ಬೆಂಗಳೂರಿನಲ್ಲಿ ಆತ್ಮಹತ್ಯೆಗೈದ ಎಡಮಂಗಲದ ಯುವಕ

ಸುಳ್ಯ,: ಎಡಮಂಗಲದ ಯುವಕನೋರ್ವ ಬೆಂಗಳೂರಿನಲ್ಲಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಇಂದು ನಡೆದಿದೆ. ಕಡಬ ತಾಲೂಕಿನ ಎಡಮಂಗಲ ಗ್ರಾಮದ ಪುಚ್ಚಜ್ಜೆ  ನಿವಾಸಿ ದಿ.ಪುಟ್ಟಣ್ಣ ಗೌಡ ಎಂಬವರ ಪುತ್ರ ಪ್ರಸನ್ನ ಕುಮಾರ್ (26) ಆತ್ಮಹತ್ಯೆ ಮಾಡಿಕೊಂಡವರು ಪ್ರಸನ್ನ ಅವರು ಬೆಂಗಳೂರಿನ ಮಾರತಹಳ್ಳಿಯ ಸಂಸ್ಥೆಯೊಂದರಲ್ಲಿ ಎಸಿ ಟೆಕ್ನಿಷಿಯನ್ ಆಗಿ ಕಳೆದ ನಾಲ್ಕು ವರ್ಷಗಳಿಂದ ಕೆಲಸ ನಿರ್ವಹಿಸುತ್ತಿದ್ದು, ಭಾನುವಾರ ರಾತ್ರಿ ಪಾಳಿನ ಕೆಲಸ ನಿರ್ವಹಿಸುತ್ತಿದ್ದು ಸೋಮವಾರ ಬೆಳಗ್ಗೆ ಸಂಸ್ಥೆಯ ಕೊಠಡಿಯಲ್ಲಿ ಅವರು ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮೃತರು.ತಾಯಿ, ಇಬ್ಬರು ಸಹೋದರನ್ನು ಅಗಲಿದ್ದಾರೆ. […]

ಬೆಂಗಳೂರಿನಲ್ಲಿ ಆತ್ಮಹತ್ಯೆಗೈದ ಎಡಮಂಗಲದ ಯುವಕ Read More »

ಆ್ಯಕ್ಟೀವಾಗೆ ಕಾರು ಡಿಕ್ಕಿ‌ : ಆ್ಯಕ್ಟೀವ ಸವಾರ ಸ್ಥಳದಲ್ಲೇ ಮೃತ್ಯು

ಬಂಟ್ವಾಳ: ಆ್ಯಕ್ಟೀವಾಗೆ ಕಾರೊಂದು ಡಿಕ್ಕಿ‌ ಹೊಡೆದು ಪರಾರಿಯಾದ ಘಟನೆ ಬಂಟ್ವಾಳ ತಾಲೂಕಿನ ಮಂಚಿ ಗ್ರಾಮದ ಕೋಕಳ ಸಮೀಪದ ನೂಜಿ ಎಂಬಲ್ಲಿ ಸೋಮವಾರ ಮಧ್ಯಾಹ್ನ ನಡೆದಿದೆ. ಆ್ಯಕ್ಟೀವಾ ಸವಾರ, ಪುತ್ತೂರಿನ ನೆಹರುನಗರ ರಕ್ತೇಶ್ವರಿ ಗುಡಿಯ ಹಿಂಬದಿ ನಿವಾಸಿ, ನಿವೃತ್ತ ಸೈನಿಕ ಚಿದಾನಂದ್ ಕಾಮತ್ (55) ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಮುಡಿಪು ಇನ್ಫೋಸಿಸ್ ಸಂಸ್ಥೆಯ ಸೆಕ್ಯೂರಿಟಿ ಗಾರ್ಡ್ ಆಗಿ ಕರ್ತವ್ಯ ನಿರ್ವಹಿಸುತ್ತಿರುವ ಅವರು ಅವಿವಾಹಿತರಾಗಿದ್ದು, ತನ್ನ ತಾಯಿ ಜೊತೆ ವಾಸವಾಗಿದ್ದಾರೆ. ಮೃತರು ತಾಯಿ, ಐವರು ಸಹೋದರರನ್ನು ಅಗಲಿದ್ದಾರೆ.

ಆ್ಯಕ್ಟೀವಾಗೆ ಕಾರು ಡಿಕ್ಕಿ‌ : ಆ್ಯಕ್ಟೀವ ಸವಾರ ಸ್ಥಳದಲ್ಲೇ ಮೃತ್ಯು Read More »

ಡಾ.ಪಾಲ್ತಾಡಿ ಅವರು ಅಧ್ಯಾಪಕನಾಗಿ ಸ್ವ ಪ್ರಯತ್ನದಿಂದ ಕಲಿಯುವುದು, ಕಲಿಸುವುದು, ಸಂಘಟಿಸುವ ಪ್ರಯತ್ನ ಮಾಡಿದ್ದರು : ಡಾ.ವಿವೇಕ್‍ ರೈ | ಅಧ್ಯಯನ ಮಾಡುವವರಿಗೆ ಡಾ.ಪಾಲ್ತಾಡಿ ಉತ್ತಮ ತಳಹದಿ ಹಾಕಿಕೊಟ್ಟಿದ್ದಾರೆ : ಡಾ.ಕೆ.ಚಿನ್ನಪ್ಪ ಗೌಡ | ಹಿರಿಯ ಜಾನಪದ ವಿದ್ವಾಂಸ, ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಮಾಜಿ ಅಧ್ಯಕ್ಷ, ನಿವೃತ್ತ ಉಪನ್ಯಾಸಕ ಡಾ.ಪಾಲ್ತಾಡಿ ರಾಮಕೃಷ್ಣ ಆಚಾರ್ ಶ್ರದ್ಧಾಂಜಲಿ ಸಭೆ

ಪುತ್ತೂರು: ಪ್ರಾಥಮಿಕ ಶಾಲಾ ಅಧ್ಯಾಪಕನಾಗಿ ಸ್ವಪ್ರಯತ್ನದಿಂದ ಕಲಿಯುವುದು, ಕಲಿಸುವುದು ಹಾಗೂ ಸಂಘಟಿಸುವ ಪ್ರಯತ್ನವನ್ನು ಡಾ.ಪಾಲ್ತಾಡಿ ರಾಮಕೃಷ್ಣ ಆಚಾರ್ ಮಾಡಿದ್ದರು. ಹಾಗಾಗಿ ಅವರಿಗೆ ಶಿಕ್ಷಣ, ಸಾಹಿತ್ಯ, ಸಂಸ್ಕೃತಿ, ಸಮುದಾಯ ನಾಲ್ಕು ಚಕ್ರವಿದ್ದಂತಿತ್ತು ಎಂದು ತುಳು ಸಾಹಿತ್ಯ ಅಕಾಡೆಮಿ ಮಾಜಿ ಅಧ್ಯಕ್ಷ ಡಾ.ವಿವೇಕ್‍ ರೈ ಹೇಳಿದರು. ಅವರು ಇತ್ತೀಚೆಗೆ ನಿಧನರಾದ ಹಿರಿಯ ಜಾನಪದ ವಿದ್ವಾಂಸ, ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಮಾಜಿ ಅಧ್ಯಕ್ಷ, ನಿವೃತ್ತ ಉಪನ್ಯಾಸಕ ಡಾ.ಪಾಲ್ತಾಡಿ ರಾಮಕೃಷ್ಣ ಆಚಾರ್ ಅವರ ಶ್ರದ್ಧಾಂಜಲಿ ಸಭೆಯನ್ನು  ಶ್ರೀ ಲಕ್ಷ್ಮೀ ವೆಂಕಟ್ರಮಣ ದೇವಸ್ಥಾನದ

ಡಾ.ಪಾಲ್ತಾಡಿ ಅವರು ಅಧ್ಯಾಪಕನಾಗಿ ಸ್ವ ಪ್ರಯತ್ನದಿಂದ ಕಲಿಯುವುದು, ಕಲಿಸುವುದು, ಸಂಘಟಿಸುವ ಪ್ರಯತ್ನ ಮಾಡಿದ್ದರು : ಡಾ.ವಿವೇಕ್‍ ರೈ | ಅಧ್ಯಯನ ಮಾಡುವವರಿಗೆ ಡಾ.ಪಾಲ್ತಾಡಿ ಉತ್ತಮ ತಳಹದಿ ಹಾಕಿಕೊಟ್ಟಿದ್ದಾರೆ : ಡಾ.ಕೆ.ಚಿನ್ನಪ್ಪ ಗೌಡ | ಹಿರಿಯ ಜಾನಪದ ವಿದ್ವಾಂಸ, ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಮಾಜಿ ಅಧ್ಯಕ್ಷ, ನಿವೃತ್ತ ಉಪನ್ಯಾಸಕ ಡಾ.ಪಾಲ್ತಾಡಿ ರಾಮಕೃಷ್ಣ ಆಚಾರ್ ಶ್ರದ್ಧಾಂಜಲಿ ಸಭೆ Read More »

ಅಕ್ರಮ ಕಲ್ಲುಕೋರೆ ದಾಳಿ ನೆಪದಲ್ಲಿ ಬಿಜೆಪಿ ಯುವಮೋರ್ಚಾ ಅಧ್ಯಕ್ಷರ ಬಂಧನ | ಬಿಜೆಪಿಯಿಂದ ಪ್ರತಿಭಟನೆ

ಬೆಳ್ತಂಗಡಿ : ಅಕ್ರಮ ಕಲ್ಲು ಕೋರೆಗೆ ದಾಳಿ ನೆಪದಲ್ಲಿ ಬಿಜೆಪಿ ಕಾರ್ಯಕರ್ತನನ್ನು ಬಂಧಿಸಿದ ಹಿನ್ನಲೆಯಲ್ಲಿ ಬೆಳ್ತಂಗಡಿ ಬಿಜೆಪಿ ವತಿಯಿಂದ  ಬೆಳ್ತಂಗಡಿಯಲ್ಲಿ ಪ್ರತಿಭಟನೆ ಬೆಳ್ತಂಗಡಿಯಲ್ಲಿ ನಡೆಯಿತು. ಕಾಂಗ್ರೆಸ್ ಸರ್ಕಾರದ ವಿರುದ್ಧ ಧಿಕ್ಕಾರ ಕೂಗಿದ ಬಿಜೆಪಿಗರು ಪೊಲೀಸ್ ಇಲಾಖೆಯ ವಿರುದ್ಧವೂ ಆಕ್ರೋಶ ವ್ಯಕ್ತಪಡಿಸಿದರು. ಪ್ರತಿಭಟನೆಯಲ್ಲಿ ಬೆಳ್ತಂಗಡಿ ಶಾಸಕ ಹರೀಶ್ ಪೂಂಜ, ಬಿಜೆಪಿ ಲೋಕಸಭಾ ಅಭ್ಯರ್ಥಿಗಳಾದ ಕ್ಯಾಪ್ಟನ್ ಬ್ರಿಜೇಶ್ ಚೌಟ, ಕೋಟ ಶ್ರೀನಿವಾಸ ಪೂಜಾರಿ ಸಹಿತ ಬಿಜೆಪಿ ಮುಖಂಡರು, ಕಾರ್ಯಕರ್ತರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

ಅಕ್ರಮ ಕಲ್ಲುಕೋರೆ ದಾಳಿ ನೆಪದಲ್ಲಿ ಬಿಜೆಪಿ ಯುವಮೋರ್ಚಾ ಅಧ್ಯಕ್ಷರ ಬಂಧನ | ಬಿಜೆಪಿಯಿಂದ ಪ್ರತಿಭಟನೆ Read More »

ಆಲಂಕಾರು ವಲಯ ಒಕ್ಕಲಿಗ ಗೌಡ ಸೇವಾ ಸಂಘದಿಂದ ಶ್ರೀ ಸತ್ಯನಾರಾಯಣ ಪೂಜೆ, ನೂತನ ಪದಾಧಿಕಾರಿಗಳ ಪದಗ್ರಹಣ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮ

ಆಲಂಕಾರು: ಆಲಂಕಾರು ವಲಯ ಒಕ್ಕಲಿಗ ಗೌಡ ಸೇವಾ ಸಂಘದ ವತಿಯಿಂದ ಶ್ರೀ ಸತ್ಯನಾರಾಯಣ ದೇವರ ಪೂಜೆ, ನೂತನ ಪದಾಧಿಕಾರಿಗಳ ಪದಗ್ರಹಣ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮ ಭಾನುವಾರ ಆಲಂಕಾರು ಶ್ರೀ ಭಾರತಿ ಹಿರಿಯ ಪ್ರಾಥಮಿಕ ಶಾಲೆಯ ಸಭಾಂಗಣದಲ್ಲಿ ನಡೆಯಿತು. ಕಾರ್ಯಕ್ರಮದ ಅಂಗವಾಗಿ ಬೆಳಿಗ್ಗೆ ಸುಬ್ರಹ್ಮಣ್ಯ ಬಳ್ಳಕ್ಕುರಾಯ ನೇತೃತ್ವದಲ್ಲಿ ಶ್ರೀ ಸತ್ಯನಾರಾಯಣ ಪೂಜೆ, ಮಹಾಪೂಜೆ ನಡೆದು ಪ್ರಸಾದ ವಿತರಣೆ ನಡೆಯಿತು. ಬಳಿಕ ನಡೆದ ಸಭಾ ಕಾರ್ಯಕ್ರಮದಲ್ಲಿ ಶ್ರೀ ರಾಮಕುಂಜೇಶ್ವರ ಪ.ಪೂ.ಕಾಲೇಜಿನ ಉಪನ್ಯಾಸಕ ಗುಡ್ಡಪ್ಪ ಗೌಡ ಬಲ್ಯ ಗೌಡ ಸಮಾಜದ ಕಟ್ಟುಪಾಡುಗಳ

ಆಲಂಕಾರು ವಲಯ ಒಕ್ಕಲಿಗ ಗೌಡ ಸೇವಾ ಸಂಘದಿಂದ ಶ್ರೀ ಸತ್ಯನಾರಾಯಣ ಪೂಜೆ, ನೂತನ ಪದಾಧಿಕಾರಿಗಳ ಪದಗ್ರಹಣ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮ Read More »

ಚಾರ್ವಾಕ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಕ್ಕೆ ನೂತನ ಕಚೇರಿ ಕಟ್ಟಡ ಹಾಗೂ ಗೋದಾಮು ನಿರ್ಮಾಣ | ರೂಪುರೇಷೆಗಳ ಕುರಿತು ಅಂತಿಮ ಹಂತದ ಸಮಾಲೋಚನಾ ಸಭೆ

ಕಾಣಿಯೂರು : ಚಾರ್ವಾಕ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಕ್ಕೆ ನೂತನ ಕಚೇರಿ ಕಟ್ಟಡ ಹಾಗೂ ಗೋದಾಮು ನಿರ್ಮಾಣದ ಆರಂಭದ ಅಂತಿಮ ರೂಪುರೇಷೆಗಳ ಕುರಿತು ಚರ್ಚಿಸಲು ಅಂತಿಮ ಹಂತದ ಸಮಾಲೋಚನಾ ಸಭೆ ಕಾಣಿಯೂರು ಪ್ರಧಾನ ಕಚೇರಿಯ ಸಭಾಭವನದಲ್ಲಿ ನಡೆಯಿತು. ಈಗಾಗಲೇ ನೂತನ ಕಚೇರಿ ಕಟ್ಟಡ ಹಾಗೂ ಗೋದಾಮು ಲೋಕಾರ್ಪಣೆ ಮಾಡಲು ನೀಲನಕಾಶೆ ಹಾಗೂ ಅಂದಾಜುಪಟ್ಟಿ ಮಾಡಲಾಗಿದ್ದು, ಸರಕಾರದಿಂದ ಅನುಮತಿ ಪಡೆಯಲಾಗಿದೆ. 2 ಕೋಟಿ ವೆಚ್ಚದಲ್ಲಿ ಕಟ್ಟಡ ನಿರ್ಮಾಣ ಮಾಡುವುದೆಂದು ಸಭೆಯಲ್ಲಿ ತೀರ್ಮಾನಿಸಲಾಯಿತು. ಪಂಚಾಯತ್ ವ್ಯಾಪ್ತಿಗೆ ಒಳಪಡುವ ಪ್ರಮುಖರ

ಚಾರ್ವಾಕ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಕ್ಕೆ ನೂತನ ಕಚೇರಿ ಕಟ್ಟಡ ಹಾಗೂ ಗೋದಾಮು ನಿರ್ಮಾಣ | ರೂಪುರೇಷೆಗಳ ಕುರಿತು ಅಂತಿಮ ಹಂತದ ಸಮಾಲೋಚನಾ ಸಭೆ Read More »

ಬೆಳ್ತಂಗಡಿ ಶಾಸಕ ಹರೀಶ್ ಪೂಂಜರ ಮೇಲೆ ಕೇಸು ದಾಖಲಿಸಿರುವುದು ಖಂಡನೀಯ : ಸಾಜ ರಾಧಾಕೃಷ್ಣ ಆಳ್ವ

ಪುತ್ತೂರು : ಬೆಳ್ತಂಗಡಿ ಮಂಡಲ ಯುವಮೋರ್ಚಾ ಅಧ್ಯಕ್ಷರನ್ನು ವಿನಾಕಾರಣ ಬಂಧಿಸಿದ ನಿಟ್ಟಿನಲ್ಲಿ ಬಿಡುಗಡೆಗಾಗಿ ಹೊರಟ ಬೆಳ್ತಂಗಡಿ ಶಾಸಕ ಹರೀಶ್ ಪೂಂಜರ ಮೇಲೆ ಕೇಸು ದಾಖಲಿಸಿರುವುದು ಖಂಡನೀಯ ಎಂದು ಪುತ್ತೂರು ಗ್ರಾಮಾಂತರ ಮಂಡಲ ಅಧ್ಯಕ್ಷ ಸಾಜ ರಾಧಕೃಷ್ಣ ಆಳ್ವ ತಿಳಿಸಿದ್ದಾರೆ. ಕಾಂಗ್ರೆಸ್ ಸರಕಾರ ಅಭಿವೃದ್ಧಿ ಕಾರ್ಯಗಳತ್ತ ಗಮನ ಹರಿಸುವುದನ್ನು ಬಿಟ್ಟು ಬಿಜೆಪಿ ನಾಯಕರ ಮತ್ತು ಹಿಂದೂ ಮುಖಂಡರುಗಳ ಮೇಲೆ ಕೇಸು ದಾಖಲಿಸುವುದಲ್ಲೇ ನಿರತವಾಗಿದೆ. ಈ ರೀತಿಯ ದಮನಕಾರಿ ರೀತಿಯನ್ನು ಕಾಂಗ್ರೆಸ್ ಸರಕಾರ ನಿಲ್ಲಿಸದಿದ್ದರೆ ಮುಂದಿನ ದಿನಗಳಲ್ಲಿ ನಿಮಗೆ ಮುಳುವಾಗಲಿದೆ

ಬೆಳ್ತಂಗಡಿ ಶಾಸಕ ಹರೀಶ್ ಪೂಂಜರ ಮೇಲೆ ಕೇಸು ದಾಖಲಿಸಿರುವುದು ಖಂಡನೀಯ : ಸಾಜ ರಾಧಾಕೃಷ್ಣ ಆಳ್ವ Read More »

ಪ್ರಗತಿ ಸ್ಟಡಿ ಸೆಂಟರ್‌ನಲ್ಲಿ ನೇರವಾಗಿ ದ್ವಿತೀಯ ಪಿಯುಸಿ, ಎಸ್ ಎಸ್ ಎಲ್ ಸಿ ತರಗತಿಗಳು | ಎಸ್‍ ಎಸ್‍ ಎಲ್‍ ಸಿ, ಪ್ರಥಮ, ದ್ವಿತೀಯ ಪಿಯುಸಿ, ವಿಜ್ಞಾನ, ವಾಣಿಜ್ಯ ಹಾಗೂ ಕಲಾ ತರಗತಿಗಳು ಜೂ.3 ರಿಂದ ಆರಂಭ

ಪುತ್ತೂರು: ಪ್ರಗತಿ ಎಜುಕೇಶನಲ್ ಫೌಂಡೇಶನ್ ಅಧೀನದಲ್ಲಿ ಪುತ್ತೂರಿನ ಧರ್ಮಸ್ಥಳ ಕಟ್ಟಡದಲ್ಲಿ ಕಾರ್ಯನಿರ್ವಹಿಸುತ್ತಿರುವ ಪ್ರಗತಿ ಸ್ಟಡಿ ಸೆಂಟರ್‌ನಲ್ಲಿ ಕಳೆದ 17 ವರ್ಷಗಳಿಂದ ಶಾಲಾ-ಕಾಲೇಜು ಪರೀಕ್ಷೆಯಲ್ಲಿ ಅನುತ್ತೀರ್ಣಗೊಂಡ ಎಸ್ ಎಸ್ ಎಲ್ ಸಿ, ಪ್ರಥಮ ಪಿಯುಸಿ, ದ್ವಿತೀಯ ಪಿಯುಸಿ, ವಿಜ್ಞಾನ, ವಾಣಿಜ್ಯ, ಕಲಾ ವಿಭಾಗದ ವಿದ್ಯಾರ್ಥಿಗಳಿಗೆ ತಮ್ಮ ವಿದ್ಯಾಭ್ಯಾಸವನ್ನು ಮುಂದುವರಿಸಲು ಮತ್ತು ಫೇಲ್ ಆಗಿರುವ ವಿಷಯವನ್ನು ಪಾಸ್ ಮಾಡಿಕೊಳ್ಳಲು ಉತ್ತಮ ವಾತಾವರಣವನ್ನು ಕಲ್ಪಿಸಿಕೊಟ್ಟಿದೆ. ಪಿಯುಸಿ ಮತ್ತು ಎಸ್ ಎಸ್ ಎಲ್ ಸಿ ಮಾರ್ಚ್ 2025 ಕ್ಕೆ 15 ಅಥವಾ 17

ಪ್ರಗತಿ ಸ್ಟಡಿ ಸೆಂಟರ್‌ನಲ್ಲಿ ನೇರವಾಗಿ ದ್ವಿತೀಯ ಪಿಯುಸಿ, ಎಸ್ ಎಸ್ ಎಲ್ ಸಿ ತರಗತಿಗಳು | ಎಸ್‍ ಎಸ್‍ ಎಲ್‍ ಸಿ, ಪ್ರಥಮ, ದ್ವಿತೀಯ ಪಿಯುಸಿ, ವಿಜ್ಞಾನ, ವಾಣಿಜ್ಯ ಹಾಗೂ ಕಲಾ ತರಗತಿಗಳು ಜೂ.3 ರಿಂದ ಆರಂಭ Read More »

ಇರಾನ್ ಅಧ್ಯಕ್ಷರು ಪ್ರಯಾಣಿಸುತ್ತಿದ್ದ ಹೆಲಿಕಾಪ್ಟರ್ ಪಥನ | ಪ್ರಯಾಣಿಕರೆಲ್ಲರೂ ದುರ್ಮರಣ

ಇರಾನ್ ಅಧ್ಯಕ್ಷ ಇಬ್ರಾಹಿಂ ರೈಸಿ ಮತ್ತು ಅವರ ವಿದೇಶಾಂಗ ಸಚಿವ ಹುಸೇನ್ ಅಮಿರಾಬೊಲ್ಲಿಯನ್ ಪ್ರಯಾಣಿಸುತ್ತಿದ್ದ ಹೆಲಿಕಾಪ್ಟರ್ ಅಪಘಾತದ ಸ್ಥಳದಲ್ಲಿ ಬದುಕುಳಿದವರು ಕಂಡುಬಂದಿಲ್ಲ ಎಂದು ಇರಾನಿನ ಸರ್ಕಾರಿ ಮಾಧ್ಯಮ ಸೋಮವಾರ ತಿಳಿಸಿದೆ. ಇರಾನ್ ಅಧ್ಯಕ್ಷ ಇಬ್ರಾಹಿಂ ರೈಸಿ ಅವರ ಹೆಲಿಕಾಪ್ಟರ್ ಪತ್ತೆಯಾಗಿದೆ ಆದರೆ ಪರಿಸ್ಥಿತಿ ಉತ್ತಮವಾಗಿಲ್ಲ ಎಂದು ಇರಾನ್ ನ ರೆಡ್ ಕ್ರೆಸೆಂಟ್ ಮುಖ್ಯಸ್ಥರು ಹೇಳಿದ್ದಾರೆ. ಅಧ್ಯಕ್ಷ ರೈಸಿ ಮತ್ತು ಅಜೆರ್ಬೈಜಾನ್ ಅಧ್ಯಕ್ಷ ಇಲ್ಲಾಮ್ ಅಲಿಯನ್ ತಮ್ಮ ಹಂಚಿಕೆಯ ಗಡಿಯಲ್ಲಿರುವ ಕ್ವಿಜ್ ಖಲಾಸಿ ಅಣೆಕಟ್ಟನ್ನು ಉದ್ಘಾಟಿಸಿದ ನಂತರ ಅಧ್ಯಕ್ಷ

ಇರಾನ್ ಅಧ್ಯಕ್ಷರು ಪ್ರಯಾಣಿಸುತ್ತಿದ್ದ ಹೆಲಿಕಾಪ್ಟರ್ ಪಥನ | ಪ್ರಯಾಣಿಕರೆಲ್ಲರೂ ದುರ್ಮರಣ Read More »

ಇಂದು 5ನೇ ಹಂತದ ಮತದಾನ | 8 ರಾಜ್ಯಗಳ 49 ಕ್ಷೇತ್ರಗಳ 695 ಅಭ್ಯರ್ಥಿಗಳು ಸ್ಪರ್ಧಾ ಕಣದಲ್ಲಿ

ದೇಶದಾದ್ಯಂತ 5ನೇ ಹಂತದ ಚುನಾವಣೆ ನಡೆಯುತ್ತಿದೆ. ಐದನೇ ಹಂತದ ಮತದಾನದಲ್ಲಿ 8 ರಾಜ್ಯಗಳ 49 ಕ್ಷೇತ್ರಗಳಲ್ಲಿ 695 ಅಭ್ಯರ್ಥಿಗಳು ತಮ್ಮ ಅದೃಷ್ಟ ಪರೀಕ್ಷೆಗೆ ಇಳಿದಿದ್ದಾರೆ. ಇಂದಿನ ಚುನಾವಣೆಯಲ್ಲಿ ಘಟಾನುಘಟಿಗಳು ಅಖಾಡದಲ್ಲಿದ್ದಾರೆ. ಇಂದು ಬೆಳಗ್ಗೆ 7 ಗಂಟೆಯಿಂದ ಮತದಾನ ಶುರುವಾಗಿದ್ದು ಸಂಜೆ 6 ಗಂಟೆವರೆಗೆ ನಡೆಯಲಿದೆ. ಐದನೇ ಸುತ್ತಿನಲ್ಲಿ ಮತದಾನ ನಡೆಯುತ್ತಿರುವ ಸ್ಥಾನಗಳಲ್ಲಿ ಉತ್ತರ ಪ್ರದೇಶದ 14, ಮಹಾರಾಷ್ಟ್ರದ 13, ಪಶ್ಚಿಮ ಬಂಗಾಳದ 7 ಬಿಹಾರ ಮತ್ತು ಒಡಿಶಾದಲ್ಲಿ ತಲಾ 5 ಸ್ಥಾನಗಳು ಸೇರಿವೆ. ಇದಲ್ಲದೆ ಜಾರ್ಖಂಡ್‌ನ 3

ಇಂದು 5ನೇ ಹಂತದ ಮತದಾನ | 8 ರಾಜ್ಯಗಳ 49 ಕ್ಷೇತ್ರಗಳ 695 ಅಭ್ಯರ್ಥಿಗಳು ಸ್ಪರ್ಧಾ ಕಣದಲ್ಲಿ Read More »

error: Content is protected !!
Scroll to Top