೆಲುವು

3-1 ಅಂತರದಿಂದ ಸರಣಿ ಗೆದ್ದುಕೊಂಡು ಬೀಗಿದ ಟೀಂ ಇಂಡಿಯಾ ಅಹಮದಾಬಾದ್‌ : ಇಲ್ಲಿನ ನರೇಂದ್ರ ಮೋದಿ ಮೈದಾನದಲ್ಲಿ ನಡೆದ ಭಾರತ ಮತ್ತು ದಕ್ಷಿಣ ಆಫ್ರಿಕಾ ನಡುವಿನ ಅಂತಿಮ ಟಿ20 ಪಂದ್ಯವನ್ನು ಆತಿಥೇಯ ಟೀಂ ಇಂಡಿಯಾ ಹಾರ್ದಿಕ್‌ ಪಾಂಡ್ಯ ಅವರ ಸ್ಫೋಟಕ ಅರ್ಧಶತಕದ ನೆರವಿನಿಂದ 30 ರನ್‌ಗಳಿಂದ ಜಯಗಳಿಸಿದೆ. ಈ ಐದು ಪಂದ್ಯಗಳ ಟಿ20 ಸರಣಿಯನ್ನು 3-1 ಅಂತರದಿಂದ ಭಾರತ ಗೆದ್ದುಕೊಂಡಿದೆ. ಈ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್‌ ಮಾಡಿದ ಟೀಂ ಇಂಡಿಯಾ ಹಾರ್ದಿಕ್ ಹಾಗೂ ತಿಲಕ್

ಪಾಂಡ್ಯ, ತಿಲಕ್‌ ವರ್ಮ ಪರಾಕ್ರಮ : ಕೊನೆಯ ಟಿ20ಯಲ್ಲಿ ಭಾರತಕ್ಕೆ ಗೆಲುವು Read More »

error: Content is protected !!
Scroll to Top