ಕಾರು ಅಪಘಾತ: ಇಬ್ಬರು ಸ್ಥಳದಲ್ಲೇ ಸಾವು

ವಿಜಯಪುರ: ಕಾರು ಪಲ್ಟಿಯಾದ ಪರಿಣಾಮ ಈರ್ವರು ಸ್ಥಳದಲ್ಲೇ ಮೃತಪಟ್ಚ ಘಟನೆ ಬಸವನ ಬಾಗೇವಾಡಿ ತಾಳೀಕೋಟೆಯ ‌ಬಸವನಹಟ್ಟಿ ಕ್ರಾಸ್ ಬಳಿ ನಡೆದಿದೆ. ಬೆಳಗಾವಿಯ ಕಾಗವಾಡ ಪಟ್ಟಣದ ಚಂದ್ರವ್ವ ಟಕ್ಕೆನ್ನವರ (70) ಮತ್ತು ಕಾಮಪ್ಪ ಅವರಾದಿ (65) ಎಂಬವರೇ ‌ಮೃತ ದುರ್ದೈವಿಗಳು. ಸ್ವಿಫ್ಟ್ ಕಾರಿನಲ್ಲಿ ನಾಲ್ವರು ಶ್ರೀಶೈಲಕ್ಕೆ ಹೋಗುತ್ತಿದ್ದು, ಈ ವೇಳೆ ದುರಂತ ಸಂಭವಿಸಿದೆ. ಪರಿಣಾಮ ಇಬ್ಬರು ಸ್ಥಳದಲ್ಲೇ ಮೃತಪಟ್ಟಿದ್ದು ಇನ್ನಿಬ್ಬರು ಗಂಭೀರ ಪ್ರಮಾಣದಲ್ಲಿ ಗಾಯಗೊಂಡಿದ್ದಾಗಿ ತಿಳಿದು ಬಂದಿದೆ. ಬಸವನಬಾಗೇವಾಡಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಕಾರು ಅಪಘಾತ: ಇಬ್ಬರು ಸ್ಥಳದಲ್ಲೇ ಸಾವು Read More »

ಕುಂಜಿಬೆಟ್ಟು ಟಿ.ಎ. ಪೈ ಆಂಗ್ಲ‌ ಮಾಧ್ಯಮದ ಇಬ್ಬರು ವಿದ್ಯಾರ್ಥಿಗಳು NSPIRE–MANAK ಪ್ರಶಸ್ತಿ ಯೋಜನೆಗೆ ಆಯ್ಕೆ

ಉಡುಪಿ: ಕುಂಜಿಬೆಟ್ಟುವಿನ ಟಿ. ಎ. ಪೈ ಇಂಗ್ಲಿಷ್ ಮೀಡಿಯಂ ಹೈಸ್ಕೂಲ್ (ಅಕಾಡೆಮಿ ಆಫ್ ಜನರಲ್ ಎಜುಕೇಶನ್, ಮಣಿಪಾಲದ ಘಟಕ)ದ ಇಬ್ಬರು ವಿದ್ಯಾರ್ಥಿಗಳು 2025–26ನೇ ಸಾಲಿನ ಪ್ರತಿಷ್ಠಿತ INSPIRE–MANAK ಪ್ರಶಸ್ತಿ ಯೋಜನೆಗೆ ಆಯ್ಕೆಯಾಗಿದ್ದಾರೆ. ಈ ಯೋಜನೆ ಭಾರತ ಸರ್ಕಾರದ ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವಾಲಯದ ಪ್ರಮುಖ ಯೋಜನೆಯಾಗಿದ್ದು, ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ ಹಾಗೂ ಅದರ ಸ್ವಾಯತ್ತ ಸಂಸ್ಥೆಯಾದ ನ್ಯಾಷನಲ್ ಇನೋವೇಶನ್ ಫೌಂಡೇಶನ್–ಇಂಡಿಯಾ (NIF) ಸಹಯೋಗದಲ್ಲಿ ಜಾರಿಗೆ ತರಲಾಗುತ್ತಿದೆ. ಶಾಲೆಯ ಪ್ರತಿಭಾನ್ವಿತ ವಿದ್ಯಾರ್ಥಿಗಳಾದ 9ನೇ ತರಗತಿಯ ಅವನೀಶ್ ಕೆ.

ಕುಂಜಿಬೆಟ್ಟು ಟಿ.ಎ. ಪೈ ಆಂಗ್ಲ‌ ಮಾಧ್ಯಮದ ಇಬ್ಬರು ವಿದ್ಯಾರ್ಥಿಗಳು NSPIRE–MANAK ಪ್ರಶಸ್ತಿ ಯೋಜನೆಗೆ ಆಯ್ಕೆ Read More »

ಡೆತ್ ನೋಟ್ ಬರೆದಿಟ್ಟು ಯುವಕ ಆತ್ಮಹತ್ಯೆಗೆ ಶರಣು

ಶಿರ್ವ: ಡೆತ್ ನೋಟ್ ಬರೆದಿಟ್ಟು ಅಡುಗೆ ಕೆಲಸ ಮಾಡುತ್ತಿದ್ದ ಯುವಕನೊಬ್ಬ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಶಂಕರಪುರದ ಸಾಲ್ಮರದ ಕ್ಯಾಟರಿಂಗ್ ಶೆಡ್ ಸಮೀಪ ನಡೆದಿದೆ. ಮೃತನನ್ನು ಗೌತಮ್ ಪೂಜಾರಿ ಎಂದು ಗುರುತಿಸಲಾಗಿದೆ. ಕ್ಯಾಟರಿಂಗ್ ಶೆಡ್ ಬಳಿಯ ರೂಮ್‌ನಲ್ಲಿ ಗೌತಮ್ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವುದಾದಿದೆ. ಡೆತ್ ನೋಟ್ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡಿರುವುದಾಗಿದೆ. ಆದರೂ ಆತ್ಮಹತ್ಯೆಗೆ ನಿಖರ ಕಾರಣ ಏನು ಎನ್ನುವುದು ತಿಳಿದು ಬಂದಿಲ್ಲ. ಗೌತಮ್ ಬೈಂದೂರು ಮೂಲದವರಾಗಿದ್ದು, ಅವಿವಾಹಿತರಾಗಿದ್ದಾರೆ. ಕಳೆದ ಕೆಲ ವರ್ಷಗಳಿಂದ ಅಡುಗೆ ಕೆಲಸ ಮಾಡಿಕೊಂಡಿದ್ದಾರೆ. ವಿವಿಧ

ಡೆತ್ ನೋಟ್ ಬರೆದಿಟ್ಟು ಯುವಕ ಆತ್ಮಹತ್ಯೆಗೆ ಶರಣು Read More »

ಪ್ರಧಾನಿ ಮೋದಿ ಅವರ ಗುಣಗಾನ ಮಾಡಿದ ನಟ ಮೋಹನ್ ಲಾಲ್

ಕೊಚ್ಚಿ: ಪ್ರಧಾನಿ ನರೇಂದ್ರ ಮೋದಿ ಅವರನ್ನು ಮಲಯಾಳಂ ಚಿತ್ರರಂಗದ ಹೆಸರಾಂತ ಹಿರಿಯ ನಟ ಮೋಹನ್ ಲಾಲ್ ಅವರು ಶ್ಲಾಘಿಸಿದ್ದಾರೆ. ಪಾಡ್‌ಕಾಸ್ಟ್ ಒಂದರಲ್ಲಿ ಪ್ರಧಾನಿ ಮೋದಿ ಅವರ ಬಗ್ಗೆ ಮಾತನಾಡಿದ ಲಾಲೇಟನ್, ಪ್ರಧಾನಿ ಮೋದಿ ಅವರು ರಾಜಕೀಯ ಚಾಣಾಕ್ಷ, ಕಲಾವಿದರಿಗೆ ಗೌರವ ನೀಡುವ ದೂರದೃಷ್ಟಿತ್ವ ಹೊಂದಿರುವ ನಾಯಕ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಪ್ರಧಾನಿ ಮೋದಿ ಅವರನ್ನು ನಾನು ಸಾಕಷ್ಟು ಬಾರಿ ಭೇಟಿ ಮಾಡಿದ್ದೇನೆ. ಪ್ರತಿ ಭೇಟಿಯಲ್ಲಿಯೂ ಓರ್ವ ದೂರದೃಷ್ಟಿಯ ದೃಢ ನಾಯಕನನ್ನು ಭೇಟಿಯಾದ ಅನುಭವವೇ ನನಗೆ ದೊರೆತಿದೆ. ಅವರು

ಪ್ರಧಾನಿ ಮೋದಿ ಅವರ ಗುಣಗಾನ ಮಾಡಿದ ನಟ ಮೋಹನ್ ಲಾಲ್ Read More »

ಸ್ವಾವಲಂಬಿ ಬದುಕು ಮಹಿಳೆಯರಲ್ಲಿ ಆತ್ಮವಿಶ್ವಾಸವನ್ನು ಹೆಚ್ಚಿಸುತ್ತದೆ: ಡಾ. ಅನುರಾಧಾ ಕುರುಂಜಿ

ಸುಳ್ಯ: ಸ್ವಾವಲಂಬಿ ಬದುಕು ವ್ಯಕ್ತಿಯನ್ನು ಬಲಿಷ್ಠನಾಗಿಸುತ್ತದೆ. ತನ್ನ ಪರಿಶ್ರಮ ಮತ್ತು ಸಾಮರ್ಥ್ಯದಿಂದ ಬದುಕುವ ವ್ಯಕ್ತಿ ಸಮಾಜಕ್ಕೆ ಮಾದರಿಯಾಗುತ್ತಾನೆ. ಸ್ವಾವಲಂಬಿ ಬದುಕು ಮಹಿಳೆಯರಲ್ಲಿ ಆತ್ಮವಿಶ್ವಾಸವನ್ನು ಹೆಚ್ಚಿಸುತ್ತದೆ ಎಂದು ವ್ಯಕ್ತಿತ್ವ ವಿಕಸನ ತರಬೇತುದಾರೆ, ನೆಹರು ಮೆಮೋರಿಯಲ್ ಕಾಲೇಜಿನ ಕನ್ನಡ ವಿಭಾಗದ ಮುಖ್ಯಸ್ಥೆ ಡಾ. ಅನುರಾಧಾ ಕುರುಂಜಿ ಅಭಿಪ್ರಾಯಪಟ್ಟರು. ಅವರು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಬಿಸಿ ಟ್ರಸ್ಟ್, ಸುಳ್ಯ ತಾಲೂಕಿನ ದೊಡ್ಡೇರಿ ಕಾರ್ಯಕ್ಷೇತ್ರದಲ್ಲಿ ಅಮೃತ ಜ್ಞಾನವಿಕಾಸ ಕೇಂದ್ರದಲ್ಲಿ ಮೂರು ತಿಂಗಳ ಕಾಲ ನಡೆದ ಉಚಿತ ಹೊಲಿಗೆ ತರಬೇತಿ ಕಾರ್ಯಕ್ರಮದ

ಸ್ವಾವಲಂಬಿ ಬದುಕು ಮಹಿಳೆಯರಲ್ಲಿ ಆತ್ಮವಿಶ್ವಾಸವನ್ನು ಹೆಚ್ಚಿಸುತ್ತದೆ: ಡಾ. ಅನುರಾಧಾ ಕುರುಂಜಿ Read More »

ಕುಸಿದು ಬಿದ್ದು ಉಪನ್ಯಾಸಕ ಮೃತ್ಯು

ಸುಳ್ಯ: ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಸುಳ್ಯದ ಉಪನ್ಯಾಸಕ ಕುಸಿದು ಬಿದ್ದು ಮೃತಪಟ್ಟ ಘಟನೆ ನಡೆದಿದೆ. ಮೈಸೂರಿನ ಕೆ. ಆರ್. ನಗರದ ಬೇರ್ಯ ನಿವಾಸಿ ಮಂಜು (42) ಎಂಬವರೇ ‌ಮೃತ ದುರ್ದೈವಿ. ಗುರುವಾರ ತರಗತಿ ಮುಗಿಸಿದ ಅವರಿಗೆ ಅಸ್ವಸ್ಥತೆ ಕಾಣಿಸಿಕೊಂಡಿತ್ತು. ಹೀಗಾಗಿ ತಮ್ಮ ಕೊಠಡಿಗೆ ತೆರಳಿ ವಿಶ್ರಾಂತಿ ಪಡೆದಿದ್ದರು. ಬಳಿಕ ಸ್ಥಳೀಯ ಮೆಡಿಕಲ್‌ಗೆ ಔಷಧ ಖರೀದಿಗೆ ಹೋಗಿದ್ದರು. ಅಲ್ಲಿ ಇದ್ದಕ್ಕಿದ್ದ ಹಾಗೆ ಅವರು ಕುಸಿದು ಬಿದ್ದಿದ್ದಾರೆ. ತಕ್ಷಣವೇ ಅವರನ್ನು ಸ್ಥಳೀಯರು ಸಮೀಪದ ಆಸ್ಪತ್ರೆಗೆ ಕರೆದೊಯ್ದರಾದರೂ ಅದಾಗಲೇ‌ ಅವರು

ಕುಸಿದು ಬಿದ್ದು ಉಪನ್ಯಾಸಕ ಮೃತ್ಯು Read More »

ಗಾಂಜಾ ಮಾರಾಟ: ಇಬ್ಬರು ಆರೋಪಿಗಳ ಬಂಧನ, ಓರ್ವ ಪರಾರಿ

ಮಂಗಳೂರು: ಗಾಂಜಾ ಮಾರಾಟ ಮಾಡುತ್ತಿದ್ದ ಇಬ್ಬರು ಆರೋಪಿಗಳನ್ನು ಉಳ್ಳಾಲ ಪೊಲೀಸರು ಬಂಧಿಸಿದ್ದಾರೆ. ಆರೋಪಿಗಳನ್ನು ಉಪ್ಪಳದ ಶೇಖ್ ಅರ್ಜಾಬ್ ಮತ್ತು ಕೊಡಿಬೈಲ್ ಬಾಬಾ ರಸ್ತೆ ನಿವಾಸಿ ರಶೀದ್ ಅಲ್ವಿನ್ ಎಂದು ಗುರುತಿಸಲಾಗಿದೆ. ಆರೋಪಿಗಳು ಕೋಟೆಕಾರ್ ಗ್ರಾಮದ ಬಗಂಬಿಲ ಸಮೀಪ ಡ್ರಗ್ಸ್ ಮಾರಾಟ ನಡೆಸುತ್ತಿದ್ದರು ಎಂದು ತಿಳಿದು ಬಂದಿದೆ. ಬಂಧಿತರಿಂದ ಗಾಂಜಾ, ನಗದು, ಮೊಬೈಲ್ ಫೋನ್, ಗಾಂಜಾ ಪ್ಯಾಕಿಂಗ್ ಚೀಲಗಳು ಸೇರಿದಂತೆ ಇನ್ನೂ ಹಲವು ವಸ್ತುಗಳನ್ನು ವಶಕ್ಕೆ ಪಡೆಯಲಾಗಿದೆ. ಪೊಲೀಸ್ ದಾಳಿಯ ವೇಳೆ ಮತ್ತೊಬ್ಬ ಆರೋಪಿ ಅಲ್ತಾಫ್ ಪರಾರಿಯಾಗಿದ್ದಾನೆ. ಆತನಿಗಾಗಿ

ಗಾಂಜಾ ಮಾರಾಟ: ಇಬ್ಬರು ಆರೋಪಿಗಳ ಬಂಧನ, ಓರ್ವ ಪರಾರಿ Read More »

ಇಸ್ರೇಲ್‌ ದಾಳಿಯಲ್ಲಿ ಮೊಜ್ತಬ ಖಮೇನಿಗೆ ಗಂಭೀರ ಗಾಯ?

ಕಾಲು ಕಟ್‌ ಆಗಿ ಕೋಮಾ ಸ್ಥಿತಿಯಲ್ಲಿದ್ದಾರೆ ಎಂದ ವರದಿಗಳು ಟೆಹ್ರಾನ್‌: ಇರಾನ್‌ನ ನೂತನ ಪರಮೋಚ್ಚ ನಾಯಕ ಮೊಜ್ತಬ ಖಮೇನಿ ಯುದ್ಧದಲ್ಲಿ ಗಂಭೀರವಾಗಿ ಗಾಯಗೊಂಡಿದ್ದಾರೆ ಎಂದು ವರದಿಯೊಂದು ತಿಳಿಸಿದೆ. ಅವರ ಒಂದು ಕಾಲು ತುಂಡಾಗಿದೆ ಹಾಗೂ ಈಗ ಕೋಮಾ ಸ್ಥಿತಿಯಲ್ಲಿ ಇದ್ದಾರೆ ಎಂದು ಮಾಧ್ಯಮಗಳು ವರದಿ ಮಾಡಿವೆ. ಅಯಾತೊಲ್ಲಾ ಖಮೇನಿ ಇಸ್ರೇಲ್‌ ದಾಳಿಯಲ್ಲಿ ಸಾವಿಗೀಡಾದ ಬಳಿಕ ಮೊಜ್ತಾಬ ಖಮೇನಿ ಇರಾನ್‌ನ ಸರ್ವೋಚ್ಚ ನಾಯಕನಾಗಿ ಆಯ್ಕೆಯಾಗಿದ್ದರು. ಇದರ ಬೆನ್ನಿಗೆ ಇಸ್ರೇಲ್‌ ಮೊಜ್ತಬ ಖಮೇನಿಯನ್ನು ಗುರಿ ಮಾಡಿಕೊಂಡು ದಾಳಿ ನಡೆಸಿದೆ ಎಂದು

ಇಸ್ರೇಲ್‌ ದಾಳಿಯಲ್ಲಿ ಮೊಜ್ತಬ ಖಮೇನಿಗೆ ಗಂಭೀರ ಗಾಯ? Read More »

ಪ್ರವಾಸೋದ್ಯಮ, ಡ್ರೈಫ್ರುಟ್ಸ್‌ ವಹಿವಾಟು ಕುಂಠಿತಗೊಳಿಸಿದ ಯುದ್ಧ

ಎಲ್ಲ ಕ್ಷೇತ್ರಗಳಿಗೂ ತಟ್ಟುತ್ತಿದೆ ಮಧ್ಯಪ್ರಾಚ್ಯದ ಯುದ್ಧದ ಬಿಸಿ ಮಂಗಳೂರು: ಮಧ್ಯಪ್ರಾಚ್ಯದಲ್ಲಿ ಇರಾನ್-ಇಸ್ರೇಲ್ ಮತ್ತು ಅಮೆರಿಕ ನಡುವೆ ನಡೆಯುತ್ತಿರುವ ಘನಘೋರ ಕದನ ಹದಿನಾಲ್ಕನೇ ದಿನಕ್ಕೆ ಕಾಲಿಟ್ಟಿದ್ದು, ಸದ್ಯಕ್ಕೆ ಈ ಯುದ್ಧ ನಿಲ್ಲುವ ಸಾಧ್ಯತೆ ಗೋಚರಿಸುತ್ತಿಲ್ಲ. ಈಗಾಗಲೇ ಯುದ್ಧ ಜಗತ್ತಿನಾದ್ಯಂತ ಪ್ರತಿಕೂಲ ಪರಿಣಾಮ ಬೀರತೊಡಗಿದೆ. ಭಾರತದಲ್ಲಿ ಗ್ಯಾಸ್‌ ಅಭಾವದಿಂದ ಹೋಟೆಲ್, ಕ್ಯಾಟರಿಂಗ್‌ ಉದ್ಯಮ ಹೊಡೆತ ತಿಂದಿದೆ. ರಫ್ತು, ಆಮದು ವಹಿವಾಟುಗಳು ಇನ್ನಿಲ್ಲದಂತೆ ಸಂಕಷ್ಟಕ್ಕೀಡಾಗಿವೆ. ಪ್ರವಾಸೋದ್ಯಮ, ಡ್ರೈಫ್ರೂಟ್ಸ್‌ ವಹಿವಾಟಿನ ಮೇಲೂ ಪರಿಣಾಮ ಬೀರಿದೆ. ವಿಮಾನ ವ್ಯತ್ಯಯದಿಂದಾಗಿ ವಿದೇಶಿ ಪ್ರವಾಸಿಗರ ಸಂಖ್ಯೆ ಭಾರಿ

ಪ್ರವಾಸೋದ್ಯಮ, ಡ್ರೈಫ್ರುಟ್ಸ್‌ ವಹಿವಾಟು ಕುಂಠಿತಗೊಳಿಸಿದ ಯುದ್ಧ Read More »

ಇರಾನ್‌ನ ಪ್ರತಿ ವ್ಯಕ್ತಿಯ ಸಾವಿಗೆ ಪ್ರತೀಕಾರ : ಮೊಜ್ತಬಾ ಖಮೇನಿ ಘೋಷಣೆ

ಅಮೆರಿಕ, ಇಸ್ರೇಲ್‌, ಗಲ್ಫ್‌ ದೇಶಗಳಿಗೆ ಕಠಿಣ ಎಚ್ಚರಿಕೆ ಟೆಹ್ರಾನ್‌ : ಮಧ್ಯಪ್ರಾಚ್ಯ ಸಮರ ತೀವ್ರ ಸ್ವರೂಪ ಪಡೆದುಕೊಂಡಿರುವಂತೆಯೇ ಇರಾನ್‌ನ ಹೊಸ ಸರ್ವೋಚ್ಚ ನಾಯಕನಾಗಿ ಅಧಿಕಾರ ವಹಿಸಿಕೊಂಡ ನಂತರ ಜಗತ್ತಿಗೆ ಮೊದಲ ಸಂದೇಶ ರವಾನಿಸಿರುವ ಮೊಜ್ತಬಾ ಖಮೇನಿ, ಅಮೆರಿಕ ಮತ್ತು ಇಸ್ರೇಲ್‌ಗೆ ಕಠಿಣ ಎಚ್ಚರಿಕೆ ನೀಡಿದ್ದಾರೆ. ಇತ್ತೀಚಿನ ದಾಳಿಗಳಲ್ಲಿ ಮೃತಪಟ್ಟ ಇರಾನಿಯನ್ನರ ಪ್ರತಿ ಸಾವಿಗೆ ಪ್ರತೀಕಾರ ತೀರಿಸಿಕೊಳ್ಳಲಾಗುತ್ತದೆ. ಅಗತ್ಯವಿದ್ದರೆ ಸಂಘರ್ಷ ಹೊಸ ಮಜಲುಗಳನ್ನು ಪಡೆದುಕೊಳ್ಳುತ್ತದೆ ಎಂದು ಹೇಳಿದ್ದಾರೆ. ಇರಾನ್ ತನ್ನ ಹುತಾತ್ಮರ ರಕ್ತದ ಸೇಡು ತೀರಿಸಿಕೊಳ್ಳುವುದರಿಂದ ಹಿಂದೆ ಸರಿಯುವುದಿಲ್ಲ.

ಇರಾನ್‌ನ ಪ್ರತಿ ವ್ಯಕ್ತಿಯ ಸಾವಿಗೆ ಪ್ರತೀಕಾರ : ಮೊಜ್ತಬಾ ಖಮೇನಿ ಘೋಷಣೆ Read More »

error: Content is protected !!
Scroll to Top