ಬನ್ನೂರು ಸ್ಪೂರ್ತಿ ಮೈದಾನದಲ್ಲಿ 18ನೇ ವರ್ಷದ ಸಾಮೂಹಿಕ ಶ್ರೀ ಶನೀಶ್ವರ ಪೂಜೆ | ಸ್ಪೂರ್ತಿ  ಸಂಸ್ಥೆಗಳ ವಾರ್ಷಿಕೋತ್ಸವ ಸಮಾರಂಭ

ಪುತ್ತೂರು : ಬನ್ನೂರು ಸ್ಪೂರ್ತಿ ಮೈದಾನದಲ್ಲಿರುವ ಶ್ರೀ ಶನಿದೇವರ ಸನ್ನಿಧಿಯಲ್ಲಿ 18ನೇ ವರ್ಷದ ಸಾಮೂಹಿಕ ಶ್ರೀ ಶನೀಶ್ವರ ಪೂಜೆ ಹಾಗೂ ಸ್ಪೂರ್ತಿ ಯುವಕ, ಯುವತಿ ಮಂಡಲ, ಮಹಿಳಾ ಮಂಡಲ ಹಾಗೂ ಬಾಲಸಭಾದ 33ನೇ ವಾರ್ಷಿಕೋತ್ಸವ ಶನಿವಾರ ನಡೆಯಿತು. ಕೆಮ್ಮಿಂಜೆ ಬ್ರಹ್ಮಶ್ರೀ ಲಕ್ಷ್ಮೀಶ ತಂತ್ರಿಯವರ ನೇತೃತ್ವದಲ್ಲಿ ಬೆಳಿಗ್ಗೆ ಗಣಪತಿ ಹೋಮ, ಶನೀಶ್ವರ ಪೂಜೆ, ಮಧ್ಯಾಹ್ನ ಮಹಾಮಂಗಳಾರತಿ, ಪ್ರಸಾದ ವಿತರಣೆ ಹಾಗೂ ಅನ್ನಸಂತರ್ಪಣೆ ನಡೆಯಿತು. ಮಧ್ಯಾಹ್ನ ಶ್ರೀ ಮಹಿಷಮರ್ದಿನಿ ಮಹಿಳಾ ಕುಣಿತ ಭಜನಾ ಮಂಡಳಿಯವರಿಂದ ಕುಣಿತ ಭಜನೆ, ಸಂಜೆ ಅಂಗನವಾಡಿ […]

ಬನ್ನೂರು ಸ್ಪೂರ್ತಿ ಮೈದಾನದಲ್ಲಿ 18ನೇ ವರ್ಷದ ಸಾಮೂಹಿಕ ಶ್ರೀ ಶನೀಶ್ವರ ಪೂಜೆ | ಸ್ಪೂರ್ತಿ  ಸಂಸ್ಥೆಗಳ ವಾರ್ಷಿಕೋತ್ಸವ ಸಮಾರಂಭ Read More »

ಚಹಾಪುಡಿ 1,600 ರೂ.; ಗೋದಿಹಿಟ್ಟು 1,000 ರೂ. | ದಿವಾಳಿಯಾಗಿರುವ ಪಾಕಿಸ್ಥಾನದಲ್ಲಿ ಆಹಾರಕ್ಕೂ ಅಭಾವ

ಕರಾಚಿ: ಪಾಕಿಸ್ಥಾನದಲ್ಲಿ 1 ಕೆಜಿ ಚಹಾಪುಡಿ ಬೆಲೆ 1600 ರೂ! ಆರ್ಥಿಕವಾಗಿ ದಿವಾಳಿಯಾಗಿ ತತ್ತರಿಸುತ್ತಿರುವ ಪಾಕ್‌ನಲ್ಲೀಗ ಜನರಿಗೆ ನಿತ್ಯ ಬಳಕೆಯ ಆಹಾರ ವಸ್ತುಗಳು ಕೂಡ ಬೆಲೆ ಏರಿಕೆಯಿಂದಾಗಿ ಐಷರಾಮಿ ವಸ್ತುಗಳಾಗಿವೆ. 15 ದಿನಗಳ ಹಿಂದೆ ಕೆಜಿಗೆ 1,100 ರೂ. ಇದ್ದ ಚಹಾಪುಡಿ ಬೆಲೆ ಇದೀಗ 1600 ರೂ. ದಾಟಿದೆ. ಕಳೆದ ಡಿಸೆಂಬರ್‌ನಿಂದಲೂ ಬಂದರಿನಲ್ಲೇ ಉಳಿದುಕೊಂಡಿರುವ ಆಮದಾದ ಚಹಾಪುಡಿ ಶೀಘ್ರವೇ ಮಾರುಕಟ್ಟೆಗೆ ಬರದೇ ಇದ್ದರೆ ರಮ್ಜಾನ್‌ ವೇಳೆಗೆ ಬೆಲೆ 2,500 ರೂ. ದಾಟಬಹುದು ಎಂದು ವ್ಯಾಪಾರಿಗಳು ಆತಂಕ ವ್ಯಕ್ತಪಡಿಸಿದ್ದಾರೆ.

ಚಹಾಪುಡಿ 1,600 ರೂ.; ಗೋದಿಹಿಟ್ಟು 1,000 ರೂ. | ದಿವಾಳಿಯಾಗಿರುವ ಪಾಕಿಸ್ಥಾನದಲ್ಲಿ ಆಹಾರಕ್ಕೂ ಅಭಾವ Read More »

ನಮ್ಮ ಮೇಲೆ ನಂಬಿಕೆಯಿದ್ದರೆ ಬಿಜೆಪಿಗೆ ಓಟು ಹಾಕಿ! | ಚುನಾವಣೆ ಪ್ರಚಾರದಲ್ಲಿ ಸಿದ್ದರಾಮಯ್ಯ ಮತ್ತೆ ಯಡವಟ್ಟು

ಬೆಂಗಳೂರು : ಚುನಾವಣಾ ಪ್ರಚಾರದಲ್ಲಿ ಕಾಂಗ್ರೆಸ್ ನಾಯಕ ಸಿದ್ದರಾಮಯ್ಯ ಬಿಜೆಪಿಗೆ ಮತ ಕೇಳಿರುವ ಘಟನೆ ವಿಜಯಪುರದ ಪ್ರಜಾಧ್ವನಿ ಯಾತ್ರೆಯಲ್ಲಿ ನಡೆದಿದೆ. ವಿಜಯಪುರದ ಇಂಡಿ ವಿಧಾನಸಭಾ ಕ್ಷೇತ್ರದಲ್ಲಿ ನಡೆಯುತ್ತಿರುವ ಕಾಂಗ್ರೆಸ್ ಪ್ರಜಾಧ್ವನಿ ಯಾತ್ರೆ ಕಾರ್ಯಕ್ರಮದಲ್ಲಿ ನಮ್ಮ ಮೇಲೆ ನಂಬಿಕೆಯಿದ್ದರೆ ಬಿಜೆಪಿಗೆ ಮತ ಹಾಕಿ, ಬಿಜೆಪಿಗೆ ಮತ ಹಾಕಿಸಿ ಎಂದು ಸಿದ್ದರಾಮಯ್ಯ ಹೇಳಿದ್ದಾರೆ. ಈ ವೀಡಿಯೊ ತುಣುಕು ನಿನ್ನೆಯಿಂದ ಸಾಮಾಜಿಕ ಮಾಧ್ಯಮಗಳಲ್ಲಿ ಭಾರಿ ವೈರಲ್‌ ಆಗಿದ್ದು, ವಿರೋಧಿಗಳ ಬಾಯಿಯಿಂದ ಕೆಲವೊಮ್ಮೆ ತಪ್ಪಿಯಾದರೂ ಸತ್ಯ ಹೊರಬರುತ್ತದೆ ಎಂದು ಅನೇಕರು ಪ್ರತಿಕ್ರಿಯಿಸಿದ್ದಾರೆ. ನಾವು

ನಮ್ಮ ಮೇಲೆ ನಂಬಿಕೆಯಿದ್ದರೆ ಬಿಜೆಪಿಗೆ ಓಟು ಹಾಕಿ! | ಚುನಾವಣೆ ಪ್ರಚಾರದಲ್ಲಿ ಸಿದ್ದರಾಮಯ್ಯ ಮತ್ತೆ ಯಡವಟ್ಟು Read More »

ಕಗ್ಗದ ಸಂದೇಶ – ಕಾವ್ಯಗಳ ಸಾರದಲ್ಲಿದೆ ಬದುಕಿನ ದಾರಿ…

ಪ್ರೀತಿ ಮಹಿಮೆಯ ಚಿತ್ರ ರೀತಿಯಂ ವಾಲ್ಮೀಕಿ|ನೀತಿ ಸೂಕ್ಷ್ಮದ ಗಹನಮಾರ್ಗಮಂ ವ್ಯಾಸರ್||ಗೀತೆಯಲಿ ವಿಶ್ವಜೀವನರಹಸ್ಯವನವರ್|ಖ್ಯಾತಿಸಿದರದು ಕಾವ್ಯ–ಮಂಕುತಿಮ್ಮ|| ಭಾವನೆಗಳಿಲ್ಲದೆ ಬದುಕಿಲ್ಲ. ಪ್ರೀತಿ ಒಂದು ಸವಿಯಾದ ಭಾವನೆ. ಈ ಪ್ರೀತಿ ಜೀವನವನ್ನು ಮಧುರವಾಗಿಸುತ್ತದೆ. ಪ್ರಾಚೀನ ಗ್ರೀಕ್ ತತ್ವಜ್ಞಾನಿಗಳು ಪ್ರೀತಿಯಲ್ಲಿ ಕೌಟುಂಬಿಕ ಪ್ರೀತಿ, ಸ್ನೇಹಪರ ಪ್ರೀತಿ, ಸಹೋದರ ಪ್ರೀತಿ, ಪ್ರಣಯ ಪ್ರೀತಿ, ದೈವಿಕ ಪ್ರೀತಿ ಹಾಗು ಅತಿಥಿ ಪ್ರೀತಿ ಎಂಬ ಆರು ಪ್ರಕಾರಗಳನ್ನು ಗುರುತಿಸಿದ್ದಾರೆ. ಈ ಎಲ್ಲ ಪ್ರಕಾರದ ಪ್ರೀತಿಗೂ ವಾಲ್ಮೀಕಿ ತನ್ನ ರಾಮಾಯಣ ಕೃತಿಯಲ್ಲಿ ಒಂದೊಂದು ಮಾದರಿಯನ್ನು ನೀಡಿದ್ದಾರೆ. ಒಲವಿರದ ಗೇಹದಲಿ ಏನಿದ್ದರೇನಂತೆ?|ನೂರೊಡನೆ

ಕಗ್ಗದ ಸಂದೇಶ – ಕಾವ್ಯಗಳ ಸಾರದಲ್ಲಿದೆ ಬದುಕಿನ ದಾರಿ… Read More »

ಪುತ್ತೂರು ರೈಲ್ವೇ ಟ್ರ್ಯಾಕ್ ಬಳಿ ಕೊಳೆತ ಶವ ಪತ್ತೆ

ಪುತ್ತೂರು : ನಗರದ ರೈಲ್ವೇ ಟ್ರ್ಯಾಕ್ ಬಳಿ ವ್ಯಕ್ತಿಯೊಬ್ಬರ ಕೊಳೆತ ಶವ ಭಾನುವಾರ ಪತ್ತೆಯಾಗಿದೆ. ಇದು ಮಹಿಳೆತ ಮೃತದೇಹ ಆಗಿರಬಹು ಎಂದು ಮೇಲ್ನೋಟಕ್ಕೆ ಕಂಡು ಬಂದಿದ್ದು, ಮೃತ ದೇಹವನ್ನು ನೋಡಿದವರು ತಿಳಿಸಿದ್ದಾರೆ. ಮೃತದೇಹ ಗುರುತು  ಇನ್ನಷ್ಟೇ ತಿಳಿದುಬರಬೇಕಿದೆ.

ಪುತ್ತೂರು ರೈಲ್ವೇ ಟ್ರ್ಯಾಕ್ ಬಳಿ ಕೊಳೆತ ಶವ ಪತ್ತೆ Read More »

ಪುತ್ತೂರು ಬಿಜೆಪಿಯಲ್ಲಿ ಸಂಚಲನ ಮೂಡಿಸಿದ ಚಾಣಕ್ಯನ ಭೇಟಿ

ಪುತ್ತೂರು: ಅಮಿತ್ ಶಾ ಎಂಬ ರಾಜಕೀಯ ಚಾಣಕ್ಯ ಮುತ್ತಿನ ನಗರಿ ಪುತ್ತೂರಿನಲ್ಲಿ ಸಂಚಲನ ಸೃಷ್ಟಿಸಿದ್ದಾರೆ. ಸಾಲು ಸಾಲು ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳುವ ಜೊತೆಜೊತೆಗೆ, ಮುಂಬರುವ ಚುನಾವಣೆಗೆ ಭರ್ಜರಿ ಮುನ್ನುಡಿಯನ್ನೇ ಬರೆದಿದ್ದಾರೆ. ಪುತ್ತೂರು ಬಿಜೆಪಿಯ ಭದ್ರ ಕೋಟೆ. ಹಲವಾರು ನಾಯಕರ ಪರಿಶ್ರಮದ ಫಲವಾಗಿ, ಬಿಜೆಪಿ ಪುತ್ತೂರಿನಲ್ಲಿ ಭದ್ರವಾಗಿ ತಳವೂರಿದೆ. ಇದಕ್ಕೆ ಸಾಥ್ ನೀಡುವಂತೆ ಅಮಿತ್ ಶಾ ಅವರು ಭೇಟಿ ನೀಡಿ, ಬಿಜೆಪಿಗೆ ಇನ್ನಷ್ಟು ಶಕ್ತಿ ತುಂಬುವ ಕೆಲಸ‌ ಮಾಡಿದ್ದಾರೆ. ಶಾ ಭೇಟಿಯ ಬಳಿಕ ಕಾರ್ಯಕರ್ತರ ಉತ್ಸಾಹ ಇಮ್ಮಡಿಗೊಂಡಿದೆ. ಬಿಜೆಪಿ ಪಾಳಯದಲ್ಲಿ

ಪುತ್ತೂರು ಬಿಜೆಪಿಯಲ್ಲಿ ಸಂಚಲನ ಮೂಡಿಸಿದ ಚಾಣಕ್ಯನ ಭೇಟಿ Read More »

Pin Up Casino Azerbaycan, Pinup Cazino Nadir Pin Up Kazin ครูประถม คอม

Pin Up Casino Azerbaycan, Pinup Cazino Nadir Pin Up Kazin ครูประถม คอมO, cari balans, habelə mövcud bonuslar və onların mərc edilməsi şərtləri haqqında bildiriş verir. Content Vəsaiti Kartadan Çıxarmaq üçün Necə Edə Bilərsiniz? Pin Up Depozit Və Vəsaitlərin Çıxarılması, Depozit Online Pin Up Casino Azerbaycan Rəsmi Saytı 💲 Pinup Depozit Və çıxarma Üsulları Formal Veb

Pin Up Casino Azerbaycan, Pinup Cazino Nadir Pin Up Kazin ครูประถม คอม</tg Read More »

ಫೆ.13-14 : ಕಾಂಚನ ನಡ್ಪ ಶ್ರೀ ವಿಷ್ಣುಮೂರ್ತಿ ದೇವಸ್ಥಾನದ ವರ್ಷಾವಧಿ ಜಾತ್ರೆ | ದೈವಗಳ ನೇಮೋತ್ಸವ

ಪುತ್ತೂರು : ಕಾಂಚನ ನಡ್ಪ ಶ್ರೀ ವಿಷ್ಣುಮೂರ್ತಿ ದೇವಸ್ಥಾನದ ವರ್ಷಾವಧಿ ಜಾತ್ರೆ ಹಾಗೂ ದೈವಗಳ ನೇಮೋತ್ಸವ ಫೆ.13 ಸೋಮವಾರ ಹಾಗೂ 14 ಮಂಗಳವಾರ ವಿವಿಧ ವೈದಿಕ ಕಾರ್ಯಕ್ರಮಗಳೊಂದಿಗೆ ಜರಗಲಿದೆ. ಬ್ರಹ್ಮಶ್ರೀ ಕೆಮ್ಮಿಂಜೆ ಉಚ್ಚಿಲತ್ತಾಯ ಶ್ರೀ ಪದ್ಮನಾಭ ತಂತ್ರಿಯವರ ನೇತೃತ್ವದಲ್ಲಿ ಫೆ.13 ಸೋಮವಾರ ಬೆಳಿಗ್ಗೆ 8.45 ಕ್ಕೆ ಗೊನೆಮುಹೂರ್ತ, 9.30 ರಿಂದ ಬಜತ್ತೂರು, ಕಾಂಚನ, ಪದಕ ದೈವಗಳಿಗೆ ತಂಬಿಲ, ಬಜತ್ತೂರು ಗುತ್ತಿನ ನಾಗತಂಬಿಲ, 10 ಕ್ಕೆ ತೋರಣ ಮುಹೂರ್ತ, ರಾತ್ರಿ 7.30 ಕ್ಕೆ ಚಕ್ರವರ್ತಿ ಕೊಡಮಣಿತ್ತಾಯ ಮತ್ತು ಗ್ರಾಮ

ಫೆ.13-14 : ಕಾಂಚನ ನಡ್ಪ ಶ್ರೀ ವಿಷ್ಣುಮೂರ್ತಿ ದೇವಸ್ಥಾನದ ವರ್ಷಾವಧಿ ಜಾತ್ರೆ | ದೈವಗಳ ನೇಮೋತ್ಸವ Read More »

ಕೇಂದ್ರ ಗೃಹ ಸಚಿವ, ಸಹಕಾರ ಸಚಿವ ಅಮಿತ್ ಶಾ ಅವರಿಂದ ಹನುಮಗಿರಿ ಆಂಜನೇಯನಿಗೆ ನವರತ್ನ ಸಹಿತ ರಜತ ಗಧೆ ಅರ್ಪಣೆ | ಅಮರಗಿರಿ ಉದ್ಘಾಟನೆ | ಭೇಟಿಯ ಸವಿನೆನಪಿಗೆ ಸಂವಿಧಾನ ಮೂಲಪ್ರತಿಯಲ್ಲಿ ಹಸ್ತಾಕ್ಷರ

ಈಶ್ವರಮಂಗಲ : ಈಶ್ವರಮಂಗಲದ ಹನುಮಗಿರಿ ಕ್ಷೇತ್ರಕ್ಕೆ ಶನಿವಾರ ಭೇಟಿ ನೀಡಿ ಅಮಿತ್ ಶಾ ಅವರು ಕ್ಷೇತ್ರದ ಆಂಜನೇಯನಿಗೆ ನವರತ್ನ ಸಹಿತ ರಜತ ಗಧೆ ಅರ್ಪಿಸಿದರು. ಕೇರಳದ ಕಣ್ಣೂರಿನಿಂದ ಬಿಎಸ್ಎಫ್ ಹೆಲಿಕಾಪ್ಟರ್ ಮೂಲಕ ಗಜಾನನ ಶಾಲಾ ಮೈದಾನದಲ್ಲಿ ನಿರ್ಮಿಸಲಾದ ಹೆಲಿಪ್ಯಾಡ್ ನಲ್ಲಿ ಬಂದಿಳಿದು ಬಳಿಕ ಪಂಚಮುಖಿ ಆಂಜನೇಯನ ದರ್ಶನ ಪಡೆದು ನವರತ್ನ ಸಹಿತ ರಜತ ಗಧೆ ಅರ್ಪಿಸಿದರು. ಪಂಚಮುಖಿ ಆಂಜನೇಯ ಸನ್ನಿಧಿಯಲ್ಲಿ ವಿಶೇಷವಾಗಿ ನೀಡುವ ಪಂಚಮುಖಿ ಆಂಜನೇಯ ರಕ್ಷೆಯನ್ನು ಕ್ಷೇತ್ರದ ಅರ್ಚಕ ರಾಜೇಶ್ ಗಾಂವ್ಕರ್  ಅಮಿತ್ ಶಾ ಅವರ

ಕೇಂದ್ರ ಗೃಹ ಸಚಿವ, ಸಹಕಾರ ಸಚಿವ ಅಮಿತ್ ಶಾ ಅವರಿಂದ ಹನುಮಗಿರಿ ಆಂಜನೇಯನಿಗೆ ನವರತ್ನ ಸಹಿತ ರಜತ ಗಧೆ ಅರ್ಪಣೆ | ಅಮರಗಿರಿ ಉದ್ಘಾಟನೆ | ಭೇಟಿಯ ಸವಿನೆನಪಿಗೆ ಸಂವಿಧಾನ ಮೂಲಪ್ರತಿಯಲ್ಲಿ ಹಸ್ತಾಕ್ಷರ Read More »

ಪಯಸ್ವಿನಿ ನದಿ ಪಾಲಾದ ಕೌಡಿಚ್ಚಾರಿನ ಯುವಕರು

ಸುಳ್ಯ : ಪುತ್ತೂರಿನ ಕೌಡಿಚ್ಚಾರು ನಿವಾಸಿಗಳಾದ ಇಬ್ಬರು ಯುವಕರು ಸುಳ್ಯದ ಪಯಸ್ವಿನಿ ನದಿ ಪಾಲಾದ ಘಟನೆ ಶನಿವಾರ ಸಂಜೆ ನಡೆದಿದೆ. ಮೃತದೇಹಗಳನ್ನು ಮೇಲೆತ್ತಿದ್ದು, ಜಿತೇಶ್ ಹಾಗೂ ಪ್ರವೀಣ್ ಮೃತಪಟ್ಟವರೆಂದು ಗುರುತಿಲಾಗಿದೆ.  ಪುತ್ತೂರಿನ ಕೌಡಿಚ್ಚಾರು ಪರಿಸರದ ಆರು ಯುವಕರು ಕಾರಿನಲ್ಲಿ ಸುಳ್ಯಕ್ಕೆ ಬಂದು ಓಡಬಾಯಿ ತೂಗು ಸೇತುವೆ ಬಳಿ ಕಾರು ನಿಲ್ಲಿಸಿ ದೊಡೇರಿಯವರೆಗೆ ಹೋಗಿ, ಬಳಿಕ ಪಯಸ್ವಿನಿ ನದಿಗೆ ಈಜಲೆಂದು ತೆರಳಿದ್ದರು. ಅವರಲ್ಲೋರ್ವ ನೀರು ಪಾಲಾದಾಗ, ಜೊತೆಗಿದ್ದ ಇನ್ನೊಬ್ಬಾತ ರಕ್ಷಿಸಲೆಂದು ನೀರಿಗೆ ಧುಮುಕ್ಕಿದ್ದಾನೆ. ನೀರಿನ ಸೆಳೆತಕ್ಕೆ ಗೆಳೆಯನನ್ನು ರಕ್ಷಿಸಲಾಗದೇ,

ಪಯಸ್ವಿನಿ ನದಿ ಪಾಲಾದ ಕೌಡಿಚ್ಚಾರಿನ ಯುವಕರು Read More »

error: Content is protected !!
Scroll to Top