ಸಂತ ಫಿಲೋಮಿನಾ ಕಾಲೇಜಿನ ಸುಧನ್ವ ಶ್ಯಾಮ್‌ಗೆ ಪ್ರೊ| ಕೆ ಎ ಕೃಷ್ಣಮೂರ್ತಿ ಚಿನ್ನದ ಪದಕ

ಪುತ್ತೂರು: ಸಂತ ಫಿಲೋಮಿನಾ ಕಾಲೇಜಿನಲ್ಲಿ 2020-23ನೇ ಬ್ಯಾಚ್‌ ನ ಬಿಎಸ್ಸಿ ವ್ಯಾಸಂಗ ಮಾಡುತ್ತಿದ್ದ ಸುಧನ್ವ ಶ್ಯಾಮ್‌ ಉಡುಪಿಯ ಎಂ.ಜಿ.ಎಂ. ಕಾಲೇಜು ಸ್ಥಾಪಸಿದ ಪ್ರತಿಷ್ಠಿತ ಪ್ರೊ| ಕೆ ಎ ಕೃಷ್ಣಮೂರ್ತಿ ಚಿನ್ನದ ಪದಕ ಪಡೆದಿದ್ದಾರೆ. ಮಂಗಳೂರು ವಿಶ್ವವಿದ್ಯಾನಿಲಯದ ಬಿಎಸ್ಸಿ ಪದವಿ ಪರೀಕ್ಷೆಗಳಲ್ಲಿ ಗಣಿತ ವಿಷಯದಲ್ಲಿ ಶೇ.99.66 ಗಳಿಸಿದ್ದಕ್ಕಾಗಿ ಚಿನ್ನದ ಪದಕ ನೀಡಲಾಗಿದೆ. ಎಂಜಿಎಂ ಕಾಲೇಜಿನ ವಾರ್ಷಿಕೋತ್ಸವದಂದು ಸುಧನ್ವ ಶ್ಯಾಮ್‌ ರವರಿಗೆ ಚಿನ್ನದ ಪದಕವನ್ನು ನೀಡಿ ಗೌರವಿಸಲಾಯಿತು. ಪ್ರಾಂಶುಪಾಲ ವಂ. ಡಾ. ಆ್ಯಂಟನಿ ಪ್ರಕಾಶ್‌ ಮೊಂತೇರೊ ಸುಧನ್ವ ಶ್ಯಾಮ್ ರವರ […]

ಸಂತ ಫಿಲೋಮಿನಾ ಕಾಲೇಜಿನ ಸುಧನ್ವ ಶ್ಯಾಮ್‌ಗೆ ಪ್ರೊ| ಕೆ ಎ ಕೃಷ್ಣಮೂರ್ತಿ ಚಿನ್ನದ ಪದಕ Read More »

ದೀಕ್ಷಿತ್ ಮರಿಕೆ ನಿಧನ

ಪುತ್ತೂರು: ಆರ್ಯಾಪು ಗ್ರಾಮದ ಮರಿಕೆ ನಿವಾಸಿ ದಿ. ಗೋಪಾಲ ಗೌಡ ಅವರ ಪುತ್ರ, ಬಿಜೆಪಿ ಸಕ್ರೀಯ ಕಾರ್ಯಕರ್ತ, ಆರ್ಯಾಪು ಗ್ರಾಮ ಪಂಚಾಯಿತಿ ಪಂಪ್ ಆಪರೇಟರ್ ದೀಕ್ಷಿತ್ ಮರಿಕೆ (28) ಬುಧವಾರ ರಾತ್ರಿ ಅಸೌಖ್ಯದಿಂದ ನಿಧನರಾದರು. ಕೆಲ ದಿನಗಳಿಂದ ಅಸೌಖ್ಯದಿಂದ ಇದ್ದು, ಮಂಗಳೂರು ಆಸ್ಪತ್ರೆಯಲ್ಲಿ ದಾಖಲಿಸಲಾಗಿದ್ದರು. ಚಿಕಿತ್ಸೆ ಫಲಕಾರಿಯಾಗದೇ ಬುಧವಾರ ರಾತ್ರಿ ಕೊನೆಯುಸಿರೆಳೆದರು. ಮೃತರು ತಾಯಿ, ಸಹೋದರ, ಸಹೋದರಿಯನ್ನು ಅಗಲಿದ್ದಾರೆ. ಮಾಜಿ ಶಾಸಕ ಸಂಜೀವ ಮಠಂದೂರು, ಬಿಜೆಪಿ ಗ್ರಾಮಾಂತರ ಮಂಡಲ ಅಧ್ಯಕ್ಷ ಸಾಜ ರಾಧಾಕೃಷ್ಣ ಆಳ್ವ, ಪ್ರಮುಖರಾದ ಅರುಣ್

ದೀಕ್ಷಿತ್ ಮರಿಕೆ ನಿಧನ Read More »

ಪೆನ್ ಡ್ರೈವ್ ಪ್ರಕರಣ : ವಿಮಾನ ಇಳಿಯುತ್ತಿದ್ದಂತೆ ಮಹಿಳಾ ಪೊಲೀಸ್ ಅಧಿಕಾರಿಗಳಿಂದ ಬಂಧನ

ಲೈಂಗಿಕ ದೌರ್ಜನ್ಯ ಕೇಸ್ ನಲ್ಲಿ ಇಷ್ಟು ದಿನ ವಿದೇಶದಲ್ಲಿ ತಲೆಮರೆಸಿಕೊಂಡಿದ್ದ ಪ್ರಜ್ವಲ್ ರೇವಣ್ಣ ಅವರನ್ನು ಜರ್ಮನಿಯಿಂದ ಬಂದು ವಿಮಾನದಿಂದ ಇಳಿಯುತ್ತಿದ್ದಂತೆಯೇ ಎಸ್ ಐಟಿ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ. ಭಾರತೀಯ ಕಾಲಮಾನದ ಪ್ರಕಾರ ನಿನ್ನೆ ಸಂಜೆ 4.05ಕ್ಕೆ ಮ್ಯೂನಿಕ್ ನಿಂದ ಹೊರಟ ಲುಫ್ತಾನ್ನಾ ಏರ್ ಲೈನ್ಸ್ ವಿಮಾನ ತಡರಾತ್ರಿ 12.50 ಕ್ಕೆ ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಲ್ಯಾಂಡಿಂಗ್ ಆಯ್ತು. ಪ್ರಜ್ವಲ್ ರೇವಣ್ಣ ಅರೆಸ್ಟ್ ಮಾಡಲಿಕ್ಕಾಗಿ ಏರ್ ಪೋರ್ಟ್ ನಲ್ಲಿ ಎಸ್ಐಟಿ ಅಧಿಕಾರಿಗಳ ಟೀಂ ಕಾದು ಕುಳಿತಿತ್ತು.

ಪೆನ್ ಡ್ರೈವ್ ಪ್ರಕರಣ : ವಿಮಾನ ಇಳಿಯುತ್ತಿದ್ದಂತೆ ಮಹಿಳಾ ಪೊಲೀಸ್ ಅಧಿಕಾರಿಗಳಿಂದ ಬಂಧನ Read More »

ಡಾ. ಎಂ. ಮೋಹನ  ಆಳ್ವ -72 | ಇಂದು ಕಾರ್ಕಳ ಜ್ಞಾನಸುಧಾದಲ್ಲಿ “ಸವ್ಯಸಾಚಿ” ಸಂಭ್ರಮ

ಮೂಡಬಿದ್ರೆ: ಶೈಕ್ಷಣಿಕ, ಸಾಮಾಜಿಕ, ಸಾಂಸ್ಕೃತಿಕ, ಕ್ರೀಡಾ, ಆರೋಗ್ಯ, ದೇಶಸೇವೆ ಹೀಗೆ ವಿವಿಧ ಕ್ಷೇತ್ರಗಳಲ್ಲಿ ತನ್ನನ್ನು ಸಮರ್ಪಿಸಿಕೊಂಡು ಅದ್ವಿತೀಯ ಸಾಧನೆ ಮಾಡಿರುವ ಆಧುನಿಕ ಮೂಡುಬಿದಿರೆಯ ನಿರ್ಮಾತೃ ಡಾ. ಎಂ. ಮೋಹನ ಆಳ್ವರಿಗೆ ಕಾರ್ಕಳ ಗಣಿತ ನಗರದ ಜ್ಞಾನಸುಧಾ ಆವರಣದಲ್ಲಿ ಮೇ 31ರ ಶುಕ್ರವಾರ ಸಂಜೆ 5:30ಕ್ಕೆ ಅಭಿನಂದನಾ ಕಾರ್ಯಕ್ರಮ ನಡೆಯಲಿದೆ. ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆ ಆಶೀರ್ವಚನ ನೀಡಲಿದ್ದಾರೆ. ನಿಟ್ಟೆ ಎಜ್ಯುಕೇಶನ್‌ ಟ್ರಸ್ಟ್‌ ಅಧ್ಯಕ್ಷ ಎನ್.  ವಿನಯ ಹೆಗ್ಡೆ ಅಧ್ಯಕ್ಷತೆ ವಹಿಸಲಿದ್ದಾರೆ. ಪುಸ್ತಕ ಅನಾವರಣ ಆಳ್ವರಿಗೆ

ಡಾ. ಎಂ. ಮೋಹನ  ಆಳ್ವ -72 | ಇಂದು ಕಾರ್ಕಳ ಜ್ಞಾನಸುಧಾದಲ್ಲಿ “ಸವ್ಯಸಾಚಿ” ಸಂಭ್ರಮ Read More »

ವಿಶ್ವವಿದ್ಯಾನಿಲಯ ಪರೀಕ್ಷೆಯಲ್ಲಿ ವಿವೇಕಾನಂದ ಕಾಲೇಜಿಗೆ ರ್‍ಯಾಂಕ್

ಪುತ್ತೂರು: ಮಂಗಳೂರು ವಿಶ್ವವಿದ್ಯಾನಿಲಯ ನಡೆಸಿದ 2022-23ನೇ ಸಾಲಿನ ಪದವಿ ಪರೀಕ್ಷೆಗಳಲ್ಲಿ ವಿವೇಕಾನಂದ ಪದವಿ ಕಾಲೇಜಿಗೆ ಮೂರು ರ್‍ಯಾಂಕ್‌ಗಳು ಲಭ್ಯವಾಗಿವೆ. ಬಿಎಸ್ಸಿ ಪರೀಕ್ಷೆಯಲ್ಲಿ ಪಿಎಂಸಿ ವಿಭಾಗದಲ್ಲಿ ಶರಧಿ ಎಸ್.ಕೆ 4200 ರಲ್ಲಿ 4087  ಅಂಕ ಪಡೆದು ಐದನೇಯ ರ್‍ಯಾಂಕ್ ಪಡೆದುಕೊಂಡಿದ್ದಾರೆ. ಇವರು ವಿಟ್ಲದ ಕೇಶವಯ್ಯ ಎಸ್ ಹಾಗೂ ಶಶಿಕಲಾ ದಂಪತಿ ಪುತ್ರಿ. ಕಲಾ ವಿಭಾಗದ ಎಚ್‌ ಇಪಿ ವಿಭಾಗದಲ್ಲಿ ಸೃಜನಿ ಎಸ್.ಆರ್.  3748 ಅಂಕ ಪಡೆದು ಐದನೇಯ ರ್‍ಯಾಂಕ ಪಡೆದಿದ್ದಾರೆ. ಅವರು ಕಡಬದ ರಾಮಚಂದ್ರ ಹಾಗೂ ಭವಾನಿ ದಂಪತಿ

ವಿಶ್ವವಿದ್ಯಾನಿಲಯ ಪರೀಕ್ಷೆಯಲ್ಲಿ ವಿವೇಕಾನಂದ ಕಾಲೇಜಿಗೆ ರ್‍ಯಾಂಕ್ Read More »

ಜೂ.13 : ವಿಟ್ಲದಲ್ಲಿ ಪುತ್ತೂರು ಒಕ್ಕಲಿಗ ಗೌಡ ಸಮುದಾಯ ಪತ್ತಿನ ಸಹಕಾರ ಸಂಘದ 10ನೇ ಶಾಖೆ ಉದ್ಘಾಟನೆ | ಆಡಳಿತ ಮಂಡಳಿ, ವಿಟ್ಲ ನಾಗರಿಕರ ಪೂರ್ವಭಾವಿ ಸಭೆ

ವಿಟ್ಲ : ಪುತ್ತೂರು ಒಕ್ಕಲಿಗ ಗೌಡ ಸಮುದಾಯ ಪತ್ತಿನ ಸಹಕಾರ ಸಂಘದ 10ನೇ ಶಾಖೆ ವಿಟ್ಲ ಎಂಪಾಯರ್ ಮಾಲ್‍ ನಲ್ಲಿ ಜೂ.13 ರಂದು ಉದ್ಘಾಟನೆಗೊಳ್ಳಲಿದ್ದು, ಈ ಕುರಿತು ಆಡಳಿತ ಮಂಡಳಿ ಹಾಗೂ ವಿಟ್ಲ ನಾಗರಿಕರ ಪೂರ್ವಭಾವಿ ಸಭೆ ವಿಟ್ಲದಲ್ಲಿ ಇಂದು ನಡೆಯಿತು. ಪುತ್ತೂರು ಒಕ್ಕಲಿಗ ಗೌಡ ಸಮುದಾಯ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ಚಿದಾನಂದ ಬೈಲಾಡಿ ಸಭೆಯ ಅಧ್ಯಕ್ಷತೆ ವಹಿಸಿ ಮಾಹಿತಿ ನೀಡಿದರು. ವಿಟ್ಲ ಒಕ್ಕಲಿಗ ಗೌಡ ಸೇವಾ ಸಂಘದ ಮಾಜಿ ಅಧ್ಯಕ್ಷ ಲಿಂಗಪ್ಪ ಗೌಡ ಸಂಪೂರ್ಣ

ಜೂ.13 : ವಿಟ್ಲದಲ್ಲಿ ಪುತ್ತೂರು ಒಕ್ಕಲಿಗ ಗೌಡ ಸಮುದಾಯ ಪತ್ತಿನ ಸಹಕಾರ ಸಂಘದ 10ನೇ ಶಾಖೆ ಉದ್ಘಾಟನೆ | ಆಡಳಿತ ಮಂಡಳಿ, ವಿಟ್ಲ ನಾಗರಿಕರ ಪೂರ್ವಭಾವಿ ಸಭೆ Read More »

ಜೂ.3 :ವಿಧಾನಪರಿಷತ್ ಚುನಾವಣೆ : ಮತದಾರರಿಗೆ ವಿಶೇಷ ಸಾಂದರ್ಭಿಕ ರಜೆ ಘೋಷಣೆ

ಬೆಂಗಳೂರು: ಕರ್ನಾಟಕ ವಿಧಾನಪರಿಷತ್ ಚುನಾವಣೆ ಹಿನ್ನಲೆಯಲ್ಲಿ ರಾಜ್ಯ ಸರಕಾರದಿಂದ ವಿಶೇಷ ಸಾಂದರ್ಭಿಕ ರಜೆ ಘೋಷಿಸಲಾಗಿದೆ. ಜೂ.3 ರಂದು ಶಿಕ್ಷಕ ಕ್ಷೇತ್ರದ ಚುನಾವಣೆ ನಡೆಯಲಿದ್ದು ಈ ಪ್ರಯುಕ್ತ ಸರ್ಕಾರಿ ಮತ್ತು ಖಾಸಗಿ ಕೆಲಸ ನಿರ್ವಹಿಸುವ ಪದವೀಧರರು ಮತ್ತು ಶಿಕ್ಷಕರಿಗೆ ಮತದಾನ ಮಾಡಲು ಅನುಕೂಲವಾಗುವಂತೆ ಅರ್ಹ ಮತದಾರರಿಗೆ ಸೀಮಿತವಾದಂತೆ ಮತ ಚಲಾಯಿಸಲಿರುವ ಮತದಾರರಿಗೆ ವಿಶೇಷ ಸಾಂದರ್ಭಿಕ ರಜೆ ಮಂಜೂರು ಮಾಡಲು ಆದೇಶಿಸಿಲಾಗಿದೆ. ಈ ಕುರಿತು ಸರ್ಕಾರದ ಅಧೀನ ಕಾರ್ಯದರ್ಶಿ ವಿಜಯಕುಮಾರ್ ಹೆಚ್.ಬಿ. ಅಧಿಸೂಚನೆ ಹೊರಡಿಸಿದ್ದಾರೆ.

ಜೂ.3 :ವಿಧಾನಪರಿಷತ್ ಚುನಾವಣೆ : ಮತದಾರರಿಗೆ ವಿಶೇಷ ಸಾಂದರ್ಭಿಕ ರಜೆ ಘೋಷಣೆ Read More »

ಲಾರಿ-ಬೈಕ್ ಅಪಘಾತ : ಬೈಕ್ ಸವಾರ ನೆಲ್ಯಾಡಿಯ ಯುವಕ ಮೃತ್ಯು

ನೆಲ್ಯಾಡಿ : ಬೈಕ್ ಹಾಗೂ ಲಾರಿ ನಡುವೆ ಅಪಘಾತ ಸಂಭವಿಸಿದ ಪರಿಣಾಮ ನೆಲ್ಯಾಡಿಯ ಯುವಕ ಬೈಕ್ ಸವಾರ ಮೃತಪಟ್ಟ ಘಟನೆ ಬೆಂಗಳೂರಿನ ನೆಲಮಂಗಲದಲ್ಲಿ ನಡೆದಿದೆ. ನೆಲ್ಯಾಡಿ ಎಂಜಿರ ಪರಕ್ಕಳ ನಿವಾಸಿ ಸ್ನೇರಿಯಾ ಎಂಬವರ ಪುತ್ರ ಥೋಮಸ್ ಮೃತಪಟ್ಟ ಯುವಕ. ಥೋಮಸ್ ನರ್ಸಿಂಗ್ ವಿದ್ಯಾರ್ಥಿಯಾಗಿದ್ದು, ಮನೆಯಿಂದ ಬೆಂಗಳೂರಿಗೆ ಬೈಕ್‍ ನಲ್ಲಿ ತೆರಳಿದ್ದು, ನೆಲಮಂಗಲ ಸಮೀಪಿಸುತ್ತಿದ್ದಂತೆ ಅಪಘಾತ ಸಂಭವಿಸಿದೆ. ಲಾರಿಯಡಿಗೆ ಬಿದ್ದ ಥೋಮಸ್ ಮೃತಪಟ್ಟಿರುವುದಾಗಿ ತಿಳಿದು ಬಂದಿದೆ.

ಲಾರಿ-ಬೈಕ್ ಅಪಘಾತ : ಬೈಕ್ ಸವಾರ ನೆಲ್ಯಾಡಿಯ ಯುವಕ ಮೃತ್ಯು Read More »

ವ್ಯಕ್ತಿಯಿಂದ ನ್ಯಾಯಾಧೀಶರ ಮೇಲೆ ಚಪ್ಪಲಿ ಎಸೆತ | ಆರೋಪಿಯನ್ನು ಪೊಲೀಸರಿಗೆ ಒಪ್ಪಿಸಿದ ನ್ಯಾಯವಾದಿಗಳು

ಇಂದೋರ್: ನ್ಯಾಯಾಧೀಶರ ಮೇಲೆ ಚಪ್ಪಲಿ ಹಾರ ಎಸೆದ ವ್ಯಕ್ತಿಯೊಬ್ಬನನ್ನು ನ್ಯಾಯವಾದಿಗಳು ಹಿಡಿದು ಹಿಗ್ಗಾಮುಗ್ಗ ಥಳಿಸಿ ಪೊಲೀಸರಿಗೆ ಒಪ್ಪಿಸಿದ ಘಟನೆ ಇಂದೋರ್ ನಲ್ಲಿ ನಡೆದಿದೆ. ಮಹಮ್ಮದ್ ನಲಿಂ ಎಂಬಾತ  ನ್ಯಾಯಾಧೀಶರ ಮೇಲೆ ಚಪ್ಪಲಿಯ ಹಾರ ಎಸೆದವನು. ಈ ಘಟನೆಯ ನಂತರ ನ್ಯಾಯಾಲಯದ ಪರಿಸರದಲ್ಲಿ ಪೊಲೀಸ್ ಬಂದೋಬಸ್ತ್ ಹೆಚ್ಚಿಸಲಾಯಿತು. ವಿಚಿತ್ರವೆಂದರೆ ಈ ನ್ಯಾಯಾಲಯದಲ್ಲಿ ಈ ಹಿಂದೆಯು ಕೂಡ ಈ ರೀತಿಯ ಘಟನೆಗಳು ನಡೆದಿದ್ದವು. ಪೊಲೀಸರು ಕೂಡಾ ಯಾಕೆ ಜಾಗರೂಕರಾಗುತ್ತಿಲ್ಲ ಎಂಬುದು ಪ್ರಶ್ನೆ ಉದ್ಭವಿಸಿದೆ. ಈ ನ್ಯಾಯಾಲಯದಲ್ಲಿ ಇಬ್ಬರು ಮೌಲ್ವಿಗಳ  ವಿರುದ್ಧದ

ವ್ಯಕ್ತಿಯಿಂದ ನ್ಯಾಯಾಧೀಶರ ಮೇಲೆ ಚಪ್ಪಲಿ ಎಸೆತ | ಆರೋಪಿಯನ್ನು ಪೊಲೀಸರಿಗೆ ಒಪ್ಪಿಸಿದ ನ್ಯಾಯವಾದಿಗಳು Read More »

ವಿದ್ಯುತ್ ಲೈನ್ ದುರಸ್ತಿ ವೇಳೆ ಕಿಡಿಗೇಡಿಯಿಂದ ಲೈನ್ ಆನ್ ಮಾಡಲು ಯತ್ನ | ಮುಚ್ಚಳಿಕೆ ಬರೆಸಿದ ಪೊಲೀಸರು.

ಪಂಜ: ವಿದ್ಯುತ್ ಲೈನ್ ದುರಸ್ತಿ ನಡೆಸುತ್ತಿದ್ದ ವೇಳೆ ಯುವಕನೊಬ್ಬ ಲೈನ್ ಆನ್ ಮಾಡಲು ಯತ್ನಿಸಿದ ಪರಿಣಾಮ ಭಾರೀ ಅನಾಹುತವೊಂದು ತಪ್ಪಿದ ಘಟನೆ ಕರಿಕ್ಕಳದಲ್ಲಿ ನಡೆದಿದೆ. ಪಂಜದ ಮೆಸ್ಕಾಂ ಇಲಾಖೆಯ ಸಿಬ್ಬಂದಿಗಳು ಕರಿಕ್ಕಳ ಸಮೀಪ ವಿದ್ಯುತ್ ಲೈನ್ ಗೆ ತಾಗುತ್ತಿದ್ದ ಮರದ ಗೆಲ್ಲನ್ನು ತೆಗೆಯಲೆಂದು ಜೆ.ಒ.ಸಿ ಆನ್ ಮಾಡಿ ಯಾರು ಆಫ್ ಮಾಡದಂತೆ ಅದನ್ನು ತಂತಿಯಲ್ಲಿ ಕಟ್ಟಿ ಕೆಲವು ಸಿಬ್ಬಂದಿಗಳು ಕೆಲಸ ಮಾಡುತ್ತಿದ್ದರು. ಇದೇ ವೇಳೆ ಅಲ್ಲಿಯೇ ಸಮೀಪದಲ್ಲಿ ರೂಮ್ ನಲ್ಲಿರುವ ರಬ್ಬರ್ ಟ್ಯಾಪರ್ ಆಗಿರುವ ರಾಜೇಶ್ ಎಂಬತ

ವಿದ್ಯುತ್ ಲೈನ್ ದುರಸ್ತಿ ವೇಳೆ ಕಿಡಿಗೇಡಿಯಿಂದ ಲೈನ್ ಆನ್ ಮಾಡಲು ಯತ್ನ | ಮುಚ್ಚಳಿಕೆ ಬರೆಸಿದ ಪೊಲೀಸರು. Read More »

error: Content is protected !!
Scroll to Top