ಸವಣೂರು ವಿದ್ಯಾರಶ್ಮಿ ಪ್ರಥಮದರ್ಜೆ ಕಾಲೇಜಿನಲ್ಲಿ ಕೆನರಾ ವಲಯ ಕ್ರೀಡಾಕೂಟ

ಸವಣೂರು: ವಿದ್ಯಾರಶ್ಮಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಕೆನರಾ ವಲಯ ಕ್ರೀಡಾಕೂಟ, ಸವಣೂರು ವಿದ್ಯಾರಶ್ಮಿ ಪ್ರಥಮ ದರ್ಜೆ ಕಾಲೇಜಿನ ರೋಟ್ರಾಕ್ಟ್ ಕ್ಲಬ್ ಹಾಗೂ ಪುತ್ತೂರು ರೋಟ್ರಾಕ್ಟ್ ಕ್ಲಬ್  ಜಂಟಿ ಆಶ್ರಯದಲ್ಲಿ ಕೆನರಾ ವಲಯ ಮಟ್ಟದ ಕ್ರೀಡಾಕೂಟ ನಡೆಯಿತು. ಸಭಾ ಕಾರ್ಯಕ್ರಮ ಉದ್ಘಾಟಿಸಿದ ವಿದ್ಯಾರಶ್ಮಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಡಾ. ನಾರಾಯಣ ಮೂರ್ತಿ ಕೆ ಮಾತನಾಡಿ, ಕ್ರೀಡೆ ಪ್ರತಿಯೊಬ್ಬ ವ್ಯಕ್ತಿಯ ದೈಹಿಕ ಮತ್ತು ಮಾನಸಿಕ ಆರೋಗ್ಯಕ್ಕೆ ಅಗತ್ಯ ಎಂದರು. ವಿದ್ಯಾರಶ್ಮಿ ರೋಟ್ರಾಕ್ಟ್ ಕ್ಲಬ್ ಅಧ್ಯಕ್ಷ ಶಮೀರ್ ಅಧ್ಯಕ್ಷತೆ ವಹಿಸಿದ್ದರು. […]

ಸವಣೂರು ವಿದ್ಯಾರಶ್ಮಿ ಪ್ರಥಮದರ್ಜೆ ಕಾಲೇಜಿನಲ್ಲಿ ಕೆನರಾ ವಲಯ ಕ್ರೀಡಾಕೂಟ Read More »

ಅಕ್ಷಯ ಕಾಲೇಜಿನಲ್ಲಿ BCA with Artificial Intelligence & Cyber security ಕುರಿತು ಎರಡು ದಿನದ ಕಾರ್ಯಾಗಾರ

ಪುತ್ತೂರು: ಅಕ್ಷಯ ಎಜ್ಯುಕೇಶನಲ್ & ಚಾರಿಟೇಬಲ್ ಟ್ರಸ್ಟ್ ಅಧೀನದಲ್ಲಿ ಕಾರ್ಯಾಚರಿಸುತ್ತಿರುವ ಸಂಪ್ಯ ಅಕ್ಷಯ ಕಾಲೇಜಿನಲ್ಲಿ  BCA with Artificial Intelligence & Cyber security ಕುರಿತು ವಿದ್ಯಾರ್ಥಿಗಳಿಗೆ ಎರಡು ದಿನದ ಕಾರ್ಯಾಗಾರ ನಡೆಯಿತು. ಕಾಲೇಜಿನ ವಿದ್ಯಾರ್ಥಿಗಳಿಗೆ ನಿಯೋ ಇನ್ನೊವೇಶನ್ಸ್ & ಸ್ಕಿಲ್ಸ್ ಸಂಸ್ಥೆಯ ಸಹಯೋಗದೊಂದಿಗೆ ಅರ್ಟಿಫಿಷಿಯಲ್ ಇಂಟೆಲಿಜೆನ್ಸಿ ವಿದ್ಯಾರ್ಥಿಗಳಿಗೆ ’ಪೈತಾನ್ ‘ ಕುರಿತಾಗಿ ಡಾಟಾ ಅನಾಲಿಸ್ಟ್, ಸಂಶೋದಕ ಸ್ಯಾಮ್ ಸುಂದರ್ ಸಿಂಗ್ ಮಾಹಿತಿ ನೀಡಿದರು. ಕಾರ್ಯಗಾರದಲ್ಲಿ 60 ವಿದ್ಯಾರ್ಥಿಗಳು, ಹಾಗೂ  ಬಿ.ಸಿ.ಎ ವಿಭಾಗದ ಮುಖ್ಯಸ್ಥರು ಉಪನ್ಯಾಸಕರು ಪಾಲ್ಗೊಂಡಿದ್ದರು.

ಅಕ್ಷಯ ಕಾಲೇಜಿನಲ್ಲಿ BCA with Artificial Intelligence & Cyber security ಕುರಿತು ಎರಡು ದಿನದ ಕಾರ್ಯಾಗಾರ Read More »

ಹೊಸ ಪಡಿತರ ಚೀಟಿ ಪಡೆಯುವವರಿಗೆ ಗುಡ್ ನ್ಯೂಸ್ | ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಹೊಸ ಪಡಿತರ ಚೀಟಿಗೆ ಅರ್ಜಿ ಆಹ್ವಾನಿಸಿದೆ

ಬೆಂಗಳೂರು : ಬಡತನ ರೇಖೆಗಿಂತ ಕೆಳಗಿರುವವರಿಗೆ ರಾಜ್ಯ ಸರ್ಕಾರ ಕಡಿಮೆ ದರದಲ್ಲಿ ಉಚಿತವಾಗಿ ನೀಡುವ ಪಡಿತರವನ್ನು ಪಡೆಯಬೇಕೆಂದರೆ ರೇಷನ್ ಕಾರ್ಡ್ ಹೊಂದಿರುವುದು ಕಡ್ಡಾಯ. ಇದರ ಜೊತೆಗೆ ಕರ್ನಾಟಕದ ರಾಜ್ಯ ಸರಕಾರ ನೀಡುತ್ತಿರುವ ಪಂಚ ಗ್ಯಾರಂಟಿಗಳಿಗೆ ಅರ್ಜಿ ಸಲ್ಲಿಸಲು ಪಡಿತರ ಚೀಟಿಯ ಅಗತ್ಯವಿದೆ. ಆದರೆ ಕಳೆದ ಹಲವಾರು ಸಮಯಗಳಿಂದ ಹೊಸ ರೇಷನ್ ಕಾರ್ಡ್ ನೀಡುತ್ತಿಲ್ಲವಾದ್ದರಿಂದ ಹಲವಾರು ಕುಟುಂಬ ಸರಕಾರದ ಸೌಲಭ್ಯದಿಂದ ವಂಚಿತರಾಗುತ್ತಿದ್ದಾರೆ. ಹೊಸ ಪಡಿತರ ಚೀಟಿ ನೀಡುವ ನಿಟ್ಟಿನಲ್ಲಿ ಆಹಾರ ಮತ್ತು ನಾಗರಿಕ ಸರಬರಾಜು ಕರ್ನಾಟಕ ಪಡಿತರ ಚೀಟಿಗೆ

ಹೊಸ ಪಡಿತರ ಚೀಟಿ ಪಡೆಯುವವರಿಗೆ ಗುಡ್ ನ್ಯೂಸ್ | ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಹೊಸ ಪಡಿತರ ಚೀಟಿಗೆ ಅರ್ಜಿ ಆಹ್ವಾನಿಸಿದೆ Read More »

ಅಕ್ರಮ ಕಲ್ಲು ಕೋರೆಗೆ ದಾಳಿ : ಬಿಜೆಪಿ ಕಾರ್ಯಕರ್ತನ ಬಂಧನ | ರಾತ್ರಿ ಬಿಜೆಪಿ ಕಾರ್ಯಕರ್ತರ ನೇತೃತ್ವದಲ್ಲಿ ಠಾಣೆ ಎದುರು ಪ್ರತಿಭಟನೆ

ಬೆಳ್ತಂಗಡಿ: ಶನಿವಾರ ಮಧ್ಯರಾತ್ರಿ ವೇಳೆ ಅಕ್ರಮ ಕಲ್ಲಿನ ಕೋರೆಗೆ ದಾಳಿ ನಡೆಸಿದ ತಹಶೀಲ್ದಾರ್ ನೇತೃತ್ವದ ತಂಡ ದಾಳಿ ನೆಪದಲ್ಲಿ ಬಿಜೆಪಿ ಯುವಮೋರ್ಚಾ ಅಧ್ಯಕ್ಷರೊಬ್ಬರನ್ನು ಬಂಧಿಸಿದ ಘಟನೆ ಮೇಲಂತ ಬೆಟ್ಟು ಗ್ರಾಮದಲ್ಲಿ ನಡೆದಿದ್ದು, ಈ ಕುರಿತು ಶಾಸಕ ಹರೀಶ್ ಪೂಂಜ ಆಕ್ರೋಶ ವ್ಯಕ್ತಪಡಿಸಿ ಪೊಲೀಸ್ ಠಾಣೆ ಎದುರು ಪ್ರತಿಭಟನೆ ನಡೆಸಿದ ಘಟನೆಯೂ ನಡೆಯಿತು. ಈ ಸಂದರ್ಭದಲ್ಲಿ ಪ್ರತಿಕ್ರಿಯೆ ನೀಡಿದ ಶಾಸಕ ಹರೀಶ್ ಪೂಂಜಾ, ಬೆಳ್ತಂಗಡಿ ಪೊಲೀಸರು ಕಾಂಗ್ರೆಸ್ ಏಜೆಂಟರಂತೆ ವರ್ತಿಸುತಿದ್ದು, ದಾಳಿ ನೆಪದಲ್ಲಿ ಯಾರದೋ ಒತ್ತಡಕ್ಕೆ ಮಧ್ಯರಾತ್ರಿ ಮನೆಗೆ

ಅಕ್ರಮ ಕಲ್ಲು ಕೋರೆಗೆ ದಾಳಿ : ಬಿಜೆಪಿ ಕಾರ್ಯಕರ್ತನ ಬಂಧನ | ರಾತ್ರಿ ಬಿಜೆಪಿ ಕಾರ್ಯಕರ್ತರ ನೇತೃತ್ವದಲ್ಲಿ ಠಾಣೆ ಎದುರು ಪ್ರತಿಭಟನೆ Read More »

ರೋಣದ ವೀರಭದ್ರೇಶ್ವರ ಜಾತ್ರೆ : ರಥದ ಗಾಲಿಗೆ ಸಿಲುಕಿ ಇಬ್ಬರು ಭಕ್ತರು ಸ್ಥಳದಲ್ಲೆ ಮೃತ್ಯು

ಗದಗ: ರಥೋತ್ಸವ ವೇಳೆ ರಥದ ಗಾಲಿಗೆ ಸಿಲುಕಿ ಇಬ್ಬರು ಭಕ್ತರು ಸಾವಿಗೀಡಾಗಿ, ಓರ್ವ ಗಾಯಗೊಂಡ ದುರ್ಘಟನೆ ಜಿಲ್ಲೆಯ ರೋಣ ಪಟ್ಟಣದಲ್ಲಿ ನಡೆದಿದೆ. ರೋಣದ ವೀರಭದ್ರೇಶ್ವರ ಜಾತ್ರೆ ಅಂಗವಾಗಿ ಶನಿವಾರ ಸಂಜೆ ಮಹಾರಥೋತ್ಸವ ನಡೆಯಿತು. ಈ ವೇಳೆ ರಥದ ಗಾಲಿಗೆ ಸಿಲುಕಿ ಇಬ್ಬರು ಭಕ್ತರು ಸ್ಥಳದಲ್ಲೆ ಸಾವನ್ನಪ್ಪಿದ್ದು, ಮತ್ತೋರ್ವನಿಗೆ ಗಾಯವಾಗಿದೆ. ಮೃತ ಭಕ್ತರು ರೋಣ ಮೂಲದ ನಿವಾಸಿಗಳು ಎನ್ನಲಾಗುತ್ತಿದೆ. ಮಲ್ಲಪ್ಪ ಲಿಂಗನ ಗೌಡ್ರ(55) ಹಾಗೂ ಮತ್ತೋರ್ವ ವ್ಯಕ್ತಿ ಸ್ಥಳದಲ್ಲಿ ಸಾವನ್ನಪ್ಪಿದ್ದಾರೆ. ಇನ್ನೋರ್ವನ ಹೆಸರು ತಿಳಿದು ಬಂದಿಲ್ಲ. ಮುಖದ ಮೇಲೆ

ರೋಣದ ವೀರಭದ್ರೇಶ್ವರ ಜಾತ್ರೆ : ರಥದ ಗಾಲಿಗೆ ಸಿಲುಕಿ ಇಬ್ಬರು ಭಕ್ತರು ಸ್ಥಳದಲ್ಲೆ ಮೃತ್ಯು Read More »

ಮಾರ್ಗದ ಬದಿ ಜೂಜಾಡುತ್ತಿದ್ದ 9 ಮಂದಿಯ ಬಂಧನ

ಮಂಗಳೂರು: ಮಾರ್ಗದ ಬದಿಯಲ್ಲೇ ಜೂಜಾಡುತ್ತಿದ್ದ 9 ಮಂದಿಯನ್ನು ಪಣಂಬೂರು ಪೊಲೀಸರು ಬಂಧಿಸಿದ್ದಾರೆ. ಝಾಕೀರ್ ಅಹಮ್ಮದ್, ವಿಲ್ಫ್ರೇಡ್ ಡಿಸೋಜಾ, ಹನೀಫ್, ಅನಿಲ್ ಕುಮಾರ್, ಮುರ್ತೋಝ ಸಾಬ್‍, ಶಶಿ ದೇವಾಡಿಗ, ಮೈಲಾರಪ್ಪ, ರಾಯ್ ಡಾಯಸ್, ಜೋಸ್ ರಾಬರ್ಟ್‍ ಬಂಧಿತರು. ಬೈಕಂಪಾಡಿ ರೈಲು ರಸ್ತೆಯ ಬಳಿ ಮಾರ್ಗದ ಬದಿಯಲ್ಲಿ ಜೂಜಾಡುತ್ತಿದ್ದರು ಎನ್ನಲಾಗಿದ್ದು, ಪೊಲೀಸರು ಬಂಧಿತರಿಂದ ಆಟಕ್ಕೆ ಬಳಸಿದ 11,265 ರೂ. ಹಾಗೂ ಇನ್ನಿತರ ಸೊತ್ತುಗಳನ್ನು ವಶಪಡಿಸಿಕೊಂಡಿದ್ದಾರೆ.

ಮಾರ್ಗದ ಬದಿ ಜೂಜಾಡುತ್ತಿದ್ದ 9 ಮಂದಿಯ ಬಂಧನ Read More »

ಭಾರತದ ಎರಡು ಮಸಾಲೆ ಪದಾರ್ಥಗಳನ್ನು ನಿಷೇಧ ಮಾಡಿದ ನೇಪಾಳ

ವಿದೇಶ: ಭಾರತದ ಎ೦ಡಿಎಚ್ ಹಾಗೂ ಎವರೆಸ್ಟ್ ಮಸಾಲೆ ಉತ್ಪನ್ನಗಳಲ್ಲಿ ವಿಷಕಾರಿ ಅಂಶ ಇರುವ ಆರೋಪ ಕೇಳಿಬ೦ದಿರುವ ಹಿನ್ನೆಲೆಯಲ್ಲಿ ಸುರಕ್ಷತೆ ದೃಷ್ಟಿಯಿಂದ ನೇಪಾಳವು ಈ ಎರಡು ಮಸಾಲೆ ಪದಾರ್ಥಗಳಿಗೆ ನಿಷೇಧ ಹೇರಿದೆ. ಎವರೆಸ್ಟ್ ಮತ್ತು ಎ೦ಡಿಹೆಚ್ ಬ್ರಾ೦ಡ್ ಮಸಾಲೆಗಳನ್ನು ಆಮದು ಮಾಡಿಕೊಳ್ಳುವುದನ್ನು ನಿಷೇಧಿಸಲಾಗಿದೆ. ನಾವು ಅವುಗಳನ್ನು ಮಾರುಕಟ್ಟೆಯಲ್ಲಿ ಮಾರಾಟ ಮಾಡುವುದನ್ನು ಸಹ ನಿಷೇಧಿಸಿದ್ದೇವೆ ಎ೦ದು ಅಲ್ಲಿನ ಅಧಿಕಾರಿಗಳು ತಿಳಿಸಿದ್ದಾರೆ. ಈ ಎರಡು ನಿರ್ದಿಷ್ಟ ಬ್ರಾಂಡ್‌ಗಳ ಮಸಾಲೆಗಳಲ್ಲಿ ರಾಸಾಯನಿಕಗಳ ಪರೀಕ್ಷೆಗಳು ನಡೆಯುತ್ತಿವೆ. ಅಂತಿಮ ವರದಿ ಬರುವವರೆಗೆ ನಿಷೇಧವು ಜಾರಿಯಲ್ಲಿರುತ್ತದೆ ಎ೦ದು

ಭಾರತದ ಎರಡು ಮಸಾಲೆ ಪದಾರ್ಥಗಳನ್ನು ನಿಷೇಧ ಮಾಡಿದ ನೇಪಾಳ Read More »

ಯೋಗಾಸನಾ ಪರಿವೃತ್ತ ಪದ್ಮಾಸನದಲ್ಲಿ ವರ್ಲ್ಡ್ ಬುಕ್ ಆಫ್ ರೆಕಾರ್ಡ್ ನಲ್ಲಿ ಗುತ್ತಿಗಾರಿನ ನಿಹಾನಿ ವಾಲ್ತಾಜೆ ಹೆಸರು ದಾಖಲೆ

ಸುಳ್ಯ: ಗುತ್ತಿಗಾರು ಅಮರ ಯೋಗ ತರಬೇತಿ ಕೇಂದ್ರದ ವಿದ್ಯಾರ್ಥಿನಿ ನಿಹಾನಿ ವಾಲ್ತಾಜೆ ಪರಿವೃತ್ತ ಪದ್ಮಾಸನದಲ್ಲಿ 01 ಗಂಟೆ 08 ನಿಮಿಷ 10 ಸೆಕೆಂಡ್ ಒಂದೇ ಸ್ಥಿತಿಯಲ್ಲಿ ಇರುವ ಮೂಲಕ ವರ್ಲ್ಡ್ ವೈಡ್ ಬುಕ್ ಆಫ್ ರೆಕಾರ್ಡ್ ನಲ್ಲಿ ತನ್ನ ಹೆಸರನ್ನು ದಾಖಲಿಸಿಕೊಂಡಿದ್ದಾರೆ. ನಿಹಾನಿ ವಾಲ್ತಾಜೆ ಗುತ್ತಿಗಾರು ಬೆಸ್ಟ್ ಕುರಿಯಾಕೋಸ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ 5ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದು, ಪ್ರಶಾಂತ್ ವಾಲ್ತಾಜೆ ಮತ್ತು ಚೈತ್ರ ದಂಪತಿ ಪುತ್ರಿ. ಅವರು ಗುತ್ತಿಗಾರು ಅಮರ ತಾಲೂಕು ಪಬ್ಲಿಕ್ ಚಾರಿಟೇಬಲ್ ಟ್ರಸ್ಟ್

ಯೋಗಾಸನಾ ಪರಿವೃತ್ತ ಪದ್ಮಾಸನದಲ್ಲಿ ವರ್ಲ್ಡ್ ಬುಕ್ ಆಫ್ ರೆಕಾರ್ಡ್ ನಲ್ಲಿ ಗುತ್ತಿಗಾರಿನ ನಿಹಾನಿ ವಾಲ್ತಾಜೆ ಹೆಸರು ದಾಖಲೆ Read More »

ಮೇ19 (ನಾಳೆ) : ಆಲಂಕಾರು ವಲಯ ಒಕ್ಕಲಿಗ ಗೌಡ ಸೇವಾ ಸಂಘದ ವತಿಯಿಂದ ಶ್ರೀ ಸತ್ಯನಾರಾಯಣ ಪೂಜೆ, ಸಭಾ, ಸಾಂಸ್ಕೃತಿಕ ಕಾರ್ಯಕ್ರಮ

ಕಡಬ: ಆಲಂಕಾರು ವಲಯ ಒಕ್ಕಲಿಗ ಗೌಡ ಸೇವಾ ಸಂಘದ ವತಿಯಿಂದ ಶ್ರೀ ಸತ್ಯನಾರಾಯಣ ಪೂಜೆ ಮೇ 19 ಭಾನುವಾರ ಆಲಂಕಾರು ಶ್ರೀ ಭಾರತಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆಯಲಿದೆ. ಬೆಳಗ್ಗೆ 7 ಕ್ಕೆ ಪೂಜೆ ಆರಂಭ, 10 ಕ್ಕೆ ಮಹಾಪೂಜೆ, ಪ್ರಸಾದ ವಿತರಣೆ ನಡೆಯಲಿದೆ. 10.30 ರಿಂದ ಸಭಾ ಕಾರ್ಯಕ್ರಮ, ವಲಯದ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ. ಆಲಂಕಾರು ವಲಯ ಒಕ್ಕಲಿಗ ಗೌಡ ಸೇವಾ ಸಂಘದ ಅಧ್ಯಕ್ಷ ಶಿವಣ್ಣ ಗೌಡ ಕಕ್ವೆ

ಮೇ19 (ನಾಳೆ) : ಆಲಂಕಾರು ವಲಯ ಒಕ್ಕಲಿಗ ಗೌಡ ಸೇವಾ ಸಂಘದ ವತಿಯಿಂದ ಶ್ರೀ ಸತ್ಯನಾರಾಯಣ ಪೂಜೆ, ಸಭಾ, ಸಾಂಸ್ಕೃತಿಕ ಕಾರ್ಯಕ್ರಮ Read More »

ರೌಡಿಶೀಟರ್ ಗಳನ್ನು ಮಟ್ಟ ಹಾಕುವ ಕೆಲಸ ಪೊಲೀಸ್ ಇಲಾಖೆಯಿಂದ ಆಗಬೇಕು : ಸಂಜೀವ ಮಠಂದೂರು| ಸಂಜೀವ ಮಠಂದೂರು ಅವರ ಮೇಲೆ ಮಾಡಿದ ಮಾನಹಾನಿ ಬಿಜೆಪಿಗೆ ಮಾಡಿದ ಮಾನಹಾನಿ | ಶಾಸಕರ ಪಿಸ್ತೂಲ್ ಆಟ ಇಲ್ಲಿ ನಡೆಯುವುದಿಲ್ಲ : ಹರಿಕೃಷ್ಣ ಬಂಟ್ವಾಳ

ಪುತ್ತೂರು: ಮಾಜಿ ಶಾಸಕ ಸಂಜೀವ ಮಠಂದೂರು ಅವರ ವಿರುದ್ಧ ಅವಹೇಳನಕಾರಿಯಾಗಿ ವರ್ತಿಸಿ, ಜೀವ ಬೆದರಿಕೆ ಒಡ್ಡಿದ ಪುತ್ತೂರು ಶಾಸಕ ಆಪ್ತ, ರೌಡಿಶೀಟರ್ ಪ್ರಜ್ವಲ್ ರೈ ಯನ್ನು ಐಪಿಎಸ್ ಸೆಕ್ಷನ್ ಅಡಿ ಕೇಸು ದಾಖಲಿಸಿ ಮತ್ತೆ ಗಡಿಪಾರು ಮಾಡಬೇಕು, ಬಂಧಿಸಿ ಜೈಲಿಗಟ್ಟಬೇಕು ಎಂದು ಒತ್ತಾಯಿಸಿ ಪುತ್ತೂರು ಬಿಜೆಪಿ ನಗರ ಹಾಗೂ ಗ್ರಾಮಾಂತರ ಮಂಡಲದ ವತಿಯಿಂದ ಪುತ್ತೂರು ನಗರ ಠಾಣೆಗೆ ಮುತ್ತಿಗೆ ಹಾಕಿ ಠಾಣಾಧಿಕಾರಿಗೆ ಶನಿವಾರ ಮನವಿ ನೀಡಲಾಯಿತು. ಮೊದಲಿಗೆ ಬಿಜೆಪಿ ಕಚೇರಿಯಲ್ಲಿ ತುರ್ತು ಸಭೆ ನಡೆಸಿ ಬಳಿಕ ಮೆರವಣಿಗೆ

ರೌಡಿಶೀಟರ್ ಗಳನ್ನು ಮಟ್ಟ ಹಾಕುವ ಕೆಲಸ ಪೊಲೀಸ್ ಇಲಾಖೆಯಿಂದ ಆಗಬೇಕು : ಸಂಜೀವ ಮಠಂದೂರು| ಸಂಜೀವ ಮಠಂದೂರು ಅವರ ಮೇಲೆ ಮಾಡಿದ ಮಾನಹಾನಿ ಬಿಜೆಪಿಗೆ ಮಾಡಿದ ಮಾನಹಾನಿ | ಶಾಸಕರ ಪಿಸ್ತೂಲ್ ಆಟ ಇಲ್ಲಿ ನಡೆಯುವುದಿಲ್ಲ : ಹರಿಕೃಷ್ಣ ಬಂಟ್ವಾಳ Read More »

error: Content is protected !!
Scroll to Top