ಬೆಳ್ಳಾರೆಯಲ್ಲಿ ಮಹಿಳೆಯೊಬ್ಬರ ಮೃತದೇಹ ಪತ್ತೆ | ಕೊಲೆ ಶಂಕೆ

ಬೆಳ್ಳಾರೆ: ಬೆಳ್ಳಾರೆಯ ಎಪಿಎಂಸಿ ಸಂತೆ ಮಾರುಕಟ್ಟೆಯಲ್ಲಿ ಮಹಿಳೆಯೊಬ್ಬರ ಮೃತದೇಹ ಪತ್ತೆಯಾಗಿದೆ. ತಲೆಗೆ ಕೆಂಪುಕಲ್ಲು ಎತ್ತಿಹಾಕಿ ಕೊಲೆ ಮಾಡಿರುವ ಶಂಕೆ ವ್ಯಕ್ತವಾಗಿದ್ದು, ತಲೆ ಒಡೆದು ರಕ್ತ ಹರಿದುಹೋಗಿದೆ. ಸ್ಥಳದಲ್ಲಿ ಕೆಂಪು ಕಲ್ಲು ಇದ್ದು, ಅದನ್ನೇ ತಲೆಗೆ ಎತ್ತಿಹಾಕಿ ಕೊಲೆ ಮಾಡಲಾಗಿದೆ ಎನ್ನಲಾಗಿದೆ. ಬೆಳ್ಳಾರೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿದ್ದು, ಬೆಳ್ಳಾರೆ ಪೊಲೀಸ್ ಠಾಣಾಧಿಕಾರಿ ಸಂತೋಷ್ ಮತ್ತು ಸಿಬ್ಬಂದಿಗಳು ಪರಿಶೀಲನೆ ನಡೆಸುತ್ತಿದ್ದಾರೆ. ಮಹಿಳೆಯ ಬಗ್ಗೆ ಮಾಹಿತಿ ಕಲೆ ಹಾಕಲಾಗುತ್ತಿದೆ. ಹೆಚ್ಚಿನ ವಿವರ ತಿಳಿದು ಬರಬೇಕಿದೆ.

ಬೆಳ್ಳಾರೆಯಲ್ಲಿ ಮಹಿಳೆಯೊಬ್ಬರ ಮೃತದೇಹ ಪತ್ತೆ | ಕೊಲೆ ಶಂಕೆ Read More »

ಸಾರ್ವಜನಿಕ ಸ್ಥಳದಲ್ಲಿ ತಲವಾರು ಪ್ರದರ್ಶಿಸಿದ ಐವರ ಬಂಧನ

ಬಂಟ್ವಾಳ : ಸಾರ್ವಜನಿಕ ಸ್ಥಳದಲ್ಲಿ ತಲವಾರು ಪ್ರದರ್ಶನ ಮಾಡುತ್ತಿದ್ದ ಆರೋಪದ ಹಿನ್ನೆಲೆ ಐವರ ವಿರುದ್ಧ ಬಂಟ್ವಾಳ ಗ್ರಾಮಾಂತರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಜೂ. 9 ರಂದು ಸಂಜೆ, ಬಂಟ್ವಾಳ ಬಡಗಬೆಳ್ಳೂರು ಎಂಬಲ್ಲಿ ಅಪರಿಚಿತ ವ್ಯಕ್ತಿಗಳು, ಸಾರ್ಜಜನಿಕವಾಗಿ ಮಾರಕಾಸ್ತ್ರವನ್ನು ಪ್ರದರ್ಶಿಸುತ್ತಿದ್ದಾರೆ ಎಂಬುದಾಗಿ ಬಂದ ಮಾಹಿತಿ ಮೇರೆಗೆ ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯ ಪಿ.ಎಸ್.ಐ ಹರೀಶ್ ಎಮ್.ಆ‌ರ್, ಸಿಬ್ಬಂದಿಗಳೊಂದಿಗೆ ಸದ್ರಿ ಸ್ಥಳಕ್ಕೆ ತೆರಳಿದಾಗ ಬೋಜರಾಜ, ವಿನೋದ್, ವಿವೇಕ್, ರಕ್ಷೀತ್, ರಕ್ಷಕ್ ಎಂಬವರುಗಳು ಸಾರ್ವಜನಿಕ ಸ್ಥಳದಲ್ಲಿ ತಲವಾರು ಹಿಡಿದುಕೊಂಡು ಸಾರ್ವಜನಿಕವಾಗಿ ಭಯವನ್ನುಂಟು

ಸಾರ್ವಜನಿಕ ಸ್ಥಳದಲ್ಲಿ ತಲವಾರು ಪ್ರದರ್ಶಿಸಿದ ಐವರ ಬಂಧನ Read More »

ಧರೆಗುರುಳಿದ ನೂರು ವರ್ಷ ಹಳೆಯದ ಅಶ್ವತ್ಥ ಮರ | ದೈವಸ್ಥಾನಗಳ ಪ್ರಸಾದ ವಿತರಣೆಗೆ ಈ ಅಶ್ವತ್ಥ ಮರದ ಎಲೆ ಬಳಕೆ

ಪುತ್ತೂರು: ನೂರು ವರ್ಷ ಹಳೆಯದಾದ ಅಶ್ವತ್ಥ ಮರವೊಂದು ಧರೆಗುರುಳಿದ ಘಟನೆ ಶಾಂತಿಗೋಡಿನ ಕೈಂದಾಡಿಯಲ್ಲಿ ಇಂದು ನಡೆದಿದೆ. ಮರ ಉರುಳಿ ಬಿದ್ದ ಪರಿಣಾಮ ವಿದ್ಯುತ್ ಕಂಬಗಳಿಗೆ ಹಾನಿಯಾಗಿದೆ. ರಸ್ತೆಗೆ ಉರುಳಿದ ಪರಿಣಾಮ ಶಾಲಾ ಮಕ್ಕಳಿಗೆ, ಸಾರ್ವಜನಿಕರಿಗೆ, ವಾಹನ ಸಂಚಾರಕ್ಕೆ ತೊಂದರೆ ಉಂಟಾಯಿತು. ಸ್ಥಳೀಯರಿಂದ ಮರ ತೆರವು ಕಾರ್ಯ ನಡೆಯುತ್ತಿದೆ. ಗ್ರಾಮದ ಹಲವು ದೈವಸ್ಥಾನಗಳ ಪ್ರಸಾದ ವಿತರಣೆಗೆ ಈ ಅಶ್ವತ್ಥ ಮರದ ಎಲೆಯನ್ನು ಬಳಕೆ ಮಾಡುತ್ತಿದ್ದರು.

ಧರೆಗುರುಳಿದ ನೂರು ವರ್ಷ ಹಳೆಯದ ಅಶ್ವತ್ಥ ಮರ | ದೈವಸ್ಥಾನಗಳ ಪ್ರಸಾದ ವಿತರಣೆಗೆ ಈ ಅಶ್ವತ್ಥ ಮರದ ಎಲೆ ಬಳಕೆ Read More »

ಸಾರ್ಥಕ ಬದುಕಿಗೆ ಸಂಸ್ಕಾರ ಮತ್ತು ತಿಳುವಳಿಕೆ ನೀಡಬೇಕು: ಮಾಣಿಲ ಶ್ರೀಗಳು

ಮಾಣಿಲ: ಹಿರಿಯರು ಮಾಡಿದ ತ್ಯಾಗದ ತಿಳುವಳಿಕೆಯಿಂದ ಅವರ ಬಗ್ಗೆ ಗೌರವ ಮೂಡಿಸುವಂತಹ ಕಾರ್ಯ ಇಂದು ನಡೆಯಬೇಕಾಗಿದೆ. ಯುವ ಪೀಳಿಗೆಗೆ ಸಾರ್ಥಕ ಬದುಕನ್ನು ನಡೆಸಲು ಸಂಸ್ಕಾರ ನೀಡುವುದರೊಂದಿಗೆ ನಮ್ಮ ಧಾರ್ಮಿಕ ಆಚರಣೆಗಳು ಮಾನಸಿಕವಾಗಿ ಸತ್ಪರಿಣಾಮ ಬೀರುವಂತೆ ಅನುಷ್ಠಾನವಾಗಬೇಕೆಂದು ಶ್ರೀಧಾಮ ಮಾಣಿಲದ ಪರಮಹಂಸ ಶ್ರೀ ಮೋಹನದಾಸ ಸ್ವಾಮೀಜಿ ನುಡಿದರು. ಮಾಣಿಲ ಕ್ಷೇತ್ರದಲ್ಲಿ ಜರಗಿದ ಬಂಟ್ವಾಳ ಮೆಲ್ಕಾರ್ ಅಖಿಲ ಕರ್ನಾಟಕ ಹಿರಿಯರ ಸೇವಾ ಪ್ರತಿಷ್ಠಾನದ ಕೇಂದ್ರೀಯ ಸಮಿತಿಯ ಸಭೆಯನ್ನು ಉದ್ಘಾಟಿಸಿ ಅವರು ಆಶೀರ್ವಚನ ನೀಡಿದರು. ಕುಕ್ಕಾಜೆ ಶ್ರೀ ಲಕ್ಷ್ಮೀನರಸಿಂಹ ದೇವಸ್ಥಾನದ 15ನೇ

ಸಾರ್ಥಕ ಬದುಕಿಗೆ ಸಂಸ್ಕಾರ ಮತ್ತು ತಿಳುವಳಿಕೆ ನೀಡಬೇಕು: ಮಾಣಿಲ ಶ್ರೀಗಳು Read More »

ಯಾತ್ರಾರ್ಥಿಗಳಿದ್ದ ಬಸ್ಸಿನ ಮೆಲೆ ಭಯೋತ್ಪಾದಕರಿಂದ ಗುಂಡಿನ ದಾಳಿ | 9 ಮಂದಿ ಮೃತ್ಯು, 33 ಮಂದಿಗೆ ಗಾಯ

ಶ್ರೀನಗರ:  ಯಾತ್ರಾರ್ಥಿಗಳಿದ್ದ ಬಸ್ಸಿನ ಮೇಲೆ ಭಯೋತ್ಪಾದಕರು ಗುಂಡಿನ ದಾಳಿ ನಡೆಸಿದ ಪರಿಣಾಮ 9 ಯಾತ್ರಿಕರು ಮೃತಪಟ್ಟು, 33 ಮಂದಿ ಗಾಯಗೊಂಡ ಘಟನೆ ಜಮ್ಮು ಮತ್ತು ಕಾಶ್ಮೀರದ ರಿಯಾಸಿ ಜಿಲ್ಲೆಯಲ್ಲಿ ಭಾನುವಾರ ಸಂಜೆ ನಡೆದಿದೆ. 53 ಆಸನಗಳ ಬಸ್ ಶಿವ ಖೋರಿ ದೇವಸ್ಥಾನದಿಂದ ಕತ್ರಾ ಮಾರ್ಗವಾಗಿ ತೆರಳುತ್ತಿದ್ದ ವೇಳೆ ಉಗ್ರರು ಗುಂಡಿನ ದಾಳಿ ನಡೆಸಿದ್ದಾರೆ. ಚಲಿಸುತ್ತಿದ್ದ ವೇಳೆಯೇ ದಾಳಿ ನಡೆಸಿದ ಪರಿಣಾಮ ಬಸ್ ಚಾಲಕನ ನಿಯಂತ್ರಣ ತಪ್ಪಿ ರಸ್ತೆಯಿಂದ ಆಳವಾದ ಕಮರಿಗೆ ಬಿದ್ದಿದೆ. ಪೋನಿ ಪ್ರದೇಶದ ತೇರ್ಯತ್ ಗ್ರಾಮದ

ಯಾತ್ರಾರ್ಥಿಗಳಿದ್ದ ಬಸ್ಸಿನ ಮೆಲೆ ಭಯೋತ್ಪಾದಕರಿಂದ ಗುಂಡಿನ ದಾಳಿ | 9 ಮಂದಿ ಮೃತ್ಯು, 33 ಮಂದಿಗೆ ಗಾಯ Read More »

ಶಾಂತಿಗೋಡಿನಲ್ಲಿ ಆನೆ ಪ್ರತ್ಯಕ್ಷ | ಮನೆಯ ಗೇಟು, ತೆಂಗಿನ ಮರಳಿಗೆ ಹಾನಿ

ಪುತ್ತೂರು: ವೀರಮಂಗಲ ಬಳಿ ಭಾನುವಾರ ಕಾಣಿಸಿಕೊಂಡ ಆನೆ ನಿನ್ನೆ ರಾತ್ರಿಯಿಂದ ಶಾಂತಿಗೋಡಿನಲ್ಲಿ ಪ್ರತ್ಯಕ್ಷವಾಗಿದೆ. ಸ್ಥಳೀಯ ಮೋಹನ ಕಂರ್ಬಡ್ಕ ಎಂಬವರ ಮನೆ ಗೇಟು ಮುರಿದು ತೋಟಕ್ಕೆ ಲಗ್ಗೆಯಿಟ್ಟಿದೆ. ಪರಿಣಾಮ ತೆಂಗಿನ ಮರಗಳಿಗೆ ಹಾನಿಯಾಗಿದೆ. ಬಳಿಕ ಆನೆ ಶಾಂತಿಗೋಡು ಗೇರು ಸಂಶೋಧನಾ ನಿರ್ದೇಶನಾಲಯದ ಗೇರು ತೋಟಕ್ಕೆ ಲಗ್ಗೆಯಿಟ್ಟಿದೆ ಎನ್ನಲಾಗಿದೆ. ಆನೆ ಪ್ರತ್ಯಕ್ಷದ ಪರಿಣಾಮ ಶಾಲಾ ಮಕ್ಕಳು ಶಾಲೆಗೆ, ಗೇರು ಸಂಶೋಧನಾಲಯದ ಸಿಬ್ಬಂದಿಗಳು ಭಯದಿಂದ ಕೆಲಸಕ್ಕೆ ತೆರಳುವಂತಾಗಿದೆ. ತಕ್ಷಣ ಅರಣ್ಯ ಇಲಾಖೆ ಎಚ್ಚೆತ್ತುಕೊಂಡು ಕ್ರಮ ಕೈಗೊಳ್ಳಬೇಕಾಗಿದೆ ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.

ಶಾಂತಿಗೋಡಿನಲ್ಲಿ ಆನೆ ಪ್ರತ್ಯಕ್ಷ | ಮನೆಯ ಗೇಟು, ತೆಂಗಿನ ಮರಳಿಗೆ ಹಾನಿ Read More »

ವಿಜಯೋತ್ಸವದಲ್ಲಿ ಪಾಲ್ಗೊಂಡಿದ್ದ ಇಬ್ಬರು ಬಿಜೆಪಿ ಕಾರ್ಯಕರ್ತರಿಗೆ ಅನ್ಯ ಕೋಮಿನ ತಂಡದಿಂದ ಹಲ್ಲೆ

ಮಂಗಳೂರು : ವಿಜಯೋತ್ಸವದಲ್ಲಿ ಭಾಗವಹಿಸಿದ್ದ  ಇಬ್ಬರು ಬಿಜೆಪಿ ಕಾರ್ಯಕರ್ತರಿಬ್ಬರಿಗೆ ಮುಸ್ಲಿಂ ಯುವಕರ ತಂಡವೊಂದು ಚೂರಿಯಿಂದ ಇರಿದ ಘಟನೆ ಕೊಣಾಜೆ ಠಾಣೆ ವ್ಯಾಪ್ತಿಯ ಬೋಳಿಯಾರು ಸಮೀಪ ಭಾನುವಾರ ರಾತ್ರಿ ನಡೆದಿದೆ. ಇನೋಳಿ ಧರ್ಮನಗರದ ಹರೀಶ್ ಹಾಗೂ ನಂದನ್ ಕುಮಾರ್ ಚೂರಿ ಇರಿತದಿಂದ ಗಾಯಗೊಂಡವರು ಎನ್ನಲಾಗಿದೆ. ಗಾಯಾಳುಗಳನ್ನು ದೇರಳಕಟ್ಟೆ ಆಸ್ಪತ್ರೆಗೆ ದಾಖಲಿಸಲಾಗಿದೆ. ಪ್ರಧಾನಮಂತ್ರಿಯಾಗಿ ನರೇಂದ್ರ ಮೋದಿ ಅವರು ಪ್ರಮಾಣವಚನ ಸ್ವೀಕರಿಸಿದ ಮತ್ತು ದಕ್ಷಿಣ ಕನ್ನಡ ಸಂಸದ ಬ್ರಿಜೇಶ್ ಚೌಟ ಅವರ ವಿಜಯೋತ್ಸವದ ಅಂಗವಾಗಿ ಬೋಳಿಯಾರು ಬಿಜೆಪಿ ಗ್ರಾಮಸಮಿತಿ ವತಿಯಿಂದ ಚೇಳೂರು,

ವಿಜಯೋತ್ಸವದಲ್ಲಿ ಪಾಲ್ಗೊಂಡಿದ್ದ ಇಬ್ಬರು ಬಿಜೆಪಿ ಕಾರ್ಯಕರ್ತರಿಗೆ ಅನ್ಯ ಕೋಮಿನ ತಂಡದಿಂದ ಹಲ್ಲೆ Read More »

ಮೋದಿ ಪ್ರಮಾಣ ವಚನ ಸ್ವೀಕಾರ : ಪಟಾಕಿ ಸಿಡಿಸಿ ಸಂಭ್ರಮಿಸಿದ ಕಾರ್ಯಕರ್ತರು

ಪುತ್ತೂರು: ನರೇಂದ್ರ ಮೋದಿ ಪ್ರಧಾನಿಯಾಗಿ ಮೂರನೇ ಬಾರಿ ಪ್ರಮಾಣ ವಚನ ಸ್ವೀಕರಿಸಿದ ಬೆನ್ನಲ್ಲೇ ಪುತ್ತೂರಿನಲ್ಲಿ ಕಾರ್ಯಕರ್ತರು ಪಟಾಕಿ ಸಿಡಿಸಿ ಸಂಭ್ರಮಿಸಿದರು. ಪುತ್ತೂರು ಹೊರವಲಯದ ಪುರುಷರಕಟ್ಟೆಯಲ್ಲಿ ಬಿಜೆಪಿ ಕಾರ್ಯಕರ್ತರು ಪಟಾಕಿ ಸಿಡಿಸಿ, ಘೊಷಣೆಗಳು ಕೂಗುತ್ತಾ ಸಂಭ್ರಮಿಸಿದರು. ಈ ಸಂದರ್ಭದಲ್ಲಿ ನೂರಾರು ಕಾರ್ಯಕರ್ತರು ಪಾಲ್ಗೊಂಡಿದ್ದರು.

ಮೋದಿ ಪ್ರಮಾಣ ವಚನ ಸ್ವೀಕಾರ : ಪಟಾಕಿ ಸಿಡಿಸಿ ಸಂಭ್ರಮಿಸಿದ ಕಾರ್ಯಕರ್ತರು Read More »

ನೇಣು ಬಿಗಿದು ಆತ್ಮಹತ್ಯೆ

ವಿಟ್ಲ: ವ್ಯಕ್ತಿಯೊಬ್ಬರು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ವಿಟ್ಲದ ಕನ್ಯಾನ ಸಮೀಪದ ಮಂಡಿಯೂರು ಎಂಬಲ್ಲಿ ಇಂದು ನಡೆದಿದೆ. ನಾರಾಯಣ ನಾಯ್ಕ (60) ಆತ್ಮಹತ್ಯೆ ಮಾಡಿಕೊಂಡವರು. ಕಿಟಕಿ ಸರಳಿಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಆತ್ಮಹತ್ಯೆಗೆ ಕಾರಣ ತಿಳಿದು ಬಂದಿಲ್ಲ.

ನೇಣು ಬಿಗಿದು ಆತ್ಮಹತ್ಯೆ Read More »

ಮೂರನೇ ಬಾರಿಗೆ ಪ್ರಧಾನಿಯಾಗಿ ನರೇಂದ್ರ ಮೋದಿ ಪ್ರಮಾಣ ವಚನ ಸ್ವೀಕಾರ | ಕಣ್ತುಂಬಿಕೊಂಡ ಸಭಾಸದರು

ನವದೆಹಲಿ: ಮೂರನೇ ಬಾರಿಗೆ ನರೇಂದ್ರ ಮೋದಿಯವರು ಪ್ರಧಾನಿಯಾಗಿ ಆಯ್ಕೆಯಾಗಿದ್ದು, ಇಂದು ಸಂಜೆ ರಾಷ್ಟ್ರಪತಿ ಭವನದಲ್ಲಿ ಪ್ರಮಾಣ ವಚನ ಸ್ವೀಕರಿಸಿದರು. ರಾಷ್ಟ್ರಪತಿ ದ್ರೌಪದಿ ಮುರ್ಮು ಅವರನ್ನು ವಾದ್ಯದೊಂದಿಗೆ ಬರ ಮಾಡಿಕೊಳ್ಳಲಾಯಿತು. ನೆರೆದಿದ್ದ ಸಭಿಕರು ಎದ್ದುನಿಂತು ರಾಷ್ಟ್ರಪತಿಯವರಿಗೆ ಗೌರವ ಸಲ್ಲಿಸಿದರು. ಬಳಿಕ ರಾಷ್ಟ್ರಗೀತೆ ಮೊಳಗಿಸಲಾಯಿತು. ರಾಜಕೀಯ ಘಟಾನುಘಟಿಗಳ ಸಮ್ಮುಖದಲ್ಲಿ ನರೇಂದ್ರ ಮೋದಿಯವರು ರಾಷ್ಟ್ರಪತಿ ದೌಪದಿ ಮುರ್ಮು ಅವರಿಂದ ಪ್ರಮಾಣ ವಚನ ಸ್ವೀಕರಿಸಿದರು. ಬಳಿಕ ಸಂಸತ್ ಸದಸ್ಯರಾಗಿ ಆಯ್ಕೆಯಾದವರು ಪ್ರಮಾಣ ವಚನ ಸ್ವೀಕರಿಸಿದರು.

ಮೂರನೇ ಬಾರಿಗೆ ಪ್ರಧಾನಿಯಾಗಿ ನರೇಂದ್ರ ಮೋದಿ ಪ್ರಮಾಣ ವಚನ ಸ್ವೀಕಾರ | ಕಣ್ತುಂಬಿಕೊಂಡ ಸಭಾಸದರು Read More »

error: Content is protected !!
Scroll to Top