ಸಂಟ್ಯಾರ್ ನಲ್ಲಿ ಭೀಕರ ಅಪಘಾತ | ಹತ್ತಕ್ಕೂ ಹೆಚ್ಚು ವಾಹನಗಳಿಗೆ ಜಖಂ

ಪುತ್ತೂರು : ಸರಣಿ ಅಪಘಾತಗಳು ನಡೆದಿ ಪರಿಣಾಮ 10ಕ್ಕೂ ಹೆಚ್ಚು ವಾಹನಗಳು ಪುಡಿ ಪುಡಿಯಾದ ಘಟನೆ ಇಂದು ಸಂಜೆ ಸಂಟ್ಯಾರ್ ನಲ್ಲಿ ನಡೆದಿದೆ. ಪಾಣಾಜೆ – ಸಂಟ್ಯಾರ್ ರಸ್ತೆಯಲ್ಲಿ ಈ ಅಪಘಾತ ಸಂಭವಿಸಿದೆ. ಸಂಟ್ಯಾರ್ ಜಂಕ್ಷನ್ ನಲ್ಲಿ ನಿಲ್ಲಿಸಿದ್ದ ಹತ್ತಕ್ಕೂ ಹೆಚ್ಚು ಬೈಕ್ ಗಳು ಪುಡಿ ಪುಡಿಯಾಗಿ ಚೆಲ್ಲಪಿಲ್ಲಿಯಾಗಿದೆ. ಪಾಣಾಜೆ ಕಡೆಯಿಂದ ಅತೀ ವೇಗದಲ್ಲಿ ಬರುತ್ತಿದ್ದ ಕಾರೊಂದು ಈ ಹತ್ತಕ್ಕೂ ಹೆಚ್ಚು ದ್ವಿಚಕ್ರ ವಾಹನಗಳಿಗೆ ಡಿಕ್ಕಿಯಾಗಿದೆ. ಸಂಟ್ಯಾರ್ ಜಂಕ್ಷನ್ ನಲ್ಲಿ ವಾಹನ ನಿಲ್ಲಿಸಿ ಬಸ್ ನಲ್ಲಿ ಉದ್ಯೋಗಕ್ಕೆ […]

ಸಂಟ್ಯಾರ್ ನಲ್ಲಿ ಭೀಕರ ಅಪಘಾತ | ಹತ್ತಕ್ಕೂ ಹೆಚ್ಚು ವಾಹನಗಳಿಗೆ ಜಖಂ Read More »

ಪ್ರಧಾನಮಂತ್ರಿ ಫಸಲ್ ವಿಮೆ ಹಾಗೂ ಹವಾಮಾನ ಆಧಾರಿತ ಫಸಲ್ ವಿಮೆಯನ್ನು ಶೀಘ್ರ ಅನುಷ್ಠಾನಗೊಳಿಸುವಂತೆ ಮನವಿ | ಮುಖ್ಯಮಂತ್ರಿಗಳಿಗೆ ಪತ್ರ ಬರೆದ ಮಾಜಿ ಶಾಸಕ ಸಂಜೀವ ಮಠಂದೂರು

ಪುತ್ತೂರು: ಕೇಂದ್ರ ಸರಕಾರ ಅನುಷ್ಠಾನಗೊಳಿಸಿರುವ 2024-25ನೇ ಸಾಲಿನ ಪ್ರಧಾನಮಂತ್ರಿ ಫಸಲ್ ವಿಮೆ ಹಾಗೂ ಹವಾಮಾನ ಆಧಾರಿತ ಫಸಲ್ ವಿಮೆಯನ್ನು ಶೀಘ್ರ ಅನುಷ್ಠಾನಗೊಳಿಸುವಂತೆ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರಿಗೆ ಪತ್ರದ ಮೂಲಕ ಮನವಿ ಮಾಡಿದ್ದಾರೆ. ಪ್ರಧಾನಮಂತ್ರಿ ಫಸಲ್ ವಿಮೆ ಹಾಗೂ ಹವಾಮಾನ ಆಧಾರಿತ ಫಸಲ್ ವಿಮೆ ರೈತರಿಗೆ ಹವಾಮಾನ ವೈಪರೀತ್ಯದಿಂದ ಆರ್ಥಿಕ ರಕ್ಷಣೆ ನೀಡುತ್ತಾ ಬಂದಿದೆ. ಪ್ರಕೃತ ಹಂಗಾಮು ಮುಂಗಾರಿಗೆ ರಾಜ್ಯ ಸರಕಾರದ ಕೃಷಿ ಇಲಾಖೆ ಹಾಗೂ ತೋಟಗಾರಿಕೆ ಇಲಾಖೆ ಜೂನ್‍ ತಿಂಗಳಲ್ಲಿ ರೈತರ ವಿಮೆ ಪ್ರೀಮಿಯಂ ಕಂತು ಕಟ್ಟಲು

ಪ್ರಧಾನಮಂತ್ರಿ ಫಸಲ್ ವಿಮೆ ಹಾಗೂ ಹವಾಮಾನ ಆಧಾರಿತ ಫಸಲ್ ವಿಮೆಯನ್ನು ಶೀಘ್ರ ಅನುಷ್ಠಾನಗೊಳಿಸುವಂತೆ ಮನವಿ | ಮುಖ್ಯಮಂತ್ರಿಗಳಿಗೆ ಪತ್ರ ಬರೆದ ಮಾಜಿ ಶಾಸಕ ಸಂಜೀವ ಮಠಂದೂರು Read More »

ಮೇ 31 ರಂದು ಭಾರತಕ್ಕೆ ಬರುವೆ ಎಂದ ಪ್ರಜ್ವಲ್ ರೇವಣ್ಣ | ವಿದೇಶದಿಂದ ವೀಡಿಯೋ ಮೂಲಕ ಹೇಳಿಕೆ

ಬೆಂಗಳೂರು : ಸಂಸದ ಪ್ರಜ್ವಲ್ ರೇವಣ್ಣ ಮೇ 31 ರಂದು ಎಸ್‍ ಐಟಿ ತನಿಖೆಗೆ ಬರುವುದಾಗಿ ತಿಳಿಸಿದ್ದಾರೆ. ಅವರ ಅಶ್ಲೀಲ ವಿಡಿಯೋ ಪ್ರಕರಣ ಬಹಿರಂಗಗೊಳ್ಳುತ್ತಿದ್ದಂತೆ ದೇಶದೆಲ್ಲೆಡೆ ಕಿಡಿ ಹೊತ್ತಿದ ಬಳಿಕ ಒಂದು ತಿಂಗಳ ನಂತರ ವೀಡಿಯೋ ರಿಲೀಸ್ ಮಾಡುವ ಮೂಲಕ ಪ್ರತ್ಯಕ್ಷರಾಗಿದ್ದಾರೆ. ಪ್ರಕರಣ ಕುರಿತು ಮಾತನಾಡಿ, ರಾಜ್ಯದ ಹಾಗೂ ಜೆಡಿಎಸ್ ಕಾರ್ಯಕರ್ತರ ಕ್ಷಮೆಯಾಚಿಸಿದ್ದಾರೆ. ನನ್ನ ರಾಜಕೀಯ ಬೆಳವಣಿಗೆ ಸಹಿಸಲಾಗದೇ ಕೆಲ ಶಕ್ತಿಗಳು ನನ್ನ ವಿರುದ್ಧ ಈ ರೀತಿ ಪಿತೂರಿ ಮಾಡಿದ್ದಾರೆ. ಹೀಗಾಗಿ ಎಲ್ಲರಲ್ಲಿ ಕ್ಷಮೆ ಕೇಳುವೆ ಎಂದಿದ್ದಾರೆ.

ಮೇ 31 ರಂದು ಭಾರತಕ್ಕೆ ಬರುವೆ ಎಂದ ಪ್ರಜ್ವಲ್ ರೇವಣ್ಣ | ವಿದೇಶದಿಂದ ವೀಡಿಯೋ ಮೂಲಕ ಹೇಳಿಕೆ Read More »

ಮೇ.29 ರಿಂದ ಶಾಲಾರಂಭ | ಶಿಕ್ಷಕರು ಮೇ.29, ವಿದ್ಯಾರ್ಥಿಗಳು ಮೇ 31 ರಿಂದ ಹಾಜರಾಗುವಂತೆ ಆದೇಶ

ಬೆಂಗಳೂರು : ಹೊಸ ಶೈಕ್ಷಣಿಕ ವರ್ಷದ ಶಾಲಾರಂಭ ಮೇ.29 ರಿಂದ ಎಂಬ ಸಾರ್ವಜನಿಕ ಶಿಕ್ಷಣ ಇಲಾಖೆಯ ಈ ಹಿಂದಿನ ಆದೇಶದಲ್ಲಿ ಸ್ವಲ್ಪ ಬದಲಾವಣೆಯಾಗಿದ್ದು, ವಿದ್ಯಾರ್ಥಿಗಳು ಮತ್ತೆರಡು ದಿನ ರಜೆ ಅವಧಿ ಪಡೆಯಲಿದ್ದಾರೆ. ಮೇ.29 ರಿಂದಲೇ ಶಿಕ್ಷಕರು ಶಾಲೆಗೆ ಹಾಜರಾಗಲು ಸೂಚಿಸಲಾಗಿದೆ. ಮೇ.31ರಂದು ಮಕ್ಕಳು ಶಾಲೆಗೆ ಬರುವಂತೆ ಸೂಚಿಸಲಾಗಿದೆ. ಮೇ.29ರಂದು ಶಾಲೆಗೆ ಬರುವ ಶಿಕ್ಷಕರು ಸಿದ್ಧತಾ ಕಾರ್ಯವನ್ನು ನಡೆಸಲಿದ್ದಾರೆ. ಮಕ್ಕಳು ಮೇ.31ರಂದು ಶಾಲೆಗೆ ಬಂದರಾಯಿತು ಎಂದು ಕ್ಷೇತ್ರ ಶಿಕ್ಷಣಾಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಮೇ.29 ರಿಂದ ಶಾಲಾರಂಭ | ಶಿಕ್ಷಕರು ಮೇ.29, ವಿದ್ಯಾರ್ಥಿಗಳು ಮೇ 31 ರಿಂದ ಹಾಜರಾಗುವಂತೆ ಆದೇಶ Read More »

ವಾಹನ ಓಡಾಟದ ನಡುವೆಯೇ ರಸ್ತೆಯಲ್ಲಿ ನಮಾಜ್‍ | ಎಲ್ಲೆಡೆ ವ್ಯಾಪಕ ಆಕ್ರೋಶ

ಮಂಗಳೂರು: ವಾಹನ ಓಡಾಟದ ನಡುವೆಯೇ ರಸ್ತೆಯಲ್ಲಿ ಕುಳಿತು ನಮಾಜ್‍ ಮಾಡಿದ ಘಟನೆ ಮಂಗಳೂರಿನ ಕಂಕನಾಡಿ ಮಸೀದಿ ಎದುರು ನಡೆದಿದ್ದು, ಈ ಕುರಿತು ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಇತ್ತೀಚಿಗೆ ಬೆಂಗಳೂರಿನಲ್ಲಿ ಮುಸ್ಲಿಮರು ನಡುರಸ್ತೆಯಲ್ಲಿ ಕೂತು ನಮಾಜ್ ಮಾಡುತ್ತಿದ್ದ ಭಾವಚಿತ್ರ ಎಲ್ಲಡೆ ಹರದಾಡಿತ್ತು. ಇದಕ್ಕೆ ವ್ಯಾಪಕ ಆಕ್ರೋಶ ವ್ಯಕ್ತವಾಗಿತ್ತು. ಇದರ ಬೆನ್ನಲ್ಲೇ ಮಂಗಳೂರಿನ ಕಂಕನಾಡಿಯಲ್ಲಿ ನಡು ರಸ್ತೆಯಲ್ಲೇ ಮುಸ್ಲಿಮರು ನಮಾಜ್ ಮಾಡಿದ್ದಾರೆ. ಕಳೆದ ಶುಕ್ರವಾರ ಘಟನೆ ನಡೆದಿದ್ದು, ನಮಾಜ್ ಮಾಡಿದ ವಿಡಿಯೋ ಎಲ್ಲಡೆ ಹರಿದಾಡುತ್ತಿದೆ. ಯುವಕರು ನಡುರಸ್ತೆಯಲ್ಲೇ

ವಾಹನ ಓಡಾಟದ ನಡುವೆಯೇ ರಸ್ತೆಯಲ್ಲಿ ನಮಾಜ್‍ | ಎಲ್ಲೆಡೆ ವ್ಯಾಪಕ ಆಕ್ರೋಶ Read More »

ರಸ್ತೆ ಡಾಮರೀಕರಣ ಕಾಮಗಾರಿ : ಬದಲಿ ರಸ್ತೆಯಲ್ಲಿ ಚಲಿಸುವಂತೆ ಪ್ರಕಟಣೆ

ಉಪ್ಪಿನಂಗಡಿ: ಉಪ್ಪಿನಂಗಡಿ – ಹಿರೇಬಂಡಾಡಿ – ಕೊಯಿಲ ರಸ್ತೆಯ ಉಪ್ಪಿನಂಗಡಿಯಿಂದ ರಾಮನಗರದವರೆಗೆ ಡಾಮರೀಕರಣ ಕಾಮಗಾರಿ ಇರುವುದರಿಂದ ಮೇ 29 ರಿಂದ ಜೂ.2 ರ ವರೆಗೆ ವಾಹನ ಸಂಚಾರ ನಿರ್ಭಂಧಿಸಲಾಗಿದೆ. ಈ ನಿಟ್ಟಿನಲ್ಲಿ ಸಾವ೯ಜನಿಕರು ಈ ಸಮಯದಲ್ಲಿ ಕೆಳಕಂಡ ಪರ್ಯಾಯ ರಸ್ತೆಗಳ ಬಳಕೆ ಮಾಡುವಂತೆ ವಿನಂತಿಸಲಾಗಿದೆ: ಉಪ್ಪಿನಂಗಡಿ – ನಟ್ಟಿಬೈಲು – ಶ್ರೀ ರಾಮ ಶಾಲೆ ರಸ್ತೆಯಲ್ಲಿ ಸಾರ್ವಜನಿಕರು ಪ್ರಯಾಣಿಸುವಂತೆ ಲೋಕೋಪಯೋಗಿ ಇಲಾಖೆ ಪ್ರಕಟಣೆ ನೀಡಿದೆ.

ರಸ್ತೆ ಡಾಮರೀಕರಣ ಕಾಮಗಾರಿ : ಬದಲಿ ರಸ್ತೆಯಲ್ಲಿ ಚಲಿಸುವಂತೆ ಪ್ರಕಟಣೆ Read More »

ಕಷ್ಟದಲ್ಲಿರುವ ಯುವಕ: ನೆರವಿಗಾಗಿ ಮನವಿ

ಪಂಜ: ಪಂಜದ ಯುವ ತೇಜಸ್ಸ್ ನ ಆ್ಯಂಬುಲೆನ್ಸ್ ಚಾಲಕರಾಗಿ ದುಡಿಯುತ್ತಿದ್ದ ಪ್ರದೀಪ್ ಅಡ್ಕ ರವರು ಬೈಕಿನಿಂದ ಬಿದ್ದು ತಲೆಯ ಭಾಗಕ್ಕೆ ತಾಗಿ ಮೆದುಳಿಗೆ ಸಂಬಂಧಿಸಿದ ನರಕ್ಕೆ ಪೆಟ್ಟಾಗಿದ್ದು ಪ್ರಸ್ತುತ ಮಂಗಳೂರಿನ ಫಸ್ಟ್ ನ್ಯೂರೋದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಯುವ ತೇಜಸ್ಸು ಆ್ಯಂಬುಲೆನ್ಸ್’ನಲ್ಲಿ ಬಹಳಷ್ಟು ಬಾರಿ ಬಡವರಿಗೆ, ಕಷ್ಟದಲ್ಲಿರುವ ಜನರಿಗೆ ಉಚಿತ ಸೇವೆಯನ್ನು ಒದಗಿಸಲೂ ಕಾರಣಕರ್ತರಾದ ಬಡ ಕುಟುಂಬದ ಪ್ರದೀಪರು ಯುವ ತೇಜಸ್ಸ್ ನ ಸೇವಾರ್ಥಿಯಾಗಿದ್ದಾರೆ. ಸದ್ಯ ಮೊದಲ ದಿನವೇ ಒಂದೂವರೆ ಲಕ್ಷದಷ್ಟು ಆಸ್ಪತ್ರೆ ಬಿಲ್ಲಾಗಿದ್ದು, ಇವರ ತಂದೆ ಕೃಷಿಕಾರ್ಮಿಕರಾಗಿದ್ದು,

ಕಷ್ಟದಲ್ಲಿರುವ ಯುವಕ: ನೆರವಿಗಾಗಿ ಮನವಿ Read More »

ಜೂ.3 : ಉಡುಪಿಯಲ್ಲಿ ವಿಧಾನಪರಿಷತ್ ಚುನಾವಣಾ ನಾಯಕರ ಸಮಾವೇಶ

ಉಡುಪಿ: ಜೂನ್ 3ರಂದು ನಡೆಯಲಿರುವ ನೈರುತ್ಯ ಪದವೀಧರ ಕ್ಷೇತ್ರ ಮತ್ತು ನೈರುತ್ಯ ಶಿಕ್ಷಕರ ಕ್ಷೇತ್ರದ ವಿಧಾನ ಪರಿಷತ್ ಚುನಾವಣೆಯ ಘಟ ನಾಯಕರ ಜಿಲ್ಲಾ ಮಟ್ಟದ ಸಮಾವೇಶವು ಮೇ 27 ಸೋಮವಾರ ಮಧ್ಯಾಹ್ನ ಗಂಟೆ 2.00ಕ್ಕೆ ಉಡುಪಿಯ ಹೋಟೆಲ್ ಕಿದಿಯೂರು ಇದರ ಮಾಧವ ಕೃಷ್ಣ ಸಭಾಂಗಣದಲ್ಲಿ ನಡೆಯಲಿದೆ. ಈ ಸಮಾವೇಶದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಅವರು ಭಾಗವಹಿಸಿ ಸೂಕ್ತ ಮಾರ್ಗದರ್ಶನ ನೀಡಲಿದ್ದಾರೆ ಎಂದು ಬಿಜೆಪಿ ಉಡುಪಿ ಜಿಲ್ಲಾಧ್ಯಕ್ಷ ಕಿಶೋರ್ ಕುಮಾರ್ ಕುಂದಾಪುರ ತಿಳಿಸಿದ್ದಾರೆ. ಈ ಸಮಾವೇಶದಲ್ಲಿ ನೈರುತ್ಯ

ಜೂ.3 : ಉಡುಪಿಯಲ್ಲಿ ವಿಧಾನಪರಿಷತ್ ಚುನಾವಣಾ ನಾಯಕರ ಸಮಾವೇಶ Read More »

ನಾಳೆ ವಿದ್ಯುತ್ ಕಟ್ | ಎಲ್ಲೆಲ್ಲಿ ಕರೆಂಟಿಲ್ಲ ?

ಪುತ್ತೂರು: ಎನ್ಎಚ್-75 ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ನಿಮಿತ್ತ ಮೇ 28 ರಂದು ವಿದ್ಯುತ್ ನಿಲುಗಡೆ ಮಾಡಲಾಗುವುದು. 110/33/11ಕೆವಿ ಪುತ್ತೂರು ವಿದ್ಯುತ್ ಉಪಕೇಂದ್ರದಿಂದ ಹೊರಡುವ ಕಾಂಚನ ಮತ್ತು 110/33/11ಕೆವಿ ಕರಾಯ ವಿದ್ಯುತ್ ಉಪಕೇಂದ್ರದಿಂದ ಹೊರಡುವ ಉಪ್ಪಿನಂಗಡಿ ಟೌನ್ ಫೀಡರ್ನಲ್ಲಿ ಮೇ 28 ಮಂಗಳವಾರ ಪೂರ್ವಾಹ್ನ 10:00 ರಿಂದ ಅಪರಾಹ್ನ 5:00 ರ ವರೆಗೆ ವಿದ್ಯುತ್ ನಿಲುಗಡೆ ಮಾಡಲಾಗುವುದು. ಆದ್ದರಿಂದ 110/33/11ಕೆವಿ ಪುತ್ತೂರು ವಿದ್ಯುತ್ ಉಪಕೇಂದ್ರ & 110/33/11ಕೆವಿ ಕರಾಯ ವಿದ್ಯುತ್ ಉಪಕೇಂದ್ರದಿಂದ ಹೊರಡುವ ಈ ಮೇಲೆ ತಿಳಿಸಿದ ಫೀಡರ್ನಿಂದ

ನಾಳೆ ವಿದ್ಯುತ್ ಕಟ್ | ಎಲ್ಲೆಲ್ಲಿ ಕರೆಂಟಿಲ್ಲ ? Read More »

ವಿವೇಕಾನಂದ ಕಾಲೇಜಿನಲ್ಲಿ ಖೋಖೋ ಚಾಂಪಿಯನ್ ಶಿಪ್ ‘ಅಲ್ಟಿಮೇಟ್ ಟ್ರೋಫಿ -2024′

ಪುತ್ತೂರು: ಕ್ರೀಡೆ ಎನ್ನುವುದು ನಮ್ಮ ಸದೃಢ ಆರೋಗ್ಯಕ್ಕೆ ಬಹಳ ಸಹಕಾರಿ. ದೇಹಕ್ಕೆ ಸಮರ್ಪಕವಾದ ವ್ಯಾಯಾಮ ಸಿಕ್ಕಾಗ ನಮ್ಮ ಮಾನಸಿಕ ಆರೋಗ್ಯವು ಕೂಡಾ ವೃದ್ಧಿಯಾಗುತ್ತದೆ. ಕ್ರೀಡಾ ಪಂದ್ಯಾಟಗಳನ್ನು ಆಯೋಜಿಸುವುದರಿಂದ ಕ್ರೀಡಾ ಪ್ರತಿಭೆಗಳಿಗೆ ಪ್ರೋತ್ಸಾಹ ಸಿಗುತ್ತದೆ ಎಂದು ಉಪ್ಪಿನಂಗಡಿ ಎಸ್‌ ಬಿ ಐ ಬ್ಯಾಂಕ್ ನಿವೃತ್ತ ಉದ್ಯೋಗಿ ಜಿ. ಕೆ ಪೂವಪ್ಪ ಹೇಳಿದರು. ಅವರು ವಿವೇಕಾನಂದ ಕಾಲೇಜು ಕ್ರೀಡಾಂಗಣದಲ್ಲಿ ಅಲ್ಟಿಮೇಟ್ ಸ್ಪೋರ್ಟ್ಸ್ ಕ್ಲಬ್ ಪುತ್ತೂರು ಮತ್ತು ವಿವೇಕಾನಂದ ಕಾಲೇಜು (ಸ್ವಾಯತ್ತ) ಸಂಯುಕ್ತ ಆಶ್ರಯದಲ್ಲಿ ನಡೆದ ದ.ಕ. ಜಿಲ್ಲಾ ಮಟ್ಟದ ಪುರುಷರ

ವಿವೇಕಾನಂದ ಕಾಲೇಜಿನಲ್ಲಿ ಖೋಖೋ ಚಾಂಪಿಯನ್ ಶಿಪ್ ‘ಅಲ್ಟಿಮೇಟ್ ಟ್ರೋಫಿ -2024′ Read More »

error: Content is protected !!
Scroll to Top