ಶಾಲಾ ಬಾಲಕನಿಗೆ ಹೊಡೆದ ಶಿಕ್ಷಕ | ಆಸ್ಪತ್ರೆಗೆ ದಾಖಲು

ಕಡಬ : ಸರ್ಕಾರಿ ಶಾಲಾ ಸಹಶಿಕ್ಷಕನೊಬ್ಬ ಹೊಡೆದ ರಭಸಕ್ಕೆ ಶಾಲಾ ಬಾಲಕನ ತಲೆ ಪಕ್ಕದಲ್ಲಿದ್ದ ಕಪಾಟಿಗೆ ತಾಗಿ ಗಾಯಗೊಂಡು ಆಸ್ಪತ್ರೆಗೆ ದಾಖಲಾದ ಘಟನೆ ಜೂ.6 ರಂದು ಕಡಬದಿಂದ ವರದಿಯಾಗಿದೆ. ಶಿಕ್ಷಕ ಕುಳಿತುಕೊಳ್ಳುವ ಕುರ್ಚಿಯಲ್ಲಿ ಬಟ್ಟೆ ಇದ್ದದ್ದನ್ನು ಗಮನಿಸಿದ ಶಿಕ್ಷಕ ಈ ವಿದ್ಯಾರ್ಥಿಯೇ ಇಟ್ಟಿರುವುದಾಗಿ ಸಂಶಯಿಸಿ ಬೆನ್ನಿಗೆ ಹೊಡೆದಿದ್ದಾರೆನ್ನಲಾಗಿದೆ. ಹೊಡೆತದ ರಭಸಕ್ಕೆ ಬಾಲಕನ ತಲೆ ಪಕ್ಕದಲ್ಲಿದ್ದ ಕಪಾಟಿಗೆ ತಾಗಿ ತಲೆ ಮುಂಭಾಗಕ್ಕೆ ಗಾಯವಾಗಿದೆ . ಬಾಲಕನ ಹೆತ್ತವರು ಶಾಲಾಭಿವೃದ್ಧಿ ಸಮಿತಿಯ ಗಮನಕ್ಕೂ ತಂದು ಬಳಿಕ ಕಡಬ ಸಮುದಾಯ ಆಸ್ಪತ್ರೆಗೆ […]

ಶಾಲಾ ಬಾಲಕನಿಗೆ ಹೊಡೆದ ಶಿಕ್ಷಕ | ಆಸ್ಪತ್ರೆಗೆ ದಾಖಲು Read More »

ನಾಳೆ ವಿದ್ಯುತ್ ಕಟ್ | ಎಲ್ಲೆಲ್ಲಿ ಕರೆಂಟಿಲ್ಲ ?

ಪುತ್ತೂರು : ನಿರ್ವಹಣಾ ಕಾಮಗಾರಿ ನಿಮಿತ್ತ ಜೂ.8 (ನಾಳೆ) ವಿದ್ಯುತ್ ನಿಲುಗಡೆ ಮಾಡಲಾಗುವುದು. ಕುಂಬ್ರ ವಿದ್ಯುತ್‌ ಉಪಕೇಂದ್ರದಿಂದ ಹೊರಡುವ ಮದ್ಲ, ದೇರ್ಲ, ಸುಳ್ಯಪದವು, ಇರ್ದೆ ಮತ್ತು ಪಾಣಾಜೆ ಫೀಡರುಗಳಲ್ಲಿ ವಿದ್ಯುತ್ ನಿಲುಗಡೆಯಾಗಲಿದೆ. ಬೆಳಿಗ್ಗೆ 10 ಗಂಟೆಯಿಂದ ಸಂಜೆ 5ರವರೆಗೆ ವಿದ್ಯುತ್ ನಿಲುಗಡೆಯಾಗಲಿದ್ದು, ಈ ಪ್ರದೇಶದ ಬಳಕೆದಾರರು ಸಹಕರಿಸುವಂತೆ ಮೆಸ್ಕಾಂ ಪ್ರಕಟಣೆ ತಿಳಿಸಿದೆ.

ನಾಳೆ ವಿದ್ಯುತ್ ಕಟ್ | ಎಲ್ಲೆಲ್ಲಿ ಕರೆಂಟಿಲ್ಲ ? Read More »

ಗಾಂಜಾ ಮಾರಾಟದಲ್ಲಿ ತೊಡಗಿದ್ದ ವಿದ್ಯಾರ್ಥಿ ಪೊಲೀಸ್ ಬಲೆಗೆ

ಉಡುಪಿ: ಗಾಂಜಾ ಮಾರಾಟ ಮಾಡುತ್ತಿದ್ದ ಕೇರಳದ ವಿದ್ಯಾರ್ಥಿಯೋರ್ವನನ್ನು ಮಣಿಪಾಲ ಪೊಲೀಸರು ಬಂಧಿಸಿದ್ದಾರೆ. ವಿದ್ಯಾರ್ಥಿ ಸಿದ್ದಾರ್ಥ್ (22) ಬಂಧಿತ ಆರೋಪಿ ಉಡುಪಿ ತಾಲೂಕಿನ ಹೆರ್ಗ ಗ್ರಾಮದ ಅಪಾರ್ಟ್‌ಮೆಂಟ್‌ನ ಮೇಲೆ ಮಾದಕ ವಸ್ತು ಚಟುವಟಿಕೆ ಬಗ್ಗೆ ಖಚಿತ ಮಾಹಿತಿ ಮೇರೆಗೆ ಇನ್ಸ್‌ಪೆಕ್ಟರ್ ದೇವರಾಜ್ ಟಿ ವಿ ಮತ್ತು ಸಬ್ ಇನ್ಸ್ ಪೆಕ್ಟರ್ ರಾಘವೇಂದ್ರ ಸಿ., ಎಎಸ್‌ಐಗಳಾದ ವಿವೇಕಾನಂದ ಮತ್ತು ಶೈಲೇಶ್ ಕುಮಾ‌ರ್ ನೇತೃತ್ವದಲ್ಲಿ ದಾಳಿ ನಡೆಸಿ ಆರೋಪಿಯನ್ನು ಬಂಧಿಸಲಾಗಿದೆ. ಆರೋಪಿಯಿಂದ ಸುಮಾರು 20 ಸಾವಿರ ಮೌಲ್ಯದ 388 ಗ್ರಾಂ ತೂಕದ

ಗಾಂಜಾ ಮಾರಾಟದಲ್ಲಿ ತೊಡಗಿದ್ದ ವಿದ್ಯಾರ್ಥಿ ಪೊಲೀಸ್ ಬಲೆಗೆ Read More »

ಅರಳಿ ನಿಂತಿರುವ ರಾತ್ರಿ ರಾಣಿ ಬ್ರಹ್ಮ ಕಮಲ

ಸುಳ್ಯ: ರಾತ್ರಿಯ ವೇಳೆ ಅರಳಿ ಕಂಪು ಸೂಸುವ ‘ರಾತ್ರಿ ರಾಣಿ’ ಎಂಬ ಹೆಸರು ಗಳಿಸಿರುವ ಬ್ರಹ್ಮ ಕಮಲ ಅರಳಿದ ಹೂ ಪಂಜ , ಕೂತ್ಕೂಂಜ ಗ್ರಾಮದ ಸಂಪ ಶೀನಪ್ಪ ಅವರ ಮನೆಯಲ್ಲಿ ಅರಳಿ ನಿಂತಿದೆ. ಬ್ರಹ್ಮಕಮಲ ಸುಂದರವಾದ ಹೂವಾಗಿದ್ದು, ಹಿಮಾಲಯದ ತಪ್ಪಲಿನಲ್ಲಿ ಕಂಡುಬರುತ್ತದೆ.  ಈ ಪುಷ್ಪಸೂರ್ಯಕಾಂತಿ ಹೂವಿನ ಕುಟುಂಬದ ಸದಸ್ಯ ಎಂದೂ ಹೇಳಲಾಗುತ್ತದೆ. ಇದು ಪೌರಾಣಿಕ ಮತ್ತು ಧಾರ್ಮಿಕ ಮಹತ್ವಗಳನ್ನು ಹೊಂದಿದೆ. ಸೃಷ್ಟಿಯ ದೇವನಾದ ಬ್ರಹ್ಮನು, ಧ್ಯಾನ ಮಾಡುವಾಗ ಈ ಹೂವಿನ ಮೇಲೆ ಕುಳಿತು ಧ್ಯಾನ ಮಾಡುತ್ತಿದ್ದನು

ಅರಳಿ ನಿಂತಿರುವ ರಾತ್ರಿ ರಾಣಿ ಬ್ರಹ್ಮ ಕಮಲ Read More »

ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯಲ್ಲಿ ವಿಶ್ವ ಪರಿಸರ ದಿನ

ಪುತ್ತೂರು: ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯಲ್ಲಿ ಪ್ರಸಕ್ತ ವಿಶ್ವ ಪರಿಸರ ವರ್ಷದ ಧ್ಯೇಯ ನಮ್ಮ ಭೂಮಿ – ನಮ್ಮ ಭವಿಷ್ಯ- ನಾವು ಪರಿಸರದ ಪುನರುತ್ಥಾನದ ಪೀಳಿಗೆ ಆಧಾರಿತ ಚಟುವಟಿಕೆಗಳಲ್ಲಿ ಪಾಲ್ಗೊಳ್ಳುವ  ವಿಶ್ವ ಪರಿಸರ ದಿನಾಚರಣೆಯನ್ನು ಆಚರಿಸಲಾಯಿತು. ಕಾರ್ಯಕ್ರಮದಲ್ಲಿ ದೀಪ್ತಿ ರಘುನಾಥ್ ಮಾತನಾಡಿ, ನಮ್ಮ ಹಿರಿಯರು ಪರಿಸರದ ಅವಿಭಾಜ್ಯ ಅಂಗವಾಗಿದ್ದರು. ಇಂದು ಸ್ವಾರ್ಥದ ಬದುಕಿನಲ್ಲಿ ವೈಯುಕ್ತಿಕ ಸುಖಕ್ಕೆ ಮಹತ್ವ ನೀಡುತ್ತಾ ಪರಿಸರವನ್ನು ಮರೆಯುತ್ತಿದ್ದೇವೆ. ಪ್ರತಿದಿನವೂ ಪರಿಸರ ದಿನವಾದಾಗ ಸ್ವಚ್ಛ-ಸುಂದರ ಬಾಳಿನ ಸವಿಯನ್ನು ನಾವು ಸವಿಯುವಂತಾಗಬೇಕು ಎಂದರು. ಶಾಲಾ ಆಡಳಿತ

ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯಲ್ಲಿ ವಿಶ್ವ ಪರಿಸರ ದಿನ Read More »

ಸಂತ ಫಿಲೋಮಿನಾ ಕಾಲೇಜಿನಲ್ಲಿ ‘ಪತ್ರಿಕಾ ವರದಿ – ತಂತ್ರಗಳು ಹಾಗೂ ಸಾಧ್ಯತೆಗಳು ‘ ತರಬೇತಿ ಕಾರ್ಯಗಾರ

ಪುತ್ತೂರು: ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ವಿದ್ಯಾರ್ಥಿಗಳಿಗೆ ಪದವಿಯೊಂದಿಗೆ ಸರ್ಟಿಫಿಕೇಟ್ ಕೋರ್ಸ್ ಗಳನ್ನು ಮಾಡುವುದರಿಂದ ಉದ್ಯೋಗದಲ್ಲಿ ವಿಫಲ ಅವಕಾಶಗಳಿವೆ. ಪತ್ರಿಕಾ ವರದಿಯಂತ ಕೋರ್ಸುಗಳು ಕಲಾ ವಿಭಾಗದ ವಿದ್ಯಾರ್ಥಿಗಳಿಗೆ ಬದುಕನ್ನು ರೂಪಿಸಲು ಸಹಕಾರಿಯಾಗಬಲ್ಲದು ಎಂದು ಅಂಬಿಕಾ ಮಹಾ ವಿದ್ಯಾಲಯದ ಪ್ರಾಂಶುಪಾಲ ಪ್ರೊ. ರಾಕೇಶ್ ಕುಮಾರ್ ಕಮ್ಮಜೆ ಹೇಳಿದರು. ಸಂತ ಫಿಲೋಮಿನಾ ಕಾಲೇಜಿನ ಕನ್ನಡ ವಿಭಾಗ ಹಾಗೂ ಕನ್ನಡ ಸಂಘ ಸಹಯೋಗದಲ್ಲಿ ಆಯೋಜಿಸಿದ ‘ಪತ್ರಿಕಾವರದಿ – ತಂತ್ರಗಳು ಹಾಗೂ ಸಾಧ್ಯತೆಗಳು ‘ತರಬೇತಿ ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಗಯಾಗಿ ಮಾತನಾಡಿದರು. ಬರವಣಿಗೆ ಹಾಗೂ ಪತ್ರಿಕೋದ್ಯಮ

ಸಂತ ಫಿಲೋಮಿನಾ ಕಾಲೇಜಿನಲ್ಲಿ ‘ಪತ್ರಿಕಾ ವರದಿ – ತಂತ್ರಗಳು ಹಾಗೂ ಸಾಧ್ಯತೆಗಳು ‘ ತರಬೇತಿ ಕಾರ್ಯಗಾರ Read More »

ನೈಋತ್ಯ ಪದವೀಧರ ಕ್ಷೇತ್ರದಿಂದ ಡಾ.ಧನಂಜಯ ಸರ್ಜಿ ಭರ್ಜರಿ ಗೆಲುವು

ಮೈಸೂರು : ನೈಋತ್ಯ ಪದವೀಧರ ಕ್ಷೇತ್ರದ ಚುನಾವಣೆಯಲ್ಲಿ ಬಿಜೆಪಿಯ ಡಾ.ಧನಂಜಯ ಸರ್ಜಿ ಭರ್ಜರಿ ಗೆಲುವು ಸಾಧಿಸಿದ್ದಾರೆ. ಬಿಜೆಪಿಯ ಧನಂಜಯ ಸರ್ಜಿ, ಕಾಂಗ್ರೆಸ್‌ನ ಆಯನೂರು ಮಂಜುನಾಥ್, ಪಕ್ಷೇತರ ಅಭ್ಯರ್ಥಿ, ಮಾಜಿ ಶಾಸಕ ರಘುಪತಿ ಭಟ್ ಕಣದಲ್ಲಿದ್ದರು. ದಾವಣಗೆರೆಯ ಹೊನ್ನಳ್ಳಿಯಿಂದ ಶಿವಮೊಗ್ಗ, ಉಡುಪಿ- ಚಿಕ್ಕಮಗಳೂರು, ದಕ್ಷಿಣ ಕನ್ನಡ, ಮಡಿಕೇರಿಯವರೆಗೆ ಐದೂವರೆ ಲೋಕಸಭಾ ಕ್ಷೇತ್ರಗಳನ್ನೊಳಗೊಂಡ ಈ ಕ್ಷೇತ್ರದಲ್ಲಿ ಬಿಜೆಪಿಯಿಂದ ಸ್ಪರ್ಧಿಸಿದ ಶಿವಮೊಗ್ಗದ ಮಕ್ಕಳ ತಜ್ಞ ಡಾ.ಧನಂಜಯ ಸರ್ಜೆಯವರು 37627 ಮತಗಳನ್ನು ಪಡೆಯುವ ಮೂಲಕ ಭರ್ಜರಿ ಗೆಲುವು ಕಂಡಿದ್ದಾರೆ. ಗೆಲುವು ಸಾಧಿಸಿದ ಡಾ.ಧನಂಜಯ

ನೈಋತ್ಯ ಪದವೀಧರ ಕ್ಷೇತ್ರದಿಂದ ಡಾ.ಧನಂಜಯ ಸರ್ಜಿ ಭರ್ಜರಿ ಗೆಲುವು Read More »

ಇಂದು ಎನ್ ಡಿಎ ಸಂಸದರ ಮಹತ್ವದ ಸಭೆ | ನಾಳೆ ಮೋದಿ ಪ್ರಮಾಣ ವಚನ ಸಾಧ್ಯತೆ !

ದೆಹಲಿ:  ಇಂದು ದೆಹಲಿಯಲ್ಲಿ ಎನ್ ಡಿಎ ಸಂಸದರ ಸಭೆ ಸೇರಿ ಮಹತ್ವದ ನಿರ್ಣಯ ಕೈಗೊಳ್ಳುವ ಸಾಧ್ಯತೆ ಇದೆ. ಮೋದಿಯವರನ್ನು ತಮ್ಮ ನಾಯಕನನ್ನಾಗಿ ಔಪಚಾರಿಕವಾಗಿ ಆಯ್ಕೆ ಮಾಡಲಿದ್ದು, ನಾಳೆ ಹೊಸ ಸರ್ಕಾರ ಪ್ರಮಾಣ ವಚನ ಸ್ವೀಕರಿಸುವ ಸಾಧ್ಯತೆ ಇದೆ. ಆದರೆ, ಅಂತಿಮ ದಿನಾಂಕವನ್ನು ಇನ್ನೂ ಬಹಿರಂಗಪಡಿಸಿಲ್ಲ. ಈಗಾಗಲೇ ರಾಷ್ಟ್ರಪತಿ ಭವನದಲ್ಲಿ ನೂತನ ಪ್ರಧಾನಮಂತ್ರಿಯ ಪ್ರಮಾಣವಚನ ಸ್ವೀಕಾರ ಸಮಾರಂಭಕ್ಕೆ ತಯಾರಿಗಳು ಶುರುವಾಗಿವೆ. ಎನ್ ಡಿಎ ಸಂಸದರ ನಾಯಕರಾಗಿ ಮೋದಿ ಆಯ್ಕೆಯಾದ ನಂತರ, ಮೈತ್ರಿಕೂಟದ ಹಿರಿಯ ಸದಸ್ಯರಾದ ಟಿಡಿಪಿಯ ಎನ್ ಚಂದ್ರಬಾಬು

ಇಂದು ಎನ್ ಡಿಎ ಸಂಸದರ ಮಹತ್ವದ ಸಭೆ | ನಾಳೆ ಮೋದಿ ಪ್ರಮಾಣ ವಚನ ಸಾಧ್ಯತೆ ! Read More »

ಶಿಕ್ಷಕರ ಕ್ಷೇತ್ರದ ಮತ ಎಣಿಕೆ ಸಂಪೂರ್ಣ | ನೈಋತ್ಯದಿಂದ ಭೋಜೇಗೌಡ, ದಕ್ಷಿಣದಿಂದ ಕೆ.ವಿವೇಕಾನಂದ ಗೆಲುವು

ಪುತ್ತೂರು: ನೈರುತ್ಯ ಶಿಕ್ಷಕರ ಕ್ಷೇತ್ರದ ಮತ ಎಣಿಕೆ ಕಾರ್ಯ ಮುಗಿದಿದ್ದು, ಬಿಜೆಪಿ, ಜೆಡಿಎಸ್ ಮೈತ್ರಿ ಅಭ್ಯರ್ಥಿ ಭೋಜೇಗೌಡ ಗೆಲುವು ಸಾಧಿಸಿದ್ದಾರೆ. ದಕ್ಷಿಣ ಶಿಕ್ಷಕರ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಮರೀ ತಿಬ್ಬೇಗೌಡ ಅವರನ್ನು ಪರಾಭವಗೊಳಿಸಿ ಜೆಡಿಎಸ್ ಬಿಜೆಪಿ ಮೈತ್ರಿ ಅಭ್ಯರ್ಥಿ ಕೆ.ವಿವೇಕಾನಂದ ಭರ್ಜರಿ ಗೆಲುವು ಸಾಧಿಸಿದ್ದಾರೆ. ಈ ಕುರಿತು ಭೋಜೇಗೌಡ ಹಾಗೂ ವಿವೇಕಾನಂದ ಅವರ ಆಪ್ತ ವಲಯದಲ್ಲಿ ಹರ್ಷ ಮುಗಿಲುಮುಟ್ಟಿದೆ.

ಶಿಕ್ಷಕರ ಕ್ಷೇತ್ರದ ಮತ ಎಣಿಕೆ ಸಂಪೂರ್ಣ | ನೈಋತ್ಯದಿಂದ ಭೋಜೇಗೌಡ, ದಕ್ಷಿಣದಿಂದ ಕೆ.ವಿವೇಕಾನಂದ ಗೆಲುವು Read More »

ಕೆಯ್ಯೂರು ಗ್ರಾಮದ ತೆಗ್ಗು ಎರೆಕಲಾ ಪ್ರದೇಶದಲ್ಲಿ ಕಾಡಾನೆ ದಾಳಿ | ಮಾಜಿ ಶಾಸಕ ಸಂಜೀವ ಮಠಂದೂರು ಭೇಟಿ | ಶಾಶ್ವತ ಪರಿಹಾರಕ್ಕೆ ಕ್ರಮ ಕೈಗೊಳ್ಳುವಂತೆ ಆಗ್ರಹ

ಪುತ್ತೂರು: ತಾಲೂಕು ಕೆಯ್ಯೂರು ಗ್ರಾಮದ ತೆಗ್ಗು ಎರೆಕಲಾ ಪ್ರದೇಶಕ್ಕೆ ಕಾಡಾನೆಗಳು ದಾಳಿ ಮಾಡಿದ್ದು, ಈ ಪ್ರದೇಶದ ಪುತ್ತೂರು ಮಾಜಿ ಶಾಸಕ ಸಂಜೀವ ಮಠಂದೂರು ಗುರುವಾರ ಭೇಟಿ ನೀಡಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು, ಈ ಪ್ರದೇಶದಲ್ಲಿ ಆನೆ ಹಿಂಡುಗಳು ಠಿಕಾಣಿ ಹೂಡಿ ಕೃಷಿಕರಿಗೆ ಭಯದ ವಾತಾವರಣ ಉಂಟು ಮಾಡಿದೆ. ಸರಕಾರ ಆನೆಕಂದಕ, ರಕ್ಷಣಾ, ಸೋಲಾರ್ ಬೇಲಿಗಳನ್ನು ಅಳವಡಿಸುವ ಮೂಲಕ ಸೂಕ್ತ ರಕ್ಷಣೆ ನೀಡಬೇಕಾಗಿದೆ. ತಕ್ಷಣ ಆನೆಗಳನ್ನು ಹಿಡಿದು ಬೇರೆಡೆ ಕಾಡಿಗೆ ಬಿಡಲು ಕ್ರಮ ಕೈಗೊಳ್ಳುವ ಮೂಲಕ ಮತ್ತೊಮ್ಮೆ

ಕೆಯ್ಯೂರು ಗ್ರಾಮದ ತೆಗ್ಗು ಎರೆಕಲಾ ಪ್ರದೇಶದಲ್ಲಿ ಕಾಡಾನೆ ದಾಳಿ | ಮಾಜಿ ಶಾಸಕ ಸಂಜೀವ ಮಠಂದೂರು ಭೇಟಿ | ಶಾಶ್ವತ ಪರಿಹಾರಕ್ಕೆ ಕ್ರಮ ಕೈಗೊಳ್ಳುವಂತೆ ಆಗ್ರಹ Read More »

error: Content is protected !!
Scroll to Top