ಸ್ಕೂಟರ್ – ಕಾರು ಅಪಘಾತದಿಂದ ಮಹಿಳೆಗೆ ಗಾಯ ; ಗಾಯಾಳು ನೆರವಿಗೆ ಧಾವಿಸಿದ ಶಾಸಕ ಸಂಜೀವ ಮಠಂದೂರು ಕಾರ್ಯಕ್ಕೆ, ಸಾರ್ವಜನಿಕರಿಂದ ಶ್ಲಾಘನೆ
ಪುತ್ತೂರು: ಸ್ಕೂಟರ್ – ಕಾರು ಅಪಘಾತದಲ್ಲಿ ಗಾಯಗೊಂಡ ಮಹಿಳೆಯ ನೆರವಿಗೆ ಆಗಮಿಸಿದ ಶಾಸಕ ಸಂಜೀವ ಮಠಂದೂರು ಅವರು, ಮಹಿಳೆಯನ್ನು ರಿಕ್ಷಾದಲ್ಲಿ ಆಸ್ಪತ್ರೆಗೆ ಸಾಗಿಸಿ ಅವರ ಸ್ಕೂಟರ್ ಹಾಗೂ ವಸ್ತುಗಳನ್ನು ಸುರಕ್ಷಿತವಾಗಿ ಪೊಲೀಸರಿಗೆ ಹಸ್ತಾಂತರಿಸುವ ಮೂಲಕ ಮಾನವೀಯತೆ ಮೆರೆದರು. ದರ್ಬೆ ಸಮೀಪ ಸ್ಕೂಟರ್ ಹಾಗೂ ಕಾರು ನಡುವೆ ಸೋಮವಾರ ಸಂಜೆ ವೇಳೆ ಅಪಘಾತ ಸಂಭವಿಸಿತ್ತು. ಸ್ಕೂಟರ್ ಚಲಾಯಿಸುತ್ತಿದ್ದ ಮಹಿಳೆ, ನೆಲಕ್ಕುರುಳಿ ಗಾಯಗೊಂಡಿದ್ದು, ಆ ವೇಳೆ ಅದೇ ರಸ್ತೆಯಾಗಿ ತೆರಳುತ್ತಿದ್ದ ಶಾಸಕ ಸಂಜೀವ ಮಠಂದೂರು ಅವರು ಗಾಯಾಳು ಮಹಿಳೆಯ ನೆರವಿಗೆ […]