ವೈದಿಕ ಆಚರಣೆಯಲ್ಲಿ ಅಸಡ್ಡೆಯೇ ವಿಶ್ವಬ್ರಾಹ್ಮಣರು ಹಿಂದುಳಿಯಲು ಕಾರಣ : ವೇ. ಮೂ. ಲೋಲಾಕ್ಷ ಶರ್ಮ | ಕಾವಿನಲ್ಲಿ ಶ್ರೀ ವಿಶ್ವಕರ್ಮ ಪೂಜೆ

ಕಾವು : ವಿಶ್ವಕರ್ಮ ಕಾವು ಕೂಡೂವಳಿಕೆ ವತಿಯಿಂದ ವಿಶ್ವಕರ್ಮ ಪೂಜೆ ಮತ್ತು ಧಾರ್ಮಿಕ ಸಭಾ ಕಾರ್ಯಕ್ರಮ ಕಾವು ಜನಮಂಗಲ ಸಭಾಭವನದಲ್ಲಿ ನಡೆಯಿತು. ಹರೀಶ್ ಆಚಾರ್ಯ ಕಂಟ್ರಮಜಲು ಅವರ ಪೌರೋಹಿತ್ಯದಲ್ಲಿ ವಿಶ್ವಕರ್ಮ ಪೂಜಾ ವೈದಿಕ ವಿಧಿವಿಧಾನ ನಡೆಯಿತು. ಪೂಜೆಯ ಬಳಿಕ ನಡೆದ ಸಭಾ ಕಾರ್ಯಕ್ರಮದಲ್ಲಿ ಪಡುಕುತ್ಯಾರ್ ಆನೆಗುಂದಿ ಗುರುಸೇವಾ ಪರಿಷತ್ ಕೇಂದ್ರ ಸಮಿತಿ ಪ್ರಧಾನ ಕಾರ್ಯದರ್ಶಿ ವೇ.ಮೂ.ಶ್ರೀ ಲೋಲಾಕ್ಷ ಶರ್ಮ ಧಾರ್ಮಿಕ ಉಪನ್ಯಾಸ ನೀಡಿ, ಶಿಲ್ಪಕಲೆ ಸೇರಿದಂತೆ ಪ್ರಮುಖ ಕುಲಕಸುಬುಗಳಿಗೆ ಹೆಚ್ಚು ಒತ್ತು ಕೊಡುವ ಭರದಲ್ಲಿ ನಮ್ಮ ವೈದಿಕ […]

ವೈದಿಕ ಆಚರಣೆಯಲ್ಲಿ ಅಸಡ್ಡೆಯೇ ವಿಶ್ವಬ್ರಾಹ್ಮಣರು ಹಿಂದುಳಿಯಲು ಕಾರಣ : ವೇ. ಮೂ. ಲೋಲಾಕ್ಷ ಶರ್ಮ | ಕಾವಿನಲ್ಲಿ ಶ್ರೀ ವಿಶ್ವಕರ್ಮ ಪೂಜೆ Read More »

ನಾಲ್ಕಂಬ ಷಣ್ಮುಖ ಸ್ಪೋರ್ಟ್ಸ್ ಕ್ಲಬ್ ಆಶ್ರಯದಲ್ಲಿ ನಡೆದ ಸಿ.ಪಿಜಯರಾಮ ಗೌಡ ಸ್ಮರಣಾರ್ಥ ‘ವಿಶ್ವಾಸ್ ಟ್ರೋಫಿ-2024’

ಚಾರ್ವಾಕ: ಗ್ರಾಮದ ನಾಲ್ಕಂಬ ಷಣ್ಮುಖ ಸ್ಪೋರ್ಟ್ಸ್ ಕ್ಲಬ್ ಆಶ್ರಯದಲ್ಲಿ ಸಿ.ಪಿಜಯರಾಮ ಗೌಡ ಸ್ಮರಣಾರ್ಥ ‘ವಿಶ್ವಾಸ್ ಟ್ರೋಫಿ-2024’ ಭಾನುವಾರ ಚಾರ್ವಾಕ ನಾಲ್ಕಂಬ ಶ್ರೀ ಉಳ್ಳಾಲ್ತಿ ಕ್ರೀಡಾಂಗಣದಲ್ಲಿ ನಡೆಯಿತು. ಕ್ರೀಡಾಕೂಟದ ಉದ್ಘಾಟನೆಯನ್ನು ಚಾರ್ವಾಕ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಅಶೋಕ ಗೌಡ ಪಿ. ನೆರವೇರಿಸಿದರು. ಸಮಾರಂಭದಲ್ಲಿ ವಚನ ಪ್ರದೀಪ್ ಆರ್. ಗೌಡ ದೀಪ ಪ್ರಜ್ವಲನೆ ಮಾಡಿದರು. ನಾಲ್ಕಂಬ ಶ್ರೀ ಷಣ್ಮುಖ ಸ್ಪೋರ್ಟ್ಸ್ ಕ್ಲಬ್ ಅಧ್ಯಕ್ಷ ಸುಜಿತ್ ಅರುವ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಕುಂಬ್ಲಾಡಿ ಶ್ರೀ ಕುಕ್ಕೇನಾಥ

ನಾಲ್ಕಂಬ ಷಣ್ಮುಖ ಸ್ಪೋರ್ಟ್ಸ್ ಕ್ಲಬ್ ಆಶ್ರಯದಲ್ಲಿ ನಡೆದ ಸಿ.ಪಿಜಯರಾಮ ಗೌಡ ಸ್ಮರಣಾರ್ಥ ‘ವಿಶ್ವಾಸ್ ಟ್ರೋಫಿ-2024’ Read More »

ಟವರ್ ಮೇಲೆ ಬಿದ್ದ ಮರ : ವ್ಯಕ್ತಿಗೆ ಗಾಯ

ಬೆಳ್ತಂಗಡಿ: ವಿದ್ಯುತ್ ಟವರ್ ಮೇಲೆ ಮರ ಉರುಳಿ ಬಿದ್ದ ಪರಿಣಾಮ ವ್ಯಕ್ತಿಯೊಬ್ಬರು ಗಾಯಗೊಂಡ ಘಟನೆ ಇಂದು ಬೆಳಿಗ್ಗೆ ನಡ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗುರಿಪಳ್ಳ ಸಮೀಪದ ಬಂಡ್ರತ್ತಿಲ್ ಬಳಿ ನಡೆದಿದೆ. ಕನ್ಯಾಡಿಯ ರಮೇಶ್ ಗಾಯಗೊಂಡವರು. ಮರ ಉರುಳಿದ ಸಂದರ್ಭ ಸ್ಕೂಟರ್ ನಲ್ಲಿ ಇಂದಬೆಟ್ಟುಗೆ ಪ್ರಯಾಣಿಸುತ್ತಿದ್ದ ರಮೇಶ್ ಈ ರಸ್ತೆಯಲ್ಲಿ ತೆರಳುತ್ತಿದ್ದ ವೇಳೆ ಮರದ ಭಾಗ ತಲೆಗೆ ಬಡಿದಿದೆ. ಸ್ವಲ್ಪದರಲ್ಲೇ ಅವರು ಪ್ರಾಣಪಾಯದಿಂದ ಪಾರಾಗಿದ್ದಾರೆ. ಗಾಯಾಳುವನ್ನು ಉಜಿರೆಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಘಟನೆಯಿಂದ ಒಂದು ಗಂಟೆಗಿಂತ ಅಧಿಕಕಾಲ ಇಂದಬೆಟ್ಟು

ಟವರ್ ಮೇಲೆ ಬಿದ್ದ ಮರ : ವ್ಯಕ್ತಿಗೆ ಗಾಯ Read More »

ಚಾಲಕನ ನಿಯಂತ್ರಣ ತಪ್ಪಿ ಲಾರಿ ಪಲ್ಟಿ

ಸುಳ್ಯ: ಚಾಲಕನ ನಿಯಂತ್ರಣ ತಪ್ಪಿದ  ಪರಿಣಾಮ ಲಾರಿ ಪಲ್ಟಿಯಾದ ಘಟನೆ ಕನಕಮಜಲು ಗ್ರಾಮದ ಆನೆಗುಂಡಿ ತಿರುವಿನಲ್ಲಿ ಇಂದು ಮಧ್ಯಾಹ್ನ ನಡೆದಿದೆ. ಪಲ್ಟಿಯಾದ ಪರಿಣಾಮ ಚಾಲಕನಿಗೆ ಸಣ್ಣಪುಟ್ಟ ಗಾಯವಾಗಿದೆ. ಮೈಸೂರಿನಿಂದ ಮಂಗಳೂರಿಗೆ ಟೊಮ್ಯಾಟೊ ಹೊತ್ತೊಯ್ಯತ್ತಿದ್ದ ಲಾರಿ ಆನೆಗುಂಡಿಯ ತಿರುವಿನಲ್ಲಿ ನಿಯಂತ್ರಣ ತಪ್ಪಿ ಪಲ್ಟಿಯಾಗಿದೆ. ಗಾಯಗೊಂಡ ಚಾಲಕನನ್ನು ಸ್ಥಳೀಯರು ಸೇರಿ ಸುಳ್ಯದ ಸರ್ಕಾರಿ ಆಸ್ಪತ್ರೆಗೆ ಕರೆತಂದು ಚಿಕಿತ್ಸೆ ಕೊಡಿಸಿದ್ದಾರೆ ಎಂದು ತಿಳಿದುಬಂದಿದೆ. ಲಾರಿಯನ್ನು ಕ್ರೈನ್ ಮೂಲಕ ಮೇಲೆತ್ತಲಾಗಿದೆ.

ಚಾಲಕನ ನಿಯಂತ್ರಣ ತಪ್ಪಿ ಲಾರಿ ಪಲ್ಟಿ Read More »

ಒಂದೇ ಪ್ರಯತ್ನದಲ್ಲಿ ಯುವಕನ ಸಾಧನೆಗೆ ಸಾಕ್ಷಿಯಾದ ಪ್ರಗತಿ ಸ್ಟಡಿ ಸೆಂಟರ್

ಪುತ್ತೂರು: ಕಾಸರಗೋಡಿನ ದೀಕ್ಷಿತ್ ಎಂ.ವಿ. ಬಿಬಿಎಯಲ್ಲಿ ಒಂದು, ಮೂರು ಹಾಗೂ ಐದನೇ ಸೆಮಿಸ್ಟರ್ನ 10 ವಿಷಯಗಳಲ್ಲಿ ಒಂದೇ ಪ್ರಯತ್ನದಲ್ಲಿ ಉತ್ತಮ ಅಂಕಗಳೊಂದಿಗೆ ತೇರ್ಗಡೆಗೊಳ್ಳುವ ಮೂಲಕ ಪ್ರಗತಿ ಸ್ಟಡಿ ಸೆಂಟರ್ ನಲ್ಲಿ ಕಲಿತ ಸಾಧನೆಗೆ ಸಾಕ್ಷಿಯಾಗಿದ್ದಾನೆ. ಕಾಸರಗೋಡಿನ ನೆಟ್ಟಣಿಗೆ ಗ್ರಾಮದ ವಿಠಲರಾವ್ ಮತ್ತು ಸುನಂದ ವಿರವು ದಂಪತಿ ಪುತ್ರ  ದೀಕ್ಷಿತ್ ಎಂ. ವಿ. 2019-22 ನೇ ಸಾಲಿನಲ್ಲಿ ಬೆಟ್ಟಂಪಾಡಿ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಬಿ.ಬಿ.ಎ ವ್ಯಾಸಂಗವನ್ನು ಮಾಡಿದ್ದು, ಪ್ರಥಮ ಸೆಮಿಸ್ಟರ್ನಲ್ಲಿ 1 ವಿಷಯ, ಮೂರನೇ ಸೆಮಿಸ್ಟರ್ನಲ್ಲಿ 5

ಒಂದೇ ಪ್ರಯತ್ನದಲ್ಲಿ ಯುವಕನ ಸಾಧನೆಗೆ ಸಾಕ್ಷಿಯಾದ ಪ್ರಗತಿ ಸ್ಟಡಿ ಸೆಂಟರ್ Read More »

ನಂಬುವ ಮುನ್ನ ಒಮ್ಮೆ ಯೋಚಿಸಿ…!

ನಂಬಿಕೆ ಎಂಬುದು ಕನ್ನಡಿಯಂತೆ. ಒಮ್ಮೆ ಕನ್ನಡಿ ಒಡೆದರೆ ಮತ್ತೆ ಕನ್ನಡಿಯನ್ನು ಸರಿ ಪಡಿಸಲು ಸಾಧ್ಯವಿಲ್ಲ. ನಂಬಿಕೆ ಕೂಡಾ ಹಾಗೆಯೇ. ಒಬ್ಬರ ಮೇಲೆ ಹುಟ್ಟಿ ಆ ನಂಬಿಕೆಯನ್ನು ಅವರೇ ಕೆಡಿಸಿದರೆ ಮತ್ತೆ ಅವರ ಮೇಲೆ ನಂಬಿಕೆ ಹುಟ್ಟಲು ಸಾಧ್ಯವಿಲ್ಲ. ನಂಬಿಕೆ ವ್ಯಕ್ತಿಯೊಬ್ಬನ ಮೇಲೆ ಇರಿಸುವ ಯೋಗ್ಯ ಭರವಸೆಯಾಗಿದೆ. ನಂಬಿಕೆ ಯಾರ ಮೇಲೆಯೂ ಸುಮ್ಮನೆ ಬರುವುದಲ್ಲ. ಬದಲಾಗಿ ಅವರ ನಡತೆಯಿಂದ ಹುಟ್ಟುವುದು . ಆದರೆ ಈ ನಂಬಿಕೆಗೆ ಧಕ್ಕೆ ತರುವ ಕಾರ್ಯಗಳು ಕೆಲವೊಮ್ಮೆ ನಡೆಯುತ್ತದೆ. ಗೊತ್ತಾಗಿಯೂ ಗೊತ್ತಿಲ್ಲದೆಯೂ ನಡೆಯುತ್ತದೆ. ನಂಬಿಕೆ

ನಂಬುವ ಮುನ್ನ ಒಮ್ಮೆ ಯೋಚಿಸಿ…! Read More »

ಕನ್ನಡ ವಿಷಯದಲ್ಲಿ 100% ಅಂಕ ಪಡೆದ ವಿದ್ಯಾರ್ಥಿಗಳಿಗೆ ‘ಕನ್ನಡ ಪ್ರತಿಭೆ ಪ್ರಶಸ್ತಿ’ ಪುರಸ್ಕಾರಕ್ಕೆ ಅರ್ಜಿ ಆಹ್ವಾನ

ಪುತ್ತೂರು: 2023- 24 ನೇ ಶೈಕ್ಷಣಿಕ ವರ್ಷದಲ್ಲಿ ಕನ್ನಡವನ್ನು ಪ್ರಥಮ, ದ್ವಿತೀಯ ಹಾಗೂ ತೃತೀಯ ಭಾಷೆಯನ್ನಾಗಿ ಆಯ್ಕೆ ಮಾಡಿ ಕನ್ನಡ ವಿಷಯದಲ್ಲಿ 100% ಅಂಕ ಪಡೆದ ವಿದ್ಯಾರ್ಥಿಗಳಿಗೆ ಪುತ್ತೂರು ತಾಲೂಕು ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ವರ್ಷಂಪ್ರತಿ ನೀಡುವ ‘ಕನ್ನಡ ಪ್ರತಿಭೆ ಪ್ರಶಸ್ತಿ’ ಪುರಸ್ಕಾರಕ್ಕೆ ಅರ್ಜಿ ಆಹ್ವಾನಿಸಲಾಗಿದೆ. ವಿದ್ಯಾರ್ಥಿಗಳಿಗೆ ಶಾಲು, ಪದಕ, ಪ್ರಮಾಣ ಪತ್ರ  ಹಾಗೂ ಪುಸ್ತಕ ಉಡುಗೊರೆಗಳನ್ನು ಗಣ್ಯ ವ್ಯಕ್ತಿಗಳ ಮೂಲಕ ನೀಡಿ ಗೌರವಿಸಲಾಗುವುದು. ಪುತ್ತೂರು ತಾಲೂಕಿನ ಸರಕಾರಿ, ಖಾಸಗಿ, ಅನುದಾನಿತ, ಅನುದಾನ ರಹಿತ  ಶಾಲೆಗಳಲ್ಲಿ

ಕನ್ನಡ ವಿಷಯದಲ್ಲಿ 100% ಅಂಕ ಪಡೆದ ವಿದ್ಯಾರ್ಥಿಗಳಿಗೆ ‘ಕನ್ನಡ ಪ್ರತಿಭೆ ಪ್ರಶಸ್ತಿ’ ಪುರಸ್ಕಾರಕ್ಕೆ ಅರ್ಜಿ ಆಹ್ವಾನ Read More »

ಕೊಚ್ಚಿಗೆ ತೆರಳುತ್ತಿದ್ದ ಏರ್ ಇಂಡಿಯಾ ವಿಮಾನದಲ್ಲಿ ಹಠಾತ್ತನೆ ಕಾಣಿಸಿಕೊಂಡ ಬೆಂಕಿ | ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ  ತುರ್ತು ಭೂಸ್ಪರ್ಶ

ಬೆಂಗಳೂರು: ಕೊಚ್ಚಿಗೆ ತೆರಳುತ್ತಿದ್ದ ಏರ್ ಇಂಡಿಯಾ ವಿಮಾನದಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ಕೂಡಲೇ ವಿಮಾನವನ್ನು ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ತುರ್ತು ಭೂ ಸ್ಪರ್ಶ ಮಾಡಿದ ಘಟನೆ ಶನಿವಾರ ರಾತ್ರಿ ಬೆಂಗಳೂರಿನಲ್ಲಿ ನಡೆದಿದೆ. ಶನಿವಾರ ರಾತ್ರಿ 11:20ಕ್ಕೆ ಬೆಂಗಳೂರಿನಿಂದ 179 ಪ್ರಯಾಣಿಕರನ್ನು ಹೊತ್ತು ಕೊಚ್ಚಿಗೆ ಹೊರಟಿದ್ದ ಏರ್ ಇಂಡಿಯಾ ವಿಮಾನ 1132ರಲ್ಲಿ ದಿಢೀರ್ ಬೆಂಕಿ ಕಾಣಿಸಿಕೊಂಡಿದೆ. ಕೂಡಲೇ ವಿಮಾನವನ್ನು ನಿಲ್ದಾಣದಲ್ಲಿ ತುರ್ತು ಭೂ ಸ್ಪರ್ಶ ಮಾಡಲಾಯಿತು. ವಿಮಾನ ಲ್ಯಾಂಡಿಂಗ್ ಬಳಿಕ ಅಗ್ನಿಶಾಮಕ ದಳದ ಸಿಬ್ಬಂದಿ ಬೆಂಕಿ ನಂದಿಸಿದ್ದಾರೆ. ಅದೃಷ್ಟವಶಾತ್

ಕೊಚ್ಚಿಗೆ ತೆರಳುತ್ತಿದ್ದ ಏರ್ ಇಂಡಿಯಾ ವಿಮಾನದಲ್ಲಿ ಹಠಾತ್ತನೆ ಕಾಣಿಸಿಕೊಂಡ ಬೆಂಕಿ | ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ  ತುರ್ತು ಭೂಸ್ಪರ್ಶ Read More »

ಕರ್ನಾಟಕದಲ್ಲಿ ಹೆಣ್ಣು ಮಕ್ಕಳು ಕೊಲೆ ಭಾಗ್ಯ ಕಾಣುವಂತಾಗಿದೆ | ರಾಜ್ಯ ಸರಕಾರದ ವಿರುದ್ಧ ಕಿಡಿ ಕಾರಿದ ಬಿ.ವೈ.ವಿಜಯೇಂದ್ರ

ಬೆಂಗಳೂರು : ರಾಜ್ಯದಲ್ಲಿ ಸದ್ಯದ ಪರಿಸ್ಥಿತಿಯಲ್ಲಿ ಮಹಿಳೆಯರು, ವಿದ್ಯಾರ್ಥಿಗಳು ಮನೆಯಿಂದ ಆಚೆ ಬರಲು ಭಯಪಡುವ ವಾತಾವರಣ ನಿರ್ಮಾಣವಾಗಿದೆ. ದುಷ್ಟ ಹಂತಕರಿಗೆ ಯಾರ ಭಯವೂ ಇಲ್ಲದಂತಾಗಿದ್ದು, ಕೊಲೆ, ದಾಂಧಲೆ, ದರೋಡೆ ಪ್ರಕರಣಗಳು ವಿಪರೀತ ಪ್ರಮಾಣದಲ್ಲಿ ಏರಿಕೆ ಆಗಿದೆ ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ವೈ.ವಿಜಯೇಂದ್ರ ಕಿಡಿಕಾರಿದ್ದಾರೆ. ‘ಎಕ್ಸ್’ ಮೂಲಕ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿರುವ ಅವರು, ಸಾಮಾಜಿಕ ಭದ್ರತೆ ಕಲ್ಪಿಸಿ ಜನರಿಗೆ ಅಭಯ ತುಂಬಬೇಕಾದ ಗೃಹ ಇಲಾಖೆ ಈ ನಿಟ್ಟಿನಲ್ಲಿ ಯಾವುದೇ ಹೆಜ್ಜೆ ಇಡದ ಕಾರಣ ನಾಗರಿಕ ಸಮಾಜದ

ಕರ್ನಾಟಕದಲ್ಲಿ ಹೆಣ್ಣು ಮಕ್ಕಳು ಕೊಲೆ ಭಾಗ್ಯ ಕಾಣುವಂತಾಗಿದೆ | ರಾಜ್ಯ ಸರಕಾರದ ವಿರುದ್ಧ ಕಿಡಿ ಕಾರಿದ ಬಿ.ವೈ.ವಿಜಯೇಂದ್ರ Read More »

ಪ್ರಾಕೃತಿಕ ವಿಕೋಪದ ಸಂದರ್ಭದಲ್ಲಿ ಅಧಿಕಾರಿಗಳು 24*7 ನಂತೆ ಕೆಲಸ ಮಾಡಬೇಕು | ಪ್ರಾಕೃತಿಕ ವಿಕೋಪ ಕುರಿತು ಅಧಿಕಾರಿಗಳ ಸಭೆಯಲ್ಲಿ ಜುಬಿನ್ ಮೊಹಪಾತ್ರ

ಉಪ್ಪಿನಂಗಡಿ: ಎರಡು ನದಿಗಳ ಸಂಗಮ ತಾಣವಾಗಿರುವ ಉಪ್ಪಿನಂಗಡಿಯಲ್ಲಿ ಮಳೆಗಾಲದಲ್ಲಿ ಪ್ರವಾಹದ ಭೀತಿಯೂ ಇದ್ದು, ಮುಂಬರುವ ಮಳೆಗಾಲವನ್ನು ಸಮರ್ಥವಾಗಿ ಎದುರಿಸಲು ಅಧಿಕಾರಿಗಳ ತಂಡ ಸನ್ನದ್ಧರಾಗಬೇಕು. ಪ್ರಾಕೃತಿಕ ವಿಕೋಪಗಳು ಹೇಳಿ ಬರುವಂತದ್ದಲ್ಲ. ಅನಿರೀಕ್ಷಿತವಾಗಿ ಬಂದೊದಗುತ್ತವೆ. ಇಂತಹ ಸಂದರ್ಭದಲ್ಲಿ ಅಧಿಕಾರಿಗಳು 24*7 ನಂತೆ ಕೆಲಸ ಮಾಡುವ ಮೂಲಕ ಸಾರ್ವಜನಿಕರ ನೆರವಿಗೆ ತಕ್ಷಣ ಧಾವಿಸಿ ಬರಬೇಕು ಎಂದು ಪುತ್ತೂರು ಸಹಾಯಕ ಕಮಿಷನರ್ ಜುಬಿನ್ ಮೊಹಪಾತ್ರ ತಿಳಿಸಿದರು. ಉಪ್ಪಿನಂಗಡಿಯ ಶ್ರೀ ಸಹಸ್ರಲಿಂಗೇಶ್ವರ-ಮಹಾಕಾಳಿ ದೇವಾಲಯದ ಸಭಾಂಗಣದಲ್ಲಿ ಪುತ್ತೂರು ತಾಲೂಕು ಮಟ್ಟದ ಪ್ರಾಕೃತಿಕ ವಿಕೋಪದ ಬಗ್ಗೆ ಅಧಿಕಾರಿಗಳೊಂದಿಗೆ

ಪ್ರಾಕೃತಿಕ ವಿಕೋಪದ ಸಂದರ್ಭದಲ್ಲಿ ಅಧಿಕಾರಿಗಳು 24*7 ನಂತೆ ಕೆಲಸ ಮಾಡಬೇಕು | ಪ್ರಾಕೃತಿಕ ವಿಕೋಪ ಕುರಿತು ಅಧಿಕಾರಿಗಳ ಸಭೆಯಲ್ಲಿ ಜುಬಿನ್ ಮೊಹಪಾತ್ರ Read More »

error: Content is protected !!
Scroll to Top