ಫೆ.4 ರಂದು ನಿಗದಿಯಾಗಿದ್ದ ಶಾಸಕರೊಂದಿಗಿನ ಜನತಾ ಅದಾಲತ್ ಫೆ.6 ಕ್ಕೆ ಮುಂದೂಡಿಕೆ

ಪುತ್ತೂರು : ಪುತ್ತೂರು ರೋಟರಿ ಕ್ಲಬ್ ವತಿಯಿಂದ ಫೆ.4 ಶನಿವಾರ ಆಯೋಜಿಸಲಾಗಿದ್ದ ಪುತ್ತೂರು ಶಾಸಕ ಸಂಜೀವ ಮಠಂದೂರು ಅವರೊಂದಿಗಿನ ಮುಖಾಮುಖಿ ಕಾರ್ಯಕ್ರಮ ರೋಟರಿ ಜನತಾ ಅದಾಲತ್ ಕಾರ್ಯಕ್ರಮವನ್ನು ಫೆ.6 ಕ್ಕೆ ಮುಂದೂಡಲಾಗಿದೆ. ಕಾರ್ಯಕ್ರಮ ನಿಗದಿಯಾದಂತೆ ಜೈನಭವನದಲ್ಲಿ ಸಂಜೆ ನಡೆಯಲಿದೆ ಎಂದು ರೋಟರಿ ಪ್ರಕಟಣೆ ತಿಳಿಸಿದೆ.

ಫೆ.4 ರಂದು ನಿಗದಿಯಾಗಿದ್ದ ಶಾಸಕರೊಂದಿಗಿನ ಜನತಾ ಅದಾಲತ್ ಫೆ.6 ಕ್ಕೆ ಮುಂದೂಡಿಕೆ Read More »

ಫೆ.11 : ಸಚಿವ ಅಮಿತ್ ಶಾ ಭೇಟಿ ಹಿನ್ನೆಲೆ : ತೆಂಕಿಲ ಶಾಲಾ ಮೈದಾನಕ್ಕೆ ಜಿಲ್ಲಾಧಿಕಾರಿ, ಎಸ್ಪಿ ಭೇಟಿ

ಪುತ್ತೂರು: ಸುವರ್ಣ ಮಹೋತ್ಸವ ಆಚರಿಸುತ್ತಿರುವ ಪ್ರತಿಷ್ಠಿತ ಅಂತರ್ರಾಜ್ಯ ಸಹಕಾರಿ ಸಂಸ್ಥೆ ಕ್ಯಾಂಪ್ಕೋದ ಸುವರ್ಣ ಮಹೋತ್ಸವ ಕಾರ್ಯಕ್ರಮಕ್ಕೆ ಫೆ.11ರಂದು ಕೇಂದ್ರ ಗೃಹ ಸಚಿವರು, ಕೇಂದ್ರದ ಪ್ರಥಮ ಸಹಕಾರ ಸಚಿವ ಅಮಿತ್ ಶಾ ಆಗಮನ ಹಿನ್ನೆಲೆಯಲ್ಲಿ ದ.ಕ. ಜಿಲ್ಲಾಧಿಕಾರಿ ರವಿಕುಮಾರ್ ಎಂ.ಆರ್, ದ.ಕ ಎಸ್ಪಿ ಡಾ.ಅಮಟೆ ವಿಕ್ರಮ್‌ರವರು ಕಾರ್ಯಕ್ರಮ ನಡೆಯುವ ತೆಂಕಿಲ ವಿವೇಕಾನಂದ ಶಾಲಾ ಮೈದಾನಕ್ಕೆ ಶುಕ್ರವಾರ ಭೇಟಿ ನೀಡಿ ಸ್ಥಳ ಪರಿಶೀಲನೆ ಮಾಡಿದರು. ಈ ಸಂದರ್ಭದಲ್ಲಿ ಸಹಾಯಕ ಕಮೀಷನರ್ ಗಿರೀಶ್ ನಂದನ್, ಡಿವೈಎಸ್ಪಿ ವೀರಯ್ಯ ಹಿರೇಮಠ್, ಕ್ಯಾಂಪ್ಕೋ ಮಾಜಿ

ಫೆ.11 : ಸಚಿವ ಅಮಿತ್ ಶಾ ಭೇಟಿ ಹಿನ್ನೆಲೆ : ತೆಂಕಿಲ ಶಾಲಾ ಮೈದಾನಕ್ಕೆ ಜಿಲ್ಲಾಧಿಕಾರಿ, ಎಸ್ಪಿ ಭೇಟಿ Read More »

ಅಮಿತ್ ಷಾ ಆಗಮನ ಹಿನ್ನಲೆ ಮಿತ್ತೂರಿನಲ್ಲಿ ಪಾರ್ಕಿಂಗ್ ಸ್ಥಳ ಪರಿಶೀಲನೆ

ಪುತ್ತೂರು : ಫೆ.11 ರಂದು ಸಹಕಾರಿ‌ ಸಚಿವ ಅಮಿತ್ ಶಾ ಆಗಮನದ ಹಿನ್ನಲೆಯಲ್ಲಿ ವಿವಿಧ ಕಡೆಗಳಿಂದ ಆಗಮಿಸುವ  ಬಸ್ ಮುಂತಾದ ವಾಹನಗಳ ಪಾರ್ಕಿಂಗ್ ವ್ಯವಸ್ತೆಯನ್ನು ಮಿತ್ತೂರಿನಲ್ಲಿ‌ ಮಾಡಲಾಗಿದ್ದು  ಶಾಸಕ ಸಂಜೀವ ಮಠಂದೂರು ನೇತೃತ್ವದಲ್ಲಿ ಶುಕ್ರವಾರ ಪರಿಶೀಲಿಸಲಾಯಿತು  ಈ ಸಂದರ್ಭದಲ್ಲಿ‌ ಮಾನ್ಯ ಶಾಸಕರ ಜತೆ‌ ಕರಾವಳಿ ಅಭಿವೃದ್ಧಿ ಪ್ರಾಧಿಕಾರಿದ ಅಧ್ಯಕ್ಷ ಚಣಿಲ ತಿಮಪ್ಪ ಶೆಟ್ಟಿ, ಮಂಡಲ ಅಧ್ಯಕ್ಷ ಸಜಾ ರಾಧಾಕೃಷ್ಣ ಆಳ್ವ,ಇಡ್ಕಿದು ಪಂಚಾಯತ್ ಅಧ್ಯಕ್ಷ ಸುಧೀರ್ ಕುಮಾರ್ ಶೆಟ್ಟಿ, ಕೋಲ್ಪೆ ದೇವಸ್ಥಾನ ಮುಕ್ತೇಶ್ವರ ಕೆ ಎಸ್ ಸುರೇಶ್ ಭಟ್

ಅಮಿತ್ ಷಾ ಆಗಮನ ಹಿನ್ನಲೆ ಮಿತ್ತೂರಿನಲ್ಲಿ ಪಾರ್ಕಿಂಗ್ ಸ್ಥಳ ಪರಿಶೀಲನೆ Read More »

ಕಾರಿಗೆ ಡಿಕ್ಕಿಯಾದ ನಾಯಿ : 7೦ ಕಿ.ಮೀ. ಸಾಗಿದ ಕಾರಿನ ಬಂಪರಿನೊಳಗೆ ಪ್ರತ್ಯಕ್ಷವಾದ ನಾಯಿ

ಪುತ್ತೂರು : ಬಂಪರಿನೊಳಗೆ ಸಿಲುಕಿಕೊಂಡಿದ್ದ ಈ ನಾಯಿ ಸುಮಾರು 7೦ ಕಿಲೋಮೀಟರ್ ಸಾಗಿ ಯಾವುದೇ ಗಾಯಗಳಾಗದೆ ಆರಾಮವಾಗಿ ಬಂಪರ್ ಒಳಗಿನಿಂದ ಇಳಿದು ಹೋದ ಘಟನೆ ನಡೆದಿದೆ. ಪುತ್ತೂರಿನ ಕಬಕ ನಿವಾಸಿ ಸುಬ್ರಹ್ಮಣ್ಯ ದಂಪತಿಗಳು ಕುಕ್ಕೆ ಸುಬ್ರಹ್ಮಣ್ಯ ಕ್ಷೇತ್ರಕ್ಕೆ ಭೇಟಿ ನೀಡಿ ಪುತ್ತೂರಿಗೆ ವಾಪಾಸಾಗುತ್ತಿದ್ದ ದಾರಿ ಮಧ್ಯೆ ಬಳ್ಪ ಎಂಬಲ್ಲಿ ನಾಯೊಂದು ಕಾರಿಗೆ ಡಿಕ್ಕಿ ಹೊಡೆದಿದೆ. ತಕ್ಷಣವೇ ಸುಬ್ರಹ್ಮಣ್ಯ ಅವರು ಕಾರನ್ನು ನಿಲ್ಲಿಸಿದ್ದು, ಕಾರಿನ ಸುತ್ತಮುತ್ತ ನಾಯಿಗಾಗಿ ಹುಡುಕಾಡಿದ್ದಾರೆ. ಆದರೆ ನಾಯಿ ಅಲ್ಲಿಂದ ಎಲ್ಲಿ ಹೋಗಿದೆ ಎನ್ನುವುದನ್ನು ಊಹಿಸಲೂ

ಕಾರಿಗೆ ಡಿಕ್ಕಿಯಾದ ನಾಯಿ : 7೦ ಕಿ.ಮೀ. ಸಾಗಿದ ಕಾರಿನ ಬಂಪರಿನೊಳಗೆ ಪ್ರತ್ಯಕ್ಷವಾದ ನಾಯಿ Read More »

ಬರೆಪ್ಪಾಡಿ ದೇವಸ್ಥಾನಕ್ಕೆ ಒಡಿಯೂರು, ಮಾಣಿಲ ಶ್ರೀಧಾಮ ಕ್ಷೇತ್ರದ ಸ್ವಾಮೀಜಿಗಳು ಭೇಟಿ

ಪುತ್ತೂರು : ತಾಲೂಕಿನ ಬರೆಪ್ಪಾಡಿ ಶ್ರೀ ಪಂಚಲಿಂಗೇಶ್ವರ ದೇವಸ್ಥಾನದಲ್ಲಿ ಶುಕ್ರವಾರ ಬೆಳಿಗ್ಗೆ ನಡೆದ ಬಾಲಾಲಯ ಪ್ರತಿಷ್ಠೆ ಹಾಗೂ ಅನುಜ್ಞಾ ಕಲಶ ಕಾರ್ಯಕ್ರಮಕ್ಕೆ ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನದ ಶ್ರೀ ಗುರುದೇವಾನಂದ ಸ್ವಾಮೀಜಿ ಹಾಗೂ ಮಾಣಿಲ ಶ್ರೀಧಾಮ ಕ್ಷೇತ್ರದ ಮೋಹನ್‌ದಾಸ್ ಸ್ವಾಮೀಜಿ ಭೇಟಿ ನೀಡಿ ಆಶೀರ್ವಚನ ನೀಡಿದರು. ಈ ಸಂದರ್ಭದಲ್ಲಿ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಕಾರ್ಯಾಧ್ಯಕ್ಷ ಮೋಹನ್ ಗೌಡ ಇಡ್ಯಡ್ಕ, ಪ್ರಮುಖರಾದ ಅರುಣ್ ಕುಮಾರ್ ಪುತ್ತಿಲ, ದಿನೇಶ್ ಮೆದು,,ಚಂದ್ರಶೇಖರ ಬರೆಪ್ಪಾಡಿ,ಗಣೇಶ್ ಉದನಡ್ಕ, ಗಿರಿಶಂಕರ ಸುಲಾಯ, ಲೋಕೇಶ್ ಬರೆಪ್ಪಾಡಿ, ಲೋಹಿತಾಕ್ಷ

ಬರೆಪ್ಪಾಡಿ ದೇವಸ್ಥಾನಕ್ಕೆ ಒಡಿಯೂರು, ಮಾಣಿಲ ಶ್ರೀಧಾಮ ಕ್ಷೇತ್ರದ ಸ್ವಾಮೀಜಿಗಳು ಭೇಟಿ Read More »

ಫೆ.8 : ಭಾರತ ಸೇವಾದಳದ ಭಾವೈಕ್ಯತಾ ಮೆರವಣಿಗೆ, ಪದಗ್ರಹಣ ಸಮಾರಂಭ

ಪುತ್ತೂರು : ಭಾರತ ಸೇವಾದಳದ ಜಿಲ್ಲಾ ಭಾವೈಕ್ಯತಾ ಮೆರವಣಿಗೆ ಫೆ.8 ರಂದು ಕೆಯ್ಯೂರು ಸರಕಾರಿ ಕೆಪಿಎಸ್ ಶಾಲೆಯಲ್ಲಿ ನಡೆಯಲಿದೆ ಎಂದು ಭಾರತ ಸೇವಾದಳದ ತಾಲೂಕು ಸಮಿತಿ ಅಧ್ಯಕ್ಷ ಪುತ್ತೂರು ಉಮೇಶ್ ನಾಯಕ್ ತಿಳಿಸಿದ್ದಾರೆ. ಅವರು ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಮೆರವಣಿಗೆ  ಅಂಗವಾಗಿ ಬೆಳಗ್ಗೆ ಕೆಯ್ಯೂರು ಕೆಪಿಎಸ್ ಶಾಲೆಯಲ್ಲಿ ಬೆಳಿಗ್ಗೆ ಧ್ವಜಾರೋಹಣದ ಬಳಿಕ 9.30 ಕ್ಕೆ ಉದ್ಘಾಟನೆಗೊಳ್ಳಲಿದೆ. ಬಳಿಕ ಕೆಯ್ಯೂರು ದೇವಿನಗರದಿಂದ ಮೆರವಣಿಗೆ ಕೆಪಿಎಸ್ ಶಾಲೆಗೆ ಆಗಮಿಸಲಿದೆ. ಬಳಿಕ ನಡೆಯುವ ಸಭಾ ಕಾರ್ಯಕ್ರಮದಲ್ಲಿ ತಾಲೂಕು ಸಮಿತಿ ಪದಾಧಿಕಾರಿಗಳ ಪದಗ್ರಹಣ

ಫೆ.8 : ಭಾರತ ಸೇವಾದಳದ ಭಾವೈಕ್ಯತಾ ಮೆರವಣಿಗೆ, ಪದಗ್ರಹಣ ಸಮಾರಂಭ Read More »

ತಾಲೂಕು ಅಕ್ರಮ-ಸಕ್ರಮ ಮಂಜೂರಾತಿ ಸಭೆ

ಪುತ್ತೂರು: ತಾಲೂಕು ಅಕ್ರಮ-ಸಕ್ರಮ ಮಂಜೂರಾತಿ ಸಭೆ ಮಾನ್ಯ ಶಾಸಕರಾದ ಸಂಜೀವ ಮಠದೂರು ನೇತೃತ್ವದಲ್ಲಿ ನಡೆಯಿತು.ಸರ್ಕಾರದ ಸವಲತ್ತುಗಳನ್ನು ಫಲಾನುಭವಿಗೆ ಮುಟ್ಟಿಸುವ ನಿಟ್ಟಿನಲ್ಲಿ ವಿವಿಧ ಕಾರ್ಯಕ್ರಮ ಹಾಕಿಕೊಳ್ಳಲಾಗಿದೆ. ಬ್ರಷ್ಟಾಚಾರ ಮುಕ್ತ ಸಮಾಜ ನಿರ್ಮಾಣವಾಗ ನಿಟ್ಟಿನಲ್ಲಿ ರೈತರಿಗೆ ಇಲಾಖೆಯ ಅಧಿಕಾರಿಗಳಿಂದ ಆಗುವ ಸಮಸ್ಯೆಗಳ ಬಗ್ಗೆ ತಿಳಿಸಬೇಕು. ಸರ್ಕಾರಿ ಜಾಗದಲ್ಲಿ ಸಾಗುವಳಿ ಮಾಡಿದ ರೈತರಿಗೆ ಸಕ್ರಮ ಮಾಡಲು ಅವಕಾಶ ಮಾಡಿಕೊಡಲಾಗಿದ್ದು, ಮಾ.30ರ ತನಕ ಅಕ್ರಮ ಸಕ್ರಮ ಅರ್ಜಿ ನೀಡಲು ಅವಕಾಶವಿದೆ ಎಂದು ಪುತ್ತೂರು ಶಾಸಕ ಸಂಜೀವ ಮಠಂದೂರು ತಿಳಿಸಿದರು. ಅವರು ಪುತ್ತೂರು ಪುರಭವನದಲ್ಲಿ

ತಾಲೂಕು ಅಕ್ರಮ-ಸಕ್ರಮ ಮಂಜೂರಾತಿ ಸಭೆ Read More »

ಕಾಂಗ್ರೆಸ್‌ಗೆ ಈಗ ಲೆಟರ್‌ ಬಾಂಬ್‌ ಸಂಕಷ್ಟ

ಡಿಕೆಶಿಗೆ ವಿರುದ್ಧ ಸಿದ್ದರಾಮಯ್ಯ ಹೈಕಮಾಂಡ್‌ಗೆ ಬರೆದಿದ್ದಾರೆ ಎನ್ನಲಾದ ಪತ್ರ ವೈರಲ್‌ ಬೆಂಗಳೂರು: ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ವಿರುದ್ಧ ಸೋನಿಯಾ ಗಾಂಧಿಗೆ ಸಿದ್ದರಾಮಯ್ಯ ಬರೆದಿದ್ದಾರೆ ಎನ್ನಲಾಗಿರುವ ಪತ್ರವೊಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿ, ವೈರಲ್ ಆಗಿದ್ದು, ಇದು ಕಾಂಗ್ರೆಸಿನ ಒಳ ಬೇಗುದಿಯನ್ನು ಇನ್ನಷ್ಟು ಹೆಚ್ಚಿಸಿದೆ.ಈ ಪತ್ರಕ್ಕೆ ಸ್ಪಷ್ಟೀಕರಣ ನೀಡಿರುವ ಸಿದ್ದರಾಮಯ್ಯ, ನನ್ನ ಮತ್ತು ಡಿ.ಕೆ.ಶಿವಕುಮಾರ್ ನಡುವೆ ಬಿರುಕು ಮೂಡಿಸಲು ನಕಲಿ ಪತ್ರಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಡಲಾಗಿದೆ ಎಂದು ಹೇಳಿದ್ದಾರೆ. ನನ್ನ ಹೆಸರನ್ನು ದುರ್ಬಳಕೆ ಮಾಡಿಕೊಂಡ ನಕಲಿ ಪತ್ರವೊಂದು ಹರಿದಾಡುತ್ತಿದೆ. ನನ್ನ

ಕಾಂಗ್ರೆಸ್‌ಗೆ ಈಗ ಲೆಟರ್‌ ಬಾಂಬ್‌ ಸಂಕಷ್ಟ Read More »

ಪುತ್ತೂರಿನ ಬೆಟ್ಟಂಪಾಡಿ ಕಾಲೇಜಿನ ಉಪನ್ಯಾಸಕ ಮಹೇಶ್ ಹೃದಯಾಘಾತದಿಂದ ನಿಧನ

ಪುತ್ತೂರು: ಬೆಟ್ಟಂಪಾಡಿ ಪ.ಪೂ ಕಾಲೇಜಿನ ಉಪನ್ಯಾಸಕ ಮಹೇಶ್ ಎಂಬವರು ಫೆ. 3ರಂದು ಬೆಳಗ್ಗೆ ಹೃದಯಾಘಾತದಿಂದ ನಿಧನರಾಗಿದ್ದಾರೆ. ಪರ್ಲಡ್ಕ ನಿವಾಸಿಯಾಗಿರುವ ಬೆಟ್ಟಂಪಾಡಿ ಪ.ಪೂ ಕಾಲೇಜಿನಲ್ಲಿ ದ್ವಿತೀಯ ಪಿಯುಸಿ ಪ್ರಾಯೋಗಿಕ ಪರೀಕ್ಷೆಗಳ ಭೌತಶಾಸ್ತ್ರ ವಿಷಯದ ಸಂಯೋಜಕರಾಗಿರುವ, ಮಹೇಶ್ ಅವರಿಗೆ ಬೆಳಗ್ಗೆ ಎದೆ ನೋವು ಕಾಣಿಸಿಕೊಂಡಿದ್ದು, ತಕ್ಷಣ ಪುತ್ತೂರು ಆಸ್ಪತ್ರೆಗೆ ಕರೆತಂದಾಗ ಆಗಲೇ ಅವರು ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ. ಅವರ ಅಗಲುವಿಕೆಯ  ದುಃಖವನ್ನು ಸಹಿಸುವ ಶಕ್ತಿಯನ್ನು ದೇವರು ಅವರ  ಕುಟುಂಬಕ್ಕೆ ಹಾಗೂ ಆತ್ಮೀಯರಿಗೆ ಕರುಣಿಸಲಿ .

ಪುತ್ತೂರಿನ ಬೆಟ್ಟಂಪಾಡಿ ಕಾಲೇಜಿನ ಉಪನ್ಯಾಸಕ ಮಹೇಶ್ ಹೃದಯಾಘಾತದಿಂದ ನಿಧನ Read More »

ಫೆ.5 : ಶಾಂತಿಮೊಗರು ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮ

ಪುತ್ತೂರು : ತಾಲೂಕಿನ ಶಾಂತಿಮೊಗರು ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಹುಣ್ಣಿಮೆ ಪ್ರಯುಕ್ತ ಪ್ರತೀ ತಿಂಗಳು ನಡೆಯುವ ಸಾರ್ವಜನಿಕ ಗಣಪತಿ ಹೋಮ, ಶ್ರೀ ಸತ್ಯನಾರಾಯಣ ಪೂಜೆ ಹಾಗೂ ಶ್ರೀ ದುರ್ಗಾ ಪೂಜೆ, ಭಜನಾ ಕಾರ್ಯಕ್ರಮ ಫೆ.5 ಆದಿತ್ಯವಾರ ನಡೆಯಲಿದೆ. ಈ ಧಾರ್ಮಿಕ ಕಾರ್ಯಕ್ರಮದಲ್ಲಿ ಗ್ರಾಮದ ಎಲ್ಲಾ ಮನೆಯವರು ಭಾಗವಹಿಸಿ ಪ್ರಸಾದ ಸ್ವೀಕರಿಸಿ ದೇವರ ಕೃಪೆಗೆ ಪಾತ್ರರಾಗಬೇಕೆಂದು ದೇವಸ್ಥಾನದ ಪ್ರಕಟಣೆ ತಿಳಿಸಿದೆ.

ಫೆ.5 : ಶಾಂತಿಮೊಗರು ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮ Read More »

error: Content is protected !!
Scroll to Top