ಬಾಂಗ್ಲಾದಲ್ಲಿ ಇನ್ನೋರ್ವ ಹಿಂದು ವ್ಯಕ್ತಿಯ ಹತ್ಯೆ

ರಾತ್ರಿ ಹೊತ್ತು ಥಳಿಸಿ ಕೊಂದ ಗುಂಪು ಢಾಕಾ: ಬಾಂಗ್ಲಾದೇಶದಲ್ಲಿ ಮತ್ತೊಬ್ಬ ಹಿಂದೂ ವ್ಯಕ್ತಿಯನ್ನು ಥಳಿಸಿ ಹತ್ಯೆ ಮಾಡಿರುವ ಘಟನೆ ನಡೆದಿದೆ. 29 ವರ್ಷದ ಅಮೃತ್ ಮಂಡಲ್ ಅಲಿಯಾಸ್ ಸಾಮ್ರಾಟ್ ಕೊಲೆಯಾದ ವ್ಯಕ್ತಿ. ರಾಜಧಾನಿ ಢಾಕಾದಿಂದ ಸುಮಾರು ಮೂರೂವರೆ ಗಂಟೆಗಳ ದೂರದಲ್ಲಿರುವ ರಾಜ್‌ಬರಿಯ ಪಂಗ್ಶಾ ಉಪಜಿಲ್ಲೆಯಲ್ಲಿ ರಾತ್ರಿ 11 ಗಂಟೆ ಸುಮಾರಿಗೆ ಹತ್ಯೆ ಮಾಡಲಾಗಿದೆ. ಸಾಮ್ರಾಟ್ ‘ಸಾಮ್ರಾಟ್ ಬಹಿನಿ’ ಎಂಬ ಕ್ರಿಮಿನಲ್ ಗ್ಯಾಂಗ್‌ನ ನಾಯಕನಾಗಿದ್ದು, ಇದು ಸುಲಿಗೆ ಸೇರಿದಂತೆ ಇತರ ಚಟುವಟಿಕೆಗಳಲ್ಲಿ ಭಾಗಿಯಾಗಿದ್ದ ಎಂದು ಆರೋಪ ಹೊರಿಸಿ ಹತ್ಯೆ […]

ಬಾಂಗ್ಲಾದಲ್ಲಿ ಇನ್ನೋರ್ವ ಹಿಂದು ವ್ಯಕ್ತಿಯ ಹತ್ಯೆ Read More »

ಟಿಪ್ಪರ್‌ ಡಿಕ್ಕಿ ಹೊಡೆದು ಒಂದೇ ಬೈಕ್‌ನಲ್ಲಿದ್ದ ನಾಲ್ವರು ಯುವಕರು ಸಾವು

ಬೆಂಗಳೂರು : ಟಿಪ್ಪರ್ ಹಾಗೂ ಬೈಕ್ ಮಧ್ಯೆ ಮುಖಾಮುಖಿ ಡಿಕ್ಕಿ ಸಂಭವಿಸಿ ಒಂದೇ ಬೈಕ್‌ನಲ್ಲಿದ್ದ ನಾಲ್ವರು ಯುವಕರು ಮೃತಪಟ್ಟಿರುವ ಹೃದಯವಿದ್ರಾವಕ ಘಟನೆ ಚಿಕ್ಕಬಳ್ಳಾಪುರ ತಾಲೂಕಿನ ಅಜ್ಜವಾರ ಗೇಟ್ ಬಳಿ ನಡೆದಿದೆ. ಅಜ್ಜವಾರ ಗ್ರಾಮದ ಅಣ್ಣ ತಮ್ಮಂದಿರಾದ ನರಸಿಂಹಮೂರ್ತಿ ಹಾಗೂ ನಂದೀಶ್ ಸೇರಿದಂತೆ ಅರುಣ್, ಮನೋಜ್ ಮೃತಪಟ್ಟಿದ್ದಾರೆ. ಕ್ರಿಸ್ಮಸ್ ಹಬ್ಬದ ಹಿನ್ನೆಲೆಯಲ್ಲಿ ಈ ನಾಲ್ವರು ಚಿಕ್ಕಬಳ್ಳಾಪುರ ನಗರದ ಚರ್ಚ್‌ಗಳಿಗೆ ಭೇಟಿ ನೀಡಿ ಮರಳಿ ಸ್ವಗ್ರಾಮದತ್ತ ಹೊರಟಿದ್ದರು.ಮೃತ ನಾಲ್ವರು ಯುವಕರು ನರಸಿಂಹಮೂರ್ತಿಗೆ ಸೇರಿದ ಸಿಟಿ 100 ಬೈಕಿನಲ್ಲಿ ಹೊರಟಿದ್ದು, ಅಜ್ಜವಾರ

ಟಿಪ್ಪರ್‌ ಡಿಕ್ಕಿ ಹೊಡೆದು ಒಂದೇ ಬೈಕ್‌ನಲ್ಲಿದ್ದ ನಾಲ್ವರು ಯುವಕರು ಸಾವು Read More »

ವಿವಾಹವಾದ 27 ದಿನದಲ್ಲೇ ನಿಗೂಢವಾಗಿ ಮೃತಪಟ್ಟ ಮದುಮಗಳು: ಪತಿ ಪೊಲೀಸ್ ವಶಕ್ಕೆ

ಬೆಂಗಳೂರು: ವಿವಾಹವಾಗಿ ಕೇವಲ 27 ದಿನಗಳಲ್ಲೇ ನವವಿವಾಹಿತೆ ನಿಗೂಢವಾಗಿ ಮೃತಪಟ್ಟ ಘಟನೆ ನೆಲಮಂಗಲದಲ್ಲಿ ನಡೆದಿದೆ. ಮೃತ ಮಹಿಳೆಯನ್ನು ಐಶ್ವರ್ಯ (26) ಎಂದು ಗುರುತಿಸಲಾಗಿದೆ. ಐಶ್ವರ್ಯಳನ್ನು ಆಕೆಯ ಪತಿಯೇ ಕೊಲೆ ಮಾಡಿರುವುದಾಗಿ ಆಕೆಯ ಪೋಷಕರು ಆರೋಪಿಸಿದ್ದಾರೆ. ಆಕೆಯನ್ನು ಲಿಖಿತ್ ಸಿಂಹ ಎಂಬಾತ ವಿವಾಹವಾಗಿದ್ದ. ಮದುವೆಯಾಗಿ ಒಂದು ತಿಂಗಳು ಸಹ ಕಳೆದಿಲ್ಲ. ಆಗಲೇ ಆಕೆಗೆ ಪತಿಯ ಮನೆಯಲ್ಲಿ ಕಿರುಕುಳ ಆರಂಭವಾಗಿತ್ತು. ಈ ವಿಷಯದಲ್ಲೇ ಕುಟುಂಬಸ್ಥರು ರಾಜಿ ಪಂಚಾಯ್ತಿ ನಡೆಸಿದ್ದರು. ಈ ಘಟನೆ ನಡೆದ ಸಂಜೆಯೇ ಐಶ್ವರ್ಯ ಮೇಲೆ ಪತಿಯ ಮನೆಯಲ್ಲಿ

ವಿವಾಹವಾದ 27 ದಿನದಲ್ಲೇ ನಿಗೂಢವಾಗಿ ಮೃತಪಟ್ಟ ಮದುಮಗಳು: ಪತಿ ಪೊಲೀಸ್ ವಶಕ್ಕೆ Read More »

ಅಟಲ್‌ಜಿ ನೆನಪಿನಲ್ಲಿ ನವದೆಹಲಿಯಲ್ಲಿ 100 ಕ್ಯಾಂಟೀನ್‌ಗಳನ್ನು ಆರಂಭಿಸಿದ ರೇಖಾ ಗುಪ್ತಾ ಸರ್ಕಾರ

ನವದೆಹಲಿ: ಅಜಾತ ಶತ್ರು ಅಟಲ್ ಬಿಹಾರಿ ವಾಜಪೇಯಿ ಅವರ ಜನ್ಮಜಯಂತಿಯ ಹಿನ್ನೆಲೆ ನವದೆಹಲಿ ಸರ್ಕಾರ ರಾಜ್ಯದೆಲ್ಲೆಡೆ 100 ಅಟಲ್ ಕ್ಯಾಂಟೀನ್‌ಗಳನ್ನು ಆರಂಭ ಮಾಡಿದ್ದು, ಈ ಕ್ಯಾಂಟೀನ್‌ಗಳಲ್ಲಿ ಸಾರ್ವಜನಿಕರಿಗೆ 5 ರೂ. ಗೆ ಊಟ ಸಿಗಲಿದೆ. ನೂರು ಕ್ಯಾಂಟೀನ್‌ಗಳ ಪೈಕಿ ಮೊದಲ ಕ್ಯಾಂಟೀನ್ ಅನ್ನು ನವದೆಹಲಿ ಸಿ ಎಂ ರೇಖಾ ಗುಪ್ತಾ ಅವರು ಲಾಜಪತ್ ನಗರದ ನೆಹರೂ ನಗರದಲ್ಲಿ ಉದ್ಘಾಟಿಸಿದ್ದಾರೆ. ಬಿಜೆಪಿಯ ಚುನಾವಣಾ ಪ್ರಣಾಳಿಕೆಯಲ್ಲಿ ಹೇಳಿದಂತೆ ಈ ಕ್ಯಾಂಟೀನ್‌ಗಳನ್ನು ಆರಂಭ ಮಾಡಲಾಗಿದ್ದು, ಪ್ರತಿ ಕ್ಯಾಂಟೀನಿನಲ್ಲಿ ದಿನಕ್ಕೆ ಸುಮಾರು ಐನೂರು

ಅಟಲ್‌ಜಿ ನೆನಪಿನಲ್ಲಿ ನವದೆಹಲಿಯಲ್ಲಿ 100 ಕ್ಯಾಂಟೀನ್‌ಗಳನ್ನು ಆರಂಭಿಸಿದ ರೇಖಾ ಗುಪ್ತಾ ಸರ್ಕಾರ Read More »

ಮಗಳನ್ನು ವಿವಾಹ ಮಾಡಿಕೊಡಲು ನಿರಾಕರಣೆ: ಯುವತಿಯ ತಾಯಿಗೆ ಬೆಂಕಿ ಹಚ್ಚಿದ ಆರೋಪಿ

ಬೆಂಗಳೂರು: ಮಗಳನ್ನು ಮದುವೆ ಮಾಡಿಕೊಡುವುದಿಲ್ಲ ಎಂದು ಹೇಳಿದ ಕಾರಣಕ್ಕೆ ಯುವತಿಯ ತಾಯಿಗೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿ ಕೊಲೆ ಮಾಡಲು ಯತ್ನಿಸಿ ಆರೋಪಿ ಪರಾರಿಯಾದ ಘಟನೆ ಸಾಣೆಗುರುವನಹಳ್ಳಿಯಲ್ಲಿ ನಡೆದಿದೆ. ಗಾಯಗೊಂಡ ಮಹಿಳೆಯನ್ನು ಗೀತಾ (40) ಎಂದು ಗುರುತಿಸಲಾಗಿದೆ. ಆರೋಪಿ ಮುತ್ತು ತಲೆಮರೆಸಿಕೊಂಡಿದ್ದಾನೆ. ಗಾಯಾಳುವನ್ನು ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಲಾಗಿದೆ. ತಮಿಳುನಾಡು ಮೂಲದ ಗೀತಾ ಅವರು ಸಾಣೆಗುರುವನಹಳ್ಳಿಯಲ್ಲಿ ವಾಸವಿದ್ದು, ಅಲ್ಲೇ ಪ್ರಾವಿಷನ್ ಸ್ಟೋರ್ ಇಟ್ಟುಕೊಂಡಿದ್ದರು. ಮುತ್ತು ಟೀ ಸ್ಟಾಲ್ ಇಟ್ಟುಕೊಂಡಿದ್ದ. ಮುತ್ತುವಿಗೆ ತಮ್ಮ ಮಗಳನ್ನು ಮದುವೆ ಮಾಡಿ ಕೊಡಲು ಗೀತಾ

ಮಗಳನ್ನು ವಿವಾಹ ಮಾಡಿಕೊಡಲು ನಿರಾಕರಣೆ: ಯುವತಿಯ ತಾಯಿಗೆ ಬೆಂಕಿ ಹಚ್ಚಿದ ಆರೋಪಿ Read More »

ಚಿತ್ರದುರ್ಗ ಭೀಕರ ಅಪಘಾತ: ಸಂತ್ರಸ್ತ ಕುಟುಂಬಗಳಿಗೆ ಪರಿಹಾರ ಧನ ಘೋಷಿಸಿದ ಪ್ರಧಾನಿ ಮೋದಿ

ಚಿತ್ರದುರ್ಗ: ಜಿಲ್ಲೆಯ ಹಿರಿಯೂರು ಸಮೀಪ ನಡೆದ ಭೀಕರ ಅಪಘಾತದಲ್ಲಿ ಸಾವನ್ನಪ್ಪಿದವರಿಗೆ ಸಂತಾಪ ಸೂಚಿಸಿರುವ ಪ್ರಧಾನಿ ಮೋದಿ, ಸಂತ್ರಸ್ತರ ಕುಟುಂಬಗಳಿಗೆ ಪರಿಹಾರ ಧನ ಘೋಷಣೆ ಮಾಡಿದ್ದಾರೆ. ಸೀ ಬರ್ಡ್ ಬಸ್ಸು ಮತ್ತು ಕಂಟೇನರ್ ನಡುವೆ ಸಂಭವಿಸಿದ ಅಪಘಾತದಲ್ಲಿ ಮೃತಪಟ್ಟವರ ಕುಟುಂಬಕ್ಕೆ ತಲಾ 2 ಲಕ್ಷ ರೂ. ಮತ್ತು ಗಾಯಾಳುಗಳಿಗೆ 50 ಸಾವಿರ ರೂ. ಪರಿಹಾರವನ್ನು ಘೋಷಣೆ ಮಾಡಿದ್ದಾರೆ. ಈ ಅಪಘಾತದಲ್ಲಿ ಸುಮಾರು 21 ಕ್ಕೂ ಅಧಿಕ ಜನರು ಗಾಯಗೊಂಡಿದ್ದು, ಸುಮಾರು 17 ಜನರು ಮೃತಪಟ್ಟಿದ್ದಾರೆ. ಬಸ್ಸು ಸಂಪೂರ್ಣವಾಗಿ ಸುಟ್ಟು

ಚಿತ್ರದುರ್ಗ ಭೀಕರ ಅಪಘಾತ: ಸಂತ್ರಸ್ತ ಕುಟುಂಬಗಳಿಗೆ ಪರಿಹಾರ ಧನ ಘೋಷಿಸಿದ ಪ್ರಧಾನಿ ಮೋದಿ Read More »

ಉಚಿತ ಡ್ರೋನ್ ಹಾರಾಟ ತರಬೇತಿ ಉದ್ಘಾಟನೆ

ಪುತ್ತೂರು: ಇಲ್ಲಿನ ಎವಿಜಿ ಇಂಗ್ಲೀಷ್ ಮೀಡಿಯಂ ಸ್ಕೂಲ್’ನಲ್ಲಿ ಮಹಿಳೆಯರಿಗಾಗಿ ಡ್ರೋನ್ ಹಾರಿಸುವ ಉಚಿತ ತರಬೇತಿ ಆರಂಭಗೊಂಡಿತು. ಪುತ್ತೂರಿನ ಒಕ್ಕಲಿಗ ಸ್ವ-ಸಹಾಯ ಟ್ರಸ್ಟ್, ಎವಿಜಿ ಎಜುಕೇಶನಲ್ ಅಂಡ್ ಚಾರಿಟೇಬಲ್ ಟ್ರಸ್ಟ್ ಹಾಗೂ ಅರಸ್ ಟ್ರಸ್ಟ್’ಗಳ ಕೂಡುವಿಕೆಯಲ್ಲಿ ತರಬೇತಿರೂಪುಗೊಂಡಿತ್ತು. ಸಂತ ಫಿಲೋಮಿನಾ ಸ್ವಾಯತ್ತ ಕಾಲೇಜಿನ ಪ್ರಾಂಶುಪಾಲ ರೆ. ಫಾ. ಡಾಕ್ಟರ್ ಅಂತೋನಿ ಪ್ರಕಾಶ್ ಮೊಂತೆರೊ ತರಬೇತಿಯನ್ನು ಉದ್ಘಾಟಿಸಿ ಮಾತನಾಡಿ ವೇಗವಾಗಿ ಬದಲಾಗುತ್ತಿರುವ ಸಮಾಜದಲ್ಲಿ ಉಳಿಯಬೇಕಾದರೆ ವೇಗವಾಗಿ ಕಾರ್ಯಾಚರಣೆ ಮಾಡಬೇಕಿದೆ. ಇದಕ್ಕೆ ಡ್ರೋನ್ ಹಾರಿಸುವ ವಿದ್ಯೆ ಪೂರಕವಾಗಿದೆ ಎಂದರು. ಇಂತಹ ತರಬೇತಿಯನ್ನು

ಉಚಿತ ಡ್ರೋನ್ ಹಾರಾಟ ತರಬೇತಿ ಉದ್ಘಾಟನೆ Read More »

ಬಂಟ್ವಾಳ : ಹಿಟ್‌ & ರನ್‌ ಅಪಘಾತದಲ್ಲಿ ಭಾಗಿಯಾಗಿದ್ದ ರಿಕ್ಷಾ ವಶ

ಸ್ಕೂಟರ್‌ಗೆ ಡಿಕ್ಕಿ ಹೊಡೆದು ಪರಾರಿಯಾಗಿದ್ದ ರಿಕ್ಷಾ ಬಂಟ್ವಾಳ : ಹಿಟ್‌ & ರನ್‌ ಅಪಘಾತದಲ್ಲಿ ಭಾಗಿಯಾಗಿದ್ದ ರಿಕ್ಷಾವನ್ನು ಬಂಟ್ವಾಳ ಟ್ರಾಫಿಕ್ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ರಾಮಲ್ ಕಟ್ಟೆ ನಿವಾಸಿ ಉಸ್ಮಾನ್ ಎಂಬವರ ಸ್ಕೂಟರ್‌ಗೆ ಅಪರಿಚಿತ ರಿಕ್ಷಾ ಡಿಕ್ಕಿ ಹೊಡೆದು ಬಳಿಕ ಪರಾರಿಯಾಗಿತ್ತು. ಗಂಭೀರವಾಗಿ ಗಾಯಗೊಂಡಿದ್ದ ಉಸ್ಮಾನ್ ಅವರನ್ನು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿತ್ತಾದರೂ ಚಿಕಿತ್ಸೆ ಫಲಕಾರಿಯಾಗದೆ ಅವರು ಮೃತಪಟ್ಟಿದ್ದರು. ಆದರೆ ಎರಡು ದಿನ ಹಿಟ್ ರನ್ ಆಗಿದ್ದ ರಿಕ್ಷಾ ಪತ್ತೆಯಾಗಿರಲಿಲ್ಲ. ರಿಕ್ಷಾ ಡಿಕ್ಕಿಯಾಗಿ ಪರಾರಿಯಾಗಿರುವುದನ್ನು

ಬಂಟ್ವಾಳ : ಹಿಟ್‌ & ರನ್‌ ಅಪಘಾತದಲ್ಲಿ ಭಾಗಿಯಾಗಿದ್ದ ರಿಕ್ಷಾ ವಶ Read More »

ಬಸ್ಸಿನ ಡೀಸೆಲ್‌ ಟ್ಯಾಂಕ್‌ಗೆ ಲಾರಿ ಗುದ್ದಿದ ಪರಿಣಾಮ ಭೀಕರ ಅಪಘಾತ

ಕ್ಷಣಾರ್ಧದಲ್ಲಿ ಬೆಂಕಿ ಇಡೀ ಬಸ್ಸಿಗೆ ವ್ಯಾಪಿಸಿ ಒಳಗಿದ್ದವರು ಜೀವಂತ ದಹನ ಬೆಂಗಳೂರು: ವಿರುದ್ಧ ದಿಕ್ಕಿನಲ್ಲಿ ಬಂದ ಟ್ರಕ್‌ ಬಸ್ಸಿನ ಡೀಸೆಲ್‌ ಟ್ಯಾಂಕ್‌ಗೆ ಗುದ್ದಿದ ಕಾರಣ ಬಸ್ಸಿಗೆ ಕ್ಷಣಾರ್ಧದಲ್ಲಿ ಬೆಂಕಿಹತ್ತಿಕೊಂಡು ಭೀಕರ ದುರಂತ ಸಂಭವಿಸಿದೆ ಎಂದು ಚಿತ್ರದುರ್ಗದಲ್ಲಿ ಸುಟ್ಟು ಕರಕಲಾದ ಸೀಬರ್ಡ್‌ ಬಸ್‌ ಮಾಲೀಕ ನಾಗರಾಜು ಎಂಬವರು ತಿಳಿಸಿದ್ದಾರೆ. ಚಿತ್ರದುರ್ಗದ ಗೊರ್ಲತ್ತು ಗ್ರಾಮದ ಬಳಿ ರಾತ್ರಿ 1.30-2 ಗಂಟೆ ಮಧ್ಯೆ ಈ ಭೀಕರ ಅಪಘಾತ ಸಂಭವಿಸಿದೆ. ಬೆಂಗಳೂರಿನಿಂದ ಗೋಕರ್ಣಕ್ಕೆ ಹೊರಟಿದ್ದ ಸ್ಲೀಪರ್‌ ಬಸ್ಸಿನಲ್ಲಿ 29 ಜನ ಪ್ರಯಾಣಿಸುತ್ತಿದ್ದರು. ಟ್ರಕ್‌

ಬಸ್ಸಿನ ಡೀಸೆಲ್‌ ಟ್ಯಾಂಕ್‌ಗೆ ಲಾರಿ ಗುದ್ದಿದ ಪರಿಣಾಮ ಭೀಕರ ಅಪಘಾತ Read More »

ಕೌಟುಂಬಿಕ ಜಗಳ : ನದಿಗೆ ಹಾರಿ ವ್ಯಕ್ತಿ ಆತ್ಮಹತ್ಯೆ

ಮೂಡುಬಿದಿರೆ : ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಯುವಕನ ಮೃತದೇಹ ಬುಧವಾರ ಸಂಜೆ ನೆತ್ತೋಡಿ ಎಂಬಲ್ಲಿ ಪತ್ತೆಯಾಗಿದೆ. ಕಾರ್ಕಳ ತಾಲೂಕು ಮಿಯ್ಯಾರು ಗ್ರಾಮದ ಲತೀಶ ಪೂಜಾರಿ (42) ಆತ್ಮಹತ್ಯೆ ಮಾಡಿಕೊಂಡವರು. ಮದುವೆಯಾಗಿ ಇಬ್ಬರು ಮಕ್ಕಳಿದ್ದಾರೆ. ವಿದೇಶದಲ್ಲಿದ್ದ ಲತೀಶ ಪೂಜಾರಿ ಇತ್ತೀಚೆಗಷ್ಟೇ ಊರಿಗೆ ಬಂದಿದ್ದರು. ಭಾನುವಾರ ಮೂಡುಬಿದಿರೆಯ ಹೊಸಂಗಡಿಯಲ್ಲಿರುವ ಹೆಂಡತಿ ಬಂದಿದ್ದರೆನ್ನಲಾಗಿದೆ. ಯಾವುದೋ ವಿಷಯಕ್ಕೆ ಜಗಳ ನಡೆದಿತ್ತೆನ್ನಲಾಗಿದ್ದು ಮಿಯ್ಯಾರಿನಲ್ಲಿರುವ ತನ್ನ ಅಣ್ಣನ ಮೊಬೈಲ್‌ಗೆ ಮೆಸೇಜ್ ಮಾಡಿ ಈ ಬಗ್ಗೆ ಹೇಳಿಕೊಂಡಿದ್ದರು. ಅಣ್ಣ ಸರಿಮಾಡುವ, ಆತುರದ ನಿರ್ಧಾರ ಬೇಡ ಎಂದು

ಕೌಟುಂಬಿಕ ಜಗಳ : ನದಿಗೆ ಹಾರಿ ವ್ಯಕ್ತಿ ಆತ್ಮಹತ್ಯೆ Read More »

error: Content is protected !!
Scroll to Top