ಚಿನ್ನಯ್ಯನಿಗೆ ಗನ್‌ ಮ್ಯಾನ್‌ ಭದ್ರತೆ ನೀಡಲು ಜಯಂತ್‌ ಎಇಎಂಗೆ ಮನವಿ

ಚಿನ್ನಯ್ಯನ ಮೂಲಕ ದೊಡ್ಡಮಟ್ಟದಲ್ಲಿ ಪಿತೂರಿ ನಡೆಯುತ್ತಿದೆ ಎಂದು ದೂರು ಬೆಂಗಳೂರು: ಬುರುಡೆ ಗ್ಯಾಂಗ್‌ ವಿರುದ್ಧ ಚಿನ್ನಯ್ಯ ದೂರು ನೀಡಿದ ಬೆನ್ನಲ್ಲೇ ಚಿನ್ನಯ್ಯನಿಗೆ ಗನ್‌ಮ್ಯಾನ್‌ ರಕ್ಷಣೆ ನೀಡುವಂತೆ ಜಯಂತ್‌ ಟಿ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಮಾನವಿ ಮಾಡಿದ್ದಾರೆ. ಚಿನ್ನಯ್ಯನನ್ನು ಬಳಸಿಕೊಂಡು ದೊಡ್ಡ ಪಿತೂರಿ ನಡೆಯತ್ತಿದೆ. ಹೀಗಾಗಿ ಚಿನ್ನಯ್ಯನಿಗೆ ಕೂಡಲೇ ಗನ್ ಮ್ಯಾನ್ ಒದಗಿಸಬೇಕು ಮತ್ತು ಆತನ ಕುಟುಂಬಕ್ಕೂ ಸೂಕ್ತ ಬಂದೋಬಸ್ತ್‌ ಕಲ್ಪಿಸಬೇಕೆಂದು ವಿಶೇಷ ತನಿಖಾ ತಂಡ ಸಲ್ಲಿಸಿದ್ದ ಪ್ರಾಥಮಿಕ ತನಿಖಾ ವರದಿಯಲ್ಲಿ ಆರನೇ ಆರೋಪಿಯಾಗಿರುವ ಜಯಂತ್‌ಗೆ ಮನವಿ ಮಾಡಿದ್ದಾರೆ. ಚಿನ್ನಯ್ಯ […]

ಚಿನ್ನಯ್ಯನಿಗೆ ಗನ್‌ ಮ್ಯಾನ್‌ ಭದ್ರತೆ ನೀಡಲು ಜಯಂತ್‌ ಎಇಎಂಗೆ ಮನವಿ Read More »

ಬಾಲ ಕಲಾವಿದೆ ಸೋನಿಕಾ ಜನಾರ್ಧನ್ ಅವರನ್ನು ಅಭಿನಂದಿಸಿದ ಮೈಸೂರಿನ ಪ್ರಧಾನ ಜಿಲ್ಲಾ ಮತ್ತು ಸತ್ರನ್ಯಾಯಾಧೀಶರು

ಮೈಸೂರು: ಸಂವಿಧಾನದ ಅರಿವಿನ ಗೀತೆ ಹಾಡಿದ ಪುತ್ತೂರಿನ ಬಾಲ ಕಲಾವಿದೆ ಸೋನಿಕಾ ಜನಾರ್ಧನ್ ಅವರನ್ನು ಮೈಸೂರು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರು ಅಭಿನಂದಿಸಿದರು. ಮೈಸೂರು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ವತಿಯಿಂದ ದಸರಾ ವಸ್ತು ಪ್ರದರ್ಶನದ ಪಿ ಕಾಳಿಂಗ ರಾವ್ ಗಾನ ಮಂಟಪದಲ್ಲಿ ಮೈಸೂರಿನ ವಕೀಲರಾದ ಸುಂದರ್ ರಾಜ್ ಇವರ ನಿರ್ದೇಶನದಲ್ಲಿ ವಕೀಲರು ನಟಿಸಿದ ದತ್ತು ಮಕ್ಕಳ ಹಕ್ಕಿನ ಕುರಿತಾದ ಕಿರು ನಾಟಕ ಪ್ರದರ್ಶನ ನಡೆಯಿತು. ಈ ಸಂದರ್ಭದಲ್ಲಿ ಬಾಲ ಕಲಾವಿದೆ ಸೋನಿಕಾ ಜನಾರ್ದನ್ ಭಾರತೀಯ

ಬಾಲ ಕಲಾವಿದೆ ಸೋನಿಕಾ ಜನಾರ್ಧನ್ ಅವರನ್ನು ಅಭಿನಂದಿಸಿದ ಮೈಸೂರಿನ ಪ್ರಧಾನ ಜಿಲ್ಲಾ ಮತ್ತು ಸತ್ರನ್ಯಾಯಾಧೀಶರು Read More »

ಪೋಕ್ಸೊ ಪ್ರಕರಣ : ಸ್ವಾಮೀಜಿಗೆ 35 ವರ್ಷ ಜೈಲು

ಮಠಕ್ಕೆ ಬಂದಿದ್ದ ಯುವತಿ ಮೇಲೆ ಅತ್ಯಾಚಾರ ಎಸಗಿದ್ದ ಸ್ವಾಮೀಜಿ ಬೆಳಗಾವಿ: ಮಠಕ್ಕೆ ಬಂದ ಅಪ್ರಾಪ್ತ ವಯಸ್ಸಿನ ಯುವತಿಯನ್ನು ಸ್ವಾಮೀಜಿ ತನ್ನ ಕಾರಿನಲ್ಲಿ ಕರೆದೊಯ್ದು ಅತ್ಯಾಚಾರ ಎಸಗಿದ್ದ ಪ್ರಕರಣ ಸಾಬೀತಾಗಿದ್ದು, ಅಪರಾಧಿಪಿಗೆ 35 ವರ್ಷಗಳ ಕಠಿಣ ಕಾರಾಗೃಹ ಶಿಕ್ಷೆ ಹಾಗೂ ಒಂದು ಲಕ್ಷ ರೂ. ದಂಡ ವಿಧಿಸಿ ಬೆಳಗಾವಿ ಪೋಕ್ಸೊ ನ್ಯಾಯಾಲಯ ಮಹತ್ವದ ತೀರ್ಪು ನೀಡಿದೆ. ರಾಯಬಾಗ ತಾಲೂಕಿನ ಮೇಖಳಿ ಗ್ರಾಮದ ರಾಮಮಂದಿರ ಮಠದ ಹಠಯೋಗಿ ಲೋಕೇಶ್ವರ ಸ್ವಾಮೀಜಿ ಮೇ 13ರಂದು ಮಠಕ್ಕೆ ಬಂದಿದ್ದ ಅಪ್ರಾಪ್ತ ಯುವತಿಯನ್ನು ಪುಸಲಾಯಿಸಿ

ಪೋಕ್ಸೊ ಪ್ರಕರಣ : ಸ್ವಾಮೀಜಿಗೆ 35 ವರ್ಷ ಜೈಲು Read More »

ಕೇಪು ಕೋಳಿ ಅಂಕ ವಿವಾದ : ಶಾಸಕ ಅಶೋಕ್‌ ರೈ ಸಹಿತ 17 ಮಂದಿ ವಿರುದ್ಧ ಎಫ್‌ಐಆರ್‌

ಧಾರ್ಮಿಕ ಮಹತ್ವದ ಕಜಂಬು ಜಾತ್ರೋತ್ಸವದ ಕೋಳಿ ಅಂಕಕ್ಕೆ ಪೊಲೀಸರ ತಡೆ ತಾನೇ ಮುಂದೆ ನಿಂತು ಕೋಳಿ ಅಂಕ ಮಾಡಿಸಿದ್ದ ಅಶೋಕ್‌ ರೈ ಮಂಗಳೂರು: ಪೊಲೀಸರ ನಿರ್ಬಂಧದ ನಡುವೆಯೂ ಕೋಳಿ ಅಂಕ ಮಾಡಿಸಿದ ಪುತ್ತೂರು ಶಾಸಕ ಅಶೋಕ್‌ ರೈ ಸೇರಿದಂತೆ 17 ಮಂದಿ ವಿರುದ್ಧ ವಿಟ್ಲ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ವಿಟ್ಲದ ಕೇಪುವಿನ ಧಾರ್ಮಿಕ ಮಹತ್ವವುಳ್ಳ ಐತಿಹಾಸಿಕ ಉಳ್ಳಾಲ್ತಿ ಜಾತ್ರೆಯ ಪ್ರಯುಕ್ತ ಪರಂಪರಾಗತವಾಗಿ ನಡೆದುಕೊಂಡು ಬಂದಿರುವ ಕೋಳಿ ಅಂಕ ಶನಿವಾರ ಹಲವು ನಾಟಕೀಯ ಸನ್ನಿವೇಶಗಳಿಗೆ ಸಾಕ್ಷಿಯಾಗಿದೆ. ಪೊಲೀಸರು ಕೋಳಿ

ಕೇಪು ಕೋಳಿ ಅಂಕ ವಿವಾದ : ಶಾಸಕ ಅಶೋಕ್‌ ರೈ ಸಹಿತ 17 ಮಂದಿ ವಿರುದ್ಧ ಎಫ್‌ಐಆರ್‌ Read More »

ಡಾ. ಕೆ. ಚಿನ್ನಪ್ಪ ಗೌಡರ ಕೃತಿ ‘ಭೂತಾರಾಧನೆ- ಮಾಯದ ‌ನಡೆ ಜೋಗದ ನುಡಿ’ ಬಿಡುಗಡೆ

ಮಂಗಳೂರು: ಕ್ರಿಯೇಟಿವ್ ಪುಸ್ತಕ ಮನೆ ಕಾರ್ಕಳ ಮತ್ತು ಮಂಗಳೂರಿನ ಸಂತ ಅಲೋಶಿಯಸ್ ಪರಿಗಣಿತ ವಿಶ್ವವಿದ್ಯಾಲಯದ ಕನ್ನಡ ವಿಭಾಗದ ಸಹಯೋಗದಲ್ಲಿ ಕ್ರಿಯೇಟಿವ್ ಪುಸ್ತಕ ಮನೆ ಪ್ರಕಾಶನದ ವಿಶೇಷ ಪ್ರಕಟಣೆಯಾದ ಡಾ. ಕೆ. ಚಿನ್ನಪ್ಪ ಗೌಡ ಅವರ ಸಂಶೋಧನಾ ಕೃತಿ ‘ಭೂತಾರಾಧನೆ – ಮಾಯದ ನಡೆ ಜೋಗದ ನುಡಿ’ ಕೃತಿ ಬಿಡುಗಡೆ ಸಮಾರಂಭ ನಡೆಯಿತು. ಸಂತ ಅಲೋಶಿಯಸ್ ಪರಿಗಣಿತ ವಿವಿಯ ಎಲ್. ಎಫ್. ರಸ್ಕಿನ್ಹ ಸಭಾಂಗಣ, ಎಲ್.ಸಿ.ಆರ್.ಐ. ಬ್ಲಾಕ್‌ನಲ್ಲಿ ನಡೆದ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾರ್ಕಳದ ಕ್ರಿಯೇಟಿವ್ ಶಿಕ್ಷಣ ಪ್ರತಿಷ್ಠಾನದ ಸಹ

ಡಾ. ಕೆ. ಚಿನ್ನಪ್ಪ ಗೌಡರ ಕೃತಿ ‘ಭೂತಾರಾಧನೆ- ಮಾಯದ ‌ನಡೆ ಜೋಗದ ನುಡಿ’ ಬಿಡುಗಡೆ Read More »

ಹೃದಯಾಘಾತದಿಂದ ಅರುಣ್ ಆಚಾರ್ಯ ನಿಧನ

ಪುತ್ತೂರು: ಬನ್ನೂರಿನ ಮೇಲ್ಮಜಲು ನಿವಾಸಿ, ವೃತ್ತಿಯಲ್ಲಿ ಸಿವಿಲ್ ಇಂಜಿನಿಯರ್ ಆಗಿರುವ ಅರುಣ್ ಆಚಾರ್ಯ ಅವರು ಹೃದಯಾಘಾತದಿಂದ ಡಿ. 19 ರಂದು ನಿಧನರಾಗಿದ್ದಾರೆ. ಅರುಣ್ ಅವರಿಗೆ 51 ವರ್ಷವಾಗಿತ್ತು. ಪುತ್ತೂರಿನ ಬೈಪಾಸ್ ರಸ್ತೆಯಲ್ಲಿನ ಹೊಟೇಲೊಂದರಲ್ಲಿ ಉಪಹಾರ ಮುಗಿಸಿ ಹೊರಬರುತ್ತಿದ್ದಾಗ ಕುಸಿದು ಬಿದ್ದ ಅವರನ್ನು ತಕ್ಷಣವೇ ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ, ಅಷ್ಟರಲ್ಲೇ ಅವರು ಮೃತರಾಗಿದ್ದರು ಎಂದು ತಿಳಿದು ಬಂದಿದೆ. ಮೃತರು ತಂದೆ, ಪತ್ನಿ, ಪುತ್ರ, ಸಹೋದರರನ್ನು ಅಗಲಿದ್ದಾರೆ.

ಹೃದಯಾಘಾತದಿಂದ ಅರುಣ್ ಆಚಾರ್ಯ ನಿಧನ Read More »

ಬಾರ್ಯ ಶ್ರೀ ಮಹಾವಿಷ್ಣು ದೇವಸ್ಥಾನದ ವಾರ್ಷಿಕ ಜಾತ್ರಾ ಸಭೆ

ಉಪ್ಪಿನಂಗಡಿ: ಬಾರ್ಯ ಶ್ರೀ ಮಹಾವಿಷ್ಣು ದೇವಸ್ಥಾನದ ವಾರ್ಷಿಕ ಜಾತ್ರೆ ಮತ್ತು ಜ. 31 ರಂದು ನಡೆಯುವ ದೊಂಪದ ಬಲಿ ನೇಮ ಬಗ್ಗೆ ಆಡಳಿತ ಸೇವಾ ಟ್ರಸ್ಟ್‌ನ ಸಭೆಯು ಟ್ರಸ್ಟ್ ಅಧ್ಯಕ್ಷ ಭಾಸ್ಕರ ಬಾರ್ಯ, ಪುತ್ತೂರು ಅಧ್ಯಕ್ಷತೆಯಲ್ಲಿ ಜರಗಿತು. ಲೆಕ್ಕ ಪತ್ರ ಮಂಡನೆ, ಗತಸಭೆಯ ನಿರ್ಣಯಗಳ ಅನುಷ್ಠಾನ, ಫೆ. 6 ಮತ್ತು 7 ರಂದು ನಡೆಯಲಿರುವ ವಾರ್ಷಿಕ ಜಾತ್ರಾ ಉತ್ಸವ ಸಮಿತಿ ರಚನೆ ಬಗ್ಗೆ ಚರ್ಚೆ ನಡೆಸಲಾಯಿತು. ಪವಿತ್ರಪಾಣಿ ಸೂರ್ಯನಾರಾಯಣ ಕುದ್ದಣ್ಣಾಯ, ಉಪಾಧ್ಯಕ್ಷ ನಾರಾಯಣಗೌಡ, ಪ್ರಧಾನ ಕಾರ್ಯದರ್ಶಿ ಪ್ರಶಾಂತ

ಬಾರ್ಯ ಶ್ರೀ ಮಹಾವಿಷ್ಣು ದೇವಸ್ಥಾನದ ವಾರ್ಷಿಕ ಜಾತ್ರಾ ಸಭೆ Read More »

ನಿವೃತ್ತ ಪ್ರಾಂಶುಪಾಲ ಎ. ವಿ. ನಾರಾಯಣ ಅವರ ಮನೆಗೆ ನುಗ್ಗಿದ ಖದೀಮರಿಂದ ಕಳ್ಳತನಕ್ಕೆ ಪ್ರಯತ್ನ

ದಂಪತಿ ಸಮಯಪ್ರಜ್ಞೆಯಿಂದ ತಪ್ಪಿದ ಅನಾಹುತ ಪುತ್ತೂರು: ವಿವೇಕಾನಂದ ಕಾಲೇಜಿನ ನಿವೃತ್ತ ಪ್ರಾಂಶುಪಾಲ ಕೊಂಬೆಟ್ಟು ನಿವಾಸಿ ಎ. ವಿ. ನಾರಾಯಣ ಅವರ ಮನೆಗೆ ನಿನ್ನೆ ರಾತ್ರಿ ಹೆಲ್ಮೆಟ್ ತೊಟ್ಟ ಕಳ್ಳರು ನುಗ್ಗಿದ್ದು, ದಂಪತಿಯ ಸಮಯಪ್ರಜ್ಞೆಯಿಂದ ಅಪಾಯ ತಪ್ಪಿದೆ. ಮನೆಯ ಹಿತ್ತಲ ಬಾಗಿಲು ತೆರೆದಿದ್ದು, ಆ ಬಾಗಿಲಿನ ಮೂಲಕ ಇಬ್ಬರು ಖದೀಮರು ಮನೆಯೊಳಕ್ಕೆ ಪ್ರವೇಶಿಸಿ ನಾರಾಯಣ ಅವರ ಪತ್ನಿ ನಿವೃತ್ತ ಪ್ರಾದ್ಯಾಪಕಿ ವತ್ಸಲಾ ರಾಜ್ನಿ ಅವರ ಬಾಯಿ, ಕಣ್ಣುಗಳನ್ನು ಒತ್ತಿ ಹಿಡಿದಿದ್ದಾರೆ. ಈ ಸಂದರ್ಭದಲ್ಲಿ ಕುರ್ಚಿಯಿಂದ ಕೆಳಕ್ಕೆ ಬಿದ್ದ ಅವರು

ನಿವೃತ್ತ ಪ್ರಾಂಶುಪಾಲ ಎ. ವಿ. ನಾರಾಯಣ ಅವರ ಮನೆಗೆ ನುಗ್ಗಿದ ಖದೀಮರಿಂದ ಕಳ್ಳತನಕ್ಕೆ ಪ್ರಯತ್ನ Read More »

ಕಲ್ಲರಕೋಡಿ ಸರ್ಕಾರಿ ಶಾಲಾ ದೈ. ಶಿ. ಶಿಕ್ಷಕನ ಶವ ಮನೆಯ ಬಾವಿಯಲ್ಲಿ ಪತ್ತೆ

ಅನಾರೋಗ್ಯದ ಕಾರಣದಿಂದ ಆತ್ಮಹತ್ಯೆ ಶಂಕೆ ಉಳ್ಳಾಲ: ನರಿಂಗಾಣದ ಕಲ್ಲರಕೋಡಿ ಸರ್ಕಾರಿ ಶಾಲಾ ದೈಹಿಕ ಶಿಕ್ಷಕ ಪ್ರಭಾಕರ ಜೋಗಿ (51) ಎಂಬವರ ಶವ ಕೊಂಡಾಣದ ಅವರ ಮನೆಯ ಬಾವಿಯಲ್ಲಿ ಪತ್ತೆಯಾಗಿದೆ. ಅನಾರೋಗ್ಯದ ಕಾರಣದಿಂದ ಅವರು ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಹೇಳಲಾಗುತ್ತಿದೆ. ನಿನ್ನೆ ಸಂಜೆಯ ವೇಳೆಗೆ ಅವರು ತಮ್ಮ ಪುತ್ರಿಯನ್ನು ಉಚ್ಚಿಲದ ಶಾಲೆಯ ವಾರ್ಷಿಕೋತ್ಸವ ಕಾರ್ಯಕ್ರಮಕ್ಕೆ ಬಿಟ್ಟು ಬಂದಿದ್ದರು. ಆ ಬಳಿಕ ತಮ್ ಪತ್ನಿ ಮತ್ತು ಮಗನ ಜೊತೆಗೆ ವಾರ್ಷಿಕೋತ್ಸವಕ್ಕೆ ಹೋಗಲು ತಯಾರಿ ಸಹ ಮಾಡಿಕೊಂಡಿದ್ದರು. ಆ ಬಳಿಕ ಪ್ರಭಾಕರ್

ಕಲ್ಲರಕೋಡಿ ಸರ್ಕಾರಿ ಶಾಲಾ ದೈ. ಶಿ. ಶಿಕ್ಷಕನ ಶವ ಮನೆಯ ಬಾವಿಯಲ್ಲಿ ಪತ್ತೆ Read More »

ಅಕ್ಷಯ ಪದವಿಪೂರ್ವ ಕಾಲೇಜಿನಲ್ಲಿ ಉತ್ಕರ್ಷ್- 2025 ಕಲ್ಚರಲ್ ಫೆಸ್ಟ್

ಪುತ್ತೂರು: ಅಕ್ಷಯ ಪದವಿಪೂರ್ವ ಕಾಲೇಜಿನಲ್ಲಿ ಉತ್ಕರ್ಷ್- 2025 ಕಲ್ಚರಲ್ ಫೆಸ್ಟ್ ನಡೆಯಿತು. ಕಾರ್ಯಕ್ರಮದ ಉದ್ಘಾಟನೆಯನ್ನು ಕಿರುತೆರೆ ಬೆಳ್ಳಿತೆರೆ, ರಂಗಭೂಮಿ ಕಲಾವಿದೆ ಹಾಗೂ ಕಾಮಿಡಿ ಕಿಲಾಡಿಗಳು ಖ್ಯಾತಿಯ ಪವಿತ್ರಾ ಹೆಗ್ಡೆ ನೆರವೇರಿಸಿ ಮಾತನಾಡಿ, ವಿದ್ಯಾರ್ಥಿಗಳ ಪ್ರತಿಭಾ ಪ್ರದರ್ಶನಕ್ಕೆ ಅಕ್ಷಯ ಸಮೂಹ ಶಿಕ್ಷಣ ಸಂಸ್ಥೆ ಉತ್ತಮ ವೇದಿಕೆಯನ್ನು ಒದಗಿಸುತ್ತಿದೆ, ವಿದ್ಯಾರ್ಥಿಗಳು ಈ ಅವಕಾಶವನ್ನು ಉಪಯೋಗಿಸಿಕೊಂಡು ತಮ್ಮ ಆಸಕ್ತಿಯನ್ನು ಬೆಳೆಸಿ ಉಳಿಸಿಕೊಳ್ಳಬೇಕು ಎಂದರು. ಮುಖ್ಯ ಅತಿಥಿ ಗಾಯಕ ಕಲಾವಿದ ಚಂದ್ರಶೇಖರ್ ಅವರು, ಯಾವುದೇ ಕಲೆಗೆ ಜಾತಿಯ ಕಟ್ಟುಪಾಡುಗಳಿಲ್ಲ. ನಮ್ಮ ಮಧ್ಯೆ ಇರುವ

ಅಕ್ಷಯ ಪದವಿಪೂರ್ವ ಕಾಲೇಜಿನಲ್ಲಿ ಉತ್ಕರ್ಷ್- 2025 ಕಲ್ಚರಲ್ ಫೆಸ್ಟ್ Read More »

error: Content is protected !!
Scroll to Top