ರೇಣುಕಾ ಸ್ವಾಮಿ ಕೊಲೆ ಪ್ರಕರಣ | ನ್ಯಾಯಾಲಯದ ಎದುರು ದರ್ಶನ್ ಹಾಗೂ ಗ್ಯಾಂಗ್ ನ್ನು ಹಾಜರುಪಡಿಸಲಿದ್ದಾರೆ ಪೊಲೀಸರು

ಬೆಂಗಳೂರು: ರೇಣುಕಾ ಸ್ವಾಮಿ ಕೊಲೆ ಕೇಸ್ ನ ಆರೋಪಿಗಳಾಗಿ ನಟ ಚಾಲೆಂಜಿಂಗ್ ಸ್ಟಾರ್ ದರ್ಶನ್, ಪವಿತ್ರಾ ಗೌಡ, ವಿನಯ್ ಸೇರಿದಂತೆ ಹಲವರನ್ನು ಬಂಧಿಸಲಾಗಿದೆ. ಪೊಲೀಸರು ವಿವಿಧ ರೀತಿಯಲ್ಲಿ ವಿಚಾರಣೆ ನಡೆಸಿದ್ದಾರೆ. ಇಂದಿಗೆ 17 ಆರೋಪಿಗಳ ಪೊಲೀಸ್ ಕಸ್ಟಡಿ ಅಂತ್ಯವಾಗಲಿದೆ. ಇಂದು ಮಧ್ಯಾಹ್ನದ ನಂತರ ಆರೋಪಿಗಳನ್ನು ಪೊಲೀಸರು ನ್ಯಾಯಾಲಯಕ್ಕೆ ಹಾಜರುಪಡಿಸಲಿದ್ದಾರೆ. ಚಿತ್ರದುರ್ಗದ ರೇಣುಕಾ ಸ್ವಾಮಿ ಹತ್ಯೆ ಆಗಿದ್ದು, ಜೂನ್ 11ರ ಮುಂಜಾನೆಯೇ ದರ್ಶನ್ ಅವರನ್ನು ಬಂಧಿಸಲಾಯಿತು. ಆ ಬಳಿಕ ಪವಿತ್ರಾ ಗೌಡ ಸೇರಿ ಹಲವರ ಬಂಧನ ಆಯಿತು. ಅನುಮಾನ […]

ರೇಣುಕಾ ಸ್ವಾಮಿ ಕೊಲೆ ಪ್ರಕರಣ | ನ್ಯಾಯಾಲಯದ ಎದುರು ದರ್ಶನ್ ಹಾಗೂ ಗ್ಯಾಂಗ್ ನ್ನು ಹಾಜರುಪಡಿಸಲಿದ್ದಾರೆ ಪೊಲೀಸರು Read More »

ಜೂನ್ 21 ಅಂತಾರಾಷ್ಟ್ರೀಯ ಯೋಗ ದಿನ | ಮೋದಿಯವರಿಂದ ಜಮ್ಮು ಕಾಶ್ಮೀರ ದಲ್ಲಿ ಯೋಗ

ಹೊಸದಿಲ್ಲಿ: ಪ್ರತಿವರ್ಷ ಜೂನ್ 21ರ ದಿನವನ್ನು ಅಂತಾರಾಷ್ಟ್ರೀಯ ಯೋಗ ದಿನವನ್ನಾಗಿ ಆಚರಿಸಲಾಗುತ್ತದೆ. ಈ ಬಾರಿಯದ್ದು 10ನೇ ಅಂತಾರಾಷ್ಟ್ರೀಯ ಯೋಗ ದಿನ. ಈ ವರ್ಷದ ಥೀಮ್ ‘ಸ್ವಯಂ ಮತ್ತು ಸಮಾಜಕ್ಕಾಗಿ ಯೋಗ’ ಎಂದಾಗಿದೆ. ಜೂನ್ 21ರಂದು ಪ್ರಧಾನಿ ಮೋದಿ ಜಮ್ಮು ಮತ್ತು ಕಾಶ್ಮೀರದಲ್ಲಿ ಅಂತಾರಾಷ್ಟ್ರೀಯ ಯೋಗ ದಿನದ ಕಾರ್ಯಕ್ರಮದಲ್ಲಿ ಭಾಗವಹಿಸಿ ಯೋಗಾಸನ ಮಾಡಲಿದ್ದಾರೆ. ಇಂದೇ ಮೋದಿ ಜಮ್ಮು ಮತ್ತು ಕಾಶ್ಮೀರಕ್ಕೆ ತೆರಳಿದ್ದು ಅಲ್ಲಿ ಎರಡು ದಿನಗಳ ಕಾರ್ಯಕ್ರಮ ನಿಗದಿಯಾಗಿದೆ. ಶಿಲಾನ್ಯಾಸ, ಯೋಜನೆಗಳ ಉದ್ಘಾಟನೆ ಸೇರಿದಂತೆ ಹಲವು ಕಾರ್ಯಕ್ರಮಗಳು ಎರಡು

ಜೂನ್ 21 ಅಂತಾರಾಷ್ಟ್ರೀಯ ಯೋಗ ದಿನ | ಮೋದಿಯವರಿಂದ ಜಮ್ಮು ಕಾಶ್ಮೀರ ದಲ್ಲಿ ಯೋಗ Read More »

ಶಾಲೆಗಳಲ್ಲಿ ಹುಟ್ಟುಹಬ್ಬ ಆಚರಣೆ ಮಾಡದಂತೆ ಬ್ಯಾನ್ : ರಾಜ್ಯ ಸರ್ಕಾರ

ಬೆಂಗಳೂರು: ಕರ್ನಾಟಕದ ಎಲ್ಲಾ ಶಾಲೆಗಳಲ್ಲಿ ಹುಟ್ಟುಹಬ್ಬ ಆಚರಣೆ ಮಾಡದಂತೆ ಬ್ಯಾನ್ ಮಾಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.  ಸರ್ಕಾರಿ ಅನುದಾನಿತ ಮತ್ತು ಖಾಸಗಿ ಮಕ್ಕಳ ಪಾಲನಾ ಸಂಸ್ಥೆಯ ಸಿಬ್ಬಂದಿ, ಅಧಿಕಾರಿಗಳು, ಖಾಸಗಿ ವ್ಯಕ್ತಿಗಳ ಹಾಗೂ ಅವರ ಮಕ್ಕಳ ಹುಟ್ಟುಹಬ್ಬ ಆಚರಣೆಯನ್ನು ನಿಷೇಧಿಸಿದೆ ಎಂದು ಸುತ್ತೋಲೆ ಹೊರಡಿಸಿದೆ. ಈ ಹಿಂದೆ ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘದ ವ್ಯಾಪ್ತಿಗೆ ಬರುವ ವಸತಿ ಶಾಲಾ- ಕಾಲೇಜುಗಳಲ್ಲಿ ಇನ್ನು ಮುಂದೆ ಧಾರ್ಮಿಕ ಹಬ್ಬಗಳನ್ನು ಆಚರಿಸುವಂತಿಲ್ಲ. ರಾಷ್ಟ್ರೀಯ ಹಬ್ಬ, ನಾಡಹಬ್ಬ ಮತ್ತು ಜಯಂತಿಗಳನ್ನು

ಶಾಲೆಗಳಲ್ಲಿ ಹುಟ್ಟುಹಬ್ಬ ಆಚರಣೆ ಮಾಡದಂತೆ ಬ್ಯಾನ್ : ರಾಜ್ಯ ಸರ್ಕಾರ Read More »

ಸೈಟ್ ಇಲ್ಲದವರಿಗೆ ಕೊಡುವ ವ್ಯವಸ್ಥೆ ಮಾಡಿ | ಕಂದಾಯ ಅಧಿಕಾರಿಗಳ, ಕಡತಗಳ ಮಾಹಿತಿ ಪರಿಶೀಲನೆ ಸಭೆಯಲ್ಲಿ ಶಾಸಕ ಅಶೋಕ್ ಕುಮಾರ್

ವಿಟ್ಲ: ಸೈಟ್ ಇಲ್ಲದವರಿಗೆ ಸೈಟ್ ಕೊಡಿ ಗ್ರಾಮ ನೋಡಬೇಡಿ, ಮನೆ ಇಲ್ಲದವರು ಮಾತ್ರ ಸೈಟ್ ಗೆ ಅರ್ಜಿ ಹಾಕ್ತಾರೆ. ಅವರಿಗೆ ನಿರ್ದಿಷ್ಟ ಗ್ರಾಮವೇ ಇಲ್ಲದ ಕಾರಣ ಯಾವ ಗ್ರಾಮವಾದರೂ ನಡೆಯುತ್ತದೆ. ಗ್ರಾಮದಲ್ಲಿ ಸೈಟ್ ಇದೆ ಅರ್ಜಿ ಇಲ್ಲಾಂದ್ರೆ ಬೇರೆ ಗ್ರಾಮದವರಿಗೆ ಆ ಸೈಟನ್ನು ಕೊಡಿ ಎಲ್ಲರೂ ನಮ್ಮವರೇ ಆಗಿದ್ದಾರೆ ಎಂದು ಶಾಸಕರು ಸೂಚಿಸಿದರು. ಮನೆ ಇಲ್ಲದವರಿದ್ದಾರೆ, ಮೂರು ಹೊತ್ತಿನ ಊಟಕ್ಕೆ ತೊಂದರೆ ಇದ್ದವರಿದ್ದಾರೆ, ಅನಾರೋಗ್ಯದಿಂದ ಇದ್ದವರು ಇದ್ದಾರೆ. ಅವರು ಏನು ಮಾಡಬೇಕು. ಅವರಿಗೆ ಅನ್ಯಾಯವಾಗಬಾರದು. ಅವರಿಗೆ ಸ್ವಂತ

ಸೈಟ್ ಇಲ್ಲದವರಿಗೆ ಕೊಡುವ ವ್ಯವಸ್ಥೆ ಮಾಡಿ | ಕಂದಾಯ ಅಧಿಕಾರಿಗಳ, ಕಡತಗಳ ಮಾಹಿತಿ ಪರಿಶೀಲನೆ ಸಭೆಯಲ್ಲಿ ಶಾಸಕ ಅಶೋಕ್ ಕುಮಾರ್ Read More »

ಗಗನಕ್ಕೇರಿದ ತರಕಾರಿ ಬೆಲೆ

ಮಾರುಕಟ್ಟೆಯಲ್ಲಿ ದಿನದಿಂದ ದಿನಕ್ಕೆ ಟೊಮೆಟೊ ಸೇರಿದಂತೆ ತರಕಾರಿ ದರಗಳು ಹೆಚ್ಚಳವಾಗುತ್ತಿದ್ದು, ಬೆಲೆ ಕೇಳಿಸಿಕೊಳ್ಳುವ ಗ್ರಾಹಕ ತಮ್ಮಹಣಕಾಸಿನ ಸ್ಥಿತಿಯನ್ನು ಎರಡು ಬಾರಿ ಯೋಚನೆ ಮಾಡಿ ತರಕಾರಿಗಳನ್ನು ಕೊಂಡುಕೊಳ್ಳುವ ಪರಿಸ್ಥಿತಿ ಎದುರಾಗಿದೆ. ಕಳೆದ ವಾರ ಕೆಜಿಗೆ 50 ರೂ.ಗೆ ದೊರೆಯುತ್ತಿದ್ದ ಟೊಮೆಟೊ, ಈಗ ಏಕಾಏಕಿ 100 ರೂ. ಗಡಿ ದಾಟಿದ್ದು, ಗ್ರಾಹಕರ ಜೇಬಿಗೆ ಕತ್ತರಿ ಬಿದ್ದಿದೆ. ಬೀನ್ಸ್ ಕೆಜಿಗೆ 229 ರೂ. ಗೆ ಏರಿಕೆಯಾಗಿದ್ದರೆ ಉಳಿದಂತೆ ಶುಂಠಿ 198 ರೂ., ಬೆಳ್ಳುಳ್ಳಿ 338 ರೂ., ನಾಟಿ ಕೊತ್ತಂಬರಿ 250 ರೂ.,

ಗಗನಕ್ಕೇರಿದ ತರಕಾರಿ ಬೆಲೆ Read More »

ಹೆದ್ದಾರಿ ಕಾಮಗಾರಿಗಳ ಕುರಿತು ವಿಶೇಷ ನಿಗಾವಹಿಸಿ | ಪ್ರಗತಿ ಪರಿಶೀಲನಾ ಸಭೆಯಲ್ಲಿ ಅಧಿಕಾರಿಗಳಿಗೆ ಸೂಚನೆ ನೀಡಿದ ಕ್ಯಾ.ಬ್ರಿಜೇಶ್‍ ಚೌಟ

ಮಂಗಳೂರು: ಎನ್‌ಎಚ್‌ಎಐನ ಯೋಜನಾ ನಿರ್ದೇಶಕರೊಂದಿಗೆ ಚರ್ಚೆ ನಡೆಸಿ ಮಳೆ ಬಿರುಸುಗೊಳ್ಳುವ ಹಿನ್ನೆಲೆಯಲ್ಲಿ ಹೆದ್ದಾರಿ ಕಾಮಗಾರಿಗಳ ಬಗ್ಗೆ ವಿಶೇಷ ಗಮನಹರಿಸುವಂತೆ ಅಧಿಕಾರಿಗಳಿಗೆ ಸಂಸದ ಕ್ಯಾ.ಬ್ರಿಜೇಶ್ ಚೌಟ ಸೂಚನೆ ನೀಡಿದರು. ಮಂಗಳೂರಿನಲ್ಲಿ ನಡೆದ ಪ್ರಧಾನ ಮಂತ್ರಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರಕಾರದ ವಿವಿಧ ಕಾರ್ಯಕ್ರಮಗಳು ಹಾಗೂ ಯೋಜನೆಗಳ ಪ್ರಗತಿಪರಿಶೀಲನಾ ಸಭೆಯಲ್ಲಿ ಅವರು ಮಾತನಾಡಿದರು. ಕಾಮಗಾರಿ ಹಂತದಲ್ಲಿರುವ ಎಲ್ಲಾ ಯೋಜನೆಗಳನ್ನು ತ್ವರಿತವಾಗಿ ಪೂರ್ಣಗೊಳಿಸುವ ನಿಟ್ಟಿನಲ್ಲಿ ತೆಗೆದುಕೊಳ್ಳಬೇಕಾದ ಅಗತ್ಯ ಕ್ರಮಗಳ ರೂಪುರೇಷೆಗಳನ್ನು ಹಾಕಿಕೊಂಡು ಜಿಲ್ಲೆಯ ಸರ್ವತೋಮುಖ ಅಭಿವೃದ್ಧಿಗೆ ಶ್ರಮವಹಿಸಲಿದ್ದೇನೆ ಎಂಬ ಭರವಸೆಯನ್ನು

ಹೆದ್ದಾರಿ ಕಾಮಗಾರಿಗಳ ಕುರಿತು ವಿಶೇಷ ನಿಗಾವಹಿಸಿ | ಪ್ರಗತಿ ಪರಿಶೀಲನಾ ಸಭೆಯಲ್ಲಿ ಅಧಿಕಾರಿಗಳಿಗೆ ಸೂಚನೆ ನೀಡಿದ ಕ್ಯಾ.ಬ್ರಿಜೇಶ್‍ ಚೌಟ Read More »

ಸಿದ್ಧರಾಮಯ್ಯ ನೇತೃತ್ವದ ಸಂಪುಟ ಸಚಿವರಿಂದ ದರ್ಶನ್ ಬಿಡಿಸುವ ಪ್ರಯತ್ನ | ಗೃಹಸಚಿವರ ಕಾಲಿಗೆ ಬೀಳಲು ಮುಂದಾದ ಸಚಿವ

ಪುತ್ತೂರು: ದರ್ಶನ್ ಪತ್ನಿ ವಿಜಯಲಕ್ಷ್ಮಿ ವಕೀಲರನ್ನು ಸಂಪರ್ಕಿಸಿ ದರ್ಶನ್‌ ಪರ ಜಾಮೀನು ಪಡೆಯಲು ಹೋರಾಡುತ್ತಿರುವ ವಿಚಾರ ಎಲ್ಲರಿಗೂ ಗೊತ್ತಿದೆ. ಆದರೆ ದರ್ಶನ್‌ ಆಪ್ತರೆನಿಸಿಕೊಂಡವರು ಏನೂ ಮಾಡುತ್ತಿಲ್ಲವೇ ಎನ್ನುವ ಪ್ರಶ್ನೆ ಹಲವರಲ್ಲಿದೆ. ಆದರೆ ಹಲವರು ಈ ಪ್ರಕರಣದಿಂದ ಅಂತರ ಕಾಯ್ದುಕೊಂಡಿದ್ದರೆ, ಆದರೆ ಆ ಒಬ್ಬ ವ್ಯಕ್ತಿ ಮಾತ್ರ ದರ್ಶನ್‌ ಪರ ಹೋರಾಡುತ್ತಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ. ಕನ್ನಡ ಚಿತ್ರರಂಗದ ಖ್ಯಾತ ನಟ ದರ್ಶನ್‌ ಬಂಧನವಾಗಿ ಸಂಪೂರ್ಣ ಒಂದು ವಾರ ಕಳೆದಿದ್ದು ಕಳೆದ ಎಂಟು ದಿನಗಳಿಂದ ನಟ ಪೊಲೀಸ್‌ ಠಾಣೆಯಲ್ಲಿದ್ದಾರೆ.

ಸಿದ್ಧರಾಮಯ್ಯ ನೇತೃತ್ವದ ಸಂಪುಟ ಸಚಿವರಿಂದ ದರ್ಶನ್ ಬಿಡಿಸುವ ಪ್ರಯತ್ನ | ಗೃಹಸಚಿವರ ಕಾಲಿಗೆ ಬೀಳಲು ಮುಂದಾದ ಸಚಿವ Read More »

ಹಜ್ ಯಾತ್ರೆ ಸಂದರ್ಭ ಭಾರೀ ದುರಂತ l 550 ಮಂದಿ ಮೃತ್ಯು, 2 ಸಾವಿರಕ್ಕೂ ಅಧಿಕ ಮಂದಿ ಅಸ್ವಸ್ಥ

ಹಜ್ ಯಾತ್ರೆಗೆ ಹೋಗಿದ್ದ ವಿವಿಧ ದೇಶಗಳ 550 ಯಾತ್ರಾರ್ಥಿಗಳು ಸಾವನ್ನಪ್ಪಿರುವ ಘಟನೆ ವರದಿಯಾಗಿದೆ. ಉಷ್ಣಾಂಶ ಏರಿಕೆಯಿಂದ ಯಾತ್ರಾರ್ಥಿಗಳು ಸಾವನ್ನಪ್ಪಿದ್ದಾರೆ. ಮೆಕ್ಕಾದ ರಸ್ತೆ ಬೀದಿಯಲ್ಲಿ ಯಾತ್ರಾರ್ಥಿಗಳು ಅಸ್ವಸ್ಥರಾಗಿ ಮಲಗಿದ್ದಾರೆ. ಯಾತ್ರೆಯಲ್ಲಿ ಉಸಿರು ಬಿಟ್ಟ ಯಾತ್ರಾರ್ಥಿಗಳ ಶವಗಳನ್ನು ವಿಲೇವಾರಿ ಮಾಡಿಲ್ಲ ಅನ್ನೋ ವಿಡಿಯೋಗಳು ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ. ಮೆಕ್ಕಾದಲ್ಲಿ ಕಳೆದ ವರ್ಷ 240 ಮಂದಿ ಸಾವನ್ನಪ್ಪಿದ್ದರು. ಈ ಬಾರಿ ಈಜಿಪ್ಟ್ ದೇಶದ 323 ಮಂದಿ, ಜೋರ್ಡಾನ್ ದೇಶದ 60 ಮಂದಿ ಯಾತ್ರಾರ್ಥಿಗಳು ಸಾವನ್ನಪ್ಪಿದ್ದಾರೆ ಎನ್ನಲಾಗಿದೆ. ಮೆಕ್ಕಾದಲ್ಲಿ ವರ್ಷದಿಂದ ವರ್ಷಕ್ಕೆ ಉಷ್ಣಾಂಶ

ಹಜ್ ಯಾತ್ರೆ ಸಂದರ್ಭ ಭಾರೀ ದುರಂತ l 550 ಮಂದಿ ಮೃತ್ಯು, 2 ಸಾವಿರಕ್ಕೂ ಅಧಿಕ ಮಂದಿ ಅಸ್ವಸ್ಥ Read More »

ನಾಳೆ ರಾಜ್ಯ ಸರಕಾರದ ಜನ ವಿರೋಧಿ ನೀತಿ ಖಂಡಿಸಿ ಬಿಜೆಪಿಯಿಂದ ಪ್ರತಿಭಟನೆ

ಪುತ್ತೂರು :  ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ ಮೂಲಕ‌ ಜನ ವಿರೋಧಿ ನೀತಿ‌ ಅನುಸರಿಸುತ್ತಿರುವ   ರಾಜ್ಯ ಸರಕಾರದ ವಿರುದ್ಧ  ಬಿಜೆಪಿ ವತಿಯಿಂದ ಬೃಹತ್ ಪ್ರತಿಭಟನಾ ಸಭೆ  ಜೂ.20 ರಂದು ನೆಲ್ಲಿಕಟ್ಟೆ ಖಾಸಗಿ ಬಸ್ ನಿಲ್ದಾಣದಲ್ಲಿ ನಡೆಯಲಿದೆ. ಬೆಳಿಗ್ಗೆ 10 ಗಂಟೆಗೆ ಪ್ರತಿಭಟನೆ‌ ಸಭೆ ನಡೆದ‌ ಬಳಿಕ‌ ಖಾಸಗಿ ಬಸ್‌ ನಿಲ್ದಾಣದಿಂದ‌ ಮುಖ್ಯ ರಸ್ತೆಯಲ್ಲಿ ತರಳಿ ಸಹಾಯಕ ಆಯುಕ್ತರ ಕಚೇರಿಯಲ್ಲಿ ಮನವಿ ಸಲ್ಲಿಸಲಾಗುವುದು. ಬಿಜೆಪಿ ಮುಖಂಡರು, ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುವಂತೆ ಬಿಜೆಪಿ ಪ್ರಕಟಣೆಯಲ್ಲಿ ತಿಳಿಸಿದೆ.

ನಾಳೆ ರಾಜ್ಯ ಸರಕಾರದ ಜನ ವಿರೋಧಿ ನೀತಿ ಖಂಡಿಸಿ ಬಿಜೆಪಿಯಿಂದ ಪ್ರತಿಭಟನೆ Read More »

ರಾಜ್ಯ ಸರಕಾರದಿಂದ ಪೆಟ್ರೋಲ್, ಡಿಸೇಲ್ ಬೆಲೆ ಏರಿಕೆ | ಬೀದಿಗಿಳಿದು ಹೋರಾಟ: ಭಾಗೀರಥಿ ಮುರುಳ್ಯ

ಕಡಬ : ಪರಿಶಿಷ್ಟರ ಹಣ ಬಳಸಿಕೊಂಡು ರಾಜ್ಯ ಸರ್ಕಾರ ಬಿಟ್ಟಿ ಭಾಗ್ಯ ನೀಡುತ್ತಿದೆ. ಇಂದಿನ ಪರಿಸ್ಥಿತಿಯಲ್ಲಿ ಜನ ಸಾಮಾನ್ಯರಿಗೂ ದುಪ್ಪಟ್ಟು ಬೆಲೆ ತೆರಬೇಕಾಗಿದೆ.   ಬೆಲೆ ಏರಿಸಿಕೊಂಡ ಸರ್ಕಾರ ನಿದ್ದೆ ಮಾಡುತ್ತಿದೆ. ಹೋರಾಟ ನಮಗೆ ಹೊಸದಲ್ಲ, ರಸ್ತೆಗಿಳಿದು ಮುಂದಿನ ದಿನ ಕಡಬದಲ್ಲೂ ಪ್ರತಿಭಟಿಸಲಾಗುವುದು ಎಂದು ಸುಳ್ಯ ವಿಧಾನ ಸಭಾ ಕ್ಷೇತ್ರದ ಶಾಸಕಿ ಭಾಗೀರಥಿ ಮುರುಳ್ಯ ಹೇಳಿದ್ದಾರೆ. ಕಡಬದಲ್ಲಿ ಜೂ.19ರಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ರಾಜ್ಯದ ಕಾಂಗ್ರೆಸ್ ಸರ್ಕಾರ ಏಕಾಏಕಿ ಪೆಟ್ರೋಲ್, ಡೀಸೆಲ್ ಬೆಲೆಯನ್ನು ಏರಿಕೆ ಮಾಡಿದ್ದು ಇದರಿಂದಾಗಿ ರೈತರಿಗೆ

ರಾಜ್ಯ ಸರಕಾರದಿಂದ ಪೆಟ್ರೋಲ್, ಡಿಸೇಲ್ ಬೆಲೆ ಏರಿಕೆ | ಬೀದಿಗಿಳಿದು ಹೋರಾಟ: ಭಾಗೀರಥಿ ಮುರುಳ್ಯ Read More »

error: Content is protected !!
Scroll to Top