ವಾಹವ ಅಪಘಾತದಲ್ಲಿ ಕಾಂಗ್ರೆಸ್ ನಾಯಕ ಶಿವಕುಮಾರ್ ಮೃತ್ಯು !

ವಾಹನ ಅಪಘಾತದಲ್ಲಿ ತಮಿಳು ಕಾರ್ಮಿಕ ಮುಖಂಡ, ಕಾಂಗ್ರೆಸ್ ನಾಯಕ ಶಿವಕುಮಾರ್ ಕೌಡಿಚ್ಚಾರ್ ಮೃತಪಟ್ಟಿರುವುದಾಗಿ ತಿಳಿದು ಬಂದಿದೆ. ಬೆಳಗಾವಿಯಲ್ಲಿ ನಡೆದ ಅಪಘಾತದಲ್ಲಿ ಮೃತಪಟ್ಟಿದ್ದಾರೆ ಎನ್ನಲಾಗಿದೆ. ಹೆಚ್ಚಿನ ಮಾಹಿತಿಗಾಗಿ ನಿರೀಕ್ಷಿಸಲಾಗುತ್ತಿದೆ.

ವಾಹವ ಅಪಘಾತದಲ್ಲಿ ಕಾಂಗ್ರೆಸ್ ನಾಯಕ ಶಿವಕುಮಾರ್ ಮೃತ್ಯು ! Read More »

ಶ್ರೀ ಕ್ಷೇತ್ರ ಧರ್ಮಸ್ಥಳದಿಂದ ಕಾರ್ಪಾಡಿ ಶ್ರೀ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ದೇಣಿಗೆ ಚೆಕ್ ಹಸ್ತಾಂತರ

ಪುತ್ತೂರು: ತಾಲೂಕಿನ ಕಾರ್ಪಾಡಿ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ಜೀರ್ಣೋದ್ಧಾರ ನಡೆದಿದ್ದು, ಶ್ರೀ ಕ್ಷೇತ್ರ ಧರ್ಮಸ್ಥಳದಿಂದ ಜೀರ್ಣೋದ್ಧಾರ ಕಾರ್ಯಕ್ಕೆ ಈಗಾಗಲೇ ಮೂರು ಲಕ್ಷ ರೂ. ದೇಣಿಗೆ ನೀಡಲಾಗಿದೆ. ಇದೀಗ ಎರಡನೇ ಹಂತದ 2.50 ಲಕ್ಷ ರೂ. ಹೀಗೆ ಒಟ್ಟು 5.50 ಲಕ್ಷ ರೂ. ನೀಡಿದ್ದಾರೆ. ಯೋಜನೆಯ ಪುತ್ತೂರು ತಾಲೂಕು ಯೋಜನಾಧಿಕಾರಿ ಶಶಿಧರ್ ಎಮ್‍. ಸಮಿತಿ ಸದಸ್ಯರಿಗೆ 2.50 ಲಕ್ಷ ಚೆಕ್‍ ನ್ನು ಶುಕ್ರವಾರ ಹಸ್ತಾಂತರಿಸಿದರು. ಈ ಸಂದರ್ಭದಲ್ಲಿ ದೇವಸ್ಥಾನದ ಬ್ರಹ್ಮಕಲಶೋತ್ಸವ, ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಬೂಡಿಯಾರ್ ರಾಧಾಕೃಷ್ಣ ರೈ,

ಶ್ರೀ ಕ್ಷೇತ್ರ ಧರ್ಮಸ್ಥಳದಿಂದ ಕಾರ್ಪಾಡಿ ಶ್ರೀ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ದೇಣಿಗೆ ಚೆಕ್ ಹಸ್ತಾಂತರ Read More »

ಯುವಕನ ಅನುಮಾನಾಸ್ಪದ ಸಾವು : ಕೊಲೆ ಶಂಕೆ

ಪುತ್ತೂರು: ಬೆಟ್ಟಂಪಾಡಿ ಗ್ರಾಮದ  ಬರೆ ಎಂಬಲ್ಲಿ ಯುವಕನೋರ್ವನ  ಶವ ಅನುಮಾನಾಸ್ಪದವಾಗಿ ಮೃತಪಟ್ಟ ರೀತಿಯಲ್ಲಿ ಪತ್ತೆಯಾಗಿದ್ದು, ಇದೊಂದು ಕೊಲೆ ಶಂಕೆ ವ್ಯಕ್ತವಾಗಿದೆ. ಘಟನೆಗೆ ಸಂಬಂಧಿಸಿದಂತೆ  ಗ್ರಾಮಾಂತರ ಪೊಲೀಸರು  ಮೂವರನ್ನು ವಶಕ್ಕೆ ಪಡೆದುಕೊಂಡಿರುವುದಾಗಿ ತಿಳಿದುಬಂದಿದೆ. ಬೆಟ್ಟಂಪಾಡಿ ಬರೆ ದಿ.ಕೊರಗಪ್ಪ ಶೆಟ್ಟಿ ಯವರ ಪುತ್ರ ಚೇತನ್ (33ವ.) ಮೃತಪಟ್ಟವರು. ಮದ್ಯ ವ್ಯಸನಿಯಾಗಿದ್ದ ಚೇತನ್ ಮೇ.9ರಂದು ರಾತ್ರಿ ಕುಡಿದು ಬಂದು ಮನೆಯಲ್ಲಿ ಗಲಾಟೆ ಮಾಡಿದ್ದರು. ನಂತರ ನೆರೆಯ ಮನೆಗೆ ಹೋಗಿ  ಅಲ್ಲಿಯೂ  ಗಲಾಟೆ ಮಾಡಿದ್ದರು. ಅಲ್ಲಿಂದ  ಚೇತನ್ ರವರನ್ನು ಆತನ  ತಾಯಿ, ಬಾವ

ಯುವಕನ ಅನುಮಾನಾಸ್ಪದ ಸಾವು : ಕೊಲೆ ಶಂಕೆ Read More »

80 ವರ್ಷಗಳ ವಸ್ತ್ರ ಪರಂಪರೆಯಲ್ಲಿ ಪ್ರಸಿದ್ಧ ಪಡೆದ ‘ಎಂ.ಸಂಜೀವ ಶೆಟ್ಟಿ’ ಸಾರೀಸ್ & ರೆಡಿಮೇಡ್ಸ್ | ನೂತನ ಮಳಿಗೆ ದರ್ಬೆ ವೃತ್ತದ ಬಳಿ ಶುಭಾರಂಭ

ಪುತ್ತೂರು: 80 ವರ್ಷಗಳ ವಸ್ತ್ರ ಪರಂಪರೆಯಲ್ಲಿ ಪ್ರಸಿದ್ಧಿ ಪಡೆದ ‘ಎಂ.ಸಂಜೀವ ಶೆಟ್ಟಿ’ ಸಾರೀಸ್ & ರೆಡಿಮೇಡ್ಸ್ ನ ನೂತನ ಮಳಿಗೆ ದರ್ಬೆ ವೃತ್ತದ ಬಳಿ ಇಂದು ಶುಭಾರಂಭಗೊಂಡಿತು. ಸಂಸ್ಥೆಯನ್ನು ಉದ್ಯಮಿ ವಾಮನ್ ಪೈ ಉದ್ಘಾಟಿಸಿ ಮಾತನಾಡಿ, ವ್ಯಾಪಾರದಲ್ಲಿ ಕಮಿಟ್ಮೆಂಟ್ ಹಾಗೂ ಡೆಡಿಕೇಶನ್ ಎರಡೂ ಬೇಕು. ಜತೆಗೆ ವ್ಯಾಪಾರ ಎಂಬುದು ಒಂದು ತಪಸ್ಸು. ಇಂದು ಎಂ.ಸಂಜೀವ ಶೆಟ್ಟಿ ಅವರ ಪ್ರಯತ್ನದ ಫಲವಾಗಿ 5ನೇ ಶಾಖೆ ದರ್ಬೆ ವೃತ್ತದ ಬಳಿ ಶುಭಾರಂಭಗೊಂಡಿದೆ. ಮಳಿಗೆ ಮಂಗಳೂರು ಅಲ್ಲದೆ ಬೆಂಗಳೂರಿನಲ್ಲಿ ಮನೆಮಾತಾಗಿದೆ. ಜನರಿಗೆ

80 ವರ್ಷಗಳ ವಸ್ತ್ರ ಪರಂಪರೆಯಲ್ಲಿ ಪ್ರಸಿದ್ಧ ಪಡೆದ ‘ಎಂ.ಸಂಜೀವ ಶೆಟ್ಟಿ’ ಸಾರೀಸ್ & ರೆಡಿಮೇಡ್ಸ್ | ನೂತನ ಮಳಿಗೆ ದರ್ಬೆ ವೃತ್ತದ ಬಳಿ ಶುಭಾರಂಭ Read More »

ನಿಯಂತ್ರಣ ತಪ್ಪಿದ ರಿಕ್ಷಾ ಪಲ್ಟಿ :  ಚಾಲಕನಿಗೆ ಗಾಯ| ಮಾನವೀಯತೆ ಮೆರೆದ ಅಶ್ರಫ್ ಗೆ ಆಸ್ಪತ್ರೆಯ ಗೌರವ

ಪುತ್ತೂರು: ಮಿತ್ತೂರು ರೈಲ್ವೇ  ಓವ‌ರ್ ಬ್ರಿಡ್ಜ್ ಸಮೀಪ  ರಿಕ್ಷಾವೊಂದು ಪಲ್ಟಿಯಾಗಿ, ಚಾಲಕ ಗಾಯಗೊಂಡ ಘಟನೆ ಇಂದು ಮಧ್ಯಾಹ್ನ ನಡೆದಿದೆ. ಆಟೋ ಚಾಲಕ, ಮಿತ್ತಪಡ್ಡು ಪಾಟ್ರಕೋಡಿ  ನಿವಾಸಿ ನೀಲಪ್ಪ ಮೂಲ್ಯ ಗಾಯಗೊಂಡವರು. ರಿಕ್ಷಾದಲ್ಲಿದ್ದ ಇಬ್ಬರು ಸವಾರರು ಪಾರಾಗಿದ್ದಾರೆ. ಕೆಎ 19 ಎಬಿ 3693 ನಂಬರಿನ   ರಿಕ್ಷಾ ಪುತ್ತೂರಿನಿಂದ  ಮಿತ್ತೂರು  ಕಡೆ ತೆರಳುತ್ತಿದ್ದಾಗ  ಘಟನೆ  ನಡೆದಿದೆ. ಅದೇ  ಮಾರ್ಗವಾಗಿ ತೆರಳುತ್ತಿದ್ದ ಭಾರತ್  ವೆಹಿಕಲ್  ಬಜಾರ್  ಮಾಲಕ ಅಶ್ರಫ್ ತಕ್ಷಣ ಗಾಯಾಳುವನ್ನು ಉಪಚರಿಸಿ, ಬೊಳುವಾರು ಪ್ರಗತಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗೆ ದಾಖಲಿಸಿದರು. ಅಶ್ರಫ್

ನಿಯಂತ್ರಣ ತಪ್ಪಿದ ರಿಕ್ಷಾ ಪಲ್ಟಿ :  ಚಾಲಕನಿಗೆ ಗಾಯ| ಮಾನವೀಯತೆ ಮೆರೆದ ಅಶ್ರಫ್ ಗೆ ಆಸ್ಪತ್ರೆಯ ಗೌರವ Read More »

ಸಂತ ಫಿಲೋಮಿನಾ ಕಾಲೇಜಿನಲ್ಲಿ “ಫೂಡಿ ಪ್ರೆನ್ಯೂರ್” ಫುಡ್ ಫೆಸ್ಟ್

ಪುತ್ತೂರು: ಸಂತ ಫಿಲೋಮಿನಾ ಕಾಲೇಜಿನ ವ್ಯವಹಾರ ಅಧ್ಯಯನ ವಿಭಾಗದ ವಿದ್ಯಾರ್ಥಿಗಳ ಕೌಶಲ್ಯ ಅಬಿವೃದ್ದಿ ಹೆಚ್ಚಿಸುವ ನಿಟ್ಟಿನಲ್ಲಿ ‘ಫೂಡಿ ಪ್ರೆನ್ಯೂರ್’ ಫುಡ್ ಫೆಸ್ಟ್ ನ್ನು ಗುರುವಾರ ಆಯೋಜಿಸಲಾಯಿತು. ವಿದ್ಯಾರ್ಥಿಗಳು ಸ್ಥಳದಲ್ಲೇ ತಯಾರಿಸಿದ ವಿವಿಧ ಬಗೆಯ ಮೊಜಿಟೋಗಳು, ಆರೋಗ್ಯಕರ ಪೇಯ ಹಾಗೂ ಆರೋಗ್ಯವರ್ಧಕ ತಿಂಡಿ ತಿನಸುಗಳ ಸ್ಟಾಲ್ ಗಳು, ಮನೆಯಲ್ಲಿ ತಯಾರಿಸಿದಂತಹ ಕರಾವಳಿಯ ವಿಶೇಷ ಖಾದ್ಯಗಳ ಸ್ಟಾಲ್ ಗಳು, ಬ್ರೌನಿಗಳ ಮತ್ತು ಚಾಟ್ ಸ್ಟಾಲ್ ಗಳಿದ್ದವು. ಅಧ್ಯಾಪಕರು ಹಾಗೂ ವಿದ್ಯಾರ್ಥಿಗಳು ತಮ್ಮ ಬಿಡುವಿನ ಸಂದರ್ಭದಲ್ಲಿ ಹಾಗೂ ಮಧ್ಯಾಹ್ನದ ಭೋಜನ ವಿರಾಮದ

ಸಂತ ಫಿಲೋಮಿನಾ ಕಾಲೇಜಿನಲ್ಲಿ “ಫೂಡಿ ಪ್ರೆನ್ಯೂರ್” ಫುಡ್ ಫೆಸ್ಟ್ Read More »

ದೇಶದ ಜನತೆಗೆ ನರೇಂದ್ರ ಮೋದಿಯಿಂದ ‘ಅಕ್ಷಯ ತೃತೀಯ’ ದ ಶುಭಾಶಯ

 ಪ್ರಧಾನಿ ನರೇಂದ್ರ ಮೋದಿ ಅವರು ಶುಕ್ರವಾರ ದೇಶದಾದ್ಯಂತ ಎಲ್ಲಾ ಕುಟುಂಬಗಳಿಗೆ ಅಕ್ಷಯ ತೃತೀಯದ ಶುಭಾಶಯಗಳನ್ನು ಕೋರಿದ್ದಾರೆ. ”ದೇಶದ ಎಲ್ಲಾ ಕುಟುಂಬಗಳಿಗೆ ಅಕ್ಷಯ ತೃತೀಯ ದಿನದಂದು ಹಾರ್ದಿಕ ಶುಭಾಶಯಗಳು. ದಾನವನ್ನು ಪ್ರೇರೇಪಿಸುವ ಈ ಶುಭ ಸಂದರ್ಭವು ನಿಮ್ಮೆಲ್ಲರ ಜೀವನದಲ್ಲಿ ಹೊಸ ಶಕ್ತಿ ಮತ್ತು ಉತ್ಸಾಹವನ್ನು ತರಲಿ ಎಂದು ನಾನು ಭಾವಿಸುತ್ತೇನೆ” ಎಂದು ಪ್ರಧಾನಿ ನರೇಂದ್ರ ಮೋದಿ ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದಾರೆ. ಈ ಸಂದರ್ಭದಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು “ಅಕ್ಷಯ ತೃತೀಯದ ಪವಿತ್ರ ಹಬ್ಬದ ಹಾರ್ದಿಕ

ದೇಶದ ಜನತೆಗೆ ನರೇಂದ್ರ ಮೋದಿಯಿಂದ ‘ಅಕ್ಷಯ ತೃತೀಯ’ ದ ಶುಭಾಶಯ Read More »

ಉತ್ತಮ ಆಡಳಿತಗಾರನಾಗುವ ಜತೆಗೆ ಸಮಾಜಕ್ಕೆ ಮಾದರಿ ವ್ಯಕ್ತಿಯಾಗಿ ಬಸವಣ್ಣನವರು ಬದುಕಿದ್ದಾರೆ | ಶ್ರೀ ಬಸವೇಶ್ವರ ಜಯಂತಿ, ಶಿವಶರಣೆ ಹೇಮರೆಡ್ಡಿ ಮಲ್ಲಮ್ಮ ಜಯಂತಿ ದಿನಾಚರಣೆಯಲ್ಲಿ ಕುಂಞಿ ಅಹಮ್ಮದ್

ಪುತ್ತೂರು: ಮೂಡನಂಬಿಕೆ, ಅಸ್ಪೃಶ್ಯತೆ ಸೇರಿ ಸಮಾಜದ ವಿವಿಧ ಪಿಡುಗುಗಳ ವಿರುದ್ಧ ಹೋರಾಟ ಮಾಡಿದ ಬಸವಣ್ಣನವರು ವಚನಗಳ ಮೂಲಕ ಸಮಾಜದಲ್ಲಿನ ವ್ಯವಸ್ಥೆಯನ್ನು ಎಚ್ಚರಿಸುವ ಕಾರ್ಯವನ್ನು ಮಾಡಿದ್ದಾರೆ. ಅವರ ಜೀವನ, ಆದರ್ಶಗಳನ್ನು ನಾವು ಜೀವನದಲ್ಲಿ ಅಳವಡಿಸಿಕೊಳ್ಳುವ ಅನಿವಾರ್ಯತೆಯಿದೆ ಎಂದು ಪುತ್ತೂರು ತಹಸೀಲ್ದಾರ್ ಕುಂಞ ಅಹಮ್ಮದ್ ಹೇಳಿದರು. ಪುತ್ತೂರು ತಾಲೂಕು ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ವತಿಯಿಂದ ಶ್ರೀ ಬಸವೇಶ್ವರ ಜಯಂತಿ ಮತ್ತು ಶಿವಶರಣೆ ಹೇಮರೆಡ್ಡಿ ಮಲ್ಲಮ್ಮ ಜಯಂತಿ ದಿನಾಚರಣೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು. ಕಾಯಕ ತತ್ವಕ್ಕೆ ಹೆಚ್ಚಿನ ಮಹತ್ವ ಕೊಟ್ಟ

ಉತ್ತಮ ಆಡಳಿತಗಾರನಾಗುವ ಜತೆಗೆ ಸಮಾಜಕ್ಕೆ ಮಾದರಿ ವ್ಯಕ್ತಿಯಾಗಿ ಬಸವಣ್ಣನವರು ಬದುಕಿದ್ದಾರೆ | ಶ್ರೀ ಬಸವೇಶ್ವರ ಜಯಂತಿ, ಶಿವಶರಣೆ ಹೇಮರೆಡ್ಡಿ ಮಲ್ಲಮ್ಮ ಜಯಂತಿ ದಿನಾಚರಣೆಯಲ್ಲಿ ಕುಂಞಿ ಅಹಮ್ಮದ್ Read More »

ಹೆಣ್ಣೊಂದು ಕಲಿತರೆ  ಶಾಲೆಯೊಂದು ತೆರೆದಂತೆ

ಹೆಣ್ಣೊಂದು ಕಲಿತರೆ  ಶಾಲೆಯೊಂದು ತೆರೆದಂತೆ ಎನ್ನುವ ಮಾತು  ಅಕ್ಷರಶಃ ಸತ್ಯ. ಏಕೆಂದರೆ ಒಂದು ಮನೆಯಲ್ಲಿ ಹೆಣ್ಣು ಕಲಿತರೆ ಆ ಮನೆಗೆ ಬೆಳಕಾಗುವಳು. ಸಮಾಜದ ಎಲ್ಲ ಹೆಣ್ಣು ಮಕ್ಕಳು ಶಿಕ್ಷಣ ಪಡೆದರೆ ಸಮಾಜವನ್ನೇ ಉದ್ದರಿಸುವರು. ಸಮಾಜದ ಪ್ರಗತಿಯ ರಥ ಸಾಗಬೇಕಾದರೆ ಗಂಡು-ಹೆಣ್ಣು ಎಂಬ ಎರಡು ಚಕ್ರಗಳು ಇರಲೇಬೇಕು. ರಥಕ್ಕೆ ಹೇಗೆ ಒಂದು ಚಕ್ರ ಇಲ್ಲವಾದರೆ ಚಲಿಸಲು ಸಾಧ್ಯವಿಲ್ಲವೋ ಸಮಾಜವೂ ಹಾಗೆಯೇ, ಪ್ರಕೃತಿಯೇ ಗಂಡು, ಹೆಣ್ಣಿಗೂ ಸಮಾನವಾದ ಸ್ಥಾನಮಾನವನ್ನು ನೀಡಿಬಿಟ್ಟಿದೆ. ಯಾರೂ ಹೆಚ್ಚಲ್ಲ ಯಾರೂ ಕಡಿಮೆಯಲ್ಲ ದೈಹಿಕವಾಗಿ ಗಂಡು-ಹೆಣ್ಣು ಎರಡು

ಹೆಣ್ಣೊಂದು ಕಲಿತರೆ  ಶಾಲೆಯೊಂದು ತೆರೆದಂತೆ Read More »

ಪ್ರವೀಣ್‌ ನೆಟ್ಟಾರು ಹತ್ಯೆ ಪ್ರಕರಣ : ಪ್ರಮುಖ ಆರೋಪಿ ಬಂಧನ

ಪುತ್ತೂರು: ಹಿಂದೂ ಕಾರ್ಯಕರ್ತ ಪ್ರವೀಣ್‌ ನೆಟ್ಟಾರು ಕೊಲೆ ಪ್ರಕರಣದ ಪ್ರಮುಖ ಆರೋಪಿ ಮುಸ್ತಾಫಾ ಪೈಚಾರ್‌ ಎಂಬಾತನನ್ನು  ಪೊಲೀಸರು  ಬಂಧಿಸಿದ್ದಾರೆ  ಎಂಬ ಮಾಹಿತಿ ಲಭ್ಯವಾಗಿದೆ. ಆರೋಪಿ ಮುಸ್ತಫಾ  ಪೈಚಾರ್ ಗೆ ಎನ್‌ಐಎ ಲುಕ್ ಔಟ್ ನೋಟೀಸ್‌ನ್ನು ನೀಡಿದ್ದು ಮಾಹಿತಿ ಕೊಟ್ಟವರಿಗೆ 5 ಲಕ್ಷ ಬಹುಮಾನ ಕೂಡ ಈ ಹಿಂದೆ  ಘೋಷಿಸಿತ್ತು. ಇದೀಗ ಸಕಲೇಶಪುರದಲ್ಲಿ ಪ್ರವೀಣ್ ನೆಟ್ಟಾರು ಕೊಲೆ ಪ್ರಕರಣದ ಪ್ರಮುಖ ಆರೋಪಿ ಮುಸ್ತಾಫಾ ಪೈಚಾರ್ ನನ್ನು  ಬಂಧಿಸಿದ್ದಾರೆ  ಎಂಬ  ಮಾಹಿತಿ  ಲಭಿಸಿದೆ.

ಪ್ರವೀಣ್‌ ನೆಟ್ಟಾರು ಹತ್ಯೆ ಪ್ರಕರಣ : ಪ್ರಮುಖ ಆರೋಪಿ ಬಂಧನ Read More »

error: Content is protected !!
Scroll to Top