ರೇಣುಕಾಸ್ವಾಮಿ ಮನೆಗೆ ಭೇಟಿ ನೀಡಿದ ಕನ್ನಡ ಚಲನಚಿತ್ರ ವಾಣಿಜ್ಯ ಮಂಡಳಿ | 5 ಲಕ್ಷ ಪರಿಹಾರ

ರೇಣುಕಾಸ್ವಾಮಿ ಹತ್ಯೆ ಪ್ರಕರಣದ ಬಳಿಕ ಕನ್ನಡ ಚಲನಚಿತ್ರ ವಾಣಿಜ್ಯ ಮಂಡಳಿ ಮೇಲೆ ನಟ ದರ್ಶನ್ ನನ್ನು ಚಿತ್ರರಂಗದಿಂದ ಬ್ಯಾನ್ ಮಾಡುವಂತೆ ತೀವ್ರ ಒತ್ತಡ ಹೆಚ್ಚಾಗಿದ್ದು, ಈ ಬೆನ್ನಲ್ಲೇ ನಟ ದರ್ಶನ್‌ ಕೃತ್ಯವನ್ನು ಖಂಡಿಸಿರುವ ಚಲನಚಿತ್ರ ವಾಣಿಜ್ಯ ಮಂಡಳಿ ಇಂದು(ಜೂನ್.15) ಹತ್ಯೆಯಾದ ರೇಣುಕಾಸ್ವಾಮಿ ಮನೆಗೆ ಭೇಟಿ ನೀಡಿ 5 ಲಕ್ಷ ಪರಿಹಾರದ ಚೆಕ್ ನೀಡಿದ್ದಾರೆ. ಜೊತೆಗೆ ಶಾಸಕರೊಬ್ಬರು 2 ಲಕ್ಷ ಪರಿಹಾರ ನೀಡಿದ್ದಾರೆ. ಸಾರಾ ಗೋವಿಂದು, ನಿರ್ಮಾಪಕರ ಸಂಘದ ಅಧ್ಯಕ್ಷ ಉಮೇಶ್ ಬಣಕಾರ್, ವಾಣಿಜ್ಯ ಮಂಡಳಿ ಅಧ್ಯಕ್ಷ ಸುರೇಶ್ […]

ರೇಣುಕಾಸ್ವಾಮಿ ಮನೆಗೆ ಭೇಟಿ ನೀಡಿದ ಕನ್ನಡ ಚಲನಚಿತ್ರ ವಾಣಿಜ್ಯ ಮಂಡಳಿ | 5 ಲಕ್ಷ ಪರಿಹಾರ Read More »

ಸ್ಮೃತಿ ವನದಲ್ಲಿ 4.6 ಲಕ್ಷ ಗಿಡ ಬೆಳೆಸಿದ ಸುಳ್ಯದ ಡಾ.ಆರ್.ಕೆ.ನಾಯರ್ l ಒಲಿಯಿತು ಯುನೆಸ್ಕೋ ಪ್ರಶಸ್ತಿ

ಮುಂಬೈ : ಗುಜರಾತ್‌ನ ಭುಜ್‌ನಲ್ಲಿ ನಿರ್ಮಿಸಿರುವ ಭೂಕಂಪ ಸ್ಮಾರಕ ಸ್ಮೃತಿ ವನಕ್ಕೆ ಯುನೆಸ್ಕೋ ಪ್ರಶಸ್ತಿ. ಸ್ಮೃತಿ ವನದಲ್ಲಿ 4.60 ಲಕ್ಷ ಗಿಡಗಳನ್ನು ನೆಟ್ಟು ಬೆಳೆಸುವ ಮೂಲಕ  ಹಸಿರು ಪರಿಸರ ನಿರ್ಮಾಣ ಮಾಡಿರುವ ಸುಳ್ಯದವರಾದ ಪರಿಸರ ತಜ್ಞ ಡಾ. ಆರ್.ಕೆ.ನಾಯರ್ ಅವರಿಗೆ ಇದು ಹೆಮ್ಮೆಯ ಕ್ಷಣ. ಯುನೆಸ್ಕೋ ಪ್ರತಿ ವರ್ಷ ವಾಸ್ತುಶಿಲ್ಪ, ಪ್ರಕೃತಿ ಸಂರಕ್ಷಣೆ ಮತ್ತು ವಿನ್ಯಾಸ ಕ್ಷೇತ್ರದ ವಿಶ್ವದ ಪ್ರತಿಷ್ಠಿತ 7 ಸ್ಥಳಗಳನ್ನು, ಸ್ಮಾರಕಗಳನ್ನು ಗುರುತಿಸಿ ಪ್ರಿಕ್ಸ್ ವರ್ಸೈಲ್ಸ್ ಪ್ರಶಸ್ತಿ ನೀಡಲಾಗುತ್ತದೆ.  ವಿಶ್ವದ ಏಳು ಅತ್ಯಂತ ಸುಂದರವಾದ

ಸ್ಮೃತಿ ವನದಲ್ಲಿ 4.6 ಲಕ್ಷ ಗಿಡ ಬೆಳೆಸಿದ ಸುಳ್ಯದ ಡಾ.ಆರ್.ಕೆ.ನಾಯರ್ l ಒಲಿಯಿತು ಯುನೆಸ್ಕೋ ಪ್ರಶಸ್ತಿ Read More »

ಯಡಿಯೂರಪ್ಪ ಕುಟುಂಬ ಮುಗಿಸಲು ಕಾಂಗ್ರೆಸ್ ನಿಂದ ಕುತಂತ್ರl ಸೇಡಿನ ರಾಜಕಣಕ್ಕಿಳಿದ ಕಾಂಗ್ರೆಸ್ : ಕುಮಾರ ಸ್ವಾಮಿ

ಬೆಂಗಳೂರು : ಸಂಸದರಾಗಿ ಆಯ್ಕೆಯಾಗಿರುವ ಹಿನ್ನೆಲೆಯಲ್ಲಿ ಚನ್ನಪಟ್ಟಣ ವಿಧಾನಸಭೆ ಕ್ಷೇತ್ರದ ಶಾಸಕ ಸ್ಥಾನಕ್ಕೆ ಎಚ್‌.ಡಿ. ಕುಮಾರಸ್ವಾಮಿ ರಾಜೀನಾಮೆ ನೀಡಿದ್ದಾರೆ. ಸ್ಪೀಕರ್‌ ಯು.ಟಿ. ಖಾದರ್‌ ಕೊಠಡಿಗೆ ಆಗಮಿಸಿದ ಕುಮಾರಸ್ವಾಮಿ ತಮ್ಮ ರಾಜೀನಾಮೆ ಪತ್ರ ಸಲ್ಲಿಸಿದರು. ಕುಮಾರಸ್ವಾಮಿ ರಾಜೀನಾಮೆ ಸಲ್ಲಿಸುವ ವೇಳೆ ಜಿ.ಟಿ. ದೇವೇಗೌಡ, ಭೋಜೇಗೌಡ ಉಪಸ್ಥಿತರಿದ್ದರು. ಲೋಕಸಭಾ ಚುನಾವಣೆಯಲ್ಲಿ ಮಂಡ್ಯ ಕ್ಷೇತ್ರದಿಂದ ಗೆದ್ದಿರುವ ಕುಮಾರಸ್ವಾಮಿ ಬೃಹತ್‌ ಕೈಗಾರಿಕೆ ಮತ್ತು ಉಕ್ಕು ಖಾತೆಯ ಸಚಿವರಾಗಿ ನೇಮಕವಾಗಿದ್ದಾರೆ.ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ ಕುಟುಂಬ ಮುಗಿಸಲು ಪ್ರಯತ್ನಿಸಿದ ಕಾಂಗ್ರೆಸ್‌ ಇದೀಗ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ

ಯಡಿಯೂರಪ್ಪ ಕುಟುಂಬ ಮುಗಿಸಲು ಕಾಂಗ್ರೆಸ್ ನಿಂದ ಕುತಂತ್ರl ಸೇಡಿನ ರಾಜಕಣಕ್ಕಿಳಿದ ಕಾಂಗ್ರೆಸ್ : ಕುಮಾರ ಸ್ವಾಮಿ Read More »

ಪೊಲೀಸ್ ಸಿಬ್ಬಂದಿಗಳಿಗೆ ರೈನ್‌ ಕೋಟ್ ವಿತರಣೆ l ಮುಳಿಯ ಜುವೆಲ್ಸ್ – ರೋಟರಿ ಕ್ಲಬ್ ಜಂಟಿ ಕೊಡುಗೆ

ಪುತ್ತೂರು : ಸರ್ಕಾರದಿಂದ ಕೆಲವು ಸವಲತ್ತುಗಳು ಸಿಬ್ಬಂದಿಗಳಿಗೆ ಲಭಿಸಿದರೂ, ಸಿಗದೇ ಇರುವುದನ್ನು ಮುಳಿಯ ಸಂಸ್ಥೆಯ ಮೂಲಕ ನೀಡಲಾಗುತ್ತಿದೆ. ಪೊಲೀಸರು ಜನರ ಹತ್ತಿರವಾಗುತ್ತಿದ್ದು, ಇನ್ನಷ್ಟು ಉತ್ತಮ ಕೆಲಸಗಳು ಅವರಿಂದ ನಡೆಯುವಂತಾಗಬೇಕು ಎಂದು ಮುಳಿಯ ಜ್ಯುವೆಲ್ಸ್‌ನ ಆಡಳಿತ ನಿರ್ದೇಶಕ ಕೃಷ್ಣ ನಾರಾಯಣ ಮುಳಿಯ ಹೇಳಿದರು. ಪುತ್ತೂರು ನಗರ ಠಾಣೆಯಲ್ಲಿ ಪುತ್ತೂರು ಮುಳಿಯ ಜುವೆಲ್ಸ್ ಮತ್ತು ರೋಟರಿ ಕ್ಲಬ್ ಪುತ್ತೂರು ಯುವ ವತಿಯಿಂದ ಪೊಲೀಸ್ ಸಿಬ್ಬಂದಿಗಳಿಗೆ ರೈನ್ ಕೋಟ್ ವಿತರಣೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು. ಮುಳಿಯ ಸಂಸ್ಥೆಯಿಂದ ರೈನ್ ಕೋಟ್

ಪೊಲೀಸ್ ಸಿಬ್ಬಂದಿಗಳಿಗೆ ರೈನ್‌ ಕೋಟ್ ವಿತರಣೆ l ಮುಳಿಯ ಜುವೆಲ್ಸ್ – ರೋಟರಿ ಕ್ಲಬ್ ಜಂಟಿ ಕೊಡುಗೆ Read More »

ಕುಕ್ಕೆ ಕ್ಷೇತ್ರದಲ್ಲಿ ವಾಹನ ಸವಾರರಿಗೆ  ಪಾರ್ಕಿಂಗ್ ಬದಲಾವಣೆ l ಹಲವು ರಸ್ತೆಗಳು ಒನ್ ವೇ

ಸುಬ್ರಹ್ಮಣ್ಯ : ಗ್ರಾಮ ಪಂಚಾಯತ್ ಸಭಾಂಗಣದಲ್ಲಿ ಕುಕ್ಕೆ ಸುಬ್ರಹ್ಮಣ್ಯದ ರಸ್ತೆ ಮಾರ್ಗಸೂಚಿ ಹಾಗೂ ಪಾರ್ಕಿಂಗ್ ಸಮಸ್ಯೆ ಬಗ್ಗೆ ಸುಬ್ರಹ್ಮಣ್ಯ ಗ್ರಾಮ ಪಂಚಾಯತ್, ಸುಬ್ರಹ್ಮಣ್ಯ ಪೊಲೀಸ್‌ ಠಾಣೆ ಹಾಗೂ ಇಲಾಖೆಗಳು, ಸಂಘ ಸಂಸ್ಥೆಗಳ ಸಹಯೋಗದೊಂದಿಗೆ ಸಭೆ ನಡೆದು ಬೀದಿ ಬದಿ ಪಾರ್ಕಿಂಗ್ ನಿಷೇಧ, ಕಾಶಿಕಟ್ಟೆ- ಸವಾರಿ ಮಂಟಪ, ಬೈಪಾಸ್ ರಸ್ತೆ ಒನ್ ವೇ ಮಾಡಲು ನಿರ್ಣಯ ಅಂಗೀಕರಿಸಲಾಯಿತು. ಸುಬ್ರಹ್ಮಣ್ಯ ಗ್ರಾ.ಪಂ. ಸದಸ್ಯ ಹರೀಶ್ ಇಂಜಾಡಿ ಮಾತನಾಡಿ, ಸಾರ್ವಜನಿಕರು ರಸ್ತೆ ಮಾರ್ಗಸೂಚಿ ನಿಯಮ ಪಾಲಿಸಬೇಕು. ಪಾರ್ಕಿಂಗ್ ನಿರ್ವಹಣೆಯನ್ನು ಸಂಬಂಧಿಸಿದವರು ಸಮರ್ಪಕವಾಗಿ

ಕುಕ್ಕೆ ಕ್ಷೇತ್ರದಲ್ಲಿ ವಾಹನ ಸವಾರರಿಗೆ  ಪಾರ್ಕಿಂಗ್ ಬದಲಾವಣೆ l ಹಲವು ರಸ್ತೆಗಳು ಒನ್ ವೇ Read More »

ಜು. 22 : ಕೇಂದ್ರ ಬಜೆಟ್ ಮಂಡನೆ ಸಾಧ್ಯತೆ

ನರೇಂದ್ರ ಮೋದಿ ನೇತೃತ್ವದ  3ನೇ ಅವಧಿಯ ಸರ್ಕಾರದ ಪೂರ್ಣ ಪ್ರಮಾಣದ ಬಜೆಟ್ ಜು. 22 ರಂದು ಮಂಡನೆಯಾಗುವ ಸಾಧ್ಯತೆಗಳು ಇವೆ. 18ನೇ ಲೋಕಸಭೆಯ ವಿಶೇಷ 8 ದಿನಗಳ ಸಂಸತ್ ಅಧಿವೇಶನ ಇದೇ ಜೂನ್ 24 ರಂದು ಪ್ರಾರಂಭವಾಗಿ ಜುಲೈ 3 ರವರೆಗೆ ಇರಲಿದೆ .ಈ ಅಧಿವೇಶನವು ಹೊಸದಾಗಿ ಚುನಾಯಿತ ಸದಸ್ಯರ ಪ್ರಮಾಣ ವಚನ ಸ್ವೀಕಾರ, ಸ್ಪೀಕರ್ ಆಯ್ಕೆ, ರಾಷ್ಟ್ರಪತಿಗಳ ಭಾಷಣ ಮತ್ತು ನಂತರದ ಚರ್ಚೆಗಳನ್ನು ಒಳಗೊಂಡಿರುತ್ತದೆ. ಸಂಸತ್ತಿನ ಹೊಸ ಸದಸ್ಯರು ಜೂನ್ 24 ಮತ್ತು 25 ರಂದು

ಜು. 22 : ಕೇಂದ್ರ ಬಜೆಟ್ ಮಂಡನೆ ಸಾಧ್ಯತೆ Read More »

ಗೂಗಲ್‌ ಕ್ಲೌಡ್ ಸಂಸ್ಥೆಯ ಉಪಾಧ್ಯಕ್ಷರಾಗಿ ರಾಜ್‌ ಪೈ ನೇಮಕ

ಮಣಿಪಾಲ : ಪೈ ಕುಟುಂಬದ ಸದಸ್ಯ ರಾಜ್‌ ಪೈ (ರಜನೇಶ್‌ ಪೈ) ಅವರು ಅಮೆರಿಕದ  ಗೂಗಲ್‌ ಕ್ಲೌಡ್ ಸಂಸ್ಥೆಯ ಉಪಾಧ್ಯಕ್ಷರಾಗಿ ನೇಮಕಗೊಂಡಿದ್ದಾರೆ. ರಾಜ್‌ ಪೈ ಅವರು ಕ್ಲೌಡ್ ಕೃತಕ ಬುದ್ಧಿ ಮತ್ತು  ತಂಡದ ನಿರ್ವಹಣೆಯನ್ನು ನೋಡಿಕೊಳ್ಳುವವರು ಆಗಿದ್ದರು. ಗೂಗಲ್‌ ಸಂಸ್ಥೆ ಕ್ಲೌಡ್ ವ್ಯವಹಾರಕ್ಕೆ ಪ್ರಾಶಸ್ತ್ಯ ನೀಡ ಬಯಸಿರುವುದು ಈ ನೇಮಕಾತಿಯ ಸಂಕೇತವಾಗಿದೆ. ಪೈಯವರು ಅಮೆಜಾನ್‌, ಸಿಯಾಟಲ್‌ನಿಂದ ಈ ಹುದ್ದೆಗೆ ಬಂದಿದ್ದಾರೆ. ಅವರು ಅಮೆಜಾನ್‌ ಎಡಬ್ಲ್ಯುಎಸ್‌ ಉಪಾಧ್ಯಕ್ಷರಾಗಿದ್ದರು. ಅಮೆಜಾನ್‌ ಸಂಸ್ಥೆಯಲ್ಲಿ ಆರಂಭದಲ್ಲಿ ನಿರ್ದೇಶಕರಾಗಿ ಸೇವೆ ಸಲ್ಲಿಸಿದ್ದರು. ಹಿಂದೆ ಮೈಕ್ರೋಸಾಫ್ಟ್,

ಗೂಗಲ್‌ ಕ್ಲೌಡ್ ಸಂಸ್ಥೆಯ ಉಪಾಧ್ಯಕ್ಷರಾಗಿ ರಾಜ್‌ ಪೈ ನೇಮಕ Read More »

ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಪ್ರಧಾನ ಕಾರ್ಯದರ್ಶಿಯಾಗಿ ಹರ್ಷ ಗುಪ್ತಾ ನೇಮಕ

ಬೆಂಗಳೂರು : ರಾಜ್ಯ ಸರ್ಕಾರದಿಂದ ಲೋಕಸಭಾ ಚುನಾವಣಾ ನೀತಿ ಸಂಹಿತೆ ತೆರವಿನ ಕೆಲ ದಿನಗಳ ನಂತರ, ಆಡಳಿತ ಯಂತ್ರಕ್ಕೆ ಚುರುಕು ಕೆಲಸ ಮಾಡಲಾಗಿದೆ. ಐವರು ಐಎಎಸ್ ಅಧಿಕಾರಿ ಹಾಗೂ ಓರ್ವ ಐಪಿಎಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡಿ ಆದೇಶಿಸಿದೆ. ಇಂದು ರಾಜ್ಯ ಸರ್ಕಾರದಿಂದ ವರ್ಗಾವಣೆ ಅಧಿಸೂಚನೆ ಹೊರಡಿಸಿದ್ದು, ಬೆಂಗಳೂರಿನ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಸರ್ಕಾರದ ಪ್ರಧಾನ ಕಾರ್ಯದರ್ಶಿ ಅನಿಲ್ ಕುಮಾರ್ ಟಿ.ಕೆ., ಐಎಎಸ್ (ಕೆಎನ್: 1995) ತಕ್ಷಣದಿಂದ ಜಾರಿಗೆ ಬರುವಂತೆ ವರ್ಗಾವಣೆ ಮಾಡಲಾಗಿದೆ ಮತ್ತು ಮುಂದಿನ

ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಪ್ರಧಾನ ಕಾರ್ಯದರ್ಶಿಯಾಗಿ ಹರ್ಷ ಗುಪ್ತಾ ನೇಮಕ Read More »

ಎರಡು ದಿನಗಳಿಂದ ಚಾರ್ಮಾಡಿ ಘಾಟಿಯಲ್ಲಿ ಒಂಟಿ ಸಲಗ ಪ್ರತ್ಯಕ್ಷ

ಬೆಳ್ತಂಗಡಿ : ಕಳೆದ ಎರಡು ದಿನಗಳಿಂದ ಚಾರ್ಮಾಡಿ ಘಾಟಿಯಲ್ಲಿ ಒಂಟಿ ಸಲಗ ವಾಹನ ಸವಾರರಿಗೆ ಪ್ರತ್ಯಕ್ಷವಾಗುತ್ತಿದೆ. ಬುಧವಾರ ರಾತ್ರಿ ಬಸ್ ಸಂಚಾರಕ್ಕೆ ತಡೆಯೊಡ್ಡಿದ್ದ ಕಾಡಾನೆ ಶುಕ್ರವಾರ ಮಧ್ಯಾಹ್ನ ಒಂದು ಗಂಟೆಯ ಸುಮಾರಿಗೆ ರಸ್ತೆ ಬದಿ ಮತ್ತೆ ಕಾಣಸಿಕ್ಕಿದೆ. ಈ ಹಿಂದೆ ರಸ್ತೆಯ ಅಂಚಿನಲ್ಲಿ ಪ್ರತ್ಯಕ್ಷವಾಗುತ್ತಿದ್ದ ಸಲಗ ಶುಕ್ರವಾರ ಘಾಟಿಯ ಮೂರನೇ ತಿರುವಿನ ರಸ್ತೆ ಬದಿ ಇರುವ ಅರಣ್ಯ ಇಲಾಖೆಯ ಔಷಧ ಸಸ್ಯಗಳ ಸಂರಕ್ಷಣ ವನದ ಗೇಟಿನ ಮುಂಭಾಗವೇ ವಿಹಾರ ಆರಂಭಿಸಿತ್ತು. ಆನೆ ಸುಮಾರು ಒಂದು ತಾಸಿಗಿಂತ ಅಧಿಕ

ಎರಡು ದಿನಗಳಿಂದ ಚಾರ್ಮಾಡಿ ಘಾಟಿಯಲ್ಲಿ ಒಂಟಿ ಸಲಗ ಪ್ರತ್ಯಕ್ಷ Read More »

ಅಯೋಧ್ಯೆ ರಾಮಮಂದಿರ ಸ್ಪೋಟಿಸುವುದಾಗಿ ಬೆದರಿಕೆ | ಅಯೋಧ್ಯೆಯಲ್ಲಿ ಕಟ್ಟೆಚ್ಚರ

ಅಯೋಧ್ಯೆ: ರಾಮಮಂದಿರ ಸ್ಪೋಟಿಸುವುದಾಗಿ ಜೈಶೆ ಮೊಹಮ್ಮದ್ ಉಗ್ರ ಸಂಘಟನೆ ಬೆದರಿಕೆ ಹಾಕಿದ ಹಿನ್ನೆಲೆಯಲ್ಲಿ ಅಯೋಧ್ಯೆಯಲ್ಲಿ ಕಟ್ಟೆಚ್ಚರ ಘೋಷಣೆ ಮಾಡಲಾಗಿದೆ.ರಾಮಮಂದಿರದ ಮೇಲೆ ಬಾಂಬ್ ದಾಳಿ ಮಾಡಲಾಗುವುದು ಎಂದು ಜೈಶೆ ಮೊಹಮ್ಮದ್ ಉಗ್ರ ಸಂಘಟನೆಯ ಆಡಿಯೊ ವೈರಲ್ ಆದ ಬೆನ್ನಲ್ಲೇ, ರಾಮಮಂದಿರದ ಸುತ್ತಲೂ ಹೈ ಅಲರ್ಟ್ ಘೋಷಣೆ ಮಾಡಲಾಗಿದೆ. ರಾಮಮಂದಿರ ಸ್ಫೋಟಿಸುವ ಕುರಿತು ಜೈಶೆ ಮೊಹಮ್ಮದ್ ಉಗ್ರರು ಬೆದರಿಕೆ ಹಾಕಿದ ಹಿನ್ನೆಲೆಯಲ್ಲಿ ರಾಮಮಂದಿರ ಸುತ್ತಮುತ್ತ ಹೆಚ್ಚಿನ ಭದ್ರತಾ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ಸಿಸಿಟಿವಿಗಳ ಮೂಲಕ ಶಂಕಾಸ್ಪದ ವ್ಯಕ್ತಿಗಳ ಮೇಲೆ ನಿಗಾ ಇರಿಸಲಾಗಿದೆ.

ಅಯೋಧ್ಯೆ ರಾಮಮಂದಿರ ಸ್ಪೋಟಿಸುವುದಾಗಿ ಬೆದರಿಕೆ | ಅಯೋಧ್ಯೆಯಲ್ಲಿ ಕಟ್ಟೆಚ್ಚರ Read More »

error: Content is protected !!
Scroll to Top