ಕಾವು ಶಾಲಾ ಶಿಕ್ಷಕ ಭಾಸ್ಕರ ಗೌಡರಿಗೆ ವಿದಾಯ ಸಮಾರಂಭ

ಪುತ್ತೂರು: ಒಂದು ಸರಕಾರಿ ಶಾಲೆ ಹೇಗಿರಬೆಕೆಂಬುದಕ್ಕೆ ಕಾವು ಸರಕಾರಿ ಹಿ ಪ್ರಾ ಶಾಲೆಯೇ ಉದಾಹರಣೆಯಾಗಿದೆ, ಸರಕಾರ ಕೆಪಿಎಸ್ ಸ್ಕೂಲ್‌ಗೆ ಕಾವು ಶಾಲೆಯನ್ನೇ ಮಾದರಿಯನ್ನಾಗಿ ಪರಿಗಣಿಸಬಹುದಾಗಿದೆ ಎಂದು ಪುತ್ತೂರು ಶಾಸಕರಾದ ಅಶೋಕ್ ರೈ ಹೇಳಿದರು. ಅವರು ಕಾವು ಸರಕಾರಿ ಉ ಹಿ ಪ್ರಾ ಶಾಲೆಯಲ್ಲಿ ನಿವೃತ್ತಿ ಹೊಂದಿದ ಶಿಕ್ಷಕ ಭಾಸ್ಕರ ಗೌಡ ನರಿಯೂರು ಅವರ ವಿದಾಯ ಸ,ಮಾರಂಭದಲ್ಲಿ ಸನ್ಮಾನಿಸಿ ಮಾತನಾಡಿದರು. ಈ ಶಾಲೆಯನ್ನು ದತ್ತು ಪಡೆದುಕೊಂಡಿರುವ ಕಾವು ಹೇಮನಾಥ ಶೆಟ್ಟಿಯವರ ಮುತುವರ್ಜಿಯಿಂದ ಇಲ್ಲಿ ಅನೇಕ ಅಭಿವೃದ್ದಿ ಕಾರ್ಯಗಳು ನಡೆದಿದೆ […]

ಕಾವು ಶಾಲಾ ಶಿಕ್ಷಕ ಭಾಸ್ಕರ ಗೌಡರಿಗೆ ವಿದಾಯ ಸಮಾರಂಭ Read More »

ಭಾರೀ ಗಾಳಿ ಮಳೆಗೆ ಧರಾಶಾಹಿಯಾದ ಮರ | ನೆಲಕ್ಕುರುಳಿದ 11 ವಿದ್ಯುತ್ ಕಂಬಗಳು

ಪುತ್ತೂರು: ಭಾನುವಾರ ಸುರಿದ ಭಾರೀ ಗಾಳಿ ಮಳೆಗೆ ನಗರದ ಬಪ್ಪಳಿಗೆಯಲ್ಲಿ ಮೇ ಫ್ಲವರ್ ಮರ ಧರಾಶಾಹಿಯಾದ ಪರಿಣಾಮ 11 ಕರೆಂಟ್ ಕಂಬಗಳು ನೆಲಕ್ಕುರುಳಿವೆ. ಜನನಿಬಿಡ ಪ್ರದೇಶದಲ್ಲೇ ಇದ್ದ ಭಾರೀ ಗಾತ್ರದ ಮರ ಬಿದ್ದ ಪರಿಣಾಮ ವಿದ್ಯುತ್ ಕಂಬಗಳು ಉರುಳಿ ಬಿದ್ದುದಲ್ಲದೆ ವಾಹನ ಸವಾರರು ಕೂದಳೆಳೆ ಅಂತರದಲ್ಲಿ ಬಚಾವಾಗಿದ್ದಾರೆ. ಮರ ಬಿದ್ದ ಪರಿಣಾಮ ಬಲ್ನಾಡು-ವಿಟ್ಲ  ರಸ್ತೆ ಸಂಚಾರಕ್ಕೆ ತಡೆ ಉಂಟಾದ್ದರಿಂದ ವಾಹನ ಸವಾರರು ಪರದಾಡುವಂತಾಯಿತು. ಮನೆಯೊಂದರ ಕಾಂಪೌಂಡ್ ಗೋಡೆಗೆ ಹಾನಿಯಾಗಿದೆ. ಘಟನಾ ಸ್ಥಳಕ್ಕೆ ಶಾಸಕ ಅಶೋಕ್ ರೈ ಭೇಟಿ

ಭಾರೀ ಗಾಳಿ ಮಳೆಗೆ ಧರಾಶಾಹಿಯಾದ ಮರ | ನೆಲಕ್ಕುರುಳಿದ 11 ವಿದ್ಯುತ್ ಕಂಬಗಳು Read More »

ಭಾರತದ ಜನರು ವಿಶಿಷ್ಟ ಫಲಿತಾಂಶ ನೀಡಿದ್ದಾರೆ | ‘ಲೋಕಸಭಾ ಚುನಾವಣೆ-2024’ರ ವಿಶ್ಲೇಷಣಾ ಕಾರ್ಯಕ್ರಮದಲ್ಲಿ ವಿಕಾಸ್ ಪಿ.

ಪುತ್ತೂರು: ಈ ಬಾರಿಯ ಲೋಕಸಭಾ ಚುನಾವಣಾ ಫಲಿತಾಂಶವು ಮತ್ತೊಂದು ಸಮ್ಮಿಶ್ರ ಸರಕಾರ ರಚನೆಗೆ ಮುನ್ನುಡಿ ಬರೆದಿದೆ. ಸಮ್ಮಿಶ್ರ ಸರಕಾರಗಳು ನಮ್ಮ ದೇಶಕ್ಕೆ ಹೊಸ ವಿಚಾರವಲ್ಲ. ಜೊತೆಗೆ ಪ್ರಧಾನಿ ನರೇಂದ್ರ ಮೋದಿಯವರಿಗೂ ಸಮ್ಮಿಶ್ರ ಸರಕಾರಗಳು ಹೊಸದಲ್ಲ. ಅವರು ಕಳೆದ 10 ವರ್ಷದಲ್ಲಿ ಸಮ್ಮಿಶ್ರ ಮಾದರಿಯ ಸರಕಾರವನ್ನೇ ಮುನ್ನಡೆಸಿದ್ದಾರೆ. ಆದರೆ ಈ ಭಾರಿ ಪ್ರಧಾನಿ ನರೇಂದ್ರ ಮೋದಿಯವರ ನೇತೃತ್ವದಲ್ಲಿ ಹೊಸ ಮಾದರಿ ಸಮ್ಮಿಶ್ರ ಸರಕಾರ ಈ ದೇಶವನ್ನು ಮುನ್ನಡೆಸಲಿದೆ ಎಂದು ಖ್ಯಾತ ರಾಜಕೀಯ ವಿಶ್ಲೇಷಕ ವಿಕಾಸ್ ಪಿ. ಹೇಳಿದರು. ಅವರು

ಭಾರತದ ಜನರು ವಿಶಿಷ್ಟ ಫಲಿತಾಂಶ ನೀಡಿದ್ದಾರೆ | ‘ಲೋಕಸಭಾ ಚುನಾವಣೆ-2024’ರ ವಿಶ್ಲೇಷಣಾ ಕಾರ್ಯಕ್ರಮದಲ್ಲಿ ವಿಕಾಸ್ ಪಿ. Read More »

ಅಣ್ಣಾಮಲೈಗೆ ಮೋದಿ ಸಂಪುಟಕ್ಕೆ ಸೇರ್ಪಡೆ | ಪಕ್ಷಕ್ಕೆ ಬಲವಾದ ನೆಲೆ ಒದಗಿಸುವಲ್ಲಿ ಯಶಸ್ವಿಯಾದ ಅಣ್ಣಾಮಲೈ

ಹೊಸದಿಲ್ಲಿ: ತಮಿಳುನಾಡು ಬಿಜೆಪಿ ಅಧ್ಯಕ್ಷ ಅಣ್ಣಾಮಲೈ ಕೇಂದ್ರದ ನರೇಂದ್ರ ಮೋದಿ ಸಂಪುಟ ಸೇರ್ಪಡೆಯಾಗಲಿದ್ದಾರೆ. ಪಕ್ಷಕ್ಕೆ ಬಲವಾದ ನೆಲೆ ಒದಗಿಸುವಲ್ಲಿ ಅಣ್ಣಾಮಲೈ ಯಶಸ್ವಿಯಾಗಿದ್ದು, ಈ ಹಿನ್ನಲೆಯಲ್ಲಿ ಅವರಿಗೆ ಸಂಪುಟದಲ್ಲಿ ಸ್ಥಾನ ಸಿಗಲಿದೆ. ಇಂದು ಸಂಜೆ ನಡೆಯುವ ಪ್ರಮಾಣ ವಚನ ಸ್ವೀಕಾರ ಸಮಾರಂಭಲ್ಲಿ ಅಣ್ಣಾಮಲೈ ಕೇಂದ್ರ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ಈಗಾಗಲೇ ಅಣ್ಣಾಮಲೈಗೆ ಕೇಂದ್ರದಿಂದ ಕರೆ ಹೋಗಿದೆ. ಅಣ್ಣಾಮಲೈ ಅವರನ್ನು ರಾಜ್ಯಸಭೆಗೆ ಆಯ್ಕೆ ಮಾಡಲುದ್ದೇಶಿಸಲಾಗಿದೆ. ಸಚಿವರಾಗಿ ರಾಜ್ಯಸಭೆ ಸದಸ್ಯರಾಗಲು 6 ತಿಂಗಳ ಕಾಲಾವಕಾಶ ಇದೆ. ಅಣ್ಣಾಮಲೈ ಕರ್ನಾಟಕದಲ್ಲಿ ಐಪಿಎಸ್

ಅಣ್ಣಾಮಲೈಗೆ ಮೋದಿ ಸಂಪುಟಕ್ಕೆ ಸೇರ್ಪಡೆ | ಪಕ್ಷಕ್ಕೆ ಬಲವಾದ ನೆಲೆ ಒದಗಿಸುವಲ್ಲಿ ಯಶಸ್ವಿಯಾದ ಅಣ್ಣಾಮಲೈ Read More »

ನರೇಂದ್ರ ಮೋದಿ ಮೂರನೇ ಬಾರಿಗೆ ಪ್ರಧಾನಿ | ಇಂದು ಸಂಜೆ ವಿಟ್ಲ ಬಿಜೆಪಿ ವತಿಯಿಂದ ವಿಜಯೋತ್ಸವ, ನೇರ ಪ್ರಸಾರ

ವಿಟ್ಲ: ನರೇಂದ್ರ ಮೋದಿ ಮೂರನೇ ಬಾರಿಗೆ ಇಂದು ಪ್ರಧಾನಿ ಪಟ್ಟ ಏರಲಿರುವ ಹಿನ್ನಲೆಯಲ್ಲಿ ವಿಟ್ಲ ಬಿಜೆಪಿ ಕಾರ್ಯಾಲಯದ ವತಿಯಿಂದ ವಿಜಯೋತ್ಸವ ಇಂದು ಸಂಜೆ ವಿಟ್ಲ ಖಾಸಗಿ ಬಸ್‍ ನಿಲ್ದಾಣದಲ್ಲಿ ನಡೆಯಲಿದೆ. ಇಂದು ಸಂಜೆ 6. 00 ಗಂಟೆಗೆ  ಜಗ ಮೆಚ್ಚಿದ ವಿಶ್ವನಾಯಕ ನರೇಂದ್ರ ಮೋದಿಯವರ  3 ನೇ ಅವಧಿಗೆ ದೇಶದ ಪ್ರಧಾನಿಯಾಗಿ ಪ್ರಮಾಣವಚನ ಸ್ವೀಕರಿಸಲಿರುವ ಸಂದರ್ಭದಲ್ಲಿ ವಿಟ್ಲ ಬಿಜೆಪಿ ಕಾರ್ಯಾಲಯದಿಂದ ವಿಜಯೋತ್ಸವ ಮೆರವಣಿಗೆ ಹೊರಟು ವಿಟ್ಲ ಖಾಸಗಿ ಬಸ್ ನಿಲ್ದಾಣದಲ್ಲಿ ಕಾರ್ಯಕ್ರಮದ  ನೇರ ಪ್ರಸಾರ ವೀಕ್ಷಣೆ ಹಾಗೂ

ನರೇಂದ್ರ ಮೋದಿ ಮೂರನೇ ಬಾರಿಗೆ ಪ್ರಧಾನಿ | ಇಂದು ಸಂಜೆ ವಿಟ್ಲ ಬಿಜೆಪಿ ವತಿಯಿಂದ ವಿಜಯೋತ್ಸವ, ನೇರ ಪ್ರಸಾರ Read More »

ಕಾರು-ಟೆಂಪೋ ಟ್ರಾವೆಲರ್ ಡಿಕ್ಕಿ | ವಾಹನಗಳು ಜಖಂ

ಸುಳ್ಯ: ಕಾರು ಹಾಗೂ ಟೆಂಪೋ ಟ್ರಾವೆಲರ್ ಡಿಕ್ಕಿ ಹೊಡೆದುಕೊಂಡ ಘಟನೆ ಇದೀಗ ಸುಳ್ಯದ ಪರಿವಾರಕಾನದ ಬಳಿ ನಡೆದಿದೆ. ಅಪಘಾತದ ಪರಿಣಾಮ ಎರಡೂ ವಾಹನಗಳು ಜಖಂಗೊಂಡಿದೆ. ಚಾಲಕ ಪ್ರಯಾಣಿಕರಿಗೆ ಯಾವುದೇ ಗಾಯಗಳಾಗಿಲ್ಲ ಎಂದು ತಿಳಿದು ಬಂದಿದೆ. ಸ್ಥಳಕ್ಕೆ ಪೊಲೀಸರು ಇನ್ನಷ್ಟೇ ಬರಬೇಕಿದೆ.

ಕಾರು-ಟೆಂಪೋ ಟ್ರಾವೆಲರ್ ಡಿಕ್ಕಿ | ವಾಹನಗಳು ಜಖಂ Read More »

ಪ್ರಕೃತಿಯ ವೈಪರೀತ್ಯಗಳಿಗೆ ಮನುಷ್ಯನೇ ಕಾರಣ | ವಿಶ್ವ ಪರಿಸರ ದಿನಾಚರಣೆಯಲ್ಲಿ ಲತಾ ಜಿ. ಭಟ್

ಪುತ್ತೂರು: ಪ್ರಕೃತಿಯ ವೈಪರೀತ್ಯಗಳಿಗೆ ಮನುಷ್ಯನೇ ಕಾರಣ. ಆದ್ದರಿಂದ ಪ್ರಕೃತಿಯ ಸಂರಕ್ಷಣಾ ಜವಾಬ್ದಾರಿಯನ್ನು ನಾವೇ ವಹಿಸಿಕೊಳ್ಳಬೇಕು. ಕೇವಲ ನಮ್ಮ ಪ್ರಾಂತ್ಯವಲ್ಲದೇ ಇಡೀ ಪ್ರಪಂಚದಲ್ಲಿ ಪರಿಸರ ರಕ್ಷಣೆಯಾಗಬೇಕು ಎಂದು ಅರಣ್ಯ ಸಂರಕ್ಷಣಾ ಅಧಿಕಾರಿ ಲತಾ ಜಿ. ಭಟ್ ಹೇಳಿದರು. ಅವರು ನಗರದ ಅಂಬಿಕಾ ವಿದ್ಯಾಲಯ ಸಿಬಿಎಸ್‌ಇ ಸಂಸ್ಥೆಯಲ್ಲಿ ಆಯೋಜಿಸಲಾದ ವಿಶ್ವ ಪರಿಸರ ದಿನಾಚರಣೆಯಲ್ಲಿ ಮಾತನಾಡಿದರು. ಅಧ್ಯಕ್ಷತೆ ವಹಿಸಿದ್ದ ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಸುಬ್ರಹ್ಮಣ್ಯ ನಟ್ಟೋಜ ಮಾತನಾಡಿ,  ಮನುಷ್ಯ ತನ್ನ ಸ್ವಾರ್ಥದಿಂದ ಪ್ರಕೃತಿಯನ್ನು ದುರುಪಯೋಗಗೊಳಿಸುತ್ತಿದ್ದಾನೆ. ಆದ್ದರಿಂದ ಇಂದಿನ ಪೀಳಿಗೆಯಾದ

ಪ್ರಕೃತಿಯ ವೈಪರೀತ್ಯಗಳಿಗೆ ಮನುಷ್ಯನೇ ಕಾರಣ | ವಿಶ್ವ ಪರಿಸರ ದಿನಾಚರಣೆಯಲ್ಲಿ ಲತಾ ಜಿ. ಭಟ್ Read More »

ಉತ್ತಮ ಕ್ರಿಕೇಟ್ ಆಟಗಾರ ಮಂಜು ನೇಣು ಬಿಗಿದು ಆತ್ಮಹತ್ಯೆ

ಕಾಸರಗೋಡು: ಉತ್ತಮ ಕ್ರಿಕೆಟ್ ಆಟಗಾರ ಎಂದೇ ಗುರುತಿಸಿಕೊಂಡಿದ್ದ, ಕುಂಬ್ಳೆಯ ನಾಯ್ಕಾಪು ನಿವಾಸಿ ಮಂಜು (24 ವ.) ಶನಿವಾರ ಬೆಳಿಗ್ಗೆ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಮನೆ ಸಮೀಪದ ಮರವೊಂದಕ್ಕೆ ನೇಣು ಬಿಗಿದ ಸ್ಥಿತಿಯಲ್ಲಿ ಶನಿವಾರ ಬೆಳಿಗ್ಗೆ ಕಂಡುಬಂದಿದ್ದಾರೆ. ಶುಕ್ರವಾರ ರಾತ್ರಿ 11.30ರ ಸುಮಾರಿಗೆ ಕರೆಯೊಂದು ಬಂದಿದ್ದು, ಮಾತನಾಡುತ್ತಾ ಹೊರ ಹೋಗಿದ್ದಾರೆ. ಎಷ್ಟು ಹೊತ್ತಾದರೂ ವಾಪಾಸು ಬಂದಿಲ್ಲ. ಮನೆಯವರು ಕರೆ ಮಾಡಿದರೂ ಸ್ವೀಕರಿಸಿಲ್ಲ. ಶನಿವಾರ ಬೆಳಿಗ್ಗೆ ಮನೆ ಸಮೀಪದ ಮರವೊಂದಕ್ಕೆ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ ಎಂದು ದೂರಿನಲ್ಲಿ

ಉತ್ತಮ ಕ್ರಿಕೇಟ್ ಆಟಗಾರ ಮಂಜು ನೇಣು ಬಿಗಿದು ಆತ್ಮಹತ್ಯೆ Read More »

ಇಂದು ಮೋದಿ ನೇತೃತ್ವದ ಎನ್‍ ಡಿಎ ಸರಕಾರ ರಚನೆ | ಮೂರನೇ ಬಾರಿಗೆ ಮೋದಿ ಪ್ರಧಾನಿ ಪಟ್ಟ ಏರಲು ಕ್ಷಣಗಣನೆ

ಹೊಸದಿಲ್ಲಿ: ನರೇಂದ್ರ ಮೋದಿ ನೇತೃತ್ವದಲ್ಲಿ ಎನ್‌ಡಿಎ ಸರಕಾರ ಇಂದು ಅಧಿಕಾರಕ್ಕೆ ಬರಲಿದ್ದು, ಮೋದಿ ಮೂರನೇ ಬಾರಿಗೆ ಪ್ರಧಾನಿಯಾಗಲು ಇಂದು ಸಂಜೆ ರಾಷ್ಟ್ರಪತಿ ಭವನದಲ್ಲಿ ಪ್ರಮಾಣವಚನ ಸ್ವೀಕರಿಸಲಿದ್ದಾರೆ. ಶುಕ್ರವಾರ ನಡೆದ ಸಭೆಯಲ್ಲಿ ಹೊಸದಾಗಿ ಆಯ್ಕೆಯಾದ ಸಂಸದರು ಸರ್ವಾನುಮತದಿಂದ ಮೋದಿಯನ್ನು ತಮ್ಮ ನಾಯಕನನ್ನಾಗಿ ಆಯ್ಕೆ ಮಾಡಿದ್ದಾರೆ. ಸಂಜೆ 7.15ಕ್ಕೆ ಸಮಾರಂಭ ಶುರುವಾಗಲಿದ್ದು, ಜೂನ್ 5ರಂದು ನರೇಂದ್ರ ಮೋದಿ ರಾಷ್ಟಪತಿ ದೌಪದಿ ಮುರ್ಮು ಅವರನ್ನು ರಾಷ್ಟ್ರಪತಿ ಭವನದಲ್ಲಿ ಭೇಟಿಯಾಗಿ ತಮ್ಮ ಮತ್ತು ಕೇಂದ್ರ ಸಚಿವ ಸಂಪುಟದ ರಾಜೀನಾಮೆಯನ್ನು ಸಲ್ಲಿಸಿದರು. ಬಳಿಕ ಅವರನ್ನು

ಇಂದು ಮೋದಿ ನೇತೃತ್ವದ ಎನ್‍ ಡಿಎ ಸರಕಾರ ರಚನೆ | ಮೂರನೇ ಬಾರಿಗೆ ಮೋದಿ ಪ್ರಧಾನಿ ಪಟ್ಟ ಏರಲು ಕ್ಷಣಗಣನೆ Read More »

ವೀರಮಂಗಲ, ಕಾಯರ್ ಮುಗೇರು, ಪಲ್ಲತ್ತೋಡಿ ಪರಿಸರದಲ್ಲಿ ಆನೆ ಪ್ರತ್ಯಕ್ಷ | ಕೃಷಿ ತೋಟಗಳಿಗೆ ಹಾನಿ

ಪುತ್ತೂರು: ವೀರಮಂಗಲ, ಕಾಯರ್ ಮುಗೇರು ಹಾಗೂ ಪಲ್ಲತ್ತೋಡಿ, ಖಂಡಿಗೆ  ಪರಿಸರದಲ್ಲಿ ಇಂದು ಆನೆ ಪ್ರತ್ಯಕ್ಷವಾಗಿದ್ದು, ಕೃಷಿ ತೋಟಗಳಿಗೆ ಹಾನಿ ಮಾಡಿದೆ. ಬಾಳೆಗಿಡ, ಅಡಕೆ ಮರಗಳಿಗೆ ಆನೆ ಹಾನಿ ಮಾಡಿದ್ದು, ಅರಣ್ಯ ಇಲಾಖೆ ತಕ್ಷಣ ಎಚ್ಚೆತ್ತುಕೊಂಡು ಆನೆಯನ್ನು ಕಾಡಿಗೆ ಅಟ್ಟುವ ಕೆಲಸ ಮಾಡಬೇಕು ಎಂದು ಸ್ಥಳೀಯರು ವಿನಂತಿಸಿದ್ದಾರೆ. ಸವಣೂರು ಪರಿಸರದಿಂದ ನೇರವಾಗಿ ಗೌರಿ ಹೊಳೆ ದಾಟಿ ಬಂದಿರುವ ಆನೆ  ಅರ್ತಿಕೆರೆ, ಕಾಯರ್ ಮುಗೇರು, ವೀರಮಂಂಗಲ ಮುಂತಾದ ಕಡೆಗಳಲ್ಲಿ ತಿರುಗಾಡುತ್ತಿದೆ. ಪರಿಣಾಮ ಜನರು ಆತಂಕಿತರಾಗಿದ್ದಾರೆ. ಆನೆಯ ಹೆಜ್ಜೆ ಗುರುತು ಕಂಡು

ವೀರಮಂಗಲ, ಕಾಯರ್ ಮುಗೇರು, ಪಲ್ಲತ್ತೋಡಿ ಪರಿಸರದಲ್ಲಿ ಆನೆ ಪ್ರತ್ಯಕ್ಷ | ಕೃಷಿ ತೋಟಗಳಿಗೆ ಹಾನಿ Read More »

error: Content is protected !!
Scroll to Top