ಸಮಾಜ ಸೇವಕ ವಿಶ್ವನಾಥ ಗೌಡ ನಿಧನ

ಪುತ್ತೂರು: ಸಮಾಜ ಸೇವಕ ವಿಶ್ವನಾಥ ಗೌಡ ಬಲತ್ತನೆ (45) ಅವರು ಇಂದು ನಿಧನರಾಗಿದ್ದಾರೆ. ಕುಂತೂರು ನಿವಾಸಿಯಾಗಿರುವ ವಿಶ್ವನಾಥ ಗೌಡರು ಕೃಷಿ ಕಾರ್ಯದಲ್ಲಿ ತೊಡಗಿದ್ದಾಗ ಮರಣ ಹೊಂದಿರುತ್ತಾರೆ. ಅವರು ಸಮಾಜ ಸೇವಕ, ಸಮಾಜದ ಜನತೆಯ ಒಡನಾಡಿ, ನೇರೋಳ್‍ ಪಲ್ಕೆ ಶ್ರೀ ರಾಜನ್ ದೈವಸ್ಥಾನದ ಆಡಳಿತ ಸಮಿತಿ ಸದಸ್ಯರಾಗಿ, ಕುಂತೂರು ಘಟಕ ಒಕ್ಕಲಿಗ ಗೌಡ ಸೇವಾ ಸಂಘದ ಸದಸ್ಯರಾಗಿ ಸೇವೆ ಸಲ್ಲಿಸುವುದರೊಂದಿಗೆ ಉತ್ತಮ ಕೃಷಿರಾಗಿದ್ದರು. ಮೃತರು ಪತ್ನಿ, ಎರಡು ಮಕ್ಕಳನ್ನು ಅಗಲಿದ್ದಾರೆ.

ಸಮಾಜ ಸೇವಕ ವಿಶ್ವನಾಥ ಗೌಡ ನಿಧನ Read More »

ಸಿಆರ್ ಪಿಎಫ್‍ ಇನ್‍ ಸ್ಪೆಕ್ಟರ್ ಜ.ಖಾಸಿಂ ಇಂದು ಸೇವಾ ನಿವೃತ್ತಿ

ಕಡಬ: 36 ವರ್ಷಗಳ ಸುದೀರ್ಘ ಕಾಲ ಸಿಆರ್‍ ಪಿಎಫ್‍ ಇನ್‍ ಸ್ಪೆಕ್ಟರ್ ಹುದ್ದೆಯಲ್ಲಿದ್ದುಕೊಂಡು ಸೇವೆ ಸಲ್ಲಿಸಿದ ಜ.ಖಾಸಿಂ ಅವರು ಇಂದು ಸೇವಾ ನಿವೃತ್ತಿಯಾಗಿದ್ದಾರೆ. ಹಳೆನೇರೆಂಕಿ ನಿವಾಸಿಯಾಗಿರುವ ಖಾಸಿಂ ಅವರು ಹಳೆನೇರೆಂಕಿ ಪ್ರಾಥಮಿಕ ಶಾಲೆಯಲ್ಲಿ ಪ್ರಾಥಮಿಕ ಶಿಕ್ಷಣ, ರಾಮಕುಂಜದ ಶ್ರೀ ರಾಮಕುಂಜೇಶ್ವರ ಕನ್ನಡ ಮಾಧ್ಯಮ ಶಾಲೆಯಲ್ಲಿ ಪ್ರೌಢಶಿಕ್ಷಣ ಹಾಗೂ ಪುತ್ತೂರು ಸಂತ ಫಿಲೋಮಿನ ಕಾಲೇಜಿನಲ್ಲಿ ಪದವಿಪೂರ್ವ ಶಿಕ್ಷಣವನ್ನು ಪೂರೈಸಿರುತ್ತಾರೆ. ಬಳಿಕ ಸಿಆರ್‍ ಪಿಎಫ್‍ ಪೊಲೀಸ್ ಇನ್‍ ಸ್ಪೆಕ್ಟರ್ ಆಗಿ ಸುದೀರ್ಘ 36 ವರ್ಷಗಳ ಕಾಲ ಸೇವೆ ಸಲ್ಲಿಸಿ ಇದೀಗ

ಸಿಆರ್ ಪಿಎಫ್‍ ಇನ್‍ ಸ್ಪೆಕ್ಟರ್ ಜ.ಖಾಸಿಂ ಇಂದು ಸೇವಾ ನಿವೃತ್ತಿ Read More »

ಎಸ್‍ ಎಸ್‍ ಎಲ್‍ ಸಿಯಲ್ಲಿ 600 ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ಯುವವಾಹಿನಿ ಪುತ್ತೂರು ಘಟಕದ ವತಿಯಿಂದ ಅಭಿನಂದನೆ

ಪುತ್ತೂರು: ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಯುವವಾಹಿನಿ ಪುತ್ತೂರು ಘಟಕದ ವತಿಯಿಂದ 2023-24 ನೇ ಸಾಲಿನಲ್ಲಿ 625ಕ್ಕೆ 600ಕ್ಕಿಂತ ಅಧಿಕ ಅಂಕಗಳಿಸಿ ಅತ್ಯುನ್ನತ ಶ್ರೇಣಿಯಲ್ಲಿ ಉತ್ತೀರ್ಣರಾದ ಪುತ್ತೂರು ತಾಲೂಕಿನ ಬಿಲ್ಲವ ಗ್ರಾಮ ಸಮಿತಿಗಳ ವಿದ್ಯಾರ್ಥಿಗಳನ್ನು ಅಭಿನಂದಿಸುವ ಕಾರ್ಯಕ್ರಮ ಅಂಗವಾಗಿ ಆಯಾಯ ವಿದ್ಯಾರ್ಥಿಗಳ ಮನೆಗಳಿಗೆ ತೆರಳಿ ಅಭಿನಂದನೆ ಸಲ್ಲಿಸುವ ಮೂಲಕ ವಿಶಿಷ್ಟವಾಗಿ ನಡೆಯಿತು. ಬ್ರಹ್ಮಶ್ರೀ ನಾರಾಯಣಗುರುಸ್ವಾಮಿ ಬಿಲ್ಲವ ಗ್ರಾಮ ಸಮಿತಿ ಶಾಂತಿಗೋಡಿನ ಪರಕಮೆ ನಿವಾಸಿಗಳಾದ ಸತೀಶ್ ಪೂಜಾರಿ ಪರಕಮೆ ಹಾಗೂ ರೂಪಲತಾ ಸತೀಶ್ ದಂಪತಿಯ ಪುತ್ರ ಮೋಕ್ಷಿತ್ ಪಿ.

ಎಸ್‍ ಎಸ್‍ ಎಲ್‍ ಸಿಯಲ್ಲಿ 600 ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ಯುವವಾಹಿನಿ ಪುತ್ತೂರು ಘಟಕದ ವತಿಯಿಂದ ಅಭಿನಂದನೆ Read More »

ಸಂತ ಫಿಲೋಮಿನಾ ಕಾಲೇಜಿಗೆ ಪದವಿ ವಿಭಾಗದಲ್ಲಿ 5 ರ್ಯಾಂಕ್‍ ಗಳು

ಪುತ್ತೂರು: ಸಂತ ಫಿಲೋಮಿನಾ ಕಾಲೇಜಿಗೆ 2023-25ನೇ ಶೈಕ್ಷಣಿಕ ವರ್ಷದಲ್ಲಿ ಮಂಗಳೂರು ವಿಶ್ವವಿದ್ಯಾನಿಲಯದ ಪದವಿ ಪರೀಕ್ಷೆಯಲ್ಲಿ 5 ರ್ಯಾಂಕ್‍ ಗಳು    ಲಭಿಸಿದೆ. ಬಿ.ಕಾಂ ಪದವಿ ವಿಭಾಗದಲ್ಲಿ ರಿತೇಶ್‌ ರೈ ಎಂ. 96.21% ಅಂಕಗಳೊಂದಿಗೆ ದ್ವಿತೀಯ ರ್ಯಾಂಕ್ ಪಡೆದಿದ್ದಾರೆ. ಇವರು ಸರ್ವೆ ಮೇಗಿನಗುತ್ತು ನಿವಾಸಿ ಸೀತಾರಾಮ ರೈ ಹಾಗೂ ಸರಸ್ವತಿ ದಂಪತಿ  ಪುತ್ರ.  ಬಿ.ಎಸ್.ಸಿ. ವಿಭಾಗದಲ್ಲಿ ಸುಧನ್ವ ಶ್ಯಾಮ್ ಶೇಕಡ 97.6% ಅಂಕಗಳೊಂದಿಗೆ ದ್ವಿತೀಯ ರ್ಯಾಂಕ್ ಗಳಿಸಿದ್ದು, ಬಲ್ನಾಡಿನ ಸುಬ್ರಹ್ಮಣ್ಯ ಕುಮಾರ್‌ ಹಾಗೂ ಸುಶೀಲಾ ದೇವಿ ದಂಪತಿ ಪುತ್ರ.  ಬಿ.ಸಿ.ಎ.

ಸಂತ ಫಿಲೋಮಿನಾ ಕಾಲೇಜಿಗೆ ಪದವಿ ವಿಭಾಗದಲ್ಲಿ 5 ರ್ಯಾಂಕ್‍ ಗಳು Read More »

ಜೂ.3 : ಬನ್ನೂರು ಎವಿಜಿ ಇಂಗ್ಲೀಷ್ ಮೀಡಿಯಂ ಶಾಲೆಯಲ್ಲಿ “ಆರಂಭ-2024”

ಪುತ್ತೂರು: ಬನ್ನೂರು ಗ್ರಾಮದ ಅಲುಂಬುಡ ಎಂಬಲ್ಲಿ ಕಾರ್ಯಾಚರಿಸುತ್ತಿರುವ ಎವಿಜಿ ಇಂಗ್ಲಿಷ್ ಮೀಡಿಯಂ ಸ್ಕೂಲ್ ನ ‘ಆರಂಭ – 2024’ ಜೂ.3 ಸೋಮವಾರ ಬೆಳಿಗ್ಗೆ 9.30 ಕ್ಕೆ ನಡೆಯಲಿದೆ. ಶಾಲಾ ಆರಂಭದ ಅಂಗವಾಗಿ ಬೆಳಿಗ್ಗೆ 7 ರಿಂದ ಗಣಪತಿ ಹೋಮ, ಸರಸ್ವತಿ ಪುಜೆ, 9.30 ರಿಂದ ತರಗತಿ ವಿದ್ಯಾರ್ಥಿಗಳ ಪ್ರವೇಶೋತ್ಸವ ನಡೆಯಲಿದೆ. 10 ಕ್ಕೆ ಸತ್ಯನಾರಾಯಣ ಪೂಜೆ, 11.30 ಕ್ಕೆ ಶೈಕ್ಷಣಿಕ ಚಿಂತನೆ, ಮಧ್ಯಾಹ್ನ 12.30 ರಿಂದ ಎವಿಜಿ ಇಂಗ್ಲಿಷ್ ಮೀಡಿಯಂ ಶಾಲಾ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ.

ಜೂ.3 : ಬನ್ನೂರು ಎವಿಜಿ ಇಂಗ್ಲೀಷ್ ಮೀಡಿಯಂ ಶಾಲೆಯಲ್ಲಿ “ಆರಂಭ-2024” Read More »

ನೈಋತ್ಯ ಪದವೀಧರ ಕ್ಷೇತ್ರದಿಂದ ಪಕ್ಷೇತರ ಅಭ್ಯರ್ಥಿಯಾಗಿ ರಘುಪತಿ ಭಟ್ ಸ್ಪರ್ಧೆ | ಪಕ್ಷೇತರ ಅಭ್ಯರ್ಥಿಯಾಗಿ ಚುನಾವಣೆಗೆ ಸ್ಪರ್ಧಿಸಲು ಕಾರಣವೇನು | ಈ ಕುರಿತು ಏನಂದ್ರು ರಘುಪತಿ ಭಟ್ ?

ಪುತ್ತೂರು: ನೈಋತ್ಯ ಪದವೀಧರ ಕ್ಷೇತ್ರದಲ್ಲಿ ಆಸಕ್ತಿ ಇದ್ದ ಕಾರಣ ಒಂದು ಇಲೆಕ್ಟ್ರಾಲ್ ಪೊಲಿಟಿಕಲ್ ಬೇಕು ಎಂಬ ನಿಟ್ಟಿನಲ್ಲಿ ನಾನು ಸ್ಪರ್ಧೆಗೆ ನಿಂತಿದ್ದೇನೆ ಹೊರತು ಪಕ್ಷದಿಂದ ನನಗೆ ಸೀಟು ಸಿಕ್ಕಿಲ್ಲ, ನನಗೆ ಮೋಸ ಆಗಿದೆ ಎಂಬ ನಿಟ್ಟಿನಲ್ಲಿ ಚುನಾವಣೆಗೆ ನಿಂತಿಲ್ಲ ಎಂದು ಉಡುಪಿ ಮಾಜಿ ಶಾಸಕ, ನೈಋತ್ಯ ಪದವೀಧರ ಕ್ಷೇತ್ರ ಅಭ್ಯರ್ಥಿ ರಘುಪತಿ ಭಟ್‍ ತಿಳಿಸಿದ್ದಾರೆ. ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, ಈಗಾಗಲೇ ಉಡುಪಿಯಲ್ಲಿ ಮೂರು ಬಾರಿ ಶಾಸಕನಾಗಿ ಜಿಲ್ಲೆಯಲ್ಲಿ ಜನಪರ, ಸಾಮಾಜಿಕ, ಅಭಿವೃದ್ಧಿ ಕಾರ್ಯ ಎಲ್ಲರಿಗೂ ತಿಳಿದಿದು,

ನೈಋತ್ಯ ಪದವೀಧರ ಕ್ಷೇತ್ರದಿಂದ ಪಕ್ಷೇತರ ಅಭ್ಯರ್ಥಿಯಾಗಿ ರಘುಪತಿ ಭಟ್ ಸ್ಪರ್ಧೆ | ಪಕ್ಷೇತರ ಅಭ್ಯರ್ಥಿಯಾಗಿ ಚುನಾವಣೆಗೆ ಸ್ಪರ್ಧಿಸಲು ಕಾರಣವೇನು | ಈ ಕುರಿತು ಏನಂದ್ರು ರಘುಪತಿ ಭಟ್ ? Read More »

ಗ್ಯಾಸ್ ಟ್ಯಾಂಕರ್ ಪಲ್ಟಿ : ಸಂಚಾರಕ್ಕೆ ಅಡೆತಡೆ

ಬಂಟ್ವಾಳ : ಗ್ಯಾಸ್‌ ಟ್ಯಾಂಕ‌ರ್ ಪಲ್ಟಿಯಾಗಿ ಡಿವೈಡರ್ ಗೆ ಬಿದ್ದ ಘಟನೆ ತುಂಬೆ ಸಮೀಪದ ಕಡೆಗೋಳಿಯಲ್ಲಿ ನಡೆದಿದೆ. ಮಂಗಳೂರಿನಿಂದ ಗ್ಯಾಸ್‌ ತುಂಬಿಕೊಂಡು ಹೋಗುತ್ತಿದ್ದ ಟ್ಯಾಂಕ್‌ಗಳು ಪಲ್ಟಿಯಾಗಿದ್ದು, ಯಾವುದೇ ಲಿಕೇಜ್ ಉಂಟಾಗಿಲ್ಲ. ಬಂಟ್ವಾಳ ಅಗ್ನಿಶಾಮಕ ದಳದವರು, ಸಂಚಾರ ಪೊಲೀಸರು, ಸ್ಥಳೀಯರು ಸುಗಮ ವಾಹನ ಸಂಚಾರಕ್ಕೆ ವ್ಯವಸ್ಥೆ ಕಲ್ಪಿಸಿದರು.

ಗ್ಯಾಸ್ ಟ್ಯಾಂಕರ್ ಪಲ್ಟಿ : ಸಂಚಾರಕ್ಕೆ ಅಡೆತಡೆ Read More »

ಲೋಕಸಭೆ ಚುನಾವಣೆ ಮತ ಎಣಿಕೆ l 144 ಸೆಕ್ಷನ್ ಜಾರಿ

ಮಂಗಳೂರು: ಎರಡು ಹಂತಗಳಲ್ಲಿ ನಡೆದ ಸಾರ್ವತ್ರಿಕ ಲೋಕಸಭೆ ಚುನಾವಣೆ-2024 ರ ಹಿನ್ನಲೆಯಲ್ಲಿ ಮತ ಎಣಿಕೆಯು ಜೂನ್.4ರಂದು ರಾಜ್ಯದ ಜಿಲ್ಲಾ ಕೇಂದ್ರಗಳಲ್ಲಿ ನಡೆಯಲಿದೆ. ಈ ಹಿನ್ನಲೆಯಲ್ಲಿ ಶಾಂತಿ ಹಾಗೂ ಕಾನೂನು ಸುವ್ಯವಸ್ಥೆ ಸುಗಮವಾಗಿರುವಂತೆ ನೋಡಿಕೊಳ್ಳಲು ಜೂನ್.04 ರಂದು ಬೆಳಗ್ಗೆ ಗಂಟೆ 6 ರಿಂದ ಜೂನ್.05 ರ ಬೆಳಗ್ಗೆ ಗಂಟೆ 6.00 ರವರೆಗೆ 144 ಸೆಕ್ಷನ್ ಅಡಿಯಲ್ಲಿ ನಿಷೇದಾಜ್ಞೆ ಜಾರಿಗೊಳಿಸಲು ಆಯಾ ಜಿಲ್ಲಾಧಿಕಾರಿಗಳು ಆದೇಶ ಹೊರಡಿಸಿದ್ದಾರೆ. ಈ ಸಂದರ್ಭ ಆಯಾ ಜಿಲ್ಲೆಗಳ ಜಿಲ್ಲಾಧಿಕಾರಿಗಳು ಆದೇಶ ಹೊರಡಿಸಿದ್ದು, ಅದರಲ್ಲಿ ನಿಷೇದಾಜ್ಞೆ ಜಾರಿ

ಲೋಕಸಭೆ ಚುನಾವಣೆ ಮತ ಎಣಿಕೆ l 144 ಸೆಕ್ಷನ್ ಜಾರಿ Read More »

ರಸ್ತೆಯಲ್ಲಿ ನಮಾಜ್‍ ಪ್ರಕರಣ | ಹೇಳಿಕೆ ನೀಡಿದ ಹಿಂದೂ ಪ್ರಮುಖರ ಮೇಲಿನ ಕೇಸ್ ಹಿಂಪಡೆಯುವಂತೆ ಆಗ್ರಹ

ಪುತ್ತೂರು: ಮಂಗಳೂರಿನಲ್ಲಿ ರಸ್ತೆ ಬದಿಯಲ್ಲಿ ನಮಾಜ್ ಮಾಡಿ ಸಾರ್ವಜನಿಕರಿಗೆ ಸಮಸ್ಯೆ ಉಂಟು ಮಾಡಿದ ಕೃತ್ಯವನ್ನು ಖಂಡಿಸಿ ಹೇಳಿಕೆ ನೀಡಿರುವ ವಿಹಿಂಪ ನ ಪ್ರಮುಖರಾದ ಶರಣ್ ಪಂಪ್‍ ವೆಲ್‍ ಹಾಗೂ ಪ್ರದೀಪ್ ಸರಿಪಲ್ಲ ಅವರ ಮೇಲೆ ಎಫ್‍ ಐಆರ್ ದಾಖಲಿಸಿರುವುದು ಖಂಡನೀಯ ಎಂದು ವಿಹಿಂಪ ಗೋರಕ್ಷಾ ಪ್ರಮುಖ್ ಮುರಳೀಕೃಷ್ಣ ಹಸಂತಡ್ಕ ತಿಳಿಸಿದ್ದರು. ರಾಜ್ಯ ಸರಕಾರ ಅಲ್ಪಸಂಖ್ಯಾತರ ತುಷ್ಠೀಕರಣದ ಪರಾಕಾಷ್ಟೇಯನ್ನು ತಲುಪಿದ್ದು, ಮುಂದೆ ಹಿಂದೂ ಸಮಾಜ ತಕ್ಕ ಉತ್ತರ ನೀಡಲಿದೆ ಎಂದು ಅವರು ತಿಳಿಸಿದ್ದಾರೆ. ಕೂಡಲೇ ಹಿಂದೂ ನಾಯಕರ ಮೇಲೆ

ರಸ್ತೆಯಲ್ಲಿ ನಮಾಜ್‍ ಪ್ರಕರಣ | ಹೇಳಿಕೆ ನೀಡಿದ ಹಿಂದೂ ಪ್ರಮುಖರ ಮೇಲಿನ ಕೇಸ್ ಹಿಂಪಡೆಯುವಂತೆ ಆಗ್ರಹ Read More »

ರಘುಪತಿ ಭಟ್ ಶ್ರೀ ಮಹಾಲಿಂಗೇಶ್ವರ ದೇವಸ್ಥಾನಕ್ಕೆ ಭೇಟಿ

ಪುತ್ತೂರು: ವಿಧಾನಪರಿಷತ್ ಚುನಾವಣೆಯಲ್ಲಿ ನೈರುತ್ಯ ಪದವೀಧರ ಕ್ಷೇತ್ರದ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿರುವ ರಘುಪತಿ ಭಟ್ ಇತಿಹಾಸ ಪ್ರಸಿದ್ಧ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಾಲಯಕ್ಕೆ ಶುಕ್ರವಾರ ಬೆಳಿಗ್ಗೆ ಭೇಟಿ ನೀಡಿದರು. ದೇವರ ದರ್ಶನ ಪಡೆದು ಪ್ರಸಾದ ಸ್ವೀಕರಿಸಿದರು. ಈ ಸಂದರ್ಭದಲ್ಲಿ ಸಾಮಾಜಿಕ ಹೋರಾಟಗಾರ ರಾಜಾರಾಂ ಭಟ್, ಪ್ರಮುಖರಾದ ನವೀನ್ ಕುಲಾಲ್, ಶಿವ ಭಟ್ ಉಪಸ್ಥಿತರಿದ್ದರು. ಇಂದು ಪುತ್ತೂರಿನಾದ್ಯಂತ ಶಾಲಾ ಕಾಲೇಜು, ಪದವೀಧರರನ್ನು ಭೇಟಿಯಾಗಿ ಮತಯಾಚನೆ ನಡೆಸಲಿದ್ದಾರೆ.

ರಘುಪತಿ ಭಟ್ ಶ್ರೀ ಮಹಾಲಿಂಗೇಶ್ವರ ದೇವಸ್ಥಾನಕ್ಕೆ ಭೇಟಿ Read More »

error: Content is protected !!
Scroll to Top