ಸುಸೂತ್ರವಾಗಿ ಸಾಗಿದ ಬಿಜೆಪಿ ಜಾಥಾ ಅಂತ್ಯದಲ್ಲಿ ಬಿರುಸಾಗಿದ್ದೇಕೆ?! | ಈ ಬಿರುಸು ಪೂರ್ವ ನಿಯೋಜಿತ ಪ್ಲ್ಯಾನೇ?! | ಹಿರಿ ನಾಯಕರಿರುವ ಬಿಜೆಪಿಯಲ್ಲಿ ಈ ಗೊಂದಲವೇಕೆ? | ಬಿಜೆಪಿ ಪಡಸಾಲೆಯ ಗೊಂದಲ ಎದುರಾಳಿಗಳಿಗೆ ಆಹಾರವಾಗದೇ? ಇದಕ್ಕೆ ಹೊಣೆ ಯಾರು?
ಪುತ್ತೂರು: ಅಮಿತ್ ಶಾ ಕಾರ್ಯಕ್ರಮದ ಪ್ರಚಾರಾರ್ಥ ಗುರುವಾರ ಪೇಟೆಯಾದ್ಯಂತ ನಡೆದ ಜಾಥಾ, ಅಂತ್ಯದಲ್ಲಿ ಏಕಾಏಕೀ ಬಿರುಸಾಯಿತು. ಮಾತಿನ ಚಕಮಕಿ ತಾರಕಕ್ಕೇರಿತು. ಮುಖಂಡರ ಮಧ್ಯಪ್ರವೇಶ ಬಿರುಸಿನ ವಾತಾವರಣವನ್ನು ತಿಳಿಗೊಳಿಸಿತೇನೋ ನಿಜ. ಆದರೆ ಸುಸೂತ್ರವಾಗಿ ಸಾಗುತ್ತಿದ್ದ ಜಾಥಾ ಕೊನೆಯಲ್ಲಿ ಬಿರುಸಾಗಲು ಕಾರಣವೇನು? ಹೀಗೊಂದು ಪ್ರಶ‍್ನೆ ಬಿಜೆಪಿ ಪಾಳಯದೊಳಗೆ ಸದ್ದಿಲ್ಲದೆ ಹರಿದಾಡುತ್ತಿದೆ. ಜಾಥಾದ ಆರಂಭದಲ್ಲಿ ಎಲ್ಲವೂ ಸರಿಯಾಗಿಯೇ ಇತ್ತು. ಎಲ್ಲಾ ಮುಖಂಡರು ಜೊತೆಗೆ ಹೆಜ್ಜೆ ಮುಂದಿಡುತ್ತಾ ಸಾಗಿದರು. ಪ್ರಚಾರಾರ್ಥ ಜಾಥಾ ವಿಜೃಂಭಣೆಯಿಂದಲೇ ಸಾಗಿತ್ತು. ಆದರೆ ಕೊನೆಯಲ್ಲಿ ಜಾಥಾ ಅಂತ್ಯವಾಗುತ್ತದೆ ಎಂದಾಗ, ಏಕಾಏಕೀ […]